Tag: Metro Rail

  • ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಮೋದಿ

    ಟಿಕೆಟ್ ಖರೀದಿಸಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ ಮೋದಿ

    ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುಣೆ ಮೆಟ್ರೋ ರೈಲು ಯೋಜನೆಯನ್ನು ಉದ್ಘಾಟಿಸಿದರು. ಸ್ವಲ್ಪ ಸಮಯದ ಬಳಿಕ ಯಂಗ್ ಫ್ರೆಂಡ್ಸ್ ಜೊತೆಗೆ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.

    ಒಟ್ಟು 32.2 ಕಿಲೋಮೀಟರ್ ಪುಣೆ ಮೆಟ್ರೋ ರೈಲು ಯೋಜನೆಯ 12 ಕಿ.ಮೀ. ವ್ಯಾಪ್ತಿಯನ್ನು ಉದ್ಘಾಟಿಸಿದ ಮೋದಿ ಅವರು ನಂತರ ಟಿಕೆಟ್ ಖರೀದಿಸಿ ಮಕ್ಕಳೊಂದಿಗೆ ಗಾರ್ವೇರ್ ಮೆಟ್ರೋ ನಿಲ್ದಾಣದಿಂದ ಆನಂದನಗರ ನಿಲ್ದಾಣದವರೆಗೆ ಪ್ರಯಾಣಿಸಿದರು. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪುಣೆಯ ಜನತೆ ಅನುಕೂಲಕರವಾಗಿ ಮತ್ತು ಆರಾಮದಾಯಕವಾಗಿ ಪ್ರಯಾಣಿಸಬಹುದು ಎಂದು ಖಾತ್ರಿಪಡಿಸಿರುವ ಮೋದಿ ಅವರು, ಟ್ವಿಟ್ಟರ್‌ನಲ್ಲಿ ಮಕ್ಕಳ ಜೊತೆ ಕುಳಿತಿರುವ ಫೋಟೋವನ್ನು ಹಂಚಿಕೊಳ್ಳುವುದರ ಜೊತೆಗೆ ಕ್ಯಾಪ್ಷನ್‍ನಲ್ಲಿ ಪುಣೆ ಮೆಟ್ರೋದಲ್ಲಿ ಯಂಗ್ ಫ್ರೆಂಡ್ಸ್ ಜೊತೆಗೆ ಪ್ರಯಾಣ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

    ಪುಣೆ ಮೆಟ್ರೋ ಯೋಜನೆಗೆ ಒಟ್ಟು 11,400 ಕೋಟಿಗೂ ಹೆಚ್ಚು ಮೊತ್ತ ವೆಚ್ಚವಾಗಿದ್ದು, ಈ ಯೋಜನೆಗೆ 2016ರ ಡಿಸೆಂಬರ್ 24 ರಂದು ಮೋದಿ ಅವರು ಅಡಿಗಲ್ಲು ಹಾಕಿದ್ದರು. ಇದನ್ನೂ ಓದಿ: ಮೊದಲು ಉಕ್ರೇನ್ ಸ್ವರ್ಗದಂತಿತ್ತು, ಈಗ ನರಕವಾಗಿದೆ – ಉಕ್ರೇನ್‍ನಲ್ಲಿ ಸಿಲುಕಿದ್ದ ಬೀದರ್ ಮೂಲದ ಯುವಕ

  • ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ(Metro Rail) ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಲಿದೆ. ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ಇರುವುದಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ ಇಂದು ಈ ಕುರಿತು ಪ್ರಕಟಣೆ ಹೊರಡಿಸಿದೆ.

    ಅಕ್ಟೋಬರ್ 9ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 10ರ ಬೆಳಗ್ಗೆ 6 ಗಂಟೆ ತನಕ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ರದ್ದುಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ

    ಅಕ್ಟೋಬರ್ 9ರಂದು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ನಡೆಸುವುದಿಲ್ಲ.  ಇದನ್ನೂ ಓದಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

    ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಕ್ಟೋಬರ್ 10ರ ಭಾನುವಾರ ಬೆಳಗ್ಗೆ 6 ಗಂಟೆ ಬಳಿಕ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ-ಕೆಂಗೇರಿ ತನಕ ಎಂದಿನಂತೆ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಹಸಿರು ಮಾರ್ಗದಲ್ಲಿನ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು(BMRCL) Bangalore Metro Rail Corporation Limited ಹೇಳಿದೆ. ಇದನ್ನೂ ಓದಿ: ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ

  • ಮಾ.21 ರಿಂದ 28ರವರೆಗೆ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯವರೆಗೆ ಮೆಟ್ರೋ ಸೇವೆ ಇರಲ್ಲ

    ಮಾ.21 ರಿಂದ 28ರವರೆಗೆ ಮೆಜೆಸ್ಟಿಕ್‌ನಿಂದ ಮೈಸೂರು ರಸ್ತೆಯವರೆಗೆ ಮೆಟ್ರೋ ಸೇವೆ ಇರಲ್ಲ

    ಬೆಂಗಳೂರು: ನೇರಳೆ ಮಾರ್ಗದಲ್ಲಿ ಕಾಮಗಾರಿ ನಡೆಯಲಿರುವ ಕಾರಣ 8 ದಿನಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ.

    ಮೆಜೆಸ್ಟಿಕ್ ಹಾಗೂ ಮೈಸೂರು ರಸ್ತೆ ನಡುವೆ ಮಾರ್ಚ್ 21 ರಿಂದ 28ರವರೆಗೆ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ನಮ್ಮ ಮೆಟ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

     

    ಹೇಳಿಕೆಯಲ್ಲಿ ಏನಿದೆ?
    ಮೈಸೂರು ರಸ್ತೆಯಿಂದ ಕೆಂಗೇರಿಯವರೆಗಿನ ಪೂರ್ವ ಪಶ್ಚಿಮ ವಿಸ್ತರಿಸಿದ ನೇರಳೆ ಮಾರ್ಗ ಪೂರ್ವ ನಿಯೋಜನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯಲ್ಲಿ ಸಿಗ್ನಲಿಂಗ್‌ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ.

    ಕೆಂಪೇಗೌಡ ನಿಲ್ದಾಣ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸೇವೆಗಳನ್ನು ಮಾರ್ಚ್‌ 21 ರಿಂದ ಮಾರ್ಚ್‌ 28ರವರೆಗೆ ಸ್ಥಗಿತಗೊಳಿಸಲಾಗುವುದು.

     

    ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿರುವ ಮೆಟ್ರೋ ಸೇವೆಗಳು ಬೈಯಪ್ಪನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ವರೆಗೆ ಮಾತ್ರ ಇರಲಿದೆ. ಮಾರ್ಚ್‌ 29 ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆಗಳು ಎಂದಿನಂತೆ ನೇರಳೆ ಮಾರ್ಗದಲ್ಲಿ ಆರಂಭಗೊಳ್ಳಲಿದೆ.

    ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳಲ್ಲಿ ಈ ದಿನಾಂಕದಂದು ಯಾವುದೇ ಬದಲಾವಣೆ ಇರುವುದಿಲ್ಲ.

  • ಮೊಬೈಲ್ ಹುಚ್ಚು, ಮೆಟ್ರೋ ಹಳಿ ಮೇಲೆ ಬಿದ್ದ ಮಹಿಳೆ – ವಿಡಿಯೋ ನೋಡಿ

    ಮೊಬೈಲ್ ಹುಚ್ಚು, ಮೆಟ್ರೋ ಹಳಿ ಮೇಲೆ ಬಿದ್ದ ಮಹಿಳೆ – ವಿಡಿಯೋ ನೋಡಿ

    ಮ್ಯಾಡ್ರಿಡ್: ಈ ವಿಡಿಯೋ ನೋಡಿದರೆ ಒಂದು ಕ್ಷಣ ನೀವು ಖಂಡಿತ ಬೆಚ್ಚಿ ಬೀಳುತ್ತೀರಿ.

    ಈ ಘಟನೆ ಸ್ಪೇನ್‍ನ ಉತ್ತರ ಮ್ಯಾಡ್ರಿಡ್‍ನ ಎಸ್ಟ್ರೆಚೊ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆದಿದ್ದು, ಮಹಿಳೆಯೊಬ್ಬಳು ಮೊಬೈಲ್‍ನಲ್ಲಿ ತಲ್ಲೀನರಾಗಿದ್ದಾಗ ಅರಿವಿಲ್ಲದೆ ಪ್ಲಾಟ್‍ಫಾರ್ಮ್ ಅಂಚಿನಿಂದ ಹಳಿಗೆ ಬಿದ್ದಿದ್ದಾಳೆ. ತಕ್ಷಣವೇ ಮೆಟ್ರೋ ರೈಲು ಆಗಮಿಸಿದೆ.

    ರೈಲು ಮಹಿಳೆಯ ಮೇಲೆ ಹರಿದಿದೆಯೇ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸಿಲ್ಲ. ಆದರೆ ಈ ಘಟನೆಯಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಮೆಟ್ರೋ ಡಿ ಮ್ಯಾಡ್ರಿಡ್ ಸ್ಪಷ್ಟಪಡಿಸಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

    ಘಟನೆಯ ಸಿಸಿ ಟಿವಿ ದೃಶ್ಯಾವಳಿಯನ್ನು ಮೆಟ್ರೋ ಡಿ ಮ್ಯಾಡ್ರಿಡ್ ಬಿಡುಗಡೆಗೊಳಿಸಿದೆ. ರೈಲು ನಿಲ್ದಾಣಗಳಲ್ಲಿ ಈ ವಿಡಿಯೋ ಪ್ರಸಾರ ಮಾಡುವ ಮೂಲಕ ಪ್ರಯಾಣಿಕರಿಗೆ ಜಾಗೃತವಾಗಿ ಇರುವಂತೆ ಎಚ್ಚರಿಕೆ ನೀಡುತ್ತಿದೆ.

    ಈ ಪ್ರಕರಣದಲ್ಲಿ ಮಹಿಳೆಗೆ ಏನೂ ಆಗಿಲ್ಲ, ಮಹಿಳೆ ಚೆನ್ನಾಗಿದ್ದಾರೆ ಎಂದು ಮಟ್ರೋ ಡಿ ಮ್ಯಾಡ್ರಿಡ್ ಈ ವಿಡಿಯೋ ತುಣುಕನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ: ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರ ತೀವ್ರಗತಿಯಲ್ಲಿ ಅಭಿವೃದ್ದಿ ಹೊಂದುತ್ತಿದ್ದು, ಮುಂದಿನ ದಿನಗಳಲ್ಲಿ ಉಪನಗರವಾಗಿ ಚಿಕ್ಕಬಳ್ಳಾಪುರ ಬೆಳೆಯಿಲಿದೆ. ಹೀಗಾಗಿ ಜಿಲ್ಲಾ ಕೇಂದ್ರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಆಶ್ವಾಸನೆ ನೀಡಿದ್ದಾರೆ.

    ಮತದಾನಕ್ಕೆ ಕೆಲ ದಿನಗಳಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ವೀರಪ್ಪ ಮೊಯ್ಲಿ ಅವರು ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಇಂದು ಚಿಕ್ಕಬಳ್ಳಾಪುರ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿ ಮಾತನಾಡಿದ ವೀರಪ್ಪಮೊಯ್ಲಿ ಅವರು, ಎರಡು ಬಾರಿ ಚಿಕ್ಕಬಳ್ಳಾಪುರದ ಜನ ನನ್ನ ಕೈ ಹಿಡಿದಿದ್ದಾರೆ. ಮುಂದಿನ 5 ವರ್ಷಗಳಲ್ಲಿ ನಾನು ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವಿಸ್ತರಣೆ ಮಾಡುವುದಾಗಿ ಆಶ್ವಾಸನೆ ನೀಡಿದರು.

    ಇದಕ್ಕೂ ಮುನ್ನ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗಿದೆ. ಮತ್ತೊಂದೆಡೆ ಕೃಷ್ಣಾ ನದಿಯ ನೀರನ್ನ ಸಹ ಬಾಗೇಪಲ್ಲಿ ಭಾಗದಿಂದ ಈ ಕ್ಷೇತ್ರಕ್ಕೆ ತರುವುದಾಗಿ ತಿಳಿಸಿದರು. ಅಲ್ಲದೇ ಚಿಕ್ಕಬಳ್ಳಾಪುರ-ಶಿಡ್ಲಘಟ್ಟ ಮಾರ್ಗದಲ್ಲಿ ಕೈಗಾರಿಕಾ ವಲಯ ಗುರುತಿಸಿ, ಈಗಾಗಲೇ ಬಜೆಟ್ ನಲ್ಲಿ ಘೋಷಣೆಯಾಗಿರುವ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕ ಆರಂಭಿಸುವುದಾಗಿ ಪ್ರಚಾರ ಭಾಷಣದಲ್ಲಿ ಹೇಳಿದರು.

    ಮನೆ ಮನೆಗೆ ಕುಡಿಯುವ ನೀರು, ಹೊಲ ಹೊಲಕ್ಕೆ ಜಲ, ಮನೆ ಮನೆಗೆ ಯುವಕರಿಗೆ ಉದ್ಯೋಗ ನೀಡುವುದೇ ತಮ್ಮ ಸಂಕಲ್ಪ ಎಂದು ವೀರಪ್ಪ ಮೊಯ್ಲಿ ಘೋಷಣೆ ಮಾಡಿದರು. ಇದೆಲ್ಲದರ ನಡುವೆ ಚರ್ಚ್‍ಗಳಿಗೆ ಭೇಟಿ ನೀಡಿದ ವೀರಪ್ಪ ಮೊಯ್ಲಿ ಪ್ರಾರ್ಥನೆ ಸಲ್ಲಿಸಿ, ಮತಯಾಚನೆ ಮಾಡಿದರು.

  • ರಾತ್ರಿ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್

    ರಾತ್ರಿ ಮೆಟ್ರೋದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಗುಡ್ ನ್ಯೂಸ್

    ಬೆಂಗಳೂರು: ತಡರಾತ್ರಿವರೆಗೆ ಕೆಲಸ ಮುಗಿಸಿ ಮನೆಗೆ ತೆರಳುವ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್. ಏಕೆಂದರೆ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು ಸಂಚಾರವನ್ನು 12 ಗಂಟೆಯವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್‌ಸಿಎಲ್) ಚಿಂತನೆ ನಡೆಸಿದೆ.

    ರಾತ್ರಿ ವೇಳೆ ಹೆಚ್ಚು ಹಣ ತೆತ್ತು ಆಟೋದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಒಂದಿಷ್ಟು ನಿರಾಳವಾಗಲಿದ್ದಾರೆ. ಬಸ್ ಕಾಯುವ ಬದಲು ಮೆಟ್ರೋ ರೈಲು ಇದ್ದರೆ ಅನುಕೂಲ ಎನ್ನುವವರಿಗೆ ಇದು ಖುಷಿ ವಿಚಾರವಾಗಿದೆ.

    ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳಿಯುತ್ತಿದೆ. ಇತ್ತ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಟ್ರೋ ರೈಲು ಮೊರೆ ಹೋಗಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ, ಆರು ಬೋಗಿಗಳ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ 1,800 ಜನ ಒಂದೇ ಬಾರಿಗೆ ಪ್ರಯಾಣಿಸಬಹುದಾಗಿದೆ.

    ಅದಷ್ಟು ಬೇಗ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು 12 ಗಂಟೆಗೆ ವಿಸ್ತರಿಸಬೇಕು ಎಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv