Tag: Metro man Sreedharan

  • ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

    ಕಮಾಲ್ ಮಾಡದ ಕಮಲ್- ಅಣ್ಣಾಮಲೈ, ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಕಹಿ

    – ರತ್ನಪ್ರಭಾಗೆ ಠೇವಣಿ ನಷ್ಟ

    ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮಕ್ಕಳ್ ನಿಧಿ ಮಯಂ ಪಕ್ಷದಿಂದ ಕೊಯಂಬತ್ತೂರು ದಕ್ಷಿಣದಿಂದ ಸ್ಪರ್ಧಿಸಿದ್ದ ಕಮಲ್ ಹಾಸನ್ 43,451 ಮತಗಳನ್ನು ಪಡೆಯುವ ಮೂಲಕ ಜಯ ಗಳಿಸಿದರು. ಆದರೆ ತಮಿಳುನಾಡಿನ ಉಳಿದ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅವರ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ. ಇದರಿಂದ ಕಮಲ್‍ಗೆ ನಿರಾಸೆಯಾಗಿದೆ.

    ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿಜೆಪಿಯ ರತ್ನಪ್ರಭಾಗೆ ಠೇವಣಿ ನಷ್ಟವಾಗಿದೆ. ತಿರುಪತಿ ಲೋಕಸಭಾ ಕ್ಷೇತ್ರದಲ್ಲಿ ಮದಿಲ್ಲ ಗುರುಮೂರ್ತಿ 6,26,108 ಮತಗಳಿಂದ ಜಯಗಳಿಸಿದರು. ರತ್ನಪ್ರಭಾ ಅವರು ಕೇವಲ 56,842 ಮತಗಳನ್ನು ಮಾತ್ರ ಪಡೆದು ನಿರಾಸೆ ಅನುಭವಿಸಿದರು.

    ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅರವರಕಚ್ಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕರ್ನಾಟಕದ ಸಿಂಗಂ ಎಂದು ಹೆಸರುವಾಸಿಯಾಗಿದ್ದ ಅಣ್ಣಾಮಲೈ ಸೋಲು ಕಂಡಿದ್ದಾರೆ. ಅಣ್ಣಾಮಲೈಗೆ ತೀವ್ರ ಸ್ಪರ್ಧೆ ನೀಡಿದ ಡಿಎಂಕೆ ಪಕ್ಷದ ಅಭ್ಯರ್ಥಿ ಎಲಂಗೋ.ಆರ್ 26,719 ಮತ ಪಡೆದು ವಿಜಯಿಯಾದರೆ, ಅಣ್ಣಾಮಲೈ 22,335 ಮತ ಪಡೆದು ಸೋಲು ಕಂಡರು.

    ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಮೆಟ್ರೋ ಮ್ಯಾನ್ ಶ್ರೀಧರನ್‍ಗೆ ಸೋಲಿನ ಆಘಾತವಾಗಿದೆ. ಪಾಲಕ್ಕಾಡ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್ 49,155 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಶಾಫಿ ಪರಂಬಿಲ್ 53,080 ಮತ ಪಡೆದು ಜಯ ಗಳಿಸಿದರು.

  • ಕೇರಳದಲ್ಲಿ ಅಶ್ವತ್ಥ ನಾರಾಯಣ ಡೇ ಔಟ್- ಇ ಶ್ರೀಧರನ್ ಜತೆ ಮಾತುಕತೆ

    ಕೇರಳದಲ್ಲಿ ಅಶ್ವತ್ಥ ನಾರಾಯಣ ಡೇ ಔಟ್- ಇ ಶ್ರೀಧರನ್ ಜತೆ ಮಾತುಕತೆ

    ತಿರುವನಂತಪುರ: ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.

    ದಿನಪೂರ್ತಿ ವಿವಿಧ ಗಣ್ಯರು ಹಾಗೂ ಧರ್ಮ ಗುರುಗಳನ್ನು ಭೇಟಿಯಾದ ಡಿಸಿಎಂ ಅವರು, ಮುಖ್ಯವಾಗಿ ಬಿಜೆಪಿ ಮುಖಂಡರು ಹಾಗೂ ಮೆಟ್ರೋಮನ್ ಇ ಶ್ರೀಧರನ್ ಅವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರಚಾರ, ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶ್ವತ್ಥನಾರಾಯಣ ಅವರು, ಕೇರಳದ ಜನರು ಪ್ರಗತಿಯನ್ನು ಕೋರುತ್ತಿದ್ದಾರೆ. ಬಿಜೆಪಿ ಪಕ್ಷದ ಪರ ಅಲೆ ಬೀಸುತ್ತಿದೆ. ಎಲ್‍ಡಿಎಫ್ ಹಾಗೂ ಯುಡಿಎಫ್ ಆಡಳಿತ ಜನತೆಗೆ ಸಾಕಾಗಿದೆ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಪರ್ಯಾಯವಾದ ರಾಜಕೀಯ ಶಕ್ತಿ ಉದಯಕ್ಕೆ ಇದು ಸಕಾಲ ಎಂದು ಡಿಸಿಎಂ ಹೇಳಿದರು.

    ಶಾಂತಿಗಿರಿ ಆಶ್ರಮಕ್ಕೆ ಭೇಟಿ: ಮಧ್ಯಾಹ್ನ 1 ಗಂಟೆ ವೇಳೆಗೆ ಪೊಥೆನ್ ಕೋಡ್ ನಲ್ಲಿರುವ ಆಶ್ರಮಕ್ಕೆ ತೆರಳಿದ ಡಿಸಿಎಂ ಅವರು, ಸ್ವಾಮಿ ಗುರುರೀತನಮ್ ಜ್ಞಾನ ತಪಸ್ವಿ ಅವರ ಜತೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.

    ಈ ಸಂದರ್ಭದಲ್ಲಿ ಡಿಸಿಎಂ ಅವರು ಆಶ್ರಮದಲ್ಲಿ ನಡೆಯುತ್ತಿರುವ ಸೇವಾ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಅಲ್ಲಿನ ಚಟುವಟಿಕೆಗಳ ಬಗ್ಗೆ ಆಶ್ರಮದ ಆಡಳಿತಾಧಿಕಾರಿ ಸ್ವಾಮಿ ಗುರುಮಿತ್ರನ್ ಜ್ನಾನ ತಪಸ್ವಿ ಅವರು ಮಾಹಿತಿ ನೀಡಿದರು. ಅಲ್ಲಿನ ಪ್ರಶಾಂತ ವಾತಾವರಣ ಹಾಗೂ ಸೇವಾ ಕಾರ್ಯಗಳನ್ನು ಕಂಡು ಡಿಸಿಎಂ ಅವರು ಅತೀವ ಸಂತಸ ವ್ಯಕ್ತಪಡಿಸಿದರು.

    ನಾರಾಯಣ ಗುರುಗಳಿಗೆ ಗೌರವ: ತಿರುವನಂತಪುರ ಜಿಲ್ಲೆಯ ವರ್ಕಾಲದಲ್ಲಿರುವ ಶ್ರೀ ನಾರಾಯಣ ಗುರು ಅವರ ಸಮಾಧಿ ಇರುವ ಶಿವಗಿರಿ ಮಠಕ್ಕೆ ಅಶ್ವತ್ಥ ನಾರಾಯಣ ಭೇಟಿ ನೀಡಿದರು. ಈ ವೇಳೆ ಗುರುಗಳ ಸಮಾಧಿಗೆ ನಮನ ಸಲ್ಲಿಸಿದರು.

    ನಂತರ ಡಿಸಿಎಂ ಅವರು, ತಿರುವನಂತಪುರದ ಕಾರ್ಡಿನಲ್ ಕ್ಲೀಮಿಸ್ ಎಮಿನೇನ್ಸ್ ಮಲಂಕರ ಚರ್ಚಿಗೆ ಭೇಟಿ ನೀಡಿ ಫಾದರ್ ಜತೆ ಮಾತುಕತೆ ನಡೆಸಿದರು. ಆ ಬಳಿಕ ಡಿಸಿಎಂ ಕೇರಳದ ವಿವಿಧ ನಾಯಕರಿಗೆ ಪ್ರಚಾರ, ಬಹಿರಂಗ ಸಭೆಗಳ ಆಯೋಜನೆಗಳ ಬಗ್ಗೆ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ರಾಜ್ಯದ ಬಿಜೆಪಿಯ ಕೆಲ ಮುಖಂಡರು ಅಶ್ವತ್ಥ ನಾರಾಯಣ ಜೊತೆಗಿದ್ದರು.

  • ಬಿಜೆಪಿ ಗೆದ್ದರೆ ಸಿಎಂ ಸ್ಥಾನ ಅಲಂಕರಿಸಲು ಸಿದ್ಧ: ಮೆಟ್ರೋಮ್ಯಾನ್ ಶ್ರೀಧರನ್

    ಬಿಜೆಪಿ ಗೆದ್ದರೆ ಸಿಎಂ ಸ್ಥಾನ ಅಲಂಕರಿಸಲು ಸಿದ್ಧ: ಮೆಟ್ರೋಮ್ಯಾನ್ ಶ್ರೀಧರನ್

    ತಿರುವನಂತಪುರಂ: ಕೊಂಕಣ ರೈಲಿನ ಸೂತ್ರಧಾರನಾಗಿ ದೇಶಕ್ಕೆ ಪರಿಚಯವಾದ ಮೆಟ್ರೋ ಮ್ಯಾನ್ ಖ್ಯಾತಿಯ ಇ ಶ್ರೀಧರನ್ ಬಿಜೆಪಿ ಪಕ್ಷಕ್ಕೆ ಸೇರಲು ಸಿದ್ಧವಾಗಿದ್ದು. ಇದೀಗ ಸೇರ್ಪಡೆಯಾಗುವ ಮುನ್ನವೇ ತಾನು ಸಿಎಂ ಸ್ಥಾನ ಅಲಂಕರಿಸಲು ಸಿದ್ಧವಿರುವ ಇಂಗಿತ ವ್ಯಕ್ತಪಡಿಸಿದ್ದಾರೆ.

    ಶ್ರೀಧರನ್ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಫೆ. 21ರಂದು ಕಾಸರಗೋಡಿನಲ್ಲಿ ನಡೆಯುವ ‘ವಿಜಯ ಯಾತ್ರೆ’ ಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕೇರಳದಲ್ಲಿ ಏಪ್ರಿಲ್-ಮೇನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬಂದರೆ ನಾನೂ ರಾಜ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಲು ಸಿದ್ಧವಾಗಿರುವುದಾಗಿ ಮನದಾಸೆ ಬಿಚ್ಚಿಟ್ಟಿದ್ದಾರೆ.

    ಕೇರಳ ರಾಜ್ಯದ ಸಮಸ್ತ ಅಭಿವೃದ್ಧಿ ಕಾರ್ಯಗಳಿಗಾಗಿ ನನ್ನ ಬಳಿ ಹಲವು ಯೋಜನೆಗಳಿದ್ದು, ಕೈಗಾರಿಕೆ ಕ್ಷೇತ್ರವನ್ನು ಇನ್ನಷ್ಟು ಬಲಪಡಿಸಲು ಶ್ರಮಿಸುದಾಗಿ ಆಶ್ವಾಸನೆ ನೀಡಿದ್ದಾರೆ.

    ಕೊಂಕಣ ರೈಲ್ವೆ ಮತ್ತು ದಿಲ್ಲಿ ಮೆಟ್ರೋವನ್ನು ನಿರ್ಮಿಸಿದ ನಂತರ ಭಾರತದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬದಲಾಯಿಸಿದ ಕೀರ್ತಿ ಹೊಂದಿರುವ ಶ್ರೀಧರನ್ ಇದೀಗ ಕೇರಳ ರಾಜ್ಯದ ಮೊದಲ ಪ್ರಜೆಯಾಗಿ ಗುರುತಿಸಿಕೊಳ್ಳಲು ಸಿದ್ಧ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.