Tag: Meter interest rates

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ದಂಧೆಕೋರರ ಅಟ್ಟಹಾಸ ಪ್ರಕರಣ – ನೊಂದ ಮಹಿಳೆಗೆ ಸಿಎಂ ಕಚೇರಿಯಿಂದ ನೆರವು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ದಂಧೆಕೋರರ ಅಟ್ಟಹಾಸ ಪ್ರಕರಣ – ನೊಂದ ಮಹಿಳೆಗೆ ಸಿಎಂ ಕಚೇರಿಯಿಂದ ನೆರವು

    ಬೆಂಗಳೂರು: ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರು ಮಹಿಳೆ ಮೇಲೆ ನಡೆಸಿದ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಸಿಎಂ ಕಚೇರಿ ಸಿಬ್ಬಂದಿ, ಮಹಿಳೆಯ ನೆರವಿಗೆ ಧಾವಿಸಿದೆ.

    ಇಂದು ಬೆಳಗ್ಗೆ ಮೀಟರ್ ಬಡ್ಡಿ ದಂಧೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕೃತ್ಯವನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬಗ್ಗೆ ಸಿಎಂ ಕಚೇರಿ ಸಿಬ್ಬಂದಿ ಪಬ್ಲಿಕ್ ಟಿವಿಗೆ ಕರೆ ಮಾಡಿ ಮಹಿಳೆಯ ಮೊಬೈಲ್ ಪಡೆದಿದ್ದಾರೆ. ಕೂಡಲೇ ಮಹಿಳೆಗೆ ಕರೆ ಮಾಡಿ ನಾವಿದ್ದೀವಿ ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೇ 11 ಗಂಟೆಗೆ ಸಿಎಂ ಗೃಹ ಕಚೇರಿಗೆ ಬರುವಂತೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ ಅಂತ ಹೇಳಿದ್ದಾರೆ.

    ಅಲೋಕ್ ಕುಮಾರ್ ಸಮ್ಮುಖದಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿರುವ ಸಿಎಂ ಕುಮಾರಸ್ವಾಮಿ ಅವರು ಬಡ್ಡಿ ದಂಧೆ ಕೋರರ ವಿರುದ್ಧ ಕ್ರಮಕೈಗೊಳ್ಳುವ ಸೂಚನೆ ನೀಡಿದ್ದಾರೆ. ಖುದ್ದು ಕುಮಾರಸ್ವಾಮಿ ಅವರೇ ಮಹಿಳೆಯ ಸಮಸ್ಯೆಯನ್ನು ಆಲಿಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

    ನಡೆದಿದ್ದೇನು?
    ಮೀಟರ್ ಬಡ್ಡಿ ಗ್ಯಾಂಗ್ ಬಡ್ಡಿ ದುಡ್ಡುಕೊಡಲಿಲ್ಲ ಅಂತ ಮಹಿಳೆಯನ್ನು ಮನೆಯಲ್ಲಿಯೇ ಕೂಡಿ ಹಾಕಿ ತಂದೆ ಮುಂದೆನೇ ಲೈಂಗಿಕ ಕಿರುಕುಳ ನೀಡಿದ್ದರು. ಮತ್ತಿಕೆರೆ ನಿವಾಸಿ ಮಹಿಳೆಯೊಬ್ಬರು ಕಳೆದ ಜನವರಿಯಲ್ಲಿ ಅದೇ ಏರಿಯಾದ ಪ್ರಕಾಶ್ ಮತ್ತು ವೇದಾಂತ್ ಬಳಿಯಿಂದ 1 ಲಕ್ಷ ರೂ. ಹಣವನ್ನು ಪಡೆದಿದ್ದರು. ಹಾಗೆಯೇ ಲಟ್ಟೆ ಗೊಲ್ಲಹಳ್ಳಿ ನಿವಾಸಿ ನಾರಾಯಣಪ್ಪ ಎಂಬವರಿಂದ 2 ಲಕ್ಷ ರೂ. ಹಣ ಪಡೆದಿದ್ದರು. ತಿಂಗಳ ಬಡ್ಡಿಕೂಡ ಕೊಡುತ್ತಿದ್ದರು. ಪ್ರಕಾಶ್ ಮತ್ತು ವೇದಾಂತ್ ಬಳಿ ಪಡೆದ ಹಣಕ್ಕೆ ತಿಂಗಳು ಕಳೆದಂತೆ 30 % ಬಡ್ಡಿ ಜಾಸ್ತಿ ಮಾಡುತ್ತಾ ಹೋಗಿದ್ದಾರೆ. ಪರಿಣಾಮ 1 ಲಕ್ಷ ಹಣಕ್ಕೆ ಎಂಟು ತಿಂಗಳ ಬಡ್ಡಿಯೆಲ್ಲಾ ಸೇರಿಸಿ 12 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲದೇ ನಾರಾಯಣಪ್ಪ ಬಳಿ ಪಡೆದ 1 ಲಕ್ಷ ಹಣಕ್ಕೆ 8 ತಿಂಗಳಿಗೆ ಲೆಕ್ಕ ಇಲ್ಲದೇ 28 ಲಕ್ಷ ಆಗಿದೆ ಕೊಡಿ ಅಂತ ಲಟ್ಟೆಗೊಲ್ಲಹಳ್ಳಿಯ ಮನೆವೊಂದರಲ್ಲಿ ಮಹಿಳೆಯನ್ನ ಕೂಡಿ ಹಾಕಿ ತಂದೆಯ ಮುಂದೆನೇ ಸೀರೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದರು.

    ಇತ್ತ ಪ್ರಕಾಶ್ ಮತ್ತು ವೇದಾಂತ್, ಮಗನನ್ನ ಕಿಡ್ನಾಪ್ ಮಾಡ್ತೀವಿ ಅಂತ ಮೊಬೈಲಿನಲ್ಲಿ ಮೆಸೇಜ್ ಹಾಕಿ ಮನಬಂದಂತೆ ಏಕ ವಚನದಲ್ಲಿ ಬೈದಿದ್ದರು. ಮಗ ದೀಪಕ್ ಯಾವ ಕಾಲೇಜಿಗೆ ಹೋಗುವುದು ಗೊತ್ತು. ಸುಮ್ಮನೆ ಅವನ ಭವಿಷ್ಯ ಹಾಳುಮಾಡಬೇಡಿ ಮರ್ಯಾದೆಯಿಂದ ಸೆಟ್ಲ್‍ಮೆಂಟ್ ಮಾಡಿ. ನೀವು ಎಲ್ಲಿದ್ದರೂ ಬಿಡಲ್ಲ ನಮ್ಮದು 12 ಲಕ್ಷ ರೂ. ಕೊಡಬೇಕು ಎಂದಿದ್ದರು. ಅಲ್ಲದೇ ಪ್ರಕಾಶ್ ಮತ್ತು ವೇದಾಂತ್, ನನ್ನ ಪತಿಗೆ ಕಾಲ್ ಮಾಡಿ ಕೆಟ್ಟದಾಗಿ ಬೈದಿದ್ದಾರೆ ಎಂದು ನೊಂದ ಮಹಿಳೆ ದೂರಿದ್ದರು.

    ವೇದಾಂತ್ ಹಾಗೂ ಪ್ರಕಾಶ್ ವಿರುದ್ಧ ನೊಂದ ಮಹಿಳೆ ಮತ್ತು ಪತಿ ಸೋಲದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=iEYZexISgIo

  • ತಂದೆ ಮುಂದೆನೇ ಸೀರೆ ಎಳೆದಾಡಿ ಮಗಳಿಗೆ ಲೈಂಗಿಕ ಕಿರುಕುಳ!

    ತಂದೆ ಮುಂದೆನೇ ಸೀರೆ ಎಳೆದಾಡಿ ಮಗಳಿಗೆ ಲೈಂಗಿಕ ಕಿರುಕುಳ!

    ಬೆಂಗಳೂರು: ದಂಧೆಕೋರರ ಮನೆ ಮೇಲೆ ಅಲೋಕ್ ಕುಮಾರ್ ನೇತೃತ್ವದ ತಂಡ ದಾಳಿ ಮಾಡಿ ಕೋಟಿ ಕೋಟಿ ಹಣ ವಶಪಡಿಸಿಕೊಂಡಿದ್ದರೂ ದಂಧೆಕೋರರಿಗೆ ಮಾತ್ರ ಯಾವುದೇ ಭಯ ಇಲ್ಲವಾಗಿದ್ದು, ಇಲ್ಲೊಂದು ಮೀಟರ್ ಬಡ್ಡಿ ಗ್ಯಾಂಗ್ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದೆ.

    ಹೌದು. ಮೀಟರ್ ಬಡ್ಡಿ ಗ್ಯಾಂಗ್ ಬಡ್ಡಿ ದುಡ್ಡುಕೊಡಲಿಲ್ಲ ಅಂತ ಮಹಿಳೆಯೊಬ್ಬರನ್ನ ಮನೆಯಲ್ಲಿ ಕೂಡಿ ಹಾಕಿ ತಂದೆ ಮುಂದೆನೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಕಾಲೇಜಿಗೆ ಹೋಗುವ ಮಗನನ್ನ ಕಿಡ್ನಾಪ್ ಮಾಡಿ ಗಂಡನನ್ನ ಕೊಲೆ ಮಾಡುವುದಾಗಿ ಚಿತ್ರಹಿಂಸೆ ನೀಡಿದ್ದಾರೆ.

    ಮತ್ತಿಕೆರೆ ನಿವಾಸಿ ಮಹಿಳೆಯೊಬ್ಬರು ಕಳೆದ ಜನವರಿಯಲ್ಲಿ ಅದೇ ಏರಿಯಾದ ಪ್ರಕಾಶ್ ಮತ್ತು ವೇದಾಂತ್ ಬಳಿಯಿಂದ 1 ಲಕ್ಷ ರೂ. ಹಣವನ್ನು ಪಡೆದಿದ್ದರು. ಹಾಗೆಯೇ ಲಟ್ಟೆ ಗೊಲ್ಲಹಳ್ಳಿ ನಿವಾಸಿ ನಾರಾಯಣಪ್ಪ ಎಂಬವರಿಂದ 2 ಲಕ್ಷ ರೂ. ಹಣ ಪಡೆದಿದ್ದರು. ತಿಂಗಳ ಬಡ್ಡಿಕೂಡ ಕೊಡುತ್ತಿದ್ದರು. ಪ್ರಕಾಶ್ ಮತ್ತು ವೇದಾಂತ್ ಬಳಿ ಪಡೆದ ಹಣಕ್ಕೆ ತಿಂಗಳು ಕಳೆದಂತೆ 30 % ಬಡ್ಡಿ ಜಾಸ್ತಿ ಮಾಡುತ್ತಾ ಹೋಗಿದ್ದಾರೆ. ಪರಿಣಾಮ 1 ಲಕ್ಷ ಹಣಕ್ಕೆ ಎಂಟು ತಿಂಗಳ ಬಡ್ಡಿ ಎಲ್ಲಾ ಸೇರಿಸಿ 12 ಲಕ್ಷ ರೂ. ಆಗಿದೆ. ಅಷ್ಟೇ ಅಲ್ಲದೇ ನಾರಾಯಣಪ್ಪ ಬಳಿ ಪಡೆದ 1 ಲಕ್ಷ ಹಣಕ್ಕೆ 8 ತಿಂಗಳಿಗೆ ಲೆಕ್ಕ ಇಲ್ಲದೇ 28 ಲಕ್ಷ ಆಗಿದೆ ಕೊಡಿ ಅಂತ ಲಟ್ಟೆಗೊಲ್ಲಹಳ್ಳಿಯ ಮನೆವೊಂದರಲ್ಲಿ ಮಹಿಳೆಯನ್ನ ಕೂಡಿ ಹಾಕಿ ತಂದೆಯ ಮುಂದೆನೇ ಸೀರೆ ಎಳೆದಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ.

    ಇತ್ತ ಪ್ರಕಾಶ್ ಮತ್ತು ವೇದಾಂತ್, ಮಗನನ್ನ ಕಿಡ್ನಾಪ್ ಮಾಡ್ತೀವಿ ಅಂತ ಮೊಬೈಲಿನಲ್ಲಿ ಮೆಸೇಜ್ ಹಾಕಿ ಮನಬಂದಂತೆ ಏಕ ವಚನದಲ್ಲಿ ಬೈದಿದ್ದಾರೆ. ಮಗ ದೀಪಕ್ ಯಾವ ಕಾಲೇಜಿಗೆ ಹೋಗುವುದು ಗೊತ್ತು. ಸುಮ್ಮನೆ ಅವನ ಭವಿಷ್ಯ ಹಾಳುಮಾಡಬೇಡಿ ಮರ್ಯಾದೆಯಿಂದ ಸೆಟ್ಲ್ ಮೆಂಟ್ ಮಾಡಿ. ನೀವು ಎಲ್ಲಿದ್ದರೂ ಬಿಡಲ್ಲ ನಮ್ಮದು 12 ಲಕ್ಷ ರೂ. ಕೊಡಬೇಕು ಎಂದಿದ್ದಾರೆ. ಅಲ್ಲದೇ ಪ್ರಕಾಶ್ ಮತ್ತು ವೇದಾಂತ್, ನನ್ನ ಪತಿಗೆ ಕಾಲ್ ಮಾಡಿ ಕೆಟ್ಟದಾಗಿ ಬೈದಿದ್ದಾರೆ ಎಂದು ನೊಂದ ಮಹಿಳೆ ದೂರಿದ್ದಾರೆ.

    ನೊಂದ ಮಹಿಳೆ ಮತ್ತು ಪತಿ ಈಗಾಗಲೇ ವೇದಾಂತ್ ಹಾಗೂ ಪ್ರಕಾಶ್ ವಿರುದ್ಧ ಸೋಲದೇವನಹಳ್ಳಿ ಮತ್ತು ಕೊಡಿಗೇಹಳ್ಳಿ ದೂರು ದಾಖಲಿಸಿದ್ದಾರೆ. ಆದರೆ ಯಾವುದೇ ಕ್ರಮ ಜರುಗಿಸಿಲ್ಲ ಅಂತ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

    ಸಿಎಂ ಸೂಚನೆ:
    ಸಿಲಿಕಾನ್ ಸಿಟಿಯಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ದಿನೇದಿನೇ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಧೆಕೋರರನ್ನ ಮಟ್ಟ ಹಾಕುವಂತೆ ಸಿಎಂ ಕುಮಾರಸ್ವಾಮಿ ಸಿಸಿಬಿ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಸೂಚನೆ ನೀಡಿದ್ದರು. ಸೂಚನೆಯಂತೆ ಅಲೋಕ್ ಕುಮಾರ್ ವರು ದಂಧೆಕೋರರ ಮನೆ ಮೇಲೆ ದಾಳಿ ಮಾಡಿ ಕೋಟಿ ಕೋಟಿ ಹಣವನ್ನ ವಶಪಡಿಸಿಕೊಂಡಿದ್ದರು. ಆದರೂ ದಂಧೆಕೋರರ ಹಾವಳಿ ಕಡಿಮೆ ಆಗದಿರುವುದು ವಿಪರ್ಯಾಸವೇ ಸರಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಧಿಕಾರಿಗಳ ಮನೆ ಆಯ್ತು, ಈಗ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ!

    ಅಧಿಕಾರಿಗಳ ಮನೆ ಆಯ್ತು, ಈಗ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ!

    ಬೆಂಗಳೂರು: ಅಧಿಕಾರಿಗಳ ಮನೆಯಲ್ಲಿ ಮಾತ್ರ ಕೋಟಿ ಹಣ ಸಿಕ್ಕಿಲ್ಲ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ ಸಿಕ್ಕಿದೆ. ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಮೀಟರ್ ಓಡಿದಂತೆಲ್ಲಾ ಹಣ ವಸೂಲಿ ಮಾಡುತ್ತಿದ್ದ ದಂಧೆಕೋರರಿಗೆ ಖಾಕಿ ಬಿಸಿ ಮುಟ್ಟಿಸಿದ್ದು, ವಿಜಯನಗರ, ಕಾಮಾಕ್ಷಿಪಾಳ್ಯ ಜಯನಗರ ಸೇರಿದಂತೆ 14 ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ 9 ಜನರ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಮೈಕೋ ಲೇಔಟ್ ಭಾಸ್ಕರ್, ಸುಬ್ರಹ್ಮಣ್ಯ, ಬಾತ್ ರೂಮ್ ವೇಲು ಮತ್ತು ಮಾರ್ಕೆಟ್ ಪೊಲೀಸ್ ಠಾಣೆಯ ರೌಡಿಶೀಟರ್ ಮನೆ ಮೇಲೂ ದಾಳಿ ಮಾಡಲಾಗಿದೆ.

    ಮೈಕೋ ಲೇಔಟ್ ಭಾಸ್ಕರ್, ಸುಬ್ರಹ್ಮಣ್ಯ ಎಂಬವರು ಮನೆಯಲ್ಲಿ ತಲಾ ಮೂವತ್ತು ಲಕ್ಷ ವಶಕ್ಕೆ ಪಡೆಯಲಾಗಿದೆ. ಇವರು ತಿಂಗಳಿಗೆ ತಲಾ 10ರಿಂದ 15 ಪರ್ಸೆಂಟ್ ಬಡ್ಡಿ ತೆಗೆದುಕೊಳ್ಳುತ್ತಿದ್ದರು. ಸಿಸಿಬಿ ಪೊಲೀಸರು ಸುಮಾರು 14 ತಂಡಗಳಾಗಿ ಬೆಳಗ್ಗೆ ಐದು ಗಂಟೆಯಿಂದ ದಾಳಿ ಮಾಡಿದ್ದಾರೆ. ದಾಳಿ ವೇಳೆ 69 ಲಕ್ಷ ನಗದು, 258 ಚೇಕ್ ಗಳು, 52 ಆನ್ ಡಿಮ್ಯಾಂಡ್ ನೋಟ್ ಗಳು, 11 ನಿವೇಶನ ದಾಖಲಾತಿಗಳು, 25 ಇ ಸ್ಟಾಂಪ್, 13 ಬಾಂಡ್ ಪೇಪರ್ ಗಳು ಮತ್ತು ಐದಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

    ಬೆಂಗಳೂರಿನ ನಗರದಾದ್ಯಂತ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದು, ಮೀಟರ್ ಬಡ್ಡಿದಂಧೆಕೋರರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 69 ಲಕ್ಷ ರೂ. ನಗದು ಹಣ ಸಿಕ್ಕಿದೆ. ಇನ್ನು ಕಾರ್ಯಾಚರಣೆ ನಡೆಯುತ್ತಿದೆ. ಯಾರ ಬಳಿ, ಎಷ್ಟು? ಹಣ ಸಿಕ್ಕಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=qzACrYbpmVI