Tag: Meteor 350

  • ರಾಯಲ್ ಎನ್‍ಫೀಲ್ಡ್ ಮೀಟಿಯೋರ್ 350 ಬೈಕ್ ಬಿಡುಗಡೆ – ಬೆಲೆ ಎಷ್ಟು?

    ರಾಯಲ್ ಎನ್‍ಫೀಲ್ಡ್ ಮೀಟಿಯೋರ್ 350 ಬೈಕ್ ಬಿಡುಗಡೆ – ಬೆಲೆ ಎಷ್ಟು?

    ನವದೆಹಲಿ: ಚೆನ್ನೈ ಮೂಲದ ರಾಯಲ್ ಎನ್‍ಫೀಲ್ಡ್ ಕಂಪನಿಯು ಹೊಚ್ಚ ಹೊಸ ಮೀಟಿಯೋರ್ 350 ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಬೈಕ್‍ನ ಬೆಲೆ  1.76 ಲಕ್ಷದಿಂದ 1.91 ಲಕ್ಷ ರೂ.ವರೆಗೆ ಇದೆ.

    ಮೀಟಿಯೋರ್ ಕ್ರೂಸರ್ ಬೈಕ್ ಆಗಿದ್ದು ನೋಡಲು ಥೇಟ್ ಥಂಡರ ಬರ್ಡ್‌ನಂತೆ  ಇದೆ. ಆದರೆ ಹೊಸ ಬಣ್ಣಗಳು ಬೈಕನ್ನು ಅತ್ಯಾಕರ್ಷಕಗೊಳಿಸಿದೆ. ಫೈಯರ್ ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್ ನೋವಾ ಎಂಬ ಮೂರು ಆವೃತ್ತಿಗಳಲ್ಲಿ ಮೀಟಿಯೋರ್ ಲಭ್ಯವಿದೆ. 15 ಬಣ್ಣಗಳಲ್ಲಿ ರಾಯಲ್ ಎನ್‍ಫೀಲ್ಡ್ ಮೀಟಿಯೋರ್ 350 ಬೈಕ್ ದೊರೆಯುತ್ತದೆ.

    ಹೊಸ ಮೀಟಿಯೋರ್ 349 ಸಿಸಿ ಏರ್-ಆಯಿಲ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. 5 ಸ್ಪೀಡ್ ಗೇರ್‌ ಬಾಕ್ಸ್‌  ಹೊಂದಿರುವ ಈ ಬೈಕ್ 20.2 ಹೆಚ್‍ಪಿ ಪವರ್ ಹಾಗೂ 27 ಎನ್‍ಎಂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ  ಹೊಂದಿದೆ.

    ಪ್ರಪ್ರಥಮ ಬಾರಿಗೆ ರಾಯಲ್ ಎನ್‍ಫೀಲ್ಡ್ ಬೈಕ್‍ನಲ್ಲಿ ಟ್ರಿಪ್ಪರ್ ನ್ಯಾವಿಗೇಶನ್ ವ್ಯವಸ್ಥೆಯನ್ನು ನೀಡಲಾಗಿದೆ. ಈ ವ್ಯವಸ್ಥೆ ಬ್ಲೂಟೂತ್ ಮುಖಾಂತರ ಕೆಲಸ ಮಾಡಲಿದೆ. ಇದಕ್ಕಾಗಿ ನಿಮ್ಮ ಸ್ಮಾರ್ಟ್‍ಫೋನ್‍ನಲ್ಲಿ ಗೂಗಲ್ ಮ್ಯಾಪ್ಸ್ ಮತ್ತು ರಾಯಲ್ ಎನ್‍ಫೀಲ್ಡ್ ಆ್ಯಪ್ ಇರಲೇಬೇಕು. ಅನಲಾಗ್-ಡಿಜಿಟಲ್ ಮೀಟರ್ ಕನ್ಸೋಲ್, ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಈ ಬೈಕ್‍ನಲ್ಲಿದೆ.