Tag: metaverse

  • ಫೇಸ್‍ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ್ಯಾಂಡ್ -FB ಕಂಪನಿ ಇನ್ನು ಮೆಟಾವರ್ಸ್

    ಫೇಸ್‍ಬುಕ್ ಅಧೀನದ ಕಂಪನಿಗಳಿಗೆ ಒಂದೇ ಬ್ರ್ಯಾಂಡ್ -FB ಕಂಪನಿ ಇನ್ನು ಮೆಟಾವರ್ಸ್

    – ವಾರ್ಷಿಕ ಸಭೆಯಲ್ಲಿ ಜುಕರ್‌ಬರ್ಗ್ ಘೋಷಣೆ

    ವಾಷಿಂಗ್ಟನ್: ಫೇಸ್‍ಬುಕ್, ಇನ್‍ಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳು ಮಾರ್ಕ್ ಜುಕರ್‌ಬರ್ಗ್ ಒಡೆತನದಲ್ಲಿದ್ದು, ಈ ಎಲ್ಲ ಸೋಶಿಯಲ್ ಮೀಡಿಯಾಗಳನ್ನು ಒಟ್ಟಿಗೆ ತರಲಾಗುತ್ತದೆ ಎಂದು ಜುಕರ್‌ಬರ್ಗ್ ಘೋಷಿಸಿದ್ದಾರೆ

    ಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‍ಬುಕ್ ಕಂಪನಿಯ ಮುಖ್ಯಸ್ಥ ಮಾರ್ಕ್ ಜುಕರ್ ಬರ್ಗ್ ಭವಿಷ್ಯದ ವರ್ಚುವಲ್ ದೃಷ್ಟಿಕೋನದೊಂದಿಗೆ ತಮ್ಮ ಕಂಪನಿಯನ್ನು ಮೆಟಾ ಎಂಬ ಹೆಸರಿನಲ್ಲಿ ಬ್ರಾಂಡಿಂಗ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನೇ ಅವರು ಮೆಟಾವರ್ಸ್ ಎಂದು ಕರೆದಿದ್ದಾರೆ. ಇದನ್ನೂ ಓದಿ: ಹೆಸರು ಬದಲಿಸಲು ಚಿಂತಿಸಿದ ಫೇಸ್‍ಬುಕ್

    ನಿನ್ನೆ ನಡೆದ ಕಂಪನಿಯ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನ ಸಾಮಾನ್ಯರ ಮಧ್ಯೆ ಸಂಪರ್ಕ ಸಾಧಿಸಲು ತಂತ್ರಜ್ಞಾನ ರೂಪಿಸುವ ಕಂಪನಿ ನಮ್ಮದಾಗಿದ್ದು, ಈ ಕಾಯಕದಲ್ಲಿ ನಾವು ಯಶಸ್ವಿಯಾಗಿದ್ದೇವೆ. ಮುಂದಿನ ಒಂದು ದಶಕದಲ್ಲಿ ಮೆಟಾವರ್ಸ್ 100 ಕೋಟಿ ಜನರನ್ನು ತಲುಪಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಸೂಪರ್ ಸ್ಟಾರ್ ರಜನಿಕಾಂತ್ ಆಸ್ಪತ್ರೆಗೆ ದಾಖಲು

    ಕಾಲಾಂತರದಲ್ಲಿ ನಾವು ಮೆಟಾವರ್ಸ್ ಕಂಪನಿಯಾಗಿ ಬದಲಾವಣೆಯಾವ ಭರವಸೆಯಿದೆ ಎಂದು ಹೆಳಿದ್ದಾರೆ. ಮೆಟಾವರ್ಸ್ ವೇದಿಕೆಯು ಜನರ ಸಂವಹನ, ಕೆಲಸ, ಉತ್ಪನ್ನಗಳಿಗೆ ಮಾರುಕಟ್ಟೆ ವಿವಿಧ ವಿಷಯಗಳ ಕುರಿತ ರಚನೆ ಅವಕಾಶ ನೀಡಲಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ದೊರಕಿಸಿ ಕೊಡಲಿದೆ ಎಂದಿದ್ದಾರೆ.

    ಫೇಸ್ ಬುಕ್, ಇಸ್ಟಾಗ್ರಾಮ್, ಮೆಸೆಂಜರ್, ಒಕುಲಸ್ ಮುಂತಾದ ಕಂಪನಿಗಳನ್ನು ಒಟ್ಟಿಗೆ ತರಲಾಗುತ್ತದೆ. ಆದರೆ ಉದ್ಯೋಗ ಶ್ರೇಣಿಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾರ್ಕ್ ಘೋಷಿಸಿದ್ದಾರೆ.

    ಏನಿದು ಮೆಟಾವರ್ಸ್?
    ಮೆಟಾವರ್ಸ್ ಒಂದು ವಿಶಾಲವಾದ ಅರ್ಥವನ್ನು ನೀಡುವ ಪದವಾಗಿದೆ. ಸಾಮಾಜಿಕ ಜಾಲತಾಣಗಳ ವಿಚಾರಕ್ಕೆ ಬರುವುದಾದರೆ ಇಂಟರ್ ನೆಟ್ ಮೂಲಕ ಒಬ್ಬ ವ್ಯಕ್ತಿ ವರ್ಚುವಲ್ ಮಾದರಿಯಲ್ಲಿ (ಸಾಮಾನ್ಯವಾಗಿ ವಿಡಿಯೋ ಕಾನ್ಫರೆನ್ಸ್ ಮಾದರಿಯಲ್ಲಿ ಅಥವಾ ಬೇರೆ ಮಾದರಿಗಳಲ್ಲಿ) ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವುದಾಗಿದೆ. ಇದನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಾಧಿಸಲು ಫೇಸ್‍ಬುಕ್ ನಿರ್ಧಾರ ಮಾಡಿದೆ ಎಂದು ಮಾರ್ಕ್ ಜುಕರ್‌ಬರ್ಗ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ ನಟ ರಜನಿಕಾಂತ್