Tag: Metal Detector

  • PFI ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಪತ್ತೆ!

    PFI ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಪತ್ತೆ!

    ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರ ಮೇಲೆ ಕೆ.ಜಿ ಹಳ್ಳಿ ಠಾಣೆಯಲ್ಲಿ ಎಫ್‍ಐಆರ್ ವಿಚಾರದ ಕುರಿತು ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಬಹಿರಂಗವಾಗುತ್ತಿವೆ.

    ಪಿಎಫ್‍ಐ ಕೇಂದ್ರ ಕಚೇರಿ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ದಾಳಿ ನಡೆಸಿದ್ದ ವೇಳೆ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ (Metal Detector) ಪತ್ತೆಯಾಗಿವೆ. ಎಸ್‍ಕೆ ಗಾರ್ಡನ್ ಕಚೇರಿಯಲ್ಲಿ ಎರಡು ಎಚ್‍ಎಚ್‍ಎಂಡಿ ಮೆಟಲ್ ಡಿಟೆಕ್ಟರ್ ಪತ್ತೆಯಾಗಿದೆ.

    ಪೊಲೀಸ್, ಭದ್ರತಾ ಏಜೆನ್ಸಿಗಳ ಬಳಿ ಇರುವಂತಹ ಮೆಟಲ್ ಡಿಟೆಕ್ಟರ್ ಇವುಗಳಾಗಿವೆ. ಸಾರ್ವಜನಿಕ ಸಭೆಯಲ್ಲಿ ಮೆಟಲ್ ಡಿಟೆಕ್ಟರ್ ಕಣ್ತಪ್ಪಿಸಿ ಹೋಗಲು ತರಬೇತಿ ನೀಡಲಾಗುತ್ತಿತ್ತು. ಗನ್, ಮಚ್ಚು, ಲಾಂಗ್ ಹೀಗೆ ಯಾವುದಕ್ಕೆ ಸೌಂಡ್ ಮಾಡುತ್ತೆ ಅಂತ ಪರೀಕ್ಷೆ ಮಾಡಲಾಗುತ್ತದೆ. ವಿಧ್ವಂಸಕ ಕೃತ್ಯ ಎಸಗುವ ವೇಳೆ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ.

    ಇತ್ತ ದೇಶಾದ್ಯಂತ 5 ವರ್ಷ ಪಿಎಫ್‍ಐ ಬ್ಯಾನ್ ಬೆನ್ನಲ್ಲೇ ಹಲವು ಪಿಎಫ್‍ಐ ಮುಖಂಡರು, ಕಾರ್ಯಕರ್ತರು ದೇಶ ಬಿಟ್ಟಿದ್ದಾರೆ. ತನಿಖೆಗೆ ಹೆದರಿ ಪ್ರವಾಸದ ನೆಪದಲ್ಲಿ ಹಲವರು ವಿದೇಶಗಳಿಗೆ ದೌಡಾಯಿಸಿದ್ದಾರೆ. ಕೆಲವರು ಕರ್ನಾಟಕ, ಕೇರಳ, ತಮಿಳುನಾಡು ಅಂತಾರಾಜ್ಯ ಪ್ರವಾಸ ಮಾಡುತ್ತಿದ್ದಾರೆ.

    ಒಟ್ಟಿನಲ್ಲಿ ಸ್ಥಳೀಯ ಪೊಲೀಸರ ತನಿಖೆಯ ಬಿಸಿ ತಪ್ಪಿಸಿಕೊಳ್ಳಲು ತಿರುಗಾಟ ನಡೆಸುತ್ತಿದ್ದಾರೆ. ಪೊಲೀಸರು ಮತ್ತು ತನಿಖಾ ಸಂಸ್ಥೆಗಳಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಇದನ್ನೂ ಓದಿ: PFI ಮೊಬೈಲ್‌ ರಿಟ್ರೀವ್‌ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್‍

    Live Tv
    [brid partner=56869869 player=32851 video=960834 autoplay=true]

  • ಶ್ರೀಲಂಕಾ ದಾಳಿಯಿಂದ ಎಚ್ಚೆತ್ತ ಬೆಂಗ್ಳೂರು ಮಹಾನಗರ ಸಾರಿಗೆ ಸಂಸ್ಥೆ!

    ಶ್ರೀಲಂಕಾ ದಾಳಿಯಿಂದ ಎಚ್ಚೆತ್ತ ಬೆಂಗ್ಳೂರು ಮಹಾನಗರ ಸಾರಿಗೆ ಸಂಸ್ಥೆ!

    ಬೆಂಗಳೂರು: ಶ್ರೀಲಂಕಾ ಬಾಂಬ್ ದಾಳಿ ಬೆನ್ನಲ್ಲೆ ಬೆಂಗಳೂರಿನಲ್ಲೂ ಹೈ ಅಲರ್ಟ್ ಶುರುವಾಗಿದೆ. ಬಿಎಂಟಿಸಿ ಅಧಿಕಾರಿಗಳು ಕೂಡ ಬೆಂಗಳೂರಿನ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸುರಕ್ಷತಾ ಕ್ರಮ ಅಳವಡಿಕೆಗೆ ಸಜ್ಜಾಗಿದ್ದಾರೆ.

    ಬಿಎಂಟಿಸಿ ಬಸ್ ನಿಲ್ದಾಣದ ಸಂಕೀರ್ಣ ಘಟಕಗಳಿಗೆ ಮೆಟಲ್ ಡಿಟೆಕ್ಟರ್ ಅಳವಡಿಸಲು ನಿರ್ಧರಿಸಿದ್ದಾರೆ. ಬೆಂಗಳೂರು ಉಗ್ರರ ಹಿಟ್ ಲಿಸ್ಟ್ ನಲ್ಲಿದ್ದು ಖಾಕಿ ಪಡೆ ಕೂಡ ಅಲರ್ಟ್ ಆಗಿದೆ. ಬೆಂಗಳೂರಿನಲ್ಲಿ 8 ಬಿಎಂಟಿಸಿ ಬಸ್ ನಿಲ್ದಾಣಗಳಿದ್ದು, ಇಲ್ಲಿ ಮೆಟಲ್ ಡಿಟೆಕ್ಟರ್ ಆಳವಡಿಸಲಾಗುತ್ತದೆ.

    ಈ ವಿಚಾರದ ಬಗ್ಗೆ ಪಬ್ಲಿಕ್ ಟಿವಿಗೆ ಬಿಎಂಟಿಸಿಯ ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಅನುಪಮ್ ನಿರಂಜನ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಟಲ್ ಡಿಟೆಕ್ಟರ್ ಅಳವಡಿಸಲಾಗುತ್ತದೆ. ಆದರೆ ಕೊಂಚ ಸಮಯ ಬೇಕಾಗುತ್ತದೆ. ಈಗಾಗಲೇ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ. ಪ್ಲಾನ್ ಮಾಡಿಕೊಂಡು ಬಜೆಟ್ ನೋಡಿಕೊಂಡು ಮೆಟಲ್ ಡಿಟೆಕ್ಟರ್ ಅಳವಡಿಸುತ್ತೇವೆ ಎಂದು ತಿಳಿಸಿದರು.

    ಪ್ರಮುಖ ಸ್ಥಳಗಳಲ್ಲೂ ಪೊಲೀಸ್ ಕಣ್ಗಾವಲು:
    ಶ್ರೀಲಂಕಾ ಬಾಂಬ್ ಸ್ಫೋಟದ ಹಿಂದೆ ಐಸಿಸ್ ಕೈವಾಡ ಇದೆ ಎಂಬ ಮಾಹಿತಿ ಹೊರ ಬೀಳುತ್ತಿದ್ದಂತೆಯೇ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್, ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ. ಮಂದಿರ, ಮಸೀದಿ, ಚರ್ಚ್, ರೈಲು, ಬಸ್, ವಿಮಾನ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಖಡಕ್ ಆದೇಶ ಹೊರಡಿಸಿದ್ದಾರೆ.

    ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಎಲ್ಲ ಪಂಚತಾರ ಹೋಟೆಲ್ ಮಾಲೀಕರು, ಮಾಲ್ ಮಾಲೀಕರು, ಐಟಿ ಕಂಪನಿಗಳ ಮುಖ್ಯಸ್ಥರು ಹಾಗೂ ಸೆಕ್ಯೂರಿಟಿ ಆಫಿಸರ್ ಗಳ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅನುಸರಿಸಬೇಕಾದ ಕ್ರಮಗಳು ಹಾಗೂ ಸ್ಫೋಟಕಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್‍ಕುಮಾರ್ ಮಾಹಿತಿ ನೀಡಿದ್ದಾರೆ. ಜನರ ರಕ್ಷಣೆಗಾಗಿ ಹೋಟೆಲ್‍ಗಳು ಯಾವ ರೀತಿ ಮುಂಜಾಗೃತಾ ಕ್ರಮಗಳನ್ನ ವಹಿಸಬೇಕು. ಮೆಟಲ್ ಡಿಟೆಕ್ಟರ್, ಲಗೇಜ್ ಸ್ಕ್ಯಾನಿಂಗ್, ಭದ್ರತೆಯ ನಿರ್ವಹಣೆ ಹೇಗೆ ಎಂದು ಪೊಲೀಸ್ ಆಯುಕ್ತರು ನಿರ್ದೇಶನ ನೀಡಿದ್ದಾರೆ.

  • ಚಾಕು ಇಟ್ಟುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆ ಪೊಲೀಸರ ವಶಕ್ಕೆ

    ಚಾಕು ಇಟ್ಟುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆ ಪೊಲೀಸರ ವಶಕ್ಕೆ

    ಬೆಂಗಳೂರು: ಚಾಕು ಇಟ್ಟುಕೊಂಡು ಎ ಆರ್ ಓ ಭೇಟಿ ಮಾಡಲು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆ ಮೆಟಲ್ ಡಿಟೆಕ್ಟರ್ ನಲ್ಲಿ ಸಿಕ್ಕಿಬಿದ್ದಿದ್ದಾಳೆ.

    ಲೋಕಾಯುಕ್ತ ಕಚೇರಿಗೆ ಐದು ದೂರುಗಳನ್ನು ಕೊಟ್ಟಿದ್ದ ಸೋನಿಯಾ ರಾಣಿ ಎಂಬ ಮಹಿಳೆ ಎ ಆರ್ ಓ ಭೇಟಿ ಮಾಡಲು ಬಂದಿದ್ದಳು. ಫೈಲ್ ಒಳಗೆ ಚಾಕು ಇಟ್ಟುಕೊಂಡಿದ್ದಳು. ಕಚೇರಿಯ ಪ್ರವೇಶ ದ್ವಾರದಲ್ಲಿರುವ ಡಿಟೆಕ್ಟರ್ ನಲ್ಲಿ ಚಾಕುವಿರುವುದು ಪತ್ತೆಯಾಗಿಲ್ಲ. ಎರಡನೇ ಮಹಡಿಯಲ್ಲಿ ಕೊಟ್ಟಿದ್ದ ದೂರು ಪರಿಶೀಲನೆ ಮಾಡಲು ಬಂದಾಗ ಮೆಟಲ್ ಡಿಟೆಕ್ಟರ್ ನಲ್ಲಿ ಚಾಕುವಿರುವುದು ಪತ್ತೆಯಾಗಿದೆ.

    ಇಂದು ಮಧ್ಯಾಹ್ನ 12:30ರ ಸುಮಾರಿಗೆ ಲೊಕಾಯುಕ್ತ ಕಚೇರಿಗೆ ಮಹಿಳೆ ಬಂದಿದ್ದಾರೆ. ಪರಿಶೀಲನೆ ಸಮಯದಲ್ಲಿ ಬ್ಯಾಗ್ ನಲ್ಲಿ ಚಾಕು ಪತ್ತೆಯಾಗಿದೆ. ಕೂಡಲೇ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

    ಲೋಕಾಯುಕ್ತದಲ್ಲಿ ದಾಖಲಿಸಿದ್ದ ಕೇಸ್ ಬಗ್ಗೆ ಮಾಹಿತಿ ಪಡೆಯಲು ಮೈಸೂರಿನಿಂದ ಬಂದಿರುವುದಾಗಿ ಆಕೆ ಹೇಳಿಕೆ ನೀಡಿದ್ದಾಳೆ. ಆಕೆ ನೀಡಿದ ಕೇಸ್ ಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಯಾವ ಕಾರಣಕ್ಕಾಗಿ ಬ್ಯಾಗ್ ನಲ್ಲಿ ಚಾಕು ಇಟ್ಟುಕೊಂಡಿದ್ದಳು ಎನ್ನುವುದರ ಬಗ್ಗೆ ವಿಚಾರಣೆ ಮುಂದುವರೆದಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ತಿಳಿಸಿದ್ದಾರೆ.