Tag: Messy Bed

  • ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ

    ಗಲೀಜಾದ ಹಾಸಿಗೆಯಲ್ಲಿ ಮಲಗಲು ಹೇಳಿದ ಸಚಿವ – ಅವಮಾನದಿಂದ ರಾಜೀನಾಮೆ ಕೊಟ್ಟ ಉಪಕುಲಪತಿ

    ಚಂಡೀಗಢ: ವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಹಾಗೂ ಪ್ರಸಿದ್ಧ ಆರೋಗ್ಯ ತಜ್ಞರೂ ಆಗಿರುವ ಡಾ.ರಾಜ್ ಬಹದ್ದೂರ್ ಅವರನ್ನು ಪಂಜಾಬ್‌ ಆರೋಗ್ಯ ಸಚಿವ ಚೇತನ್ ಸಿಂಗ್ ಜೌರಮಜ್ರಾ ಅವರು ಗಲೀಜಾದ ಹಾಸಿಗೆ ಮೇಲೆ ಮಲಗುವಂತೆ ಸೂಚಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಸಾರ್ವಜನಿಕವಾಗಿ ನನಗೆ ಅವಮಾನವಾಗಿದೆ ಎಂದು ರಾಜ್ ಬಹದ್ದೂರ್ ರಾಜೀನಾಮೆ ನೀಡಿದ್ದಾರೆ.

    ವೈದ್ಯಕೀಯ ಕಾಲೇಜಿನ ಆಸ್ಪತ್ರೆಯ ವಾರ್ಡ್‍ಗಳಲ್ಲಿ ಶುಚಿತ್ವದ ಬಗ್ಗೆ ದೂರುಗಳು ಬಂದ ನಂತರ, ಚೇತನ್ ಸಿಂಗ್ ಜೌರಮಜ್ರಾ ಅವರು ಮಾಧ್ಯಮಗಳು ಮತ್ತು ಕ್ಯಾಮೆರಾಮೆನ್‍ಗಳೊಂದಿಗೆ ಸರ್ಕಾರಿ ಆಸ್ಪತ್ರೆಗೆ ಪ್ರವೇಶಿಸಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರು ರಾಜ್ ಬಹದ್ದೂರ್ ಅವರಿಗೆ ರೋಗಿಯೊಬ್ಬರ ಗಲೀಜಾದ ಹಾಸಿಗೆಯ ಮೇಲೆ ಮಲಗಲು ಹೇಳಿದ್ದಾರೆ. ಇದನ್ನೂ ಓದಿ: ಗುಜರಾತಿಗಳು, ರಾಜಸ್ಥಾನಿಗಳು ಇಲ್ಲದೇ ಮಹಾರಾಷ್ಟ್ರಕ್ಕೆ ಹಣವಿಲ್ಲ: ವಿವಾದಕ್ಕೆ ಸಿಲುಕಿದ ರಾಜ್ಯಪಾಲರ ಹೇಳಿಕೆ

    ರಾಜ್ ಬಹದ್ದೂರ್ ಅವರು ಸ್ವಲ್ಪ ಸಮಯ ಹಾಸಿಗೆ ಮೇಲೆ ಮಲಗಿಕೊಂಡಿದ್ದಾರೆ. ಈ ವೇಳೆ ಹಲವು ಜನರು ಸ್ಥಳದಲ್ಲಿ ಇದ್ದರು. ಅಲ್ಲದೇ ವೀಡಿಯೋವನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ವಿರೋಧಪಕ್ಷಗಳು ಹಂಚಿಕೊಂಡಿದ್ದು, ಆರೋಗ್ಯ ಸಚಿವರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದೆ.

    ಅವಮಾನಿತರಾದ ರಾಜ್ ಬಹದ್ದೂರ್ ಅವರು ಒಂದು ದಿನದ ನಂತರ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಂದು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ನೀಡದ್ದಕ್ಕೆ ಸ್ನೇಹಿತರೊಂದಿಗೆ ಪತ್ನಿಯನ್ನೇ ಗ್ಯಾಂಗ್‌ರೇಪ್‌ಗೈದ

    Live Tv
    [brid partner=56869869 player=32851 video=960834 autoplay=true]