Tag: Messenger

  • ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಡೋಂಟ್‌ ಕಿಲ್‌ ದಿ ಮೆಸೆಂಜರ್‌ – ಇಂದ್ರಜಿತ್‌ ಲಂಕೇಶ್‌

    ಬೆಂಗಳೂರು: “ಡೋಂಟ್‌ ಕಿಲ್‌ ದಿ ಮೆಸೆಂಜರ್‌” – ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತನ್ನ ಸದಸ್ಯತ್ವವನ್ನು ಪ್ರಶ್ನಿಸಿದ್ದಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಪತ್ರಿಕ್ರಿಯೆಯನ್ನು ನೀಡಿದ್ದಾರೆ.

    ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ತಂದೆ 30 ವರ್ಷಗಳಿಂದ ಚಿತ್ರರಂಗದಲ್ಲಿದ್ದರು. ನಾನು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದೇನೆ. ನಿರ್ದೇಶನ ಮಾಡಿದ್ದೇನೆ. ನಾವು ಸಿನಿಮಾದವರೇ, ನಾವು ಚಿತ್ರರಂಗಕ್ಕೆ ಸೇರಿದ್ದೇವೆ. ಚಿತ್ರರಂಗದ ಒಳಿತಿಗಾಗಿ ಈ ವಿಚಾರದಲ್ಲಿ ಬಹಿರಂಗವಾಗಿ ಮಾತನಾಡುತ್ತಿದ್ದೇನೆ ಎಂದು ತಿಳಿಸಿದರು.

    ಈ ವಿಚಾರದಲ್ಲಿ ವಾಣಿಜ್ಯ ಮಂಡಳಿ ಏನಾದರೂ ಕ್ರಮ ತೆಗೆದುಕೊಂಡರೆ ನಾನು ಕಾನೂನಿನ ಮೊರೆ ಹೋಗುತ್ತೇನೆ ಎಂದು ಹೇಳಿದರು.

    ನಾನು ಒಬ್ಬ ಮೆಸೆಂಜರ್ ಅಷ್ಟೇ. ಸಿಸಿಬಿ ವಿಚಾರಣೆ ವಿಚಾರದಲ್ಲಿ ನಾನು ಏನ್ ಹೇಳಿದ್ದೇನೋ ಅದಕ್ಕೆ ನಾನು ಬದ್ಧವಾಗಿದ್ದೇನೆ. ಮಾಧ್ಯಮದಲ್ಲಿ ಏನ್ ಹೇಳಿದ್ದೇನೋ ಅದೆಲ್ಲವೂ ಸತ್ಯ. ಡ್ರಗ್ ಮಾಫಿಯಾ ವಿಚಾರದಲ್ಲಿ ನಾನು ಪೊಲೀಸರಿಗೆ ಪಾರಿವಾಳದಂತೆ ಮಾಹಿತಿ ನೀಡಿದ್ದೇನೆ ಎಂದು ತಿಳಿಸಿದರು.

    ನಾನು ಕೊಟ್ಟಿರುವ ಮಾಹಿತಿ ಆಧರಿಸಿ ಪೋಲೀಸರಿಗೆ ಸರಿಯಾಗಿ ತನಿಖೆ ಮಾಡಬೇಕು. ನೀಡಿದ ಮಾಹಿತಿಯನ್ನ ಆಧರಿಸಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ನನ್ನ ಪರ ವಿರೋಧದ ಚರ್ಚೆ ಯ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಒಂದು ಪ್ರಕರಣದಿಂದ ಕಾನೂನಿನ ರೀತಿಯಲ್ಲಿ , ಚಿತ್ರರಂಗಕ್ಕೆ ಒಳ್ಳೆಯದಾದರೆ ಅದೇ ನನಗೆ ದೊಡ್ಡ ಸಂತೋಷ. ಮುಂದಾದರೂ ಆ ಕಳಂಕ ಬಾರದಂತೆ ನೋಡಿಕೊಳ್ಳಿ ಎಂದು ಇಂದ್ರಜಿತ್‌ ಲಂಕೇಶ್‌ ಮನವಿ ಮಾಡಿದರು.

  • ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಮೆಸೆಂಜರ್ ನಿಂದಲೇ ಆವಾಜ್ ಹಾಕಿದ ರೌಡಿಶೀಟರ್!

    ಬೆಂಗಳೂರು: ನಗರದ ಜೈಲಿನಲ್ಲಿ ಇತ್ತೀಚೆಗೆ ಗಾಂಜಾ, ಮೊಬೈಲ್ ಯಾವುದು ಇಲ್ಲ. ಅಷ್ಟರ ಮಟ್ಟಿಗೆ ಸ್ಟ್ರಿಕ್ಟ್ ಮಾಡಲಾಗಿದೆ. ಅದರ ನಡುವೆಯೂ ರೌಡಿಯೊಬ್ಬ ಫೇಸ್‍ಬುಕ್‍ನಿಂದಲೇ ಆವಾಜ್ ಹಾಕಿದ್ದಾನೆ

    ನಟೋರಿಯಸ್ ರೌಡಿಶೀಟರ್ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ ಎಂಬಾತ ಮೆಸೇಂಜರ್ ನಿಂದಲೇ ಆವಾಜ್ ಹಾಕಿದ್ದಾನೆ. 2016ರಲ್ಲಿ ಕೆಂಗೇರಿ ಉಪನಗರ ಬಳಿ ಮಾರ ಹನುಮ ಎಂಬಾತನನ್ನ ಕ್ವಾಲೀಸ್‍ನಲ್ಲಿ ಬರುವಾಗ ಕೊಚ್ಚಿ ಕೊಲ್ಲಲಾಗಿತ್ತು. ಕೇಸ್‍ನ ಪ್ರಮುಖ ಆರೋಪಿ ಶ್ರೀನಿವಾಸ್ ಅಲಿಯಾಸ್ ರಾಬರಿ ಕಿಟ್ಟಿ, ಕಿರಣ್ ಅಲಿಯಾಸ್ ತಮಟೆ, ಸುನಿಲ್ ಅಲಿಯಾಸ್ ಸಿಲಿಂಡರ್ ಎಂಬವರು ಸೇರಿ 6 ಜನ ಜೈಲು ಸೇರಿದ್ರು. ಬೇಲ್ ಕೂಡ ಸಿಕ್ಕಿರಲಿಲ್ಲ.

    ಈ ಕೇಸ್‍ಗೆ ಮೃತ ಮಾರಹನುಮನ ಮಗ ವಿಜಯ್ ಕುಮಾರ್ ಪ್ರಮುಖ ಸಾಕ್ಷಿ. ಹೀಗಾಗಿ ಆತ ಏನಾದ್ರೂ ಸಾಕ್ಷಿ ಹೇಳಿಬಿಟ್ರೆ ಎಡವಟ್ಟಾಗುತ್ತೆ ಅಂತಾ ಜೈಲಿನಲ್ಲಿ ಇದ್ದುಕೊಂಡೇ ಶ್ರೀನಿವಾಸ ಒತ್ತಡ ಹಾಕ್ತಿದ್ದ. ಇಷ್ಟು ಸಾಲದು ಅಂತ ಪರಪ್ಪನ ಅಗ್ರಹಾರದಲ್ಲೇ ಕೂತು ಫೇಸ್‍ಬುಕ್ ಮೆಸೆಂಜರ್‍ನಿಂದ ಆಡಿಯೋ ಸೆಂಡ್ ಮಾಡಿ, ರಾಜಿ ಮಾಡ್ಕೋ ಅಂತ ಧಮ್ಕಿ ಹಾಕಿದ್ದಾನೆ. ಇದರಿಂದ ಬೆಚ್ಚಿರುವ ಮಾರಹನುಮ ಅವರ ಪುತ್ರ ವಿಜಯ್ ಈಗ ಪೊಲೀಸರಿಗೆ ದೂರು ನೀಡಿದ್ದಾರೆ.