Tag: MESCOM

  • 3 ಲಕ್ಷ ರೂ. ಕರೆಂಟ್ ಬಿಲ್ ಬಾಕಿ – ಕತ್ತಲಲ್ಲಿ ಉಡುಪಿ ಪ್ರವಾಸಿ ಮಂದಿರ

    3 ಲಕ್ಷ ರೂ. ಕರೆಂಟ್ ಬಿಲ್ ಬಾಕಿ – ಕತ್ತಲಲ್ಲಿ ಉಡುಪಿ ಪ್ರವಾಸಿ ಮಂದಿರ

    ಉಡುಪಿ: ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಚುನಾವಣೆಗೆ ಮುನ್ನ ಘೋಷಣೆ ಮಾಡಿದ ಭಾಗ್ಯಗಳು ಈಗ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಯೋಜನೆಗಳನ್ನು ನಿಲ್ಲಿಸುವಂತಿಲ್ಲ, ಮುಂದುವರಿಸುವಂತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೀಗ ಸರ್ಕಾರಿ ಕಟ್ಟಡಗಳಿಗೆ ಕರೆಂಟ್ ಬಿಲ್ (Electricity Bill) ಕಟ್ಟುವುದಕ್ಕೂ ಕಷ್ಟವಾಗಿದೆ.

    ಉಡುಪಿ (Udupi) ನಗರದ ಪ್ರವಾಸಿ ಮಂದಿರದ ದೃಶ್ಯ ಇದು. ಕಳೆದ ಎರಡು ದಿನಗಳಿಂದ ಐಬಿಗೆ (Inspection Bungalow) ಕರೆಂಟ್ ಇಲ್ಲ. ಮೆಸ್ಕಾಂನವರು (MESCOM) ಟ್ರಾನ್ಸ್‌ಫಾರ್ಮರ್ ಕಂಬದಿಂದ ವಿದ್ಯುತ್ ಸ್ಥಗಿತ ಮಾಡಿದ್ದಾರೆ. ಉಡುಪಿಗೆ ಬಂದ ಸರ್ಕಾರಿ ಅಧಿಕಾರಿಗಳು ಕತ್ತಲಲ್ಲೇ ಕಾಲ ಕಳೆಯುವಂತಾಗಿದೆ. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಐಬಿಗೆ ಭೇಟಿ ಕೊಟ್ಟು ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡರು.‌  ಇದನ್ನೂ ಓದಿ: ಇಸ್ರೇಲ್‌ ರಾಕೆಟ್‌ ದಾಳಿಗೆ ಲೆಬನಾನ್‌ ಛಿದ್ರ ಛಿದ್ರ – ಸಾವಿನ ಸಂಖ್ಯೆ 492ಕ್ಕೆ ಏರಿಕೆ!

    ಸುಮಾರು ಒಂದು ವರ್ಷಗಳಿಂದ ಪ್ರವಾಸಿ ಮಂದಿರದ 3 ಲಕ್ಷ ರೂ. ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಮೂರ್ನಾಲ್ಕು ಬಾರಿ ನೋಟಿಸ್ ಕೊಟ್ಟ ಬೆಸ್ಕಾಂ ನೇರವಾಗಿ ಟ್ರಾನ್ಸ್‌ಫಾರ್ಮರ್ ಕಂಬದಿಂದ ವಿದ್ಯುತ್ ಸ್ಥಗಿತ ಮಾಡಿದೆ. ಈ ಬೆಳವಣಿಗೆ ವಿಚಾರದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತವಾಗಿದ್ದು ಸರ್ಕಾರಿ ಕಟ್ಟಡಗಳ ವಿದ್ಯುತ್ ಬಿಲ್ ಪಾವತಿಯಷ್ಟು ಕೂಡ ಸರ್ಕಾರದ ಬಳಿ ಹಣ ಇಲ್ವಾ ಎಂದು ಪ್ರಶ್ನೆಮಾಡಿದ್ದಾರೆ. ಇದನ್ನೂ ಓದಿ: ನಿಮ್ಮ ಕೈಯಲ್ಲಿರೋ ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಿ ಸ್ಫೋಟಿಲು ಸಾಧ್ಯವೇ? ಹ್ಯಾಕಿಂಗ್‌ ತಪ್ಪಿಸಲು ಏನು ಮಾಡ್ಬೇಕು?

    ಒಟ್ಟಾರೆ ಸರ್ಕಾರಿ ಅಧಿಕಾರಿಗಳು, ನ್ಯಾಯಾಧೀಶರು ಜನಪ್ರತಿನಿಧಿಗಳು ಬಂದು ಉಳಿದುಕೊಳ್ಳುವ ಐಬಿಯ ಪರಿಸ್ಥಿತಿ ಹೀಗಾಗಿದೆ. ಮೂರು ದಿನಗಳಿಂದ ಯಾರಿಗೂ ಐಬಿಯಲ್ಲಿ ಕೊಠಡಿಗಳನ್ನು ಕೊಡುತ್ತಿಲ್ಲ. ಸಮಸ್ಯೆ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದು, ಸದ್ಯದ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಸರ್ಕಾರ ಯಾವಾಗ ಹಣ ಬಿಡುಗಡೆ ಮಾಡುತ್ತದೋ ಕಾದು ನೋಡಬೇಕು. ಇದನ್ನೂ ಓದಿ: ಮೈಸೂರಿನಲ್ಲಿ ಮಹಿಷ ದಸರಾ ಫೈಟ್ – ಈ ಬಾರಿ `ಮಹಿಷ ಮಂಡಲೋತ್ಸವ’!

  • ಮೆಸ್ಕಾಂ ಲಾರಿ, ಕಾರುಗಳ ನಡುವೆ ಸರಣಿ ಅಪಘಾತ – ನಾಲ್ವರು ದುರ್ಮರಣ

    ಮೆಸ್ಕಾಂ ಲಾರಿ, ಕಾರುಗಳ ನಡುವೆ ಸರಣಿ ಅಪಘಾತ – ನಾಲ್ವರು ದುರ್ಮರಣ

    ಚಿಕ್ಕಮಗಳೂರು: ಮೆಸ್ಕಾಂ (MESCOM) ಲಾರಿ, ಓಮಿನಿ ಹಾಗೂ ಆಲ್ಟೋ ಕಾರುಗಳ (Car) ನಡುವೆ ಸರಣಿ ಅಪಘಾತ (Accident) ಸಂಭವಿಸಿ ನಾಲ್ವರು ಸಾವನ್ನಪ್ಪಿದ ಘಟನೆ ಮೂಡಿಗೆರೆಯ (Mudigere) ಬಣಕಲ್-ಕೊಟ್ಟಿಗೆಹಾರ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಲಾರಿ ಹಾಗೂ ಓಮಿನಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಬಳಿಕ ಮತ್ತೊಂದು ಕಾರು ಸಹ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ. ಓಮಿನಿ ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ತೆರಳುತ್ತಿತ್ತು. ಮೆಸ್ಕಾಂ ಲಾರಿ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಉಡುಪಿಯಲ್ಲಿ ಸಿಡಿಲು ಬಡಿದು ಯುವಕ ದುರ್ಮರಣ

    ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಇದ್ಯಾ? ಸತ್ತು ಹೋಗಿದ್ಯಾ? ಅಭಿವೃದ್ಧಿಗೆ ಸರ್ಕಾರ ನಯಾಪೈಸೆ ಬಿಡುಗಡೆ ಮಾಡಿಲ್ಲ: ಅಶೋಕ್

  • ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

    ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ ಮನೆ, ಕಚೇರಿಗೆ ಲೋಕಾಯುಕ್ತ ದಾಳಿ

    – ಆದಾಯಕ್ಕೂ ಮೀರಿ ಅಕ್ರಮ ಆಸ್ತಿ ಗಳಿಕೆ ಪತ್ತೆ

    ಮಂಗಳೂರು: ಆದಾಯಕ್ಕೂ ಮೀರಿ ಅಕ್ರಮ ಆಸ್ತಿಗಳಿಕೆ ಆರೋಪದಡಿ ಮಂಗಳೂರಿನ ಮೆಸ್ಕಾಂ ಇಇ ಶಾಂತಕುಮಾರ್ (Mescom EE Shantakumar) ಮನೆ ಹಾಗೂ ಕಚೇರಿಗೆ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Officer) ದಾಳಿ ನಡೆಸಿದ್ದಾರೆ.

    ಮಂಗಳೂರಿನ ಅತ್ತಾವರ ವಿಭಾಗದದಲ್ಲಿ ಕಳೆದ ಐದೂವರೆ ವರ್ಷದಿಂದ ಇಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವ ಶಾಂತಕುಮಾರ್ ಅಕ್ರಮ ಆಸ್ತಿಹೊಂದಿರೋ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ. ನಗರದ ಕೊಂಚಾಡಿಯಲ್ಲಿರುವ ಶಿವಪ್ರಸಾದ್ ಗೋಲ್ಡ್ ಅಪಾರ್ಟ್‍ಮೆಂಟ್ ನ ಮನೆಗೂ ಹಾಗೂ ಅತ್ತಾವರದಲ್ಲಿರುವ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಶಾಂತಕುಮಾರ್ ಅವರ ಬೆಂಗಳೂರಿನಲ್ಲಿರುವ ಮನೆಗೂ ಇದೇ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮೂರು ಕಡೆಗಳಲ್ಲೂ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕನ್ನಡ ನಾಮಫಲಕ ಕಡ್ಡಾಯ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕಬೇಕು: ಡಿಕೆಶಿ ಒತ್ತಾಯ

  • ಉಳ್ಳಾಲ ನಿವಾಸಿಗೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ – ನಿಜವಾಗಿ ನಡೆದಿದ್ದು ಏನು?

    ಉಳ್ಳಾಲ ನಿವಾಸಿಗೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ – ನಿಜವಾಗಿ ನಡೆದಿದ್ದು ಏನು?

    ಮಂಗಳೂರು: ಸರ್ಕಾರ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ಕೊಟ್ಟ ಬೆನ್ನಲ್ಲೇ ಮಂಗಳೂರಿನ (Mangaluru) ಉಳ್ಳಾಲ (Ullala) ನಿವಾಸಿಯೋರ್ವರಿಗೆ ಬರೋಬ್ಬರಿ 7 ಲಕ್ಷದ 71 ಸಾವಿರ ರೂ. ವಿದ್ಯುತ್ ಬಿಲ್ (Electricity Bill) ಬಂದಿದ್ದು, ಮಾಲೀಕ ಬಿಲ್ ನೋಡಿ ಶಾಕ್ ಆಗಿದ್ದಾರೆ.

    ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಅವರಿಗೆ ಪ್ರತಿ ತಿಂಗಳು 3,000 ವಿದ್ಯುತ್ ಬಿಲ್ ಬರುತ್ತಿತ್ತು. ಇದೀಗ ಮೇ ತಿಂಗಳ ಹೊಸ ಬಿಲ್ ಬಂದಿದ್ದು, ಅದರಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ ಎಂದು ಬರೋಬ್ಬರಿ 7,71,072 ರೂ. ಕಟ್ಟಬೇಕು ಎಂದು ಬಿಲ್ ನೀಡಲಾಗಿದೆ. ಬಿಲ್ ಮೊತ್ತ ನೋಡಿ ಶಾಕ್ ಆದ ಸದಾಶಿವ ಆಚಾರ್ಯ ಅವರು ಬಿಲ್ ರೀಡರ್ ಬಳಿ ಈ ಬಗ್ಗೆ ಕೇಳಿದ್ದಾರೆ. ಆಗ ಬಿಲ್ ರೀಡರ್ ಅದನ್ನೆಲ್ಲಾ ಮೆಸ್ಕಾಂ (MESCOM) ಕಚೇರಿಯಲ್ಲಿ ಕೇಳಿ ಎಂದಿದ್ದಾರೆ. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ; ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ – ಸಿ.ಟಿ ರವಿಗೆ ಗುಂಡೂರಾವ್ ತಿರುಗೇಟು

    ಈ ಕುರಿತು ಸದಾಶಿವ ಆಚಾರ್ಯ ಅವರು ಮೆಸ್ಕಾಂ ಕಚೇರಿಗೆ ದೂರು ನೀಡಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ತಮ್ಮ ತಪ್ಪನ್ನು ಅರಿತುಕೊಂಡು 2,833 ರೂ. ಮೌಲ್ಯದ ಪರಿಷ್ಕೃತ ಬಿಲ್ ಅನ್ನು ನೀಡಿದ್ದಾರೆ ಎಂದು ಸದಾಶಿವ ಆಚಾರ್ಯ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮೇಘಸ್ಫೋಟದ ಆತಂಕ – ಜೂ.18, 19ರಂದು ಬೆಂಗ್ಳೂರಲ್ಲಿ ಭಾರೀ ಮಳೆಯ ಮುನ್ಸೂಚನೆ

    ಈ ಕುರಿತು ಮೆಸ್ಕಾಂ ಉಳ್ಳಾಲ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ದಯಾನಂದ್ ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಏಜೆನ್ಸಿಗಳ ಮೂಲಕ ಮೀಟರ್ ರೀಡಿಂಗ್ ಮಾಡಿಸಿ ಬಿಲ್ ನೀಡಲಾಗುತ್ತದೆ. ಬಿಲ್‌ಗಳಲ್ಲಿ ಲೋಪ ಕಂಡುಬಂದರೆ ಅಂತಹದ್ದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ಸಿಬ್ಬಂದಿ ತಿಳಿಯದೇ ಬಿಲ್ ಅನ್ನು ಕೊಟ್ಟಿದ್ದಾರೆ. ವಿಚಾರ ತಿಳಿದ ತಕ್ಷಣ ತಪ್ಪನ್ನು ಸರಿಪಡಿಸಿ ಪರಿಷ್ಕೃತ ಬಿಲ್ ಅನ್ನು ವಿತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: Cyclone Biparjoy : 140 ಕಿ.ಮೀ ವೇಗದಲ್ಲಿ ಆರ್ಭಟ – ಗುಜರಾತ್‍ ತೀರದಲ್ಲಿಅಲ್ಲೋಲ ಕಲ್ಲೋಲ

  • ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ

    ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ – ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ

    ಶಿವಮೊಗ್ಗ: ವಿದ್ಯುತ್ ದರ ಏರಿಕೆ (Electricity Bill Hike) ಖಂಡಿಸಿ ಶಿವಮೊಗ್ಗದಲ್ಲಿ (Shivamogga) ಇಂದು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ (Protest) ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿದೆ.

    ನಗರದ ಮೆಸ್ಕಾಂ (MESCOM) ಕಚೇರಿ ಎದುರು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  ಇದನ್ನೂ ಓದಿ: ಸಚಿವ ಸೆಂಥಿಲ್‌ ಬಾಲಾಜಿಗೆ ಶೀಘ್ರವೇ ಬೈಪಾಸ್‌ ಸರ್ಜರಿ ಅಗತ್ಯ – ಇಡಿ ಅರೆಸ್ಟ್‌ ಬೆನ್ನಲ್ಲೇ ವೈದ್ಯರ ಸಲಹೆ

    ಈ ವೇಳೆ ವಿದ್ಯುತ್ ದರ ಏರಿಕೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸರಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರು ಮೆಸ್ಕಾಂ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ತಡೆಯಲು ಹರಸಾಹಸ ಪಟ್ಟರು.

    ಈ ವೇಳೆ ಓರ್ವ ಕಾರ್ಯಕರ್ತ ಪೊಲೀಸರ ಕಣ್ತಪ್ಪಿಸಿ ಮೆಸ್ಕಾಂ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ ಕಚೇರಿಯ ಗಾಜು ಪುಡಿ ಪುಡಿ ಮಾಡಿದ್ದಾನೆ. ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.


    ಮೆಸ್ಕಾಂ ಕಚೇರಿಯ ಗಾಜು ಒಡೆದಿದ್ದಕ್ಕೆ ಕಾರ್ಯಕರ್ತನ ವಿರುದ್ದ ದೂರು ನೀಡಲು ಮೆಸ್ಕಾಂ ಅಧಿಕಾರಿಗಳು ನಿರ್ಧರಿಸಿದ್ದಾರೆ.

  • ಕಾರು ಮರಕ್ಕೆ ಡಿಕ್ಕಿ- ಮದುವೆ ನಿಶ್ಚಯವಾಗಿದ್ದ ಮೆಸ್ಕಾಂ ಜೆ.ಇ ಸಾವು

    ಕಾರು ಮರಕ್ಕೆ ಡಿಕ್ಕಿ- ಮದುವೆ ನಿಶ್ಚಯವಾಗಿದ್ದ ಮೆಸ್ಕಾಂ ಜೆ.ಇ ಸಾವು

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರು, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಮಾಕೋನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತರನ್ನು ಕಿರಣ್ (32) ಹಾಗೂ ನಾಗರಾಜ್ (40) ಎಂದು ಗುರುತಿಸಲಾಗಿದೆ. ಮೃತ ಕಿರಣ್ ಅಜ್ಜಂಪುರ ತಾಲೂಕಿನ ಶಿವನಿಯ ಮೆಸ್ಕಾಂನಲ್ಲಿ ಜೆ.ಇ. (MESCOM JE) ಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನವರು. ಮೃತ ಕಿರಣ್ ಗೆ ಮದುವೆ ಕೂಡ ನಿಶ್ಚಯವಾಗಿದ್ದು, ಫೆಬ್ರವರಿ 8ರಂದು ಕಿರಣ್ ಮದುವೆ ಇತ್ತು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ- NIA ಚಾರ್ಜ್‍ಶೀಟ್‍ನಲ್ಲಿ ಸ್ಫೋಟಕ ಮಾಹಿತಿ ಬಯಲು

    ಇಂದು ತರೀಕೆರೆಯಿಂದ ಶಿವನಿಗೆ ಹೋಗುವ ಮಾರ್ಗ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಾರು, ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮಧುಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತ ಕಿರಣ್ ಜೊತೆ ಇದ್ದ ಅಜ್ಜಂಪುರ ಮೂಲದ 40 ವರ್ಷದ ನಾಗರಾಜ್ ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಚುನಾವಣೆ ಹೊತ್ತಲ್ಲೇ ವಿದ್ಯುತ್‌ ದರ ಇಳಿಕೆ

    ಚುನಾವಣೆ ಹೊತ್ತಲ್ಲೇ ವಿದ್ಯುತ್‌ ದರ ಇಳಿಕೆ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಗ್ರಾಹಕರಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದೆ. ಬೆಸ್ಕಾಂ (Bescom), ಮೆಸ್ಕಾಂ (Mescom) ವ್ಯಾಪ್ತಿಯಲ್ಲಿ ವಿದ್ಯುತ್‌ ದರ (Electricity Price) ಇಳಿಕೆ ಮಾಡಿ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

    ಈ ಕುರಿತು ಟ್ವೀಟ್‌ ಮಾಡಿರುವ ಇಂಧನ ಸಚಿವ ಸುನಿಲ್‌ ಕುಮಾರ್‌ (Sunil Kumar) ಅವರು, ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ – ಸಂಪುಟ ಸಭೆಯಲ್ಲಿ ನಿರ್ಧಾರ

    ಬೆಸ್ಕಾಂ ವ್ಯಾಪ್ತಿಯಲ್ಲಿ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಇಂಧನ ಹೊಂದಾಣಿಕೆಯ ಶುಲ್ಕವನ್ನು ಪರಿಸ್ಕರಿಸಿ ಆದೇಶ ಹೊರಡಿಸಲಾಗಿತ್ತು. ಇದರಿಂದ ವಿದ್ಯುತ್‌ ದರ ಏರಿಕೆಯಾಗಿ ಗ್ರಾಹಕರಿಗೆ ಹೊರೆಯಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಕಳಸಾ ಬಂಡೂರಿ ಯೋಜನೆಗೆ ಗ್ರೀನ್ ಸಿಗ್ನಲ್ – ಡಿಪಿಆರ್ ಚುನಾವಣೆಗೆ ಮಾತ್ರ ಮೀಸಲಾಗಬಾರದು: ರೈತರ ಆಗ್ರಹ

    ಈಗ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ಇದರಿಂದ ವಿದ್ಯುತ್‌ ದರ ಇಳಿಕೆ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಅಧಿಕಾರಿಗಳ ವಿರುದ್ಧ ವಿಭಿನ್ನ ಆಕ್ರೋಶ- ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಳ್ಳುವ ರೈತ

    ಶಿವಮೊಗ್ಗ: ರೈತರೊಬ್ಬರು ತನ್ನ ತೋಟದ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ನೀಡದ ಮೆಸ್ಕಾಂ ಅಧಿಕಾರಿಗಳ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

    ಹನುಮಂತಪ್ಪ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬುತ್ತಿದ್ದ ರೈತ. ಅವರು ಪ್ರತಿನಿತ್ಯ ಮನೆಯಿಂದ ಮಿಕ್ಸಿ ತಂದು ಮೆಸ್ಕಾಂ ಕಚೇರಿಯಲ್ಲಿ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದರು. ಹಲವು ವರ್ಷಗಳಿಂದ ಅವರು ತೋಟದ ಮನೆಯಲ್ಲಿಯೇ ವಾಸವಿದ್ದರು. ಅವರ ತೋಟದಲ್ಲಿರುವ ಕೊಳವೆ ಬಾವಿಯ ಐಪಿ ಸೆಟ್‍ಗೆ ವಿದ್ಯುತ್ ಸಂಪರ್ಕ ಇದೆ. ಆದರೆ ಐಪಿ ಸೆಟ್‍ನ ವಿದ್ಯುತ್‍ಗೆ ಸಮಯ ನಿಗದಿ ಇಲ್ಲ. ಹೀಗಾಗಿ ಮನೆಗೆ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಅವರು ಮೆಸ್ಕಾಂಗೆ ಮನವಿ ಮಾಡಿಕೊಂಡಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ

    ರೈತ ಕಳೆದ 6 ತಿಂಗಳಿನಿಂದ ಮೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿಯಲ್ಲೇ ಮಸಾಲೆ ರುಬ್ಬಿಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • ಮೆಸ್ಕಾಂ ಇಲಾಖೆಯ ಅವ್ಯವಹಾರ ಬಯಲುಗೊಳಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಮೆಸ್ಕಾಂ ಇಲಾಖೆಯ ಅವ್ಯವಹಾರ ಬಯಲುಗೊಳಿಸಿ ಅಧಿಕಾರಿಗಳಿಗೆ ಈಶ್ವರಪ್ಪ ಕ್ಲಾಸ್

    ಶಿವಮೊಗ್ಗ: ಮೆಸ್ಕಾಂ ಇಲಾಖೆಯ ಸಭೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಇಲಾಖೆಯ ಅವ್ಯವಹಾರ ಬಯಲಿಗೆಳೆದಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಯಲ್ಲಿ 12 ಕೋಟಿ 21 ಲಕ್ಷ ವ್ಯತ್ಯಾಸವಾಗಿದ್ದು, 2017 ರಲ್ಲಿ ಕಾಮಗಾರಿ ಆರಂಭವಾಗಿದೆ. ನಿಗದಿಯಂತೆ 2020 ರಲ್ಲಿ ಕಾಮಗಾರಿ ಮುಕ್ತಾಯವಾಗಬೇಕಿತ್ತು. ನಿನ್ನೆಯವರೆಗೂ ಕಾಮಗಾರಿ ಮುಗಿದಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಕಲ್ ಅಂದಿದ್ದೆ ತಪ್ಪಾಯ್ತು – ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಅಂಗಡಿ ಮಾಲೀಕ

    ಕಾಮಗಾರಿ ಮುಗಿಯದಿರುವ ಬಗ್ಗೆ ಸಚಿವ ಈಶ್ವರಪ್ಪ ಪೋಟೋ ಪ್ರದರ್ಶನ ಮಾಡಿದ್ದಾರೆ. ಕಾಮಗಾರಿ ಮುಗಿಯದಿದ್ದರೂ, ಕಾಮಗಾರಿ ಮುಗಿದಿದೆ ಎಂದು ಎರಡು ತಿಂಗಳ ಹಿಂದೆಯೇ ಸರ್ಟಿಫಿಕೇಟ್ ಕೊಟ್ಟಿದ್ದೀರಿ ಎಂದು ಗುಡುಗಿದ್ದಾರೆ.

    ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಈ ರೀತಿಯ ಅವ್ಯವಹಾರ ನಮ್ಮ ಜಿಲ್ಲೆಯಲ್ಲಿ, ರಾಜ್ಯದಲ್ಲಿ ಎಷ್ಟು ಆಗಿರಬಹುದು. ಈ ರೀತಿಯ ಸರ್ಟಿಫಿಕೇಟ್ ಕೊಡೋದಕ್ಕೆ ನೀವು ಇಷ್ಟೆಲ್ಲಾ ಓದ್ದಿದ್ದೀರಿ. ನಿಮ್ಮ ಅಪ್ಪ, ಅಮ್ಮ ನಿಮ್ಮನ್ನು ಓದಿಸಿ, ಕೆಲಸ ಕೊಡಿಸಿರೋದು ಈ ರೀತಿ ಸರ್ಟಿಫಿಕೇಟ್ ಕೊಡೋದಕ್ಕ? ಸರಕಾರದ ದುಡ್ಡು, ಸಾಮಾನ್ಯ ಜನರ ದುಡ್ಡು ಇದು, ಕೆಲಸ ಮಾಡದೇ ಹಣ ಪಡೆಯುತ್ತಾರೆ ಅಂದ್ರೆ ಹೇಗೆ? ಸರಿಯಾಗಿ ಕೆಲಸ ಮಾಡಲು ಏನು ರೋಗ ಆಗಿದೆ ಅಂತಾ ಕೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತನ್ನ ಬರ್ತ್‌ಡೇ ಪಾರ್ಟಿ ಸಿದ್ಧತೆಗೆ ಫಾರ್ಮ್‌ಹೌಸ್‌ಗೆ ಹೋಗಿದ್ದ ಸಲ್ಲುಗೆ ಹಾವು ಕಡಿತ!

  • ಮೆಸ್ಕಾಂ ಸಿಬ್ಬಂದಿ ಜೊತೆ ಸಚಿವ ಸುನೀಲ್ ಕುಮಾರ್ ಹುಟ್ಟುಹಬ್ಬದ ಸಿಹಿಯೂಟ

    ಮೆಸ್ಕಾಂ ಸಿಬ್ಬಂದಿ ಜೊತೆ ಸಚಿವ ಸುನೀಲ್ ಕುಮಾರ್ ಹುಟ್ಟುಹಬ್ಬದ ಸಿಹಿಯೂಟ

    ಉಡುಪಿ: ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಮೆಸ್ಕಾಂನ ಲೈನ್ ಮ್ಯಾನ್ ಗಳ ಜೊತೆ ಹುಟ್ಟುಹಬ್ಬದ ಸಿಹಿ ಊಟವನ್ನು ಸವಿದು ಖುಷಿಪಟ್ಟಿದ್ದಾರೆ.

    ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಸುನೀಲ್ ಕುಮಾರ್ ಈ ಬಾರಿ ಕ್ಯಾಬಿನೆಟ್ ದರ್ಜೆಯ ನೂತನ ಸಚಿವರಾಗಿ ಎರಡು ಇಲಾಖೆಗಳ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸ್ವಾತಂತ್ರೋತ್ಸವವಾದ ಇಂದೇ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಮೆಸ್ಕಾಂನ ಸಿಬ್ಬಂದಿ ಜೊತೆ ಸಿಹಿಯೂಟ ಮಾಡಿದರು. ಈ ಮೂಲಕ 47ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.

    ಲೈನ್ ಮ್ಯಾನ್ ಗಳ ಜೊತೆ ಮನೆಯಂಗಳದಲ್ಲಿ ಕೂತು ಊಟ ಮಾಡಿದರು. ಊಟದ ಜೊತೆ ತಮ್ಮ ಇಲಾಖೆಯಲ್ಲಿರುವ ಸಮಸ್ಯೆಗಳು, ನಿಮ್ಮ ಬೇಡಿಕೆಗಳು ಏನು ಎಂದು ಲೈನ್‍ಮ್ಯಾನ್‍ಗಳನ್ನು ಕೇಳಿದರು. ಈ ಪೈಕಿ ಸಾಧ್ಯವಾದಷ್ಟನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವ ಸುನೀಲ್ ಕುಮಾರ್, ನನ್ನ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ ಫೀಲ್ಡಿನಲ್ಲಿ ದುಡಿಯುವ ಮೆಸ್ಕಾಂನ ಸಿಬ್ಬಂದಿ ಬಹುಮುಖ್ಯ. ಅವರ ಜೊತೆ ಹುಟ್ಟುಹಬ್ಬದ ದಿನ ಊಟ ಮಾಡುತ್ತಾ ಸಮಸ್ಯೆ ಆಲಿಸಿದ್ದೇನೆ. ಅದೇ ಇಂದಿನ ವಿಶೇಷ ಎಂದರು.