Tag: Merto Work Site

  • ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಮುಖ್ಯರಸ್ತೆ, ಸರ್ವಿಸ್ ರಸ್ತೆ ವಿಲೀನ – ಡಿಕೆಶಿ ಸ್ಥಳ ಪರಿಶೀಲನೆ

    ಮೆಟ್ರೋ ಕಾಮಗಾರಿ ಸ್ಥಳಗಳಲ್ಲಿ ಸುಗಮ ಸಂಚಾರಕ್ಕೆ ಮುಖ್ಯರಸ್ತೆ, ಸರ್ವಿಸ್ ರಸ್ತೆ ವಿಲೀನ – ಡಿಕೆಶಿ ಸ್ಥಳ ಪರಿಶೀಲನೆ

    ಬೆಂಗಳೂರು: ಮೆಟ್ರೋ(Metro) ಕಾಮಗಾರಿ ನಡೆಯುತ್ತಿರುವ ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ನೆರವಾಗಲು ಮುಖ್ಯ ರಸ್ತೆ ಹಾಗೂ ಸರ್ವಿಸ್ ರಸ್ತೆಗಳನ್ನು ವಿಲೀನ ಮಾಡುವ ಸಂಬಂಧ ಡಿಸಿಎಂ ಡಿ.ಕೆ ಶಿವಕುಮಾರ್ (D K Shivakumar) ಅವರು ಸೋಮವಾರ ನಗರದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

    ಹೆಬ್ಬಾಳ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಮೆಟ್ರೋ ಮಾರ್ಗದಲ್ಲಿ ಬರುವ ಮಹದೇವಪುರ ಹಾಗೂ ಮಾರತಹಳ್ಳಿ ಮೇಲ್ಸೇತುವೆ (Marthalli Flyover) ಬಳಿ ರಸ್ತೆ ವೀಕ್ಷಿಸಿದರು. ಇತ್ತೀಚೆಗೆ ನಡೆದ ಗ್ರೇಟರ್ ಬೆಂಗಳೂರು(Greater Bengaluru) ಸಭೆಯಲ್ಲಿ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆಟ್ರೋ ಕಾಮಗಾರಿಯಿಂದ ಆಗುತ್ತಿರುವ ಸಂಚಾರ ದಟ್ಟಣೆ ನಿವಾರಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮುಖ್ಯರಸ್ತೆ ಹಾಗೂ ಸರ್ವಿಸ್ ರಸ್ತೆಗಳ ನಡುವೆ ಇರುವ ರಸ್ತೆ ವಿಭಜಕ (ಡಿವೈಡರ್) ತೆರವುಗೊಳಿಸಲು ತೀರ್ಮಾನ ಮಾಡಲಾಗಿತ್ತು. ಇದನ್ನೂ ಓದಿ: ಕೇಸ್‌ನಿಂದ ಬಾಯಿ ಮುಚ್ಚಿಸಲು ಸಾಧ್ಯವಾಗದು, ಮಾನನಷ್ಟ ಮೊಕದ್ದಮೆಯ ನಾಟಕ ಬಿಡಿ: ಛಲವಾದಿ

    ಈ ವಿಚಾರವಾಗಿ ಈಗಾಗಲೇ ಬೆಂಗಳೂರಿನ ಶಾಸಕರ ಜೊತೆ ಚರ್ಚೆ ಮಾಡಿ, ಅವರ ಅಭಿಪ್ರಾಯವನ್ನು ಪಡೆಯಲಾಗಿದೆ. ಸುಮಾರು 40ರಿಂದ 50 ಕಿ.ಮೀ ಉದ್ದದ ರಸ್ತೆಗಳಲ್ಲಿ ಮುಖ್ಯರಸ್ತೆ ಹಾಗೂ ಸರ್ವಿಸ್ ರಸ್ತೆಗಳನ್ನು ವಿಲೀನಗೊಳಿಸಲು ತೀರ್ಮಾನಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ ಸಿಜೆ ಸೇರಿ ಮೂವರ ಹೆಸರು ಸುಪ್ರೀಂ ಕೋರ್ಟ್ ಜಡ್ಜ್ ನೇಮಕಕ್ಕೆ ಶಿಫಾರಸು

    ಮೆಟ್ರೋ ರೈಲು ಯೋಜನೆ ಹಿನ್ನೆಲೆಯಲ್ಲಿ ಮುಖ್ಯರಸ್ತೆಯ ಬಹುತೇಕ ಭಾಗ ಕಾಮಗಾರಿ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ವಾಹನಗಳು ಸುಗಮವಾಗಿ ಸಾಗಲು ಸಾಧ್ಯವಾಗದೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.