Tag: Mermaid

  • ಚೀನಾ ಮತ್ಸ್ಯ ಕನ್ಯೆಯ ಮೇಲೆ ದೈತ್ಯ ಮೀನಿನ ದಾಳಿ!

    ಚೀನಾ ಮತ್ಸ್ಯ ಕನ್ಯೆಯ ಮೇಲೆ ದೈತ್ಯ ಮೀನಿನ ದಾಳಿ!

    ಬೀಜಿಂಗ್: ಅಕ್ವೇರಿಯಂನಲ್ಲಿ (Aquarium) ಮತ್ಸ್ಯ ಕನ್ಯೆಯ (Mermaid) ವೇಷ ತೊಟ್ಟು ಪ್ರದರ್ಶನ ನೀಡುತ್ತಿದ್ದ ಮಹಿಳೆಯೊಬ್ಬಳ ಮೇಲೆ ದೈತ್ಯ ಮೀನೊಂದು ದಾಳಿ ನಡೆಸಿದ ಘಟನೆ ಚೀನಾದಲ್ಲಿ (China) ನಡೆದಿದೆ.

    ಈ ಘಟನೆ ದಕ್ಷಿಣ ಚೀನಾದ ಕ್ಸಿಶುವಾಂಗ್‍ಬನ್ನಾ ಪ್ರಿಮಿಟಿವ್ ಫಾರೆಸ್ಟ್ ಪಾರ್ಕ್‍ನಲ್ಲಿ ನಡೆದಿದೆ. ರಷ್ಯಾದ ಪ್ರದರ್ಶಕಿ ಮಾಷಾ (22) ಮತ್ಸ್ಯ ಕನ್ಯೆಯಂತೆ ವೇಷ ತೊಟ್ಟು ಅಕ್ವೇರಿಯಂನಲ್ಲಿ ಈಜುತ್ತಿದ್ದಾಗ ಮೀನು ಆಕೆಯನ್ನು ಸಮೀಪಿಸಿದೆ. ಈ ವೇಳೆ ಭಯದಿಂದ ಆಕೆ ಜನರೆಡೆ ಕೈ ಬೀಸಿದ್ದಾಳೆ. ಬಳಿಕ ಅಕ್ವೇರಿಯಂನ ಮೇಲೆ ಬರಲು ಯತ್ನಿಸಿದ್ದಾಳೆ. ಅಷ್ಟರಲ್ಲಿ ಮೀನು ದಾಳಿ ನಡೆಸಿದೆ. ಆದರೂ ಆಕೆ ತಪ್ಪಿಸಿಕೊಂಡು ಮೀನಿನ ದವಡೆಯಿಂದ ಬಚಾವ್ ಆಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೈತ್ಯ ಮೀನು ಮಾಷಾಳ ಕನ್ನಡಕ ಮತ್ತು ಮೂಗಿನ ತುಣುಕುಗಳನ್ನು ತಿಂದು, ಅವಳ ಕುತ್ತಿಗೆ, ತಲೆ ಮತ್ತು ಕಣ್ಣಿಗೆ ಗಾಯಗಳನ್ನುಂಟುಮಾಡಿದೆ. ಈ ವೇಳೆ ಪ್ರದರ್ಶನ ನೋಡುತ್ತಿದ್ದ ಮಕ್ಕಳು ಮತ್ತು ಜನರು ಭಯದಿಂದ ಕಿರುಚಿದ್ದಾರೆ ಎಂದು ವರದಿಯಾಗಿದೆ.

    100 ಡಾಲರ್ ನೀಡಿ ಆ ಘಟನೆಯ ಬಗ್ಗೆ ಮಾತಾಡದಂತೆ ಹೇಳಲಾಗಿದೆ. ನೋವಿನಿಂದ ಬಳಲುತ್ತಿದ್ದರೂ ಸಹ ಮತ್ತೆ ಪ್ರದರ್ಶನ ನೀಡಲು ಬಲವಂತವಾಗಿ ನೀರಿಗೆ ಇಳಿಸಲಾಯಿತು ಎಂದು ಮಾಷಾ ಹೇಳಿಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಅಕ್ವೇರಿಯಂನಲ್ಲಿ ಮೆಕಾಂಗ್ ಮತ್ತು ಯಾಂಗ್ಟ್ಜೆ ನದಿಗಳ ಸ್ಥಳೀಯ ಜಾತಿ ಹಾಗೂ ಅಪರೂಪದ ಉಭಯಚರಗಳನ್ನು ಇರಿಸಲಾಗಿದೆ. ದಾಳಿ ನಡೆಸಿದ ಮೀನು ಸ್ಟರ್ಜನ್ ಜಾತಿಗೆ ಸೇರಿದ್ದಾಗಿದೆ.

  • ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

    ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ನಟನೆ ಮತ್ತು ಬೋಲ್ಡ್ ಹೇಳಿಕೆಗಳ ಮೂಲಕ ಬಿ’ಟೌನ್‍ನಲ್ಲಿ ಸದ್ದು ಮಾಡುತ್ತಿರುತ್ತಾರೆ. ಈ ನಟಿ ತಮ್ಮ ದೇಹಸೌಂದರ್ಯದ ಬಗ್ಗೆ ಹೇಳುವ ಎಷ್ಟೂ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‍ಗೆ ಗುರಿಯಾಗುತ್ತೆ. ಪ್ರಸ್ತುತ ಈ ನಟಿ ಮಾಲ್ಡೀವ್ಸ್‌ನಲ್ಲಿ ತನ್ನ ಸ್ನೇಹಿತರ ಜೊತೆ ಟೂರ್‌ಗೆ ಹೋಗಿದ್ದು, ಫುಲ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಈ ನಟಿ ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಕಾಣಿಸುತ್ತಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಸೋನಾಕ್ಷಿ, ತಮ್ಮ ಅಪ್ಡೇಟ್‍ಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಮಾಲ್ಡೀವ್ಸ್‌ ನಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ಈ ನಟಿ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿದ್ದು, ಈ ಫೋಟೋದಲ್ಲಿ ನಾನು ಮತ್ಸ್ಯಕನ್ಯೆಯಾಗಿ ಕಾಣುತ್ತಿದ್ದೇನೆ. ಮಾಲ್ಡೀವ್ಸ್‌ ನೊಂದಿಗಿನ ನನ್ನ ಪ್ರೇಮ ಸಂಬಂಧವು ಪ್ರತಿ ಪ್ರವಾಸದೊಂದಿಗೆ ಹೆಚ್ಚಾಗುತ್ತಿದೆ. ಆದರೆ ಈ ಬಾರಿ ಮಾಲ್ಡೀವ್ಸ್ ನನಗೆ ಇನ್ನಷ್ಟು ಅದ್ಭುತವಾಗಿದೆ. ಏಕೆಂದರೆ ಯಶ್ರಿಬ್ ಅಹಮದ್ ಈ ವೇಳೆ ನಮ್ಮ ಜೊತೆ ಇರುವುದರಿಂದ ನನ್ನ ಮಾಲ್ಡೀವ್ಸ್‌ ಟ್ರಿಪ್ ಅತ್ಯಂತ ಅದ್ಭುತವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

     

    View this post on Instagram

     

    A post shared by Sonakshi Sinha (@aslisona)

    ಈ ಫೋಟೋದಲ್ಲಿ ಸೋನಾಕ್ಷಿ ಕ್ಯೂಟ್ ಅಂಡ್ ಹಾಟ್ ಆಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಗಳನ್ನು ಖ್ಯಾತ ಫೋಟೋಗ್ರಾಫರ್ ಮತ್ತು ವೀಡಿಯೋಗ್ರಾಫರ್ ಯಶ್ರಿಬ್ ಅಹಮದ್ ಕ್ಲಿಕ್ ಮಾಡಿದ್ದು, ಅವರ ವರ್ಕ್ ಫೋಟೋಗಳಲ್ಲಿ ನೋಡಬಹುದು. ಸೋನಾಕ್ಷಿ ಸಹ ಅವರ ವರ್ಕ್‍ಗೆ ಫಿದಾ ಆಗಿದ್ದಾರೆ.

    ಈ ವೇಳೆ ಇನ್‍ಸ್ಟಾ ಸ್ಟೋರಿಯಲ್ಲಿ ತಮ್ಮ ಜೊತೆ ಬಂದಿದ್ದ ಸ್ನೇಹಿತರನ್ನು ಪರಿಚಯ ಮಾಡಿಸಿದ ಈ ನಟಿ, ಮಾಲ್ಡೀವ್ಸ್‌ ನಲ್ಲಿ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಈ ವೀಡಿಯೋಗಳಲ್ಲಿ ತಾವು ಉಳಿದುಕೊಂಡಿದ್ದ ರೂಂ ವ್ಯೂವನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

  • ಮಗಳ ಜೊತೆ ಮತ್ಸ್ಯಕನ್ಯೆಯಾಗಿ ನಟಿ ಐಶ್ವರ್ಯ ಎಂಟ್ರಿ

    ಮಗಳ ಜೊತೆ ಮತ್ಸ್ಯಕನ್ಯೆಯಾಗಿ ನಟಿ ಐಶ್ವರ್ಯ ಎಂಟ್ರಿ

    ಪ್ಯಾರಿಸ್: ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ತಮ್ಮ ಮಗಳು ಆರಾಧ್ಯ ಜೊತೆ ಮತ್ಸ್ಯಕನ್ಯೆ ಆಗಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

    72ನೇ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಐಶ್ವರ್ಯ ಒಂದು ಕಡೆಯ ಅರ್ಧ ತೋಳು ಇರುವ ಮತ್ಸಕನ್ಯೆ ಉಡುಪು ಧರಿಸಿ ಆಗಮಿಸಿದ್ದರು. ಈ ಉಡುಪಿಗೆ ಐಶ್ವರ್ಯ ನ್ಯೂಡ್ ಲಿಪ್‍ಸ್ಟಿಕ್ ಹಾಕಿ ಯಾವುದೇ ಆಭರಣ ಇಲ್ಲದೆ ಮಿಂಚಿದ್ದಾರೆ. ಐಶ್ವರ್ಯ ಅವರ ಉಡುಪನ್ನು ಜೀನ್ ಲ್ಯೂಇಸ್ ಸಬಾಜಿ ವಿನ್ಯಾಸ ಮಾಡಿದ್ದರು.

     

    View this post on Instagram

     

    ????My Sunshine Forever☀️????✨ ????LOVE YOU ❤️

    A post shared by AishwaryaRaiBachchan (@aishwaryaraibachchan_arb) on

    ಈ ಕಾರ್ಯಕ್ರಮಕ್ಕೆ ಐಶ್ವರ್ಯ ತಮ್ಮ ಮಗಳು ಆರಾಧ್ಯಳನ್ನು ಕರೆದುಕೊಂಡು ಬಂದಿದ್ದರು. ಆರಾಧ್ಯ ತನ್ನ ತಾಯಿಯ ಉಡುಪಿನ ಜೊತೆ ಮ್ಯಾಚ್ ಆಗಲು ಹಳದಿ ಬಣ್ಣದ ಫ್ರಾಕ್ ಧರಿಸಿದ್ದರು. ಐಶ್ವರ್ಯ ಎಂಟ್ರಿ ಕೊಡುವ ವೇಳೆ ತಮ್ಮ ಮಗಳ ಕೈ ಹಿಡಿದುಕೊಂಡು ಆಕೆಯನ್ನು ಸುತ್ತಿಸಿದ್ದಾರೆ.

    ಭಾನುವಾರ ಐಶ್ವರ್ಯ ರೈ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮಗಳ ಜೊತೆಯಿರುವ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಆರಾಧ್ಯ ಕೈಯಲ್ಲಿ ಗುಲಾಬಿ ಹೂಗುಚ್ಚವನ್ನು ಹಿಡಿದುಕೊಂಡು ಕಾರಿನಲ್ಲಿ ಹೋಗುತ್ತಿದ್ದರು. ಅಲ್ಲದೆ “ನಾವು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಕೇನ್ಸ್ 2019” ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    ✨????????????????????????

    A post shared by AishwaryaRaiBachchan (@aishwaryaraibachchan_arb) on

    ಸದ್ಯ ಕೇನ್ಸ್ ಫಿಲ್ಮ್ ಫೆಸ್ಟಿವಲ್‍ಗೆ ಬಾಲಿವುಡ್ ನಟಿಯರಾದ ಐಶ್ವರ್ಯ ರೈ ಬಚ್ಚನ್ ಸೇರಿದಂತೆ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ, ಹಿನಾ ಖಾನ್, ಕಂಗನಾ ರನೌತ್, ಮಲ್ಲಿಕಾ ಶರಾವತ್, ಹುಮಾ ಖುರೇಶಿ, ಡಯಾನಾ ಪೆಂಟಿ ಭಾಗವಹಿಸಿದ್ದಾರೆ.

     

    View this post on Instagram

     

    ????

    A post shared by AishwaryaRaiBachchan (@aishwaryaraibachchan_arb) on

  • ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗದಲ್ಲಿ ಮತ್ಸ್ಯ ರೂಪದ ಮಗು ಜನನ!

    ಗದಗ: ಮತ್ಸ್ಯ ರೂಪದ ಅಪರೂಪದ ಮಗುವೊಂದು ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಿಕಿ ಆಸ್ಪತ್ರೆಯಲ್ಲಿ ಜನನವಾಗಿದೆ. ಆದರೆ ಈ ಮಗು ಜನಿಸಿದ ಮೂರು ಗಂಟೆಯೊಳಗೆ ಮೃತಪಟ್ಟಿದೆ. ಈ ಮಗುವನ್ನು ಕಂಡು ಆಸ್ಪತ್ರೆ ಸಿಬ್ಬಂದಿ ಹಾಗೂ ಪೋಷಕರು ಕಂಡು ದಿಗ್ಭ್ರಮೆಗೊಂಡಿದ್ದಾರೆ.

    ವೈಜ್ಞಾನಿಕವಾಗಿ ಈ ರೀತಿಯ ಮಗುವನ್ನು ಸಿರೆನೋಮೆಲಿಯಾ ಅಥವಾ ಮತ್ಸ್ಯಕನ್ಯೆ ಎಂದು ಕರೆಯುತ್ತಾರೆ. ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಈ ರೀತಿಯ ಮಗು ಜನನವಾಗುತ್ತೆ ಎಂದು ಹೇಳಲಾಗುತ್ತದೆ.

    ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದರು.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದರು. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿತ್ತು. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದರು.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿತ್ತು. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾದಲ್ಲಿ ಮತ್ಸ್ಯಕನ್ಯೆ ರೀತಿಯ ಮಗು ಜನನ!

    ಕೋಲ್ಕತ್ತಾ: ಮತ್ಸ್ಯಕನ್ಯೆಯ ರೀತಿಯಲ್ಲೇ ಎರಡೂ ಕಾಲುಗಳು ಒಟ್ಟಿಗೆ ಜೋಡಿಕೊಂಡಿರುವ ಶಿಶುವಿಗೆ 23 ವರ್ಷದ ಮಹಿಳೆಯೊಬ್ಬರು ಕೋಲ್ಕತ್ತಾದಲ್ಲಿ ಜನ್ಮ ನೀಡಿದ್ದಾರೆ.

    ಮುಸ್ಕರಾ ಬಿಬಿ(23) ಎಂಬ ಮಹಿಳೆ ಮತ್ಸ್ಯಕನ್ಯೆ ಅಥವಾ ಸಿರೆನೋಮೆಲಿಯಾ ಮಗುವನ್ನು ಚಿತ್ತರಂಜನ್ ದೇವ ಸದನ್ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದಾರೆ. ಆದರೆ ಹುಟ್ಟಿದ ನಾಲ್ಕು ಗಂಟೆಯಲ್ಲಿ ಈ ಮಗು ಸಾವನ್ನಪ್ಪಿದೆ. ಮಗುವಿನ ಅರ್ಧ ದೇಹ ಸರಿಯಾಗಿ ಬೆಳೆಯದ ಕಾರಣ ಮಗುವಿನ ಲಿಂಗ ಯಾವುದು ಎಂದು ಕಂಡು ಹಿಡಿಯುವುದು ಕಷ್ಟವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

    ಆರ್ಥಿಕತೆಯ ಸಮಸ್ಯೆಯಿಂದಾಗಿ ಮುಸ್ಕರಾ ಅಲ್ಟ್ರಾ ಸೋನೊಗ್ರಾಫಿ ಮಾಡಿಸದ ಕಾರಣ ಮಗುವಿನ ಸ್ಥಿತಿ ಗೊತ್ತಾಗಲಿಲ್ಲ. ಮಗುವಿನ ಪೋಷಕರು ಇಬ್ಬರು ಕೂಲಿ ಕಾರ್ಮಿಕರು ಹಾಗೂ ಮುಸ್ಕಾರಾ ಗರ್ಭಿಣಿ ಆದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದ ಕಾರಣ ಈ ರೀತಿಯ ಮಗು ಹುಟ್ಟಿದೆ ಎಂದು ಮಕ್ಕಳ ತಜ್ಞ ಡಾ. ಸುದೀಪ್ ಸಹಾ ಹೇಳಿದ್ದಾರೆ.

    ಭಾರತದಲ್ಲಿ 2ನೇ ಮತ್ಸ್ಯಕನ್ಯೆಯಾಗಿ ಜನಿಸಿದ ಮಗು ಇದಾಗಿದೆ. ಹುಟ್ಟು ಪ್ರತಿ 1 ಲಕ್ಷ ಮಗುವಿನಲ್ಲಿ ಒಂದು ಮಗುವಿನ ದೇಹ ಈ ರೀತಿಯಾಗಿ ಬೆಳವಣಿಗೆಯಾಗುತ್ತದೆ. 2016 ರಲ್ಲಿ ಉತ್ತರ ಪ್ರದೇಶದಲ್ಲಿ ಈ ರೀತಿ ಮಗುವಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದರು.