Tag: Merchants

  • ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

    ವ್ಯಾಪಾರಕ್ಕೆ ಅವಕಾಶ ಕೊಡುವಂತೆ ಪೇಜಾವರ ಶ್ರೀಗಳಿಗೆ ಮುಸ್ಲಿಂ ವರ್ತಕರಿಂದ ಮನವಿ

    ಉಡುಪಿ: ಹಿಜಬ್ ಹೋರಾಟ ಆರಂಭವಾದ ನಂತರ ಉಡುಪಿಯಲ್ಲಿ ವ್ಯಾಪಾರ ಬಹಿಷ್ಕಾರ ನಡೆಯುತ್ತಿದೆ. ಮುಸಲ್ಮಾನ ವ್ಯಾಪಾರಿಗಳಿಗೆ ಜಾತ್ರೆ ಉತ್ಸವ ದೇವಸ್ಥಾನಗಳ ವ್ಯಾಪಾರಕ್ಕೆ ಅವಕಾಶ ನಿರಾಕರಣೆ ಮಾಡಲಾಗಿದೆ. ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ ಜಾತ್ರೆ, ಬೀದಿ ವರ್ತಕರ ಸಂಘ ವ್ಯಾಪಾರ ಅವಕಾಶ ಮಾಡಿಕೊಡುವಂತೆ ಹಿಂದೂ ಸಮಾಜಕ್ಕೆ ಕರೆ ನೀಡುವಂತೆ ಮನವಿ ಮಾಡಿದರು.

    ಮುಸಲ್ಮಾನ ನಾಯಕರುಗಳು ಕ್ರೈಸ್ತ ಧರ್ಮಗುರುಗಳು ಪೇಜಾವರಶ್ರೀಗಳನ್ನು ಭೇಟಿಯಾಗಿ ಉಡುಪಿಯಲ್ಲಿ ಸೌಹಾರ್ದ ವಾತಾವರಣ ನೆಲೆಸುವಂತೆ, ಹಿಂದೂಗಳು ವ್ಯಾಪಾರಕ್ಕೆ ಅವಕಾಶ ಮಾಡಿ ಕೊಡುವಂತೆ ಪೇಜಾವರ ಶ್ರೀಗಳನ್ನು ಭೇಟಿಯಾಗಿ ಮನವಿ ಸಲ್ಲಿಕೆ ಮಾಡಲಾಯ್ತು. ಉಡುಪಿಯಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ವ್ಯಾಪಾರ ಬಹಿಷ್ಕಾರ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಇದನ್ನೂ ಓದಿ: ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಹಿಂಸಾಚಾರ ಬಳಸೋದು ಹಕ್ಕುಗಳ ಉಲ್ಲಂಘನೆ: ಮೋದಿ

    ಪೇಜಾವರ ಮಠದ ಶ್ರೀ ರಾಮ ವಿಠಲ ಸಭಾಭವನದಲ್ಲಿ ಭೇಟಿಯಾಗಿದ್ದು, ಬೀದಿಬದಿ ಜಾತ್ರೆ ವ್ಯಾಪಾರಿಗಳಿಗೆ ಸಮಸ್ಯೆಯಾಗಿದೆ. ದೇವಸ್ಥಾನಗಳಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಿ. ನೂರಾರು ವರ್ಷಗಳಿಂದ ಉಡುಪಿಯಲ್ಲಿ ಹಿಂದೂ ಮತ್ತು ಮುಸಲ್ಮಾನರ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದೇವೆ. ಕೆಲ ಬೆಳವಣಿಗೆಗಳಿಂದ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯಗಳು ಬಂದಿದೆ. ಸಮಸ್ಯೆಯನ್ನು ಬಗೆಹರಿಸಿ ಕೊಡಲು ತಾವು ನೇತೃತ್ವದ ಬೇಕು ಎಂದು ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಗೆ ಮುಸಲ್ಮಾನ ವ್ಯಾಪಾರಿಗಳ ಮನವಿ ಮಾಡಿದರು. ಇದನ್ನೂ ಓದಿ: ಮಾನವೀಯತೆ ಇರುವುದು ನಿಜವೇ? – ಸಿಎಂ ಕೇಜ್ರಿವಾಲ್‌ಗೆ ಅಗ್ನಿಹೋತ್ರಿ ಪ್ರಶ್ನೆ

    ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ಧರ್ಮಗುರುಗಳು ಸಮಾಜದ ಸಾಮರಸ್ಯ ತೆಯ ಬಗ್ಗೆ ಮಾತನಾಡಿದರು. ಬಳಕೆದಾರರ ವೇದಿಕೆಯ ಗೌರವಾಧ್ಯಕ್ಷ ಅಬೂಬಕ್ಕರ್ ಆತ್ರಾಡಿ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೌಲಾ, ಮಹಮ್ಮದ್ ಆರಿಫ್ ಮತ್ತಿತರ ವ್ಯಾಪಾರಿಗಳು ಮನವಿ ಸಂದರ್ಭ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿಗಳು ಹಣ್ಣುಗಳನ್ನು ನೀಡಿದರು.

  • ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರಲ್ಲಿ ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟು ಬಂದ್

    ತುಮಕೂರು: ಹಿಜಬ್ ವಿವಾದದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಇದರ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳು ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ.

    ಹೈಕೋರ್ಟ್ ತೀರ್ಪು ಸಂಬಂಧಿಸಿದಂತೆ ಮುಸ್ಲಿಂ ವ್ಯಾಪಾರಸ್ಥರು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಮಾಡಿದ್ದಾರೆ. ಕಾಲ್ ಟ್ಯಾಕ್ಸ್ ಸರ್ಕಲ್, ಬಿ.ಜಿ.ಪಾಳ್ಯ ಸರ್ಕಲ್, ಗುಬ್ಬಿ ಗೇಟ್, ಕುಣಿಗಲ್ ರಿಂಗ್ ರಸ್ತೆಗಳಲ್ಲಿನ ಪ್ರಮುಖ ಗ್ಯಾರೇಜ್, ಆಟೋ ಮೊಬೈಲ್ಸ್ ಅಂಗಡಿಗಳು ಬಂದ್ ಆಗಿದ್ದು, ಉಳಿದಂತೆ ಯಥಾಸ್ಥಿತಿಯಲ್ಲಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇದನ್ನೂ ಓದಿ: ಉಕ್ರೇನ್‌ ಮೇಯರ್‌ ಕಿಡ್ನಾಪ್ ಮಾಡಿದ ರಷ್ಯಾ ಸೇನೆ

    ಹಿಜಬ್ ವಿವಾದದ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದು, ಸರ್ಕಾರದ ವಸ್ತ್ರ ಸಂಹಿತೆಯನ್ನು ಎತ್ತಿ ಹಿಡಿದಿದೆ. ಹೀಗಾಗಿ ನಮಗೆ ಕಾನೂನಿಂದ ಯಾವುದೇ ನೆರವು ಸಿಕ್ಕಿಲ್ಲ ಎಂದು ಮುಸಲ್ಮಾನ್ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಷ್ಯಾದ ಪಡೆಯಿಂದ ಕಿಡ್ನಾಪ್ ಆಗಿದ್ದ ಉಕ್ರೇನ್‍ ಮೇಯರ್ ಬಿಡುಗಡೆ

  • ಎಕ್ಸ್‌ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಜಾಲ ಪತ್ತೆ – ಮಹಾರಾಷ್ಟ್ರ ವ್ಯಾಪಾರಿಗಳು ಎಸ್ಕೇಪ್

    ಎಕ್ಸ್‌ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಜಾಲ ಪತ್ತೆ – ಮಹಾರಾಷ್ಟ್ರ ವ್ಯಾಪಾರಿಗಳು ಎಸ್ಕೇಪ್

    ಬೀದರ್: ಎಕ್ಸ್ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಾಪರಿಗಳಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ನಗರದ ಶಿವನಗರದ ಪಾಪನಾಶ ಗೇಟ್ ಬಳಿ ನಡೆದಿದೆ.

    ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಕಳಪೆ ಗುಣಮಟ್ಟದ ಹಾಗೂ ದಿನಾಂಕ ಮುಗಿದಿರುವ ಡ್ರೈಫ್ರೂಟ್ಸ್ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು. ಪಾಪನಾಶ ಗೇಟ್ ನಿಂದ ನೌಬಾದ್ ವರೆಗೆ 10ಕ್ಕೂ ಹೆಚ್ಚು ರಸ್ತೆ ಬದಿಯ ಅಂಗಡಿಗಳನ್ನು ಹಾಕಿಕೊಂಡು ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ಗಳನ್ನು ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ:  ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

    ಡ್ರೈಫ್ರೂಟ್ಸ್ ಕೊಂಡುಕೊಳ್ಳಲು ಬಂದಾಗ ಸಾರ್ವಜನಿಕರು ದಿನಾಂಕ ಪರಿಶೀಲನೆ ಮಾಡಿ ವ್ಯಾಪಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುತ್ತಿದ್ದಂತ್ತೆ ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ತುಂಬಿಕೊಂಡು ಅಂಗಡಿಗಳನ್ನು ಮುಚ್ಚಿಕೊಂಡು ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಪರಾರಿಯಾಗಿದ್ದಾರೆ.

     

  • ಮಾರ್ಕೆಟ್‍ಗೆ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿ

    ಮಾರ್ಕೆಟ್‍ಗೆ ಬೆಂಕಿ – ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳಿಗೆ ಹಾನಿ

    ಹಾವೇರಿ: ಮಾರ್ಕೆಟ್‍ಗೆ ತಡರಾತ್ರಿ ಬೆಂಕಿ ಬಿದ್ದ ಪರಿಣಾಮ ತರಕಾರಿ, ಹಣ್ಣುಗಳು ಹಾಗೂ ದಿನಸಿ ಅಂಗಡಿಗಳಲ್ಲಿನ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ದುರ್ಗಾ ಮಾರ್ಕೆಟ್‍ನಲ್ಲಿ ನಡೆದಿದೆ. ಇದನ್ನೂ ಓದಿ: ನಡುರಸ್ತೆಯಲ್ಲಿ ಹರಿಯಿತು ನೆತ್ತರು – ಸ್ನೇಹಿತರಿಂದಲೇ ಯುವಕನ ಲೈವ್ ಮರ್ಡರ್

    Durga Market

    ಮಾರುಕಟ್ಟೆಯಲ್ಲಿರುವ 200 ಅಧಿಕ ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ದುಷ್ಕರ್ಮಿಗಳು ತಡರಾತ್ರಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದಾರೆ ಎಂಬ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಣ್ಣ ವ್ಯಾಪಾರಸ್ಥರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಬಾಲಕಿಯರಿಗೂ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

    Durga Market

    200ಕ್ಕೂ ಅಧಿಕ ವ್ಯಾಪಾರಸ್ಥರಿಂದ ಮಾರ್ಕೆಟ್‍ನಲ್ಲಿ ತರಕಾರಿ, ಹಣ್ಣು ಮತ್ತು ದಿನಸಿ ವಸ್ತುಗಳ ಮಾರಾಟ ಮಾಡಲಾಗುತ್ತಿತ್ತು. ಆದರೆ ಈಗ ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಹಾನಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಣೆಬೆನ್ನೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

  • ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಗಣೇಶೋತ್ಸವಕ್ಕೆ ಅವಕಾಶ ಕೊಡಿ, ನಮ್ಮ ಬದುಕು ಬೀದಿಗೆ ಬಂದಿದೆ: ವ್ಯಾಪಾರಿಗಳ ಅಳಲು

    ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಈ ಬಾರಿ ಗಣೇಶೋತ್ಸವವನ್ನು ಆಚರಿಸಬೇಕೋ, ಇಲ್ಲವೋ ಎಂಬುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ಈ ನಡುವೆ ಗಣೇಶ ಮೂರ್ತಿ ತಯಾರಕರು ಗಣೇಶೋತ್ಸವಕ್ಕೆ ಅವಕಾಶ ಮಾಡಿ ಕೊಡಿ, ನಮ್ಮ ಬದುಕು ಬೀದಿಗೆ ಬರುತ್ತಿದೆ ಎಂದು ಅಳಲುತೊಡಿಕೊಂಡಿದ್ದಾರೆ.

    ಕೊರೊನಾ ಎಂಬ ವೈರಾಣುವಿನ ಕಾಟಕ್ಕೆ ಎಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಜೊತೆಗೆ ಕೊರೊನಾದಿಂದ ಆರ್ಥಿಕ ಚಟುವಟಿಕೆಗಳು ಸಹ ನೆಲ ಕಚ್ಚಿದೆ. ಅದೇ ರೀತಿಯಲ್ಲಿ ಗಣೇಶ ಮೂರ್ತಿ ತಯಾರಕರ ಬದುಕು ಸಹ ಅತಂತ್ರವಾಗಿದೆ. ಈ ಬಾರಿ ಗಣೇಶೋತ್ಸವಕ್ಕೆ ಅವಕಾಶ ಮಾಡಿಕೊಟ್ಟರೆ ನಮ್ಮ ಬದುಕು ಸಾಗಿಸಲು ಸಾಧ್ಯವಾಗುತ್ತದೆ ಎಂದು ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಗಣೇಶೋತ್ಸವ ಆಚರಣೆ ನಡೆಸಿಯೇ ನಡೆಸುತ್ತೇವೆ: ಈಶ್ವರಪ್ಪ

    75 ವರ್ಷದಿಂದ ಗಣೇಶ ಮೂರ್ತಿಗಳ ವ್ಯಾಪರದಲ್ಲಿದ್ದೇವೆ. ಈ ಕೊರೊನಾದಿಂದ ಎರಡು ವರ್ಷ ನಮಗೆ ತುಂಬಾ ನಷ್ಟವಾಗಿದೆ. ಶೇ 98 ರಷ್ಟು ವ್ಯಾಪಾರ ಕುಸಿದಿದೆ. ಸರ್ಕಾರ ಇನ್ನೂ ಅನುಮತಿ ಬೇರೆ ನೀಡಿಲ್ಲ. ಹಬ್ಬದ ತಯಾರಿ ಸಹ ನಡೆಯುತ್ತಿಲ್ಲ. ಹಬ್ಬಕ್ಕೆ ಇನ್ನೂ ಕೇವಲ 5 ದಿನ ಮಾತ್ರ ಬಾಕಿ ಇದೆ. ಇಲ್ಲಿವರೆಗೂ ಕೇವಲ 10 ಜನ ಬಂದು ಗಣಪತಿ ಬುಕ್ ಮಾಡಿದ್ದಾರೆ. ಅದು ಸರ್ಕಾರ ಅನುಮತಿ ನೀಡಿದರೆ, ಗಣೇಶನ ಮೂರ್ತಿ ಖರೀಸಿಸುತ್ತೇವೆ ಅಂತ ಹೇಳಿದ್ದಾರೆ ಎಂದು ವ್ಯಾಪಾರಿಗಳು ಕೊರೋನಾದಿಂದ ತಮಗಾಗಿರುವ ನಷ್ಟವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಗಣೇಶೋತ್ಸವ ಕುರಿತು ಸಿಎಂ ನಿರ್ಧಾರ: ಬೈರತಿ ಬಸವರಾಜು

  • ವೀಕೆಂಡ್ ಕರ್ಫ್ಯೂ ವಿರೋಧಿಸಿ ಮೈಸೂರಲ್ಲಿ ಪ್ರತಿಭಟನೆ

    ವೀಕೆಂಡ್ ಕರ್ಫ್ಯೂ ವಿರೋಧಿಸಿ ಮೈಸೂರಲ್ಲಿ ಪ್ರತಿಭಟನೆ

    ಮೈಸೂರು: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆ ವಿವಿಧ ಸಂಘ, ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ನಗರದ ದೇವರಾಜ ಅರಸು ರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿವೆ.

    ದೇವರಾಜ ಅರಸು ರಸ್ತೆಯ ಮಳಿಗೆಗಳ ಮುಂಭಾಗದಲ್ಲಿ ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿಯನ್ನ ಧರಿಸಿ ಪ್ರತಿಭಟನೆ ನಡೆಸಿದರು. ವೀಕೆಂಡ್ ಕರ್ಫ್ಯೂ ಅನಗತ್ಯ ಹಾಗೂ ಅವೈಜ್ಞಾನಿಕವಾದದ್ದು, ಹೀಗಾಗಿ ಯಾವುದೇ ಕಾರಣಕ್ಕೂ ವೀಕೆಂಡ್ ಕರ್ಫ್ಯೂ ಮುಂದುವರಿಸಬಾರದು. ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ವ್ಯಾಪಾರಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದು 1,453 ಹೊಸ ಕೊರೊನಾ ಪ್ರಕರಣ, 17 ಮಂದಿ ಸಾವು

    ತಕ್ಷಣವೇ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಬೇಕು, ಶನಿವಾರ ಹಾಗೂ ಭಾನುವಾರ ವ್ಯಾಪಾರ ಹೆಚ್ಚಾಗಿರುತ್ತದೆ. ಈ ಎರಡು ದಿನಗಳ ವ್ಯಾರ ಒಂದೇ, ವಾರದ ಉಳಿದ ಐದು ದಿನಗಳ ವ್ಯಾಪಾರವೂ ಒಂದೇ. ಮದುವೆ ಸಮಾರಂಭ ನಡೆಸುವ ಹಾಲ್‍ಗಳಿಗೂ ತೊಂದರೆಯಾಗಿದೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

     

  • ಕೊರೊನಾ ಹಿನ್ನೆಲೆ ತರಕಾರಿ ಮಾರುಕಟ್ಟೆ ಸ್ಥಳಾಂತರ- ಕೊಳ್ಳುವವರೂ ಇಲ್ಲ, ಮಾರುವವರೂ ಇಲ್ಲ

    ಕೊರೊನಾ ಹಿನ್ನೆಲೆ ತರಕಾರಿ ಮಾರುಕಟ್ಟೆ ಸ್ಥಳಾಂತರ- ಕೊಳ್ಳುವವರೂ ಇಲ್ಲ, ಮಾರುವವರೂ ಇಲ್ಲ

    – ಚಿನ್ನದ ಅಂಗಡಿ ಬಂದ್‍ಗೆ ಗದಗನಲ್ಲಿ ಆಕ್ರೋಶ

    ಧಾರವಾಡ/ಗದಗ: ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ, ಧಾರವಾಡ ಮಹಾನಗರ ಪಾಲಿಕೆ ಧಾರವಾಡ ತರಕಾರಿ ಮಾರುಕಟ್ಟೆಯನ್ನು ನಗರದ ಕೆಇ ಬೊರ್ಡ್ ಶಾಲೆಯ ಆವರಣಕ್ಕೆ ಸ್ಥಳಾಂತರಿಸಿದೆ. ಆದರೆ ಅಲ್ಲಿ ಕೊಳ್ಳವವರೂ ಬರುತ್ತಿಲ್ಲ, ಮಾರುವವರೂ ಬರುತ್ತಿಲ್ಲ. ಹೀಗಾಗಿ ಆವರಣ ಬಿಕೋ ಎನ್ನುತ್ತಿದೆ.

    ವ್ಯಾಪಾರಕ್ಕೆ ಬರುವವರಿಗೆ ಇಗಾಗಲೇ ಪಾಲಿಕೆ ಮಾರ್ಕಿಂಗ್ ಮಾಡಿ ಜಾಗ ಗುರುತಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೆಲವೇ ಕೆಲವು ತರಕಾರಿ ವ್ಯಾಪಾರಿಗಳು ಮಾತ್ರ ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ವ್ಯಾಪಾರ ಇಲ್ಲದ ಕಾರಣ ಮೊದಲಿನ ಜಾಗಕ್ಕೇ ಕಳುಹಿಸಿ ಎಂದು ಮನವಿ ಮಾಡುತಿದ್ದಾರೆ.

    ಬಿಸಿಲಿನಲ್ಲಿ ಕೂರಲು ಆಗುತ್ತಿಲ್ಲ, ಅಲ್ಲದೆ ಜನರು ಸಹ ಇತ್ತ ಬರುತ್ತಿಲ್ಲ. ವ್ಯಾಪಾರವೇ ಆಗುತ್ತಿಲ್ಲ. ಹೀಗಾಗಿ ತುಂಬಾ ಕಷ್ಟವಾಗುತ್ತಿದೆ. ನಮ್ಮನ್ನು ಮೊದಲಿನ ಜಾಗಕ್ಕೇ ಕಳುಹಿಸಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಗ್ರಾಹಕರು ಸಹ ಮಾರುಕಟ್ಟೆಯತ್ತ ಬಾರುತ್ತಿಲ್ಲ. ಹೀಗಾಗಿ ಆವರಣ ಬಿಕೋ ಎನ್ನುತ್ತಿದೆ.

    ಚಿನ್ನದ ಅಂಗಡಿ ಬಂದ್ ಗೆ ಆಕ್ರೋಶ

    ಸರ್ಕಾರದ ಆಫ್ ರೂಲ್ಸ್ ನಿರ್ಧಾರದ ವಿರುದ್ಧ ಗದಗ ಜಿಲ್ಲೆಯ ಅನೇಕ ಚಿನ್ನದ ಅಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಕೋವಿಡ್ ನಿಯಮಗಳನ್ನು ಪಾಲಿಸುತ್ತೇವೆ. ಅಂಗಡಿ ತೆರೆಯಲು ಅವಕಾಶ ಕಲ್ಪಿಸಿ ಕೊಡಿ ಎಂದು ಚಿನ್ನದ ಅಂಗಡಿಯ ಅನೇಕ ಮಾಲೀಕರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದ ಅನೇಕ ಕಡೆಗಳಲ್ಲಿ ಮಾರ್ಕೆಟ್ ಓಪನ್ ಇದೆ. ಗದಗನಲ್ಲಿ ಮಾತ್ರ ಬಂದ್ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಳೆದ 2 ವರ್ಷಗಳಿಂದ ವ್ಯಾಪಾರ ಕುಂಠಿತದಿಂದ ಸಾಕಷ್ಟು ತೊಂದರೆಯಲ್ಲಿದ್ದೆವೆ. ಜೀವನ ನಡೆಸುವುದು ದುಸ್ತರವಾಗಿದೆ. ರಾಜಕಾರಣಿಗಳು ಚುನಾವಣೆ, ಸಭೆ, ಸಮಾರಂಭಗಳಂತಹ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅವರಿಗಿಲ್ಲದ ಕಾನೂನು ಸಣ್ಣಪುಟ್ಟ ವ್ಯಾಪಾರಸ್ಥರು, ಸಾರ್ವಜನಿಕರಿಗೆ ಯಾಕೆ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಮದುವೆ, ಶುಭ ಸಮಾರಂಭಗಳ ಈ ಸೀಸನ್ ನಲ್ಲಿ ಅಂಗಡಿಗಳನ್ನು ಬಂದ್ ಮಾಡಿಸಿದರೆ ಬದುಕೊದು ಹೇಗೆ ಎಂದು ಪ್ರಶ್ನಿಸಿದರು. ವೀಕೆಂಡ್ ಲಾಕ್‍ಡೌನ್ ಬಿಟ್ಟು ಉಳಿದ ದಿನಗಳಲ್ಲಿ, ಕೋವಿಡ್ ನಿಯಮ ಪಾಲಿಸುತ್ತೇವೆ ದಿನಕ್ಕೆ 4 ಗಂಟೆ ವರೆಗೆಯಾದರೂ, ಅಂಗಡಿ ತೆರೆಯಲು ಅನುಮತಿ ಕೊಡಿ ಎಂದು ಚಿನ್ನದ ಅಂಗಡಿ ಮಾಲೀಕರು ಬೇಡಿಕೆ ಇಟ್ಟಿದ್ದಾರೆ.

  • ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಕೋವಿಡ್ ನಿಯಮ ಉಲ್ಲಂಘನೆ- ಅಂಗಡಿಗಳನ್ನು ಸೀಜ್ ಮಾಡಿಸಿದ ಡಿಸಿ

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಶತಕದ ಆಸುಪಾಸಿನಲ್ಲಿ ಪತ್ತೆಯಾಗುತ್ತಿದ್ದು, ಇಷ್ಟಾದರೂ ಅಂಗಡಿ ಮಾಲೀಕರು ಡೋಂಟ್ ಕೇರ್ ಎನ್ನುತ್ತಿದದ್ದಾರೆ. ಕೊರೊನಾ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ಈ ಹಿನ್ನೆಲೆಯಲ್ಲಿ ಕೊಡಗಿನ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಹಾಗೂ ಎಸ್‍ಪಿ ಕ್ಷಮಾ ಮೀಶ್ರ ಅವರು ಇಂದು ಕೊಡಗು ಜಿಲ್ಲೆಯ ಕುಶಾಲನಗರದ ರಥ ಬೀದಿಗೆ ದಿಡೀರ್ ಭೇಟಿ ನೀಡಿ, ರಥ ಬೀದಿಯಲ್ಲಿರುವ ಅಂಗಡಿಗಳ ಬಳಿ ಪರಿಶೀಲನೆ ನಡೆಸಿದರು. ಅಂಗಡಿಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಗಮನಕ್ಕೆ ಬಂದ ಕೋಡಲೇ 10ಕ್ಕೂ ಹೆಚ್ಚು ಅಂಗಡಿಗಳನ್ನು ಸೀಜ್ ಮಾಡಿಸಿದ್ದಾರೆ.

    ರಥ ಬೀದಿಯಲ್ಲಿರುವ ಬಟ್ಟೆ ಅಂಗಡಿ, ರೇಸಾನ್ ಹಾಗೂ ಚಿನ್ನದಂಗಡಿಗಳಿಗೆ ಬೀಗ ಹಾಕಿಸಿದ್ದಾರೆ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಸ್ಫೋಟಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ಫೀಲ್ಡಿಗಿಳಿದ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡದ ಹತ್ತಕ್ಕೂ ಹೆಚ್ಚು ವ್ಯಾಪಾರಸ್ಥರ ಅಂಗಡಿಗಳಿಗೆ ಬೀಗ ಹಾಕಿಸಿ ಜಿಲ್ಲೆಯ ಜನರಿಗೆ ಕೋವಿಡ್ ನಿಯಮಗಳ ಪಾಲನೆ ಕುರಿತು ಎಚ್ಚರಿಕೆ ನೀಡಿದ್ದಾರೆ.

  • ಸಂತೆಗಳ ವ್ಯಾಪಾರಿಗಳಿಂದಲೇ  ಕೋವಿಡ್ ಸೇಲ್

    ಸಂತೆಗಳ ವ್ಯಾಪಾರಿಗಳಿಂದಲೇ ಕೋವಿಡ್ ಸೇಲ್

    ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸುನಾಮಿ ತಾಂಡವಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಹ ಕಳೆದ ಒಂದು ವಾರದಿಂದ ಶತಕದ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಿದ್ದರೂ ಸಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾಗೆ ಡೋಂಟ್ ಕೇರ್ ಎನ್ನುತ್ತಿದ್ದು, ವ್ಯಾಪಾರಿಗಳು ಮಾಸ್ಕ್ ಧರಿಸದೆ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.

    ವ್ಯಾಪಾರಿಗಳು ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣು ತರಕಾರಿಗಳ ಜೊತೆಗೆ ಕೊರೊನಾ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜಿಲ್ಲೆಯಲ್ಲಿ ನಡೆಯುವ ಮಡಿಕೇರಿ, ಕುಶಾಲನಗರ ಮತ್ತು ಸುಂಟಿಕೊಪ್ಪದ ಪ್ರಮುಖ ಮೂರು ಸಂತೆಗಳಲ್ಲಿ ಈ ವ್ಯಾಪಾರಿಗಳು ಇರುತ್ತಾರೆ. ಆದರೆ ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಸಂತೆಗಳಿಗೆ ಬರುವ ನೂರಾರು ಗ್ರಾಹಕರಿಗೆ ಹಣ್ಣು, ತರಕಾರಿ ಮತ್ತು ದಿನಸಿ ವಸ್ತುಗಳ ಜೊತೆಗೆ ವ್ಯಾಪಾರಿಗಳು ಕೊರೊನಾ ವೈರಸ್ ನ್ನೂ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.

    ವ್ಯಾಪಾರಿಗಳು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿರುವುದು ನಮಗೂ ಆತಂಕವಿದೆ ಎಂದು ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಸಂತೆಗಳತ್ತ ತಿರುಗಿ ನೋಡುತ್ತಿಲ್ಲ.

  • ಸಂತೆ ವ್ಯಾಪಾರಿಗಳಿಗೆ ಪೊಲೀಸರಿಂದ ಲಾಠಿ ಏಟು

    ಸಂತೆ ವ್ಯಾಪಾರಿಗಳಿಗೆ ಪೊಲೀಸರಿಂದ ಲಾಠಿ ಏಟು

    ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಸಂತೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಸೋಮವಾರಪೇಟೆಯಲ್ಲಿ ಇಂದು ವ್ಯಾಪಾರಿಗಳು ಸಂತೆಯಲ್ಲಿ ಅಂಗಡಿ ಹಾಕಿದ್ದರು. ವಿಷಯ ತಿಳಿದ ಪೊಲೀಸರು ಅಂಗಡಿಗಳನ್ನು ತೆರವು ಮಾಡುವಂತೆ ಖಡಕ್ಕಾಗಿ ಹೇಳಿದರೂ, ಕ್ಯಾರೆ ಎನ್ನಲಿಲ್ಲ. ಆಗ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

    ಎಷ್ಟೇ ಎಚ್ಚರಿಕೆ ನೀಡಿದರೂ ಕೇಳದ ಹಿನ್ನೆಲೆ ಪೊಲೀಸರಿಗೆ ಬೇರೆ ದಾರಿಯಿಲ್ಲದೆ ಲಾಠಿ ರುಚಿ ತೋರಿಸಿದರು. ಎಷ್ಟೇ ಹೇಳಿದರೂ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಲೇ ಇದ್ದರು. ಇದರಿಂದ ಬೇಸತ್ತ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಆಗ ವ್ಯಾಪಾರಸ್ಥರು ಅಂಗಡಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಟ್ಯ್ರಾಕ್ಟರ್ ಮೂಲಕ ಹಣ್ಣು ತರಕಾರಿಗಳನ್ನು ತುಂಬಿಕೊಂಡು ಹೋಗಲು ಮುಂದಾದರು. ಇದರಿಂದ ಎಚ್ಚೆತ್ತ ವ್ಯಾಪಾರಿಗಳು, ಅಂಗಡಿಗಳ ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದ್ದಾರೆ.

    ಸಂತೆ ನಡೆಸದಂತೆ ನಿಷೇಧಿಸಿದ್ದರೂ ಅದನ್ನು ಉಲ್ಲಂಘಿಸಿ ಸಂತೆಗೆ ಬಂದಿದ್ದ ವ್ಯಾಪಾರಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.