Tag: merchant

  • ವ್ಯಾಪಾರದಲ್ಲಿ ನಷ್ಟ – ಬಟ್ಟೆ ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

    ವ್ಯಾಪಾರದಲ್ಲಿ ನಷ್ಟ – ಬಟ್ಟೆ ವ್ಯಾಪಾರಿ ನೇಣುಬಿಗಿದು ಆತ್ಮಹತ್ಯೆ

    ಮಡಿಕೇರಿ: ವ್ಯಾಪಾರದಲ್ಲಿ ನಷ್ಟದಿಂದಾಗಿ ಬಟ್ಟೆವ್ಯಾಪಾರಿ (Merchant) ನೇಣುಬಿಗಿದು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಕೊಡಗು (Kodagu) ಜಿಲ್ಲೆಯ ಮಡಿಕೇರಿ (Madikeri) ತಾಲೂಕಿನ ನಾಪೊಕ್ಲುವಿನಲ್ಲಿ ನಡೆದಿದೆ.

    ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಡ್ಲಹಳ್ಳಿ ಗ್ರಾಮದ ನಿವಾಸಿಯಾಗಿರುವ ಸಂದೀಪ್ (40) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಕಳೆದ 20 ವರ್ಷಗಳಿಂದ ನಾಪೊಕ್ಲುವಿನಲ್ಲಿ ಆರ್.ಹೆಚ್. ಬಟ್ಟೆಮಳಿಗೆ ನಡೆಸುತ್ತಿದ್ದ ಸಂದೀಪ್ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ವ್ಯಾಪಾರದಲ್ಲಿ ನಷ್ಟದಿಂದಾಗಿ ವ್ಯಾಪಾರವನ್ನು ಸ್ಥಗಿತಗೊಳಿಸಿ ಬದುಕು ಸಾಗಿಸಲು ಕಷ್ಟಪಡುತ್ತಿದ್ದರು. ಇದನ್ನೂ ಓದಿ: ಸಿಟಿ ರವಿಗೆ ಮೂಳೆ ಬಿರಿಯಾನಿ, ಚಿಕನ್ ಪಾರ್ಸೆಲ್ ಮಾಡಿದ ಕೈ ಪಡೆ

    ಸೋಮವಾರ ಬೆಳಗ್ಗೆ 7:30ಕ್ಕೆ ತನ್ನ ಸ್ನೇಹಿತ ಸಂದೇಶ್ ಎಂಬುವವರಿಗೆ ಕರೆ ಮಾಡಿ 9 ಗಂಟೆಗೆ ಮನೆಗೆ ಬರುವಂತೆ ಸಂದೀಪ್ ತಿಳಿಸಿದ್ದರು. ಅದರಂತೆ 9 ಗಂಟೆಗೆ ಸಂದೇಶ್ ತನ್ನ ಸ್ನೇಹಿತನಾದ ಸಂದೀಪ್ ಮನೆಗೆ ತೆರಳಿದಾಗ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸಂದೇಶ್ ಅವರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

    ವ್ಯಾಪಾರದಲ್ಲಿ ಉಂಟಾದ ನಷ್ಟದಿಂದಾಗಿ ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ – 11 ಜನ ಸ್ಥಳದಲ್ಲೇ ಸಾವು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಕೊತ್ತಂಬರಿ ಸೊಪ್ಪು ಖರೀದಿಸದ್ದಕ್ಕೆ ಚಾಕು ಇರಿದ ವ್ಯಾಪಾರಿ

    ಹುಬ್ಬಳ್ಳಿ: ಮಾರಾಟಕ್ಕಿಟ್ಟ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಖರೀದಿಸದ ಗ್ರಾಹಕನಿಗೆ ವ್ಯಾಪಾರಸ್ಥ ಹಾಗೂ ಆತನ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಹುಬ್ಬಳ್ಳಿಯ ಗೌಳಿಗಲ್ಲಿಯಲ್ಲಿ ಹಳೇ ಹುಬ್ಬಳ್ಳಿಯ ನಿವಾಸಿ ಮಹಮ್ಮದಗೌಸ್ ಬಿಜಾಪುರ ಮೇಲೆ ಕೊತ್ತಂಬರಿ ವ್ಯಾಪಾರ ಮಾಡುತ್ತಿದ್ದ ಖಾದರ್ ಹಾಗೂ ಸಹಚರರು ಚಾಕು ಇರಿದು ಕೊಲೆಗೆ ಯತ್ನಿಸಿದ್ದಾರೆ.

    ಮಹಮ್ಮದಗೌಸ್ ಪ್ರತಿನಿತ್ಯ ಖಾದರ್ ಬಳಿಯೇ ಕೊತ್ತಂಬರಿ ಖರೀದಿ ಮಾಡುತ್ತಿದ್ದರು. ಆದರೆ ನಿನ್ನೆ ಕೊತ್ತಂಬರಿ ಸರಿಯಿಲ್ಲವೆಂದು ಕೊತ್ತಂಬರಿ ಸೊಪ್ಪು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ಕೋಪಿತಗೊಂಡ ಖಾದರ್ ಚಾಕು ಇರಿದಿದ್ದಾನೆ. ಸದ್ಯ ಗಾಯಾಳು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ

  • ವ್ಯಾಪಾರಿಗೆ ಗುಂಡೇಟು – ಚಿನ್ನ, ಮೊಬೈಲ್ ಬಿಟ್ಟು ಸಿಮ್ ತಗೊಂಡು ಎಸ್ಕೇಪ್

    ವ್ಯಾಪಾರಿಗೆ ಗುಂಡೇಟು – ಚಿನ್ನ, ಮೊಬೈಲ್ ಬಿಟ್ಟು ಸಿಮ್ ತಗೊಂಡು ಎಸ್ಕೇಪ್

    – ಹೆದ್ದಾರಿಯಲ್ಲಿ ತಡೆದು ಐದು ಬಾರಿ ಶೂಟ್

    ಪಾಟ್ನಾ: ವ್ಯಾಪಾರಿಗೆ ಗುಂಡಿಕ್ಕಿದ್ದ ಅಪರಿಚಿತರು ಚಿನ್ನ, ಮೊಬೈಲ್ ಬಿಟ್ಟು ಸಿಮ್ ತೆಗೆದುಕೊಂಡು ಪರಾರಿಯಾಗಿರೋ ಘಟನೆ ಪಾಟ್ನಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ಸಂಜಯ್ ಕುಮಾರ್ ಕೊಲೆಯಾದ ವ್ಯಾಪಾರಿ. ಸಂಜಯ್ ಹಾಜಿಪುರಕ್ಕೆ ತೆರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿ-19ರಲ್ಲಿ ಕೆಲವರು ತಡೆದಿದ್ದಾರೆ. ನಂತರ ಐದು ಬಾರಿ ಸಂಜಯ್ ಮೇಲೆ ಗುಂಡು ಹಾರಿಸಿದ್ದಾರೆ. ಸಂಜಯ್ ಸಾವನ್ನಪ್ಪಿದ್ದ ಅವರ ಬಳಿಯಲ್ಲಿದ್ದ ನಗದು, ಚಿನ್ನದ ಚೈನ್ ಮತ್ತು ಮೊಬೈಲ್ ಸಹ ತೆಗೆದುಕೊಂಡಿಲ್ಲ. ಬದಲಾಗಿ ಸಂಜಯ್ ಬಳಸುತ್ತಿದ್ದ ಸಿಮ್ ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

    ಮೃತ ಸಂಜಯ್ ಕುಮಾರ್ ಮೂಲತಃ ಆಲಂಗಂಜ್ ಕ್ಷೇತ್ರದ ನುರಾನಿಬಾಗ್ ಗ್ರಾಮದ ನಿವಾಸಿ. ಪಾಟ್ನಾದಲ್ಲಿ ಔಷಧಿಗಳ ವ್ಯಾಪಾರಿಯಾಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಂಜಯ್ ಕುಟುಂಬ ಮತ್ತು ಆಪ್ತರು ಆಗಮಿಸಿದ್ದಾರೆ. ಇದನ್ನೂ ಓದಿ: ವಿಧವೆ ಅತ್ತೆಯನ್ನ ರೇಪ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಅಳಿಯ

    ಸಂಜಯ್ ಹಾಜಿಪುರಕ್ಕೆ ತೆರಳುತ್ತಿರುವ ವಿಷಯ ತಿಳಿದವರೇ ಈ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ದಾಳಿಕೋರರು ಕೇವಲ ಸಿಮ್ ಮಾತ್ರ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೊಲದಲ್ಲೇ ಪ್ರೇಮಿಯೊಂದಿಗೆ ತಾಯಿ ಸಲ್ಲಾಪ – ಮರುದಿನ 6ರ ಬಾಲಕನ ಶವ ಪತ್ತೆ

  • ವ್ಯವಹಾರದ ಚೇತರಿಕೆಗಾಗಿ ವಾಹನಗಳ ಚಕ್ರ ಕದ್ದು ಜೈಲು ಸೇರಿದ್ರು

    ವ್ಯವಹಾರದ ಚೇತರಿಕೆಗಾಗಿ ವಾಹನಗಳ ಚಕ್ರ ಕದ್ದು ಜೈಲು ಸೇರಿದ್ರು

    -ಲಾಕ್‍ಡೌನ್‍ನಿಂದಾಗಿ ವ್ಯಾಪಾರದಲ್ಲಿ ನಷ್ಟ

    ಮುಂಬೈ: ಲಾಕ್‍ಡೌನ್ ನಿಂದಾಗಿ ನಷ್ಟದಲ್ಲಿದ್ದ ವ್ಯವಹಾರದ ಚೇತರಿಕೆಗಾಗಿ ವ್ಯಾಪಾರಿಗಳಿಬ್ಬರು ವಾಹನಗಳ ಚಕ್ರ ಕದ್ದು ಜೈಲು ಸೇರಿರುವ ಘಟನೆ ಮಹಾರಾಷ್ಟ್ರದ ನಾಗ್ಪುರಲ್ಲಿ ನಡೆದಿದೆ.

    ಮೊನಿಶ್ ದದ್ಲಾನಿ (27) ಮತ್ತು ವಿವೇಕ್ ಗುಮ್ನಾನಿ ಬಂಧಿತ ಆರೋಪಿಗಳು. ಬಂಧಿತರದಿಂದ ಮೂರು ಲಕ್ಷ ರೂ. ಮೌಲ್ಯದ 10 ಚಕ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

    ಮೊನಿಶ್ ದದ್ಲಾನಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ರೆ, ವಿವೇಕ್ ಟೂರ್ ಗಳನ್ನು ಅರೆಂಜ್ ಮಾಡುತ್ತಿದ್ದ. ಕೊರೊನಾ ಲಾಕ್‍ಡೌನ್ ನಿಂದಾಗಿ ಇಬ್ಬರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಗಾಡಿಯ ಚಕ್ರಗಳನ್ನು ಕದ್ದು ಸಾಲದಿಂದ ಮುಕ್ತರಾಗಲು ಪ್ಲಾನ್ ಮಾಡಿಕೊಂಡಿದ್ದರು. ಇದೇ ಹಣದಿಂದ ವ್ಯವಹಾರ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಸಾದರ್ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಮಹೇಶ್ ಬನ್ಸೊಡೆ ಹೇಳಿದ್ದಾರೆ.

  • ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗೆ ಚಾಕು ಇರಿದ ದುಷ್ಕರ್ಮಿಗಳು

    ಕ್ಷುಲ್ಲಕ ಕಾರಣಕ್ಕೆ ವ್ಯಾಪಾರಿಗೆ ಚಾಕು ಇರಿದ ದುಷ್ಕರ್ಮಿಗಳು

    ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಅನ್ಯ ಕೋಮಿನ ಯುವಕರ ಗುಂಪೊಂದು ಪ್ಲೇವುಡ್ ವ್ಯಾಪಾರಿಯೊಬ್ಬರಿಗೆ ಚಾಕು ಇರಿದಿರುವ ಘಟನೆ ಜಿಲ್ಲೆಯ ಭದ್ರಾವತಿಯ ಖಾಜಿ ಮೊಹಲ್ಲಾದಲ್ಲಿ ನಡೆದಿದೆ.

    ಚಾಕು ಇರಿತಕ್ಕೊಳಗಾದ ವ್ಯಾಪಾರಿಯನ್ನು ಹನುಮ್ ಸಿಂಗ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದೀಗ ಘಟನೆ ಖಂಡಿಸಿ ಭದ್ರಾವತಿಯ ಡಿವೈಎಸ್‍ಪಿ ಕಚೇರಿ ಎದುರು ಹಿಂದೂ ಪರ ಸಂಘಟನೆಯವರು ಹಾಗೂ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ. ಈ ಕೂಡಲೇ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆರೋಪಿಗಳ ಬಂಧಿಸುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದರು.

    ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್ ಅವರು ಆರೋಪಿಗಳ ಪತ್ತೆಗಾಗಿ ಈಗಾಗಲೇ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಹಚ್ಚಿ, ವಶಕ್ಕೆ ಪಡೆದುಕೊಳ್ಳುತ್ತೇವೆ. ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದುಕೊಂಡರು.

  • ಜಾಗೃತಿ ಮೂಡಿಸಲು ಒಂದು ರೂಪಾಯಿಗೆ 1 ಕೆಜಿ ಮೀನು ಮಾರಿದ ವ್ಯಾಪಾರಿ

    ಜಾಗೃತಿ ಮೂಡಿಸಲು ಒಂದು ರೂಪಾಯಿಗೆ 1 ಕೆಜಿ ಮೀನು ಮಾರಿದ ವ್ಯಾಪಾರಿ

    ಚೆನ್ನೈ: ಮೀನು ತಿನ್ನುವ ಗ್ರಾಹಕರಿಗೆ ಜಾಗೃತಿ ಮೂಡಿಸಲು ತಮಿಳುನಾಡಿನ ಮಧುರೈ ಮೀನು ವ್ಯಾಪಾರಿಯೊಬ್ಬರು ಒಂದು ರೂಪಾಯಿಗೆ ಒಂದು ಕೆ.ಜಿ ಮೀನು ಮಾರಾಟ ಮಾಡಿದ್ದಾರೆ.

    ಮಧುರೈನ ಕಾರೈಕುಡಿಯ ಮೀನಿನ ವ್ಯಾಪಾರಿ ಪಿ ಮನೋಹರನ್ ಅವರು, ಸುಮಾರು 520 ಕೆ.ಜಿ ಫ್ರೆಶ್ ಮೀನುಗಳನ್ನು ಒಂದು ರೂಪಾಯಿಗೆ ಒಂದು ಕೆ.ಜಿಯಂತೆ ಮಾರಾಟ ಮಾಡಿ ತಾಜಾ ಮೀನುಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂಬ ಜನ ಜಾಗೃತಿಯನ್ನು ಮೂಡಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮನೋಹರನ್ ಅವರು, ನಾನು ಮೀನುಗಳನ್ನು ಹಿಡಿದು ಸಂಗ್ರಹದಲ್ಲಿ ಇಟ್ಟು ಮಾರಾಟ ಮಾಡುವುದಿಲ್ಲ. ನಾನು ಯಾವಗಲೂ ತಾಜಾ ಮೀನುಗಳನ್ನು ಗ್ರಾಹಕರಿಗೆ ಕೊಡಲು ಬಯಸುತ್ತೇನೆ. ಗ್ರಾಹಕರು ಅಂಗಡಿಗೆ ಬರುವಾಗ ಒಳ್ಳೆಯ ಮೀನುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಭಾವನೆಯಲ್ಲಿ ಬರುತ್ತಾರೆ. ಅದಕ್ಕೆ ನಾವು ಮೋಸ ಮಾಡಬಾರದು. ಇದನ್ನು ಪ್ರಮುಖವಾಗಿ ಇಟ್ಟುಕೊಂಡು ಎರಡು ವರ್ಷದ ಹಿಂದೆ ಮೀನಿನ ವ್ಯಾಪಾರ ಶುರು ಮಾಡಿ ಇಂದು ಎರಡು ಅಂಗಡಿಗೆ ಮಾಲೀಕನಾಗಿದ್ದೇನೆ ಎಂದು ಹೇಳಿದ್ದಾರೆ.

    ಮೊದಲು ನಾನು 100 ಜನರಿಗೆ ಮಾತ್ರ ಒಂದು ರೂಪಾಯಿಗೆ ಒಂದು ಕೆ.ಜಿ ಕೊಡುವುದಾಗಿ ಹೇಳಿದ್ದೆ. ಆದರೆ 500 ಕ್ಕೂ ಹೆಚ್ಚು ಜನ ಅಂಗಡಿ ಮುಂದೆ ಬಂದಿದ್ದು ನೋಡಿ ನನಗೆ ಆಶ್ಚರ್ಯವಾಯಿತು. ಆದ್ದರಿಂದ ಬಂದಿದ್ದ ಅಷ್ಟು ಜನರಿಗೆ ಒಂದು ರೂ ನಂತೆ ಒಂದು ಕೆ.ಜಿ ಮೀನನ್ನು ಕೊಟ್ಟು ಕಳುಹಿಸಿದೆ ಎಂದು ಮನೋಹರನ್ ಹೇಳಿದ್ದಾರೆ. ಇದರ ಜೊತೆಗೆ ಮುಂದಿನ ವಾರವೂ ಇದೇ ರೀತಿ ಮೀನು ನೀಡುವುದಾಗಿ ಹೇಳಿದ್ದಾರೆ.

  • ಪೊಲೀಸ್ ವೇಷದಲ್ಲಿ ಬಂದು ವ್ಯಾಪಾರಿಯಿಂದ ಚಿನ್ನಾಭರಣ ದೋಚಿದ ಖದೀಮರು

    ಪೊಲೀಸ್ ವೇಷದಲ್ಲಿ ಬಂದು ವ್ಯಾಪಾರಿಯಿಂದ ಚಿನ್ನಾಭರಣ ದೋಚಿದ ಖದೀಮರು

    ಮೈಸೂರು: ಖದೀಮರ ಗುಂಪೊಂದು ಪೊಲೀಸರ ಸೋಗಿನಲ್ಲಿ ಬಂದು ವ್ಯಾಪಾರಿಯೊಬ್ಬರನ್ನು ನಂಬಿಸಿ ಅವರ ಬಳಿಯಿದ್ದ ವಾಚ್, ಚಿನ್ನದ ಚೈನ್ ಹಾಗೂ ಉಂಗುರವನ್ನು ಪಡೆದು ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

    ಜಿಲ್ಲೆಯ ಎಂ.ಜಿ ರಸ್ತೆಯ ಜೆ.ಎಸ್.ಎಸ್ ಆಸ್ಪತ್ರೆ ಬಳಿ ನಂಜನಗೂಡು ಮೂಲದ ಗೋಪಾಲ್ ರಸ್ತೆ ಬದಿಯಲ್ಲಿ ನಿಂತಿರುವಾಗ ನಕಲಿ ಪೊಲೀಸರು ಅವರ ಬಳಿ ಬಂದಿದ್ದಾರೆ. ಈ ವೇಳೆ, ಈ ಪ್ರದೇಶದ ಸುತ್ತಾಮುತ್ತಾ ವಂಚಕರ ಹಾವಳಿ ಹೆಚ್ಚಾಗಿದೆ. ನಾವು ಪೊಲೀಸ್ ಸ್ಕ್ವಾಡ್, ವಂಚಕರನ್ನು ಪತ್ತೆ ಮಾಡಲು ಬಂದಿದ್ದೇವೆ ಎಂದು ನಂಬಿಸಿದ್ದಾರೆ.

    ವ್ಯಾಪಾರಿಯನ್ನು ಮರಳುಮಾಡಿದ ಗುಂಪು ನಂತರ, ಮೊದಲು ನಿಮ್ಮ ಕೈಯಲ್ಲಿರೋ ವಾಚ್, ಕೊರಳಲ್ಲಿ ಇರುವ ಚಿನ್ನದ ಸರ ಹಾಗೂ ಉಗುರವನ್ನು ಬಿಚ್ಚಿ ಕಾರಿನಲ್ಲಿಡಿ ಎಂದು ಸೂಚಿಸಿದ್ದಾರೆ.

    ತದನಂತರ ವ್ಯಾಪಾರಿ ಬಳಿ ಇದ್ದ ಚಿನ್ನಾಭರಣವನ್ನು ಬಿಚ್ಚಿಸಿಕೊಂಡು ಕಾರಿನಲ್ಲಿ ಇಡುವ ರೀತಿ ನಾಟಕ ಮಾಡಿ, ಲಪಟಾಯಿಸಿ ಪರಾರಿಯಾಗಿದ್ದಾರೆ. ವಂಚನೆ ಅರಿವಿಗೆ ಬಂದ ಬಳಿಕ ಮೋಸಹೋದ ವ್ಯಾಪಾರಿ ಪೊಲೀಸರ ಮೊರೆ ಹೋಗಿ ನಡೆದ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ.

    ಸದ್ಯ ಘಟನಾ ಸ್ಥಳಕ್ಕೆ ನಗರದ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೈಸೂರಿನ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ವ್ಯಾಪಾರಿಯಿಂದ ಸ್ವೆಟರ್ ದಾನ

    ದಾವಣಗೆರೆ: ಚಳಿಯನ್ನು ಲೆಕ್ಕಿಸದೇ ಬೀದಿಯಲ್ಲಿ ಮಲಗಿಕೊಂಡು ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯದಿಂದ ಬಂದ ನಿರ್ಗತಿಕರಿಗೆ ದಾವಣಗೆರೆಯ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಎಂಬವರು ಸ್ವೆಟರ್ ನೀಡಿ ಮಾನವೀಯತೆ ಮೆರೆದಿದ್ದಾರೆ.

    ನಗರದ ಗುಂಡಿ ಸರ್ಕಲ್ ಬಳಿ ಅಸ್ಸಾಂ, ಬಿಹಾರದಿಂದ ಬಂದಂತಹ ಹತ್ತಾರು ಕುಟುಂಬಗಳು ಗೃಹ ಉಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತ ಜೀವನ ಸಾಗಿಸುತ್ತಿದ್ದಾರೆ. ಅವರನ್ನೇ ನಂಬಿಕೊಂಡು ಬಂದಿರುವ ಮಕ್ಕಳ ಪ್ರತಿನಿತ್ಯ ಚಳಿಯಲ್ಲಿ ಬೀದಿ ಬದಿಯಲ್ಲಿ ಮಲಗಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.

    ಇದನ್ನು ನೋಡಿದ ವ್ಯಾಪಾರಿ ಸೋಗಿ ಆರ್ ಶಿವಯೋಗಿ ಹಾಗೂ ಅವರ ಕುಟುಂಬದವರು ಮಕ್ಕಳಿಗೆ ಸೇರಿದಂತೆ ಬಡ ಕುಟುಂಬದವರಿಗೆ ಸ್ವೆಟರ್ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಸುಮಾರು 80ಕ್ಕೂ ಹೆಚ್ಚು ನಿರ್ಗತಿಕರಿಗೆ ಸ್ವೆಟರ್ ದಾನ ಮಾಡಿದ್ದಾರೆ.

    ಮನೆ ಇರುವವರು ಬೆಚ್ಚಗೆ ಮನೆಯಲ್ಲಿ ಮಲಗಿಕೊಳ್ಳುತ್ತಾರೆ. ಆದರೆ ಮನೆ ಇಲ್ಲದೇ ಬೀದಿ ಬದಿ ವ್ಯಾಪಾರವನ್ನೇ ನಂಬಿಕೊಂಡು ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಂದಿರುವ ಜನರು ಚಳಿಯಲ್ಲೇ ಮಲಗಿಕೊಳ್ಳುತ್ತಿದ್ದರು. ಅಂತಹವರಿಗೆ ನಮ್ಮದೊಂದು ಸಣ್ಣ ಕಾಣಿಕೆಯಾಗಿ ಈ ರೀತಿಯ ಸಹಾಯ ಮಾಡಿದ್ದೇವೆ. ಇದರಲ್ಲಿ ನಮಗೆ ತೃಪ್ತಿ ತಂದಿದೆ ಎಂದು ಆನಂದ ವ್ಯಕ್ತಪಡಿಸಿದ್ದಾರೆ.

     ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv