Tag: Mercedes car

  • ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಚಂಡಿಗಢ: ಕಳೆದ ನಾಲ್ಕು ದಿನಗಳಿಂದ ಪಂಜಾಬ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಖಲಿಸ್ತಾನಿ (Khalistan) ಬೆಂಬಲಿಗ ಅಮೃತ್‌ಪಾಲ್ ಸಿಂಗ್ (Amritpal Singh) ದೇಶದಿಂದಲೇ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಈವರೆಗೂ ಅಮೃತ್‌ಪಾಲ್ ಸಿಂಗ್ ಸಿಕ್ಕಿಲ್ಲ ಎಂದೇ ಪಂಜಾಬ್ ಪೊಲೀಸರು (Punjab Police) ಹೇಳುತ್ತಿದ್ದಾರೆ. ಈ ನಡುವೆ ಅಮೃತ್‌ಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಬಳಸಿದ 2ನೇ ವಾಹನವನ್ನು ಮತ್ತು ಆತ ಬಳಸಿದ್ದ ಬಟ್ಟೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 80 ಸಾವಿರ ಪೊಲೀಸರು ಏನ್ ಮಾಡ್ತಿದ್ದಾರೆ – ಅಮೃತ್‌ಪಾಲ್ ಸಿಂಗ್ ಬಂಧಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ

    ಅಮೃತ್‌ಪಾಲ್ ಸಿಂಗ್ ತನ್ನ ಸಹಚರರೊಡನೆ ಬೈಕಲ್ಲಿ ಪಂಜಾಬ್ ಗಡಿ ದಾಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಂದು ವೇಳೆ ಇದು ನಿಜವಾದಲ್ಲಿ ಆತ ನೇಪಾಳದ ಮೂಲಕ ಕೆನಡಾಗೆ ಎಸ್ಕೇಪ್ ಆಗುವ ಸಾಧ್ಯತೆಗಳು ಇವೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

    30 ವರ್ಷದ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ನಂತರ ಶನಿವಾರ ಬೆಳಿಗ್ಗೆ 11.27ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್ ದಾಟಿ ಹೋಗುವುದು ಪತ್ತೆಯಾಗಿದೆ. ಆತ ಮಾರುತಿ ಬ್ರೆಜಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅದಕ್ಕೂ ಮುನ್ನ ಆತ ಮರ್ಸಿಡಿಸ್ ಎಸ್‌ಯುವಿಯಲ್ಲಿ (Mercedes SUV) ಇರುವುದು ಕಂಡುಬಂದಿತ್ತು. ಆ ಕಾರನ್ನು ಆತ ಶಾಹಕೋಟ್‌ನಲ್ಲಿ ಬಿಟ್ಟು ತೆರಳಿದ್ದ. ಅಲ್ಲಿಂದ ಕೆಲವು ಗಂಟೆಗಳ ನಂತರ ತನ್ನ ಸಹವರ್ತಿಯೊಬ್ಬನ ಮಾರುತಿ ಬ್ರೆಜಾ ಕಾರಿನಲ್ಲಿ ಪ್ರಯಾಣಿಸಿದ್ದ. ಕಾರಿನಲ್ಲಿ ಆತ ಬಟ್ಟೆಗಳನ್ನು ಬದಲಿಸಿರುವುದು ಖಚಿತವಾಗಿದೆ. ಆತ ಮಾಮೂಲಿಯಾಗಿ ಧರಿಸುವ ಉಡುಪಿನ ಬದಲು ಅಂಗಿ ತೊಟ್ಟಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಮಧ್ಯೆ, ಪಂಜಾಬ್ ಪೊಲೀಸರ ಕಾರ್ಯವೈಖರಿ ಬಗ್ಗೆ ಪಂಜಾಬ್ ಹೈಕೋರ್ಟ್ (Punjab Highcourt) ಹಲವು ಗಂಭೀರ ಪ್ರಶ್ನೆಗಳನ್ನ ಕೇಳಿದೆ. ಅಮೃತ್‌ಪಾಲ್ ಸಿಂಗ್ ಹೊರತುಪಡಿಸಿ ಉಳಿದವರನ್ನು ಹೇಗೆ ಬಂದಿಸಿದ್ರಿ? ಪೊಲೀಸ್ರು ಚೇಸ್ ಮಾಡಿದರೂ, ಅಮೃತ್‌ಪಾಲ್ ಸಿಂಗ್ ಮಾತ್ರ ತಪ್ಪಿಸಿಕೊಂಡಿದ್ದು ಹೇಗೆ? 80 ಸಾವಿರ ಪೊಲೀಸರು ಏನು ಮಾಡ್ತಿದ್ರು ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದು, ಮುಂದಿನ ವಿಚಾರಣೆ 4 ದಿನಗಳ ಬಳಿಕ ನಡೆಯಲಿದೆ.

    ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಬಂಧನಕ್ಕಾಗಿ ಕಳೆದ 4 ದಿನಗಳಿಂದ ಬಹುದೊಡ್ಡ ಕಾರ್ಯಾಚರಣೆಯನ್ನು ಪಂಜಾಬ್ ಪೊಲೀಸರು ಆರಂಭಿಸಿದ್ದಾರೆ. ಸತತ ಹುಡುಕಾಟದ ಬಳಿಕ ಅಮೃತ್ ಪಾಲ್ ಸಿಂಗ್ ಬಂಧಿಸುವಲ್ಲಿ ವಿಫಲವಾದ ಇಲಾಖೆ ಆತನ ಆಪ್ತರನ್ನು ಬಂಧಿಸಿದೆ. ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆ ರಾಜ್ಯದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರ ಮುಂದೆ ಶರಣಾದ ಅಮೃತ್‌ಪಾಲ್ ಸಿಂಗ್ ಮಾವನನ್ನು ಅಸ್ಸಾಂನ ದಿಬ್ರುಘಡ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪಂಜಾಬ್‌ನಲ್ಲಿ ಇಂಟರ್ನೆಟ್ ಸೇವೆಗಳು ಭಾಗಶಃ ಆರಂಭವಾಗಿವೆ. ಕೆಲವೆಡೆ ಗುರುವಾರ ಮಧ್ಯಾಹ್ನದವರೆಗೂ ಸೇವೆ ಬಂದ್ ಮಾಡಲಾಗಿದೆ.

  • 2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

    2.18 ಕೋಟಿ ರೂ. ವಂಚಿಸಿ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿದ!

    ಚಂಡೀಗಢ: ಫೈನಾನ್ಸ್ ಕಂಪನಿಯಲ್ಲೇ 2.18 ಕೋಟಿ ರೂ. ವಂಚಿಸಿ ವ್ಯಕ್ತಿಯೊಬ್ಬ 3 ವರ್ಷಗಳಲ್ಲಿ 5 ಮರ್ಸಿಡಿಸ್ ಕಾರು ಖರೀದಿಸಿರುವ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಫೈನಾನ್ಸ್ ಕಂಪನಿಗೆ ಗುರುಗ್ರಾಮ್ ನಿವಾಸಿ ಪ್ರಮೋದ್ ಸಿಂಗ್ ಸುಮಾರು 2.18 ಕೋಟಿ ರೂ. ವಂಚಿಸಿದ್ದನು. ಈ ಪರಿಣಾಮ ಫೈನಾನ್ಸ್ ಕಂಪನಿ 2018 ರಲ್ಲಿ ಆರೋಪಿ ವಿರುದ್ಧ ದೂರು ದಾಖಲಿಸಿತ್ತು. ಆದರೆ ದೂರು ದಾಖಲಾದ 3 ವರ್ಷಗಳ ನಂತರ ಆರೋಪಿಯನ್ನು ಪೊಲೀಸರು ಗುರುಗ್ರಾಮದಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಗುಡಿಸಲಿನ ಮೇಲೆ ಬಿದ್ದ ಟ್ರಕ್ – ಮೂವರು ಅಪ್ರಾಪ್ತ ಸಹೋದರಿಯರು ಬಲಿ

    POLICE JEEP

    ಜಂಟಿ ಪೊಲೀಸ್ ಕಮಿಷನರ್(ಆರ್ಥಿಕ ಅಪರಾಧ ವಿಭಾಗ) ಛಾಯಾ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದು, ಸಿಂಗ್ ಆರಂಭದಲ್ಲಿ ಮರ್ಸಿಡಿಸ್ ಬೆಂಝ್ ಕಾರು ಖರೀದಿಸಲು ಸಂಸ್ಥೆಯಿಂದ 27.5 ಲಕ್ಷ ರೂಪಾಯಿ ಸಾಲ ಪಡೆದು ಆರಂಭಿಕ ಕಂತುಗಳನ್ನು ಪಾವತಿಸಿ ಫೈನಾನ್ಸರ್ ನಂಬಿಕೆ ಗಳಿಸಿದ್ದಾನೆ. ನಂತರ ಅವನು ನಾಲ್ಕು ಬಾರಿ ಸಾಲ ಪಡೆದುಕೊಂಡಿದ್ದು, ಕಂತನ್ನು ಸ್ವಲ್ಪ ದಿನಗಳ ನಂತರ ಪಾವತಿಸುತ್ತಿದ್ದು, ಥಟ್ಟನೆ ಹಣ ಕಟ್ಟುವುದನ್ನೆ ನಿಲ್ಲಿಸಿದ್ದಾನೆ. ಆಗ ಫೈನಾನ್ಸ್ ಕಂಪನಿ ಆರೋಪಿ ವಿರುದ್ಧ ದೂರು ನೀಡಿದೆ ಎಂದು ವಿವರಿಸಿದ್ದಾರೆ.

    ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ಸಿಂಗ್ ಜೊತೆ ಕೈಜೋಡಿಸಿದ್ದರು. ಸಿಂಗ್ ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆತನ ವಿರುದ್ಧ ಜಾಮೀನು ರಹಿತ ವಾರೆಂಟ್‍ಗಳನ್ನು ಹೊರಡಿಸಲಾಗಿತ್ತು. ಪರಿಣಾಮ ಸಿಂಗ್‍ನನ್ನು ಹುಡುಕಲು ಸುದೀರ್ಘ ಕಾರ್ಯಚರಣೆಯನ್ನು ಮಾಡಲಾಗಿತ್ತು. ಮೂರು ವರ್ಷಗಳ ಕಾರ್ಯಚರಣೆ ನಂತರ ಗುರುಗ್ರಾಮದಲ್ಲಿ ಸಿಂಗ್‍ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

    ಸಿಂಗ್ ಮೂರು ವರ್ಷಗಳಲ್ಲಿ ಐದು ಮರ್ಸಿಡಿಸ್ ಕಾರುಗಳನ್ನು ಖರೀದಿಸಿದ್ದಾನೆ. ಅವೆಲ್ಲಕ್ಕೂ ಅದೇ ಸಂಸ್ಥೆ ಹಣಕಾಸು ಒದಗಿಸಿದೆ. ಸಾರಿಗೆ ಇಲಾಖೆಯ ಕೆಲವು ಅಧಿಕಾರಿಗಳು ವಾಹನಗಳ ಮಾಹಿತಿಯನ್ನು ದಾಖಲೆಗಳಿಂದ ತೆಗೆದುಹಾಕಿದ್ದಾರೆ. ವಾಹನಗಳ ಮಾಹಿತಿಗಳನ್ನು ಡಿಲೀಟ್ ಮಾಡಿದರೆ ಆರೋಪಿ ಮೋಸದಿಂದ ಕಾರನ್ನು ಸೆಕೆಂಡ್ ಹ್ಯಾಂಡ್ ಕಾರ್ ಡೀಲರ್‍ಗಳಿಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾವೇನು ದೊಡ್ಡ ಸಮಾವೇಶ ಮಾಡಿ ವಿದ್ಯಾರ್ಥಿಗಳ ದುರ್ಬಳಕೆ ಮಾಡಿಲ್ಲ: ಜಗದೀಶ್ ಶೆಟ್ಟರ್

    ಸಿಂಗ್ ಗುರುಗ್ರಾಮದಲ್ಲಿರುವ ಕಾಲ್ ಸೆಂಟರ್‌ಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸುವ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೆ ಐಷಾರಾಮಿ ಕಾರುಗಳ ಸಮೂಹವನ್ನೇ ಹೊಂದಿದ್ದ. ಆದರೆ ಹಲವಾರು ಕಾಲ್ ಸೆಂಟರ್‍ಗಳನ್ನು ಮುಚ್ಚಿದ್ದರಿಂದ ಸಿಂಗ್ ನಷ್ಟ ಅನುಭವಿಸಿದ್ದು, ಹಣಕ್ಕಾಗಿ ವಾಹನದ ದಾಖಲೆಗಳನ್ನು ನಕಲಿ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.