Tag: menu

  • G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

    G20 ಡಿನ್ನರ್‌ಗೆ ಸಿರಿಧಾನ್ಯಗಳ ವೈವಿಧ್ಯತೆ – ಮೆನುವಿನಲ್ಲಿ ಏನೇನಿತ್ತು?

    ನವದೆಹಲಿ: ಜಿ20 ಶೃಂಗಸಭೆಯ (G20 Summit) ಮೊದಲ ದಿನ ಅಂತ್ಯಗೊಂಡಿದೆ. ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಶ್ವ ನಾಯಕರು ಹಾಗೂ ಪ್ರತಿನಿಧಿಗಳಿಗೆ ಔತಣಕೂಟವನ್ನು (Dinner) ಆಯೋಜಿಸಿದ್ದು, ಭಾರತದ ವೈವಿಧ್ಯಮಯ ಭಕ್ಷ್ಯಗಳನ್ನು ನೀಡಲಾಗಿದೆ.

    ರಾಷ್ಟ್ರದ ಹಾಗೂ ವಿಶ್ವದ ನಾಯಕರಿಗೆ ದೇಶದ ವಿಶಿಷ್ಟ ಭೋಜನದ ಅನುಭವವನ್ನು ನೀಡಲಾಗಿದೆ. ಬೆಳ್ಳಿ, ಚಿನ್ನ ಲೇಪಿತ ಪಾತ್ರೆಗಳಲ್ಲಿ ಊಟವನ್ನು ಬಡಿಸಿ, ದೇಶದ ಶ್ರೀಮಂತ ಸಂಸ್ಕೃತಿ ಹಾಗೂ ಪರಂಪರೆಯ ನೋಟವನ್ನು ಪ್ರದರ್ಶಿಸಲಾಗಿದೆ.

    ಭೋಜನದ ಮೆನುವಿನಲ್ಲೇನಿದೆ?
    ಭಾರತ ತನ್ನ ಎಲ್ಲಾ ವೈವಿಧ್ಯತೆಗಳೊಂದಿಗೆ ರುಚಿಯು ದೇಶದ ಪ್ರತಿ ಪ್ರದೇಶಕ್ಕೂ ಹೇಗೆ ಸಂಪರ್ಕಿಸುತ್ತದೆ ಎಂಬ ಪರಿಚಯದೊಂದಿಗೆ ಮೆನುವನ್ನು (Menu) ಪ್ರಾರಂಭಿಸಲಾಗಿದೆ. ಸಂಪ್ರದಾಯಗಳು, ಪದ್ಧತಿಗಳು ಹಾಗೂ ಹವಾಮಾನದ ಸಂಯೋಜನೆಯೊಂದಿಗೆ ಭಾರತ ಹಲವು ವಿಧಗಳಲ್ಲಿ ವೈವಿಧ್ಯಮಯವಾಗಿದೆ. ಈ ಎಲ್ಲಾ ರುಚಿ ನಮ್ಮನ್ನು ಸಂಪರ್ಕಿಸುತ್ತದೆ ಎಂದು ಬರೆಯಲಾಗಿದೆ.

    ಮೆನುವಿನಲ್ಲಿ ಸಿರಿಧಾನ್ಯಗಳ (Millets) ಬಗ್ಗೆ ವಿಶೇಷವಾಗಿ ಉಲ್ಲೇಖಿಸಲಾಗಿದೆ. ಅವುಗಳ ಪೌಷ್ಟಿಕಾಂಶ ಮಾತ್ರವಲ್ಲದೇ ಕೃಷಿ ಕ್ಷೇತ್ರಕ್ಕೆ ಎಷ್ಟು ಮೌಲ್ಯಯುತವಾಗಿದೆ ಎಂಬುದನ್ನು ವಿವರಿಸಲಾಗಿದೆ.

    ಬಡಿಸಲಾದ ವಿಶೇಷ ಖಾದ್ಯಗಳೇನು?
    ಮುಖ್ಯ ಅಡುಗೆ:
    ವನವರ್ಣಂ: ಮಶ್ರೂಮ್‌ನೊಂದಿಗೆ ಟಾಪಿಂಗ್ ಮಾಡಲಾದ ಹಲಸು ಹಣ್ಣಿನ ಗ್ಯಾಲೆಟ್, ಕುರುಕಲು ಅನುಭವ ನೀಡುವ ಸಣ್ಣ ರಾಗಿ ಮತ್ತು ಕರಿಬೇವಿನ ಎಲೆಯೊಂದಿಗೆ ಫ್ರೈ ಮಾಡಲಾದ ಕೇರಳದ ಕೆಂಪು ಅನ್ನ. ಇದನ್ನೂ ಓದಿ: ಜಿ20 ಸಭೆಯಲ್ಲಿ ರಷ್ಯಾ-ಉಕ್ರೇನ್‌ ವಾರ್‌; ವಿಶ್ವ ನಾಯಕರ ಘೋಷಣೆಯೇನು?

    ಭಾರತೀಯ ಬ್ರೆಡ್‌ಗಳು:
    ಮುಂಬೈ ಪಾವ್: ಈರುಳ್ಳಿ ಬೀಜದ ಸುವಾಸನೆಯ ಮೃದುವಾದ ಬನ್.
    ಬಕರಖಾನಿ: ಏಲಕ್ಕಿ ಸುವಾಸನೆಯ ಸಿಹಿ ರೋಟಿ.

    ಸಿಹಿತಿಂಡಿ:
    ಮಧುರಿಮಾ ಪಾಟ್ ಆಫ್ ಗೋಲ್ಡ್: ಏಲಕ್ಕಿ ಸುವಾಸನೆಯ ಬಾರ್ನ್ಯಾರ್ಡ್ ಧಾನ್ಯದ ಪುಡಿಂಗ್, ಅಂಬೆಮೊಹರ್ ಅನ್ನ, ಅಂಜೂರ-ಪೀಚ್ ಮಿಶ್ರಣದ ಕಾಂಪೋಟ್.

    ಪಾನೀಯಗಳು:
    ಕಾಶ್ಮೀರಿ ಕಹ್ವಾ, ಫಿಲ್ಟರ್ ಕಾಫಿ ಮತ್ತು ಡಾರ್ಜಿಲಿಂಗ್ ಚಹಾ.

    ಚಾಕ್ಲೇಟ್ ಫ್ಲೇವರ್‌ನ ಪಾನ್ ಎಲೆಗಳು. ಇದನ್ನೂ ಓದಿ: ಜಿ20 ಅತಿಥಿಗಳಿಗೆ ಭಾರತದ ವಾಸ್ತವತೆ ಮರೆಮಾಡುವ ಅಗತ್ಯವಿಲ್ಲ: ರಾಹುಲ್ ಗಾಂಧಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಕ್ಕರೆ ಕಾಯಿಲೆ ಇರುವವರಿಗೆ ಬೇರೆ ಊಟ – ಹೊಸ ಮೆನುವಿಗೆ ರೈಲ್ವೆ ಮಂಡಳಿ ಸೂಚನೆ

    ಸಕ್ಕರೆ ಕಾಯಿಲೆ ಇರುವವರಿಗೆ ಬೇರೆ ಊಟ – ಹೊಸ ಮೆನುವಿಗೆ ರೈಲ್ವೆ ಮಂಡಳಿ ಸೂಚನೆ

    ನವದೆಹಲಿ: ಆರೋಗ್ಯ ದೃಷ್ಟಿಯಿಂದ ಮಧುಮೇಹ ಹೊಂದಿರುವವರಿಗೆ ಹಾಗೂ ಶಿಶುಗಳಿಗೆ ಸೂಕ್ತವಾದ ಆಹಾರವನ್ನು ನೀಡಲು ಸ್ಥಳೀಯ ಮತ್ತು ಪ್ರಾದೇಶಿಕ ಆಹಾರ ಪದ್ಧತಿಗಳ ಮೆನುವನ್ನು ಕಸ್ಟಮೈಸ್ ಮಾಡಲು ರೈಲ್ವೆ ಮಂಡಳಿಯು (Railway Board) ಐಆರ್‌ಟಿಸಿಗೆ (IRCTC) ಅನುಮೋದನೆಯನ್ನು ನೀಡಿದೆ.

    train

    ಈ ಕ್ರಮವನ್ನು ರೈಲುಗಳಲ್ಲಿನ ಅಡುಗೆ ಸೇವೆಗಳನ್ನು ಸುಧಾರಿಸಲು ಮತ್ತು ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ರೈಲ್ವೆ ಮಂಡಳಿಯು ಕಳುಹಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಭಾರತೀಯ ವರನ ಮದುವೆಗೆ ಸೀರೆಯುಟ್ಟು ಮಿಂಚಿದ ಇಬ್ಬರು ಪುರುಷ ಸ್ನೇಹಿತರು

    ರೈಲುಗಳಲ್ಲಿ ಅಡುಗೆ ಸೇವೆಯನ್ನು ಸುಧಾರಿಸುವ ಸಲುವಾಗಿ, ಪ್ರಾದೇಶಿಕ ಆಹಾರಪದ್ಧತಿಗಳು, ಸೀಸನ್‍ಗೆ ತಕ್ಕಂತೆ ಮಾಡಬಹುದಾದ ಭಕ್ಷ್ಯಗಳು, ಹಬ್ಬಗಳ ಸಮಯದಲ್ಲಿ ಹೀಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಒಳಗೊಂಡಂತೆ ಮೆನುವನ್ನು ಕಸ್ಟಮೈಸ್ ಮಾಡಲು ಐಆರ್‌ಟಿಸಿಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ. ಶುಗರ್ ಇರುವವರಿಗೆ, ಮಗುವಿಗೆ, ಆರೋಗ್ಯ ಸಮಸ್ಯೆ ಹೊಂದಿರುವ ಪ್ರಯಾಣಿಕರಿಗೆ ರಾಗಿ ಆಧಾರಿತ ಸ್ಥಳೀಯ ಉತ್ಪನ್ನಗಳನ್ನು ನೀಡುವಂತೆ ಪ್ರಕಟಿಸಲಾಗಿದೆ. ಇದನ್ನೂ ಓದಿ: ಲವ್ ಜಿಹಾದ್‌ಗೆ ಬಲಿಯಾದ್ರೆ ಇದೇ ಗತಿ – ಹೊಸ ಆಯಾಮದಲ್ಲಿ ತನಿಖೆ ನಡೆಸುವಂತೆ VHP ಮನವಿ

    Live Tv
    [brid partner=56869869 player=32851 video=960834 autoplay=true]

  • ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ಟ್ರೈನ್‌ನಲ್ಲೂ ಸವಿಯಬಹುದು ಹಬ್ಬದೂಟ – ನವರಾತ್ರಿ ಹಿನ್ನೆಲೆ ರೈಲ್ವೆಯಿಂದ ಸ್ಪೆಷಲ್ ಮೆನು

    ನವದೆಹಲಿ: ಇಂದಿನಿಂದ ನವರಾತ್ರಿ (Navratri) ಹಬ್ಬ ಪ್ರಾರಂಭವಾಗಿದೆ. ದೇಶದ್ಯಾಂತ ಅದ್ದೂರಿಯಾಗಿ, ಸಂಭ್ರಮದಿಂದ ದಸರಾ (Dasara) ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆ ಭಾರತೀಯ ರೈಲ್ವೆ (Indian Railway) ಕೂಡಾ ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಊಟ (Meal) ನೀಡಲು ನಿರ್ಧರಿಸಿದೆ.

    ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಊಟದ ಮೆನು ಇರಲಿದ್ದು, ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ. ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಶೀಘ್ರವೇ 5G ಸೇವೆ ಆರಂಭ – ನಿಮ್ಮ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

    ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್, irctc.co.in ಅಥವಾ 1323 ಗೆ ಕರೆ ಮಾಡಿ ವಿಶೇಷ ಮೆನುವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಈ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ವಿಶೇಷ ಥಾಲಿಯ ಫೋಟೋವನ್ನೂ ಲಗತ್ತಿಸಿದೆ. ಇದನ್ನೂ ಓದಿ: ಹೊಸ ರಾಜಕೀಯ ಪಕ್ಷದ ಹೆಸರು ಘೋಷಿಸಿದ ಗುಲಾಂ ನಬಿ ಅಜಾದ್

    Live Tv
    [brid partner=56869869 player=32851 video=960834 autoplay=true]

  • ಮೋದಿ ಪ್ರಮಾಣ ವಚನ ಕಾರ್ಯಕ್ರಮದ ವಿಶೇಷತೆ ಏನು? ಅತಿಥಿಗಳು ಯಾರು? ಮೆನು ಏನಿದೆ?

    ಮೋದಿ ಪ್ರಮಾಣ ವಚನ ಕಾರ್ಯಕ್ರಮದ ವಿಶೇಷತೆ ಏನು? ಅತಿಥಿಗಳು ಯಾರು? ಮೆನು ಏನಿದೆ?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಭಾರತ ಪ್ರಧಾನಿಯಾಗಿ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

    ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸುಮಾರು 6,500 ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು, ಕಾರ್ಯಕ್ರಮಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ರಾಪ್ಟ್ರಪತಿ ಹಾಗೂ ಪ್ರಧಾನಿ ತೀರ್ಮಾನದ ಹಿನ್ನೆಲೆಯಲ್ಲಿ ಸರಳವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

    ಪ್ರಮುಖವಾಗಿ ಕಾರ್ಯಕ್ರಮಕ್ಕೆ ಬಂಗಾಳ ಇನಿಷಿಯೇಟಿವ್ ಫಾರ್ ಮಲ್ಟಿ ಸೆಕ್ಟರಲ್ ಟೆಕ್ನಿಕಲ್ ಅಂಡ್ ಎಕನಾಮಿಕ್ ಕೋ ಆಪರೇಷನ್ (ಬಿಮ್‍ಸ್ಟಿಕ್) ಸದಸ್ಯ ರಾಷ್ಟ್ರಗಳಿಗೆ ಆಹ್ವಾನ ನೀಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಮ್ಯಾನ್ಮಾರ್, ನೇಪಾಳ, ಭೂತಾನ್, ಥೈಲ್ಯಾಂಡ್ ರಾಷ್ಟ್ರಗಳ ಗಣ್ಯರು ಸೇರಿದಂತೆ ಶಾಂಘೈ ಕೋ ಆಪರೇಷನ್ ರಾಷ್ಟ್ರಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಬದಲಾದ ಸಮಯ: 2014ರಲ್ಲಿ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಸಂಜೆ 6 ಗಂಟೆ ವೇಳೆಗೆ ನಡೆದಿತ್ತು. ಆದರೆ ಈ ಬಾರಿ ಸಮಯವನ್ನು ಬಲಾಯಿಸಿ ಸಂಜೆ 7 ಗಂಟೆಗೆ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಅಲ್ಲದೇ ರಾಷ್ಟ್ರಪತಿ ಭವನದ ಫೋರ್ ಕೋರ್ಟಿನಲ್ಲಿ ಸಮಾರಂಭ ನಡೆಯಲಿದೆ.

    ಇತಿಹಾಸದಲ್ಲಿ ಇದುವರೆಗೂ 3 ಬಾರಿ ಮಾತ್ರ ಫೋರ್ ಕೋರ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಈ ಹಿಂದೆ ಮಾಜಿ ಪ್ರಧಾನಿಗಳಾದ ಚಂದ್ರಶೇಖರ್ (1990), ವಾಜಪೇಯಿ (1998), 2014 ರಲ್ಲಿ ಮೋದಿ ಅವರು ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಳಿದ ಪ್ರಧಾನಿಗಳು ದರ್ಬಾರ್ ಹಾಲ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಲ್ಲಿ ಕೇವಲ 500 ಮಂದಿಗೆ ಮಾತ್ರ ಆಸನ ವ್ಯವಸ್ಥೆ ಇದ್ದು, ಪರಿಣಾಮ ಘೋರ್ ಕೋರ್ಟಿನಲ್ಲಿ ಕಾರ್ಯಕ್ರಮ ನಡೆಯಲಿದೆ.

    ರಾಷ್ಟ್ರಪತಿ ಭವನದ ಮುನ್ನಂಗಳವನ್ನು ‘ಫೋರ್ ಕೋರ್ಟ್’ ಎಂದು ಕರೆಯಲಾಗುತ್ತದೆ. ರಾಷ್ಟ್ರಪತಿ ಭವನದ ಮುಖ್ಯ ಗೇಟ್ ನಿಂದ ಹಿಡಿದು ಮುಖ್ಯ ಭವನದ ವರೆಗಿನ ಪ್ರದೇಶ ಇದಾಗಿದೆ. ಇದು ಇಲ್ಲಿ ಇಂಗ್ಲಿಷ್‍ನ ‘ಟಿ’ ಅಕ್ಷರ ಮಾದರಿಯಲ್ಲಿದೆ. ಇದರಲ್ಲಿ ಉದ್ಯಾನವನ, ನೀರಿನ ಕಾಲುವೆ ನಿರ್ಮಿಸಲಾಗಿದೆ. ರಾಷ್ಟ್ರಪತಿ ಭವನದ ಮುಂಭಾಗ 640 ಅಡಿ ಅಗಲದ ಜಾಗದಲ್ಲಿ ಮುಖ್ಯ ವೇದಿಕೆ ಇರಲಿದೆ. ರಾಷ್ಟ್ರಪತಿ ಭವನದ ಎದುರು ಇರುವ ಎತ್ತರದ ಧ್ವಜ ಸ್ತಂಭದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. 1971ರ ಮೊದಲು ಇಲ್ಲಿ ರಾಷ್ಟ್ರಪತಿಗಳಿಗಾಗಿ ಇದ್ದ ಪ್ರತ್ಯೇಕ ಧ್ವಜವನ್ನು ಹಾರಿಸಲಾಗುತ್ತಿತ್ತು.

    ಕಾರ್ಯಕ್ರಮಕ್ಕೆ ಸಿನಿಮಾ, ಸಾಹಿತ್ಯ, ವಿಜ್ಞಾನ, ರಾಜಕೀಯ, ವಿದೇಶಿ ಪ್ರತಿನಿಧಿಗಳು, ಚಿಂತಕರು ಸೇರಿದಂತೆ ವಿವಿಧ ಕ್ಷೇತ್ರ ಗಣ್ಯರು ಆಗಮಿಸಲಿದ್ದಾರೆ. 2014ರ ಮೇ 26 ರಂದು ನಡೆದ ಕಾರ್ಯಕ್ರಮಕ್ಕೆ 3 ಗಂಟೆಯ ವೇಳೆಗೆ ಅತಿಥಿಗಳು ಆಗಮಿಸಿದ್ದರು. ಬಿಸಿಲಿನ ಪ್ರಮಾಣ ತೀವ್ರವಾಗಿದ್ದ ಪರಿಣಾಮ ಈ ಬಾರಿ ಪ್ರಮಾಣ ವಚನ ಸಮಯವನ್ನು ಬದಲಾಯಿಸಲಾಗಿದೆ. ಅಲ್ಲದೇ ಕಳೆದ ಬಾರಿ ರಕ್ಷಣೆಯ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ನೀರಿನ ಬಾಟಲಿಗಳನ್ನು ನಿಷೇಧ ಮಾಡಲಾಗಿತ್ತು. ಈ ಬಾರಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

    ಮೆನು ಇಂತಿದೆ: 2014 ರಲ್ಲಿ ಆಯೋಜಿಸಲಾಗಿದ್ದ ರೀತಿಯಲ್ಲೇ ಈ ಬಾರಿಯೂ ಕಾರ್ಯಕ್ರಮ ನಡೆಯಲಿದ್ದು, ಲಘು ಆಹಾರ ಮತ್ತು ಬ್ರೇಕ್‍ಫಸ್ಟ್ ಅತಿಥಿಗಳಿಗೆ ಲಭ್ಯವಾಗಲಿದೆ. ಕಾರ್ಯಕ್ರಮದಲ್ಲಿ ವೆಜ್ ಹಾಗೂ ನಾನ್ ವೆಜ್ ಎರಡು ಖಾದ್ಯಗಳು ಇರಲಿದ್ದು, ರಾಷ್ಟ್ರಪತಿ ಭವನದ ಆಡುಗೆ ಕೋಣೆಯಲ್ಲೇ ತಯಾರಿ ನಡೆದಿದೆ. ರಾಜಾಬೋಗ್, ಸಮೋಸ, ದಾಲ್ ರೈಸಿನಾ ಸೇರಿದಂತೆ ವಿವಿಧ ಖಾದ್ಯಗಳು ಸಿದ್ಧವಾಗುತ್ತಿದೆ. ಬಹುಮುಖ್ಯವಾಗಿ ದಾಲ್ ರೈಸಿನಾ ಸಿದ್ಧ ಪಡಿಸಲು 48 ಗಂಟೆಗಳ ಅವಧಿ ಅಗತ್ಯವಿದ್ದು, ಈಗಾಗಲೇ ತಯಾರಿ ಆರಂಭವಾಗಿದೆ.

  • ಲೋಕ ಸಮರ ಎಫೆಕ್ಟ್! – ಇಂದಿರಾ ಕ್ಯಾಂಟೀನ್ ಮೆನು ಕೊಂಚ ಚೇಂಜ್

    ಲೋಕ ಸಮರ ಎಫೆಕ್ಟ್! – ಇಂದಿರಾ ಕ್ಯಾಂಟೀನ್ ಮೆನು ಕೊಂಚ ಚೇಂಜ್

    ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದ್ದು, ರುಚಿಕರ ಊಟ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಬ್ರೇಕ್ ಫಾಸ್ಟ್ ಸಮಯದಲ್ಲಿ ನೀಡುತ್ತಿದ್ದ ಚಟ್ನಿ ಬೇಸಿಗೆಯಲ್ಲಿ ಬಹುಬೇಗ ಹಾಳಾಗುತ್ತೆ ಎಂಬ ಕಾರಣದಿಂದ ಚಟ್ನಿ ಬದಲಾಗಿ ಇಡ್ಲಿ ಜೊತೆ ಗಟ್ಟಿ ಸಾಂಬರ್ ಕೊಡಲಿದ್ದಾರೆ. ವಾರಕ್ಕೆ ಎರಡು ದಿನ ಖಾರಬಾತ್ ಸಿಗಲಿದೆ. ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು. ಬಿಸಿಬೇಳೆ ಬಾತ್‍ಗೆ ಖಾರಬೂದಿ ಸಹ ಕೊಡಲು ತೀರ್ಮಾನಿಸಲಾಗಿದೆ. ಇನ್ನು ಸಾಂಬಾರ್‍ನಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾಡಲಾಗುತ್ತಿತ್ತು. ಈಗ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ನಿರ್ಧರಿಸಿದ್ದಾರೆ.

    ರಾತ್ರಿ ಊಟವೂ ಸಹ ಪಲಾವ್, ಅನ್ನಸಾಂಬರ್ ಸಿಗಲಿದೆ. ಮೊದಲು ರಾತ್ರಿ ವೇಳೆ ಪಲಾವ್ ಅಥವಾ ಅನ್ನಸಾಂಬಾರ್ ಇತ್ತು. ಈಗ ಎರಡು ಇರುತ್ತೆ. ಸದ್ಯಕ್ಕಂತೂ ಈ ಬದಲಾವಣೆ ಫಲಾನುಭವಿಗಳಿಗೆ ಖುಷಿ ತಂದಿದೆ. ಇದು ಬಡವರಿಗೆ ಬಗೆ ಬಗೆಯ ಊಟ ಕೊಟ್ಟು ಮತಗಿಟ್ಟಿಸುವ ಚಿಂತನೆಯ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಚುನಾವಣೆ ಬಳಿಕವೂ ಇದೇ ಗುಣಮಟ್ಟ ಕಾಯ್ತು ಕೊಳ್ಳುತ್ತರಾ ಕಾದು ನೋಡಬೇಕಿದೆ.

  • ಮೆನುವಿನಲ್ಲಿ ಗೋಮಾಂಸ ಇಲ್ಲದ್ದಕ್ಕೆ ಮದ್ವೆ ಕ್ಯಾನ್ಸಲ್!

    ಮೆನುವಿನಲ್ಲಿ ಗೋಮಾಂಸ ಇಲ್ಲದ್ದಕ್ಕೆ ಮದ್ವೆ ಕ್ಯಾನ್ಸಲ್!

    ಮುಜಾಫರ್‍ನಗರ: ಮದುವೆ ಊಟದ ಮೆನುವಿನಲ್ಲಿ ಗೋಮಾಂಸ ಇಲ್ಲವೆಂದು ವರನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ವಿಲಕ್ಷಣ ಘಟನೆ ಉತ್ತರಪ್ರದೇಶದ ರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ದರಿಯಾಗಾರ್ಹ್ ಗ್ರಾಮದಲ್ಲಿ ನಡೆದಿದ್ದು, ವರದಿ ಪ್ರಕಾರ, ವರನ ಕಡೆಯವರು ಮದುವೆ ಊಟೋಪಚಾರದಲ್ಲಿ ಗೋ ಮಾಂಸ ಬಡಿಸಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಗೋ ಮಾಂಸ ಮಾಡಿ ಬಂದಂತಹ ಅತಿಥಿಗಳಿಗೆ ಬಡಿಸಬೇಕು. ಇಲ್ಲವೆಂದಲ್ಲಿ ವರದಕ್ಷಿಣೆಯಾಗಿ ಕಾರು ನೀಡಬೇಕು. ಒಂದು ವೇಳೆ ಇವೆರಡೂ ಬೇಡಿಕೆ ಈಡೇರದೇ ಇದ್ದರೆ ಮದುವೆ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಊಟದಲ್ಲಿ ಗೋಮಾಂಸ ಇಲ್ಲದ್ದಕ್ಕೆ ಈಗ ಮದುವೆಯನ್ನೇ ಮುರಿದಿದ್ದಾರೆ.

    ಈ ಬಗ್ಗೆ ವಧುವಿನ ತಾಯಿ ರಾಷ್ಟ್ರೀಯ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿ, ವರನ ಕಡೆಯವರು ಗೋ ಮಾಂಸ ಇಲ್ಲವೇ ಕಾರು ನೀಡಬೇಕು ಅಂತಾ ಬೇಡಿಕೆ ಇಟ್ಟಿದ್ದರು. ಕಾರು ನೀಡಲು ನಮ್ಮಿಂದ ಸಾಧ್ಯವಿಲ್ಲ. ಇನ್ನು ಸರ್ಕಾರ ಈಗಾಗಲೇ ರಾಜ್ಯದಲ್ಲಿ ಗೋಮಾಂಸ ನಿಷೇಧಿಸಿದೆ. ಈ ಮಧ್ಯೆ ನಾವು ಹೇಗೆ ಗೋಮಾಂಸ ಮಾಡಿ ಅತಿಥಿಗಳಿಗೆ ಬಡಿಸಲು ಸಾಧ್ಯ. ಹೀಗಾಗಿ ವರನ ಕಡೆಯವರೇ ನಮಗೆ ಈ ಮದುವೆ ಬೇಡ ಎಂದಿದ್ದಾರೆ ಅಂತಾ ಹೇಳಿದ್ದಾರೆ.

    ಸದ್ಯ ಗೋಮಾಂಸದ ವಿಚಾರ ಮುಂದಿಟ್ಟು ಮದುವೆ ಮುರಿದ ವರನ ಸಂಬಂಧಿಕರ ವಿರುದ್ಧ ಪಾಟ್ವಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.