Tag: mentally ill

  • ಬಟ್ಟೆ ಬಿಚ್ಕೊಂಡ್ ಪಿಜಿಗೆ ನುಗ್ಗಿದ ವ್ಯಕ್ತಿ- ದಾವಣಗೆರೆಯಲ್ಲಿ ಮಾನಸಿಕ ಅಸ್ವಸ್ಥನ ಅವಾಂತರ

    ಬಟ್ಟೆ ಬಿಚ್ಕೊಂಡ್ ಪಿಜಿಗೆ ನುಗ್ಗಿದ ವ್ಯಕ್ತಿ- ದಾವಣಗೆರೆಯಲ್ಲಿ ಮಾನಸಿಕ ಅಸ್ವಸ್ಥನ ಅವಾಂತರ

    ದಾವಣಗೆರೆ: ಯುವತಿಯರಿರುವ ಪಿಜೆಗೆ ಸಂಪೂರ್ಣ ಬೆತ್ತಲಾಗಿ ಅನಾಮಿಕ ವ್ಯಕ್ತಿಯೊಬ್ಬ ನುಗ್ಗಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಪಿಜೆ ಬಡಾವಣೆಯಲ್ಲಿರುವ ಮಹಿಳಾ ಪಿಜಿಯೊಳಗೆ ಭಾನುವಾರ ಮಧ್ಯಾಹ್ನ 1:30ರ ಸುಮಾರಿಗೆ ರಾಜರೋಷವಾಗಿ ಅನಾಮಿಕನೊಬ್ಬ ಬೆತ್ತಲೆಯಾಗಿ ನುಗ್ಗಿದ್ದಾನೆ. ಬೆತ್ತಲೆಯಾಗಿ ಪಿಜಿಯೊಳಗೆ ನುಗ್ಗಿದ ತಕ್ಷಣ ಯುವತಿಯರೆಲ್ಲ ಹೆದರಿ ಕಿರಿಚಿಕೊಂಡಿದ್ದಾರೆ. ಕೆಲ ಯುವತಿಯರು ರೂಂ ಬಾಗಿಲು ಹಾಕಿಕೊಂಡರೆ ಕೆಲ ಯುವತಿಯರು ಪಿಜಿಯಿಂದ ಹೊರ ಓಡಿ ಬಂದಿದ್ದಾರೆ.

    ನಗ್ನವಾಗಿ ಪಿಜಿಯೊಳಗೆ ಅನಾಮಿಕನೊಬ್ಬ ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪಿಜಿಯೊಳಗೆ ನುಗ್ಗಿದ ತಕ್ಷಣ ಅನಾಮಿಕ ವ್ಯಕ್ತಿಯನ್ನು ರೂಂ ನೊಳಗೆ ಕೂಡಿಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ.

    ತಕ್ಷಣ ಪೊಲೀಸರು ಪಿಜಿಗೆ ಆಗಮಿಸಿ ನಗ್ನ ವ್ಯಕ್ತಿಯನ್ನು ಬಂಧಿಸಿದ್ದಾರೆ. ವ್ಯಕ್ತಿ ಮಾನಸಿಕ ಅಸ್ವಸ್ಥನಾಗಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಪಿಜೆಗಳಿಗೆ ಭದ್ರತೆ ಇಲ್ಲದಿರುವುದೇ ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದೆ. ನಾಯಿ ಕೊಡೆಯಂತೆ ಬೆಳೆದು ನಿಂತಿರುವ ಪೇಯಿಂಗ್ ಗೆಸ್ಟ್ ಗಳಿಗೆ ಕಡಿವಾಣ ಹಾಕಿ ಭದ್ರತೆಯ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ರು.

    https://www.youtube.com/watch?v=rysz0NVEehg

  • ಕಾಂಪೌಂಡ್ ಜಿಗಿಯಲು ಹೋಗಿ ಗೋಡೆಯ ಸರಳುಗಳಿಗೆ ಸಿಕ್ಕಿ ಯುವಕ ಸಾವು

    ಕಾಂಪೌಂಡ್ ಜಿಗಿಯಲು ಹೋಗಿ ಗೋಡೆಯ ಸರಳುಗಳಿಗೆ ಸಿಕ್ಕಿ ಯುವಕ ಸಾವು

    ಬಳ್ಳಾರಿ: ಮಾನಸಿಕ ಅಸ್ವಸ್ಥನೊಬ್ಬ ಕಂಪೌಂಡ್ ಜಿಗಿಯಲು ಹೋಗಿ ಗೋಡೆಯ ಕಬ್ಬಿಣದ ಸರಳುಗಳಿಗೆ ತಲೆ ಸಿಲುಕಿಕೊಂಡು ಸಾವನ್ನಪ್ಪಿದ್ದಾನೆ.

    ಬಳ್ಳಾರಿಯ ಎಸ್‍ಬಿಐ ಬ್ಯಾಂಕ್‍ನ ಮುಂಭಾಗದ ಕಾಂಪೌಂಡ್ ಜಿಗಿಯಲು ಹೋದಾಗ ಸರಳುಗಳ ಮಧ್ಯೆ ತಲೆ ಸಿಲುಕಿಕೊಂಡ ಪರಿಣಾಮ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಾನಸಿಕ ಅಸ್ವಸ್ಥ ತನ್ನ ಹುಚ್ಚಾಟದಿಂದಲೇ ಪ್ರಾಣ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಆದರೆ ಸಾವನ್ನಪ್ಪಿದ ಯುವಕನ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

    ಸ್ಥಳಕ್ಕೆ ಬ್ರೂಸ್ ಪೇಟೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿ ಶವವನ್ನು ಪಂಚನಾಮೆಗೆ ಕಳುಹಿಸಿದ್ದಾರೆ. ಈ ಕುರಿತು ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.