Tag: Mentally ill person

  • ಕಾರವಾರ | ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ಕಾರವಾರ | ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ಕಾರವಾರ: ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.

    ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ಮಾನಸಿಕ ಅಸ್ವಸ್ಥ.ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

    ವಿನಾಯಕನ ತಂದೆ ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದಡಿ ವಿನಾಯಕನಿಗೆ ಪೋಸ್ಟ್ ಮ್ಯಾನ್ ಕೆಲಸ ನೀಡಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ವಿನಾಯಕ ಮಾನಸಿಕ ಅಸ್ವಸ್ಥನಾಗಿದ್ದು, ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುತ್ತಿದ್ದ. ಹೀಗಾಗಿ ಜಮೀನಿನ ಮಧ್ಯೆ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕಾಲಿಗೆ ಸರಪಳಿ ಹಾಕಿ ಮಾನಸಿಕ ಅಸ್ವಸ್ಥನನ್ನು ಕುಟುಂಬದ ಸದಸ್ಯರು ಕೂಡಿ ಹಾಕಿದ್ದರು.

    ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರದಲ್ಲಿ ಮಂಗಳವಾರ ರಾತ್ರಿ ರಕ್ಷಣೆ ಮಾಡಿದ್ದಾರೆ. ಸದ್ಯ ಆತನನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸಿಕೊಡುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಇದನ್ನೂ ಓದಿ: ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

  • ಹೈಟೆನ್ಷನ್ ಟವರ್ ಏರಿ ರಂಪಾಟ – ಇಳಿಸಲು ಅಗ್ನಿಶಾಮಕ ಸಿಬ್ಬಂದಿಯಿಂದ ಹರಸಾಹಸ

    ಹೈಟೆನ್ಷನ್ ಟವರ್ ಏರಿ ರಂಪಾಟ – ಇಳಿಸಲು ಅಗ್ನಿಶಾಮಕ ಸಿಬ್ಬಂದಿಯಿಂದ ಹರಸಾಹಸ

    ರಾಮನಗರ: ಮಾನಸಿಕ ಅಸ್ವಸ್ಥನೋರ್ವ ಹೈಟೆನ್ಷನ್ ವಿದ್ಯುತ್ ಕಂಬವೇರಿ ಸತತ ನಾಲ್ಕು ಗಂಟೆಗೂ ಹೆಚ್ಚು ಕಾಲ ರಂಪಾಟ ನಡೆಸಿದ್ದು, ಆತನನ್ನು ಕೆಳಗಿಳಿಸಲು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿರುವ ಘಟನೆ ಮಾಗಡಿ ತಾಲೂಕಿನ ತಿಪ್ಪಸಂದ್ರದಲ್ಲಿ ನಡೆದಿದೆ.

    ತಮಿಳುನಾಡು ಮೂಲದ ಸುಮಾರು 35 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಬೆಳಿಗ್ಗೆ 9ಗಂಟೆ ವೇಳೆಗೆ ತಿಪ್ಪಸಂದ್ರ ಗ್ರಾಮದ ಹೊರವಲಯದಲ್ಲಿನ ಹೈಟೆನ್ಷನ್ ವಿದ್ಯುತ್ ಕಂಬವನ್ನು ಏರಿದ್ದಾನೆ. ಬೆಳಿಗ್ಗೆ ಆತ ಹೈಟೆನ್ಷನ್ ಕಂಬವೇರುತ್ತಿರುವುದನ್ನ ಕಂಡ ಸ್ಥಳೀಯರು ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೂಡಲೇ ವಿದ್ಯುತ್ ಕಡಿತಗೊಳಿಸಲಾಗಿದೆ. ಇದೇ ವೇಳೆ ವಿದ್ಯುತ್ ಕಂಬದ ತುತ್ತ ತುದಿಗೇರಿದ ವ್ಯಕ್ತಿ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದನು. ಆದರೆ ವಿದ್ಯುತ್ ಕಡಿತಗೊಂಡಿದ್ದ ಕಾರಣಕ್ಕೆ ಯಾವುದೇ ಅನಾಹುತ ಸಂಭವಿಸಿಲ್ಲ.

    ಹೈಟೆನ್ಷನ್ ಕಂಬವೇರಿದ ವ್ಯಕ್ತಿ ಸುಮಾರು ನಾಲ್ಕು ಗಂಟೆಗಳ ಕಾಲ ಕಂಬದ ಮೇಲೆಯೇ ಕುಳಿತ್ತಿದ್ದನು. ಅಲ್ಲದೇ ವಿದ್ಯುತ್ ತಂತಿಯನ್ನ ಹಿಡಿದು ಮಧ್ಯಕ್ಕೆ ಸಾಗುವ ಯತ್ನವನ್ನು ಕೂಡ ನಡೆಸಿದ್ದನು. ಸಾರ್ವಜನಿಕರು ಆತನ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರೂ ಆತ ಮಾತ್ರ ಕೆಳಗಿಳಿಯಲಿಲ್ಲ. ಅಲ್ಲದೇ ಕೆಲವು ಬಾರಿ ಅರ್ಧ ಕಂಬ ಇಳಿದು ಮತ್ತೆ ಕಂಬದ ತುತ್ತ ತುದಿಗೇರಿ ಕುಳಿತುಕೊಳ್ಳುತ್ತಿದ್ದನು. ಕಂಬವನ್ನ ಯಾರಾದರೂ ಸಾರ್ವಜನಿಕರು ಹತ್ತಲು ಮುಂದಾದರೆ ಕಂಬದಿಂದ ತಂತಿಯ ಮೇಲೇರಿ ಹೆದರಿಸುತ್ತಿದ್ದನು.

    ಮಾಹಿತಿ ತಿಳಿದ ಬಳಿಕ ಕುದೂರು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮಾನಸಿಕ ಅಸ್ವಸ್ಥನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಆತ ತನ್ನ ಸ್ಥಿಮಿತ ಕಳೆದುಕೊಂಡಿರುವ ಹಿನ್ನೆಲೆ ಆತನನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ.