Tag: mentally ill

  • ಕಾರವಾರ | ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ಕಾರವಾರ | ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ

    ಕಾರವಾರ: ಕಾಲಿಗೆ ಸರಪಳಿ ಕಟ್ಟಿ ಗೃಹ ಬಂಧನದಲ್ಲಿರಿಸಿದ್ದ ಮಾನಸಿಕ ಅಸ್ವಸ್ಥನನ್ನು ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ದಾಂಡೇಲಿ (Dandeli) ತಾಲೂಕಿನ ಆಲೂರು ಗ್ರಾಮದಲ್ಲಿ ನಡೆದಿದೆ.

    ಆಲೂರು ಗ್ರಾಮದ ನಿವಾಸಿ ವಿನಾಯಕ ವಸಂತ ಸೋನಶೇಟ್ ಮಾನಸಿಕ ಅಸ್ವಸ್ಥ.ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

    ವಿನಾಯಕನ ತಂದೆ ಅಂಚೆ ಇಲಾಖೆಯಲ್ಲಿ ಕೆಲಸದಲ್ಲಿದ್ದಾಗಲೇ ಮೃತಪಟ್ಟಿದ್ದರು. ಬಳಿಕ ಅನುಕಂಪದ ಆಧಾರದಡಿ ವಿನಾಯಕನಿಗೆ ಪೋಸ್ಟ್ ಮ್ಯಾನ್ ಕೆಲಸ ನೀಡಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ವಿನಾಯಕ ಮಾನಸಿಕ ಅಸ್ವಸ್ಥನಾಗಿದ್ದು, ತಮ್ಮ ಕಬ್ಬಿನ ಗದ್ದೆಗೆ ಬೆಂಕಿ ಹಚ್ಚುತ್ತಿದ್ದ. ಹೀಗಾಗಿ ಜಮೀನಿನ ಮಧ್ಯೆ ವಾಸಕ್ಕೂ ಯೋಗ್ಯವಲ್ಲದ ಕಟ್ಟಡದಲ್ಲಿ ಕಾಲಿಗೆ ಸರಪಳಿ ಹಾಕಿ ಮಾನಸಿಕ ಅಸ್ವಸ್ಥನನ್ನು ಕುಟುಂಬದ ಸದಸ್ಯರು ಕೂಡಿ ಹಾಕಿದ್ದರು.

    ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ತಾಲೂಕಾಡಳಿತದ ಸಹಕಾರದಲ್ಲಿ ಮಂಗಳವಾರ ರಾತ್ರಿ ರಕ್ಷಣೆ ಮಾಡಿದ್ದಾರೆ. ಸದ್ಯ ಆತನನ್ನು ದಾಂಡೇಲಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಾನಸಿಕ ಚಿಕಿತ್ಸಾ ಆಸ್ಪತ್ರೆಗೆ ಕಳುಹಿಸಿಕೊಡುವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.ಇದನ್ನೂ ಓದಿ: ಗೋವಾದಲ್ಲಿ ಇಸ್ರೇಲಿಗನ ಜೊತೆ ಪ್ರೀತಿ – 7 ವರ್ಷ ಲಿವ್‌ಇನ್, ಬಳಿಕ ಪ್ರಿಯಕರನ ಬಿಟ್ಟು ಗುಹೆ ಸೇರಿದ್ದ ರಷ್ಯಾ ಮಹಿಳೆ

  • ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

    ಕಿರಿಯ ಮಗನ ಮದುವೆಗೆ ಅಡ್ಡಿಯಾಗುತ್ತೆ ಎಂದು ಮಾನಸಿಕ ಅಸ್ವಸ್ಥ ಮಗನನ್ನೇ ಕೊಂದ ತಂದೆ

    ಬೆಳಗಾವಿ: ಕಳೆದ ಮೇ 31ರಂದು ಪಟ್ಟಣದ ಹೊರವಲಯದ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಯುವಕನ ಅಸಹಜ ಸಾವಿನ ಪ್ರಕರಣವನ್ನು ಬೇಧಿಸಿರುವ ಖಾನಾಪುರ (Khanapura) ಠಾಣೆಯ ಪೊಲೀಸರು ಪ್ರಕರಣದ ಆರೋಪಿಯನ್ನು ಮಂಗಳವಾರ ಬಂಧಿಸಿದ್ದಾರೆ.

    ಮಾನಸಿಕವಾಗಿ ಅಸ್ವಸ್ಥನಾಗಿದ್ದ (Mentally Ill) ತನ್ನ ಹಿರಿಯ ಮಗ ಬದುಕಿರುವವರೆಗೆ ಕಿರಿಯ ಮಗನ ಮದುವೆಗೆ ಅಡಚಣೆಯಾಗುತ್ತದೆ ಎಂದು ಭಾವಿಸಿ ತಂದೆಯೇ ತನ್ನ ಹಿರಿಯ ಮಗನಿಗೆ ವಿಷವುಣಿಸಿ ಕೊಲೆಗೈದಿರುವುದಾಗಿ ಪೊಲೀಸರ ತನಿಖೆಯಲ್ಲಿ ಧೃಡಪಟ್ಟಿದೆ. ಬಂಧಿತ ತಂದೆಯನ್ನು ಪೊಲೀಸರು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

    ಏನಿದು ಘಟನೆ?
    ಖಾನಾಪುರ ಪಟ್ಟಣದ ಬಳಿ ಮಲಪ್ರಭಾ ನದಿತೀರದಲ್ಲಿ ಪತ್ತೆಯಾದ ಅಪರಿಚಿತ ಶವದ ಮರಣೋತ್ತರ ತನಿಖೆ ನಡೆಸಿದ್ದ ಪೊಲೀಸರಿಗೆ ಮೃತ ವ್ಯಕ್ತಿ ವಿಷ ಸೇವಿಸಿದ್ದು, ಜೊತೆಗೆ ಆತನ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವುದು ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಅನುಮಾನಾಸ್ಪದ ಸಾವು ಎಂದು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

    ಪ್ರಕರಣ ದಾಖಲಾಗಿ ಕೆಲದಿನಗಳ ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆತ ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದ ನಿವಾಸಿ ನಿಖಿಲ್ ರಾಜಕುಮಾರ ಮಗದುಮ್ಮ (24) ಎಂದು ಪೊಲೀಸರಿಗೆ ತಿಳಿದುಬಂದಿತ್ತು. ನಿಖಿಲ್ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ಜುಲೈ 7ರಂದು ಆತನ ಚಿಕ್ಕಪ್ಪ ಸಂತೋಷ್ ಮಗದುಮ್ಮ ಅವರನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ ಅವರು ತಮ್ಮ ಅಣ್ಣ ರಾಜಕುಮಾರ ಶಂಕರ ಮಗದುಮ್ಮ (45) ನಿಖಿಲ್ ಕೊಲೆ ಮಾಡಿರುವುದಾಗಿ ತಿಳಿಸಿ ರಾಜಕುಮಾರ ವಿರುದ್ಧ ದೂರು ನೀಡಿದ್ದರು. ಇದನ್ನೂ ಓದಿ: ಕಾರು ಹತ್ತಿಸಿ ಮೂವರು ಮಕ್ಕಳ ಕೊಲೆಗೆ ಯತ್ನ!

    ರಾಜಕುಮಾರ ಅವರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದ ಪೊಲೀಸರು ಅವರನ್ನು ವಿಚಾರಣೆ ನಡೆಸಿದಾಗ ತಮ್ಮ ಹಿರಿಯ ಮಗ ನಿಖಿಲ್ ಮಾನಸಿಕ ಅಸ್ವಸ್ಥನಿದ್ದು, ಆತ ಬದುಕಿರುವವರೆಗೆ ಕಿರಿಯ ಮಗ ನಿತೀಶ್‌ನ ಮದುವೆ ಮಾಡಲು ತೊಂದರೆ ಆಗುತ್ತದೆ ಎಂದು ಭಾವಿಸಿ ಆತನನ್ನು ಮೇ 30ರಂದು ಬೋರಗಲ್ ಗ್ರಾಮದ ತಮ್ಮ ಮನೆಯಿಂದ ಪಟ್ಟಣದ ಮಲಪ್ರಭಾ ನದಿಯ ಬಳಿ ಕರೆದುಕೊಂಡು ಹೋಗಿ ವಿಷ ಕುಡಿಸಿ, ಗಿಡಕ್ಕೆ ಜೋರಾಗಿ ತಲೆ ಹಾಯಿಸಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

    ಬೆಳಗಾವಿ ಎಸ್‌ಪಿ ಸಂಜೀವ್ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ನಿಖಿಲ್ ಅವರ ಕೊಲೆ ಪ್ರಕರಣವನ್ನು ಬೇಧಿಸಿರುವ ಖಾನಾಪುರ ಠಾಣೆಯ ಪಿಐ ಮಂಜುನಾಥ್ ನಾಯ್ಕ್ ಹಾಗೂ ಸಿಬ್ಬಂದಿ ರಾಜಕುಮಾರ ಶಂಕರ್ ಮಗದುಮ್ಮ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಧೀಶರ ಆದೇಶದನ್ವಯ ರಾಜಕುಮಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹಾವು ಕಚ್ಚಿಸಿ ಉದ್ಯಮಿಯ ಕೊಲೆ – ಸಹಜ ಸಾವೆಂದು ಬಿಂಬಿಸಿದ ಹಾವಾಡಿಗ ಅರೆಸ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು

    ನಿನ್ನ ಹೆಸರು ಮೊಹಮ್ಮದ್? – ಬಿಜೆಪಿ ಮಾಜಿ ಕಾರ್ಪೊರೇಟರ್ ಪತಿಯಿಂದ ಹಲ್ಲೆಗೊಳಗಾದ ವೃದ್ಧ ಸಾವು

    ಭೋಪಾಲ್: ಮಧ್ಯಪ್ರದೇಶದಲ್ಲಿ ನಾಪತ್ತೆಯಾಗಿದ್ದ 65 ವರ್ಷದ ಮಾನಸಿಕ ಅಸ್ವಸ್ಥನೊಬ್ಬ ಶವವಾಗಿ ಪತ್ತೆಯಾಗಿದ್ದು, ಬಳಿಕ ಅದನ್ನು ಕೊಲೆ ಎಂದು ಪ್ರಕರಣ ದಾಖಲಿಸಲಾಗಿದೆ.

    ಶವವಾಗಿ ಪತ್ತೆಯಾದ ಮಾನಸಿಕ ಅಸ್ವಸ್ಥನಿಗೆ ವ್ಯಕ್ತಿಯೊಬ್ಬ ಮನಬಂದಂತೆ ಹಲ್ಲೆ ನಡೆಸಿರುವ ವೀಡಿಯೋವೊಂದು ದೊರಕಿದ್ದು, ಈ ಮೂಲಕ ಇದು ಕೊಲೆ ಎಂಬುದು ತಿಳಿದುಬಂದಿದೆ.

    ನಿನ್ನ ಹೆಸರು ಮೊಹಮ್ಮದ್? ಎಂದು ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥನಿಗೆ ಪ್ರಶ್ನಿಸಿ, ಆತನಿಗೆ ಉತ್ತರಿಸಲೂ ಅವಕಾಶವನ್ನೂ ನೀಡದೇ ಪದೇ ಪದೇ ಹಲ್ಲೆ ನಡೆಸಿದ್ದಾನೆ. ನೀಮಚ್ ಜಿಲ್ಲೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ವ್ಯಕ್ತಿ ಬಿಜೆಪಿ ಮಾಜಿ ಕಾರ್ಪೋರೇಟರ್ ಪತಿ ದಿನೇಶ್ ಕುಶ್ವಾ ಎಂದು ಪತ್ತೆಹಚ್ಚಲಾಗಿದೆ.

    ಕೊಲೆಯಾದ ವೃದ್ಧ ಭನ್ವರ್‌ಲಾಲ್ ಜೈನ್ ರತ್ಲಾಮ್ ಜಿಲ್ಲೆಯ ಸರ್ಸಿಯದವರು. ಧಾರ್ಮಿಕ ಕೆಲಸಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದ ವೃದ್ಧ ಮೇ 15ರಂದು ನಾಪತ್ತೆಯಾಗಿದ್ದರು. ಬಳಿಕ ಅವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಶುಕ್ರವಾರ ಅವರ ಮೃತದೇಹ ನೀಮಚ್ ಜಿಲ್ಲೆಯ ರಸ್ತೆ ಬಳಿ ಪತ್ತೆಯಾಗಿದೆ. ಇದನ್ನೂ ಓದಿ: ಓಮಿಕ್ರಾನ್ ಉಪತಳಿ BA-4 ಮತ್ತೊಂದು ಪ್ರಕರಣ ತಮಿಳುನಾಡಿನಲ್ಲಿ ಪತ್ತೆ

    crime

    ಭನ್ವರ್‌ಲಾಲ್ ಮೃತದೇಹದ ಅಂತ್ಯಸಂಸ್ಕಾರವನ್ನು ನೆರವೇರಿಸಿದ ಬಳಿಕ, ಕುಟುಂಬದವರಿಗೆ ವೀಡಿಯೋವೊಂದು ದೊರಕಿದೆ. ಅದರಲ್ಲಿ ದಿನೇಶ್ ಕುಶ್ವಾ ಭನ್ವರ್‌ಲಾಲ್‌ಗೆ ನಿನ್ನ ಹೆಸರೇನು? ಮೊಹಮ್ಮದ್? ಎಂದು ಪ್ರಶ್ನಿಸಿ, ಥಳಿಸಿದ್ದಾನೆ. ನಿನ್ನ ಹೆಸರನ್ನು ಸರಿಯಾಗಿ ಹೇಳು, ನಿನ್ನ ಆಧಾರ್ ಕಾರ್ಡ್ ತೋರಿಸು ಎಂದು ಬಲವಂತಪಡಿಸಿ, ಹಲ್ಲೆ ನಡೆಸಿದ್ದಾನೆ.

    ವೀಡಿಯೋ ನೋಡಿ ತಬ್ಬಿಬ್ಬಾದ ಜೈನ್ ಕುಟುಂಬ ಸದಸ್ಯರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಹಲ್ಲೆ ನಡೆಸಿರುವ ವ್ಯಕ್ತಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ತಕ್ಷಣ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಈ ವೀಡಿಯೋವನ್ನು ಗುರುವಾರ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿ ಶವದೊಂದಿಗೆ 10 ದಿನ ಮನೆಯಲ್ಲೇ ಕಾಲ ಕಳೆದ ಮಗಳು

    POLICE JEEP

    ವೀಡಿಯೋ ಹೊರ ಬೀಳುತ್ತಿದ್ದಂತೆ ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಹತ್ಯೆ ಹಾಗೂ ನಿರ್ಲಕ್ಷ್ಯದ ಸಾವಿನ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

  • ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ತಂದೆಯನ್ನು ಕೊಂದ ಮಾನಸಿಕ ಅಸ್ವಸ್ಥೆ ಅರೆಸ್ಟ್

    ಪಣಜಿ: ಮಾನಸಿಕ ಅಸ್ವಸ್ಥೆಯೊಬ್ಬಳು ತನ್ನ ತಂದೆಯನ್ನು ಕೊಂದು ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಗೋವಾದಲ್ಲಿ ನಡೆದಿದೆ.

    ದಕ್ಷಿಣ ಗೋವಾದ ಅಂಬೌಲಿಮ್ ಗ್ರಾಮದಲ್ಲಿ ಮಾನಸಿಕ ರೋಗದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬಳು 76 ವರ್ಷದ ತಂದೆಯನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು

    POLICE JEEP

    ಕಾರಣವೇನು?
    ಆರೋಪಿ ಮರಿಯಾನ್ನೆ ಕಾರ್ಡೋಸೊ ಭಾನುವಾರ ಚರ್ಚ್‍ನಲ್ಲಿ ಈಸ್ಟರ್‌ಗಾಗಿ ಪ್ರಾರ್ಥನೆ ಸಲ್ಲಿಸಿ ನಂತರ ಮನೆಗೆ ಹೋಗಿದ್ದಾಳೆ. ತಂದೆ ಫಿಡೆಲಿಸ್ ಮರಿಯಾನೋ ಪೆಡ್ಡಾ ಮನೆಯಲ್ಲಿ ಮಲಗಿಕೊಂಡಿದ್ದರು. ಈ ವೇಳೆ ಮನೆಗೆ ಹೋದ ಕಾರ್ಡೋಸೊ ಮರದ ದೊಣ್ಣೆಯಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾಳೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಮಯದಲ್ಲಿ ಆಕೆಯ ತಾಯಿ ಸಹ ಮನೆಯಲ್ಲಿ ಇರಲಿಲ್ಲ ಎಂದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆರೋಪಿಯನ್ನು ಬಂಧಿಸಿ ಆಕೆ ಮೊದಲು ಚಿಕಿತ್ಸೆ ಪಡೆಯುತ್ತಿದ್ದ ಮನೋವೈದ್ಯ ಸಂಸ್ಥೆಗೆ ಕಳುಹಿಸಲಾಗಿದೆ. 2000ರಲ್ಲಿ ಕಾರ್ಡೋಸೊ ವಿಚ್ಛೇದನ ಪಡೆದಿದ್ದು, ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದಳು. ಆದರೆ ಈ ಕೊಲೆಗೆ ಏನು ಕಾರಣ ಎಂಬುದಕ್ಕೆ ಯಾವುದೇ ರೀತಿಯ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಸ್ತಮೈಥುನದಿಂದ ಶ್ವಾಸಕೋಶದ ತೊಂದರೆಗೆ ಸಿಲುಕಿದ ಯುವಕ – ಎಕ್ಸ್‌ರೇ ನೋಡಿ ಶಾಕ್‌ 

    ಪ್ರಸ್ತುತ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

  • ಚಲಿಸುತ್ತಿದ್ದ ರೈಲಿಗೆ ನೂಕಿ ಮಹಿಳೆಯ ಹತ್ಯೆ – ನಾನು ದೇವರು ಎಂದ ಆರೋಪಿ

    ಚಲಿಸುತ್ತಿದ್ದ ರೈಲಿಗೆ ನೂಕಿ ಮಹಿಳೆಯ ಹತ್ಯೆ – ನಾನು ದೇವರು ಎಂದ ಆರೋಪಿ

    ವಾಷಿಂಗ್ಟನ್: ಚಲಿಸುತ್ತಿದ್ದ ರೈಲಿನ ಮುಂಭಾಗಕ್ಕೆ ಮಹಿಳೆಯೊಬ್ಬರನ್ನು ನೂಕಿದ್ದ ಕಾರಣ ಆಕೆ ಸಾವನ್ನಪ್ಪಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ನಾನು ದೇವರು. ನಾನು ಇದನ್ನು ಮಾಡಬಹುದು ಎಂಬ ಹೇಳಿಕೆ ನೀಡಿದ್ದು, ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿದೆ.

    ಶನಿವಾರ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ ಸುರಂಗಮಾರ್ಗ ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲಿನ ಎದುರು 40 ವರ್ಷದ ಏಷ್ಯನ್ ಮಹಿಳೆಯನ್ನು ಸೈಮನ್ ಮಾರ್ಷಲ್ ಎಂಬ ವ್ಯಕ್ತಿ ತಳ್ಳಿದ್ದ. ಇದರಿಂದ ಮಹಿಳೆ ರೈಲಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು. ಇದನ್ನೂ ಓದಿ: ಮೆಟ್ರೋ ರೈಲ್ವೆ ಹಳಿಗೆ ತಳ್ಳಿದ ವ್ಯಕ್ತಿ – ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

    ಕೊಲೆಯ ಸ್ಥಳದಿಂದ ವ್ಯಕ್ತಿ ಪಲಾಯನಗೈದಿದ್ದು, ನಂತರ ಒಂದು ಗಂಟೆಯ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದರು. ವರದಿಗಳ ಪ್ರಕಾರ ಆರೋಪಿ, ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಈ ಹಿಂದೆಯೂ ಆತ ದರೋಡೆ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ. ನಂತರ 2021ರ ಆಗಸ್ಟ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಎನ್ನಲಾಗಿದೆ. ಇದನ್ನೂ ಓದಿ: ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಇಬ್ಬರು ಭಾರತೀಯರು ಸಾವು

    ಪೊಲೀಸರು ಆರೋಪಿಯನ್ನು ಪ್ರಶ್ನಿಸಿದಾಗ ಆತ ನಾನು ದೇವರು. ನಾನು ಇದನ್ನು ಮಾಡಬಲ್ಲೆ ಎಂದು ಉತ್ತರಿಸಿದ್ದಾನೆ.

  • ಮಾನಸಿಕ ಅಸ್ವಸ್ಥನಿಂದ ಬಾಟಲಿ ಹಿಡಿದು ಹುಚ್ಚಾಟ

    ಮಾನಸಿಕ ಅಸ್ವಸ್ಥನಿಂದ ಬಾಟಲಿ ಹಿಡಿದು ಹುಚ್ಚಾಟ

    ಹಾವೇರಿ: ಮಾನಸಿಕ ಅಸ್ವಸ್ಥನೊಬ್ಬ ಕೈಯಲ್ಲಿ ಬಾಟಲಿ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಯತ್ನ ನಡೆಸಿ ಹುಚ್ಚಾಟ ನಡೆಸಿದ ಘಟನೆ ಹಾವೇರಿ ನಗರದಲ್ಲಿ ನಡೆದಿದೆ.

    ಬಸವೇಶ್ವರ ನಗರ ಹಾಗೂ ವಿದ್ಯಾನಗರದ ಜನರು ಮಾನಸಿಕ ಅಸ್ವಸ್ಥನ ಹುಚ್ಚಾಟದಿಂದ ಆತಂಕಗೊಂಡಿದ್ದಾರೆ. ಪ್ರಭು ಹಿರೇಮಠ ಎಂಬ ಮಾನಸಿಕ ಅಸ್ವಸ್ಥ ಹುಚ್ಚಾಟ ನಡೆಸಿದ್ದಾನೆ. ಕೆಲವು ವರ್ಷಗಳಿಂದ ನಗರದಲ್ಲಿ ಓಡಾಡಿಕೊಂಡಿರುವ ಮಾನಸಿಕ ಅಸ್ವಸ್ಥ, ಇಂದು ಬಾಟಲಿ ಹಿಡಿದು ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ.

    ಅದೃಷ್ವಶಾತ್ ಯಾರ ಮೇಲೆಯೂ ಹಲ್ಲೆ ಆಗಿಲ್ಲ. ಮಾನಸಿಕ ಅಸ್ವಸ್ಥನಾದ್ದರಿಂದ ಪ್ರಭು, ಮೆಡಿಕಲ್ ಶಾಪ್ ಸೇರಿದಂತೆ ಕೆಲವೆಡೆ ನಿಂತವರ ಮೇಲೆ ಬಾಟಲ್‍ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಬಸವೇಶ್ವರ ನಗರ ಮತ್ತು ವಿದ್ಯಾನಗರದ ಜನರು ಗಾಬರಿಗೊಂಡಿದ್ದಾರೆ. ಆತನನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ರಸ್ತೆಗಳನ್ನು ಕಂಗನಾ ಕೆನ್ನೆಗಿಂತ ಸುಗಮವಾಗಿಸುತ್ತೇನೆ: ಇರ್ಫಾನ್ ಅನ್ಸಾರಿ

  • ಮಾನಸಿಕ ಅಸ್ವಸ್ಥನ ಮೇಲೆ ಪೊಲೀಸರ ಹಲ್ಲೆ- ಠಾಣೆ ಎದುರು ಅಲ್ಪಸಂಖ್ಯಾತ ಸಂಘಟನೆಗಳ ಪ್ರತಿಭಟನೆ

    ಮಾನಸಿಕ ಅಸ್ವಸ್ಥನ ಮೇಲೆ ಪೊಲೀಸರ ಹಲ್ಲೆ- ಠಾಣೆ ಎದುರು ಅಲ್ಪಸಂಖ್ಯಾತ ಸಂಘಟನೆಗಳ ಪ್ರತಿಭಟನೆ

    ರಾಮನಗರ: ಮಾನಸಿಕ ಅಸ್ವಸ್ಥ ಹಾಗೂ ವಿಕಲಚೇತನ ಯುವಕನ ಮೇಲಿನ ರಾಮನಗರ ಟೌನ್ ಪೊಲೀಸರ ದೌರ್ಜನ್ಯ, ಹಲ್ಲೆಯನ್ನು ಖಂಡಿಸಿ ಜಿಲ್ಲೆಯಲ್ಲಿ ಇಂದು ಅಲ್ಪಸಂಖ್ಯಾತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

    ನಗರದ ರೈಲ್ವೆ ನಿಲ್ದಾಣದಿಂದ ಟೌನ್ ಪೊಲೀಸ್ ಠಾಣೆಯ ತನಕ ಪ್ರತಿಭಟನಾ ರ‍್ಯಾಲಿ ನಡೆಸಿ ವಿಕಲಚೇತನ ಸೈಯದ್ ತೌಸಿಫ್ ಮೇಲಿನ ಹಲ್ಲೆಗೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಹತ್ತು ವರ್ಷಗಳಲ್ಲಿ ನಾಲ್ವರ ಮೇಲೆ ಇದೇ ರೀತಿ ಪೊಲೀಶರು ಹಲ್ಲೆ ನಡೆಸಿದ್ದು, ಇಲಾಖೆಯಿಂದ ಕ್ರಮ ಮಾತ್ರ ಜರುಗಿಸಿಲ್ಲ. ಇದೀಗ ತೌಸಿಫ್ ವಿಕಲಚೇತನ ಹಾಗೂ ಮಾನಸಿಕ ಅಸ್ವಸ್ಥ ಕೂಡಾ ಆಗಿದ್ದು ಆತನ ಮೇಲೆ ಹಲ್ಲೆ ನಡೆಸಿ ಪೊಲೀಸರು ಅಮಾನವೀಯ ವರ್ತನೆ ತೋರಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ತೆಗೆದುಕೊಳ್ಳುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು.

    ಇನ್ನೂ ಇದೇ ಪ್ರಕರಣದ ವಿಚಾರವಾಗಿ ಈಗಾಗಲೇ ರಾಜ್ಯ ಅಲ್ಪಸಂಖ್ಯಾತರ ಆಯೋಗವು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ 7 ದಿನಗಳಲ್ಲಿ ವರದಿ ನೀಡುವಂತೆ ನೋಟಿಸ್ ನೀಡಿದ್ದಾರೆ.

    ಸೈಯದ್ ತೌಸಿಫ್ ರಾಮನಗರದ ಯಾರಬ್ ನಗರದ ನಿವಾಸಿಯಾಗಿದ್ದಾನೆ. ತಂದೆಯ ಜೊತೆ ಗ್ಯಾರೇಜ್‍ನಲ್ಲಿ ಕೆಲಸ ಮಾಡಿ ಮನೆಗೆ ತೆರಳುತ್ತಿದ್ದ ತೌಸಿಫ್, ಕಳೆದ ಭಾನುವಾರ ರಾತ್ರಿ ನಗರಸಭೆ ಮುಂಭಾಗದಲ್ಲಿನ ಬಾಲಕಿಯರ ಹಾಸ್ಟೆಲ್ ಸಮೀಪದಲ್ಲಿ ಮೂತ್ರ ವಿಸರ್ಜನೆಗೆಂದು ತೆರಳಿದ್ದಾನೆ. ಈ ವೇಳೆ ಗಸ್ತಿನಲ್ಲಿದ್ದ ಮೂವರು ಪೊಲೀಸ್ ಪೇದೆಗಳು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ತೌಸಿಫ್‍ನ ಪೋಷಕರು ಆರೋಪಿಸಿದ್ದಾರೆ.

    ತೌಸಿಫ್‍ನ ಪೃಷ್ಠದ ಭಾಗ ಹಾಗೂ ಎರಡು ಕಾಲುಗಳು ಲಾಠಿಯಿಂದ ಹೊಡೆದಿರುವುದರಿಂದ ನೀಲಿಗಟ್ಟಿದ್ದು, ರಾಮನಗರ ಜಿಲ್ಲಾಸ್ಪತ್ರೆಗೆ ಕೂಡ ದಾಖಲಾಗಿದ್ದನು. ಈ ಘಟನೆ ಸಂಬಂಧ ಪೊಲೀಸರು ತಾವು ಹಲ್ಲೆ ನಡೆಸಿಲ್ಲ, ಆತ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಂಡಿದ್ದು ಈ ವೇಳೆ ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ ಎಂದು ಹೇಳಿದ್ದಾರೆ.

  • ಅಂಡರ್ ಪಾಸ್ ಸೇತುವೆ ವ್ಯಕ್ತಿಯ ಮೇಲೆ ಹುಚ್ಚಾಟ – ಇಳಿಸಲು ಹರಸಾಹಸ ಪಟ್ಟ ಪೊಲೀಸರು- ವಿಡಿಯೋ ವೈರಲ್

    ಅಂಡರ್ ಪಾಸ್ ಸೇತುವೆ ವ್ಯಕ್ತಿಯ ಮೇಲೆ ಹುಚ್ಚಾಟ – ಇಳಿಸಲು ಹರಸಾಹಸ ಪಟ್ಟ ಪೊಲೀಸರು- ವಿಡಿಯೋ ವೈರಲ್

    ತುಮಕೂರು: ನಗರದ ಉಪ್ಪಾರಹಳ್ಳಿ ಅಂಡರ್ ಪಾಸ್ ಸೇತುವೆ ಮೇಲೆ ಹತ್ತಿ ಮಾನಸಿಕ ಅಸ್ವಸ್ಥನೊಬ್ಬ ರಂಪಾಟ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಉಪ್ಪಾರಹಳ್ಳಿ ಅಂಡರ್ ಪಾಸ್ ಸೇತುವೆಯ ಮೆಟಲ್ ಟ್ರಾಕ್ ಮೇಲೆ ಹತ್ತಿ ಕುಳಿತು ಮಾನಸಿಕ ಅಸ್ವಸ್ಥನೊಬ್ಬ ಹುಚ್ಚಾಟ ಮಾಡಿದ್ದಾನೆ. ಆತನ್ನು ಕೆಳಗೆ ಇಳಿಸಲು ಪೊಲೀಸರು ಹರಸಾಹಸವನ್ನೆ ಪಡಬೇಕಾಯಿತು. ಕೊನೆಗೆ ಅಂಡರ್ ಪಾಸ್ ರಸ್ತೆಯಲ್ಲಿ ಬಂದ ಬಸ್ಸೊಂದನ್ನು ನಿಲ್ಲಿಸಿ, ಅದನ್ನು ಬಳಸಿ ಮಾನಸಿಕ ಅಸ್ವಸ್ಥನನ್ನು ಪೊಲೀಸರು ಕೆಳಗಿಳಿಸಿದ್ದಾರೆ.

    ಒಂದು ಗಂಟೆ ಪ್ರಯತ್ನ ಪಟ್ಟು ಪೊಲೀಸರು ಮಾನಸಿಕ ಅಸ್ವಸ್ಥನನ್ನು ಇಳಿಸಿದ್ದಾರೆ. ಬಳಿಕ ಮಾನಸಿಕ ಅಸ್ವಸ್ಥನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಯಿತು. ಸ್ಥಳದಲ್ಲಿದ್ದ ಕೆಲವರು ಈ ಘಟನೆಯನ್ನು ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

    https://www.youtube.com/watch?v=InDkB0FuBQA&feature=youtu.be

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಮಹಿಳೆ ಹೊಟ್ಟೆಯಲ್ಲಿತ್ತು 1.5 ಕೆ.ಜಿ ಕಬ್ಬಿಣದ ವಸ್ತುಗಳು!

    ಅಹಮದಾಬಾದ್: ಮಾನಸಿಕ ಅಸ್ವಸ್ಥೆ ಮಹಿಳೆಯೊಬ್ಬಳ ಹೊಟ್ಟೆಯಿಂದ ಸುಮಾರು 1.5 ಕೆ.ಜಿಯಷ್ಟು ಕಬ್ಬಿಣದ ವಸ್ತುಗಳನ್ನು ಅಹಮದಾಬಾದ್‍ನ ನಾಗರಿಕ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

    40 ವರ್ಷದ ಸಂಗೀತಾ ಹೊಟ್ಟೆಯಲ್ಲಿ ಕಬ್ಬಿಣದ ವಸ್ತುಗಳು ಪತ್ತೆಯಾಗಿದೆ. ಮಹಿಳೆಯು ಮೂಲತಃ ಮಹಾರಾಷ್ಟ್ರದ ಶಿರಡಿ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥೆಯಾಗಿದ್ದಾಳೆ. ಕಳೆದ ಅಕ್ಟೋಬರ್ 31 ರಂದು ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರದಿಂದ ಸಂಗೀತಾಳನ್ನು ನಾಗರಿಕ ಆಸ್ಪತ್ರೆಗೆ ಚಿಕಿತ್ಸೆಗೆಂದು ವರ್ಗಾಯಿಸಲಾಗಿತ್ತು.

    ಕೆಲವು ದಿನಗಳಿಂದ ಸಂಗೀತ ಹೊಟ್ಟೆ ನೋವಿನಿಂದ ನರಳುತ್ತಿದ್ದಳು. ಇದನ್ನು ಕಂಡ ವೈದ್ಯರು ಆಕೆಯನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿದಾಗ, ಹೊಟ್ಟೆಯಲ್ಲಿ ಕಬ್ಬಿಣದ ಮೊಳೆಗಳು, ಪಿನ್‍ಗಳು, ಯು-ಪಿನ್‍ಗಳು, ಬಳೆ-ಸರ, ಮಂಗಳಸೂತ್ರ ಸೇರಿದಂತೆ ಹಲವು ಕಬ್ಬಿಣದ ವಸ್ತುಗಳು ಇರುವುದು ಪತ್ತೆಯಾಗಿತ್ತು. ಅದರಲ್ಲೂ ಒಂದು ಪಿನ್ ಸಂಗೀತಾಳ ಕರಳಿಗೆ ಚುಚ್ಚಿಕೊಂಡಿದ್ದ ಕಾರಣ ತಕ್ಷಣ ಆಕೆಗೆ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯಲ್ಲಿದ್ದ ಸರಿಸುಮಾರು 1.5 ಕೆ.ಜಿ ತೂಕದ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯಲಾಯಿತು ಎಂದು ನಾಗರಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ವಿಭಾಗದ ಹಿರಿಯ ವೈದ್ಯರಾದ ಡಾ. ನಿತಿನ್ ಪಾಮರ್ ತಿಳಿಸಿದರು.

    ಮಾನಸಿಕ ಅಸ್ವಸ್ಥ ರೋಗಿಗಳಲ್ಲಿ ಅಕ್ಯುಫಾಗಿಯಾ ಎಂಬ ರೋಗ ಲಕ್ಷಣವಿರುವವರು ಕಬ್ಬಿಣದ ವಸ್ತುಗಳು ಹಾಗೂ ಚೂಪಾದ ಯಾವುದೇ ವಸ್ತುಗಳನ್ನು ತಿಂದುಬಿಡುತ್ತಾರೆ ಎಂದು ವೈದ್ಯರು ಮಾಹಿತಿ ನೀಡಿದರು.

    ಸದ್ಯ ಸಂಗೀತಾ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದು, ಆಕೆ ಗುಣಮುಖಳಾದ ಮೇಲೆ ಅವಳ ಮನೆಯವರನ್ನು ಪತ್ತೆ ಮಾಡಿ ಆಕೆಯನ್ನು ಮನೆಗೆ ಕಳುಹಿಸುತ್ತೇವೆ ಎಂದು ವೈದ್ಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ಮಗನನ್ನು ಸರಪಳಿಯಿಂದ ಕಟ್ಟಿಹಾಕಿದ ಪೋಷಕರು!

    ದಾವಣಗೆರೆ: ಗಾಂಧಿನಗರದ ಚೌಡೇಶ್ವರಿ ನಗರದಲ್ಲಿ ಪೋಷಕರು ತಮ್ಮ ಮಾನಸಿಕ ಅಸ್ವಸ್ಥ ಮಗನನ್ನು ಪ್ರಾಣಿಯಂತೆ ಕಟ್ಟಿ ಹಾಕಿದ ವಿಚಾರ ಬೆಳಕಿಗೆ ಬಂದಿದೆ.

    ಪೋಷಕರಾದ ಉಚ್ಚಂಗಪ್ಪ, ರೇಣುಕಮ್ಮ ತಮ್ಮ ಮಗನಾದ ರಘು(18)ವನ್ನು ಸರಪಳಿಯಿಂದ ಕಟ್ಟಿಹಾಕಿದ್ದಾರೆ. ರಘು ಮಾನಸಿಕ ಅಸ್ವಸ್ಥನಾಗಿದ್ದು, ಆತ ಸಾರ್ವಜನಿಕರಿಗೆ ಕಲ್ಲಿನಿಂದ ಹೊಡೆಯುತ್ತಿದ್ದ. ಅಷ್ಟೇ ಅಲ್ಲದೇ ಜನರ ಮೇಲೆ ಹಲ್ಲೆ ಮಾಡುತ್ತಿದ್ದ.

    ಈ ವರ್ತನೆಯಿಂದಾಗಿ ಬೇಸತ್ತ ಪೋಷಕರು ಸುಮಾರು 5 ತಿಂಗಳಿದಲ್ಲೂ ರಘುವಿನ ಕುತ್ತಿಗೆಗೆ ಸರಪಳಿಯನ್ನು ಸುತ್ತಿ ಕಟ್ಟಿಹಾಕಿದ್ದು, ಈಗ ಬೆಳಕಿಗೆ ಬಂದಿದೆ. ರಘುವಿನ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ಈತನನ್ನು ಅವರ ಅಜ್ಜಿ ನೋಡಿಕೊಳ್ಳುತ್ತಿದ್ದರು.