Tag: mentally disabled man

  • ಮತದಾನ ನನ್ನ ಹಕ್ಕು- ವೋಟ್ ಮಾಡಿ ಮಾದರಿಯಾದ ವಿಕಲಚೇತನ ಯುವಕ

    ಮತದಾನ ನನ್ನ ಹಕ್ಕು- ವೋಟ್ ಮಾಡಿ ಮಾದರಿಯಾದ ವಿಕಲಚೇತನ ಯುವಕ

    ಗದಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದ್ದು, ವಿಕಲಚೇತನ ಯುವಕನೊಬ್ಬ ಉತ್ಸಾಹದಿಂದ ಮತಗಟ್ಟೆಗೆ ಬಂದು ಮತ ಹಾಕುವ ಮೂಲಕ ಮತಹಾಕದೇ ಬೇಜವಾಬ್ದಾರಿ ತೋರುವವರಿಗೆ ಮಾದರಿಯಾಗಿದ್ದಾರೆ.

    ಗದಗದ ಬೆಟಗೇರಿ ಮತಗಟ್ಟೆ 49ರಲ್ಲಿ ವಿಕಲಚೇತನ ಯುವಕ ಶರಣಪ್ಪ ಮತದಾನ ಮಾಡಿದ್ದಾರೆ. ತಾಯಿ ಜೊತೆ ಆಗಮಿಸಿದ್ದ ಶರಣಪ್ಪ ತನ್ನ ಹಕ್ಕು ಚಲಾವಣೆ ಮಾಡಿ, ಬಳಿಕ ಉತ್ಸಾಹದಿಂದ ವೋಟರ್ ಐಡಿ ಪ್ರದರ್ಶಿಸಿ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ತಾಯಿ ಸಾವಿನ ನೋವಿನಲ್ಲೂ ಮತದಾನ ಮಾಡಿದ ಮಗ

    ಪ್ರಜ್ಞಾವಂತರಾಗಿದ್ದರೂ ಹಲವರು ಮತದಾನ ಮಾಡದೆ ದೂರ ಉಳಿದು ನಿರ್ಲಕ್ಷ್ಯ ತೋರುತ್ತಾರೆ. ಆದ್ರೆ ಶರಣಪ್ಪ ತನಗಿರುವ ಆರೋಗ್ಯದ ಸಮಸ್ಯೆಯ ನಡುವೆಯೂ ವ್ಹೀಲ್‌ಚೇರ್‌ನಲ್ಲಿಯೇ ಬಂದು ಮತದಾನ ಮಾಡಿದ್ದಾರೆ. ಈ ಮೂಲಕ ಭಾರತೀಯ ಪ್ರಜೆಯಾಗಿ ಮತದಾನ ಮಾಡುವುದು ನಮ್ಮ ಕರ್ತವ್ಯ ಎಂಬುದನ್ನು ಸಾರಿದ್ದಾರೆ.