Tag: mental illness

  • ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಲಕ್ನೋ: ʻಇದ್ದಕ್ಕಿದ್ದಂತೆ ಬಿಲ್ಡಿಂಗ್‌ವೊಂದರಿಂದ ಮಹಿಳೆಯ ಚೀರಾಟ ಕೇಳಿಬಂತು, ಕುತೂಹಲದಿಂದ ನೆರೆಯವರೆಲ್ಲ ಕಿಟಕಿ, ಬಾಲ್ಕನಿಯಲ್ಲಿ ನಿಂತು ಇಣುಕಿದ್ರು. ಕೆಲ ಸೆಕೆಂಡುಗಳಲ್ಲಿ ತಾಯಿ ಮಗು ಇಬ್ಬರ ದೇಹ ನೆಲ್ಲಕ್ಕೆ ರಪ್ಪನೆ ಅಪ್ಪಳಿಸಿತು, ರಸ್ತೆಗೆಲ್ಲ ರಕ್ತ ಚಿಮ್ಮಿತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ತಾಯಿ, ಮಗುವಿನ ಪ್ರಾಣ ಪಕ್ಷಿ ಹಾರಿತು. ಇದೀಗ ಈ ಘಟನೆ ಅಲ್ಲಿನ ಸ್ಥಳೀಯರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಹೃದಯ ಕಲಕುವ ಈ ಘಟನೆ ನಡೆದಿದ್ದು, ಗ್ರೇಟರ್‌ ನೋಯ್ಡಾದಲ್ಲಿ (Greater Noida).

    ಹೌದು. ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ (Sakshi Chawla) (37) ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ vs ಪಾಕ್ | 26 ಜೀವಗಳಿಗಿಂತ ಹಣಕ್ಕೆ ಅಷ್ಟೊಂದು ಮಹತ್ವವೇ? – ಅಸಾದುದ್ದೀನ್ ಓವೈಸಿ ಕಿಡಿ

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ. ಈವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಇದು ಆತ್ಮಹತ್ಯೆಯೇ. ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!

    ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಪತಿ ದರ್ಪಣ್‌ ಚಾವ್ಲಾ, ಹೆಂಡತಿಯನ್ನ ಎಬ್ಬಿಸಿ ಮಗನಿಗೆ ಔಷಧಿ ಕೊಡುವಂತೆ ಹೇಳಿದ್ದರು. ಅದರಂತೆ ಔಷಧಿ ಕೊಟ್ಟು ಬಳಿಕ ಮಗನನ್ನ ಬಾಲ್ಕನಿಗೆ ವಾಕಿಂಗ್‌ಗೆ ಕರೆದೊಯ್ದಿದ್ದಳು ಸಾಕ್ಷಿ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ದುರಂತವು ನೆರೆಹೊರೆಯವರನ್ನೂ ಬೆಚ್ಚಿಬೀಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

  • ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ

    ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿತ: ಪೊಲೀಸರಿಂದ ಮಹಿಳೆಯ ರಕ್ಷಣೆ

    ರಾಯಚೂರು: ಮಕ್ಕಳ ಕಳ್ಳಿಯೆಂದು ಮಾನಸಿಕ ಅಸ್ವಸ್ಥೆಗೆ ಥಳಿಸಿರುವ ಘಟನೆ ನಗರದ ಮಕ್ತಲಪೇಟೆ (Makthalpete) ಬಡಾವಣೆಯಲ್ಲಿ ನಡೆದಿದೆ.

    ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಾಯಚೂರು (Raichuru) ತಾಲೂಕಿನ ವಡವಟ್ಟಿ ಗ್ರಾಮದ ಮಹಿಳೆಯೆಂದು ಗುರುತಿಸಲಾಗಿದೆ.ಇದನ್ನೂ ಓದಿ: ಮೊಯಿದ್ದೀನ್ ಬಾವ ಸಹೋದರನ ಶವ ಫಲ್ಗುಣಿ ನದಿಯಲ್ಲಿ ಪತ್ತೆ

    ಮನೆಬಿಟ್ಟು ರಸ್ತೆಯಲ್ಲಿ ಓಡಾಡುತ್ತಿದ್ದಾಗ ಅಲ್ಲಿದ್ದ ಮಕ್ಕಳನ್ನು ಮುಟ್ಟಲು ಯತ್ನಿಸಿದ್ದಾಳೆ. ಈ ವೇಳೆ ಮಕ್ಕಳ ಕಳ್ಳಿಯಂದು ಭಾವಿಸಿ ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಬಡಾವಣೆಯ ನಿವಾಸಿಗಳು ಮರಕ್ಕೆ ಕಟ್ಟಿ ಥಳಿಸಿದ್ದಾರೆ.

    ಬಡಾವಣೆಯಲ್ಲಿನ ಕಟ್ಟೆಯ ಮರಕ್ಕೆ ಮಹಿಳೆಯನ್ನು ಕಟ್ಟಿ ಹಾಕಿ ವಿಚಾರಣೆ ಮಾಡಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ 112 ಪೊಲೀಸ್ ವಾಹನ ಸಿಬ್ಬಂದಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಠಾಣೆಗೆ ಕರೆದ್ಯೊಯ್ದಿದ್ದಾರೆ.

    ಮಹಿಳೆಯ ಕುಟುಂಬಸ್ಥರ ಮಾಹಿತಿ ಪಡೆದು ಸಂಬಂಧಪಟ್ಟವರಿಗೆ ಪೊಲೀಸರು ಒಪ್ಪಿಸಿದ್ದಾರೆ. ಮತ್ತೊಮ್ಮೆ ಮಹಿಳೆಯನ್ನು ಮನೆಯಿಂದ ಒಂಟಿಯಾಗಿ ಹೊರಬಿಡದಂತೆ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಚೆನ್ನೈ ಏರ್ ಶೋ ವೇಳೆ ದುರಂತ – ಬಿಸಿಲಿನ ತಾಪಕ್ಕೆ ಐವರು ಸಾವು, 230ಕ್ಕೂ ಹೆಚ್ಚು ಮಂದಿ ಅಸ್ವಸ್ಥ

  • ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ ಯೋಧನಿಂದ ನಾಲ್ಕು ಯೋಧರಿಗೆ ಗುಂಡು – ಹತ್ಯೆಯ ಹಿಂದಿನ ಕಾರಣ ರಿವೀಲ್

    ಚಿಕ್ಕೋಡಿ: ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದ ಬಿಎಸ್‍ಎಫ್ ಯೋಧ ಮಾನಸಿಕ ಅಸ್ವಸ್ಥನಾಗಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಳೆ ವಂಟಮೂರಿ ಗ್ರಾಮದ ಸತ್ಯಪ್ಪ ಸಿದ್ದಪ್ಪ ಯೋಧರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ಮೇಲೆಯೆ ಗುಂಡಿನ ದಾಳಿ ನಡೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 371 ಜೆ ಅನುಷ್ಠಾನಕ್ಕೆ ಆಗ್ರಹ: ರಾಯಚೂರು ನಗರ ಬಂದ್‍ಗೆ ಉತ್ತಮ ಪ್ರತಿಕ್ರಿಯೆ 

    ಸತ್ಯಪ್ಪ ವೈಯಕ್ತಿಕವಾಗಿ ತುಂಬಾ ಸಾಲ ಮಾಡಿಕೊಂಡಿದ್ದನು. ಅಲ್ಲದೆ ಕೌಟುಂಬಿಕ ವಿಚಾರದಲ್ಲಿಯೂ ನೆಮ್ಮದಿ ಇಲ್ಲದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಈ ಹಿನ್ನೆಲೆ ಅವನಿಗೆ ಚಿಕಿತ್ಸೆಯನ್ನು ಸಹ ಕೊಡಿಸಲಾಗಿತ್ತು ಎಂಬ ಮಾಹಿತಿ ಸಹ ತಿಳಿದುಬಂದಿದೆ.

    ಕಾರಣವೇನು?
    ಕಳೆದ ವರ್ಷ ಅಂದಾಜು 10 ಲಕ್ಷ ರೂ. ಸಾಲ ಮಾಡಿದ್ದ ಸತ್ಯಪ್ಪ ಸಾಲ ಮರಳಿ ಪಾವತಿಸುವ ಚಿಂತೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ. ಅವನ ವರ್ತನೆ ಕಂಡು ಕುಟುಂಬಸ್ಥರು ಧಾರವಾಡ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಮಾನಸಿಕ ವೈದ್ಯರಿಂದ ಕೌನ್ಸಲಿಂಗ್ ಕೂಡ ಮಾಡಿಸಿದ್ದರು. ನಂತರ ಯೋಧ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್‍ಎಫ್ ಕಚೇರಿಗೂ ಈ ಕುರಿತು ವರದಿಗಳನ್ನು ನೀಡಲಾಗಿತ್ತು.

    ಇಷ್ಟೆಲ್ಲ ವರದಿ ನೀಡಿದರೂ ಬಿಎಸ್‍ಎಫ್ ಅಧಿಕಾರಿಗಳು ಮರಳಿ ಸತ್ಯಪ್ಪನನ್ನ ಕಾರ್ಯ ನಿಯೋಜನೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತ್ತೆ ರಜೆ ನೀಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರೂ ರಜೆ ನೀಡದ್ದಕ್ಕೆ ಸತ್ಯಪ್ಪ ಮಾನಸಿಕವಾಗಿ ನೊಂದಿದ್ದ ಎನ್ನುವ ಮಾಹಿತಿಯನ್ನು ಮೃತ ಯೋಧನ ಸಂಬಂಧಿಗಳು ನೀಡಿದ್ದಾರೆ. ಇದನ್ನೂ ಓದಿ: ಹೊಟ್ಟೆ ಡುಮ್ಮ ಅಂದಿದ್ದಕ್ಕೆ ಸೂಪರ್ ಸ್ಟಾರ್ ಅಜಿತ್ ಮಾಡಿದ್ದೇನು?

    ಮಾನಸಿಕ ಅಸ್ವಸ್ಥವಾಗಿ ಚಿಕಿತ್ಸೆ ಪಡೆಯುತ್ತಿದ್ದ ಯೋಧ ಸತ್ಯಪ್ಪ ಭಾನುವಾರ ಪಂಜಾಬ್‍ನ ಅಮೃತಸರ ಅಟ್ಟಾರಿ ಗಡಿಯ ಖೇಸರ್ ಕ್ಯಾಂಪ್ ನಲ್ಲಿ ನಾಲ್ಕು ಯೋಧರ ಮೇಲೆ ಗುಂಡಿನ ದಾಳಿ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಮೃತ ಯೋಧನ ಪಾರ್ಥಿವ ಶರೀರದ ಬರುವಿಕೆಗಾಗಿ ಕುಟುಂಬಸ್ಥರು ಕಾಯುತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ

    ಕತ್ತರಿಯಲ್ಲಿ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನ- ರಕ್ತಮಡುವಿನಲ್ಲಿ ವ್ಯಕ್ತಿ ಪತ್ತೆ

    ಹೈದರಾಬಾದ್: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿ ವಿಫಲವಾಗಿ ರಕ್ತದ ಮಡುವಿನಲ್ಲಿ ಪತ್ತೆಯಾಗಿರುವ ಘಟನೆ ಹೈದರಾಬಾದ್‍ನ ಹೊರವಲಯದಲ್ಲಿರುವ ಅಬ್ದುಲ್ಲಾಪುರ್‍ಮೆಟ್‍ನ ಜೆಎನ್‍ಆರ್ ಕಾಲೋನಿಯಲ್ಲಿ ನಡೆದಿದೆ.

    ವ್ಯಕ್ತಿಯನ್ನು ನರಸಿಂಹ ಎಂದು ಗುರುತಿಸಲಾಗಿದ್ದು, ಪ್ಲಂಬರ್ ಆಗಿ ಕಾರ್ಯನಿರ್ವಹಿಸುತ್ತಿದ್ದನು. ಮಂಗಳವಾರ ರಾತ್ರಿ ವ್ಯಕ್ತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅವರ ಮನೆಯ ಎದುರುಗಡೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೆರೆಹೊರೆಯವರು ಕಂಡಿದ್ದಾರೆ. ಇದನ್ನೂ ಓದಿ: ಚರಣ್‍ಜಿತ್ ಸಿಂಗ್ ಚನ್ನಿ ಅಪ್ರಾಮಾಣಿಕ ವ್ಯಕ್ತಿ: ಅರವಿಂದ್ ಕೇಜ್ರಿವಾಲ್

    POLICE JEEP

    ಮಾನಸಿಕ ಅಸ್ವಸ್ಥ ತನ್ನ ಮನೆಯಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಆತನ ಪತ್ನಿ ಬೇರೊಬ್ಬರನ್ನು ಮದುವೆಯಾಗಿ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿದ್ದಳು. ಇದರಿಂದ ನರಸಿಂಹ ಖಿನ್ನತೆಗೆ ಒಳಗಾಗಿ ಮದ್ಯದ ಅಮಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿರುವುದು ಇದೇ ಮೊದಲಲ್ಲ. ಈ ಮುನ್ನ ತನ್ನ ಸಹೋದರಿಯ ಮನೆಯಲ್ಲಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಮತ್ತು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಕತ್ತರಿ ಹಿಡಿದು ತನ್ನ ಕತ್ತು ಸೀಳಿಕೊಳ್ಳಲು ಪ್ರಯತ್ನಿಸಿದ್ದನು.

  • ನಿಮ್ಮ ಮಗಳನ್ನ ಕೊಂದೆ, ಬಂದು ಹೆಣ ನೋಡಿ – ಮಾವನಿಗೆ ಫೋನ್ ಮಾಡಿದ ಅಳಿಯ

    ನಿಮ್ಮ ಮಗಳನ್ನ ಕೊಂದೆ, ಬಂದು ಹೆಣ ನೋಡಿ – ಮಾವನಿಗೆ ಫೋನ್ ಮಾಡಿದ ಅಳಿಯ

    – ಶವದ ಪಕ್ಕ ಕುಳಿತು ಮೊಬೈಲ್ ಗೇಮ್ ಆಡ್ತಿದ್ದ ಪತಿ

    ಜೈಪುರ: ರಾಜಸ್ಥಾನದ ಜೋಧಪುರ ನಗರದ ಮಹಾಮಂದಿರ ಠಾಣಾ ವ್ಯಾಪ್ತಿಯ ಬಿಜೆಎಸ್ ಕಾಲೋನಿಯಲ್ಲಿ ಪತಿಯೇ ಪತ್ನಿಯನ್ನ ಕೊಂದಿದ್ದಾನೆ. ಕೊಲೆಯ ಬಳಿಕ ಮಗಳ ಶವ ನೋಡಲು ಬನ್ನಿ ಎಂದು ಮಾವನಿಗೆ ಕರೆ ಮಾಡಿ ತಿಳಿಸಿದ್ದಾನೆ. ಭಾನುವಾರ ರಾತ್ರಿ ಕೊಲೆನಡೆದಿದ್ದು, ಪೊಲೀಸರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು.

    ಶಿವ ಕಂವರಾ ಪತಿ ವಿಕ್ರಂ ಸಿಂಗ್ ನಿಂದ ಕೊಲೆಯಾದ ಮಹಿಳೆ. ಕತ್ತರಿಯಿಂದ ದಾಳಿ ನಡೆಸಿ ಪತ್ನಿಯನ್ನ ಕೊಲೆಗೈದಿರೋದಾಗಿ ವಿಕ್ರಂ ಸಿಂಗ್ ಒಪ್ಪಿಕೊಂಡಿದ್ದಾನೆ. ಪತ್ನಿಯನ್ನ ಕೊಲೆ ಮಾಡಿದ ಗಳಿಗೆಯಲ್ಲಿ ತನಗೆ ಏನಾಯ್ತು ಎಂದು ಗೊತ್ತಿಲ್ಲ. ಎಲ್ಲವೂ ಅಸ್ಪಷ್ಟ, ಆದ್ರೆ ಪತ್ನಿಯನ್ನ ಕೊಲೆ ಮಾಡಿದ್ದು ನಾನೇ ಎಂದು ಸಹ ವಿಚಾರಣೆ ವೇಳೆ ವಿಕ್ರಂ ಸಿಂಗ್ ಹೇಳಿದ್ದಾನೆ. ಇದನ್ನೂ ಓದಿ: ಸೆಕ್ಸ್ ಬೇಡ ಎಂದ ಪತ್ನಿಯನ್ನೇ ಕೊಂದ ಪತಿಯ ಆರೋಪ ಸಾಬೀತು

    ಮೊಬೈಲ್ ಗೇಮ್ ಆಡ್ತಿದ್ದ: ರಾತ್ರಿ ಕೊಲೆ ಮಾಡಿದ್ದರೂ ವಿಕ್ರಂ ಸಿಂಗ್ ಪತ್ನಿಯ ಶವದ ಪಕ್ಕವೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು. ಆತ ಓಡಿ ಹೋಗುವ ಪ್ರಯತ್ನವೂ ಸಹ ಮಾಡಿಲ್ಲ. ಮನೆಯಲ್ಲಿದ್ದ ಮಕ್ಕಳಿಗೂ ಆತ ಏನು ಮಾಡಿಲ್ಲ. ಆರೋಪಿ ಮೇಲ್ನೀಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಓರ್ವ ಮಗಳು ಮತ್ತು ಮಗನಿದ್ದಾನೆ. ಇದನ್ನೂ ಓದಿ: ಸೆಕ್ಸ್‌ಗೆ ಒಪ್ಪದ ಪತ್ನಿ- ಖಿನ್ನತೆಯಿಂದ ಪತಿ ಸೂಸೈಡ್

    ನಿರುದ್ಯೋಗಿಯಾಗಿದ್ದ ಆರೋಪಿ: ವಿಕ್ರಂ ಸಿಂಗ್ ಮೂಲತಃ ಫಲೇದಿಯ ನಿವಾಸಿಯಾಗಿದ್ದು, ಬಿಜೆಎಸ್ ಕಾಲೋನಿಯಲ್ಲಿರುವ ಮನೆಯಲ್ಲಿ ಬಹಳ ದಿನಗಳಿಂದ ವಿಕ್ರಂಸಿಂಗ್ ಕುಟುಂಬ ಸಮೇತನಾಗಿ ವಾಸವಾಗಿದ್ದನು. ವಿಕ್ರಂ ಸಿಂಗ್ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದನು. ಪತ್ನಿ ಮೊದಲಿಗೆ ಮನೆಯಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸಕ್ಕೆ ಸೇರಿಕೊಂಡಿದ್ದರು. ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸ ಮಾಡೋದು ವಿಕ್ರಂಗೆ ಇಷ್ಟವಿರಲಿಲ್ಲ. ಇದನ್ನೂ ಓದಿ: ಸುಂದರ ಪತ್ನಿಯಿದ್ರೂ ಮತ್ತೊಬ್ಬಾಕೆಯ ಬಾಹುಗಳಲ್ಲಿ ಸೆರೆಯಾದವನಿಂದ ಮಡದಿಯ ಕೊಲೆ?

    2008ರಲ್ಲಿ ವಿಕ್ರಂ ಮತ್ತು ಶಿವ ಮದುವೆ ನಡೆದಿತ್ತು. ತುಂಬಾ ದಿನಗಳಿಂದ ನಿರುದ್ಯೋಗಿಯಾಗಿದ್ದ ವಿಕ್ರಂ ಪತ್ನಿ ಜೊತೆ ಸದಾ ಜಗಳ ಮಾಡುತ್ತಿದ್ದನು. ಹಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನು. ಕೊಲೆಯ ಬಳಿಕ ಮಾವ ಮತ್ತು ಪೊಲೀಸರಿಗೆ ಆತನೇ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪತಿಯಿಂದಲೇ ಪತ್ನಿ ಕೊಲೆ- 4 ದಿನದಿಂದ ಮೃತದೇಹ ಮುಂದಿಟ್ಟುಕೊಂಡು ಸಂಬಂಧಿಕರಿಂದ ಪ್ರತಿಭಟನೆ

    ಭಾನುವಾರ ಮಲಗಿದ್ದ ನನಗೆ ದಿಢೀರ್ ಎಚ್ಚರವಾಯ್ತು. ಕೂಡಲೇ ಕತ್ತರಿಯಿಂದ ಪತ್ನಿಯನ್ನ ಕೊಲೆ ಮಾಡಿದೆ. ಆ ಕ್ಷಣ ಏನಾಯ್ತು ಎಂಬುದು ನನ್ನ ಅರಿವಿಗೆ ಬರಲಿಲ್ಲ ಎಂದು ವಿಕ್ರಂ ಸಿಂಗ್ ಹೇಳಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ರವಾನಿಸಲಾಗಿದೆ. ಆರೋಪಿ ವಿಕ್ರಂ ಸಿಂಗ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ

  • ತಮಿಳಿನ ಖ್ಯಾತ ನಟನ ಮನೆಗೆ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಕರೆ

    ತಮಿಳಿನ ಖ್ಯಾತ ನಟನ ಮನೆಗೆ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಕರೆ

    – 21 ವರ್ಷದ ಮಾನಸಿಕ ರೋಗಿಯ ವಶ, ಬಿಡುಗಡೆ

    ಚೆನ್ನೈ: ತಮಿಳಿನ ಖ್ಯಾತ ನಟ ವಿಜಯ್ ಮನೆಗೆ ಹುಸಿಬಾಂಬ್ ಕರೆಯೊಂದು ಬಂದಿದೆ. ಶನಿವಾರ ಮಧ್ಯರಾತ್ರಿ ಪೊಲೀಸ್ ಕಂಟ್ರೋಲ್ ರೂಮ್‍ಗೆ ಈ ಕರೆ ಬಂದಿದ್ದು, ಚೆನ್ನೈನ ಸಾಲಿಗ್ರಾಮ್‍ನಲ್ಲಿರುವ ವಿಜಯ್ ಮನೆಗೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾರೆ.

    ಕೂಡಲೇ ಎಚ್ಚೆತ್ತ ಪೊಲೀಸರು ವಿಜಯ್ ಮನೆಗೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಹೋಗಿ ಎರಡು ಗಂಟೆಗಳ ಸತತ ಶೋಧ ನಡೆಸಿದ್ದಾರೆ. ಆದರೆ ಎಷ್ಟು ಹುಡುಕಿದರು ಬಾಂಬ್ ಪತ್ತೆಯಾಗಿಲ್ಲ. ಇದಾದ ಬಳಿಕ ಇದೊಂದು ಹುಸಿಬಾಂಬ್ ಕರೆ ಎಂದು ತಿಳಿದು ಪೊಲೀಸರು ಹಿಂದಿರುಗಿದ್ದಾರೆ.

    ಪೊಲೀಸರು ಕಂಟ್ರೋಲ್‍ಗೆ ಬಂದ ಕರೆಯನ್ನು ಟ್ರೇಸ್ ಮಾಡಿದ್ದು, ಈ ಕರೆಯನ್ನು ವಿಲ್ಲುಪುರಂ ಜಿಲ್ಲಯ ಮರಕ್ಕನಂ ನಿವಾಸಿದ 21 ವರ್ಷದ ಮಾನಸಿಕ ಅಸ್ವಸ್ಥ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈತ ಇದೇ ರೀತಿ ಹಲವಾರು ಈ ರೀತಿಯ ಕರೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಆತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆಯ ನಂತರ ಎಚ್ಚರಿಕೆ ನೀಡಿ ಮತ್ತೆ ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮರಕ್ಕನಂ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್, ಈ ಹಿಂದೆಯೂ ಕೂಡ ಈತ ಈ ರೀತಿಯ ಬೆದರಿಕೆ ಕರೆಯನ್ನು ಮಾಡಿದ್ದಾನೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ಜಯಲಲಿತಾ, ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಪುದುಚೇರಿ ರಾಜ್ಯಪಾಲ ಕಿರಣ್ ಬೇಡಿ ಅವರಿಗೆ ಇಂತಹ ಕರೆಗಳನ್ನು ಮಾಡಿದ್ದ. ಆತ 100ಗೆ ಕರೆ ಮಾಡುತ್ತಾನೆ, ಅನಾಮಧೇಯ ಬೆದರಿಕೆ ಹಾಕಿ ಕರೆಯನ್ನು ಕಟ್ ಮಾಡುತ್ತಾನೆ ಎಂದು ಹೇಳಿದ್ದಾರೆ.

    ನಾವು ಈ ಕರೆ ಬಂದ ಕೂಡಲೇ ನಂಬರ್ ಆಧಾರದ ಮೇಲೆ ವಿಳಾಸವನ್ನು ಪತ್ತೆ ಹಚ್ಚಿ ಅವನ ಮನೆಗೆ ಬಂದೆವು. ಇಲ್ಲಿಗೆ ಬಂದು ಕೇಳಿದಾಗ ನಾನೇ ಕರೆ ಮಾಡಿದ್ದು ಎಂದು ಆತ ಒಪ್ಪಿಕೊಂಡಿದ್ದಾನೆ. ಆತನ ಬಳಿ ಮೊಬೈಲ್ ಇಲ್ಲ. ಆದರೆ ಮನೆಯವರ ಫೋನ್ ಅನ್ನು ಬಳಸಿ ಈ ರೀತಿ ಕರೆ ಮಾಡಿದ್ದಾನೆ. ನಾವು ಆತನನ್ನು ಠಾಣೆಗೆ ಕರೆತಂದು ನಂತರ ಎಚ್ಚರಿಕೆ ನೀಡಿ ಬಿಟ್ಟು ಕಳುಹಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಕಳೆದ ಹದಿನೈದು ದಿನದ ಹಿಂದೆ ಟಾಲಿವುಡ್‍ನ ಸೂಪರ್ ಸ್ಟಾರ್ ರಜಿನಿಕಾಂತ್ ಮನೆಗೆ ಹುಸಿಬಾಂಬ್ ಕರೆಯೊಂದು ಬಂದಿತ್ತು. ಈ ಕರೆಯ ಜಾಡು ಹಿಡಿದ ಪೊಲೀಸರಿಗೆ ಎಂಟನೇ ತರಗತಿಯ ಬಾಲಕನಿಂದ ಕರೆ ಬಂದಿದೆ ಅನ್ನೋ ವಿಚಾರ ಗೊತ್ತಾಗಿತ್ತು. ಹುಸಿಬಾಂಬ್ ಕರೆಯಿಂದ ರಜಿನಿ ಅಭಿಮಾನಿಗಳಲ್ಲಿ ಆತಂಕ ಮನೆಮಾಡಿತ್ತು. ಈಗ ಮತ್ತೆ ವಿಜಯ್ ಮನೆಗೆ ಹುಸಿಬಾಂಬ್ ಕರೆ ಬಂದಿದೆ.

  • ಖಾಕಿ ಮಾನವೀಯತೆ – ಮಾನಸಿಕ ಅಸ್ವಸ್ಥನಿಗೆ ಕಟಿಂಗ್, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ ಪೇದೆ

    ಖಾಕಿ ಮಾನವೀಯತೆ – ಮಾನಸಿಕ ಅಸ್ವಸ್ಥನಿಗೆ ಕಟಿಂಗ್, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿದ ಪೇದೆ

    ಚಾಮರಾಜನಗರ: ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನ ಕಷ್ಟಕ್ಕೆ ಪೊಲೀಸ್ ಪೇದೆಯೊಬ್ಬರು ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.

    ಚಾಮರಾಜನಗರದ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ಶಿವಮೂರ್ತಿ ಅವರು ತಾಲೂಕಿನ ಶಿವಪುರ ಬಳಿ ಓಡಾಡುತ್ತಿದ್ದ ಮಾನಸಿಕ ಅಸ್ವಸ್ಥನಿಗೆ ಸಹಾಯ ಮಾಡಿದ್ದಾರೆ. ಆತನಿಗೆ ಕಟಿಂಗ್ ಮಾಡಿಸಿದ್ದಲ್ಲದೇ, ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ, ಗುಡಿಗೆ ಕರೆದೊಯ್ದು ದೇವರ ದರ್ಶನ ಮಾಡಿಸಿ ಅನಾಥ ಜೀವಕ್ಕೆ ನೆರವಾಗಿದ್ದಾರೆ.

    ಅಷ್ಟೇ ಅಲ್ಲದೇ ಆತನಿಗೆ ಊಟದ ವ್ಯವಸ್ಥೆ ಮಾಡಿ ಲಾಕ್‍ಡೌನ್‍ನಲ್ಲಿ ಆಹಾರ ಸಿಗದೇ ನರಳುತ್ತಿದ್ದ ಜೀವಕ್ಕೆ ನೆರವಾಗಿದ್ದಾರೆ. ಪೇದೆಗೆ ಇತರೇ ಪೊಲೀಸ್ ಸಿಬ್ಬಂದಿ ಕೂಡ ಸಾಥ್ ನೀಡಿದ್ದು, ಪೊಲೀಸರ ಮಾನವೀಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಕೇರಳ ಗಡಿ ದಾಟಲು ಯತ್ನ- ತಡೆದ ಪೊಲೀಸರ ಮೇಲೆ ಕಲ್ಲು ತೂರಾಟ

    ಕೇರಳ ಗಡಿ ದಾಟಲು ಯತ್ನ- ತಡೆದ ಪೊಲೀಸರ ಮೇಲೆ ಕಲ್ಲು ತೂರಾಟ

    ಮಂಗಳೂರು: ಕೊರೊನಾ ಮುನ್ನೆಚ್ಚರಿಕೆ ಸಲುವಾಗಿ ವಾಹನಗಳ ತಪಾಸಣೆ ಮಾಡುತ್ತಿದ್ದ ಕರ್ತವ್ಯ ನಿರತ ಪೊಲೀಸರಿಗೆ ಹಲ್ಲೆ ಮಾಡಿ ತಪ್ಪಿಸಿಕೊಂಡ ಆರೋಪಿಯನ್ನು ಬಂಧಿಸಿ, ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಪರಪ್ಪೆಯ ಸಿನಾನ್ ಬಂಧಿತ ಆರೋಪಿಯಾಗಿದ್ದಾನೆ. ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಹೆಡ್ ಕಾನ್ಸ್ ಟೇಬಲ್ ರಾಮನಾಯ್ಕ ಅವರು ಜನ ಹಾಗೂ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಸಿನಾನ್ ಮುರೂರು ಗಡಿಭಾಗಕ್ಕೆ ಬಂದು ಪೊಲೀಸರ ಮಾತನ್ನು ಕೇಳದೇ ಗಡಿ ದಾಟಲು ಯತ್ನಿಸಿದ್ದಾನೆ.

    ಗಡಿ ದಾಟದಂತೆ ಪೊಲೀಸರು ಮನವಿ ಮಾಡುತ್ತಿದ್ದಂತೆ ಏಕಾಏಕಿ ಪೋಲೀಸರ ಮೇಲೆ ಕಲ್ಲು ಬಿಸಾಡಲು ಆರಂಭಿಸಿದ್ದಾನೆ. ಪರಿಣಾಮ ಕರ್ತವ್ಯದಲ್ಲಿದ್ದ ಎ.ಎಸ್.ಐ. ಭಾಸ್ಕರ್ ಪ್ರಸಾದ್ ಹಾಗೂ ಪೋಲಿಸ್ ಸಿಬ್ಬಂದಿ ರಾಮನಾಯ್ಕ ಅವರಿಗೆ ಗಾಯಗಳಾಗಿದೆ. ಮಾತ್ರವಲ್ಲದೆ ಈತ ಸ್ಧಳದಲ್ಲಿದ್ದ ಹೈವೇ ಪಟ್ರೋಲ್ ವಾಹನಕ್ಕೂ ಕಲ್ಲು ಬಿಸಾಡಲು ಆರಂಭಿಸಿದ್ದಾನೆ.

    ಕೂಡಲೇ ವಿಷಯ ತಿಳಿದು ಸುಳ್ಯ ಎಸ್.ಐ. ಹರೀಶ್ ಕೂಡ ಮುರೂರಿಗೆ ಆಗಮಿಸಿದ್ದು, ಗಾಯಾಳು ಪೊಲೀಸರಿಗೆ ಚಿಕಿತ್ಸೆ ನೀಡಲಾಗಿದೆ. ಕಲ್ಲು ಹೊಡೆದ ಬಳಿಕ ಆರೋಪಿ ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿ ಬಂಧಿಸಿದ್ದಾರೆ.

    ಬಂಧಿತ ಸಿನಾನ್ ಮಾನಸಿಕ ಅಸ್ವಸ್ಥನಾಗಿರುವ ಕಾರಣದಿಂದ ಪ್ರಕರಣ ದಾಖಲಿಸಿಕೊಂಡು ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದಾರೆ.

  • ಬಸ್ ನಿಲ್ದಾಣದಲ್ಲಿರುತ್ತಿದ್ದ ವ್ಯಕ್ತಿಯನ್ನ ಬದಲಾಯಿಸಿದ ರೊಬೆನ್

    ಬಸ್ ನಿಲ್ದಾಣದಲ್ಲಿರುತ್ತಿದ್ದ ವ್ಯಕ್ತಿಯನ್ನ ಬದಲಾಯಿಸಿದ ರೊಬೆನ್

    ಚಿಕ್ಕಮಗಳೂರು: ಹುಟ್ಟುಹಬ್ಬವನ್ನ ಪ್ರತಿಯೊಬ್ಬರು ಒಂದೊಂದು ರೀತಿ ಆಚರಿಸಿಕೊಳ್ಳುತ್ತಾರೆ. ಕೆಲವರು ದೇವಸ್ಥಾನಕ್ಕೆ ಹೋಗ್ತಾರೆ. ಕೆಲವರು ಫ್ರೆಂಡ್ಸ್ ಜೊತೆ ಪಾರ್ಟಿ ಮಾಡ್ತಾರೆ. ನಗರದ ಸಮಾಜ ಸೇವಾ ಕಾರ್ಯಕರ್ತನೋರ್ವ, ಸ್ನಾನವಿಲ್ಲದೆ ನಗರದ ಬಸ್‍ನಿಲ್ದಾಣದಲ್ಲಿ ವಾಸವಾಗಿದ್ದ ವ್ಯಕ್ತಿಯನ್ನು ಬದಲಾಯಿಸಿದ್ದಾರೆ.

    ಕಲರಬುರಗಿ ಮೂಲಕ ಮುರಳಿ ಎಂಬಾತ ಬೇಲೂರು ರಸ್ತೆಯ ಬಸ್ ನಿಲ್ದಾಣದಲ್ಲಿಯೇ ವಾಸವಾಗಿದ್ದನು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸದಸ್ಯೆ ಸಹನಾ ಈ ಮಾನಸಿಕ ಅಸ್ವಸ್ಥನನ್ನು ಗಮನಿಸಿ ಪತಿ ರೂಬೆನ್ ಮೊಸೆಸ್ ಅವರಿಗೆ ತಿಳಿಸಿದ್ದರು. ಮಂಗಳವಾರ ತಮ್ಮ ಹುಟ್ಟುಹಬ್ಬ ಮತ್ತು ವಿಶ್ವ ಸಮಾಜ ಸೇವಾ ದಿನ ಪ್ರಯುಕ್ತ ವ್ಯಕ್ತಿಯನ್ನು ಶುಚಿಗೊಳಿಸಿದ್ದಾರೆ.

    ಮಂಗಳವಾರ ಕಟಿಂಗ್ ಶಾಪ್ ಬಂದಾಗಿದ್ದರಿಂದ ತಾವೇ ಮುರಳಿಯ ಕುರುಚಲು ಕೂದಲಿಗೆ ಕತ್ತರಿ ಹಾಕಿದ್ದಾರೆ. ಮುರಳಿಗೆ ಕಟಿಂಗ್ ಮತ್ತು ಸ್ನಾನ ಮಾಡಿಸಿ ಹೊಸ ಬಟ್ಟೆ ನೀಡಿದ್ದಾರೆ. ನಂತರ ಮುರಳಿಗೆ ಊಟ ನೀಡಿ, ಆತ ವಾಸವಾಗಿದ್ದ ಬಸ್ ನಿಲ್ದಾಣ ಸಹ ಶುಚಿಗೊಳಿಸಿದ್ದಾರೆ. ಈ ಮಾನವೀಯತೆ ಕೆಲಸಕ್ಕೆ ರೊಬೆಲ್ ಅವರ ಸ್ನೇಹಿತರು ಸಹ ಸಾಥ್ ನೀಡಿದ್ದಾರೆ.

  • ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಮದುವೆ ಮಾಡಿಸಿಲ್ಲ ಎಂದು ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿದ ಯುವಕ

    ಜೈಪುರ: ತನಗೆ ಮದುವೆ ಮಾಡಿಸಿಲ್ಲ ಎಂದು ಯುವಕನೋರ್ವ ಗುಡಿಯಲ್ಲಿದ್ದ ಹನುಮನ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ ರಾಜಸ್ಥಾನ ಜೈಪುರ ಜಿಲ್ಲೆಯ ಛೊಮು ಪಟ್ಟಣದಲ್ಲಿ ನಡೆದಿದೆ.

    ಭೂಷಣ್ ಹನುಮನ ಮೂರ್ತಿ ಧ್ವಂಸಗೊಳಿಸಿದ ಯುವಕ. ಮದುವೆ ಮಾಡಿಸು ಎಂದು ಹನುಮಂತನನ್ನು ಭೂಷಣ್ ಪ್ರತಿದಿನ ಪೂಜಿಸುತ್ತಿದ್ದನು. ತನ್ನ ಪಾರ್ಥನೆಗೆ ದೇವರು ಸ್ಪಂದಿಸಲಿಲ್ಲವೆಂಬ ಹತಾಶೆಯಿಂದ ಮೂರ್ತಿಯನ್ನು ಧ್ವಂಸ ಮಾಡಿದ್ದಾನೆ. ಮಾನಸಿಕ ಅಸ್ವಸ್ಥನಾಗಿರುವ ಭೂಷಣ್ ನನಗೆ ಮದುವೆಯಾಗಿಲ್ಲ ಎಂದು ಈ ರೀತಿ ಮಾಡಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ಹೇಳಿದ್ದಾನೆ.

    ರಾತ್ರೋರಾತ್ರಿ ಯಾರೋ ಕಿಡಿಗೇಡಿಗಳು ಹನುಮನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ ಎಂದು ಊರಿನ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಶ್ವಾನದಳದ ಸಹಾಯದಿಂದ ಈ ಕೆಲಸವನ್ನು ಮಾಡಿರುವುದು ದೇವಸ್ಥಾನ ಮಾಲೀಕನ ಮೊಮ್ಮಗ ಭೂಷಣ್ ಎಂದು ಎರಡು ಗಂಟೆಯೊಳಗೆ ಕಂಡುಹಿಡಿದಿದ್ದಾರೆ.

    ಪೊಲೀಸರು ಭೂಷಣ್ ವಿಚಾರಣೆ ನಡೆಸಿದಾಗ ಕಳೆದ ಮೂರು ತಿಂಗಳಿನಿಂದ ತನ್ನ ಮದುವೆಗಾಗಿ ಹನುಮನಲ್ಲಿ ಪಾರ್ಥಿಸುತ್ತಿದೆ ಎಂದು ಹೇಳಿದ್ದಾನೆ. ಅದರೂ ನನಗೆ ಮದುವೆಯಾಗಿಲ್ಲ. ಆದ್ದರಿಂದ ತನ್ನ ಪಾರ್ಥನೆಗೆ ಸ್ಪಂದಿಸದೇ ಇದ್ದ ಹನುಮನನ್ನು ಶನಿವಾರ ಕಬ್ಬಿಣದ ರಾಡ್ ಅನ್ನು ತೆಗೆದುಕೊಂಡು ಒಡೆದು ಹಾಕಿದೆ. ನಂತರ ನಾನು ಮನಗೆ ಹೋಗಿ ಮಲಗಿಕೊಂಡೆ ಎಂದು ಹೇಳಿದ್ದಾನೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಬೆಗಾರಾಮ್, ಈ ಘಟನೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಾಗಿದ್ದಾನೆ. ಅಲ್ಲದೇ ಈ ದೇವಸ್ಥಾನ ಆತನ ಮನೆಯವರದೇ ಆದ ಕಾರಣ ಅವರು ದೂರನ್ನು ವಾಪಸ್ ಪಡೆದಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ ಎಂದು ಹೇಳಿದ್ದಾರೆ.