Tag: Mental Distress

  • ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

    ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ

    ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಮಿನಿ ವಿಧಾನಸೌಧದ ಒಳಗೆ ಪಾಕಿಸ್ತಾನದ ಪರ ಘೋಷಣೆ ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆ ಮಿನಿ ವಿಧಾನಸೌಧ ಪ್ರವೇಶಿಸಿದ ವ್ಯಕ್ತಿ ನಿರಂತರವಾಗಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ಸ್ಥಳೀಯರು ಈತನ ಕೃತ್ಯಕ್ಕೆ ಅಡ್ಡಿ ವ್ಯಕ್ತಪಡಿಸಿದರೂ ಆತ ಮಾತು ಕೇಳದೆ ಪಾಕ್ ಪರ ಘೋಷಣೆ ಕೂಗಿದ್ದಾನೆ.

    ದೇಶದ್ರೋಹಿ ಹೇಳಿಕೆಯನ್ನು ನೀಡಿದ ವ್ಯಕ್ತಿಯನ್ನು ಕುಂದಾಪುರ ಕೋಡಿ ನಿವಾಸಿ ರಾಘವೇಂದ್ರ ಗಾಣಿಗ ಎಂದು ಗುರುತಿಸಲಾಗಿದೆ. ಕೂಡಲೇ ಪೊಲೀಸ್ ಠಾಣೆಗೆ ಸ್ಥಳೀಯರು ಫೋನ್ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಕುಂದಾಪುರ ಎಸ್‍ಐ ಹರೀಶ್ ವ್ಯಕ್ತಿಯನ್ನು ವಶಕ್ಕೆ ಪಡಕೊಂಡಿದ್ದಾರೆ. ಪೊಲೀಸರು ದಸ್ತಗಿರಿ ಮಾಡುವಾಗಲೂ ವ್ಯಕ್ತಿ ಪಾಕ್ ಪರ ಘೋಷಣೆಗಳನ್ನು ಕೂಗಿದ್ದಾನೆ. ರಾಘವೇಂದ್ರ ಗಾಣಿಗ ಕುಂದಾಪುರದ ಖಾಸಗಿ ಶ್ರೀಮಾತಾ ಆಸ್ಪತ್ರೆಗೆ ತನ್ನ ತಾಯಿಯ ಜೊತೆ ಬಂದಿದ್ದ.

    ಕಳೆದ ಹತ್ತು ವರ್ಷದಿಂದ ಮಾನಸಿಕ ತೊಂದರೆಯಿಂದ ಬಳಲುತ್ತಿರುವ ರಾಘವೇಂದ್ರ ನಿರಂತರ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಂದಾಪುರದ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕನಾಗಿದ್ದ ರಾಘವೇಂದ್ರ ಎಂಟು ವರ್ಷಗಳ ಹಿಂದೆ ಮಾನಸಿಕ ಸಮಸ್ಯೆಯಿಂದ ಕೆಲಸದಿಂದ ವಜಾಗೊಂಡಿದ್ದ. ಪೊಲೀಸರು ರಾಘವೇಂದ್ರನನ್ನು ದಸ್ತಗಿರಿ ಮಾಡುತ್ತಿದ್ದಂತೆ ಆಸ್ಪತ್ರೆಯಿಂದ ತಾಯಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ತಾನು ತನ್ನ ಮಗನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದೆ. ಆತನಿಗೆ ಮಾನಸಿಕ ಸಮಸ್ಯೆ ಇದೆ. ಸಾಲಿನಲ್ಲಿ ನಿಂತಿದ್ದಾಗ ತಪ್ಪಿಸಿಕೊಂಡು ಓಡಿದ್ದಾನೆ ಎಂದು ಪೊಲೀಸರಿಗೆ ಹೇಳಿದ್ದಾರೆ.

    ರಾಘವೇಂದ್ರನನ್ನು ವಿಚಾರಣೆ ನಡೆಸುತ್ತಿರುವ ಪೊಲೀಸರು ಆತನ ಮಾನಸಿಕ ಸ್ಥಿತಿಯ ಬಗ್ಗೆ ಅವಲೋಕನ ಮಾಡುತ್ತಿದ್ದಾರೆ. ಮಾನಸಿಕ ತಜ್ಞರನ್ನು ಪೊಲೀಸರು ಸಂಪರ್ಕ ಮಾಡಿದ್ದು ರಾಘವೇಂದ್ರನನ್ನು ಚಿಕಿತ್ಸೆಗೆ ಒಳಪಡಿಸುವ ಸಾಧ್ಯತೆ ಇದೆ. ಪೊಲೀಸ್ ವಶದಲ್ಲಿರುವ ರಾಘವೇಂದ್ರ ನಿರಂತರವಾಗಿ ಮನೆಯಲ್ಲಿ ಸುದ್ದಿವಾಹಿನಿಗಳನ್ನು ನೋಡುತ್ತಿದ್ದ ಎಂದು ತಾಯಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಸುದ್ದಿ ವಾಹಿನಿಗಳಲ್ಲಿ ಸಿಎಎ ಹೋರಾಟ, ಅಮೂಲ್ಯಾ ರಂಪಾಟ, ಆದ್ರ್ರಾ ಚೀರಾಟವನ್ನು ಕಂಡ ರಾಘವೇಂದ್ರ ಅದೇ ಮನೋಸ್ಥಿತಿಗೆ ಹೊರಳಿದ್ದ ಎನ್ನಲಾಗಿದೆ.

  • ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ: ಜಿಎಸ್ ಬಸವರಾಜು

    ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ: ಜಿಎಸ್ ಬಸವರಾಜು

    – ಶ್ರೀನಿವಾಸ್ ನನ್ನ ಮುಂದೆ ಬಚ್ಚ

    ತುಮಕೂರು: ಕಾಂಗ್ರೆಸ್ಸಿಗರಿಗೆ ಮಾನಸಿಕ ತೊಂದರೆಯಾಗಿ ಮೆಂಟಲ್ ಅಪ್ಸೆಟ್ ಆಗಿದೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಎಂದು ಸಂಸದ ಜಿ.ಎಸ್ ಬಸವರಾಜು ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‍ನವರ ಎಲ್ಲ ಪ್ರಶ್ನೆಗಳಿಗೂ ಉತ್ತರ ಹೇಳೋಕಾಗಲ್ಲ. ಅವರು ಇವತ್ತೇ ಎಲೆಕ್ಷನ್ ನಡೆಯುತ್ತೆ ಅಂತಾರೆ. ಕಾಂಗ್ರೆಸ್‍ನ ಎಲ್ಲರೂ ಮಾನಸಿಕ ರೋಗಿಗಳಾಗಿದ್ದಾರೆ ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಒಬ್ಬರು ಚಂಗಲು ಬಿದ್ದು ಆಟಾ ಆಡಿದ್ದಾರಾ? ಒಬ್ಬ ಬಿಜೆಪಿ ಎಂಎಲ್‍ಎ ಏನಾದರೂ ಈ ವಿಚಾರದ ಬಗ್ಗೆ ಅಪ್ಪಿತಪ್ಪಿ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.

    ಜಿಎಸ್ ಬಸವರಾಜು ಅತಿ ದೊಡ್ಡ ಸುಳ್ಳುಗಾರ ಎಂಬ ಎಸ್.ಅರ್ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಸ್.ಆರ್ ಶ್ರೀನಿವಾಸ್ ಗೆ ಚೆಡ್ಡಿ ಹಾಕುವುದಕ್ಕೆ ಕಾಸ್ ಇರಲಿಲ್ಲ. ಹೆಂಡದಂಗಡಿ ಮಾಡಿಸಿಕೊಟ್ಟೆ. ಚೆನ್ನಾಗಿ ದುಡ್ಡಾಗಿದೆ ನನ್ನನ್ನ ಬೈಬೇಕು ಅಂತಾನೇ ಬೈತಾನೆ. ನಾನು ಯಾಕೆ ಉತ್ತರ ಕೊಡಲಿ. ಅವರಪ್ಪನ ಕೇಳಿದರೆ ಅವನಿಗೆ ಗೊತ್ತಾಗುತ್ತೆ ನಮ್ಮಿಂದ ಏನಾಗಿದೆ ಎಂದು. ಅವರಪ್ಪ ಬಸವರಾಜು ಭ್ರಷ್ಟ ಎಂದು ಹೇಳಿದರೆ ಆಗ ನಾನು ಒಪ್ಪಿಕೊಳ್ಳುತ್ತೇನೆ. ಶ್ರೀನಿವಾಸ್ ನನ್ನ ಮುಂದೆ ಬಚ್ಚ. ಬಾಯಿಗ್ ಬಂದಂತೆ ಮಾತನಾಡುತ್ತಾನೆ. ಗುಬ್ಬಿ ತಾಲೂಕಿಗೆ ಅವನ ಕೊಡುಗೆ ಏನು? ರೈಲನ್ನೂ ನಾನೇ ಬಿಟ್ಟೆ ಅಂತಾನೆ ಎಂದು ವಾಗ್ದಾಳಿ ಮಾಡಿದರು.

    ಬಸವರಾಜು ಕಾರನ್ನು ನಾನೇ ಡ್ರೈವ್ ಮಾಡುತ್ತಿದ್ದೆ ಅವನ ಬಗ್ಗೆ ಚೆನ್ನಾಗಿ ಗೊತ್ತು ಎಂಬ ಶ್ರೀನಿವಾಸ್ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರಪ್ಪ ನನ್ನ ಜೊತೆ ಇರೋನು. ಆಗ ಇವನು ಬರೋನು ಡ್ರೈವರ್ ಕೆಲಸ ಮಾಡಿಕೊಂಡು ಹೋಗೋನು ನನ್ನ ಕೆಲಸ ಏನು ಮಾಡಿಲ್ಲ. ಹೆಂಡದಂಗಡಿಳನ್ನು ಮಂಜೂರು ಮಾಡಿಸಿಕೊಳ್ಳಲು ಕರೆದುಕೊಂಡು ಹೋಗೋನು ಎಂದು ಶ್ರೀನಿವಾಸ್‍ಗೆ ಏಕವಚನದಲ್ಲೇ ಬಸವರಾಜು ಕಿಡಿಕಾರಿದ್ದಾರೆ.