Tag: Menstruation

  • ಮೈತ್ರಿ ಕಪ್‌ಗೆ ಹೆಣ್ಣುಮಕ್ಕಳೇ ರಾಯಭಾರಿಯಾಗಿ ಜಾಗೃತಿ ಮೂಡಿಸಿ: ದಿನೇಶ್ ಗುಂಡೂರಾವ್ ಕರೆ

    ಮೈತ್ರಿ ಕಪ್‌ಗೆ ಹೆಣ್ಣುಮಕ್ಕಳೇ ರಾಯಭಾರಿಯಾಗಿ ಜಾಗೃತಿ ಮೂಡಿಸಿ: ದಿನೇಶ್ ಗುಂಡೂರಾವ್ ಕರೆ

    ಮಂಗಳೂರು: ನನ್ನ ಮೈತ್ರಿ ಯೋಜನೆಗೆ ಮೆನ್‌ಸ್ಟ್ರುಯಲ್ ಕಪ್ (Menstrual Cup) ಬಳಸುವ ಹೆಣ್ಣುಮಕ್ಕಳೇ ರಾಯಭಾರಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದರು.

    ಮಂಗಳೂರಿನಲ್ಲಿ (Mangaluru) ಸೋಮವಾರ ನನ್ನ ಮೈತ್ರಿ ಮೆನ್‌ಸ್ಟ್ರುಯಲ್ ಕಪ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಸ್ಯಾನಿಟರಿ ನ್ಯಾಪ್ಕಿನ್ ಬದಲು ಮೆನ್‌ಸ್ಟ್ರುಯಲ್ ಕಪ್ ಬಳಕೆ ಬಗ್ಗೆ ಬಹುತೇಕ ಹೆಣ್ಣುಮಕ್ಕಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಅಲ್ಲದೇ ಈ ಕಪ್‌ಗಳು ಪರಿಸರ ಸ್ನೇಹಿಯಾಗಿವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

    ಈ ಮೊದಲು ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತಿತ್ತು. ನ್ಯಾಪ್ಕಿನ್‌ಗಳ ಡಿಸ್ಪೋಸಲ್ ಹೆಣ್ಣು ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಬಗ್ಗೆ ಹೆಣ್ಣುಮಕ್ಕಳು ತುಂಬಾ ಮುಜುಗರ ಪಟ್ಟುಕೊಳ್ಳುತ್ತಿದ್ದರು. ಮುಟ್ಟಿನ ವಿಚಾರದಲ್ಲಿ ಮಾತನಾಡಲು ಯಾರೂ ಹಿಂಜರಿಯುವ ಅಗತ್ಯವಿಲ್ಲ. ಇದೊಂದು ನೈಸರ್ಗಿಕ ಕ್ರಿಯೆ ಅಷ್ಟೇ. ನ್ಯಾಪ್ಕಿನ್ ಬದಲು ಮೆನ್‌ಸ್ಟ್ರುಯಲ್ ಕಪ್‌ಗಳನ್ನು 5-6 ವರ್ಷಗಳ ವರೆಗೆ ಮರುಬಳಕೆ ಮಾಡಬಹುದು. ಹೀಗಾಗಿ ಹೆಣ್ಣುಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.

    ಈಗಾಗಲೇ ಚಾಮರಾಜನಗರದಲ್ಲಿ 300 ಹೆಣ್ಣುಮಕ್ಕಳಿಗೆ ಮೆನ್‌ಸ್ಟ್ರುಯಲ್ ಕಪ್‌ಗಳನ್ನು ನೀಡಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ನ್ಯಾಪ್ಕಿನ್ ಬದಲು ಮೈತ್ರಿ ಕಪ್ ಬಳಕೆಗೆ ಹೆಣ್ಣುಮಕ್ಕಳಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಯೋಜನೆಯನ್ನು ಜಿಲ್ಲಾ ಮಟ್ಟದಲ್ಲಿ ಪ್ರಯೋಗಿಕವಾಗಿ ತೆಗೆದುಕೊಳ್ಳಲಾಗಿದೆ. ದಕ್ಷಿಣ ಕನ್ನಡ ಹಾಗೂ ಚಾಮರಾಜನಗರ ಎರಡು ಜಿಲ್ಲೆಗಳಿಗೆ 15,000 ಮೆನ್‌ಸ್ಟ್ರುಯಲ್ ಕಪ್‌ಗಳ ವಿತರಣೆಗೆ ಇಂದು ಚಾಲನೆ ನೀಡಿದ್ದೇವೆ. ಈ ಯೋಜನೆ ಯಶಸ್ವಿಯಾಗುವ ವಿಶ್ವಾಸವಿದ್ದು, ರಾಜ್ಯಾದ್ಯಂತ ವಿಸ್ತರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಮುಂದಿನ ತಿಂಗಳಲ್ಲೇ ಶುಚಿ ಯೋಜನೆಗೆ ಚಾಲನೆ:
    ಸರ್ಕಾರಿ ಮತ್ತು ಅನುದಾನಿತ ಶಾಲಾ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ ವಿತರಿಸುವ ಶುಚಿ ಯೋಜನೆಯನ್ನೂ ಅಕ್ಟೋಬರ್ ತಿಂಗಳಲ್ಲಿ ಚಾಲನೆಗೆ ತರುತ್ತಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ತಿಳಿಸಿದರು.

    ಕಳೆದ 3 ವರ್ಷಗಳಿಂದ ಶುಚಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಬಳಿಕ ಶುಚಿ ಯೋಜನೆಗೆ ಮರು ಚಾಲನೆ ನೀಡಲು ನಿರ್ಧರಿಸಿದೆ. ಪ್ರಸಕ್ತ ಸಾಲಿಗೆ 10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ನ್ಯಾಪ್ಕಿನ್ ಪ್ಯಾಡ್ ವಿತರಿಸಲು ಅಧಿಕಾರಿಗಳಿಗೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ನಾನು ಸೂಚಿಸಿದ್ದೆ. 40.50 ಕೋಟಿ ರೂ. ವೆಚ್ಚದಲ್ಲಿ 15 ಕೋಟಿಗೂ ಹೆಚ್ಚು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಔಷಧಿ ಸರಬರಾಜು ಕಾರ್ಪೋರೇಷನ್ ಮೂಲಕ ಖರೀದಿಸಿ ಹೆಣ್ಣು ಮಕ್ಕಳಿಗೆ ವಿತರಿಸಲು ಯೋಜಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ: ‘ಮುಟ್ಟಿ’ನ ಯೋಜನೆಗೆ ‘ಕಾಂತಾರ’ ನಟಿ ಸಪ್ತಮಿ ರಾಯಭಾರಿ

    ಅಭಿನಂದಿಸಿದ ಸ್ಪೀಕರ್ ಖಾದರ್:
    ನನ್ನ ಮೈತ್ರಿ ಯೋಜನೆಯಡಿ ಮೆನ್‌ಸ್ಟ್ರುಯಲ್ ಕಪ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಧಾನ ಸಭಾಧ್ಯಕ್ಷ ಯುಟಿ ಖಾದರ್, ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಹೊಸ ಪ್ರಯೋಗವನ್ನು ಸ್ವಾಗತಿಸಿದರು. ಅಲ್ಲದೇ ಶುಚಿ ಯೋಜನೆಗೆ ಮರು ಚಾಲನೆ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್, ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮುಟ್ಟಿನ ನಿರ್ವಹಣೆ ಮುಖ್ಯವಾದದ್ದು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶುಚಿ ಯೋಜನೆಗೆ ಮರುಚಾಲನೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.

    ಭಾರತ ದೇಶ ವಿಶ್ವದಲ್ಲಿ ನಂ.1 ಆಗಬೇಕಾದರೆ ಮೊದಲು ನಮ್ಮ ಬಡ ಜನರಿಗೆ ಬಲ ತುಂಬುವ ಕೆಲಸ ಆಗಬೇಕು. ಶಾಸನ ಸಭೆಗಳಲ್ಲಿ ಶಾಸಕರು, ಪಾರ್ಲಿಮೆಂಟ್‌ನಲ್ಲಿ ಸಂಸದರು, ಕೇಂದ್ರ ರಾಜ್ಯ ಸಚಿವರು ಬಲಿಷ್ಠವಾದರೆ ದೇಶ ವಿಶ್ವದಲ್ಲಿ ನಂ.1 ಆಗಲು ಸಾಧ್ಯವಿಲ್ಲ. ದೇಶದ ವಿದ್ಯಾರ್ಥಿಗಳಿಗೆ ಶಕ್ತಿ ತುಂಬಿ ದುಡಿಯುವ ಯುವಕರನ್ನಾಗಿ ರೂಪಿಸಿದಾಗ ಮಾತ್ರ ದೇಶ ವೇಗವಾಗಿ ಬೆಳೆವಣೆಯತ್ತ ಸಾಗಲಿದೆ ಎಂದರು. ಇದನ್ನೂ ಓದಿ: ಫುಡ್‌ ಡೆಲಿವರಿ ಬಾಯ್ಸ್‌ ಸೇರಿದಂತೆ ಎಲ್ಲಾ ಗಿಗ್‌ ಕಾರ್ಮಿಕರಿಗೆ 4 ಲಕ್ಷ ವಿಮೆ ಘೋಷಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅರಿವಿಲ್ಲದೇ 20 ವರ್ಷದಿಂದ ಮುಟ್ಟಾಗ್ತಿದ್ದಾನೆ ಈ ವ್ಯಕ್ತಿ – ಸ್ತ್ರಿಯರಂತೆ ಈತನಿಗೂ ಇದೆ ಗರ್ಭಾಶಯ

    ಅರಿವಿಲ್ಲದೇ 20 ವರ್ಷದಿಂದ ಮುಟ್ಟಾಗ್ತಿದ್ದಾನೆ ಈ ವ್ಯಕ್ತಿ – ಸ್ತ್ರಿಯರಂತೆ ಈತನಿಗೂ ಇದೆ ಗರ್ಭಾಶಯ

    ಬೀಜಿಂಗ್: ತನ್ನ ಮೂತ್ರದಲ್ಲಿ ರಕ್ತ ಮತ್ತು ನಿಯಮಿತವಾಗಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 33 ವರ್ಷದ ಚೀನಾ ವ್ಯಕ್ತಿಯೊಬ್ಬ ವೈದ್ಯರನ್ನು ಸಂಪರ್ಕಿಸಿದ ಬಳಿಕ ಈತ ಅಂಡಾಶಯ ಹಾಗೂ ಗರ್ಭಾಶಯವನ್ನು ಹೊಂದಿರುವ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದಾನೆ.

    ಚೆನ್ ಲಿ ಎಂದು ಗುರುತಿಸಿಕೊಂಡಿರುವ ವ್ಯಕ್ತಿ, ಪ್ರೌಢಾವಸ್ಥೆಯಲ್ಲಿ ತನ್ನ ಅನಿಯಮಿತ ಮೂತ್ರ ವಿಸರ್ಜನೆಯನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದಿನಿಂದ ಅಂದರೆ ಸುಮಾರು 20 ವರ್ಷಗಳಿಂದ ಈತ ಮೂತ್ರದಲ್ಲಿ ರಕ್ತ ಮತ್ತು ಹೊಟ್ಟೆ ನೋವನ್ನು ಅನುಭವಿಸುತ್ತಿದ್ದ.

    ಸುಮಾರು ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ವೈದ್ಯರು ವ್ಯಕ್ತಿಗೆ ಅಪೆಂಡಿಸೈಟಿಸ್ ಎಂದು ರೋಗನಿರ್ಣಯ ಮಾಡಿದರು. ಈ ರೋಗಕ್ಕಾಗಿ ಚಿಕಿತ್ಸೆ ನೀಡಿದ ನಂತರವೂ ರೋಗಲಕ್ಷಣಗಳು ಮುಂದುವರಿಯಿತು. ಇದನ್ನೂ ಓದಿ: ಅಂಬುಲೆನ್ಸ್ ಸಿಗದೇ ತಮ್ಮನ ಶವವನ್ನು ಮಡಿಲಲ್ಲಿಟ್ಟುಕೊಂಡು ಬೀದಿಯಲ್ಲಿ ಕುಳಿತ ಬಾಲಕ

    ಕಳೆದ ವರ್ಷ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಿದ ವೇಳೆ ವ್ಯಕ್ತಿ ಸ್ತ್ರೀ ಲೈಂಗಿಕ ವರ್ಣತಂತುಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ. ಮತ್ತೊಂದು ವೈದ್ಯಕೀಯ ತಪಾಸಣೆಯಲ್ಲಿ ಈತ ಗರ್ಭಾಶಯ ಹಾಗೂ ಅಂಡಾಶಯ ಸೇರಿದಂತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳನ್ನು ಹೊಂದಿದ್ದಾನೆ ಎಂಬ ಸತ್ಯ ಬೆಳಕಿಗೆ ಬಂದಿದೆ.

    ಚೆನ್ ಲಿಗೆ ಪುರುಷ ಲೈಂಗಿಕ ಹಾರ್ಮೋನ್ ಆಂಡ್ರೊಜೆನ್ ಮಟ್ಟಗಳು ಸರಾಸರಿಗಿಂತ ಕಮ್ಮಿ ಇವೆ. ಆದರೆ ಸ್ತ್ರೀ ಲೈಂಗಿಕ ಹಾರ್ಮೋನುಗಳ ಮಟ್ಟಗಳು ಮತ್ತು ಅಂಡಾಶಯದ ಚಟುವಟಿಕೆಯು ಆರೋಗ್ಯಕರ ವಯಸ್ಕ ಮಹಿಳೆಯರಲ್ಲಿ ಕಂಡುಬರುವಂತೆಯೇ ಇದೆ. ಹೀಗಾಗಿ ಗಂಡು ಮತ್ತು ಹೆಣ್ಣು ಅಂಗಗಳೊಂದಿಗೆ ಜನಿಸಿರುವ ಇಂಟರ್ ಸೆಕ್ಸ್ ಎಂದು ವೈದ್ಯರು ಚೆನ್ ಲಿಗೆ ತಿಳಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾದ ಚೆನ್ ಲಿ ತನ್ನ ಸ್ತ್ರಿ ಸಂತಾನೋತ್ಪತ್ತಿ ಅಂಗಗಳನ್ನು ತೆಗೆದುಹಾಕಲು ನಿರ್ಧರಿಸಿ, ಕಳೆದ ತಿಂಗಳು ಮೂರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ಇದನ್ನೂ ಓದಿ: ಶ್ರೀಲಂಕಾ ಅಧ್ಯಕ್ಷರ ಮನೆಯಲ್ಲೇ ಅಡುಗೆ ಮಾಡಿ ತಿಂದ ಪ್ರತಿಭಟನಾಕಾರರು

    ಈ ಹಂತದಿಂದ ವ್ಯಕ್ತಿ ಸಾಮಾನ್ಯ ಮನುಷ್ಯರಂತೆ ಜೀವನ ನಡೆಸಬಲ್ಲನು. ಆದರೆ ಅವನು ಸಂತಾನೋತ್ಪತ್ತಿ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವನ ವೃಷಣಗಳು ವೀರ್ಯವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಇದು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರದಿದ್ದರೂ, ಇದರಿಂದ ಕೆಲವರು ಮಾನಸಿಕವಾಗಿ ಆಘಾತಕ್ಕೊಳಗಾಗುವ ಸಾಧ್ಯತೆ ಇರುತ್ತದೆ. ಸದ್ಯ ಶಸ್ತ್ರ ಚಿಕಿತ್ಸೆಯ ಬಳಿಕ ಚೆನ್ ಲಿ ಬೇಗನೆ ಗುಣಮುಖನಾಗಿದ್ದು, ಆತ್ಮವಿಶ್ವಾಸ ಮತ್ತಷ್ಟು ಬಲವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ಅಮೆರಿಕದಲ್ಲಿ ಮಹಿಳೆಯರು ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ – ಏಕೆ ಗೊತ್ತಾ?

    ಅಮೆರಿಕದಲ್ಲಿ ಮಹಿಳೆಯರು ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗಳನ್ನು ಡಿಲೀಟ್ ಮಾಡುತ್ತಿದ್ದಾರೆ – ಏಕೆ ಗೊತ್ತಾ?

    ವಾಷಿಂಗ್ಟನ್: ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಮಾಡಿದಾಗಿನಿಂದ ಮಹಿಳೆಯರು ತಮ್ಮ ಸ್ಮಾರ್ಟ್ ಫೋನ್‌ಗಳಿಂದ ಮುಟ್ಟಿನ ದಿನಾಂಕವನ್ನು ಪತ್ತೆ ಹಚ್ಚುವ ಆ್ಯಪ್(ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್)ಗಳನ್ನು ಸಾಮೂಹಿಕವಾಗಿ ಡಿಲೀಟ್ ಮಾಡುತ್ತಿದ್ದಾರೆ. ಮಹಿಳೆಯರು ಈ ರೀತಿ ಒಂದು ಪುಟ್ಟ ಹಾಗೂ ಅತಿ ಉಪಯುಕ್ತ ಅಪ್ಲಿಕೇಶನ್ ಅನ್ನು ಅಳಿಸಿ ಹಾಕುವುದರ ಹಿಂದಿನ ಕಾರಣ ಏನು ಎಂಬುದಕ್ಕೆ ಉತ್ತರ ಇಲ್ಲಿದೆ.

    ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್‌ಗಳು ಮಹಿಳೆಯರಿಗೆ ಅತಿ ಉಪಯುಕ್ತ ಅಪ್ಲಿಕೇಶನ್‌ಗಳಾಗಿದ್ದು, ಇವು ಪ್ರತೀ ತಿಂಗಳು ಮುಟ್ಟಿನ ದಿನಾಂಕದ ಬಗ್ಗೆ ಎಚ್ಚರಿಸುತ್ತದೆ. ಈ ಅಪ್ಲಿಕೇಶನ್‌ಗಳಿಂದ ಮಹಿಳೆಯರು ತಮ್ಮ ಮುಟ್ಟಿನ ದಿನಾಂಕವನ್ನು ಪ್ರತಿ ಸಲ ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ತಮ್ಮ ಮುಟ್ಟಿನ ದಿನಾಂಕವನ್ನು ಅಪ್ಲಿಕೇಶನ್‌ಗಳಲ್ಲಿ ನೋಟ್ ಮಾಡಿಟ್ಟುಕೊಂಡರೆ, ಮುಂದಿನ ತಿಂಗಳಿನಲ್ಲಿ ಅವು ಮಹಿಳೆಯರಿಗೆ ನೆನಪಿಸುತ್ತದೆ. ಇದನ್ನೂ ಓದಿ: 41,652 ಮಂದಿಗೆ ಲಸಿಕೆ – 767 ಡಿಸ್ಚಾರ್ಜ್

    ಪೀರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳಲ್ಲಿ ಮುಟ್ಟಿನ ದಿನಾಂಕವನ್ನು ನಮೂದಿಸುವ ಅವಕಾಶದೊಂದಿಗೆ ಇತರ ವೈಯಕ್ತಿಕ ಡೇಟಾಗಳನ್ನೂ ನಮೂದಿಸಬಹುದಾಗಿದೆ. ಇದರಿಂದ ಮಹಿಳೆಯರ ಸಂಗ್ರಹವಾಗುವ ಡೇಟಾಗಳು ಕಾನೂನು ಜಾರಿಯಿಂದ ಪ್ರವೇಶಿಸುವ ಸಾಧ್ಯತೆಯೂ ಇದ್ದು, ಒಂದು ವೇಳೆ ಕಾನೂನು ಬಾಹಿರವಾಗಿ ಮಹಿಳೆಯರು ಗರ್ಭಪಾತ ಮಾಡಿಸಿಕೊಂಡಲ್ಲಿ ತನಿಖೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ.

    ಈ ಹಿನ್ನೆಲೆ ಪೀರಿಯಡ್ ಟ್ರ್ಯಾಕಿಂಗ್ ಅಪ್ಲಿಕೇಶನ್‌ಗಳನ್ನು ಹಾಗೂ ವೈಯಕ್ತಿಕ ಡೇಟಾಗಳನ್ನು ಅಳಿಸಿ ಹಾಕಲು ಮಹಿಳೆಯರು ಒತ್ತಾಯಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಗರ್ಭಪಾತವಾಗಿರುವುದು ತಿಳಿದು ಬಂದಲ್ಲಿ ತನಿಖೆಯಾಗುವ ಭೀತಿಯನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಇದೇ ವರ್ಷ ಬರಲಿದೆ ಇ-ಪಾಸ್‌ಪೋರ್ಟ್ – ಹೇಗಿರಲಿದೆ? ಕೆಲಸ ಹೇಗೆ?

    ಕಳೆದ ಶುಕ್ರವಾರ ಅಮೆರಿಕದ ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಸಂಬಂಧಿಸಿದ ಸಾಂವಿಧಾನಿಕ ಹಕ್ಕೆಂದು ಘೋಷಿಸಲಾಗಿದ್ದ 1973ರ ತೀರ್ಪನ್ನು ರದ್ದುಗೊಳಿಸಿತ್ತು. ಇದನ್ನು ದೇಶಾದ್ಯಂತ ಮಹಿಳೆಯರು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.

    ಗೂಗಲ್ ಹೊರತುಪಡಿಸಿ, ಮೆಟಾ, ಅಮೆಜಾನ್, ಮೈಕ್ರೋಸಾಫ್ಟ್, ಟೆಸ್ಲಾ ಹಾಗೂ ಇತರ ದೈತ್ಯ ಟೆಕ್ ಕಂಪನಿಗಳು ಸುಪ್ರೀಂ ಕೋರ್ಟ್ನ ಆದೇಶವನ್ನು ತಿರಸ್ಕರಿಸಿದೆ. ತಮ್ಮ ಮಹಿಳಾ ಉದ್ಯೋಗಿಗಳಿಗೆ ಗರ್ಭಪಾತಕ್ಕೆ ಸಹಾಯ ಮಾಡಲು ವಿದೇಶ ಪ್ರಯಾಣಕ್ಕೆ ಪಾವತಿಸುವ ಯೋಜನೆಯನ್ನು ಘೋಷಿಸಿದೆ.

    Live Tv