Tag: mens

  • ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಕಾಲ ಬದಲಾದಂತೆ ಫ್ಯಾಷನ್ ಸಹ ಬದಲಾಗುತ್ತಲೇ ಇದೆ. ಕಾಲಕ್ಕೆ ಸರಿ ಹೊಂದುವ ಉಡುಪುಗಳನ್ನು ಖರೀದಿಸಿ ಧರಿಸುವ ಹುಡುಗರ ಜಾಯಮಾನವೂ ಬದಲಾಗಿದೆ. ಆಧುನಿಕತೆಗೆ ತೆರೆದುಕೊಂಡು ಯುವಕರು ಫ್ಯಾಷನ್ ವಸ್ತುಗಳನ್ನು ಧರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ.

    ಧರಿಸಿದ ಬಟ್ಟೆ, ತೊಡುವ ಆಭರಣ ತನ್ನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಂದ ಹಾಗೆ ಇದು ತೋರಿಕೆಯ ಕಾಲ. ತೋಚಿದ್ದಕ್ಕೆ ರೂಪ ಕೊಡೋ ಕಾಲ. ಕಣ್ಣಿಗೆ ಕಂಡದ್ದು, ಹೊಸತು ಅನ್ನಿಸಿದ್ದನ್ನು ಕೊಂಡು ಧರಿಸುವ ಕಾಲ. ಹುಡುಗಿಯರನ್ನ ತಮ್ಮತ್ತ ಹೇಗೆ ಸೆಳೆಯಬೇಕು? ಎಂಬುದು ಈಗಿನ ಯುವಕರಿಗೆ ಗೊತ್ತು.

    ಸೌಂದರ್ಯ ಹೇಗೇ ಇರಲಿ, ಆದರೂ ಬಾಹ್ಯ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ತಂದುಕೊಳ್ಳಲು ಸೌಂದರ್ಯ ಸಾಧನಗಳನ್ನು ಬಳಸಲೇಬೇಕು. ಅಂತದರಲ್ಲಿ ಹುಡುಗರೇನೂ ಕಡಿಮೆ ಇಲ್ಲ ಬಿಡಿ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಶಾಪಿಂಗ್ ಮಾಲ್‌ಗಳಲ್ಲಿ ಯುವಕರ ಕಲರವವೇ ಹೆಚ್ಚಿದೆ. ಅದರಲ್ಲೂ ಸಿಕ್ಸ್‌ಪ್ಯಾಕ್‌ ಹುಡುಗರು ಫಿಟ್ ಆಗಿ ಕೂರುವ ಟೀಶರ್ಟ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಅದರ ಮೇಲೆ ಸೂಟ್‌ಕೋಡ್ ಫ್ರೆಶ್ ಲುಕ್ ನೀಡುತ್ತದೆ.

    ವೆಡ್ಡಿಂಗ್ ದಿನಗಳಲ್ಲಂತು ತರಹೇವಾರಿಯ ಸೂಟ್ಸ್ಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಮದುವೆಯ ಸಮಾರಂಭಗಳು ಅಥವಾ ಹುಟ್ಟುಹಬ್ಬದ ಪಾರ್ಟಿಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಫ್ರೆಶ್ ಹಾಗೂ ಕಲರ್‌ಫುಲ್ ಲುಕ್ ನೀಡುತ್ತವೆ. ಅವುಗಳ ವಿವಿಧ ಶೈಲಿಗಳನ್ನಿಲ್ಲಿ ನೋಡಬಹದು. ಇದನ್ನೂ ಓದಿ: ಫ್ಯಾಷನ್‍ನಲ್ಲೂ ರಾಷ್ಟ್ರಪ್ರೇಮ ಅಭಿವ್ಯಕ್ತ

    Suits 05

    ಇಟಾಲಿಯನ್ ಸ್ಟೈಲ್‌: ಎರಡು ಪಾಕೆಟ್‌ಗಳಿರೋ ಈ ಸೂಟ್ ಸಾಂಪ್ರದಾಯಿಕ ಲುಕ್ ನೀಡುತ್ತದೆ. ತೆಳ್ಳಗಿದ್ದು ಎತ್ತರವಾಗಿರುವವರಿಗೆ ಇಟಾಲಿಯನ್ ಸೂಟ್ ಒಳ್ಳೆಯ ಲುಕ್ ನೀಡುತ್ತದೆ. ಆದರೆ ಕುಳ್ಳಗಿರುವವರಿಗೆ ಈ ಸೂಟ್ ವಿಚಿತ್ರವಾಗಿ ಕಾಣಿಸುತ್ತದೆ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

    ಬ್ರಿಟಿಷ್ ಶೈಲಿಯ ಸೂಟ್: ಯುವಕರಿಗೆ ಎಲೆಗೆಂಟ್ ಲುಕ್ ನೀಡುವುದರ ಜೊತೆಗೆ ಫ್ಯಾಷನೇಬಲ್ ಆಗಿ ಕಾಣಿಸುತ್ತಾರೆ. ಸಾಮಾನ್ಯ ಕಾರ್ಯಕ್ರಮಗಳಿಗೆ ಸಂದರ್ಶನದ ವೇಳೆ ಮತ್ತು ಕಚೇರಿಗೆ ಧರಿಸಬಹುದು. ಇದು ಜಾಕೆಟ್ 3 ಬಟನ್, ಮಧ್ಯಮ ಗಾತ್ರದ ಲಾಪೆಲ್ಸ್ ಮತ್ತು 3 ಹೊರ ಪಾಕೆಟ್‌ಗಳನ್ನು ಹೊಂದಿರುತ್ತದೆ.

    Suits 04

    ಅಮೇರಿಕನ್ ಮಾದರಿಯ ಸೂಟ್: ಈ ಸೂಟ್ ಬಹುಮುಖ ಹೊಂದಿರುತ್ತದೆ. ಅಂದರೆ ಯಾವುದೇ ಸೆಟ್ಟಿಂಗ್‌ಗೂ ಹೊಂದಿಕೊಳ್ಳುತ್ತದೆ. ಯಾವುದೇ ಸಂದರ್ಭಗಳಿಗೆ ಬೇಕಾದರೂ ಪುರುಷರು ಇದನ್ನು ಧರಿಸಬಹುದು.

    ಬ್ರೋಕೇಡ್ ಸೂಟ್: ಸ್ವಲ್ಪ ಗ್ಲಾಮರ್ ಆಗಿ ಕಾಣುವ ಈ ಸೂಟ್ ಭಾರತೀಯ ಕರಕುಶಲ ಶೈಲಿಯನ್ನೇ ಹೋಲುತ್ತದೆ. ಟೀ ಶರ್ಟ್ ಮೇಲೆ ಧರಿಸಿದರೂ ಹೊಂದಿಕೊಳ್ಳುತ್ತದೆ.

    Suits 02

    ವೆಲ್ವೆಟ್ ಸೂಟ್: ವಿಶಾಲ ಭುಜ ವುಳ್ಳವರಿಗೆ ಈ ಸೂಟ್ಸ್ ಪರ್ಫೆಕ್ಟ್, ಪುರುಷರಿಗೆ ಸಾಂಪ್ರದಾಯಿಕ ಸೂಟ್‌ಗಳ ಸ್ಫರ್ಶವನ್ನೇ ಇದು ನೀಡುತ್ತದೆ. ಜ್ಯುವೆಲ್ಸ್ನೊಂದಿಗೆ ಧರಿಸಿದರೆ, ಐಶಾರಾಮಿ ಲುಕ್ ನೀಡುತ್ತದೆ. ಜೊತೆಗೆ ಶೈನ್ ಹೆಚ್ಚಿಸುತ್ತದೆ. ಬಿಸಿಲಿನಲ್ಲಿ ಧರಿಸುವುದು ಸೂಕ್ತವಲ್ಲ.

    ಕ್ಲಾಸಿಕ್ ಬಂದ್ ಗಲಾವ್: ಸಿಕ್ ಬಂಧ್‌ಗಲಾವು ಫಾರ್ಮಲ್ ವೇರ್ ಮತ್ತು ಭಾರತೀಯ ಶೈಲಿಯ ಧಿರಿಸುಗಳಿಗೆ ಹೊಂದಿಕೆಯಾಗುತ್ತದೆ. ಇದು ಹುಡುಗಿಯರನ್ನು ಸೆಳೆಯಲು ಹೆಚ್ಚು ಆಕರ್ಷಣೆ ನೀಡುತ್ತದೆ. ಸಿಟ್‌ಡೌನ್ ಡಿನ್ನರ್ ಪಾರ್ಟಿಗಳಲ್ಲಿ ಹೆಚ್ಚಿನ ಜನರು ಇದನ್ನು ಬಳಸುತ್ತಾರೆ.

  • ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    -ಊರಲ್ಲಿ ಮದ್ಯಪಾನ ಮಾಡಿದ್ರೆ ಬೀಳುತ್ತೆ ದಂಡ

    ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಗ್ರಾಮದಲ್ಲಿ ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯಪಾನವನ್ನು ಮಹಿಳೆಯರು ನಿಷೇಧಿಸಿದ್ದಾರೆ. ಒಂದು ವೇಳೆ ಪಂಚಾಯ್ತಿ ಆದೇಶ ಮೀರಿ ಊರಲ್ಲಿ ಮದ್ಯಪಾನ ಮಾಡಿದರೆ ದಂಡ ಹಾಕಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಹೌದು. ಕುಪ್ಪೂರು ಗ್ರಾಮದಲ್ಲಿ ಪುರುಷರಿಗೆ ಸೆಡ್ಡು ಹೊಡೆದು ಮಹಿಳೆಯರೇ ಪಂಚಾಯ್ತಿ ಕಟ್ಟೆ ನಡೆಸಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಗಂಡಂದಿರ ಮದ್ಯಪಾನ ಚಟ ಬಿಡಿಸಲು ಮಹಿಳೆಯರೇ ಒಗ್ಗಟ್ಟಾಗಿ ಹೋರಾಟಕ್ಕಿಳಿದು, ಗ್ರಾಮದಲ್ಲಿ ಮದ್ಯವನ್ನು ನಿಷೇಧಿಸಿದ್ದಾರೆ. ಗ್ರಾಮದಲ್ಲಿ ಪಂಚಾಯ್ತಿ ನಡೆಸಿ ಊರಲ್ಲಿ ಮದ್ಯ ಮಾರಾಟ ಮಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. ಈ ತೀರ್ಮಾನಕ್ಕೆ ಗ್ರಾಮದ ಪುರುಷರು ವಿರೋಧ ಮಾಡದೇ ಒಪ್ಪಿಕೊಂಡಿದ್ದಾರೆ.

    ಮದ್ಯ ನಿಷೇಧ ಮಾಡಿದ ಬಳಿಕ ಹಗಲು, ರಾತ್ರಿ ಗ್ರಾಮ ಮೂಲೆ ಮೂಲೆ ಸುತ್ತಿ ಮಹಿಳೆಯರೇ ಅಕ್ರಮ ಮದ್ಯ ಮಾರಾಟ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗ್ರಾಮದ ಮನೆಯೊಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಗೆ ಫುಲ್ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಮನೆಗೆ ನುಗ್ಗಿ ಅಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ನಡುರಸ್ತೆಯಲ್ಲಿ ಮದ್ಯದ ಪಾಕೆಟ್‍ಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಹೀಗಾಗಿ ಮದ್ಯ ನಿಷೇಧ ವಿಚಾರದಲ್ಲಿ ಮಹಿಳೆಯರ ಒಗ್ಗಟ್ಟಿಗೆ ಗ್ರಾಮದ ಪುರುಷರು ಬೆಸ್ತುಬಿದ್ದಿದ್ದಾರೆ.

  • ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಜನರಿಂದ ಗ್ಯಾಂಗ್‍ ರೇಪ್

    ನವದೆಹಲಿ: ಮೂವರು ಸೆಕ್ಸ್ ವರ್ಕರ್ ಮೇಲೆ ಒಂಬತ್ತು ಪುರುಷರು ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ನೊಯ್ಡಾದಲ್ಲಿ ನಡೆದಿದೆ.

    ಓರ್ವ ಕ್ಯಾಬ್ ಡ್ರೈವರ್ ಸೇರಿದಂತೆ 8 ಜನ ಖಾಸಗಿ ಭದ್ರತಾ ಸಿಬ್ಬಂದಿ ಸೆಕ್ಸ್ ವರ್ಕರ್ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಬೆಳಗ್ಗೆ 5 ಗಂಟೆಗೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಮಂಗಳವಾರ ರಾತ್ರಿ ನಾವು ದೆಹಲಿಯ ಲಜಪತ್ ನಗರ ಮೆಟ್ರೋ ನಿಲ್ದಾಣದ ಬಳಿ ಗ್ರಾಹಕರಿಗಾಗಿ ಕಾಯುತ್ತಾ ನಿಂತಿದ್ದೀವಿ. ಈ ವೇಳೆ ಸ್ವಿಫ್ಟ್ ಡಿಸೈರ್ ಓಲಾ ಕ್ಯಾಬ್ ನಲ್ಲಿ ಬಂದ ಚಾಲಕ ನಮ್ಮನ್ನು ಕರೆದ ಎಂದು ದೂರುದಾರೆ ಮತ್ತು ಉಳಿದಿಬ್ಬರು ತಿಳಿಸಿದ್ದಾರೆ.

    ಪ್ರತಿ ಪುರುಷರಿಗೆ 3,000 ಸಾವಿರದಂತೆ ಡೀಲ್ ಕುದರಿಸಿದ್ದು, ಡೀಲ್ ಕುದರಿದ ಮೇಲೆ ನೊಯ್ಡಾದ ಸೆಕ್ಟರ್ 18ರಲ್ಲಿ ಇನ್ನೂ ಇಬ್ಬರು ಸ್ನೇಹಿತರು ಕಾಯುತ್ತಿದ್ದು, ಅಲ್ಲಿಗೆ ಹೋಗೋಣ ಎಂದು ಕರೆದೊಯ್ದಿದ್ದಾರೆ. ಪುರುಷರು ಸಂತ್ರಸ್ತ ಮಹಿಳೆಯರಿಗೆ 3,600 ರೂ. ಮುಂಗಡ ಹಣವನ್ನೂ ಪಾವತಿಸಿದ್ದಾರೆ ಎಂದು ಹಿರಿಯ ಎಸ್‍ಪಿ ವೈಭವ್ ಕೃಷ್ಣ ಅವರು ಮಾಹಿತಿ ನೀಡಿದ್ದಾರೆ.

    ನೊಯ್ಡಾದ ಸೆಕ್ಟರ್ 135ರಲ್ಲಿರುವ ಫಾರ್ಮ್ ಹೌಸ್‍ಗೆ ಮಹಿಳೆಯರನ್ನು ಕರೆದೊಯ್ದಿದ್ದಾರೆ. ಇಬ್ಬರು ಪುರುಷರು ಕಾರ್‍ನಲ್ಲಿರುವವರ ಜೊತೆಗೆ ಇನ್ನೂ 7 ಜನ ಪುರುಷರು ಫಾರ್ಮ್ ಹೌಸ್‍ಗೆ ಬಂದಿದ್ದಾರೆ. ಆಗ ಮಹಿಳೆಯರು ಹಿಂಜರಿಕೆಯಿಂದ ಕ್ಯಾಬ್‍ನಲ್ಲಿದ್ದ ಇಬ್ಬರು ಪುರುಷರಿಗೆ ತಮ್ಮನ್ನು ಮರಳಿ ದೆಹಲಿಗೆ ಬಿಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೊಪ್ಪದ ಪುರುಷರು ತಮ್ಮನ್ನು ಹೊಡೆದಿದ್ದು, ಹಲ್ಲೆ ಮಾಡಿ ಮುಂಗಡವಾಗಿ ಪಾವತಿಸಿದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಫಾರ್ಮ್ ಹೌಸ್‍ನ್ನು ಸೀಜ್ ಮಾಡಲಾಗಿದೆ. ಈಗಾಗಲೇ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಇನ್ನು ಇಬ್ಬರು ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ ಎಂದು ವೈಭವ್ ಕೃಷ್ಣ ಹೇಳಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ-ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

    ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ-ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

    ಮೈಸೂರು: ಎಲ್ಲದರಲ್ಲೂ ಮಹಿಳೆಯರಿಗೆ ಸಮಾನತೆ ಬೇಡ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಈ ರೀತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೊಟೇಲ್, ಪಬ್ ಗಳಲ್ಲಿ ಗಂಡು ಮಕ್ಕಳು ಕುಡಿಯುತ್ತಾರೆ. ಹಾಗೆಯೇ ನಾನು ಕುಡಿಯುತ್ತೇನೆ ಎಂಬ ಈ ಸಮಾನತೆ ನಮಗೆ ಬೇಡ. ನಮಗೆ ಸ್ವತಂತ್ರ ಬೇಕು. ಸ್ವೇಚ್ಛಾಚಾರ ಬೇಡ. ಯಾವುದರಲ್ಲಿ ನಮಗೆ ಉಪಕಾರ ಇದೆಯೋ ಅದರಲ್ಲಿ ಮಾತ್ರ ಸಮಾನತೆ ಇದ್ದರೆ ಸಾಕು ಎಂದು ಅವರು ತಿಳಿಸಿದ್ರು.

    ಸಮಾನತೆ ಎಲ್ಲದರಲ್ಲೂ ಬೇಡ. ಪುರುಷರಿಗೂ ನಮ್ಮ ಜೊತೆ ಸಮಾನತೆ ಮಾಡಲು ಸಾಧ್ಯವಿಲ್ಲ. ಹಾಗೆಯೇ ನಮಗೂ ಕೂಡ ಪುರುಷರ ಜೊತೆ ಸಮಾನತೆ ಮಾಡಿಕೊಳ್ಳಲು ಸಾಧ್ಯವಿಲ್ಲ. ದೇವರ ಸೃಷ್ಟಿಯಲ್ಲಿ ಯಾರು ಯಾರಿಗೆ ಯಾವುದು ಬೇಕು ಎನ್ನುವುದನ್ನು ದೇವರು ತೀರ್ಮಾನ ಮಾಡಿರುತ್ತಾರೆ. ಅದೇ ರೀತಿ ಆಗುತ್ತದೆ ಎಂದು ಹೇಳಿದ್ರು.

    ಮಹಿಳೆಯರು ಪುರುಷರಿಗೆ ಸಮಾನರಲ್ಲ. ಪುರುಷರಿಗೆ ಇರುವ ಎಲ್ಲ ಸ್ವಾತಂತ್ರ್ಯವೂ ಮಹಿಳೆಯರಿಗೆ ಬೇಡ. ಮಹಿಳೆಯರ ವೈಯುಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆಯಾಗಿದೆ. ಪುರುಷರು ರಾತ್ರಿ ಪಬ್, ರೆಸ್ಟೋರೆಂಟ್‍ನಲ್ಲಿ ಕುಡಿಯುತ್ತಾರೆ. ಮಹಿಳೆಯರಿಗೂ ಅಂತಹ ಸ್ವಾತಂತ್ರ್ಯ ಬೇಕು ಎಂದು ನಾನು ಬಯಸುವುದಿಲ್ಲ ಎಂದರು.

    ಮಹಿಳೆಯರಿಗೆ ಸಾಂಪ್ರದಾಯಿಕ ಇತಿಮಿತಿಗಳಿವೆ. ಪ್ರತಿ ಧರ್ಮದಲ್ಲೂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿದೆ. ಆ ಚೌಕಟ್ಟನ್ನು ಮೀರಲು ನಾನು ಬಯಸುವುದಿಲ್ಲ. ಶಬರಿಮಲೆ ದೇವಾಲಯ ಪ್ರವೇಶಕ್ಕೂ ನಮ್ಮ ವಿರೋಧವಿದೆ. ಮುಸ್ಲಿಂ ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ತ್ರಿವಳಿ ತಲಾಕ್ ನಿಷೇಧ ಹೇರಲಾಗಿದೆ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

    21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ ಉಮ್ರಾಲ ತಾಲೂಕಿನ ಟಿಂಬಿ ಗ್ರಾಮದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಎಂ ಸೈಯದ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಪ್ರದೀಪ್ ಶವಪತ್ತೆಯಾದ ಪ್ರದೇಶದಲ್ಲಿ ಸಾವಿಗೂ ಮುನ್ನ ಕುದುರೆ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಹಳೆ ದ್ವೇಷ ಹಾಗೂ ಪ್ರೀತಿ-ಪ್ರೇಮ ಹೀಗೆ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ್ದಾರೆ.

    ಮಗನನ್ನು ಕಳೆದುಕೊಂಡ ತಂದೆ ಕುಲ್ ಭಾಯ್ ರಾಥೋಡ್ ಉಮ್ರಾಲ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಇತ್ತೀಚೆಗೆ ಕುದುರೆಯೊಂದನ್ನು ಖರೀದಿಸಿದ್ದನು. ಆ ಬಳಿಕ ಕೆಲ ಮೇಲ್ವರ್ಗದ ಜನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅಲ್ಲದೇ ಕುದುರೆ ಮಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಗುರುವಾರ ಮಗ ತನ್ನ ಕುದುರೆಯೊಂದಿಗೆ ಫಾರ್ಮ್ ಹೌಸ್ ಹೋಗಿದ್ದನು. ಬಳಿಕ ಸಂಜೆ ಅಲ್ಲಿಂದ ಕರೆ ಮಾಡಿ ರಾತ್ರಿಯ ಊಟಕ್ಕೆ ಮನೆಗೆ ಬರುತ್ತೇನೆ ಅಂತ ಹೇಳಿದ್ದನು. ಆದ್ರೆ ರಾತ್ರಿಯಾದ್ರೂ ಆತ ಮನೆಗೆ ಬರಲಿಲ್ಲ. ಹೀಗಾಗಿ ನಾವು ಆತನ ಹುಡುಕಾಟ ಶುರುಮಾಡಿದೆವು. ಈ ವೇಳೆ ಆತ ಫಾರ್ಮ್ ಹೌಸ್ ಗೆ ಹೋಗೋ ಮಾರ್ಗದ ಬದಿಯಲ್ಲೆ ಕೊಲೆಯಾಗಿ ಹೋಗಿದ್ದನು. ಕುದುರೆಯೊಂದಿಗೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ರಜಪೂತ ವ್ಯಕ್ತಿಗಳು ಹರಿತವಾದ ಆಯುಧಗಳನ್ನು ಬಳಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತ ಪ್ರದೀಪ್ ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.

    ಘಟನೆಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆಂದಲ್ಲಿ ಮನಗ ಶವಸಂಸ್ಕಾರ ಮಾಡುವುದಿಲ್ಲ ಎಂದು ಪ್ರದೀಪ್ ಪೋಷಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.