Tag: Men

  • 300 ಕೆಜಿ ಸಾಗಿಸುತ್ತಿದ್ದ ಬೆಳ್ಳಿ ಇಬ್ಬರು ಅರೆಸ್ಟ್- 63 ಲಕ್ಷ ರೂ. ನಗದು, ಎರಡು ದುಬಾರಿ ಕಾರು ವಶ

    300 ಕೆಜಿ ಸಾಗಿಸುತ್ತಿದ್ದ ಬೆಳ್ಳಿ ಇಬ್ಬರು ಅರೆಸ್ಟ್- 63 ಲಕ್ಷ ರೂ. ನಗದು, ಎರಡು ದುಬಾರಿ ಕಾರು ವಶ

    ಚಿಕ್ಕೋಡಿ (ಬೆಳಗಾವಿ): ಅಕ್ರಮವಾಗಿ 300 ಕೆಜಿ ಬೆಳ್ಳಿ ಸಾಗಿಸುತ್ತಿದ್ದ ಇಬ್ಬರನ್ನು ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೋಲಿಸರು ಬಂಧಿಸಿದ್ದಾರೆ.

    ತಮಿಳುನಾಡಿನ ಸವಾಪೇಟ್ ಸೇಲಂ ನಿವಾಸಿ ವಿಜಯಕುಮಾರ್ ಆತ್ಮಾರಾಮ್ ಶಿಂಧೆ (48) ಹಾಗೂ ಮಹಾರಾಷ್ಟ್ರದ ಸಾತಾರ ಜಿಲ್ಲೆ ಕಟಾವ್ ತಾಲೂಕಿನ ಕಲ್ಲೇಡೊನ್ ಗ್ರಾಮದ ನಿವಾಸಿ ರೀಯಾಜ್ ಶಾಕೀರ್ ಹುಸೇನ್ ಮುಲ್ಲಾನಿ (20) ಬಂಧಿತ ಆರೋಪಿಗಳು. ಬಂಧಿತರಿಂದ 300 ಕೆ.ಜಿ ಬೆಳ್ಳಿಯ ಗಟ್ಟಿ ಮತ್ತು ಆಭರಣಗಳು, 63 ಲಕ್ಷ ರೂ. ನಗದು, 3 ಲಕ್ಷ ರೂ. ಹಾಗೂ 9 ಲಕ್ಷ ಮೌಲ್ಯದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಆರೋಪಿಗಳು ಬೆಳ್ಳಿಯ ಗಟ್ಟಿ ಮತ್ತು ಆಭರಣವನ್ನು ಅಕ್ರಮವಾಗಿ ಕಾರಿನಲ್ಲಿ ಮಹಾರಾಷ್ಟ್ರದಿಂದ ತಮಿಳನಾಡಿನ ಸೇಲಂಗೆ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಯಮಕನಮರಡಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ತಂಡ ರಚಿಸಿದ ಪೊಲೀಸರು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ದಾದಬಾನಹಟ್ಟಿ ಕ್ರಾಸ್ ಬಳಿ ಎರಡು ಕಾರನ್ನು ತಪಾಸಣೆಗೆ ಒಳಪಡಿಸಿದ್ದರು. ಈ ವೇಳೆ ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿತ್ತು. ಬಳಿಕ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಕುರಿತು ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

  • 30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    30 ಲಕ್ಷ ರೂ. ಮೌಲ್ಯದ ಆನೆ ದಂತ ಸಾಗಿಸುತ್ತಿದ್ದ ಇಬ್ಬರ ಬಂಧನ

    – ಎರಡು ಆನೆ ದಂತ ವಶಕ್ಕೆ ಪಡೆದ ಅಧಿಕಾರಿಗಳು

    ಮಂಗಳೂರು: ಆನೆ ದಂತ ಕಳವು ಮಾಡಿ ಮಾರುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪುತ್ತೂರು ಅರಣ್ಯ ಸಂಚಾರ ದಳವು ಇಬ್ಬರನ್ನು ಬಂಧಿಸಿದೆ.

    ಮಡಿಕೇರಿ ನಿವಾಸಿ ದಿನೇಶ್ ಹಾಗೂ ಸಕಲೇಶಪುರದ ನಿವಾಸಿ ಕುಮಾರ್ ಬಂಧಿತ ಆರೋಪಿಗಳು. ಪುತ್ತೂರು ಅರಣ್ಯ ಸಂಚಾರ ದಳದ ಅಧಿಕಾರಿಗಳು ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಿಂದ ಸುಮಾರು 30 ಲಕ್ಷ ರೂ. ಮೌಲ್ಯದ ಎರಡು ಆನೆಯ ದಂತಗಳನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಗಳು ಓಮ್ನಿ ಕಾರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪುದುಬೆಟ್ಟು ಪ್ರದೇಶದಲ್ಲಿ ಸಕಲೇಶಪುರದಿಂದ ಧರ್ಮಸ್ಥಳ ಮಾರ್ಗವಾಗಿ ಸಾಗುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿ 30 ಲಕ್ಷ ರೂ. ಬೆಲೆಬಾಳುವ ಎರಡು ಆನೆ ದಂತ ಪತ್ತೆಯಾಗಿವೆ.

    ಬಂಧಿತ ದಿನೇಶ್ ಹಾಗೂ ಕುಮಾರ್ ಆನೆ ದಂತ ಹಾಗೂ ಅವುಗಳನ್ನು ಸಾಗಿಸಲು ಬಳಸಿದ ಮಾರುತಿ ಓಮ್ನಿ ಕಾರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು, ಆನೆಗಳನ್ನು ಕೊಂದು ಅದರ ದಂತವನ್ನು ಕದ್ದು ಮಾರುತ್ತಿದ್ದ ಬಗ್ಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆಯೂ ಇದೇ ರೀತಿ ಆನೆ ದಂತಗಳನ್ನು ಮಾರಾಟ ಮಾಡಿರುವ ಶಂಕೆಯಿಂದ ಅಧಿಕಾರಿಗಳು ಮತ್ತಷ್ಟು ವಿಚಾರಣೆ ನಡೆಸಿದ್ದಾರೆ.

  • ಕೇವಲ ಪುರುಷರೇ ಮಾಡುವ ಜಾತ್ರೆ

    ಕೇವಲ ಪುರುಷರೇ ಮಾಡುವ ಜಾತ್ರೆ

    ದಾವಣಗೆರೆ: ಜಾತ್ರೆ, ಪೂಜೆ ಎಂದರೆ ಸಾಕು ಹೆಂಗಳೆಯರೇ ಮುಂದೆ ನಿಂತು ಸಡಗರ ಸಂಭ್ರಮದಿಂದ ಆಚರಣೆ ಮಾಡೋದು ಮಾಮೂಲು. ದಾವಣಗೆರೆಯ ಸುತ್ತಮುತ್ತಲು ನಡೆಯುವ ಮಹೇಶ್ವರ ಜಾತ್ರೆ ಕೇವಲ ಪುರುಷರೇ ನಡೆಸಬೇಕು. ದೇವರ ದರ್ಶನ, ಅಡುಗೆ ಮಾಡುವುದು ಹಾಗೂ ಊಟ ಮಾಡುವುದು ಎಲ್ಲ ಗಂಡಸರೆ. ಹೀಗಾಗಿ ಇದೊಂದು ಗಂಡಸರ ಜಾತ್ರೆ ಎಂದೆ ಪ್ರಸಿದ್ಧಿಯಾಗಿದೆ..

    ತಾಲೂಕಿನ ಬಸಾಪೂರದ ಮಹೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದ್ದು, ಗ್ರಾಮ ಬಿಟ್ಟು ಎರಡು ಕಿಲೋ ಮೀಟರ್ ದೂರದಲ್ಲಿರುವ ಮಹೇಶ್ವರ ಸ್ವಾಮೀ ಉಗ್ರ ದೇವರೆಂದು ನಂಬಿಕೆ ಇದೆ. ಭಕ್ತರಲ್ಲಿ ಯಾವುದೇ ತಪ್ಪಾದರೂ ಶಿಕ್ಷೆ ಖಚಿತವಂತೆ. ಹೀಗಾಗಿ ಸುತ್ತಲಿನ ಗ್ರಾಮಗಳ ಜನರು ಇಲ್ಲಿ ಕಟ್ಟು ನಿಟ್ಟಾಗಿ ಬಂದು ಜಾತ್ರೆಯ ದಿನ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿಯೇ ಹೋಗಬೇಕು. ಇದು 400 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

    ಈ ಜಾತ್ರೆಯ ವಿಶೇಷವೆಂದರೆ ಪುರುಷರಿಗೆ ಮಾತ್ರ ಈ ಕ್ಷೇತ್ರದಲ್ಲಿ ಪ್ರವೇಶ. ಅಪ್ಪಿತಪ್ಪಿಯೂ ಕೂಡಾ ಮಹಿಳೆಯರು ಅಥವಾ ಸಣ್ಣ ಹೆಣ್ಣು ಮಗು ಕೂಡಾ ಇಲ್ಲಿ ಕಾಲಿಡುವಂತಿಲ್ಲ. ಇದೇ ಮಹೇಶ್ವರ ಸ್ವಾಮೀಯ ಕಟ್ಟಾಜ್ಞೆಯಂತೆ. ಹೀಗಾಗಿ ಗಂಡಸರೇ ಇಲ್ಲಿ ಜಾತ್ರೆಯ ಪೂಜಾ ಕಾರ್ಯ ಮಾಡಬೇಕು. ಅದರಲ್ಲೂ ಪ್ರತಿಯೊಂದು ಮನೆಯ ಹಿರಿಮಗ ಕಡ್ಡಾಯವಾಗಿ ಮಹೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಹಾಜರಾಗಿರಲೇ ಬೇಕು. ಹೆಂಗಸರೆಂದರೇ ಆಗದ ಈ ಮಹೇಶ್ವರ ಸ್ವಾಮಿಗೆ ದೇವಸ್ಥಾನ ಸಹ ಇಲ್ಲ, ದೊಡ್ಡ ಮರದ ಕೆಳಗೆ ಇತನಿಗೆ ಪೂಜೆ ಪುರಸ್ಕಾರಗಳು ನಡೆಯುತ್ತಿವೆ.

    ಎಷ್ಟೇ ಜನ ಭಕ್ತರು ಬಂದರೂ ಸಹ ಅವರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ವಿಶೇಷವಾಗಿ ಅನ್ನ ಸಾಂಬಾರ್ ಹಾಗೂ ಬಾಳೆ ಹಣ್ಣು ಇಲ್ಲಿನ ಪ್ರಸಾದ. ಬಾಳೆ ಎಂದರೆ ಮಹೇಶ್ವರ ಸ್ವಾಮೀಯ ಪ್ರತೀಕವಂತೆ. ಪ್ರತಿಯೊಬ್ಬರು ಬಂದು ಇಲ್ಲಿ ಬಾಳೆ ಹಣ್ಣು ಪ್ರಸಾದ ಸ್ವೀಕರಿಸುವುದು ಕಡ್ಡಾಯ. ಮೇಲಾಗಿ ದೇವರಿಗೆ ನಮಸ್ಕರಿಸಿದರೆ ವಿಭೂತಿ ಧರಿಸುವುದು ಕಡ್ಡಾಯವಂತೆ. ಇನ್ನೊಂದು ವಿಶೇಷವೆಂದರೆ ಇಲ್ಲೊಂದು ಬಾವಿ ಇದ್ದು, ಈ ಬಾವಿಗೆ ಬಾಳೆಹಣ್ಣಗಳನ್ನ ಬಿಡಲಾಗುತ್ತದೆ. ಇದರಲ್ಲಿ ಹಾಕಿದ ಎಲ್ಲ ಬಾಳೆ ಹಣ್ಣು ಮುಳುಗಲ್ಲವಂತೆ. ಹೀಗೆ ಮುಳುಗಿದರೆ ಆಪತ್ತು ಕಾದಿದೆ ಎಂಬುದು ಭಕ್ತರ ಬಲವಾದ ನಂಬಿಕೆ. ಹೀಗಾಗಿ ಪ್ರತಿಯೊಂದನ್ನ ಕಟ್ಟುನಿಟ್ಟಾಗಿ ಮಾಡಬೇಕು. ಇಷ್ಟೆಲ್ಲಾ ಅದ್ಧೂರಿಯಾಗಿ ನಡೆಯುವ ಈ ಜಾತ್ರೆಗೆ ಸ್ತ್ರೀ ಪ್ರವೇಶ ಯಾಕೆ ಇಲ್ಲಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ.

  • ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    ನಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ?

    – ದೆಹಲಿ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ
    – ನ್ಯಾಯಾಲಯದಲ್ಲಿ ಅವನಲ್ಲ, ಅವಳು ವಾದ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕೋರ್ಟಿನಲ್ಲಿ ವಿಚಿತ್ರ ಪ್ರಸಂಗ ನಡೆದಿದೆ. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಬ್ಬ ಕೋರ್ಟ್ ಮುಂದೆ ತಾನು ಪುರುಷನಲ್ಲ ಮಹಿಳೆ, ಲೈಂಗಿಕ ಕಿರುಕುಳ ನೀಡಲು ಹೇಗೆ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾನೆ.

    ಮಹಿಳಾ ಸಹೋದ್ಯೋಗಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತಿತ್ತು. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಆರೋಪಿ ಮಹಿಳೆಯರ ಬಟ್ಟೆ ಧರಿಸಿ ಮೇಕಪ್ ಹಾಗೂ ಹೇರ್ ಸ್ಟೈಲ್ ಮಾಡಿಕೊಂಡು ವಿಚಾರಣೆ ಆಗಮಿಸಿದ್ದನ್ನು ನೋಡಿ ನ್ಯಾಯಧೀಶರು ಕೆಲಕಾಲ ಗೊಂದಲಕ್ಕೆ ಒಳಗಾದರು.

    ನ್ಯಾಯಧೀಶರ ಮುಂದೆ ವಾದ ಮಂಡಿಸಿದ ಆರೋಪಿ, ತನಗೆ ಎಂದಿಗೂ ಮಹಿಳೆಯರ ಬಗ್ಗೆ ಯಾವುದೇ ಆಕರ್ಷಣೆ ಇಲ್ಲ. ಅಲ್ಲದೆ ಸ್ವತಃ ಮಹಿಳೆಯಾಗುವ ಪ್ರಕ್ರಿಯೆಯಲ್ಲಿದ್ದೇನೆ. ಬಾಲ್ಯದಿಂದಲೂ ಲೈಂಗಿಕ ಡಿಸ್ಫೊರಿಯಾದಿಂದ (sexual dysphoria) ಬಳಲುತ್ತಿದ್ದೇನೆ. ಲೈಂಗಿಕ ಡಿಸ್ಫೊರಿಯಾ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೈವಿಕ ಲಿಂಗಕ್ಕೆ ವಿರುದ್ಧವಾಗಿ ಸ್ತ್ರೀ ಅಥವಾ ಪುರುಷ ಎಂದು ತನ್ನ ಗುರುತನ್ನು ಅನುಭವಿಸಲು ಪ್ರಾರಂಭಿಸುವ ಸಮಸ್ಯೆಯಾಗಿದೆ ಎಂದು ಕೋರ್ಟ್ ಮುಂದೆ ಆರೋಪಿ ವಿವರಿಸಿದ್ದಾನೆ. ತನ್ನನ್ನು ತಾನು ಒಬ್ಬ ಮಹಿಳೆ ಎಂದು ಬಣ್ಣಿಸಿಕೊಂಡಿದ್ದಾನೆ. ಲೈಂಗಿಕ ಕಿರುಕುಳ ನೀಡಿರುವ ಮಹಿಳೆ ನನಗೆ ಸಹೋದರಿ ಸಮ. ಹೀಗಿರುವಾಗ ಹೇಗೆ ಲೈಂಗಿಕ ಕಿರುಕುಳ ನೀಡಲು ಸಾಧ್ಯ ಎಂದು ಕೋರ್ಟ್ ಮುಂದೆ ಪ್ರಶ್ನಿಸಿದ್ದಾನೆ. ಹೀಗಾಗಿ ಈ ಆರೋಪದಲ್ಲಿ ಹುರುಳಿಲ್ಲ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಆರೋಪದ ಕ್ರಿಮಿನಲ್ ಮೊಕದ್ದಮೆ ರದ್ದು ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಆದರೆ ಆರೋಪಿಯ ಈ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

    ಕೋರ್ಟ್ ಮುಂದೆ ಹಾಜರಾಗಿದ್ದ ದೂರುದಾರ ಮಹಿಳೆ ಆರೋಪಿಯ ಈ ವಾದವನ್ನು ಒಪ್ಪಿಕೊಂಡಿಲ್ಲ. ಕೋರ್ಟ್ ಈ ಪ್ರಕರಣವನ್ನು ಇತ್ಯರ್ಥ ಪಡಿಸುವ ಮನಸ್ಸು ಮಾಡಿದ್ದರೂ ಮಹಿಳೆಯ ಪರ ವಕೀಲರು ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಪ್ರಕರಣ ರದ್ದು ಮಾಡಲು ಕೋರ್ಟ್ ನಿರಾಕರಿಸಿತು.

    ಪ್ರಕರಣದ ಹಿನ್ನೆಲೆ:
    2014ರಿಂದ ದೂರುದಾರ ಮಹಿಳೆ ಮತ್ತು ಆರೋಪಿ ಇಬ್ಬರು ನೊಯ್ಡಾದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2016ರ ಅಕ್ಟೋಬರ್‍ನಲ್ಲಿ ದಾಖಲಾದ ಎಫ್‍ಐಆರ್ ಪ್ರಕಾರ, ದೆಹಲಿಯ ಕೇನ್ನಾಟ್ ಪ್ಲೇಸ್‍ನಲ್ಲಿರುವ ಪಬ್‍ವೊಂದರಲ್ಲಿ ಪಾರ್ಟಿ ವೇಳೆ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ತಾವು ಕೆಲಸ ಮಾಡುತ್ತಿದ್ದ ಕಂಪನಿಗೆ ಹಲವಾರು ಬಾರಿ ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಆರೋಪಿಗಳ ಪರವಾಗಿ ತೀರ್ಮಾನ ತೆಗದುಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಕಳೆದ ಆಗಸ್ಟ್ ನಲ್ಲಿ ಕೆಳ ನ್ಯಾಯಾಲಯವು ಆರೋಪಿಯ ವಿರುದ್ಧ ವಿಚಾರಣೆ ನಡೆಯುತಿತ್ತು. ಈ ಪ್ರಕರಣ ರದ್ದು ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಆರೋಪಿ ಅರ್ಜಿ ಸಲ್ಲಿಸಿದ್ದನು.

  • ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಮಹಿಳೆಯರಿಗಿಂತ ಗಂಡಸರೇ ಮುಂದು

    – ನೇಣಿಗೆ ಮೊದಲ ಆದ್ಯತೆ, ವಿಷಕ್ಕೆ ಎರಡನೇ ಆದ್ಯತೆ
    – ಚಿಕ್ಕಬಳ್ಳಾಪುರದಲ್ಲಿ ಮೂರು ವರ್ಷದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಹೆಸರಿಗೆ ಮಾತ್ರ ಚಿಕ್ಕದಾದ್ರೂ ಆ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.

    ಹೌದು ಕಳೆದ ಮೂರು ವರ್ಷದಿಂದ ಹೆಚ್ಚಿನ ಮಂದಿ ಆತ್ಮಹತ್ಯೆ ಮಾಡಿಕೊಳ್ತಿದ್ದು, ಇದು ಸ್ವತಃ ಜಿಲ್ಲಾಡಳಿತ, ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಅಂಕಿ ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಳ್ಳೋದ್ರಲ್ಲಿ ಗಂಡಸರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಕೂಗಳತೆ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಅತಿವೇಗವಾಗಿ ಬೆಳೆಯುತ್ತಿರುವ ಜಿಲ್ಲೆಗಳಲ್ಲಿ ಒಂದು. ಸಿಲ್ಕ್ ಮಿಲ್ಕ್ ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿಯಾಗಿರು ಚಿಕ್ಕಬಳ್ಳಾಪುರದಲ್ಲಿ ಈಗ ಆತ್ಮಹತ್ಯೆ ವಿಚಾರಗಳಿಗೆ ಕುಖ್ಯಾತಿಯಾಗುತ್ತಿದೆ.

    ಕೇವಲ ಮೂರು ವರ್ಷಗಳಲ್ಲಿ ನೇಣು ಹಾಕಿಕೊಂಡು 287 ಮಂದಿ, ವಿಷ ಸೇವಿಸಿ 146 ಮಂದಿ, ನೀರಿನಲ್ಲಿ ಮುಳುಗಿ 19 ಮಂದಿ, ಬೆಂಕಿ ಹಚ್ಚಿಕೊಂಡು 27 ಮಂದಿ ಸೇರಿದಂತೆ ಒಟ್ಟು 489 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 489 ಮಂದಿಯಲ್ಲಿ 159 ಮಹಿಳೆಯರಾದರೆ 330 ಮಂದಿ ಪುರುಷರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಸ್ವತಃ ಪೊಲೀಸ್ ಇಲಾಖೆಯ ಅಂಕಿ ಅಂಶಗಳು ತಿಳಿಸಿವೆ.

    ಆತ್ಮಹತ್ಯಗೆ ಹಲವು ಕಾರಣಗಳು!
    ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದು ಸ್ವತಃ ಚಿಕ್ಕಬಳ್ಳಾಪುರ ಪೊಲೀಸ್ ಇಲಾಖೆಗೂ ಅಘಾತ ತಂದಿದೆ. ಇದರಿಂದ ತಂದೆ ತಾಯಿಗಳು ತಮ್ಮ ಮಕ್ಕಳ ಬಗ್ಗೆ ಉತ್ತಮ ಸಂಸ್ಕೃತಿಯನ್ನು ರೂಡಿಸುವಂತೆ ಸ್ವತಃ ಚಿಕ್ಕಬಳ್ಳಾಪುರ ಎಸ್ಪಿ ಅಭಿನವ್ ಖರೆ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗಿ ಯುವ ಸಮುದಾಯದ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿನ್ನಲೆ ಆತಂಕ ವ್ಯಕ್ತಪಡಿಸಿರುವ ಚಿಕ್ಕಬಳ್ಳಾಪುರದ ಖ್ಯಾತ ಮನೋರೋಗ ತಜ್ಞ ಹಾಗೂ ಸರ್ಕಾರಿ ವೈದ್ಯ ಕೀಶೋರ್ ಕುಮಾರ್, ಮಾನಸಿಕ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಸೂಕ್ತ ಚಿಕಿತ್ಸೆ ನೀಡಿದ್ರೆ ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗಲ್ಲ ಅಂತಾರೆ. ಆತ್ಮಹತ್ಯೆಗೆ ಶಿಕ್ಷಣದ ಕೊರತೆ, ಬಡತನ, ಹಣಕಾಸಿನ ತೊಂದರೆ, ಮಾದಕ ವಸ್ತುಗಳ ಚಟ, ಅತಿಯಾದ ಮೊಬೈಲ್ ಬಳಕೆ ಸೇರಿದಂತೆ ಹಲವು ಕಾರಣಗಳು ಕಂಡು ಬರುತ್ತಿದ್ದು ಆರಂಭದಲ್ಲೆ ಖಿನ್ನತೆಗೆ ಒಳಗಾದವರಿಗೆ ಕೌನ್ಸಿಲಿಂಗ್ ನೀಡಿದರೆ ಆತ್ಮಹತ್ಯೆ ಪ್ರಯತ್ನಗಳಿಂದ ದೂರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

  • ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ದೇಶದಲ್ಲಿನ ಎಲ್ಲ ಪುರುಷರು ಅತ್ಯಾಚಾರಿಗಳೇ – ರಾಹುಲ್‍ಗೆ ಸ್ಮೃತಿ ಇರಾನಿ ಪ್ರಶ್ನೆ

    ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ “ರೇಪ್ ಇನ್ ಇಂಡಿಯಾ” ಎಂಬ ಹೇಳಿಕೆ ಕುರಿತು ಆಕ್ರೋಶ ಭುಗಿಲೆದ್ದಿದ್ದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಯವರು ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ಸುದ್ದಿಗಾರರೊ0ದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ರೇಪ್ ಇನ್ ಇಂಡಿಯಾ ಎಂದು ಯಾವಾಗ ಹೇಳಿದರೋ ಅಂದೇ ದೇಶದ ಎಲ್ಲ ಪುರುಷರು ಅತ್ಯಾಚಾರಿಗಳು ಎಂದು ತಿಳಿಯಿತು. ಕಾಂಗ್ರೆಸ್ ಸಂಸದರು ಭಾರತದ ಮೇಲೆ ಅತ್ಯಾಚಾರ ಎಸಗಲು ಪುರುಷರನ್ನು ಯಾವಾಗ ಕರೆಸಿದರು ಎಂಬುದೇ ಆಶ್ಚರ್ಯಕರ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

    ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಆಕ್ಷೇಪಾರ್ಹ. ಮಹಿಳೆಯರು ಇದಕ್ಕೆ ಪ್ರತ್ಯುತ್ತರ ನೀಡಬೇಕು. ಆದರೆ ನಾನೀಗ ಪ್ರಶ್ನಿಸುತ್ತೇನೆ. ರಾಹುಲ್ ಗಾಂಧಿಯವರ ಪ್ರಕಾರ ಭಾರತದಲ್ಲಿನ ಪ್ರತಿಯೊಬ್ಬ ಪುರುಷ ಅತ್ಯಾಚಾರಿಯೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದರು.

    ಈ ಕುರಿತು ಸೋನಿಯಾ ಗಾಂಧಿಯವರೂ ಸಹ ವಿವರಿಸಬೇಕು, ಇಲ್ಲವಾದಲ್ಲಿ ಮಹಿಳೆಯರು ಇಂತಹ ಆಕ್ಷೇಪಾರ್ಹ ಹೇಳಿಕೆಯನ್ನು ಒಪ್ಪುವುದಿಲ್ಲ. ಈ ಕುರಿತು ರಾಹುಲ್ ಗಾಂಧಿ ಅವರು ಎಚ್ಚರಿಕೆಯಿಂದ ಕೇಳಬೇಕು. ಬನ್ನಿ ಭಾರತದಲ್ಲಿ ಅತ್ಯಾಚಾರ ಮಾಡಿ, ಭಾರತದ ಕುಟುಂಬಗಳು ನಿಮಗೆ ಆಹ್ವಾನ ನೀಡಿವೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರ ಮೇಲೆ ಅತ್ಯಾಚಾರ ಎಸಗಲು ಕರೆ ನೀಡಿದ್ದಾರೆ. ದೇಶದ ಜನತೆಗೆ ರಾಹುಲ್ ಗಾಂಧಿಯವರು ನೀಡುವ ಸಂದೇಶ ಇದೇನಾ? ಇವರನ್ನು ಶಿಕ್ಷಿಸಬೇಕಿದೆ, ರಾಹುಲ್ ಗಾಂಧಿ ಭಾರತದ ಮಹಿಳೆಯರು ಹಾಗೂ ಜನತೆಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

    ಜಾರ್ಖಂಡ್‍ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತಾರೆ. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರೂ ರೇಪ್ ಇನ್ ಇಂಡಿಯಾ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

    ರಾಹುಲ್ ಗಾಂಧಿಯವರ ಅತ್ಯಾಚಾರದ ಹೇಳಿಕೆ ಕುರಿತು ಮೇಲ್ಮನೆ ಹಾಗೂ ಕೆಳಮನೆ ಎರಡರಲ್ಲೂ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ. ಈ ಕುರಿತು ರಾಹುಲ್ ಗಾಂಧಿಯವರು ಕ್ಷಮೆಯಾಚಿಸಬೇಕು ಎಂದು ಆಡಳಿತಾರೂಢ ಪಕ್ಷಗಳು ಪಟ್ಟು ಹಿಡಿದಿವೆ.

  • ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

    ಪುರುಷರು ಮನೆಯಲ್ಲೇ ಇದ್ದರೆ ಮಹಿಳೆಯರು ಸುರಕ್ಷಿತವಾಗಿರುತ್ತಾರೆ – ಮಹಿಳೆಯ ವಿಡಿಯೋ ವೈರಲ್

    ನವದೆಹಲಿ: ಮಹಿಳೆಯರು ಮನೆಯ ಒಳಗಿರುವುದರಿಂದ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳೆಯರ ಬದಲಿಗೆ ಪುರುಷರು ಮನೆಯಲ್ಲಿದ್ದರೆ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ ಎಂದು ಮಹಿಳೆಯೊಬ್ಬರು ಪ್ರತಿಭಟಿಸಿ, ಮಾತನಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಈ ವಿಡಿಯೋವನ್ನು ನತಾಶಾ ಎಂಬುವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಭಾರತೀಯ ಮಹಿಳೆಯ ಧ್ವನಿ ಇದಾಗಿದೆ. ನಮಗೆ ಪುರುಷರು ಸುರಕ್ಷತೆ ನೀಡುವುದು ಬೇಕಾಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪುರುಷರೇ ಕಾರಣ. ನೀವು ಮನೆಯ ಒಳಗಿದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಇವರ ಹೇಳಿಕೆಯನ್ನು ಎಷ್ಟು ದಿನಗಳ ಕಾಲ ನಾವು ನಿರ್ಲಕ್ಷಿಸಬಹುದು ಎಂದು ನತಾಶಾ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

    ಈ ವಿಡಿಯೋದಲ್ಲಿ ವಯಸ್ಕ ಮಹಿಳೆಯೊಬ್ಬರು ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದ್ದು, ಅದರಲ್ಲಿ ಅವಳು ಅತ್ಯಾಚಾರವಾದಳು, ಅವಳನ್ನು ಅತ್ಯಾಚಾರಗೈದ ಎಂದು ಬರೆದಿದೆ. ಇದರಲ್ಲಿ ಅವಳು ಅತ್ಯಾಚಾರವಾದಳು ಎಂಬ ಸಾಲುಗಳಿಗೆ ತಪ್ಪು ಎಂದು ಚಿಹ್ನೆ ಹಾಕಲಾಗಿದೆ. ಅವಳನ್ನು ಅತ್ಯಾಚಾರಗೈದ ಎಂಬುದಕ್ಕೆ ಸಹಿ ಚಿಹ್ನೆ ಹಾಕಲಾಗಿದೆ. ಅಲ್ಲದೆ ಹ್ಯಾಶ್‍ಟ್ಯಾಗ್‍ನೊಂದಿಗೆ ಚೇಂಜ್ ದಿ ನರೇಟಿವ್ ಎಂದು ಇನ್ನೊಂದು ಭಿತ್ತಿ ಪತ್ರದಲ್ಲಿ ಬರೆಯಲಾಗಿದೆ.

    ಈ ಮೂಲಕ ಮಹಿಳೆಯು ಸಂದೇಶ ರವಾನಿಸಿದ್ದು, ಮಹಿಳೆಯರು ಅತ್ಯಾಚಾರಕ್ಕೊಳಗಾಗುವುದಿಲ್ಲ. ಬದಲಿಗೆ ಅವಳನ್ನು ಅತ್ಯಾಚಾರ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಂಜೆ 7ರ ನಂತರ ಮಹಿಳೆಯೇ ಯಾಕೆ ಮನೆಯಲ್ಲಿರಬೇಕು? ಪುರುಷರು ಏಕೆ ಇರಬಾರದು ಇದನ್ನು ಸ್ಪಷ್ಟಪಡಿಸಬೇಕು. ಎಲ್ಲ ಪುರುಷರು ಸಂಜೆ 7 ಗಂಟೆಯೊಳಗೆ ಮನೆಗೆ ಸೇರಿ ಬೀಗ ಹಾಕಿಕೊಳ್ಳಿ. ಆಗ ಅತ್ಯಾಚಾರ ಪ್ರಕರಣಗಳು ನಡೆಯುವುದಿಲ್ಲ, ಮಹಿಳೆಯರು ಸುರಕ್ಷಿತವಾಗಿರುತ್ತಾರೆ. ಪೊಲೀಸರು ನಮಗೆ ಸುರಕ್ಷತೆ ನೀಡಲು ಮುಂದಾಗುತ್ತಾರೆ. ಆದರೆ ನಮಗೆ ನೀಡುವ ಬದಲು ನಮ್ಮ ಸಹೋದರರು, ಪುರುಷರಿಗೆ ಸುರಕ್ಷತೆ ನೀಡಬೇಕು. ಏಕೆಂದರೆ ಅವರಿಂದಲೇ ಸಮಸ್ಯೆಯಾಗುತ್ತಿದೆ. ಪುರುಷರು ಮನೆಯ ಒಳಗಡೆ ಇದ್ದರೆ ಇಡೀ ಜಗತ್ತೇ ಮುಕ್ತವಾಗಿರುತ್ತದೆ, ಮಹಿಳೆಗೆ ಯಾವುದೇ ಆತಂಕ ಇರುವುದಿಲ್ಲ ಎಂದು ವಿಡಿಯೋದಲ್ಲಿ ಮಹಿಳೆ ಹೇಳಿದ್ದಾರೆ.

    ಈ ವಿಡಿಯೋ ಇಂಟರ್ ನೆಟ್‍ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವರು ಈ ಕುರಿತು ಸಮರ್ಥನೆ ಮಾಡಿಕೊಂಡಿದ್ದು, ಭಾರತದ ಎಲ್ಲ ಮಹಿಳೆಯರ ಭಾವನೆಯನ್ನು ಇವರು ಹೇಳಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ನಟ್ಟ ನಡುರಸ್ತೆಯಲ್ಲಿ ಲಾಡ್ಜ್ ರಾಣಿಯರ ಕಾಟ-ಗಂಡಸರೇ ಹುಷಾರಪ್ಪೋ ಹುಷಾರು..!

    ನಟ್ಟ ನಡುರಸ್ತೆಯಲ್ಲಿ ಲಾಡ್ಜ್ ರಾಣಿಯರ ಕಾಟ-ಗಂಡಸರೇ ಹುಷಾರಪ್ಪೋ ಹುಷಾರು..!

    -ಪವಿತ್ರ ಕಡ್ತಲ

    ಬೆಂಗಳೂರು: ಯುವಕರೇ ,ಅಜ್ಜಂದಿರೇ, ಅಂಕಲ್ ಗಳೇ ಈಗ ತಾನೇ ಕಾಲೇಜ್ ಮೆಟ್ಟಿಲು ಹತ್ತುತ್ತಿರೋ ಚಿಗುರು ಮೀಸೆ ಹುಡುಗರೇ ಒಟ್ಟಾರೆ ಬೆಂಗಳೂರಿನಲ್ಲಿ ವಾಸವಿರುವ ಗಂಡಸರೇ ಈ ರೋಡ್‍ನಲ್ಲಿ ಓಡಾಡೋ ಮುಂಚೆ ಒಂದು ಸಲ ಯೋಚನೆ ಮಾಡಿ. ಒಂದೆರಡು ನಿಮಿಷ ಇಲ್ಲಿ ನಿಂತರು ಕೆಟ್ಟೆ ಅಂತಾನೇ ಅರ್ಥ. ನಿಮಗೆ ಶುರುವಾಗುತ್ತೆ ಆಂಟಿಯಂದಿರ ಕಾಟ. “ಹೇ ಬಾರೋ” ಅಂತಾ ಬುಟ್ಟಿಗೆ ಹಾಕಿಕೊಳ್ಳೋಕೆ ಲೇಡಿಸ್ ಅಡ್ಡಾ ನಿಮ್ಮ ಮುಂದೆ ಪ್ರತ್ಯಕ್ಷವಾಗುತ್ತದೆ.

    ನೋಡೋಕೆ ಕೊಂಚ ಅಪೀಶಿಯಲ್ ರೋಡ್ ಹಾಗೆ ಕಾಣುತ್ತದೆ. ಯಾರಿಗೂ ಗೊತ್ತೆ ಆಗದಂತೆ ಇಲ್ಲಿ ರಸ್ತೆ ರಸ್ತೆಯಲ್ಲಿ ಹುಡಗಿಯರು ಸೇಲ್‍ಗಿರ್ತಾರೆ. ಗರತಿ ಗಂಗಮ್ಮನಂತೆ ಪೋಸು ಕೊಡುವ ಆಂಟಿಯಂದಿರು ಟಾಪ್ ಪಿಂಪ್‍ಗಳು. ಇಡೀ ಅಡ್ಡಾ ಇವರ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿರುತ್ತದೆ. ಬೆಂಗಳೂರಿನ ಕೆಜಿ ರೋಡ್, ಮೈಸೂರು ಬ್ಯಾಂಕು ಸರ್ಕಲ್ ಮತ್ತು ಗಾಂಧಿನಗರ ಇವೆಲ್ಲವು ಮುಂಬೈ ರೆಡ್ ಲೈಟ್ ಏರಿಯಾದಂತೆ ಬದಲಾಗುತ್ತಿದೆ.

    ಈ ಮೊದಲು ಮೆಜೆಸ್ಟಿಕ್ ಬಸ್ ನಿಲ್ದಾಣದ ಅಸುಪಾಸು ನಡೆಯುತ್ತಿದ್ದ ಈ ವೇಶ್ಯಾವಾಟಿಕೆ ದಂಧೆ ಈಗ ಈ ಮುಖ್ಯ ರಸ್ತೆಗೆ ಶಿಪ್ಟ್ ಆಗಿದೆ. ಇದರ ಬೆನ್ನತ್ತಿದ್ದ ಪಬ್ಲಿಕ್ ಟಿವಿ ಲಾಡ್ಜ್ ರಾಣಿಯರ ರಹಸ್ಯವನ್ನು ಬಟಾಬಯಲು ಮಾಡಿದೆ. ಸಿಕ್ರೇಟ್ ಪಿಂಪ್‍ಗಳ ಮುಖವನ್ನು ಬಯಲಿಗೆಳೆದಿದೆ.

    ದೊಡ್ಡ ಕುಂಕುಮ ಕತ್ತಲೊಂದು ಕರಿಮಣಿ, ನತ್ತಿಗೊಂದು ಮೂಗುತಿ, ಲೈಟ್ ಕಲರ್ ಸೀರೆ. ಈ ಮೇಡಂನಾ ನೋಡಿದ್ರೆ ದೇವರಾಣೆ ಕೊಂಚನೂ ಅನುಮಾನ ಬರಲ್ಲ. ಸೈಲೆಂಟ್ ಆಗಿ ಪೋತಿಸ್ ಶೋ ರೂಂನ ಬಳಿಯ ರೋಡ್‍ನಲ್ಲಿ ನಿಂತು ಗಂಡಸರನ್ನು ಗಮನಿಸುವ ಆಂಟಿ ಮಿಕಗಳಿಗೆ ಬಲೆಹಾಕ್ತಾಳೆ. ನಮ್ಮ ಪ್ರತಿನಿಧಿ ಹತ್ತು ನಿಮಿಷ ಈ ರಸ್ತೆಯಲ್ಲಿ ನಿಂತಿದ್ದು ಅಷ್ಟೇ, ಸೊಂಟ ತಿರುಗಿಸಿಕೊಂಡು ಬಂದೇ ಬಿಟ್ಲು ನೋಡಿ. ಬಂದವಳೇ ಫೇಸ್ ರೀಡ್ ಮಾಡಿದಂಗೆ ಡೀಲ್‍ಗಿಳಿದೇ ಬಿಟ್ಟಳು. ನಾವು ವಿಚಾರಿಸೋಣ ಅಂತಾ ಅವಳ ಬಾಯಿ ಬಿಡಿಸಿದಿವಿ.

    ಮಹಿಳಾ ಪಿಂಪ್ – ಎರಡು ಸಾವಿರ ಕೊಡಿ ಬನ್ನಿ
    ಪ್ರತಿನಿಧಿ – ಹಾ ಎರಡು ಸಾವಿರನಾ?
    ಮಹಿಳಾ ಪಿಂಪ್ – ಹಾ ಹೌದು
    ಪ್ರತಿನಿಧಿ – ಫೋಟೋ ಕೊಡ್ತೀರಾ?
    ಮಹಿಳಾ ಪಿಂಪ್ – ಫೋಟೋ ಎಲ್ಲಾ ಇಲ್ಲ ಅಲ್ಲೆ ಇರಬೇಕು, ಸೆಲೆಕ್ಷನ್ ಮಾಡೋಕೆ ನಾಲ್ಕು ಜನ ಇರ್ತಾರೆ
    ಪ್ರತಿನಿಧಿ – ಎಲ್ಲಿ ?
    ಮಹಿಳಾ ಪಿಂಪ್ – ಮಲ್ಲೇಶ್ವರಂಗೆ
    ಪ್ರತಿನಿಧಿ – ಪೊಲೀಸರವರ ಪ್ರಾಬ್ಲಂ ಇಲ್ವಾ
    ಮಹಿಳಾ ಪಿಂಪ್ – ಪೊಲೀಸನವರ ಪ್ರಾಬ್ಲಂ ಇಲ್ಲ
    ಪ್ರತಿನಿಧಿ – ಅಲ್ಲಾ ನಮಗೆ ಭಯ ಇರುತ್ತೆ ಅಲ್ವಾ
    ಮಹಿಳಾ ಪಿಂಪ್ – ಪೊಲೀಸವರನ್ನು ಹತ್ತಿರ ಬಿಟ್ಕೋತಿವಾ ನಾವು?
    ಪ್ರತಿನಿಧಿ – ಏನೂ ಮನೆನಾ ಪಿಜಿನಾ ಮಲ್ಲೇಶ್ವರಂನಲ್ಲಿ
    ಮಹಿಳಾ ಪಿಂಪ್ – ಮನೆನೇ –
    ಪ್ರತಿನಿಧಿ – ಹೆಂಗೆ ಕರ್ಕೊಂಡು ಹೋಗ್ತೀರಾ?
    ಮಹಿಳಾ ಪಿಂಪ್ – (ನಗ್ತಾ)- ಹೆಲಿಕಾಪ್ಟರ್ ನಲ್ಲಿ, ಒಂದೂವರೆ ಸಾವಿರ ಕೊಡಿ- ರೂಂ ಎಲ್ಲಾ ಸೇರಿ ಎಕ್ಸ್ಟ್ರಾ ಬೇಕಾದ್ರೇ ನೀವು ಹುಡ್ಗೀರಿಗೆ ಕೊಡಬಹುದು ಟಿಪ್ಸ್ ಅಂತಾ

    ಸರಿ ಬಿಡಿ ನೋಡ್ತೀವಿ ಅಂತಾ ನಾವು ಸೈಲೆಂಟ್ ಆಗಿ ಅಲ್ಲಿಂದ ಹೊರಡೋಕೆ ನೋಡಿದಾಗ ಇನ್ನೊಂದು ಆಂಟಿ ಪಿಂಪ್ ಇದನ್ನೆಲ್ಲ ಕಳ್ಳ ಕಣ್ಣಿನಿಂದ ನೋಡುತ್ತದ್ದಳು. ಒಬ್ಬರಿಗೆ ಡೀಲ್ ಕುದುರದೇ ಇದ್ದಾಗ ಇನ್ನೊಂದು ಗುಂಪು ಅಲರ್ಟ್ ಆಗಿ ಗಿರಾಕಿಗಳನ್ನು ಬಲೆಗೆ ಹಾಕಿಕೊಳ್ಳೋಕೆ ಶುರುಮಾಡುತ್ತಾರೆ. ಅಷ್ಟರಲ್ಲಿ ಕಪ್ಪು ಬಣ್ಣದ ಮಿರಿ ಮಿರಿ ಸೀರೆ ತೊಟ್ಟು ಬ್ಯಾಗು ಹಾಕ್ಕೊಂಡ ಇನ್ನೊಂದು ಆಂಟಿ ಎಂಟ್ರಿ ಕೊಟ್ಟಳು. ಈ ಆಂಟಿಯೂ ಅಷ್ಟೇ ಹುಡುಗರನ್ನು ಸೆಳೆಯಲು ಮುಂದಾಯ್ತು.

    ಪಿಂಪ್‍ಗಳು ಮಲ್ಲೇಶ್ವರಂ, ಕಲಾಸಿಪಾಳ್ಯಕ್ಕೆ ಬನ್ನಿ ಪಿಕ್ ಅಪ್ ಡ್ರಾಪು ನಮ್ಮದೇ ಅಂದ್ರೆ ಇನ್ನು ಕೆಲವು ಹುಡ್ಗೀರು ಇಲ್ಲಿ ನೀವು ಹೇಳಿದ ಜಾಗಕ್ಕೆ ಬರುತ್ತೀವಿ ಅಂತಾರೆ. ಅಷ್ಟೇ ಅಲ್ಲ ಕೆಲ ಹುಡಗಿಯರಂತೂ ಹತ್ತು ರೂಪಾಯಿಗೂ ಕೈ ಚಾಚುತ್ತಾರೆ. ಈ ಏರಿಯಾ ಕರ್ನಾಟಕದ ಸಿಂಗಂ ಅಂತಾ ಕರೆಸಿಕೊಂಡಿರುವ ರವಿ ಚೆನ್ನಣ್ಣವರ ವ್ಯಾಪ್ತಿಯೊಳಗೆ ಬರುತ್ತದೆ. ಅಸಲಿಗೆ ಇಲ್ಲಿನ ಪ್ರತಿಯೊಬ್ಬ ಪಿಂಪ್, ರಸ್ತೆ ಮದ್ಯೆ ನಿಂತಿರುವ ಹುಡಗಿಯರು ಕೂಡ ನಾವು ಪೊಲೀಸ್‍ಗೆ ಮಾಮುಲಿ ಕೊಡ್ತೀವಿ ಅಂತಾ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಸ್ಟಾಟ್‍ನಲ್ಲಿ ಹೊಯ್ಸಳ ವಾಹನ ನಿಂತಿದ್ರೂ ಇವರ ಡೀಲ್ ರಾಜರೋಷವಾಗಿ ನಡೆಯುತ್ತಿದೆ. 25 ವರ್ಷದಿಂದ ಹೊಯ್ಸಳದವರಿಗೆ ಮಾಮೂಲಿ ನೀಡುತ್ತಾ ಬಂದಿದ್ದೇನೆ ಅಂತಾ ಆಂಟಿಯರು ಹೇಳುತ್ತಾರೆ.

    ಖಾಕಿ ಕೃಪಾಕಟಾಕ್ಷವಿಲ್ಲದೇ ನಡು ರಸ್ತೆಯಲ್ಲಿ ಹಿಂಗೆಲ್ಲ ಹಾಗೋದಕ್ಕೆ ಸಾಧ್ಯನೇ ಇಲ್ಲ. ಸಿಂಗಂ ಸಾಹೇಬ್ರೇ ಮೊದಲು ಈ ದಂಧೆಗೆ ಬ್ರೇಕ್ ಹಾಕಿ ಬೆಂಗಳೂರು ಮಾನ ಉಳಿಸಿ. ಮೈಮಾರುವ ಹೆಂಗಸರ ಕೈಯಿಂದ ದುಡ್ಡಿಗೆ ಕೈಚಾಚಿ ಜಾಲದ ಬೆನ್ನ ಹಿಂದೆ ನಿಂತಿರುವ ನಿಮ್ಮ ಖಾಕಿಗಳಿಗೆ ಮೊದಲು ಬುದ್ದಿ ಹೇಳಿ ಕ್ರಮ ಕೈಗೊಳ್ಳಿ ಎಂದು ಸಾರ್ವಜನಿಕರು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದೇ ಗ್ರಾಮದ 9 ಮಂದಿ ಬಲಿ – ಶವ ಸಮುದ್ರವಾಯ್ತು ವದೇಸಮುದ್ರ ಗ್ರಾಮ!

    ಒಂದೇ ಗ್ರಾಮದ 9 ಮಂದಿ ಬಲಿ – ಶವ ಸಮುದ್ರವಾಯ್ತು ವದೇಸಮುದ್ರ ಗ್ರಾಮ!

    – ಮಂಡ್ಯ ಜನತೆಗೆ ಕರಾಳವಾದ ಶನಿವಾರ
    – 9 ಪುಟ್ಟ ಮಕ್ಕಳು, 15 ಮಹಿಳೆಯರು, 6 ಪುರುಷರು ಜಲಸಮಾಧಿ

    ಮಂಡ್ಯ: ಎಲ್ಲಿ ನೊಡಿದರೂ ಹೆಣಗಳ ರಾಶಿ. ಮುಗಿಲುಮುಟ್ಟಿದ ಆಕ್ರಂದನ. ಎಲ್ಲಿ ನೋಡಿದರೂ ಜನವೋ ಜನ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕನಗನಮರಡಿಯ ವಿಸಿ ನಾಲೆ ಬಳಿ.

    ದುರಂತಕ್ಕೀಡಾದ ರಾಜ್‍ಕುಮಾರ ಬಸ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿದ್ದು ವದೇಸಮುದ್ರ ಗ್ರಾಮದವರು. ಅಷ್ಟೇ ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿರುವುದು ಅದೇ ಗ್ರಾಮದವರು ಎನ್ನುವುದು ಮತ್ತಷ್ಟು ಆಘಾತ ನೀಡುತ್ತದೆ. ಸುಮಾರು 9 ಮಂದಿ ವದೇಸಮುದ್ರದ ನಿವಾಸಿಗಳು ಮೃತಪಟ್ಟಿದ್ದಾರೆ. ಅದರಲ್ಲೂ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಇದನ್ನು ಓದಿ: 30 ಜನರ ಬಲಿ ತೆಗೆದುಕೊಂಡ ಮಂಡ್ಯ ದುರಂತಕ್ಕೆ ಕಾರಣ ಸಿಕ್ತು!

    ಮಂಜುಳಾ (59), ಮಗಳು ರಾಧಾ (30) ಜೊತೆಗಿದ್ದ, ರಾಧಾ ಅವರ ಇಬ್ಬರು ಪುತ್ರಿಯರಾದ ಲಿಖಿತಾ ಮತ್ತು ಪ್ರೇಕ್ಷಾ ಮೃತಪಟ್ಟಿದ್ದಾರೆ. ಘಟನಾ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿ ಪ್ರೇಕ್ಷಾ ಮೃತದೇಹ ಪತ್ತೆಯಾಗಿದ್ದು, ಜನ ಸೇರಿದ್ದ ಜಾಗಕ್ಕೆ ಬಾಲಕಿಯ ಶವವನ್ನು ತರುತ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಘಟನೆಯ ಕುರಿತು ಸ್ಥಳಕ್ಕೆ ದೌಡಾಯಿಸಿದ ಮಂಡ್ಯ ಜಿಲ್ಲಾಸ್ಪತ್ರೆ ವೈದ್ಯರು, ಸ್ಥಳದಲ್ಲಿಯೇ ಶಾಮಿಯಾನ ಕಟ್ಟಿ ಮಂತ್ರಿಗಳು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಈ ಸಂದರ್ಭದಲ್ಲಿ ಮೃತರ ಬಂಧುಗಳನ್ನು ಸಂತೈಸಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಸರತ್ತು ನಡೆಸಿದ್ದು ಕಂಡುಬಂತು. ಸ್ವತಃ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಈ ಸಂದರ್ಭಕ್ಕೆ ಸಾಕ್ಷಿಯಾದರು.

    ಮೃತಪಟ್ಟವರ ವಿವರ:
    ವದೇಸಮುದ್ರ ಗ್ರಾಮದ ರವಿಕುಮಾರ್ (12), ಲಿಖಿತ (05), ಪವಿತ್ರ (11), ಕರಿಯಪ್ಪ (65), ಚಿಕ್ಕಯ್ಯ (60), ಕಮಲಮ್ಮ (55), ಪ್ರಶಾಂತ್ (15), ರತ್ನಮ್ಮ (60), ಶಶಿಕಲಾ (45), ಚಿಕ್ಕಕೊಪ್ಪಲು ಗ್ರಾಮದ ಚಂದ್ರು (35), ಪಾಪಣ್ಣ (66), ಯಶೋಧ (18), ಪೂಜಾರಿ ಕೆಂಪಯ್ಯ (50), ದಿವ್ಯ, ಬೇಬಿ ಗ್ರಾಮದ ನಿವಾಸಿ ಈರಯ್ಯ (60), ಕೋಡಿಶೆಟ್ಟಿಪುರ ನಿವಾಸಿಗಳಾದ ಕಲ್ಪನಾ (11), ದೇವರಾಜು (40), ಸೌಮ್ಯ (05), ಕನಗನಮರಡಿಯ ರತ್ಮಮ್ಮತಿ ರಾಮಕೃಷ್ಣ (50) ಹಾಗೂ ನಿಂಗಮ್ಮ (70) ಮೃತಪಟ್ಟಿದ್ದಾರೆ.

    ಭುಜವಳ್ಳಿಯ ಪ್ರೀತಿ (15), ಬೂಕನಕೆರೆ ನಿವಾಸಿ ಸಾವಿತ್ರಮ್ಮ (40), ಡಾಮಡಹಳ್ಳಿ ಗ್ರಾಮದ ಮಂಜುಳ (60) ಹಾಗೂ ಪ್ರೇಕ್ಷಾ (02), ಗಾಣದ ಹೊಸೂರುನ ಅನುಷ (17), ಹುಲ್ಕೆರೆಯ ಸುಮತಿ (35), ಚಿಕ್ಕಾಡೆಯ ಸೌಮ್ಯ ಉಮೇಶ್ (30), ಹುಲಿಕೆರೆಕೊಪ್ಪಲುನ ಮಣಿ (35), ಕಟ್ಟೇರಿ ಗ್ರಾಮದ ಶಿವಮ್ಮ (50), ದೊಡ್ಡಕೊಪ್ಪಲು ಜಯಮ್ಮ (50) ಸಾವನ್ನಪ್ಪಿದ್ದಾರೆ. ಇದನ್ನು ಓದಿ: ಬಸ್ಸಿನ ಆಯಸ್ಸು ಮುಗಿದಿದ್ದರೂ 3 ವರ್ಷ ಚಾಲನೆ ಮಾಡಿದ್ದು ಹೇಗೆ: ಮಂಗ್ಳೂರು ಮಾಲೀಕ

    https://youtu.be/NeBth9rLQY0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಇಬ್ಬರು ಪುರುಷರು, 19ರ ಯುವತಿ ಸೇರಿ ಅತ್ಯಾಚಾರಗೈದ್ರು: ಸಂತ್ರಸ್ತೆ ದೂರು!

    ಇಬ್ಬರು ಪುರುಷರು, 19ರ ಯುವತಿ ಸೇರಿ ಅತ್ಯಾಚಾರಗೈದ್ರು: ಸಂತ್ರಸ್ತೆ ದೂರು!

    ನವದೆಹಲಿ: ಇಬ್ಬರು ಪುರುಷರು ಹಾಗೂ 19ರ ಯುವತಿ ಸೇರಿಕೊಂಡು 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಮಾಡಿರುವ ಘಟನೆ ದೆಹಲಿಯ ಸೀಮಾಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

    25 ವರ್ಷ ಯುವತಿಯ ಮೇಲೆ ಇಬ್ಬರು ಪುರುಷರು ಹಾಗೂ 19 ವರ್ಷದ ಯುವತಿ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಮಹಿಳೆಯನ್ನು ಪೊಲೀಸರು ಜಿಲ್ಲಾ ಮ್ಯಾಜಿಸ್ಟ್ರೇಟ್ ಬಳಿ ಹಾಜರುಪಡಿಸಿದ್ದರು.

    ಈ ವೇಳೆ ಸಂತಸ್ತೆ ಮ್ಯಾಜಿಸ್ಟ್ರೇಟ್‍ರ ಬಳಿ 19 ರ ಯುವತಿಯೊಬ್ಬಳು ನನ್ನನ್ನು ರೂಮಿನಲ್ಲಿ ಕೂಡಿಹಾಕಿ ಬಲವಂತವಾಗಿ ಸೆಕ್ಸ್ ಟಾಯ್ ನಿಂದ ಲೈಂಗಿಕ ಕಿರುಕುಳ ನೀಡಿದ್ದಳು. ಅಲ್ಲದೇ ಆಕೆಯ ಜೊತೆಗಿದ್ದ ಇಬ್ಬರು ವ್ಯಕ್ತಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಕೂಡಲೇ ಎಚ್ಚೆತ್ತ ಸೀಮಾಪುರಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಹಾಗೂ 19 ರ ಯುವತಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತರು, ಮಹಿಳೆಯನ್ನು ಈಗಾಗಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಸಂತ್ರಸ್ತೆಯ ಹೇಳಿಕೆಯ ಮೇಲೆ ಹೊಸದಾದ ಐಪಿಸಿ ಸೆಕ್ಷನ್ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಏನಿದು ಘಟನೆ?
    ಮೂಲತಃ 25 ವರ್ಷದ ಮಹಿಳೆ ಗುರುಗ್ರಾಮದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಕೆಲಸ ಬಿಟ್ಟು, ಸ್ವಂತ ಉದ್ಯಮವನ್ನು ಶುರುಮಾಡಲು ಯೋಚಿಸುತ್ತಿದ್ದರು. ಇದೇ ವೇಳೆ 19 ವರ್ಷದ ಯುವತಿಯೊಬ್ಬಳು ತಾನು ಐಟಿ ಕಂಪೆನಿಯ ಉದ್ಯಮಿಯಂದು ಮಹಿಳೆಗೆ ಪರಿಚಯಿಸಿಕೊಂಡಿದ್ದಳು. ಆಕೆಯ ಜೊತೆ ಇಬ್ಬರು ಸ್ನೇಹಿತರನ್ನು ಸಹ ಸಂತ್ರಸ್ತೆಗೆ ಪರಿಚಯ ಮಾಡಿಕೊಟ್ಟಿದ್ದಳು. ಹೀಗಾಗಿ ನಾಲ್ವರು ಸೇರಿಕೊಂಡು ಸ್ವಂತ ಉದ್ಯಮ ಪ್ರಾರಂಭ ಮಾಡುವ ಕುರಿತು ಮಾತುಕತೆ ನಡೆಸುತ್ತಿದ್ದರು.

    ಇದೇ ಉದ್ಯಮದ ಬಗ್ಗೆ ಮಾತುಕತೆ ನಡೆಸಲು ದೆಹಲಿಯ ದಿಲ್‍ಶಾದ್ ಅಪಾರ್ಟ್‍ಮೆಂಟ್ ಬರಲು 19ರ ಯುವತಿ ಹಾಗೂ ಆಕೆಯ ಇಬ್ಬರು ಸ್ನೇಹಿತರು ಮಹಿಳೆಯನ್ನು ಕರೆದಿದ್ದರು. ಅಪಾರ್ಟ್‍ಮೆಂಟ್‍ಗೆ ತೆರಳಿದ ಸಂತ್ರಸ್ತೆಯನ್ನು ರೂಮಿನಲ್ಲಿ ಕೂಡಿಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಆಕೆಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದರು.

    ಅತ್ಯಾಚಾರದ ವಿಡಿಯೋ ಮಾಡಿದ್ದ ಯುವತಿ, ಘಟನೆ ಕುರಿತು ಬಾಯಿಬಿಟ್ಟರೇ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಬಗ್ಗೆ ಮಹಿಳೆಗೆ ಬೆದರಿಕೆ ಹಾಕಿದ್ದಳು. ಅಲ್ಲದೇ ಅತ್ಯಾಚಾರದ ಬಳಿಕ ಯುವತಿ ಸೆಕ್ಸ್ ಟಾಯ್‍ಗಳನ್ನು ಬಳಸಿ ಮಹಿಳೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಳು. ಇದಾದ ಎರಡು ದಿನಗಳ ನಂತರ ರೂಮಿನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv