Tag: Men

  • ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’; ಇದು ಹೃದಯದ ಮಾತು – ಪುರುಷರೇ ಜೋಕೆ!

    ವಳು ನನಗೆ ಕೈಕೊಟ್ಟಳು.. ಅಮ್ಮ ನಿನ್ನ ಪ್ರೀತಿ ಸಾಗರ, ನನ್ನನ್ನೇಕೆ ಬಿಟ್ಟು ಹೋದೆ.. ನನ್ನ ಮುದ್ದಿನ ಟೋನಿ (ಸಾಕು ನಾಯಿ) ಇನ್ನಿಲ್ಲ.. ಹೀಗೆ ಪ್ರೀತಿ ಪಾತ್ರರನ್ನು ಕಳೆದುಕೊಂಡು ಕೊರಗುವವರು ಎಷ್ಟು ಮಂದಿ. ಪ್ರೀತಿ-ವಾತ್ಸಲ್ಯಕ್ಕೆ ಬೆಲೆ ಕಟ್ಟಲಾಗದು. ಇದು ಹೃದಯಕ್ಕೆ ಸಂಬಂಧಿಸಿದ ಮಾತು. ಮನುಷ್ಯನಿಗೆ ಹೃದಯ ಎಷ್ಟು ಮುಖ್ಯ ಅಲ್ವಾ? ಅದು ಸದಾ ಲಬ್‌ ಡಬ್‌.. ಲಬ್‌ ಡಬ್‌ ಎನ್ನಲು ದೇಹಕ್ಕೆ ಆರೋಗ್ಯ ಮತ್ತು ಮನಸ್ಸಿಗೆ ಉಲ್ಲಾಸ ಬೇಕು. ಇವರೆಡೂ ಇಲ್ಲ ಅಂದ್ರೆ ಹೃದಯದ ಕಥೆ ಏನಾಗಬಹುದು?

    ಹೃದಯ ಮುರಿದೀತು ಜೋಕೆ! ಹೀಗೆನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಪ್ರೀತಿ ವಿಷಯದಲ್ಲಿ ಹೆಚ್ಚು ಭಾವನೆಗೆ ಒಳಗಾಗಬೇಡಿ. ಅದು ನಿಮ್ಮ ಪ್ರಾಣಕ್ಕೆ ಅಪಾಯ ತರಬಹುದು. ‘ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌’. ಇದು ಹೃದಯವಂತರಿಗೆ ಎಚ್ಚರಿಕೆಯ ಕರೆಗಂಟೆ. ಈ ಸಿಂಡ್ರೋಮ್‌ಗೆ ಮಹಿಳೆಯರಿಗಿಂತ ಪುರುಷರೇ ಹೆಚ್ಚು ಬಲಿಯಾಗುತ್ತಿದ್ದಾರಂತೆ. ಹೀಗಾಗಿ, ಹೃದಯಕ್ಕೆ ಹೆಚ್ಚು ನೋವು ಕೊಡಬೇಡಿ ಎನ್ನುತ್ತಿದ್ದಾರೆ ವೈದ್ಯರು.

    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ವೈದ್ಯಕೀಯ ಪರಿಭಾಷೆಯಲ್ಲಿ ‘ಟಕೋಟ್ಸುಬೊ ಕಾರ್ಡಿಯೊಮಯೋಪತಿ’ ಎಂದು ಕರೆಯುತ್ತಾರೆ. ಪ್ರೀತಿಪಾತ್ರರನ್ನು ಕಳೆದುಕೊಳ್ಳುವ, ಗಂಭೀರ ಅನಾರೋಗ್ಯ ಅಥವಾ ಶಸ್ತ್ರಚಿಕಿತ್ಸೆಯಿಂದಾಗಿ ತೀವ್ರವಾದ ಭಾವನಾತ್ಮಕ ಅಥವಾ ದೈಹಿಕ ಒತ್ತಡಕ್ಕೆ ಒಳಗಾಗುವವರಲ್ಲಿ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಿಂಡ್ರೋಮ್‌ ಕೂಡ ಹೃದಯಘಾತದಂತೆಯೇ ಎದೆ ನೋವು, ಉಸಿರಾಟದ ತೊಂದರೆ ಮತ್ತು ಜೋರಾದ ಹೃದಯ ಬಡಿತವನ್ನು ಉಂಟುಮಾಡುತ್ತದೆ. ಆದರೆ ಸಾಮಾನ್ಯ ಹೃದಯಾಘಾತದಂತೆ ಇದು ನಿರ್ಬಂಧಿತ ಅಪಧಮನಿಗಳನ್ನು ಒಳಗೊಂಡಿರುವುದಿಲ್ಲ.

    ಜರ್ನಲ್ ಆಫ್ ದಿ ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನಲ್ಲಿ ಪ್ರಕಟವಾದ ವರದಿಯು 2016 ಮತ್ತು 2020 ರ ನಡುವೆ ಆಸ್ಪತ್ರೆಗೆ ದಾಖಲಾದ ಸುಮಾರು 2,00,000 ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ.

    ಸಂಶೋಧಕರು ಕಂಡುಕೊಂಡಿದ್ದೇನು?
    ಆಸ್ಪತ್ರೆಯಲ್ಲಿ ಒಟ್ಟಾರೆ ಮರಣ ಪ್ರಮಾಣ: 6.5%
    ಮಹಿಳೆಯರ ಮರಣ ಪ್ರಮಾಣ: 5.5%
    ಪುರುಷರ ಮರಣ ಪ್ರಮಾಣ: 11.2%

    ಈ ವರದಿಯನ್ನು ಗಮನಿಸಿದರೆ ಪುರುಷರಲ್ಲಿ ಹೆಚ್ಚಿನ ಮರಣ ಪ್ರಮಾಣ ಕಂಡುಬರುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದಕ್ಕೆ ಉತ್ತಮ ಚಿಕಿತ್ಸೆಗಳು ಮತ್ತು ಹೆಚ್ಚಿನ ಸಂಶೋಧನೆಯ ತುರ್ತು ಅಗತ್ಯವಿದೆ ಎಂದು ಅರಿಜೋನಾ ವಿಶ್ವವಿದ್ಯಾನಿಲಯದ ಹೃದ್ರೋಗ ತಜ್ಞ ಡಾ. ಮೊಹಮ್ಮದ್ ರೆಜಾ ಮೊವಾಹೆದ್ ತಿಳಿಸಿದ್ದಾರೆ.

    ಸಿಂಡ್ರೋಮ್‌ಗೆ ಅಪಾಯ ಏನು?
    ಬ್ರೋಕನ್‌ ಹಾರ್ಟ್‌ ಸಿಂಡ್ರೋಮ್‌ಗೆ ಒಳಗಾಗುವವರಿಗೆ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ಈ ಸ್ಥಿತಿಯು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
    ಹೃದಯ ವೈಫಲ್ಯ – 35.9%
    ಅನಿಯಮಿತ ಹೃದಯ ಬಡಿತ (ಹೃತ್ಕರ್ಣದ ಕಂಪನ) – 20.7%
    ಹೃದಯ ಆಘಾತ – 6.6%
    ಪಾರ್ಶ್ವವಾಯು – 5.3%
    ಹೃದಯ ಸ್ತಂಭನ – 3.4% ಕಾಣಿಸಿಕೊಳ್ಳಬಹುದು.

    ಯಾರಿಗೆ ಹೆಚ್ಚು ಅಪಾಯವಿದೆ?
    61 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಈ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತದೆ. 46–60 ಮತ್ತು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ 3.25 ಕ್ಕಿಂತ ಹೆಚ್ಚು ಪಟ್ಟು ಪರಿಣಾಮ ಬೀರುತ್ತಾರೆ. ಶ್ವೇತ ವರ್ಣೀಯರು ಈ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ (0.16%). ನಂತರ ಸ್ಥಳೀಯ ಅಮೆರಿಕನ್ನರು (0.13%) ಮತ್ತು ಕಪ್ಪು ವಯಸ್ಕರು (0.07%) ಸಮಸ್ಯೆಯಿಂದ ಬಳಲುತ್ತಾರೆ.

    ಪುರುಷರೇ ಹೆಚ್ಚು ಸಾಯೋದು ಏಕೆ?
    ಈ ಸಿಂಡ್ರೋಮ್‌ಗೆ ಶೇ.83% ರಷ್ಟು ಮಹಿಳೆಯರು ತುತ್ತಾಗುತ್ತಿದ್ದಾರೆ. ಆದರೆ, ಸಾವಿನ ಪ್ರಮಾಣದಲ್ಲಿ ಪುರುಷರೇ ಹೆಚ್ಚಿದ್ದಾರೆ. ಏಕೆಂದರೆ, ಪುರುಷರು ದೈಹಿಕ ಒತ್ತಡಗಳನ್ನು (ಶಸ್ತ್ರಚಿಕಿತ್ಸೆ ಅಥವಾ ಅನಾರೋಗ್ಯದಂತಹ) ಎದುರಿಸುವ ಸಾಧ್ಯತೆ ಹೆಚ್ಚು. ಪುರುಷರಿಗೆ ಸಾಮಾಜಿಕ ಬೆಂಬಲದ ಕೊರತೆಯೂ ಇರಬಹುದು. ಸಾಮಾಜಿಕ ಬೆಂಬಲವು ಗುಣಪಡಿಸುವಿಕೆಗೆ ನಿರ್ಣಾಯಕವಾಗಿದೆ. ಆ ಬೆಂಬಲವಿಲ್ಲದೆ, ಚೇತರಿಕೆ ನಿಧಾನ ಮತ್ತು ಹೆಚ್ಚು ಅಪಾಯಕಾರಿಯಾಗಬಹುದು. ಮಹಿಳೆಯರು ಹೆಚ್ಚಾಗಿ ಭಾವನಾತ್ಮಕ ಒತ್ತಡಗಳನ್ನು (ದುಃಖ ಅಥವಾ ಉದ್ಯೋಗ ನಷ್ಟ) ಎದುರಿಸುತ್ತಾರೆ.

    5 ವರ್ಷಗಳಲ್ಲಿ ಯಾವುದೇ ಪ್ರಗತಿ ಇಲ್ಲ
    ಐದು ವರ್ಷಗಳ ಅಧ್ಯಯನ ಅವಧಿಯಲ್ಲಿ ಮರಣ ಪ್ರಮಾಣವು ಸುಧಾರಿಸಲಿಲ್ಲ. ಈ ಸಿಂಡ್ರೋಮ್‌ಗೆ ಸದ್ಯದ ಚಿಕಿತ್ಸೆಗಳು ಪರಿಣಾಮಕಾರಿಯಾಗಿಲ್ಲ. ಆಸ್ಪತ್ರೆ ಸಂಪನ್ಮೂಲಗಳು, ಆದಾಯ ಮಟ್ಟ ಮತ್ತು ವಿಮಾ ಸ್ಥಿತಿಯಂತಹ ಅಂಶಗಳು ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನವು ತಿಳಿಸಿದೆ.

  • ನೀವು ಫ್ಯಾಷನ್ ಪ್ರಿಯರೇ? ಫ್ಯಾಷನ್ ಬಗ್ಗೆ ನಿಮಗೆಷ್ಟು ಗೊತ್ತು?

    ನೀವು ಫ್ಯಾಷನ್ ಪ್ರಿಯರೇ? ಫ್ಯಾಷನ್ ಬಗ್ಗೆ ನಿಮಗೆಷ್ಟು ಗೊತ್ತು?

    ಇತ್ತೀಚಿನ ದಿನಗಳಲ್ಲಿ ಫ್ಯಾಷನ್ (Fashion) ಎಂಬ ಪದ ಎಲ್ಲರ ಬಾಯಲ್ಲಿ ಕೇಳಿರುತ್ತೀರಿ. ಯಾರಾದರೂ ಹೊಸ ಶೈಲಿಯ ಮಾಡರ್ನ್ ಡ್ರೆಸ್ ಧರಿಸಿದರೆ ಸಾಕು ಅದನ್ನು ಈಗಿನ ಫ್ಯಾಷನ್ ಎನ್ನುತ್ತಾರೆ. ಹಾಗಿದ್ರೆ ಫ್ಯಾಷನ್ ಬಗ್ಗೆ, ಫ್ಯಾಷನ್‌ನಲ್ಲಿರುವ ಕೆಲವು ವಿವಿಧ ಶೈಲಿಗಳ ಬಗೆಗಿನ ಮಾಹಿತಿಯನ್ನು ತಿಳಿದುಕೊಂಡರೆ ಒಳ್ಳೆಯದು ಅಲ್ವಾ? ಯಾವ ಶೈಲಿಯ ಡ್ರೆಸ್‌ಗಳನ್ನು ಯಾವ ಸಂದರ್ಭಗಳಲ್ಲಿ ಬಳಸುತ್ತಾರೆ ಎಂಬುದರ ಕುರಿತು ಸಣ್ಣ ಮಾಹಿತಿ ಇಲ್ಲಿದೆ.

    ಫ್ಯಾಷನ್ ಎಂಬುದು ಹರಿವ ನೀರಿನಂತೆ. ದಿನದಿಂದ ದಿನಕ್ಕೆ ಹೊಸಹೊಸ ರೂಪವನ್ನು ಪಡೆದುಕೊಂಡು ಜನರನ್ನು ಆಕರ್ಷಿಸುವುದು ಮಾತ್ರವಲ್ಲದೇ ಮುಂದೆ ಸಾಗುತ್ತಲೇ ಇರುತ್ತದೆ. ಫ್ಯಾಷನ್ ಎಂದಾಕ್ಷಣ ನೆನಪಾಗುವುದೇ ವಿವಿಧ ಡಿಸೈನ್‌ಗಳ ಬಟ್ಟೆಗಳು ಮತ್ತು ಅವುಗಳನ್ನು ವಿನ್ಯಾಸಗೊಳಿಸುವ ಫ್ಯಾಷನ್ ಡಿಸೈನರ್‌ಗಳು. ಇವರು ತಯಾರಿಸುವ ಹೊಸ ರೀತಿಯ ಉಡುಪುಗಳು ಜನರನ್ನು ಕ್ಷಣಮಾತ್ರದಲ್ಲಿ ಅದರತ್ತ ಸೆಳೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಇವರು ಹಳೆಯ ಶೈಲಿಗೆ ಹೊಸ ಟಚ್ ಕೊಟ್ಟು ಬಟ್ಟೆಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಉದಾಹರಣೆಗೆ, 1960ರ ದಶಕದ ಶೈಲಿಯನ್ನು 2000ರ ದಶಕದಲ್ಲಿ ಪರಿಚಯಿಸಲಾಯಿತು. ಅದು ಹಳೆಯದಾಗಿದ್ದರೂ, ಕೆಲವು ಚಲನಚಿತ್ರ ತಾರೆಯರು ಅಥವಾ ಫ್ಯಾಷನ್ ಮಾಡೆಲ್‌ಗಳು ಅಥವಾ ಪ್ರಸಿದ್ಧ ವ್ಯಕ್ತಿಗಳು ಅದನ್ನು ಧರಿಸಿದರೆ ಅದು ಫ್ಯಾಷನ್ ಆಗುತ್ತದೆ. ಅಂತಹ ಹಳೆಯ-ಶೈಲಿಯ ವಿನ್ಯಾಸವು ಮತ್ತೆ ಜನಪ್ರಿಯವಾಗಿದೆ. ಇದನ್ನೂ ಓದಿ: ಹುಡುಗಿಯರ ಮೈಕಾಂತಿ ಹೆಚ್ಚಿಸುವ ಸೀರೆಗೊಂದು ಸಿಂಗಾರ ಬೇಡವೇ?

    ಫ್ಯಾಷನ್ ಶೈಲಿಯ ವಿಧಗಳು:
    ಫ್ಯಾಷನ್‌ನಲ್ಲಿ ಅನೇಕ ಬಗೆಯ ಶೈಲಿಗಳಿವೆ. ಕೆಲವು ಜನಪ್ರಿಯ ಫ್ಯಾಷನ್ ಶೈಲಿಗಳ (Types) ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

    ಕ್ಲಾಸಿಕ್ ಶೈಲಿ (Classic Style):
    ಕ್ಲಾಸಿಕ್ ಶೈಲಿ ಸಾಂಪ್ರದಾಯಿಕ ಶೈಲಿಯಾಗಿದೆ. ಕ್ಲಾಸಿಕ್ ಶೈಲಿಯು ಹೆಚ್ಚಿನ ಬದಲಾವಣೆಗಳನ್ನು ಒಳಗೊಳ್ಳದೇ ಕಡಿಮೆ ಬದಲಾವಣೆಗಳನ್ನು ಹೊಂದಿರುತ್ತದೆ. ಈ ಶೈಲಿಯನ್ನು ಅತಿಹೆಚ್ಚು ಜನರು ಇಷ್ಟಪಡುತ್ತಾರೆ. ನಿರ್ದಿಷ್ಟವಾಗಿ ಹೇಳುವುದಾದರೆ, ಮಹಿಳೆಯರು ಮತ್ತು ಪುರುಷರು ತಮ್ಮ ಆಫೀಸ್‌ಗೆ ಅಥವಾ ಯಾವುದಾದರೂ ಮೀಟಿಂಗ್ ಹೋಗುವಾಗ ಈ ರೀತಿಯಾದ ಉಡುಪನ್ನು ಧರಿಸಲು ಬಯಸುತ್ತಾರೆ. ಕ್ಲಾಸಿಕ್ ಶೈಲಿಯ ಬಟ್ಟೆಗಳು ಪ್ಯಾಂಟ್‌ಗಳು, ಶರ್ಟ್‌ಗಳು, ಬ್ಲೇಜರ್‌ಗಳು ಅಥವಾ ಸೂಟ್‌ಗಳನ್ನು ಒಳಗೊಂಡಿರುತ್ತದೆ. ಇನ್ನು ಮಹಿಳೆಯರ ಬಟ್ಟೆಗಳನ್ನು ನೋಡುವುದಾದರೆ ಪ್ಲೇನ್ ಸೂಟ್ ಅಥವಾ ಸೀರೆಗಳನ್ನು ಧರಿಸಲು ಹೆಚ್ಚಿನ ಆದ್ಯತೆ ನೀಡುತ್ತಾರೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಫಾರ್ಮಲ್ ಶೈಲಿ (Formal Style):
    ಇದು ಒಂದು ಅಧಿಕೃತ ಉಡುಗೆಯಾಗಿದ್ದು, ವಿವಿಧ ಕೆಲಸದ ಸ್ಥಳಗಳಲ್ಲಿ ಜನರು ಈ ರೀತಿಯಾದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಉದಾಹರಣೆಗೆ, ಶಾಲಾ ಉಡುಗೆ, ಕಚೇರಿ ಉಡುಗೆ ಮತ್ತು ಸಮವಸ್ತ್ರಗಳು. ಫಾರ್ಮಲ್ ಉಡುಪುಗಳು ಬಣ್ಣದ ಆಯ್ಕೆಗಳ ವಿಷಯದಲ್ಲಿ ಬಹಳ ಸೀಮಿತ ಆಯ್ಕೆಗಳನ್ನು ಹೊಂದಿವೆ. ಅಂತಹ ಉಡುಪುಗಳು ಬಹು-ಬಣ್ಣ ಅಥವಾ ಮುದ್ರಣ ವಿನ್ಯಾಸಗಳಲ್ಲಿ ಲಭ್ಯವಾಗುವುದಿಲ್ಲ. ವಿವಿಧ ಶಾಲೆಗಳು ವಿಭಿನ್ನ ಡ್ರೆಸ್ ಕೋಡ್‌ಗಳನ್ನು ಹೊಂದಿವೆ. ಅದೇ ರೀತಿ ಅನೇಕ ಕಚೇರಿಗಳು ತನ್ನದೇ ಆದ ಡ್ರೆಸ್ ಕೋಡ್‌ಗಳನ್ನು ಹೊಂದಿವೆ. ಆದ್ದರಿಂದ ಕ್ಲಾಸಿಕ್ ಬಟ್ಟೆಯನ್ನು ಧರಿಸುವುದು ಒಂದು ಆಯ್ಕೆಯಾದರೇ ಫಾರ್ಮಲ್ ಬಟ್ಟೆಗಳನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಇದನ್ನೂ ಓದಿ: ಫ್ಯಾಶನ್ ಅಂತಾ ಕಿವಿ ಚುಚ್ಚಿಸಿಕೊಳ್ಳುವವರಿಗೆ ಅದರ ಪ್ರಯೋಜನ ತಿಳಿದಿದ್ಯಾ?

    ವಿಂಟೇಜ್ ಶೈಲಿ (Vintage Style):
    ವಿಂಟೇಜ್ ಫ್ಯಾಷನ್ 50 ವರ್ಷ ಅಥವಾ ಅದಕ್ಕಿಂತ ಹಳೆಯ ಬಟ್ಟೆಗಳನ್ನು ಸೂಚಿಸುತ್ತದೆ. ಕೆಲವರು ಇತ್ತೀಚಿನ ಡ್ರೆಸ್ ಸ್ಟೈಲ್‌ಗಳನ್ನು ಅನುಸರಿಸುವುದಿಲ್ಲ. ನಮ್ಮ ಹಿರಿಯರು ಇತ್ತೀಚಿನ ಬಟ್ಟೆಗಳನ್ನು ಧರಿಸಲು ಇಚ್ಛಿಸುವುದಿಲ್ಲ. ಬದಲಿಗೆ ತಮ್ಮ ಹಳೆಯ ವಯಸ್ಸಿನ ಫ್ಯಾಷನ್‌ನೊಂದಿಗೆ ಉಳಿಯಲು ಬಯಸುತ್ತಾರೆ. ಉದಾಹರಣೆಗೆ, ಜೋಲಾಡುವ ಪ್ಯಾಂಟ್, ದೊಡ್ಡ ಬಣ್ಣದ ಶರ್ಟ್‌ಗಳು ಉದ್ದನೆಯ ಫ್ರಾಕ್‌ಗಳು ಇತ್ಯಾದಿಗಳು ವಿಂಟೇಜ್ ಶೈಲಿಯಾಗಿದೆ. ಕೆಲವೊಮ್ಮೆ, ಇದನ್ನು ‘ರೆಟ್ರೊ ಶೈಲಿ ‘ ಎಂದೂ ಕರೆಯಲಾಗುತ್ತದೆ. ಇದನ್ನೂ ಓದಿ: ಕ್ಯೂಟ್ ಆಗಿ ಕಾಣಿಸಲು ಬಳಸಿ ಈ ಹೇರ್ ಆ್ಯಕ್ಸಸರೀಸ್

    ಎಥ್ನಿಕ್ ಶೈಲಿ (Ethnic Style):
    ಈ ಶೈಲಿಯು ಒಂದು ವಿಶಿಷ್ಟವಾದ ಉಡುಗೆಯಾಗಿದೆ. ಪ್ರತಿಯೊಂದು ಸ್ಥಳ, ರಾಜ್ಯ ಅಥವಾ ದೇಶ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುತ್ತದೆ. ಆ ನಿರ್ದಿಷ್ಟ ಪ್ರದೇಶದ ಜನರು ನಿರ್ದಿಷ್ಟ ಶೈಲಿಯ ಉಡುಪುಗಳನ್ನು ಧರಿಸುತ್ತಾರೆ. ಕರ್ನಾಟಕ ರಾಜ್ಯವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಪುರುಷರು ಪಂಚೆ ಮತ್ತು ಶರ್ಟ್, ಮಹಿಳೆಯರು ಸೀರೆ ಅಥವಾ ಚೂಡಿದಾರ್ ಹೆಚ್ಚು ಧರಿಸುತ್ತಾರೆ. ಅದೇ ರೀತಿ ಆಯಾಯ ಸ್ಥಳಗಳಲ್ಲಿ ಆಯಾಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಅನುಸರಿಸುತ್ತಾರೆ. ಇದನ್ನೂ ಓದಿ: ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್

    ಕ್ಯಾಶುವಲ್ ಶೈಲಿ (Casual Style):
    ದೀರ್ಘಕಾಲದವರೆಗೆ ಧರಿಸಲು ಆರಾಮದಾಯಕವಾಗಿರುವ ಬಟ್ಟೆಯನ್ನು ಧರಿಸಿದರೆ ಅದನ್ನು ಕ್ಯಾಶುವಲ್ ಎಂದು ಕರೆಯಲಾಗುತ್ತದೆ. ಏಕೆಂದರೆ, ಇದು ಯಾವುದೇ ನಿರ್ದಿಷ್ಟ ವಿನ್ಯಾಸ ಅಥವಾ ಬಣ್ಣವನ್ನು ಹೊಂದಿರುವುದಿಲ್ಲ. ಆದ್ದರಿಂದ, ಇದನ್ನು ಕಚೇರಿಯಲ್ಲಿ ಧರಿಸಲಾಗುವುದಿಲ್ಲ, ಆದರೆ ಜನರು ಮನೆಯಲ್ಲಿರುವಾಗ, ಶಾಪಿಂಗ್‌ಗೆ ಹೋಗುವಾಗ ಇತ್ಯಾದಿ ಕೆಲಸಗಳನ್ನು ಮಾಡುವಾಗ ಈ ರೀತಿಯಾದ ಬಟ್ಟೆಗಳನ್ನು ಧರಿಸಲು ಬಯಸುತ್ತಾರೆ. ಉದಾಹರಣೆಗೆ ಸ್ನೇಹಿತರನ್ನು ಭೇಟಿಯಾಗುವುದು, ಹೊರಾಂಗಣ ಆಟ ಆಡುವುದು ಇತ್ಯಾದಿ. ಈ ಶೈಲಿಯ ಜನಪ್ರಿಯ ಉಡುಪುಗಳು ಎಂದರೆ ಜೀನ್ಸ್, ಟೀ ಶರ್ಟ್‌ಗಳು, ಲೋವರ್‌ಗಳು, ಟ್ರ್ಯಾಕ್ ಸೂಟ್‌ಗಳು, ಜೋಗರ್‌ಗಳು ಇತ್ಯಾದಿ. ಇದನ್ನೂ ಓದಿ: ಫ್ರೆಶ್ ಲುಕ್ ನೀಡುವ ವೆಡ್ಡಿಂಗ್ ಸೂಟ್ಸ್‌ – ಏನಿದೆ ವಿಶೇಷ?

    ಸ್ಪೋರ್ಟಿ ಶೈಲಿ (Sporty Style):
    ಸೈಕ್ಲಿಂಗ್ ಮಾಡುವಾಗ, ಹೊರಾಂಗಣ ಆಟಗಳನ್ನು ಆಡುವಾಗ ಅಥವಾ ವ್ಯಾಯಾಮಗಳನ್ನು ಮಾಡುವಾಗ ಆರಾಮದಾಯಕ ಮತ್ತು ಧರಿಸಲು ಸುಲಭವಾದ ಬಟ್ಟೆಗಳನ್ನು ಬಯಸುತ್ತಾರೆ. ಆದ್ದರಿಂದ ಈ ಉದ್ದೇಶಕ್ಕಾಗಿಯೇ ನಿರ್ದಿಷ್ಟ ಶೈಲಿಯನ್ನು ವಿನ್ಯಾಸಗೊಳಿಸಲಾಗಿದೆ. ಇದನ್ನು ‘ಸ್ಪೋರ್ಟಿ ಶೈಲಿ’ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ಟ್ರ‍್ಯಾಕ್ ಸೂಟ್‌ಗಳು, ಜರ್ಸಿಗಳು, ಕ್ರೀಡಾ ಬೂಟುಗಳು, ಇತ್ಯಾದಿ. ಇದನ್ನೂ ಓದಿ: ನಿಮ್ಮ ಫೇಸ್‌ಕಟ್‌ಗೆ ಸರಿಯಾದ ಹೇರ್‌ಸ್ಟೈಲ್ ಇರಲಿ

    ಬೋಹೀಮಿಯನ್ ಶೈಲಿ (Bohemian style):
    ಬೋಹೀಮಿಯನ್ ಶೈಲಿಯು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಉಡುಪುಗಳನ್ನು ವಿನ್ಯಾಸಗೊಳಿಸುವ ವಿಷಯದಲ್ಲಿ ಮಾತ್ರವಲ್ಲದೆ ಉಡುಪುಗಳನ್ನು ತಯಾರಿಸಲು ವಸ್ತುಗಳನ್ನು ಬಳಸುವ ವಿಷಯದಲ್ಲಿಯೂ ತನ್ನದೇ ಆದ ಸಾಂಪ್ರದಾಯಿಕ ಶೈಲಿಯನ್ನು ಹೊಂದಿದೆ. ಈ ಶೈಲಿಯ ಬಟ್ಟೆಗಳನ್ನು ಧರಿಸಿದ ಸಂದರ್ಭದಲ್ಲಿ ಅದಕ್ಕೆ ಮ್ಯಾಚ್ ಆಗುವಂತಹ ಸಮುದ್ರ ಚಿಪ್ಪುಗಳು, ಎಲೆಗಳು, ಗರಿಗಳು ಇತ್ಯಾದಿಗಳನ್ನು ಬಳಸಿ ತಯಾರಿಸಿದಂತಹ ಆಭರಣಗಳನ್ನು ಧರಿಸುತ್ತಾರೆ. ಇದು ಹಿಪ್ಪಿ ಸಂಸ್ಕೃತಿಯ ಒಂದು ಭಾಗವಾಗಿದೆ. ಇದನ್ನೂ ಓದಿ: ಇಂಡಿಯನ್ ಸ್ಕಿನ್ ಟೋನ್‌ಗೆ ಈ ಬಣ್ಣದ ಲಿಪ್‌ಸ್ಟಿಕ್‌ಗಳು ಬೆಸ್ಟ್

    ಸ್ಟ್ರೀಟ್‌ ಶೈಲಿ (Street Style):
    ಇದು ವಿಲಕ್ಷಣವಾಗಿ ತೋರುತ್ತದೆಯಾದರೂ, ಇದು ಫ್ರಾನ್ಸ್ನ ಪ್ಯಾರಿಸ್‌ನ ಬೀದಿಗಳಲ್ಲಿ ಜನಿಸಿದ ಸಾಕಷ್ಟು ಟ್ರೆಂಡಿ ಶೈಲಿಯಾಗಿದೆ. ನ್ಯೂಯಾರ್ಕ್ ನಗರ, ಯುನೈಟೆಡ್ ಸ್ಟೇಟ್ಸ್, ಟೋಕಿಯೋ, ಜಪಾನ್ ಮತ್ತು ಮುಂಬೈ, ಭಾರತದಲ್ಲೂ ಈ ಶೈಲಿಯ ಬಟ್ಟೆಗಳನ್ನು ಧರಿಸುತ್ತಾರೆ. ಯುವಕರು ಸ್ಟ್ರೀಟ್‌ವೇರ್ ಅನ್ನು ಟ್ರೆಂಡಿ ಮತ್ತು ಫ್ಯಾಶನ್ ಆಗಿ ಪರಿವರ್ತಿಸಿದ್ದು, ಇದು ಯಾವುದೇ ಡ್ರೆಸ್‌ಕೋಡ್ ಅನ್ನು ಹೊಂದಿಲ್ಲ. ಉದಾಹರಣೆಗೆ, ಟೀ ಶರ್ಟ್ ಮತ್ತು ಜೀನ್ಸ್, ಸ್ಕರ್ಟ್ ಮತ್ತು ಟಾಪ್ ಇತ್ಯಾದಿ. ಇದನ್ನೂ ಓದಿ: ಬೇಸಿಗೆಯಲ್ಲೂ ಕಂಫರ್ಟ್ ಆಗಿರಲು ಫ್ಯಾಷನ್ ಟಿಪ್ಸ್

    ಪಂಕ್ ಶೈಲಿ (Punk Style):
    ಇದು ವಿಶಿಷ್ಟವಾದ ರಾಕ್ ಬ್ಯಾಂಡ್ ಪ್ಲೇಯರ್ ಶೈಲಿಯಾಗಿದೆ. ಉದಾಹರಣೆಗೆ ಚರ್ಮದ ಜಾಕೆಟ್‌ಗಳನ್ನು ಧರಿಸುವುದು, ಬಣ್ಣದ ಕೇಶವಿನ್ಯಾಸ, ದೇಹ ಚುಚ್ಚುವಿಕೆಗಳು ಇತ್ಯಾದಿಗಳು ಈ ಶೈಲಿಯಲ್ಲಿ ಒಳಗೊಂಡಿರುತ್ತವೆ. ವಾಸ್ತವವಾಗಿ, ಇದು ಬಹು-ಸಾಂಸ್ಕೃತಿಕ ಶೈಲಿಗಳನ್ನು ಪ್ರತಿನಿಧಿಸುತ್ತದೆ. ಇದನ್ನೂ ಓದಿ: ಉಗುರುಗಳನ್ನು ಆಕರ್ಷಕವಾಗಿಸಲು ಸುಲಭದ ನೈಲ್ ಆರ್ಟ್‌ಗಳು

    ಗೋಥಿಕ್ ಶೈಲಿ (Gothic Style):
    ಇದು ಡಾರ್ಕ್, ನಿಗೂಢ ಮತ್ತು ಸ್ಮೋಕಿ ಶೈಲಿಯಾಗಿದೆ. ಗೋಥಿಕ್ ಶೈಲಿಯಲ್ಲಿ ಜನರು ಸಾಮಾನ್ಯವಾಗಿ ಗಾಢ ಬಣ್ಣದ ಉಡುಪುಗಳನ್ನು ಧರಿಸುತ್ತಾರೆ. ಕೆಲವು ಪಾರ್ಟಿಗಳಲ್ಲಿ, ಯುವಕರು – ಯುವತಿಯರು ಇದನ್ನು ಧರಿಸಲು ಬಯಸುತ್ತಾರೆ. ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

    ಇವು ಸಾಮಾನ್ಯವಾಗಿ ಜನರು ಧರಿಸುವ ಮತ್ತು ಎಲ್ಲರೂ ತಿಳಿದಿರುವ ಫ್ಯಾಷನ್ ಶೈಲಿಗಳಾಗಿವೆ. ಇದೇ ರೀತಿ ಇನ್ನೂ ಹತ್ತು ಹಲವು ರೀತಿಯ ಶೈಲಿಗಳಿವೆ. ಒಬ್ಬೊಬ್ಬರು ಒಂದೊಂದು ರೀತಿಯ ಬಟ್ಟೆಗಳನ್ನು ಧರಿಸಲು ಇಚ್ಛಿಸುತ್ತಾರೆ. ನೀವು ನಿಮ್ಮ ಟೇಸ್ಟ್‌ಗೆ ತಕ್ಕಂತೆ ಅಥವಾ ಸಂದರ್ಭಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು. ಎಲ್ಲಾ ಬಟ್ಟೆಗಳು ಎಲ್ಲಾ ಸಂದರ್ಭಗಳಿಗೆ ಮ್ಯಾಚ್ ಆಗುವುದಿಲ್ಲ. ಆದ್ದರಿಂದ ಯಾವ ಸಂದರ್ಭಕ್ಕೆ ಯಾವ ಬಟ್ಟೆ ಹಾಕಿದರೆ ಸೂಕ್ತ ಎಂಬುದನ್ನು ತಿಳಿದುಕೊಂಡು ಅದಕ್ಕೆ ಅನುಸಾರವಾಗಿ ಬಟ್ಟೆಗಳನ್ನು ಧರಿಸಿ. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ಬೆಂಗಳೂರು: ಉಚಿತ ಬಸ್ ಪ್ರಯಾಣ (Free Bus Travel) ಆರಂಭವಾಗಿದ್ದೇ ತಡ ಮಹಿಳಾಮಣಿಗಳು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ ಏರಿ ಪ್ರಯಾಣಿಸಲು ಆರಂಭಿಸಿದ್ದಾರೆ. ಬಿಎಂಟಿಸಿ (BMTC) ಬಸ್‌ಗಳು ಫುಲ್ ರಶ್ ಆಗಿದ್ದು, ಪುರುಷರಿಗೆ ಸೀಟ್ ಸಿಗೋದೇ ಕಷ್ಟವಾಗಿದೆ. ಈ ಹಿನ್ನೆಲೆ ಪುರುಷರು ವೋಲ್ವೋ (Volvo) ಬಸ್‌ಗಳ ಮೊರೆ ಹೋಗಿದ್ದಾರೆ.

    ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಮೇಲೆ ಐಷಾರಾಮಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದಾಗಿ ಐಷಾರಾಮಿ ಬಸ್ ಮತ್ತು ವೋಲ್ವೋ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಇಳಿಕೆಯ ಆತಂಕ ವ್ಯಕ್ತವಾಗಿತ್ತು. ಆದರೆ ಬಿಎಂಟಿಸಿಯ ಐಷಾರಾಮಿ ಬಸ್‌ಗಳಿಗೆ ಶಕ್ತಿ ಯೋಜನೆ ಬೊಕ್ಕಸ ತುಂಬಿಸುತ್ತಿದೆ. ಕಳೆದ ಒಂದು ವಾರದಲ್ಲಿ ವೋಲ್ವೋ ಮತ್ತು ವಜ್ರ (Vajra) ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆಯಾಗಿದೆ. ಸಾಮಾನ್ಯ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿರುವುದರಿಂದ ಪುರುಷ ಪ್ರಯಾಣಿಕರು ವೋಲ್ವೋ ಬಸ್‌ಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ ದಿನನಿತ್ಯದ ಪ್ರಯಾಣಿಕರ ಸಂಖ್ಯೆಯಲ್ಲಿ 10,000 ಪ್ರಯಾಣಿಕರ ಸಂಖ್ಯೆ ಹೆಚ್ಚಳ ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್‌, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ

    ಪ್ರತಿನಿತ್ಯ ಬೆಂಗಳೂರಿನಲ್ಲಿ (Bengaluru) ಬಿಎಂಟಿಸಿಯ 470 ವೋಲ್ವೋ ಬಸ್‌ಗಳು ಓಡಾಡುತ್ತಿವೆ. ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ 3-5% ಏರಿಕೆಯಾಗಿದ್ದು, ಜೂನ್ ತಿಂಗಳ 21 ದಿನಗಳ ಲೆಕ್ಕಾಚಾರದ ಪ್ರಕಾರದ ಪ್ರತಿದಿನ 1,16,000 ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿಯೇ ಅತಿಹೆಚ್ಚು ಪ್ರಯಾಣಿಕರು ವೋಲ್ವೋ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರೇ ಅತಿಹೆಚ್ಚು ಪ್ರಯಾಣಿಸಿರುವುದು ವಿಶೇಷವಾಗಿದೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?

    ಕಳೆದ ಹಲವು ವರ್ಷಗಳಿಂದ ಬಿಎಂಟಿಸಿಗೆ ವೋಲ್ಬೋ ಬಸ್‌ಗಳು ಹೊರೆಯಾಗಿದ್ದವು. ಇದೀಗ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಬಿಎಂಟಿಸಿ ವೋಲ್ವೋ ಬಸ್‌ಗಳಲ್ಲಿಯೂ ಗಣನೀಯವಾಗಿ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಆದಾಯದಲ್ಲಿ ಕೂಡಾ ಬಿಎಂಟಿಸಿ ಸುಧಾರಣೆ ಕಂಡಿದೆ. ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿಗೆ ಕೇಂದ್ರದ ಬಾಗಿಲು ಬಂದ್ – ಸರ್ಕಾರದ ಮುಂದಿರುವ ಆಯ್ಕೆಗಳೇನು?

  • ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

    ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

    ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Ticket For Women) ವಿಚಾರ ಚರ್ಚೆಯಲ್ಲಿರುವಾಗಲೇ ಪುರುಷರಿಗೆ ಟೆನ್ಶನ್ ಶುರುವಾಗಿದೆ.

    ಹೌದು. ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್ ನಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಆತಂಕ ಆರಂಭವಾಗಿದೆ. ಮಹಿಳೆಯರಿಗೆ ಮೀಸಲಾಗಿರುವ ಸೀಟಿನಲ್ಲಷ್ಟೇ ಮಹಿಳೆಯರು ಕೂರಲಿ, ಹಿಂದೆ ಸೀಟಿನಲ್ಲಿ ಕೂತ್ರೆ ದಂಡ ಹಾಕಲಿ ಅಂತಾ ನಯಾ ಬೇಡಿಕೆಯೊಂದು ಎದ್ದಿದೆ.

     

    ಪುರುಷರ ಆಸನದಲ್ಲಿಯೂ ಉಚಿತ ಪ್ರಯಾಣ ಅಂತಾ ಮಹಿಳೆಯರು ಕೂತರೆ ನಾವೆಲ್ಲಿ ಹೋಗೋಣ ಅಂತಾ ಪುರುಷ ಪ್ರಯಾಣಿಕರು ಹೇಳುತ್ತಿದ್ದಾರೆ. ಕೆಲವು ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ನಮ್ಮ ಸೀಟು ನಮಗೇ ಇರಲಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಫ್ರೀ ಬಸ್ ಪ್ರಯಾಣದಿಂದ ಪುರುಷರಿಗೆ ಸೀಟ್ ಟೆನ್ಶನ್ (Men Seat Tension) ಎದುರಾಗಿರುವುದು ಸುಳ್ಳಲ್ಲ.

    ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯಾಗಿದ್ದು, ಈ ಗ್ಯಾರಂಟಿ ಜಾರಿಗೆ ಸರ್ಕಾರಕ್ಕೆ `ಮನಿ’ ಟೆನ್ಷನ್ ಕೂಡ ಶುರುವಾಗಿದೆ. ನಾಳಿನ ಕ್ಯಾಬಿನೆಟ್‍ (Cabinet) ಗೂ ಮುನ್ನ ಆದಾಯ ಕ್ರೂಢೀಕರಣದ ಟೆನ್ಶನ್ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ನೇತೃತ್ವದಲ್ಲಿ ಸರಣಿ ಸಭೆ ನಡೆಸಲಾಗಿದೆ. ನಿಗಮಗಳ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ಮೊನ್ನೆ 4 ನಿಗಮಗಳ ಎಂಡಿಗಳನ್ನ ಕರೆದು ಸಭೆ ನಡೆಸಿದ್ದ ಸಚಿವರು, ಇಂದು ಮತ್ತೆ ಪ್ರತ್ಯೇಕವಾಗಿ ನಿಗಮಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.

  • ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ

    ಮಂಡ್ಯದಲ್ಲಿ ಈಗ ಪುರುಷರ ಪಾರುಪತ್ಯ- ಹಿಂದೆ ಮಹಿಳೆಯರದ್ದೆ ಗದ್ದುಗೆ

    ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya Election) ಜಿಲ್ಲೆಯ ರಾಜಕೀಯ ಸಂಪೂರ್ಣ ವಿಭಿನ್ನ. ಈ ಜಿಲ್ಲೆಯಲ್ಲಿ ಒಕ್ಕಲಿಗ ಸಮುದಾಯದ ನಾಯಕರದ್ದೇ ಪಾರುಪತ್ಯವಾಗಿದೆ. ಈ ಜಿಲ್ಲೆಯಲ್ಲಿ ಸದ್ಯ 7 ಕ್ಷೇತ್ರಗಳಲ್ಲಿ ಪುರುಷ ನಾಯಕತ್ವ ಇದೆ, ಆದರೆ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಮಹಿಳಾ ನಾಯಕತ್ವ ಗಣನೀಯವಾಗಿ ಇತ್ತು. ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರು ಸ್ಪರ್ಧೆ ಮಾಡುವುದರ ಜೊತೆಗೆ ಗೆಲುವಿನ ನಗೆಯನ್ನು ಬೀರುತ್ತಿದ್ರು.

    ವಿಧಾನಸಭಾ ಚುನಾವಣೆ (Vidhanasabha Election) ಗೆ ಸಂಬಂಧಿಸಿದಂತೆ ಜಿಲ್ಲೆಯ ಮಟ್ಟಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಹೆಚ್ಚು ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲೂ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಮೂರು ಬಾರಿ ಆಯ್ಕೆಯಾಗಿರುವುದು ವಿಶೇಷ. ಪುರುಷರೇ ಸ್ಪರ್ಧಿಸಿ ಜಯಗಳಿಸುತ್ತಿದ್ದ ಕ್ಷೇತ್ರದಲ್ಲಿ ಮೊದಲ ಬಾರಿಗೆ ಅಂದರೆ 1972ರಲ್ಲಿ ದಮಮಂತಿ ಬೋರೇಗೌಡ 7,139 ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗುತ್ತಾರೆ. ನಂತರ 1986ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1989ರಲ್ಲಿ ದಮಯಂತಿ ಬೋರೇಗೌಡ, 1994ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ, 1999ರಲ್ಲಿ ಪಾರ್ವತಮ್ಮ ಶ್ರೀಕಂಠಯ್ಯ, 2004ರಲ್ಲಿ ವಿಜಯಲಕ್ಷ್ಮೀ ಬಂಡಿಸಿದ್ದೇಗೌಡ ಶಾಸಕಿಯಾಗಿ ಆಯ್ಕೆಯಾಗಿದ್ದು ಇತಿಹಾಸ.

    ಮದ್ದೂರು ವಿಧಾನಸಭಾ ಕ್ಷೇತ್ರ (Maddur Vidhanasabha Constituency) ದಿಂದ 1984ರಲ್ಲಿ ಜಯವಾಣಿ ಮಂಚೇಗೌಡ, 2009ರಲ್ಲಿ ಕಲ್ಪನಾ ಸಿದ್ದರಾಜು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 1997ರಲ್ಲಿ ಪ್ರಭಾವತಿ ಜಯರಾಂ, ಮಳವಳ್ಳಿ ಕ್ಷೇತ್ರದಿಂದ 1989ರಲ್ಲಿ ಮಲ್ಲಾಜಮ್ಮ ಹಾಗೂ ಈ ಹಿಂದೆ ಅಸ್ತಿತ್ವದಲ್ಲಿದ್ದ ಕಿರುಗಾವಲು ಕ್ಷೇತ್ರದಿಂದ 2004ರಲ್ಲಿ ಎಂ.ಕೆ.ನಾಗಮಣಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಟಿಕೆಟ್ ಮಿಸ್- ಪುತ್ರನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ತಾಯಿ ಕಾಂತಾದೇವಿ

    ಜಿಲ್ಲೆಯ ಐದು ವಿಧಾನಸಭಾ(ಕಿರುಗಾವಲು ಸೇರಿದಂತೆ) ಕ್ಷೇತ್ರದಿಂದ ಎಂಟು ಮಹಿಳಾ ಶಾಸಕಿಯರಾಗಿ ಇತಿಹಾಸ ನಿರ್ಮಿಸಿರುವುದು ಒಂದೆಡೆಯಾದರೆ, ಮೇಲುಕೋಟೆ ಮತ್ತು ಕೆ.ಆರ್.ಪೇಟೆ, ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಈವರೆಗೆ ಮಹಿಳೆಯರು ಶಾಸಕಿಯರಾಗಿಲ್ಲ. ಜಿಲ್ಲೆಯಿಂದ 8 ಶಾಸಕಿಯರು ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದರೂ, ಯಾರೊಬ್ಬರೂ ಸಚಿವ ಹುದ್ದೆ ಅಲಂಕರಿಸಿಲ್ಲ ಎನ್ನುವುದು ಗಮನಾರ್ಹ. ಆದರೆ 1994ರಲ್ಲಿ ಶಾಸಕಿಯಾಗಿ ಆಯ್ಕೆಯಾದ ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರು ಜೆ.ಎಚ್.ಪಟೇಲರ ಸರ್ಕಾರದಲ್ಲಿ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಮಳವಳ್ಳಿ ಕ್ಷೇತ್ರದ ಮಲ್ಲಾಜಮ್ಮ ಅವರು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದ್ದಾರೆ.

  • ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಮಾಜಿ ಗೆಳೆಯ, ಪ್ರಿಯತಮ- ಬಾವಿಗೆ ಹಾರಿದ ಯುವತಿ!

    ಮನೆಗೆ ಒಟ್ಟಿಗೆ ಎಂಟ್ರಿ ಕೊಟ್ಟ ಮಾಜಿ ಗೆಳೆಯ, ಪ್ರಿಯತಮ- ಬಾವಿಗೆ ಹಾರಿದ ಯುವತಿ!

    ಭೋಪಾಲ್: ಮಾಜಿ ಗೆಳೆಯ (Ex- Boyfriend) ಹಾಗೂ ಪ್ರಿಯತಮ (Lover) ಒಟ್ಟಿಗೆ ಏಕಾಏಕಿ ಮನೆಗೆ ಬಂದಿದ್ದರಿಂದ ದಾರಿ ಕಾಣದೆ ಯುವತಿ ಬಾವಿಗೆ ಹಾರಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

    ಯುವತಿ ಮನೆಗೆ ಬಂದ ಇಬ್ಬರೂ ಸಂಬಂಧದ ಬಗ್ಗೆ ನಿಜ ಹೇಳುವಂತೆ ಗಲಾಟೆ ಮಾಡಲು ಆರಂಭಿಸಿದ್ದಾರೆ. ಅಲ್ಲದೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಇಬ್ಬರೂ ಯುವತಿಗೆ ಥಳಿಸಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಇದರಿಂದ ನೊಂದ ಯುವತಿ ಬಾವಿಗೆ ಹಾರಿದ್ದಾಳೆ.

    ಕೋಲು, ದೊಣ್ಣೆಗಳಿಂದ ಐದು ಮಂದಿ ಯುವತಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಆಕೆಯ ಮೇಲೆ ದೌರ್ಜನ್ಯವೆಸಗಿ, ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಅದರಲ್ಲೂ ಇಬ್ಬರೂ ಆಕೆಯನ್ನು ಹಿಡಿದುಕೊಂಡು ಥಳಿಸಲು ಆರಂಭಿಸಿದ್ದಾರೆ. ಈ ವೇಳೆ ಯುವತಿ ಅವರ ಕೈಯಿಂದ ತಪ್ಪಿಸಿಕೊಂಡು ಹೋಗಿ ಬಾವಿಗೆ ಬಿದ್ದಿದ್ದಾಳೆ.

    ಇತ್ತ ಯುವತಿ ಬಾವಿಗೆ ಹಾರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಆಕೆಯನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡಿದ್ದಾರೆ. ಬಳಿಕ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಐಸಿಯು (ICU) ವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: 6 ವರ್ಷದ ಪ್ರೀತಿಗೆ ಬಿತ್ತು ಬ್ರೇಕ್- ನೇಣಿಗೆ ಶರಣಾದ ಯುವಕ

    ಇತ್ತ ಗ್ರಾಮಸ್ಥರು ಕೂಡಲೇ ಮನೆಗೆ ತೆರಳಿ ಇಬ್ಬರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಯುವಕರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾಜಿ ಗೆಯನ ಜೊತೆ ಮಾತು ಬಿಟ್ಟಿರುವುದೇ ಘಟನೆಗೆ ಕಾರಣ ಎಂದು ಓರ್ವ ತಪ್ಪೊಪ್ಪಿಕೊಂಡಿದ್ದಾನೆ.

    Love

    ಪ್ರಸ್ತುತ ಇರುವ ಗೆಳೆಯನನ್ನು ಭೇಟಿಯಾಗಿರುವ ಮಾಜಿ ಗೆಳೆಯ ನಿರ್ಧರಿಸಿಯೇ ಇಬ್ಬರೂ ಒಟ್ಟಿಗೆ ಯುವತಿ ಮನೆಗೆ ಬಂದಿದ್ದಾರೆ. ಘಟನೆಯ ಬಳಿಕ ಯುವತಿ ತಂದೆ ಇಬ್ಬರು ಯುವಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?

    ಪ್ರತಿ ಹೆಣ್ಣು ತನ್ನ ಸಂಗಾತಿಯಿಂದ ಬಯಸೋದು ಏನು ಗೊತ್ತಾ?

    ಪುರುಷರು ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ” ಎಂಬುದು ಬಹುಪಾಲು ಮಹಿಳೆಯರ ಆರೋಪ. ಹೆಣ್ಣು ನಿಜವಾಗಿಯೂ ಏನು ಬಯಸುತ್ತಾಳೆ ಎಂಬುದನ್ನು ಅರಿತುಕೊಳ್ಳುವಲ್ಲಿ ಗಂಡು ಸೋಲುತ್ತಾನೆ. ಕೆಲವರು ತನ್ನವಳ ಬಗ್ಗೆ ಎಲ್ಲವನ್ನೂ ತಿಳಿದಿದ್ದೇನೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಾರೆ. ಆದರೆ ತಿಳಿದಿರುವಿಕೆಯಲ್ಲಿ ಹೆಚ್ಚಿನವು ತಪ್ಪು ಎಂದು ಸಾಬೀತಾಗಿವೆ. ಪುರುಷರು ತಮ್ಮನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎಲ್ಲಾ ಮಹಿಳೆಯರು ಬಯಸುತ್ತಾರಂತೆ.

    ಸಪೋರ್ಟ್‌
    ಸ್ವಲ್ಪ ವಿನೋದ ಮತ್ತು ಜಗಳ, ಮುನಿಸು ಜೀವನದಲ್ಲಿ ಚೆನ್ನಾಗಿರುತ್ತೆ. ಆದರೆ ನಿಮ್ಮಾಕೆಯನ್ನು ಯಾರಾದರು ಗೇಲಿ ಮಾಡಿದಾಗ, ನೀವು ಆಕೆ ಪರವಾಗಿ ನಿಲ್ಲಿರಿ. ಏನೇ ಆಗಲಿ.. ನೀವು ಅವಳ ಪರವಾಗಿ ನಿಲ್ಲಬೇಕೆಂದು ಅವಳು ಮನಸ್ಸಿನೊಳಗೆ ಬಯಸುತ್ತಾಳೆ. ಆಕೆ ಗಟ್ಟಿತನದ ಮಹಿಳೆಯಾಗಬೇಕೆಂದರೆ ಕೆಲವೊಮ್ಮೆ ನಿಮ್ಮ ಬೆಂಬಲ ತುಂಬಾ ಮುಖ್ಯ. ಇದನ್ನೂ ಓದಿ: ವಿವಾಹಿತರೊಂದಿಗೆ ಅಫೇರ್‌ ಇಟ್ಕೊಂಡಿರೋರಿಗೆ ಒಂದಷ್ಟು ಸಲಹೆ…

    ಪ್ರೀತಿ ನಿರೀಕ್ಷೆ
    ಹೆಣ್ಣು ತನ್ನ ಸಂಗಾತಿ ಸ್ವಲ್ಪಮಟ್ಟಿನ ಪ್ರೀತಿಯನ್ನಾದರೂ ತೋರಿಸಲಿ ಎಂದು ಅಪೇಕ್ಷಿಸುತ್ತಾಳೆ. ನಾನು ನಿನ್ನೊಂದಿಗಿದ್ದೇನೆ ಎನ್ನುವಂತೆ ಕೈಗಳು ಅಥವಾ ಸೊಂಟವನ್ನು ಹಿಡಿದುಕೊಳ್ಳುವುದು ಆಕೆ ನಿಮ್ಮವಳೆಂದು ಜಗತ್ತಿಗೆ ತೋರಿಸಲು ಒಂದು ಚಿಕ್ಕ ಮಾರ್ಗವಾಗಿದೆ.

    ಜೊತೆಗೆ ಸಮಯ ಕಳೆಯಲು ಬಯಕೆ
    ನೀವು ಮನೆಯಲ್ಲಿದ್ದಾಗ ಹೆಚ್ಚಿನ ಸಮಯ ಸಂಗಾತಿಯೊಂದಿಗೆ ಕಳೆಯಿರಿ. ಅವನು ನನ್ನ ಕಡೆ ಗಮನ ಕೊಡಲಿ, ತುಂಬಾ ಕೇರ್‌ ಮಾಡಿ ಎಂದು ಮಹಿಳೆಯರು ಬಯಸುವುದು ಹೆಚ್ಚು. ಆದ್ದರಿಂದ ನಿಮ್ಮ ಫೋನ್ ಅಥವಾ ಕೆಲಸವನ್ನು ಪಕ್ಕಕ್ಕೆ ಇರಿಸಿ. ನಿಮ್ಮಾಕೆಯೊಂದಿಗೆ ಸಮಯ ಕಳೆಯಿರಿ. ಒಟ್ಟಿಗೆ ಸಿನಿಮಾ ವೀಕ್ಷಿಸಿ. ಮನೆಯ ಕೆಲಸವನ್ನು ಒಟ್ಟಿಗೆ ಮಾಡಿ. ಇದು ನಿಮ್ಮ ಸಂಗಾತಿಗೆ ತುಂಬಾ ಮುಖ್ಯವಾಗಿರುತ್ತದೆ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?

    ಭಾವನೆ ಹಂಚಿಕೊಳ್ಳುವುದು, ಪ್ರಾಮಾಣಿಕತೆ
    ಸತ್ಯವು ಎಷ್ಟೇ ಕಹಿ ಆಗಿರಲಿ, ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿರಿ. ಆಕೆಗೆ ಸುಳ್ಳು ಹೇಳುವುದು ಮತ್ತು ದ್ರೋಹ ಮಾಡುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಸಂಗಾತಿಗೆ ಸತ್ಯವೇ ಮುಖ್ಯವಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಪ್ರಾಮಾಣಿಕರಾಗಿದ್ದಷ್ಟೂ ಸಂಬಂಧ ಗಟ್ಟಿಗೊಳ್ಳುತ್ತದೆ.

    ಹೇಳುವುದನ್ನು ಆಲಿಸುವುದು
    ನಿಮ್ಮವಳು ಏನು ಹೇಳುತ್ತಿದ್ದಾಳೆಂಬುದನ್ನು ಮೊದಲು ಆಲಿಸಿ. ಆಕೆ ಮಾತನಾಡುವಾಗಿ ಅಡ್ಡಿಪಡಿಸಬೇಡಿ. ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ. ಈ ನಡವಳಿಕೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ವಿಶೇಷವಾಗಿ ಟ್ರೀಟ್‌ ಮಾಡುವುದು
    ನಿಮ್ಮ ಸಂಗಾತಿಯನ್ನು ಸ್ನೇಹಿತೆಯಂತೆ ಪರಿಗಣಿಸಿ. ಇದರಿಂದ ನಿಮ್ಮಾಕೆಗೆ ನೀವು ಇನ್ನಷ್ಟು ಇಷ್ಟವಾಗಬಹುದು. ಆಕೆ ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯಾಗಿರಬೇಕು. ನನ್ನನ್ನು ವಿಶೇಷವಾಗಿ ಟ್ರೀಟ್‌ ಮಾಡಲಿ ಅಂತಾ ಬಯಸುವ ಮಹಿಳೆಯರೇ ಹೆಚ್ಚು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ

    ಪುರುಷರು ಜೊತೆಯಲ್ಲಿರದಿದ್ದರೆ ಮಹಿಳೆಯರಿಗಿಲ್ಲ ಜಾಮಾ ಮಸೀದಿ ಪ್ರವೇಶ

    ನವದೆಹಲಿ: ಜಾಮಾ ಮಸೀದಿಗೆ (Jama Masjid) ಮಹಿಳೆ (Women) ಒಬ್ಬಳೇ ಅಥವಾ ಮಹಿಳೆಯರ ಗುಂಪು ಪುರುಷರಿಲ್ಲದೇ ಬರುವಂತಿಲ್ಲ ಎಂದು ಆದೇಶ ಹೊರಡಿಸಿದೆ.

    ಪುರುಷರು ಜೊತೆಗಿಲ್ಲದೇ ಮಹಿಳೆಯರು ಜಾಮಾ ಮಸೀದಿ ಪ್ರವೇಶ ನಿಷೇಧಿಸಲಾಗಿದೆ ಎಂದು ಜಾಮಾ ಮಸೀದಿ ನೋಟಿಸ್ ಹೊರಡಿಸಿದೆ. ಕಳೆದ ಕೆಲದಿನಗಳ ಹಿಂದೆ ಈ ಬಗ್ಗೆ ಜಾಮಾ ಮಸೀದಿಯ ಆಡಳಿತ ಮಂಡಳಿ ಪ್ರಕಟನೆಯನ್ನು ಪ್ರವೇಶ ದ್ವಾರದ ಬಳಿ ಹಾಕಿದೆ. ಇದನ್ನೂ ಓದಿ: ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಮುನ್ನ ದಿನ ಕರಾವಳಿಯಲ್ಲಿ ರಿಂಗಣಿಸಿದ್ದ ಸ್ಯಾಟಲೈಟ್‌ ಫೋನ್‌

    ಜಾಮಾ ಮಸೀದಿಯ ಈ ಪ್ರಕಟನೆ ಬೆನ್ನಲ್ಲೇ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಜಾಮಾ ಮಸೀದಿ ತೆಗೆದುಕೊಂಡಿರುವ ನಿರ್ಧಾರ ಅಸಂವಿಧಾನಿಕ ಎಂದು ಜರಿದಿದ್ದಾರೆ. ಈ ಹಿಂದೆ ಜಾಮಾ ಮಸೀದಿಗೆ ಮಹಿಳೆಯರಿಗೂ ಪ್ರವೇಶ ನೀಡಲಾಗುತ್ತಿತ್ತು. ಇದೀಗ ಮಸೀದಿ ಪ್ರವೇಶ ನಿಷೇಧಿಸಲು ಮುಂದಾಗಿದೆ. ಇದನ್ನೂ ಓದಿ: ರೂಮಿನ ಹತ್ರ ಬಂದಾಗ ಸಡನ್ ಲಾಕ್ – ಕನ್ನಡಕ ಧರಿಸಿ ಓಡಾಟ

    Live Tv
    [brid partner=56869869 player=32851 video=960834 autoplay=true]

  • ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ಮೈ ಕೊರೆಯುವ ಚಳಿಗಾಲದಲ್ಲಿ ಬೆಚ್ಚಗಿರಲು ಧರಿಸಿ ಈ ಸೂಕ್ತ ಉಡುಪುಗಳು!

    ವೆಂಬರ್ ತಿಂಗಳು ಬರುತ್ತಿದ್ದಂತೆಯೇ ಚಳಿ, ಗಾಳಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಜನ ಚಳಿಯಿಂದ ಬೆಚ್ಚಗಿರಲು ಶಾಲ್, ಟೋಪಿ, ಸ್ವೆಟರ್, ಪುಲ್‍ಓವರ್, ಸ್ವೆಟ್‍ಶರ್ಟ್‍ಗಳ ಮೊರೆಹೋಗಿರುತ್ತಾರೆ. ಅಲ್ಲದೇ ಚಳಿಗಾಲದಲ್ಲಿ ಎಂತಹ ಉಡುಪುಗಳನ್ನು ಧರಿಸಬೇಕು ಎಂಬುವುದು ಕೂಡ ಬಹಳ ಮುಖ್ಯವಾಗಿರುತ್ತದೆ. ವರ್ಷಾಂತ್ಯದಲ್ಲಿ ಬರುವ ಚಳಿಗಾಲದಲ್ಲಿ ಜನರ ಕಣ್ಣು ಕುಕ್ಕುವಂತಹ ನಾನಾ ವೆರೈಟಿ ಹೊದಿಕೆಗಳು, ಸ್ಟೆಟರ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಈ ಕುರಿತ ಒಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

    ಅಲೆನ್ ಸೋಲಿ ಮೆನ್ ಸ್ವೆಟ್‍ಶರ್ಟ್
    ಕಿತ್ತಳೆ ಬಣ್ಣದ ಈ ಸ್ವೆಟ್‍ಶರ್ಟ್ ನಿಮ್ಮನ್ನು ಬೆಚ್ಚಗಿರಿಸುವುದಷ್ಟೇ ಅಲ್ಲದೇ ಸಖತ್ ಅಟ್ರ್ಯಾಕ್ಟಿವ್ ಲುಕ್ ನೀಡುತ್ತದೆ. ಇದು ಚಳಿಗಾಲದಲ್ಲಿಯೂ ಬೇಸಿಗೆ ಎಂಬಂತಹ ಭಾವನೆ ಮೂಡಿಸುವಷ್ಟು ನಿಮ್ಮನ್ನು ಬೆಚ್ಚಗಿರಿಸುತ್ತದೆ. ಜೊತೆಗೆ ಇದು ನಿಮಗೆ ಸ್ಟೈಲಿಶ್ ಲುಕ್ ಕೂಡ ನೀಡುತ್ತದೆ. ನೂಲಿನಿಂದ ಮಾಡಲಾಗಿರುವ ಈ ಜಾಕೆಟ್ ಮದ್ಯದಲ್ಲಿ ಜಿಪ್ ಇರುವುದನ್ನು ಕಾಣಬಹುದಾಗಿದೆ.

    ಮಾಂಟೆ ಕಾರ್ಲೊ ವುಮೆನ್ಸ್ ಬ್ಲಾಕ್ ಪಾರ್ಕ್ ಜಾಕೆಟ್
    ಮುಂಭಾಗ ಜಿಪ್ ಮತ್ತು ಬಟನ್‍ಗಳೊಂದಿಗೆ, ದೊಡ್ಡ ಜೇಬಿಗಳಿರುವ ಈ ಜಾಕೆಟ್ ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಫ್ಯಾಶನ್ ಲುಕ್ ನೀಡುವ ಈ ಜಾಕೆಟ್ ಉಷ್ಣಾಂಶವನ್ನು ಹೆಚ್ಚಾಗಿಸುತ್ತದೆ. ಈ ಜಾಕೆಟ್ ಅನ್ನು ಜೀನ್ಸ್ ಜೊತೆಗೆ ಶೂಗಳೊಂದಿಗೆ ಧರಿಸುವುದರಿಂದ ಬೆಸ್ಟ್ ಎಂದೇ ಹೇಳಬಹುದು.

    ಜಾಮ್ & ಹನಿ ಬಾಯ್ಸ್ ಸ್ವೆಟರ್
    ಸ್ಲೀವ್ಸ್ ಇಲ್ಲದ ಈ ಸ್ವೆಟರ್ ಕುತ್ತಿಗೆ ಪೂರ್ತಿ ಬರುತ್ತದೆ. ಸಾಮಾನ್ಯವಾಗಿ ಬ್ಲಾಕ್ ಕಲರ್ ಉಡುಪು ಚೆನ್ನಾಗಿಯೇ ಕಾಣಿಸುತ್ತದೆ. ಸದ್ಯ ಈ ಸ್ವೆಟರ್ ಕೂಡ ಬ್ಲಾಕ್ ಕಲರ್ ಆಗಿದ್ದು, ಮದ್ಯದಲ್ಲಿ ಬಿಳಿ ಬಣ್ಣದ ಸ್ಟಾರ್ ಡಿಸೈನ್ ಎದ್ದು ಕಾಣುತ್ತದೆ. ವಿಷೇಶವೆಂದರೆ ಈ ಸ್ವೆಟರ್ ಅನ್ನು ಯಾವುದೇ ಶರ್ಟ್ ಮೇಲೆ ಬೇಕಾದರೂ ಧರಿಸಬಹುದಾಗಿದೆ.

    ಸಿಂಬಲ್ ಗರ್ಲ್ಸ್‌  ಜಾಕೆಟ್
    ಯೆಲ್ಲೋ ಕಲರ್‌ನ ಈ ಜಾಕೆಟ್ ಹುಡುಗಿಯರಿಗೇ ಚಳಿಗಾಲದಲ್ಲಿ ಬೆಸ್ಟ್ ಎಂದೇ ಹೇಳಬಹುದು. ಈ ಜಾಕೆಟ್‍ನ ಮುಂಭಾಗದಲ್ಲಿ ಜಿಪ್ ಇರುತ್ತದೆ. ಈ ಜಾಕೆಟ್ ಒಳಗಡೆ ಕಪ್ಪು ಲೈನಿಂಗ್ ಮತ್ತು ಮ್ಯಾಂಡರಿನ್ ಕಾಲರ್ ಇದೆ. ಇದು ನಿಮ್ಮನ್ನು ಬೆಚ್ಚಗಿರಿಸುವುದರ ಜೊತೆಗೆ ಧರಿಸಲು ಕಂಫರ್ಟ್ ಆಗಿರುತ್ತದೆ.

    Live Tv
    [brid partner=56869869 player=32851 video=960834 autoplay=true]

  • 18-65 ವಯಸ್ಸಿನ ಪುರುಷರಿಗೆ ಟಿಕೆಟ್ ಮಾರಾಟ ನಿಲ್ಲಿಸಲು ರಷ್ಯಾದ ಏರ್‌ಲೈನ್ಸ್ ಆದೇಶ

    18-65 ವಯಸ್ಸಿನ ಪುರುಷರಿಗೆ ಟಿಕೆಟ್ ಮಾರಾಟ ನಿಲ್ಲಿಸಲು ರಷ್ಯಾದ ಏರ್‌ಲೈನ್ಸ್ ಆದೇಶ

    ಮಾಸ್ಕೋ: ಉಕ್ರೇನ್‌ನಲ್ಲಿ (Ukraine) ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಲು ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ತನ್ನ ಸೇನೆಯನ್ನು ಭಾಗಶಃ ಸಜ್ಜುಗೊಳಿಸುವಂತೆ ಆದೇಶ ನೀಡಿದ್ದಾರೆ. ಇದರ ಬೆನ್ನಲ್ಲೇ ರಷ್ಯಾದಲ್ಲಿ 18 ರಿಂದ 65 ವಯಸ್ಸಿನವರೆಗಿನ ಪುರುಷರಿಗೆ (Men) ಟಿಕೆಟ್ (Ticket) ಮಾರಾಟ ಮಾಡುವುದನ್ನು ತಡೆಯಲು ರಷ್ಯಾದ ಏರ್‌ಲೈನ್ಸ್ (Airlines) ಆದೇಶ ನೀಡಿದೆ.

    ಪುಟಿನ್ ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಇನ್ನಷ್ಟು ಹೆಚ್ಚಿಸಲು ಸೇನೆಯನ್ನು ಸಜ್ಜುಗೊಳಿಸುತ್ತಿರುವುದಾಗಿ ತಿಳಿಸಿದ ತಕ್ಷಣ ರಷ್ಯಾದಿಂದ ಹೊರಡುತ್ತಿರುವ ಎಲ್ಲಾ ವಿಮಾನಗಳ ಟಿಕೆಟ್‌ಗಳು ಸಂಪೂರ್ಣವಾಗಿ ಮಾರಾಟವಾಗಿದೆ ಎಂದು ವರದಿಯಾಗಿದೆ. ಅಲ್ಲಿನ ಜನರು ಅರ್ಮೇನಿಯಾ, ಜಾರ್ಜಿಯಾ, ಅಜರ್‌ಬೈಜಾನ್, ಕಝಾಕಿಸ್ತಾನ ಸೇರಿದಂತೆ ಹತ್ತಿರದ ದೇಶಗಳಿಗೆ ಹೋಗಲು ಮುಂದಾಗುತ್ತಿದ್ದಾರೆ.

    ಪುಟಿನ್ ಅವರ ಭಾಷಣದ ಬಳಿಕ ರಷ್ಯಾದ ರಕ್ಷಣಾ ಸಚಿವ ಸರ್ಗೆ ಶೋಯಿಗು ಅವರು ದೇಶದ ಸುಮಾರು 3 ಲಕ್ಷ ಪುರುಷರನ್ನು ಸೇನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಇದೀಗ ಸಮರ ಕಾನೂನನ್ನು ವಿಧಿಸುವ ಸಾಧ್ಯತೆಗಳ ನಡುವೆಯೇ ರಷ್ಯಾದ ವಿಮಾನಯಾನ ಸಂಸ್ಥೆ 18 ರಿಂದ 65 ವಯಸ್ಸಿನ ನಡುವಿನ ಪುರುಷರಿಗೆ ರಷ್ಯಾದಿಂದ ಹೊರ ಹೋಗಲು ಟಿಕೆಟ್ ನೀಡುವುದನ್ನು ತಡೆಹಿಡಿದಿದೆ. ಈ ವಯಸ್ಸು ರಷ್ಯಾ ಸೈನಿಕರು ಕಾರ್ಯನಿರ್ವಹಿಸುವ ವಯಸ್ಸಾಗಿರುವುದು ಗಮನಾರ್ಹ. ಇದನ್ನೂ ಓದಿ: ಗೌರವ ಹೋದ್ರೆ ಎಲ್ಲರದ್ದೂ ಹೋಗಲಿದೆ – ಪೇ ಸಿಎಂ ಗದ್ದಲ, ಗಲಾಟೆ: ಕಲಾಪ ಮುಂದೂಡಿಕೆ

    ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭವಾದ ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಿಸಲಾಗಿದೆ. ಆದರೂ ವ್ಲಾಡಿಮಿರ್ ಪುಟಿನ್ ಯುದ್ಧವನ್ನು ನಿಲ್ಲಿಸಲು ನಿರಾಕರಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ಉಕ್ರೇನ್‌ಗೆ ಸಹಾಯ ಮಾಡುತ್ತಿರುವುದಕ್ಕೆ ಕೋಪಗೊಂಡಿರುವ ಪುಟಿನ್ ಪರಮಾಣು ಶಸ್ತ್ರಾಸ್ತ್ರಗಳನ್ನೂ ಬಳಸುವ ಬಗ್ಗೆ ಸುಳಿವು ನೀಡಿದ್ದಾರೆ.

    ಆ ಕಡೆ ಉಕ್ರೇನ್‌ನಲ್ಲಿ ಯುದ್ಧಕ್ಕೆ ಸೇರಲು ಜೈಲಿನಲ್ಲಿರುವ ಕೈದಿಗಳನ್ನೂ ನೇಮಿಸಲಾಗುತ್ತಿರುವುದಾಗಿ ವರದಿಯಾಗಿದೆ. ಸೇನೆಗೆ ಸೇರುವ ಎಲ್ಲಾ ಕೈದಿಗಳಿಗೂ 6 ತಿಂಗಳ ಬಳಿಕ ಅಧ್ಯಕ್ಷೀಯ ಕ್ಷಮಾದಾನ ಹಾಗೂ ತಿಂಗಳಿಗೆ ಭಾರೀ ಮೊತ್ತದ ಸಂಬಳ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಪಾಪರೆಡ್ಡಿ ಪಾಳ್ಯದಲ್ಲಿ 5 ಅಂತಸ್ತಿನ ಮನೆ ಉಡೀಸ್

    Live Tv
    [brid partner=56869869 player=32851 video=960834 autoplay=true]