Tag: Memorial
-

ವಿಷ್ಣುದಾದಾ ಸ್ಮಾರಕಕ್ಕೆ ಭೂಮಿ ನೀಡಲು ಮುಂದಾದ ಅಭಿಮಾನಿ
– ವಿಷ್ಣುವರ್ಧನ್ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಸಿಎಂ ಎಚ್‍ಡಿಕೆ ಸ್ಪಷ್ಟನೆ
ಬೆಂಗಳೂರು: ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸ್ವಂತ ಜಾಗವನ್ನು ನೀಡಲು ಅಭಿಮಾನಿಯೊಬ್ಬರು ಮುಂದಾಗಿದ್ದಾರೆ.
ಮಂಡ್ಯದ ಕೆ.ಸಿ.ಪಿ ರಾಜಣ್ಣ ಅವರು ಸ್ಮಾರಕ ಸ್ಥಳಕ್ಕೆ ಜಮೀನು ನೀಡಲು ಮುಂದಾದ ಅಭಿಮಾನಿಯಾಗಿದ್ದು, ಮೈಸೂರಿನ ಕೆ.ಆರ್.ಎಸ್. ಜಲಾಶಯ ಬಳಿ ತಮ್ಮ ಹೆಸರಿನಲ್ಲಿ ಇರುವ 100*80 ನಿವೇಶನ ಹಾಗೂ ಪಕ್ಕದಲ್ಲೇ ಇರುವ 13 ಗುಂಟೆ ಜಾಗವನ್ನು ತಮ್ಮ ಹಣದಲ್ಲಿ ಖರೀದಿ ಮಾಡಿ ಸ್ಮಾರಕಕ್ಕೆ ನೀಡಲು ಮುಂದಾಗಿದ್ದಾರೆ.

ಮೂರು ತಿಂಗಳ ಹಿಂದೆಯಷ್ಟೆ 100*80 ನಿವೇಶನವನ್ನು ರಾಜಣ್ಣ ಅವರು ಖರೀದಿ ಮಾಡಿದ್ದರು. ವೃತ್ತಿಯಲ್ಲಿ ಕಂಟ್ರ್ಯಾಕ್ಟರ್ ಆಗಿರುವ ರಾಜಣ್ಣ ಅವರು ವಿಷ್ಣುದಾದಾರ ಬಹುದೊಡ್ಡ ಅಭಿಮಾನಿ. ಹೀಗಾಗಿ ಸ್ಮಾರಕಕ್ಕೆ ಜಮೀನು ನೀಡಲು ಮುಂದಾಗಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ರಾಜಣ್ಣ ಅವರು, ಕೆ.ಆರ್.ಎಸ್ ಬಳಿ ಇರುವ ನನ್ನ ಭೂಮಿಯಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಿ ಸ್ಥಳ ಖರೀದಿ ಮಾಡಿದೆ. ಇದರ ಪಕ್ಕದಲ್ಲೇ 13 ಗುಂಟೆ ಖಾಸಗಿ ವ್ಯಕ್ತಿಯ ಸ್ಥಳವಿದೆ. ಅದನ್ನು ಖರೀದಿ ಮಾಡಿ ಸರ್ಕಾರಕ್ಕೆ ನೀಡುತ್ತೇನೆ. ಅಲ್ಲದೇ ಈ ಸ್ಥಳದಲ್ಲಿ ಸರ್ಕಾರದ 4 ಎಕರೆ ಪ್ರದೇಶವಿದೆ. ನಾನು ಅಶ್ರಮ ಮಾಡಬೇಕು ಎಂದಿದೆ. ಆದರೆ ವಿಷ್ಣು ಅವರ ಸ್ಮಾರಕಕ್ಕೆ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕಿದೆ. ಅದ್ದರಿಂದ ನಮ್ಮ ಕುಟುಂಬ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

ವಿಷ್ಣು ಅವರ ಸ್ಮಾರಕ ವಿಚಾರಕ್ಕೆ ಈ ರೀತಿ ಹೋರಾಟ ಗೊಂದಲ ಉಂಟಾಗುವುದು ಬೇಡ. ಇದರಿಂದ ನಮ್ಮ ವಿಷ್ಣು ಕುಟುಂಬಕ್ಕೆ ಸಮಸ್ಯೆ ಉಂಟಾಗುತ್ತದೆ. ಅಲ್ಲದೇ ಅಭಿಮಾನಿಗಳಿಗೂ ಒಂದು ರೀತಿ ಅವಮಾನ ಆಗುತ್ತದೆ. ಸರ್ಕಾರ ಹಾಗೂ ಭಾರತಿ ವಿಷ್ಣುವರ್ಧನ್ ಅಮ್ಮನವರು ಈ ಬಗ್ಗೆ ಮಾತನಾಡಿ ತೀರ್ಮಾನ ತೆಗೆದುಕೊಂಡರೆ ನಾನು ಈ ಕ್ಷಣಕ್ಕೆ ಜಾಗ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
ಎಚ್‍ಡಿಕೆ ಸ್ಪಷ್ಟನೆ: ವಿಷ್ಣುದಾದಾ ಸ್ಮಾರಕ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಕುಮಾರಸ್ವಾಮಿ ಹೇಳಿದ್ದು, ಡಾ. ರಾಜ್‍ಕುಮಾರ್, ಡಾ. ವಿಷ್ಣುವರ್ಧನ್ ಸ್ಮರಿಸುವ ವಿಷ್ಯದಲ್ಲಿ ನಾನು ಬದ್ಧ. ವಿಷ್ಣು ಸ್ಮಾರಕ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಇಂದು ಮಧ್ಯಾಹ್ನ 2 ಗಂಟೆಗೆ ನಿರ್ಮಾಪಕರ ಸಂಘದ ಸದಸ್ಯರು ವಿಷ್ಣು ಕುಟುಂಬಸ್ಥರನ್ನು ಭೇಟಿ ಆಗಲಿದ್ದಾರೆ.
ವಿಷ್ಣುವರ್ಧನ್ ಅವರ ಸ್ಮಾರಕ ಕುರಿತ ವಿಚಾರದಲ್ಲಿ ಯಾವುದೇ ಗೊಂದಲ ಬೇಡ. ಡಾ ರಾಜಕುಮಾರ್, ವಿಷ್ಣುವರ್ಧನ್ ಹಾಗೂ ಅಂಬರೀಷ್ ರಂತಹ ಮಹನೀಯರನ್ನು ಸ್ಮರಿಸುವ ವಿಚಾರದಲ್ಲಿ ನಾನು ಬದ್ಧನಿದ್ದೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅತಿ ಶೀಘ್ರದಲ್ಲಿ ವಿಷ್ಣುವರ್ಧನ್ ಅವರ ಸ್ಮಾರಕ ಕುರಿತು ನಿರ್ಧಾರ ಕೈಗೊಳ್ಳುತ್ತೇನೆ.
— CM of Karnataka (@CMofKarnataka) November 29, 2018

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸ್ಮಾರಕ ಸಂಘರ್ಷ: ಇಂದು ಸಿಎಂಗೆ ಅನಿರುದ್ಧ್ ಮನವಿ ಪತ್ರ
– ವಿಷ್ಣು ಕುಟುಂಬಸ್ಥರ ಜೊತೆ ನಿರ್ಮಾಪಕರಿಂದ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಅಂಬಿ ಸಾವಿನ ಬಳಿಕ ವಿಷ್ಣು ಸ್ಮಾರಕದ ಚರ್ಚೆಯೆದ್ದಿದೆ. ಅಭಿಮಾನ್ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕೆಂದು ಭಾರತಿ ಪಟ್ಟುಹಿಡಿದಿದ್ದಾರೆ. ಆದ್ರೆ ಇದೆಲ್ಲದರ ನಡುವೆ ಇಂದು ಸಿಎಂಗೆ ಅನಿರುದ್ಧ್ ಪತ್ರ ಬರೆಯಲಿದ್ದಾರೆ. ಅತ್ತ ನಿರ್ಮಾಪಕ ಸಂಘ ಇಂದು ವಿಷ್ಣು ಕುಟುಂಬಸ್ಥರೊಂದಿಗೆ ಚರ್ಚೆ ನಡೆಸಲಿದೆ.
ಕನ್ನಡ ಚಿತ್ರರಂಗದ ಮೂರು ಮಾಣಿಕ್ಯಗಳಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇತಿಹಾಸದ ಪುಟ ಸೇರಿದ್ದಾರೆ. ಈ ಮೂವರು ಕಲಾರತ್ನಗಳು ಬದುಕಿದ್ದಾಗ ಎಂದೂ ವಿವಾದವನ್ನ ಮೈಮೇಲೆ ಎಳೆದುಕೊಂಡವರಲ್ಲ. ಸಾಹಸಸಿಂಹ ವಿಷ್ಣುವರ್ಧನ್ ಅವರಂತೂ ವಿವಾದದಿಂದ ದೂರವೇ ಉಳಿದವರು. ವಿಷ್ಣು ಅಗಲಿ 10 ವರ್ಷಗಳಾಗಿದ್ದು, ಸ್ಮಾರಕ ನಿರ್ಮಾಣವಾಗಿಲ್ಲ. ರಾಜ್-ಅಂಬಿ ಅವರಂತೆ ವಿಷ್ಣು ಅವರ ಸ್ಮಾರಕವನ್ನೂ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಬೇಕು ಅನ್ನೋ ಚರ್ಚೆ ಜೋರಾಗಿದೆ. ಇದನ್ನೂ ಓದಿ: ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

ಕಂಠೀರವ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ಬೇಡ. ಅಭಿಮಾನ್ ಸ್ಟುಡಿಯೋ ಅಥವಾ ಮೈಸೂರಲ್ಲೇ ಮಾಡಿ. ಈ ಬಗ್ಗೆ ಡಿಸೆಂಬರ್ 30ರೊಳಗೆ ಸರ್ಕಾರ ಒಂದು ತೀರ್ಮಾನಕ್ಕೆ ಬರಬೇಕು ಅಂತ ಭಾರತಿ ವಿಷ್ಣುವರ್ಧನ್ ಎಚ್ಚರಿಸಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ವೇದಿಕೆಯಲ್ಲಿ ಮಾತನಾಡಿದ ಅನಿರುದ್ಧ್, ಸ್ಮಾರಕ ನಿರ್ಮಾಣದ ಬಗ್ಗೆ ಸಿಎಂ ಕುಮಾರಸ್ವಾಮಿಗೆ ಮನವಿ ಪತ್ರ ಕೊಡ್ತೀವಿ ಅಂದ್ರು. ಇದಕ್ಕೆ ಪ್ರತಿಕ್ರಿಯಿಸಿದ ನಿರ್ಮಾಪಕ ಮುನಿರತ್ನ, ಇಂದು ಮಧ್ಯಾಹ್ನ 2 ಗಂಟೆಗೆ ವಿಷ್ಣು ಕುಟುಂಬಸ್ಥರನ್ನು ಭೇಟಿ ಮಾಡಿ ಚರ್ಚಿಸ್ತೇನೆ ಎಂದರು.

ವಿಷ್ಣುವರ್ಧನ್ ಅವರ ಸಮಾಧಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೊದಲ್ಲಿ ಮಾಡಲಾಗಿದೆ. ಇಲ್ಲೇ ಸ್ಮಾರಕ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಆದರೆ, ಈ ಸ್ಟುಡಿಯೊ ಜಾಗ ಇದೀಗ ವ್ಯಾಜ್ಯದಲ್ಲಿರುವುದೇ ಸ್ಮಾರಕ ನಿರ್ಮಾಣದ ಹಿನ್ನಡೆಗೆ ಕಾರಣವಾಗಿದೆ. ಒಟ್ಟಿನಲ್ಲಿ ಇಂದು ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಕುಟುಂಬಸ್ಥರು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
https://www.youtube.com/watch?v=-hY6Ux0McaA
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಅಪ್ಪಾಜಿಯನ್ನ ವಿರೋಧಿಸಿದವರೇ ನಮ್ಮನ್ನು ಕಡೆಗಣಿಸುತ್ತಿದ್ದಾರೆ: ವಿಷ್ಣು ಪುತ್ರಿ
ಬೆಂಗಳೂರು: ಅಪ್ಪಾಜಿ ಅವರನ್ನು ವಿರೋಧಿಸುತ್ತಿದ್ದವರೇ ಈಗ ಅವರ ಕುಟುಂಬವನ್ನು ಕಡೆಗಣಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷ್ಣುವರ್ಧನ್ ಪುತ್ರಿ ಕೀರ್ತಿ ಅನಿರುದ್ಧ್ ಗಂಭೀರವಾಗಿ ಆರೋಪಿಸಿದರು.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಪ್ಪನ ಬಗ್ಗೆ ಗೊತ್ತಿರುವವರು ನಮ್ಮ ಕುರಿತು ಹಗುರವಾಗಿ ಮಾತನಾಡುತ್ತಿರಲಿಲ್ಲ. ಕೆ.ಮಂಜು ಅವರು ಮಾಧ್ಯಮಗಳ ಮುಂದೆ ಮಾತ್ರ ಮಾತನಾಡುತ್ತಾರೆ. ನಮ್ಮ ಬಳಿಗೆ ಬಂದು ಯಾವತ್ತೂ ಚರ್ಚೆ ಮಾಡಿಲ್ಲ. ತಮಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅಪ್ಪ ಏನು ಅಂತಾ ನನಗೆ ಗೊತ್ತು. ಅವರ ಪ್ರತಿ ಅಭಿಮಾನಿಗಳ ಬಗ್ಗೆ ಮಾಹಿತಿಯಿದೆ. ನಮ್ಮನ್ನು ಯಾಕೆ ಇಷ್ಟು ದ್ವೇಷಿಸುತ್ತಿದ್ದಾರೆ, ಗುರಿ ಮಾಡುತ್ತಿದಾರೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದ ಅವರು, ವೀರಕಪುತ್ರ ಶ್ರೀನಿವಾಸ್ ಅವರನ್ನು ನಾನು ನೇರವಾಗಿ ನೋಡಿಲ್ಲ. ಆದರೂ ಸ್ಮಾರಕ ವಿಚಾರದಲ್ಲಿ ಮಾಧ್ಯಮಗಳ ಮುಂದೆ ಮಾತನಾಡುತ್ತಿದ್ದಾರೆ ಎಂದು ದೂರಿದರು. ಇದನ್ನು ಓದಿ: ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್

ಕಳೆದ 9 ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ಮನವಿ ಪತ್ರಗಳನ್ನು ನೀಡುತ್ತಲೇ ಬಂದಿದ್ದೇವೆ. ಅಪ್ಪನ ಸ್ಮಾರಕದ ಯಾರೊಬ್ಬರೂ ಮಾತನಾಡಲಿಲ್ಲ. ಸಿಎಂ ಗಳು ಬದಲಾಗುತ್ತಾ ಬಂದರೇ ಹೊರತು, ಯಾರೊಬ್ಬರೂ ಸ್ಮಾರಕದ ಬಗ್ಗೆ ಯೋಚನೆ ಮಾಡಲಿಲ್ಲ. ಕುಮಾರಸ್ವಾಮಿ ಅವರು ಈಗ ನೀಡಿರುವ ಭರವಸೆಯನ್ನು ಈ ಹಿಂದೆಯೇ ನೀಡಬಹುದಿತ್ತು. ನಮ್ಮನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸಿದರು ಎಂದು ಕಿಡಿಕಾರಿದರು.
ಸ್ಮಾರಕ ನಿರ್ಮಾಣ ಮಾಡಿದರೆ ನಮಗೆ ಏನು ಸಿಗುತ್ತದೆ. ನಾವೇನು ಅಲ್ಲಿಯೇ ಇರುತ್ತೀವಾ? ಕೆಲವರು ಅಪ್ಪಾಜಿಯನ್ನು ಕಡೆಗಣಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡುವವರು ನಮ್ಮ ಜೊತೆಗೆ ಕುಳಿತು ಚರ್ಚೆ ಮಾಡಲಿ. ಪರಿಸ್ಥಿತಿ ಏನು ಎನ್ನುವುದು ಅರ್ಥವಾಗುತ್ತದೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ನಿಮಗೆ ಏನು ಅನ್ನಿಸುತ್ತೆ ಹಾಗೆಯೇ ಮಾಡಿ: ಭಾರತಿ ವಿಷ್ಣುವರ್ಧನ್
-ಭಗವಂತನ ಇಚ್ಛೆ ಏನ್ ಇದೆಯೋ ಅದೇ ಆಗಲಿ
ಬೆಂಗಳೂರು: ನಿಮಗೆ ಏನು ಎನಿಸುತ್ತದೆ ಹಾಗೆಯೇ ಮಾಡಿ ಎಂದು ಸರ್ಕಾರಕ್ಕೆ ಭಾರತಿ ವಿಷ್ಣುವರ್ಧನ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಷ್ಣುಗೆ ಸ್ಮಾರಕವೇ ಬೇಕಿಲ್ಲ. ಕುಲಕೋಟಿ ಅಭಿಮಾನಿಗಳ ಪ್ರೀತಿ ಸಿಕ್ಕಿದೆ ಅಷ್ಟೇ ಸಾಕು ಎಂದು ಮಾತು ಶುರು ಮಾಡುತ್ತಲೇ ಭಾರತಿ ವಿಷ್ಣುವರ್ಧನ್ ಭಾವುಕರಾದರು.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಂತ್ಯಸಂಸ್ಕಾರದ ಬಳಿಕ ಸ್ಮಾರಕದ ಬಗ್ಗೆ ಯಾರು ಮಾತನಾಡಿರಲಿಲ್ಲ. ಇದರಿಂದಾಗಿ ನನಗೆ ತುಂಬಾ ಸಂಕಟವಾಗಿತ್ತು. ಬಳಿಕ ನಾನೇ 7 ಲಕ್ಷ ರೂ, ಖರ್ಚು ಮಾಡಿ ಸ್ವಂತ ಹಣದಲ್ಲಿ ಪುಣ್ಯಭೂಮಿ ನಿರ್ಮಿಸಿದ್ದೇವು. ಅಲ್ಲಿ ಆರೋಗ್ಯ ಶಿಬಿರ, ಸಾಂಸ್ಕೃತಿಕ ಚಟುವಟಿಕೆ ನಡೆಸಿ ವಿಷ್ಣುವರ್ಧನ್ ಪುಣ್ಯಭೂಮಿ ಇದೆ ಅಂತಾ ಜನರಿಗೆ ಗೊತ್ತಾಯಿತು ಎಂದು ಹೇಳಿದರು.

ಅಭಿಮಾನಿಗಳು ಈಗ ಸ್ಮಾರಕದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ರೆಬಲ್ ಸ್ಟಾರ್ ಅಂಬರೀಶ್ ಅವರು ಹಿರಿಯ ಕಲಾವಿದರಿಗೆ ಗೌರವ ಸಲ್ಲಿಸಬೇಕು. ಹೀಗಾಗಿ ವಿಷ್ಣುವರ್ಧನ್ ಅವರ ಸ್ಮಾರಕ ಭವನ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ವಿಷ್ಣುಗೆ ಮೈಸೂರು ಅಂದರೆ ತುಂಬಾ ಇಷ್ಟ ಹೀಗಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿ ಅಂತ ಕೇಳಿಕೊಳುತ್ತಿದ್ದೇವೆ ಅಷ್ಟೇ. ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಸಿಗದ ಕಾರಣಕ್ಕೆ ಸರ್ಕಾರವೇ ಮೈಸೂರಿನಲ್ಲಿ ಜಾಗ ಗೊತ್ತುಪಡಿಸಿದೆ. ಹೀಗಾಗಿ ನಾವು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಕೊಂಡಿದ್ದೇವೆ. ಅಲ್ಲಿಯೂ ಕೂಡ ಅಡ್ಡಿಯಾಗುತ್ತಿದೆ. ಈ ಜಾಗ ನಮಗೆ ಜಾಗಬೇಕು ಎಂದು ರೈತರು ಅಂತಿದ್ದಾರೆ. ಯಾರೊಬ್ಬರೂ ಕಾಳಜಿ ತೆಗೆದುಕೊಳ್ಳದಿದ್ದರೆ ಹೇಗೆ ಸಮಸ್ಯೆ ಬಗೆಹರಿಯುತ್ತದೆ ಎಂದು ಸರ್ಕಾರವನ್ನ ಪ್ರಶ್ನೆ ಮಾಡಿದರು.

ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಿಕೊಡುವುದಕ್ಕೆ ಆಗಲ್ಲ ಅಂದರೆ ಅಭಿಮಾನ್ ಸ್ಟುಡಿಯೋದಲ್ಲಿಯೇ ಮಾಡಿ ತೊಂದರೆಯಿಲ್ಲ. ನಾನು ಯಾವುದೇ ಒತ್ತಾಯವನ್ನು ಸರ್ಕಾರದ ಮೇಲೆ ಹೇರುವುದಿಲ್ಲ. ಸರ್ಕಾರ ನಿಗದಿಪಡಿಸಿದ ಜಾಗದಲ್ಲೇ ಆಗಲಿ. ಸ್ಮಾರಕದ ವಿಚಾರದಲ್ಲಿ ನಾವು ವಾದ ಮಾಡುವುದಿಲ್ಲ. ಅವರ ಇಚ್ಚೆ ಭಗವಂತನ ಇಚ್ಚೆ ಏನಿದೆಯೋ ಹಾಗೆಯೇ ಆಗಲಿ. ನಿಜವಾದ ಅಭಿಮಾನಿಗಳು ನಮ್ಮ ಜೊತೆ ಇದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷ್ಣು ಸ್ಮಾರಕದ ಕುರಿತು ಉತ್ತಮ ಸ್ಪಂದನೆ ನೀಡುತ್ತಾರೆಂಬ ನಂಬಿಕೆಯಿದೆ ಅಂತ ಅಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಸಿಎಂ ಕುಮಾರಸ್ವಾಮಿ ಕೆಂಡಾಮಂಡಲ -ಅನಿರುದ್ಧ್ ಖಡಕ್ ಉತ್ತರ
ಬೆಂಗಳೂರು: ಪದ ಬಳಕೆ ಮಾಡುವಾಗ ಪದಗಳ ಗಾಂಭೀರ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ಕಲಾವಿದರು ಮಾಡಿದ ಕೆಲಸಕ್ಕೆ ಸರ್ಕಾರ ಗೌರವ ಕೊಟ್ಟಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ದಿವಂಗತ ವಿಷ್ಣುವರ್ಧನ್ ಅಳಿಯ ನಟ ಅನಿರುದ್ಧ್ ವಿರುದ್ಧ ಕಿಡಿಕಾರಿದ್ದರು. ಈಗ ಸಿಎಂ ಮಾತಿಗೆ ಅನಿರುದ್ಧ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಅನಿರುದ್ಧ, ನನಗೆ ವೈಯಕ್ತಿಕವಾಗಿ ಸಿಎಂ ಕುಮಾರಸ್ವಾಮಿ ಮೇಲೆ ತುಂಬಾ ಆತ್ಮೀಯತೆ ಇದೆ. ಅವರ ಮೇಲೆ, ಅವರ ಕುಟುಂಬದ ಮೇಲೆ ಸಾಕಷ್ಟು ಗೌರವವಿದೆ. ಅಂದು ಅಪ್ಪಾಜಿ ಮೃತಪಟ್ಟಿದ್ದಾಗ ಬಂದು ಎಲ್ಲಿ ಮಾಡಬೇಕು ಎಂದುಕೊಂಡಿದ್ದೀರ ಅಂತ ಕೇಳಿದ್ದರು. ಅದಕ್ಕೆ ನಾನು ನೇರವಾಗಿ ಬನಶಂಕರಿನಲ್ಲೇ ಅಂತ್ಯಸಂಸ್ಕಾರ ಮಾಡಬೇಕು ಎಂದು ಕೊಂಡಿದ್ದೇನೆ ಅಂತ ಹೇಳಿದ್ದೆ. ವಿಷ್ಣುವರ್ಧನ್ ದೊಡ್ಡ ಕಲಾವಿದರು, ಅವರಿಗಾಗಿ ವಿಶೇಷ ಜಾಗ ಆಗಬೇಕು ಅಂತ ಅಪ್ಪಾಜಿ ಅವರು ಅಂದರೆ ದೇವೇಗೌಡರು ಹೇಳಿದ್ದಾರೆ ಅಂತ ತಿಳಿಸಿದ್ದರೆಂದು ಅನಿರುದ್ಧ್ ಹೇಳಿದರು.

ಅದರಂತಯೇ ಸ್ಮಾರಕಕ್ಕೆ 2004ರಲ್ಲಿ ಕೇಸ್ ಹಾಕಿರುವ ಜಾಗವನ್ನು ಕೊಟ್ಟಿದ್ದರು. ಆದರೆ ಇಂದಿಗೂ ಸ್ಮಾರಕ ಆಗಿಲ್ಲ. ಒಂಬತ್ತು ವರ್ಷದ ತಾಳ್ಮೆ, ಶ್ರಮ ಇದೆ. ನಾಲ್ಕು ಗಂಟೆಗಳು ನಾನು ಅಮ್ಮ ಕಾದು ಕುಳಿತ್ತಿದ್ದವು. ಆದರೆ ಬ್ಯುಸಿ ಎಂದು ಪ್ರತಿಕ್ರಿಯಿಸಿಲಿಲ್ಲ. ಮಾರನೇ ದಿನ, ಒಂದುವಾರ, 10 ದಿನಗಳ ಬಳಿಕ ಕರೆಸಿ ಮಾತನಾಡಿದ್ದರು. ಆದರೂ ಇದುವರೆಗೂ ಮಾತನಾಡಿಲ್ಲ ಎಂದು ಬೇಸರಿಂದ ಅನಿರುದ್ಧ ಹೇಳಿದ್ದಾರೆ.
ನಾವು 5 ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದೇವೆ. ತುಂಬಾ ಕಚೇರಿ, ಅಧಿಕಾರಿಗಳ ಮನೆಗೆ ಅಲೆದಾಡಿದ್ದೇವೆ. ಏನು ಪ್ರಯೋಜವಾಗಿಲ್ಲ. ಅವರೇ ಸ್ಮಾರಕ ಮಾಡಬೇಕು ಎಂದು ಹೇಳಿ 11 ಕೋಟಿ ರೂ. ಹಣವನ್ನು ನೀಡಿದ್ದರು. ಇದುವರೆಗೂ ಸ್ಮಾರಕ ಆಗಿಲ್ಲ. ಸರ್ಕಾರ ಕೊಟ್ಟಿರುವ ಮಾತನ್ನ ನಡೆಸಿಕೊಡಲಿ ಇದನ್ನು ನಾನು ಕೈ ಮುಗಿದು, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ ಎಂದು ಮನವಿ ಮಾಡಿಕೊಂಡರು.

ಅಭಿಮಾನಿಗಳು ಪ್ರತಿದಿನ ಕರೆ ಮಾಡಿ ಸರ್ ಪ್ರತಿಭಟನೆ ಮಾಡೋಣ, ಸ್ಮಾರಕ ಇನ್ನು ಮಾಡಿಲ್ಲ ಅಂತ ಹೇಳುತ್ತಾರೆ. ನಾನು ಬೇಡ ಅಪ್ಪಾಜಿ ಅವರು ಶಾಂತಿಯಿಂದ ಇರಬೇಕೆಂದು ಇಷ್ಟ ಪಡುತ್ತಾರೆ. ಆದ್ದರಿಂದ ನಾವು ಗಲಾಟೆ ಮಾಡುವುದು ಬೇಡ ಎಂದು ಸಮಾಧಾನ ಮಾಡುತ್ತಿದ್ದೇನೆ. ಮನಷ್ಯನಿಗೆ ತಾಳ್ಮೆ ಅಂತ ಇರುತ್ತೆ. ತಾಳ್ಮೆ ಕಳೆದುಕೊಂಡಾಗ ಈ ರೀತಿಯಾಗಿ ಮಾತನಾಡುತ್ತಾನೆ. ನಾನು ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿಲ್ಲ. ಸರ್ಕಾರದ ಬಗ್ಗೆ ಮಾತನಾಡಿದ್ದೇವೆ. ಕ್ಷಮಿಸಿ ಅದನ್ನು ಅವರು ತಪ್ಪಾಗಿ ತಿಳಿದುಕೊಂಡಿದ್ದಾರೆ ಅಂತ ಅನಿರುದ್ಧ್ ಖಡಕ್ ಉತ್ತರ ಕೊಟ್ಟಿದ್ದಾರೆ.ನಾನು ಮಾನ, ಮರ್ಯಾದೇ, ಗೌರವ ಈ ಮಾತನ್ನು ಸರ್ಕಾರದ ಬಗ್ಗೆ ಹೇಳಿದ್ದೇನೆ. ಕುಮಾರಸ್ವಾಮಿ ಬಗ್ಗೆ ಹೇಳಿಲ್ಲ. ಸ್ಮಾರಕದ ಮುಂದಾಳತ್ವವನ್ನು ಸಿಎಂ ವಹಿಸಿಕೊಳ್ಳಬೇಕು. ನಾವು ಅದರ ಬಗ್ಗೆ ಗಮನ ಕೊಡುತ್ತಿದ್ದೇವೆ ಎಂದು ಸುಮ್ಮನೆ ಕುಳಿತಿಕೊಂಡರೆ ಕೆಲಸ ಆಗದು. ರೈತರನ್ನು, ನಮ್ಮನ್ನು ಕರೆಸಿ ಮಾತನಾಡಬೇಕು. ನಾವು ಹೋದಾಗ ಸರ್ಕಾರ, ಸರ್ಕಾರಿ ಅಧಿಕಾರಿಗಳು ತುಂಬಾ ಗೌರವ, ಭರವಸೆ ಕೊಡುತ್ತಾರೆ. ಆದರೆ ಸ್ಮಾರಕದ ಕೆಲಸ ಏನು ನಡೆಯುತ್ತಿಲ್ಲ ಎಂದು ಗರಂ ಆಗಿ ಮಾತನಾಡಿದ್ದಾರೆ.

ಬ್ರಹ್ಮ, ವಿಷ್ಣು, ಮಹೇಶ್ವರ ಮೂವರು ಒಂದೇ ಕಡೆ ಇರುವುದಿಲ್ಲ. ಸರ್ಕಾರ ಸ್ಮಾರಕ ಮಾಡಿದರು ನಾನು ಖಂಡಿತ ಒಪ್ಪಲ್ಲ. ಸುಮಾರು 5 ಜಾಗವನ್ನು ತೋರಿಸಿದರು. ನಾವು ಏನು ಮಾತನಾಡದೇ ಒಪ್ಪಿಕೊಂಡಿದ್ದೇವು. ಆದರೆ ಸ್ಮಾರಕ ನಿರ್ಮಾಣದ ಕೆಲಸ ಪ್ರಾರಂಭಿಸುವ ಮೊದಲೇ ಏನೋ ಸಮಸ್ಯೆಯಾಗಿ ಕ್ಯಾನ್ಸಲ್ ಆಗುತ್ತಿತ್ತು. ಈಗ ಮೈಸೂರಿನಲ್ಲಿ ತೋರಿಸಿರುವ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡುತ್ತಿದ್ದೇವೆ. ಆದರೆ ಅಲ್ಲಿಗೂ ರೈತರು ಬಂದು ಕೇಸ್ ಹಾಕಿದ್ದಾರೆ. ಆದ್ದರಿಂದ ಕೆಲಸ ನಿಂತು ಹೋಗಿದೆ. ಹೀಗಾಗಿ ಈ ಬಗ್ಗೆ ವಿಚಾರಣೆ ಮಾಡಿ ಬೇಗ ಕೆಲಸ ಮುಂದುವರಿಸುವಂತೆ ಮಾಡಿಕೊಡಿ ಎಂದು ಕಳಕಳಿಯಿಂದ ಅನಿರುದ್ಧ್ ಕೇಳಿಕೊಂಡರು.
ಒಂಬತ್ತು ವರ್ಷಗಳಾದರೂ ಸ್ಮಾರಕ ನಿರ್ಮಾಣವಾಗಿಲ್ಲ. ಅಮ್ಮ ಎಷ್ಟು ದಿನ ಕಣ್ಣೀರು ಹಾಕಿದ್ದಾರೆ ಅಂತ ನನಗೆ ಗೊತ್ತು. ಸರ್ಕಾರ ಒಂದು ಕೆಲಸವನ್ನು ಮಾಡಿಕೊಡುತ್ತೇನೆ ಎಂದು ಗಡುವು ಕೊಟ್ಟಿರುತ್ತದೆ. ಆ ಗಡುವಿನಲ್ಲೇ ಕೆಲಸ ಮಾಡಿಕೊಡಬೇಕು. ವಿಷ್ಣು ಅಭಿಮಾನಿಗಳು ಸಿಂಹಗಳಿದಂತೆ ಅವರನ್ನು ಬಡಿದು ಎಬ್ಬಿಸಬೇಡಿ. ಆದ್ದರಿಂದ ಮುಂದಿನ ತಿಂಗಳ ಡಿಸೆಂಬರ್ 30ರವಗೆ ವಿಷ್ಣು ಸ್ಮಾರಕದ ಕೆಲಸ ಶುರುವಾಗಬೇಕು ಎಂದು ನಾನು ಪ್ರೀತಿಯಿಂದ ಗಡುವು ಕೊಡುತ್ತಿದ್ದೇನೆ ಎಂದು ಅನಿರುದ್ಧ್ ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv
-

ಈ ವೀರಗಲ್ಲು ಈಗ ದಾಸರಹಳ್ಳಿಯ ಜನರಿಗೆ ಪವರ್ ಫುಲ್ ದೇವರು
ಬೆಂಗಳೂರು: ಅದೊಂದು ನಿಗೂಢ ವೀರಗಲ್ಲು. ಆ ವೀರಗಲ್ಲನ್ನು ಯಾರೂ ಅಲುಗಾಡಿಸುವ ಹಾಗಿಲ್ಲ. ಇದನ್ನು ಸ್ಥಳಾಂತರ ಮಾಡೋದಕ್ಕೆ ಹೋದರೆ ಅನಾಹುತ ಫಿಕ್ಸ್ ಅಂತ ಇಲ್ಲಿನ ಜನ ನಂಬಿದ್ದಾರೆ.
ಎರಡು ಬಿಳಿಯ ಕಲ್ಲು, ಕಲ್ಲಿನಲ್ಲಿ ಅದೇನೋ ಕೆತ್ತನೆ. ದಾಸರಹಳ್ಳಿಯ ಜಮೀನಿನಲ್ಲಿ ಸಾಕಷ್ಟು ವರ್ಷದ ಹಿಂದೆ ಸಿಕ್ಕ ರಾಜರ ಕಾಲದ ವೀರಗಲ್ಲು ಇದು. ಬರೋಬ್ಬರಿ 700ರ ಇಸವಿಯಲ್ಲಿದ್ದ ಅರಸಿಂಗ ಎನ್ನುವ ಸೈನಿಕನ ಸ್ಮಾರಕವಿದೆ. ಆದರೆ ಆ ಸ್ಮಾರಕವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡೋದಕ್ಕೆ ಸಾಧ್ಯವೇ ಇಲ್ವಂತೆ. ಈ ಹಿಂದೆ ಸ್ಥಳಾಂತರ ಮಾಡೋದಕ್ಕೆ ಮುಂದಾದಾಗ ಸಾಲು ಸಾಲು ಅನಾಹುತ ಸಂಭವಿಸಿದೆಯಂತೆ. ಹೀಗಾಗಿ ಆ ವೀರಗಲ್ಲಿನ ಬಗ್ಗೆ ಜನರಿಗೆ ಭಯವುಂಟಾಗಿದೆ.

ಇನ್ನು ಆ ಕಲ್ಲಿನ ಮೇಲೆ ಕನ್ನಡ ಲಿಪಿಯಲ್ಲಿ ಆ ಶಾಸನ ಉಳಿಸಿಕೊಂಡು ಹೋದವರಿಗೆ ಒಳ್ಳೆಯದಾಗುತ್ತೆ, ಹಾಳು ಮಾಡಿದವರಿಗೆ ಶಾಪ ಸಿಗುತ್ತೆ ಎಂದು ಕೆತ್ತಲಾಗಿದೆ. ಅದ್ದರಿಂದ ಈ ವೀರಗಲ್ಲನ್ನು ಸೈಟ್ ನಲ್ಲಿಯೇ ಬಿಟ್ಟು ಪೂಜೆ ಮಾಡೋದಕ್ಕೆ ಶುರು ಮಾಡಿದ್ದಾರೆ. ವಿಶೇಷ ಅಂದರೆ ಈ ವೀರಗಲ್ಲಿನ ಮುಂದೆ ಏನು ಬೇಡಿದರೂ ಇಷ್ಟಾರ್ಥ ನೇರವೇರುತ್ತೆ ಎನ್ನುವ ನಂಬಿಕೆ ಇಲ್ಲಿನ ಸ್ಥಳೀಯ ಜನರದ್ದು.
ಅಷ್ಟಕ್ಕೂ ಆ ವೀರಗಲ್ಲು ಗೋವನ್ನು ಕದಿಯಲು ಬಂದಾಗ ರಕ್ಷಣೆ ಮಾಡೋದಕ್ಕೆ ಹೋಗಿ ಸತ್ತ ಯುವಕನೊಬ್ಬನದಂತೆ. ಅವನ ನೆನಪಿಗೆ ಆ ವೀರಗಲ್ಲು ನಿರ್ಮಾಣ ಮಾಡಲಾಗಿದೆ. ಆದರೆ ಇದು ಬೇರೆ ಶಾಸನದಂತೆ ಅಲ್ಲ. ಯಾವುದೋ ಅತೀತ ಶಕ್ತಿ ಇದರಲ್ಲಿದೆ ಎನ್ನುವ ನಂಬಿಕೆ ಊರ ಜನರದು. ಆದರೆ ಇತಿಹಾಸ ತಜ್ಞರು ಇದೆಲ್ಲ ಮೂಢನಂಬಿಕೆ, ಇದು ಒಂದು ವ್ಯಕ್ತಿಯ ಸ್ಮಾರಕದ ಶಾಸನವಷ್ಟೇ ಎಂದು ಹೇಳುತ್ತಾರೆ.







