Tag: Memorial

  • ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ? : ನಟ ಚೇತನ್ ಪ್ರಶ್ನೆ

    ಸಿನಿಮಾ ಸ್ಟಾರ್ ಗಳಿಗೇಕೆ ಸ್ಮಾರಕ? : ನಟ ಚೇತನ್ ಪ್ರಶ್ನೆ

    ಲನಚಿತ್ರ ತಾರೆಯರಿಗೆ ಸಾರ್ವಜನಿಕ ಜಾಗ, ಹಣ ಮತ್ತು ಸಂಪನ್ಮೂಲಗಳನ್ನು ಬಳಸಿಕೊಂಡು ಸ್ಮಾರಕ (memorial) ನಿರ್ಮಾಣ ಮಾಡಬಾರದು ಎಂದು ನಟ (Actor), ಸಾಮಾಜಿಕ ಹೋರಾಟಗಾರ ಚೇತನ್ (Chetan) ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.  ಹಲವಾರು ಕನ್ನಡಿಗರಂತೆಯೇ ನಟ, ನಟಿಯರು ಕೂಡ ಕೆಲಸ ಮಾಡಿ ಸಂಪಾದಿಸುತ್ತಾರೆ. ಈಗಾಗಲೇ ನಮ್ಮ ಸಮಾಜದಲ್ಲಿ ಅವರಿಗೆ ಅನಗತ್ಯ ಪ್ರಚಾರ ನೀಡಿದ್ದೇವೆ. ಅವರ ಸಿನಿಮಾ ಯಶಸ್ಸಿಗೆ ಅನಗತ್ಯವಾಗಿಯೇ ಗಮನ ಸೆಳೆಯುತ್ತಾರೆ. ಹಾಗಾಗಿ ಸ್ಮಾರಕಗಳನ್ನು ಕಟ್ಟದಂತೆ ಅವರು ಮನವಿ ಮಾಡಿದ್ದಾರೆ.

    Actor chetan (1)

    ನಾಡಿಗೆ ಬೇಕಾಗಿದ್ದು ಸ್ಟಾರ್ ಗಳ ಸ್ಮಾರಕಗಳ ಬದಲು ಕರ್ನಾಟಕ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವಂತಹ ವಸ್ತು ಸಂಗ್ರಹಾಲಯಗಳು. ನಮ್ಮ ನೆಲ ಸ್ಮಾರಕಗಳಿಗಿಂತ ವಸ್ತು ಸಂಗ್ರಹಾಲಯಗಳಿಗೆ ಬಳಕೆಯಾಗಲಿ ಎಂದು ನಟ ಚೇತನ್ ಆಗ್ರಹಿಸಿದ್ದಾರೆ. ನಿನ್ನೆಯಷ್ಟೇ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆ ಆಗಿದೆ. ಈ ಬೆನ್ನಲ್ಲೇ ಚೇತನ್ ಇಂತಹ ಮಾತುಗಳನ್ನು ಆಡಿದ್ದಾರೆ. ಇವರ ಮಾತು ಯಾವ ಸ್ವರೂಪ ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕು. ಇದನ್ನೂ ಓದಿ: ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ಸಿನಿಮಾ ರಂಗದ ವಿಚಾರವಾಗಿ ಚೇತನ್ ಈ ಹಿಂದೆಯೇ ಅನೇಕ ಮಾತುಗಳನ್ನು ಆಡಿದ್ದಾರೆ. ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಹೋರಾಟವನ್ನೇ ಅವರು ಕೈಗೆತ್ತಿಕೊಂಡಿದ್ದರು. ನಟ ನಟಿಯರ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ್ದರು. ಕಾರ್ಮಿಕರ ಕಷ್ಟಗಳ ಕುರಿತು ಮಾತನಾಡಿದ್ದರು. ಇದೀಗ ಸ್ಮಾರಕಗಳ ಬಗ್ಗೆ ಚೇತನ್ ಮಾತನಾಡಿದ್ದಾರೆ. ಜನರ ಹಣವನ್ನು ಈ ರೀತಿಯಾಗಿ ದುಂದುವೆಚ್ಚ ಮಾಡಬೇಡಿ ಎಂದು ಅವರು ಸರಕಾರಕ್ಕೆ ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಭಿಮಾನ ಸ್ಟುಡಿಯೋದ ವಿಷ್ಣುವರ್ಧನ್ ಪುಣ್ಯಭೂಮಿ ಬಿಟ್ಟು ಕೊಡುವುದಿಲ್ಲ : ನಟ ಅನಿರುದ್ಧ

    ಅಭಿಮಾನ ಸ್ಟುಡಿಯೋದ ವಿಷ್ಣುವರ್ಧನ್ ಪುಣ್ಯಭೂಮಿ ಬಿಟ್ಟು ಕೊಡುವುದಿಲ್ಲ : ನಟ ಅನಿರುದ್ಧ

    ನಿನ್ನೆಯಷ್ಟೇ ಮೈಸೂರಿನಲ್ಲಿ (Mysore) ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಲೋಕಾರ್ಪಣೆ ಆಗಿದೆ. ಅದ್ಧೂರಿಯಾಗಿ ನಡೆದ ಈ ಸಮಾರಂಭದ ನಂತರ ಬೆಂಗಳೂರಿನ ಅಭಿಮಾನ (Abhimana Studio) ಸ್ಟುಡಿಯೋದಲ್ಲಿರುವ ಪುಣ್ಯಭೂಮಿಯ ಕುರಿತಾಗಿ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಕುರಿತು ವಿಷ್ಣುವರ್ಧನ್ ಅಳಿಯ ಅನಿರುದ್ಧ (Aniruddha) ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ಅಭಿಮಾನ ಸ್ಟುಡಿಯೋದಲ್ಲಿರುವ ಪುಣ್ಯಭೂಮಿಯನ್ನು ಬಿಟ್ಟು ಕೊಡುವ ಮಾತೇ ಇಲ್ಲ ಎಂದು ಅವರು ಹೇಳಿದ್ದಾರೆ.

    ವಿಷ್ಣುವರ್ಧನ್ ಅವರ ಕುಟುಂಬದವರು ಒಪ್ಪಿದರೆ ಅಭಿಮಾನ ಸ್ಟುಡಿಯೋದಲ್ಲಿರುವ ಸಮಾಧಿಯನ್ನು ತೆರವು ಮಾಡಬಹುದು ಎಂದು ಕೋರ್ಟ್ ಹೇಳಿದೆ ಅನ್ನುವ ವಿಚಾರವನ್ನು ನಾವೂ ಬೇರೆಯವರಿಂದ ಕೇಳಿ ತಿಳಿದುಕೊಂಡಿದ್ದೇವೆ. ಕೋರ್ಟ್ ಆಗಲಿ, ವಕೀಲರಾಗಲಿ ಅಥವಾ ಅಭಿಮಾನ ಸ್ಟುಡಿಯೋಗೆ ಸಂಬಂಧಪಟ್ಟವರಾಗಲಿ ಯಾರೂ ನಮಗೆ ಈ ವಿಷಯ ತಿಳಿಸಿಲ್ಲ ಮತ್ತು ಚರ್ಚೆ ಕೂಡ ಮಾಡಿಲ್ಲ. ಆದರೆ, ಅಪ್ಪಾಜಿ ಅವರ ಸಮಾಧಿ ಅಲ್ಲಿಯೇ ಇರಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ವಿಷಯದಲ್ಲಿ ನಾನು ಕೂಡ ಅಭಿಮಾನಿಗಳ ಪರವಾಗಿಯೇ ನಿಲ್ಲುತ್ತೇನೆ ಎಂದು ಅನಿರುದ್ಧ ಮಾತನಾಡಿದರು. ಇದನ್ನೂ ಓದಿ: ನಟ ನಂದಮೂರಿ ತಾರಕರತ್ನ ಸ್ಥಿತಿ ಗಂಭೀರ : ಮಾಜಿ ಸಿಎಂ ಚಂದ್ರಬಾಬು ನಾಯ್ಡು ಭೇಟಿ

    ಫೆಬ್ರವರಿ 3ಕ್ಕೆ ಸಮಾಧಿ ಕುರಿತಾದ ಕೇಸ್ ಕೋರ್ಟ್ ಮುಂದೆ ಬರಲಿದ್ದು, ಅಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತಿದೆ ಎನ್ನುವ ಸುದ್ದಿ ದಟ್ಟವಾಗಿದೆ. ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಈ ಹಿಂದೆ ವಿಡಿಯೋವೊಂದನ್ನು ಪೋಸ್ಟ್ ಮಾಡಿ, ಬಾಲಣ್ಣ ಅವರ ಕುಟುಂಬದ ಕಾರ್ತಿಕ್ ಎನ್ನುವವರು ಕೋರ್ಟ್ ಮುಂದೆ ಸಮಾಧಿಯನ್ನು ತೆರವುಗೊಳಿಸುವ ಕುರಿತು ಕೇಳಿಕೊಂಡಿದ್ದಾರೆ. ಫೆಬ್ರವರಿ 3 ರಂದು ಅಂತಿಮ ನಿರ್ಧಾರ ಪ್ರಕಟವಾಗಲಿದೆ ಎಂದು ಹೇಳಿದ್ದರು. ಯಾವುದೇ ಕಾರಣಕ್ಕೂ ಸಮಾಧಿ ತೆರವು ಮಾಡಲು ಬಿಡುವುದಿಲ್ಲ ಎನ್ನುವ ಹೇಳಿಕೆಯನ್ನೂ ಅವರು ನೀಡಿದ್ದರು.

    ಇದೇ ಫೆಬ್ರವರಿ 3ಕ್ಕೆ ವಿಷ್ಣುವರ್ಧನ್ ಸಮಾಧಿ ಅಭಿಮಾನ ಸ್ಟುಡಿಯೋದಲ್ಲಿ ಇರಬೇಕಾ ಅಥವಾ ತೆರವುಗೊಳಿಸಬೇಕಾ ಎನ್ನುವ ತೀರ್ಪು ಹೊರಬರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕೂ ಮುನ್ನ ಸಮಾಧಿಯನ್ನು ಬೆಂಗಳೂರಿನಲ್ಲೇ ಉಳಿಸಿಕೊಳ್ಳುವ ಎಲ್ಲ ಪ್ರಯತ್ನವನ್ನೂ ವಿಷ್ಣುವರ್ಧನ್ ಅಭಿಮಾನಿಗಳು ಮಾಡುತ್ತಿದ್ದಾರೆ. ಅದಕ್ಕೆ ಅನಿರುದ್ಧ ಕೂಡ ಸಾಥ್ ನೀಡುವುದಾಗಿ ಮೈಸೂರಿನಲ್ಲಿ ನಿನ್ನೆ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣು ಸ್ಮಾರಕದ ಬಗ್ಗೆ ಸಂಪೂರ್ಣ ಮಾಹಿತಿ

    ವಿಷ್ಣು ಸ್ಮಾರಕದ ಬಗ್ಗೆ ಸಂಪೂರ್ಣ ಮಾಹಿತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ವಿಷ್ಣುವರ್ಧನ್ ಸ್ಮಾರಕ ಪ್ರವಾಸಿ ತಾಣವಾಗಲಿ : ಸಿಎಂ ಬೊಮ್ಮಾಯಿ

    ಡಾ.ವಿಷ್ಣುವರ್ಧನ್ ಸ್ಮಾರಕ ಪ್ರವಾಸಿ ತಾಣವಾಗಲಿ : ಸಿಎಂ ಬೊಮ್ಮಾಯಿ

    ಮೈಸೂರಿನಲ್ಲಿ ಇಂದು ನಟ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕವನ್ನು (Memorial) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸ್ಮಾರಕವು ಪ್ರವಾಸಿ ತಾಣವಾಗಬೇಕು. ಈ ನಿಟ್ಟಿನಲ್ಲಿ ಸರಕಾರವು ವಿಷ್ಣುವರ್ಧನ್ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು. ಈ ನಾಡಿಗೆ ವಿಷ್ಣುವರ್ಧನ್ ನೀಡಿದ ಕೊಡುಗೆಯನ್ನು ಸ್ಮರಿಸಿದ ಅವರು, ನಾನೂ ಕೂಡ ವಿಷ್ಣುವರ್ಧನ್ ಅವರ ಅಭಿಮಾನಿ ಎಂದು ಘೋಷಣೆ ಮಾಡಿದರು.

    ಬೊಮ್ಮಾಯಿ ಅವರು ಭಾಷಣ ಮಾಡುವ ವೇಳೆ ವಿಷ್ಣು ಅಭಿಮಾನಿಗಳು ಪ್ಲೇ ಕಾರ್ಡ್ ಹಿಡಿದುಕೊಂಡು ಮೌನವಾಗಿ ‘ಮಾನ್ಯ ಮುಖ್ಯಮಂತ್ರಿಗಳೇ.. ಡಾ.ವಿಷ್ಣುವರ್ಧನ್ ಅವರು ಕರ್ನಾಟಕ ರತ್ನ ಅಲ್ಲವೆ?’ ಎನ್ನುವ ಬೋರ್ಡ್ ಹಿಡಿದುಕೊಂಡು ನಿಂತಿದ್ದರು. ಅದನ್ನು ಕಂಡ ಮುಖ್ಯಮಂತ್ರಿಗಳು, ‘ನಿಮ್ಮೆಲ್ಲರ ಭಾವನೆಗಳಿಗೆ ನಮ್ಮ ಸರಕಾರ ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತದೆ’ ಎನ್ನುವ ಭರವಸೆಯನ್ನೂ ನೀಡಿದರು. ಇದನ್ನೂ ಓದಿ: ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ಮುಂದುವರೆದು ಮಾತನಾಡುತ್ತಾ, ‘ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರೋ ಸಾಧನೆ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಹೊಸ ನಾಯಕ, ಅವ್ರ ಚಿತ್ರ ಬಂದಿತ್ತು. ಮೊದಲ ಸಲಾ ನೋಡಿದವ್ರು ಖಂಡಿತವಾಗಿ ವಿಷ್ಣುವರ್ಧನ್ ಫ್ಯಾನ್ ಆಗ್ತಾ ಇದ್ದರು. ನಾಗರಹಾವು ಚಿತ್ರದ ಮೂಲಕ ನಾಡಿನ ಜನಮನ ಗೆದ್ದವರು ಡಾ. ವಿಷ್ಣುವರ್ಧನ್. ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿ ಸಾಹಸ ಸಿಂಹನಾಗಿ ಕರ್ನಾಟಕದಲ್ಲಿ ಮರೆದವರು’ ಎಂದು ಕೊಂಡಾಡಿದರು ಬಸವರಾಜ ಬೊಮ್ಮಾಯಿ.

    ಈ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ, ಮಗಳು ಕೀರ್ತಿ ಸೇರಿದಂತೆ ಲಕ್ಷಾಂತರ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಮೈಸೂರಿಗೆ ಹರಿದು ಬಂದಿದ್ದರು. ಅನ್ನದಾನ, ರಕ್ತದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಸ್ಥಳದಲ್ಲೇ ಆಯೋಜನೆ ಮಾಡಲಾಗಿತ್ತು.

    2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು.  5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ.

    ಸ್ಮಾರಕ ಕಟ್ಟದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಂಭಾಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣು ಸ್ಮಾರಕ ಲೋಕಾರ್ಪಣೆ : ಶುಭ ಕೋರಿದ ಕಿಚ್ಚ, ಸುಮಲತಾ ಅಂಬರೀಶ್

    ವಿಷ್ಣು ಸ್ಮಾರಕ ಲೋಕಾರ್ಪಣೆ : ಶುಭ ಕೋರಿದ ಕಿಚ್ಚ, ಸುಮಲತಾ ಅಂಬರೀಶ್

    ಇಂದು ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ ಲೋಕಾರ್ಪಣೆ (Memorial, Inauguration) ಆಗುತ್ತಿದೆ. ಸತತ 13 ವರ್ಷಗಳ ಹೋರಾಟದ ಫಲವಾಗಿ ಇಂದು ಉದ್ಘಾಟನೆ ಆಗುತ್ತಿರುವ ಸ್ಮಾರಕದ ಕಾರ್ಯಕ್ರಮಕ್ಕೆ ಕನ್ನಡ ಸಿನಿಮಾ ರಂಗದ ಕೆಲವೇ ಕೆಲವು ಗಣ್ಯರು ಶುಭ ಕೋರಿದ್ದಾರೆ. ಉಳಿದವರ ದಿವ್ಯ ಮೌನ ತಾಳಿದ್ದಾರೆ. ಸಂಸದೆ ಹಾಗೂ ವಿಷ್ಣು ಕುಟುಂಬಕ್ಕೆ ತೀರಾ ಹತ್ತಿರವಿರುವ ಸುಮಲತಾ ಅಂಬರೀಶ್ (Sumalatha) ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಶುಭಕೋರಿದ್ದಾರೆ. ಸಂಸತ್ ಅಧಿವೇಶನದ ಸಲುವಾಗಿ ದೆಹಲಿಯಲ್ಲಿರುವ ಅವರು ಶೀಘ್ರದಲ್ಲೇ ಸ್ಮಾರಕಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

    ಕಿಚ್ಚ ಸುದೀಪ್ (Sudeep) ಕೂಡ ಸೋಷಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದು, ‘ಕಾಯುತ್ತಿದ್ದರು ಕರುನಾಡ ಜನತೆ ಇಂಥದ್ದೊಂದು ಅದ್ಭುತ ಕ್ಷಣಕ್ಕೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ. ಒಳ್ಳೆಯದೇ ಆಗುತ್ತಿದೆ. ಯಜಮಾನ್ರ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಶುಭ ಕೋರುತ್ತೇನೆ’ ಎಂದು ಬರೆದುಕೊಂಡಿದ್ದಾರೆ. ಮೈಸೂರಿನ ಹೆಚ್.ಡಿ. ಕೋಟೆ ರಸ್ತೆಯ, ಉದ್ಬೂರು ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾದ  ಡಾ.ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನೇನು ಕೆಲವೇ ಕ್ಷಣಗಳಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು.  5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ.

    ಸ್ಮಾರಕ ಕಟ್ಟದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.

    ಇಂಥದ್ದೊಂದು ಸ್ಮಾರಕಕ್ಕಾಗಿ ವಿಷ್ಣುವರ್ಧನ್ ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಸತತ ಹೋರಾಟ ಮಾಡುತ್ತಲೇ ಬಂದರು. ವಿಷ್ಣುವರ್ಧನ್ ಅವರ ಸಮಾಧಿಯ ಜಾಗದಲ್ಲೇ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಸ್ಮಾರಕ ನಿರ್ಮಾಣಕ್ಕಾಗಿ 2010-11ರ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ, ಅಭಿಮಾನ ಸ್ಟುಡಿಯೋ ಜಾಗ ಕೋರ್ಟ್ ನಲ್ಲಿ ಇರುವ ಕಾರಣದಿಂದಾಗಿ ಅಲ್ಲಿ ಸಾಧ್ಯವಾಗಲಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Special -ಯಜಮಾನನ ಸ್ಮಾರಕದಲ್ಲಿ ತಲೆಯೆತ್ತಿ ನಿಂತ ಡಾ.ವಿಷ್ಣು ಪ್ರತಿಮೆ : ನಾಳೆ ಲೋಕಾರ್ಪಣೆ

    Special -ಯಜಮಾನನ ಸ್ಮಾರಕದಲ್ಲಿ ತಲೆಯೆತ್ತಿ ನಿಂತ ಡಾ.ವಿಷ್ಣು ಪ್ರತಿಮೆ : ನಾಳೆ ಲೋಕಾರ್ಪಣೆ

    ಮೈಸೂರಿನ (Mysore) ಎಚ್.ಡಿ. ಕೋಟೆ ರಸ್ತೆಯ, ಉದ್ಭರ್ ಗೇಟ್ ಬಳಿ ಇರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾದ ಡಾ.ವಿಷ್ಣುವರ್ಧನ್ (Vishnuvardhan) ಸ್ಮಾರಕ (Memorial) ಉದ್ಘಾಟನೆಯನ್ನು (Inauguration) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಅವರು ನಾಳೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಲೋಕಾರ್ಪಣೆ ಆಗಲಿರುವ ಸ್ಮಾರಕದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ಕೂಡ ಇದ್ದು, ಅದರೊಂದಿಗೆ ವಿಷ್ಣು ಪತ್ನಿ ಭಾರತಿ ಅವರು ಫೋಟೋಗೆ ಪೋಸ್ ನೀಡಿದ್ದಾರೆ.

    2020ರ ಸೆ.15ರಂದು ಸ್ಮಾರಕ ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವರ್ಚುವೆಲ್ ಆಗಿ ಭೂಮಿ ಪೂಜೆಯನ್ನು ನೆರವೇರಿಸಿದ್ದರು. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣವಾಗಿದ್ದು, ಪೊಲೀಸ್ ವಸತಿ ನಿಗಮವು ಇದರ ಉಸ್ತುವಾರಿ ವಹಿಸಿಕೊಂಡಿತ್ತು.  5 ಎಕರೆ ಜಾಗದಲ್ಲಿ ಈ ಸ್ಮಾರಕ ನಿರ್ಮಾಣವಾಗಿದೆ. ಒಟ್ಟು 27 ಸಾವಿರ ಚದರಡಿಯಲ್ಲಿ ಸ್ಮಾರಕದ ಕಟ್ಟಡ ತಲೆಯೆತ್ತಿದೆ. ಇದನ್ನೂ ಓದಿ: ಪೇಪರ್ ಡ್ರೆಸ್ ಧರಿಸಿ ಮಿಂಚಿದ ʻಬಿಗ್‌ ಬಾಸ್‌ʼ ಖ್ಯಾತಿಯ ನಿವೇದಿತಾ ಗೌಡ

    ಸ್ಮಾರಕ ಕಟ್ಟಡದಲ್ಲಿ ಎರಡು ಎಕರೆಯಲ್ಲಿ ತಳಮಹಡಿ, ನೆಲಮಹಡಿ ಹಾಗೂ ವಿಷ್ಣುವರ್ಧನ್ ನಿಂತಿರುವ ಭಂಗಿಯ ಪ್ರತಿಮೆ, ಸಭಾಂಗಣ, ಕಲಾವಿದರ ಕೊಠಡಿ, ತರಗತಿ ಕೊಠಡಿಗಳು ಹೀಗೆ ನಾನಾ ಕಟ್ಟಡಗಳನ್ನು ಅದು ಒಳಗೊಂಡಿದೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿರುವ ವಿಷ್ಣು ಪ್ರತಿಮೆಯು ಕೂಡ ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತಿದೆ. ಅಲ್ಲದೇ, ವಿಷ್ಣುವರ್ಧನ್ ಅವರ ಚಿತಾಭಸ್ಮವನ್ನು ಇಲ್ಲಿಯೇ ತಂದಿಡಲಾಗುತ್ತದೆ.

    ಇಂಥದ್ದೊಂದು ಸ್ಮಾರಕಕ್ಕಾಗಿ ವಿಷ್ಣುವರ್ಧನ್ ಕುಟುಂಬ ಮತ್ತು ವಿಷ್ಣು ಅಭಿಮಾನಿಗಳು ಸತತ ಹೋರಾಟ ಮಾಡುತ್ತಲೇ ಬಂದರು. ವಿಷ್ಣುವರ್ಧನ್ ಅವರ ಸಮಾಧಿಯ ಜಾಗದಲ್ಲೇ ಸ್ಮಾರಕವನ್ನು ನಿರ್ಮಾಣ ಮಾಡಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಸ್ಮಾರಕ ನಿರ್ಮಾಣಕ್ಕಾಗಿ 2010-11ರ ಬಜೆಟ್ ನಲ್ಲಿ 11 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿತ್ತು. ಆದರೆ, ಅಭಿಮಾನ ಸ್ಟುಡಿಯೋ ಜಾಗ ಕೋರ್ಟ್ ನಲ್ಲಿ ಇರುವ ಕಾರಣದಿಂದಾಗಿ ಅಲ್ಲಿ ಸಾಧ್ಯವಾಗಲಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ವಿಷ್ಣುವರ್ಧನ್ ಪರಭಾಷಾ ನಟರಾ?: ಫಿಲ್ಮ್ ಚೇಂಬರ್ ವಿರುದ್ಧ ವೀರಕಪುತ್ರ ಶ್ರೀನಿವಾಸ್ ಆಕ್ರೋಶ

    ದಿಮೂರು ವರ್ಷಗಳ ಹೋರಾಟದ ಫಲವಾಗಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ತಲೆಯೆತ್ತಿದೆ. ಈ ಸಂಭ್ರಮವನ್ನು ಎಲ್ಲರಿಗಿಂತ ಮೊದಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಅದರ ಇತರ ಅಂಗಸಂಸ್ಥೆಗಳು ಆಚರಿಸಬೇಕಿತ್ತು. ಆದರೆ, ತಮಗೆ ಸಂಬಂಧವೇ ಇಲ್ಲದಂತೆ ಅವುಗಳು ಮೌನವಹಿಸಿವೆ. ವಿಷ್ಣುವರ್ಧನ್ ಅವರೇನು ಪರಭಾಷಾ ನಟರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರ ವೀರಕಪುತ್ರ ಶ್ರೀನಿವಾಸ್. ಚೇಂಬರ್ ಈ ನಡೆಯನ್ನು ಅವರು ಖಂಡಿಸಿದ್ದಾರೆ.

    ‘ವಿಷ್ಣುವರ್ಧನ್ ಅವರ ವಿಷಯದಲ್ಲಿ ಮೊದಲಿನಿಂದಲೂ ಇಂಥದ್ದೊಂದು ಧೋರಣೆ ನಡೆದುಕೊಂಡು ಬಂದಿದೆ. ಕನ್ನಡ ಸಿನಿಮಾ ರಂಗಕ್ಕೆ ಯಜಮಾನರು ಕೊಟ್ಟ ಕೊಡುಗೆಯನ್ನು ಇವರಿಗೆಲ್ಲ ಯಾವ ರೀತಿಯಲ್ಲಿ ಅರ್ಥ ಮಾಡಿಸಬೇಕು ಎಂದು ಗೊತ್ತಾಗುತ್ತಿಲ್ಲ. ಸ್ಮಾರಕ ಉದ್ಘಾಟನೆಯನ್ನು ಸ್ವತಃ ಚಿತ್ರೋದ್ಯಮವೇ ಸಡಗರದಿಂದ ಮಾಡಬೇಕಿತ್ತು. ವಾಣಿಜ್ಯ ಮಂಡಳಿಯು ಮುಂದೆ ನಿಂತುಕೊಂಡು ಎಲ್ಲರಿಗೂ ಆಹ್ವಾನಿಸಿ, ಮೈಸೂರಿನಲ್ಲಿ ಸೇರುವಂತೆ ಮಾಡಬೇಕಿತ್ತು. ಆದರೆ, ಅದು ಆಗುತ್ತಿಲ್ಲ ಎನ್ನುವುದೇ ಬೇಸರ’ ಎನ್ನುತ್ತಾರೆ ವೀರಕಪುತ್ರ ಶ್ರೀನಿವಾಸ್.

    ಹಾಗಂತ ಅಭಿಮಾನಿಗಳು ಸುಮ್ಮನಿಲ್ಲ ಎನ್ನುವುದನ್ನೂ ಶ್ರೀನಿವಾಸ್ ಹೇಳುತ್ತಾರೆ. ಜನವರಿ 29ರಂದು ನಡೆಯಲಿರುವ ವಿಷ್ಣುವರ್ಧನ್ ಸ್ಮಾರ ಲೋಕಾರ್ಪಣೆಗೆ ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ. ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

    ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

    ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

    ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ಡಾ.ವಿಷ್ಣು ಸ್ಮಾರಕ ಉದ್ಘಾಟನೆಗೆ ಅಭಿಮಾನಿಗಳು ಸಜ್ಜು : 300 ವಾಹನ ಜಾಥಾ, 100 ಕಟೌಟ್, ಸಾವಿರ ದೀಪೋತ್ಸವ

    ನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಲೋಕಾರ್ಪಣೆ ಆಗುತ್ತಿದ್ದು, ಅಭಿಮಾನಿಗಳು ಸರ್ವರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ. ಸರಕಾರವು ಸ್ಮಾರಕ ಉದ್ಘಾಟನೆಯನ್ನು ಕೇವಲ ಸರಕಾರಿ ಕಾರ್ಯಕ್ರಮದಂತೆ ಹಮ್ಮಿಕೊಂಡಿದ್ದರೆ, ವಿಷ್ಣುಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಅಸಂಖ್ಯಾತ ಅಭಿಮಾನಿಗಳು ಜಾತ್ರೆಯ ರೀತಿಯಲ್ಲಿ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಈಗಾಗಲೇ ಸರ್ವ ರೀತಿಯಲ್ಲೂ ಅಭಿಮಾನಿಗಳು ಸ್ಮಾರಕ ಲೋಕಾರ್ಪಣೆಗೆ ರೆಡಿಯಾಗಿದ್ದು, ಬೆಂಗಳೂರು ಮೈಸೂರು ರಸ್ತೆಯಲ್ಲಿ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ರಾಜ್ಯಾದ್ಯಂತ ಗೋಡೆಗಳ ಮೇಲೆ ವಿಷ್ಣುವರ್ಧನ್ ಸ್ಮಾರಕದ  ಪೋಸ್ಟರ್ ಅಂಟಿಸಲಾಗಿದೆ. ಇಷ್ಟೇ ಅಲ್ಲದೇ ಹತ್ತು ಹಲವು ಕಾರ್ಯಕ್ರಮಗಳನ್ನು ಜನವರಿ 29 ರ ಬೆಳಗ್ಗೆಯಿಂದ ವಿಷ್ಣುಸೇನಾ ಸಮಿತಿಯ ಸದಸ್ಯರು ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ: ತೀವ್ರ ಎದೆನೋವಿನಿಂದ ಬಾಲಿವುಡ್ ನಟ ಅನ್ನು ಕಪೂರ್ ಆಸ್ಪತ್ರೆಗೆ ದಾಖಲು

    ವಿಷ್ಣುವರ್ಧನ್ ಅವರ ಸ್ಮಾರಕ ಉದ್ಘಾಟನೆಗೆ ವಾಹನ ಜಾಥಾ, ಕುಂಭಮೇಳ, ದೀಪೋತ್ಸವ, ಜಾನಪದ ಮೇಳ, ಕಟೌಟ್ ಜಾತ್ರೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ. ಜನವರಿ 29ರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಬಳಿ ಅಭಿಮಾನಿಗಳು ಒಟ್ಟಾಗಿ ಸೇರಲಿದ್ದು, ಅಲ್ಲಿಂದ 6.30ಕ್ಕೆ ವಾಹನ ಜಾಥಾ ನಡೆಯಲಿದೆ. ಬೆಂಗಳೂರು ಮೈಸೂರು ಮಧ್ಯೆ ಇರುವಂತಹ ಅಭಿಮಾನಿಗಳು ತಮ್ಮ ಊರಿನ ಹತ್ತಿರದ ಹೈವೆಗಳಲ್ಲಿ ಬಂದು ಜೊತೆಯಾಗಲಿದ್ದಾರೆ ಎಂದಿದ್ದಾರೆ.

    ಒಟ್ಟು ನೂರು ಕಟೌಟ್ ಗಳು ಸ್ಮಾರಕದ ಉದ್ಘಾಟನೆಗಾಗಿಯೇ ಸಿದ್ಧಗೊಂಡಿವೆ. ಅವುಗಳು ಬೆಂಗಳೂರಿನಿಂದ ಮೈಸೂರುವರೆಗೂ ಮತ್ತು ಸ್ಮಾರಕದ ಹತ್ತಿರವೂ ತಲೆಯೆತ್ತಿ ನಿಲ್ಲಲಿವೆ. ಈಗಾಗಲೇ ಹಲವು ಕಡೆ ದುಂಡನೆಯ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಜನವರಿ 29ರಂದು ವಾಹನ ಇಲ್ಲದವರಿಗಾಗಿಯೇ ಒಟ್ಟು ಹತ್ತು ಬಸ್ ಗಳನ್ನು ಆಯೋಜನೆ ಮಾಡಲಾಗಿದೆ. ಐದು ಬಸ್ ಗಳಲ್ಲಿ ಕುಂಭ ಹೊರುವ ಮತ್ತು ದೀಪೋತ್ಸವದಲ್ಲಿ ಭಾಗಿ ಆಗುವ ಹೆಣ್ಣುಮಕ್ಕಳಿಗೆ ಮೀಸಲಿಡಲಾಗಿದೆ. ಇನ್ನೂ ಐದು ಬಸ್ ಗಳು ವಾಹನ ಇಲ್ಲದವರಿಗಾಗಿ ಕಾದಿರುತ್ತವೆ.

    ಎಲ್ಲರೂ ಮೈಸೂರಿನಲ್ಲಿ ಒಟ್ಟಾಗಿ ಅಲ್ಲಿಂದ ಮೂರು ಕೀಲೋ ಮೀಟರ್ ಜಾಥಾ ಹಮ್ಮಿಕೊಂಡು ಸ್ಮಾರಕ ತಲುಪಲಾಗುತ್ತದೆ. ಈ ಜಾಥಾದಲ್ಲಿ ವಿಷ್ಣುವರ್ಧನ್ ಅವರ ಗೀತೆಗಳು, ಜಾನಪದ ನೃತ್ಯ, ಜಾನಪದ ಕಲೆಗಳನ್ನು ಬಿಂಬಿಸುವಂತಹ ಯೋಜನೆ ಸಿದ್ಧವಾಗಿದೆ. ಕುಂಭಮೇಳದೊಂದಿಗೆ ಮಹಿಳೆಯರು ಕೂಡ ಜಾಥಾದಲ್ಲಿ ಹೆಜ್ಜೆ ಹಾಕಲಿದ್ದಾರೆ. ಜನವರಿ 29ರಂದು ಮೈಸೂರಿನಲ್ಲಿ ವಿಷ್ಣು ಜಾತ್ರೆಯೇ ನಡೆಯಲಿದೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣು ಸ್ಮಾರಕ ಉದ್ಘಾಟನೆಗೆ ಭರ್ಜರಿ ಸಿದ್ಧತೆ : ಬೆಂಗಳೂರು ಟು ಮೈಸೂರು ಕಟೌಟ್ ಜಾತ್ರೆ

    ವಿಷ್ಣು ಸ್ಮಾರಕ ಉದ್ಘಾಟನೆಗೆ ಭರ್ಜರಿ ಸಿದ್ಧತೆ : ಬೆಂಗಳೂರು ಟು ಮೈಸೂರು ಕಟೌಟ್ ಜಾತ್ರೆ

    ಮೈಸೂರಿನಲ್ಲಿ ನಿರ್ಮಾಣವಾದ ಮೇರುನಟ ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial)  ಜನವರಿ 29 ರಂದು ಉದ್ಘಾಟನೆಗೊಳ್ಳಲಿದ್ದು, ಅಭಿಮಾನಿಗಳು ಈ ಸಡಗರವನ್ನು ಕಣ್ತುಂಬಿಕೊಳ್ಳಲು ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಡಾ.ವಿಷ್ಣುಸೇನಾ ಸಮಿತಿಯು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲಕ್ಷಾಂತರ ಅಭಿಮಾನಿಗಳು ಅಂದು ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

    ಈ ಕುರಿತು ಡಾ.ವಿಷ್ಣುಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ (Veerakaputra Srinivas) ಮಾತನಾಡಿ, ‘ಸ್ಮಾರಕ ಉದ್ಘಾಟನೆ ಅನ್ನುವುದು ಅಭಿಮಾನಿಗಳ ಪಾಲಿಗೆ ಜಾತ್ರೆ ಇದ್ದಂತೆ. ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಹದಿಮೂರು ವರ್ಷ ಕಾದಿದ್ದೇವೆ. ಹಾಗಾಗಿ ನಮ್ಮ ನಮ್ಮ ಊರುಗಳಿಂದ ಸಂಭ್ರಮ ಶುರುವಾಗಿ ಮೈಸೂರುವರೆಗೂ ಅದು ತಲುಪಲಿದೆ. ಜನವರಿ 29ರಂದು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಚಿತ್ರೋದ್ಯಮದಲ್ಲಿ ಹಿಂದೆ ಆಗಿರಬಾರದು, ಮುಂದೆ ಆಗಬಾರದು ಆ ರೀತಿಯಲ್ಲಿ ಪ್ಲ್ಯಾನ್ ಮಾಡಲಾಗಿದೆ’ ಎನ್ನುತ್ತಾರೆ. ಇದನ್ನೂ ಓದಿ: ರವಿಚಂದ್ರನ್ ಸಿನಿಮಾದ ಹೆಸರು ಮತ್ತು ನಾಯಕಿ ಬದಲು

    ಜನವರಿ 29 ರಂದು ಬೆಳಗ್ಗೆ ಬೆಂಗಳೂರಿನ ಅಭಿಮಾನ ಸ್ಟುಡಿಯೋದಲ್ಲಿರುವ ವಿಷ್ಣುವರ್ಧನ್ ಅವರ ಪುಣ್ಯಭೂಮಿಯಿಂದ ನೂರಾರು ವಾಹನಗಳು ಮೈಸೂರಿಗೆ ಹೊರಡುತ್ತವೆ. ವಿಷ್ಣುವರ್ಧನ್ ಬಾವುಟ ಇರುವ ನೂರಾರು ಕಾರುಗಳು ಪಥಸಂಚಲನದಂತೆ ಬೆಂಗಳೂರಿನಿಂದ ಮೈಸೂರುನತ್ತ ಸಾಗಲಿವೆ. ಅಲ್ಲದೇ, ಬೆಂಗಳೂರಿನಿಂದ ಮೈಸೂರುವರೆಗೂ ಕಟೌಟ್ ಗಳು ರಸ್ತೆಯುದ್ದಕ್ಕೂ ರಾರಾಜಿಸಲಿವೆ. ಮೈಸೂರಿನಲ್ಲಿ ಕುಂಭಮೇಳ, ಜಾನಪದ ವಾದ್ಯಗಳ ಮೆರವಣಿಗೆ, ಜಾನಪದ ಕುಣಿತ, ದೀಪೋತ್ಸವ ಹೀಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಮೈಸೂರಿಗೆ ಬರುವ ಅಭಿಮಾನಿಗಳಿಗಾಗಿ ವಿಷ್ಣುಸೇನಾ ಸಮಿತಿಯಿಂದಲೇ ಅನ್ನ ಸಂತರ್ಪಣೆ ಮಾಡಲಾಗುತ್ತಿದ್ದು ಕಟೌಟ್, ವಿಷ್ಣು ದೀಪೋತ್ಸವ, ವಿವಿಧ ಪೋಸ್ಟರ್ಸ್, ಕುಂಭಮೇಳ, ವಾಹನ ಪಥಸಂಚಲನ ಇತ್ಯಾದಿ ಕಾರ್ಯಕ್ರಮಗಳನ್ನು ಅಂದು ಹಮ್ಮಿಕೊಳ್ಳಲಾಗಿದೆ ಎಂದಿದ್ದಾರೆ ವೀರಕಪುತ್ರ ಶ್ರೀನಿವಾಸ್. ಜನವರಿ 29ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮಾರಕವನ್ನು ಲೋಕಾಪರ್ಣೆ ಮಾಡಲಿದ್ದು, ಚಿತ್ರೋದ್ಯಮದ ಹಲವು ಗಣ್ಯರು ಕೂಡ ಭಾಗಿಯಾಗಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವಿಷ್ಣು ಸ್ಮಾರಕ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್: ಜನವರಿ 29ರಂದು ಸಿಎಂ ಉದ್ಘಾಟನೆ

    ವಿಷ್ಣು ಸ್ಮಾರಕ ಲೋಕಾರ್ಪಣೆಗೆ ಮುಹೂರ್ತ ಫಿಕ್ಸ್: ಜನವರಿ 29ರಂದು ಸಿಎಂ ಉದ್ಘಾಟನೆ

    ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Vishnuvardhan) ಅವರ ಸ್ಮಾರಕ (Memorial) ಲೋಕಾರ್ಪಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ (Basavaraja Bommai) ಭವ್ಯವಾದ ವಿಷ್ಣು ಸ್ಮಾರಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರಿನ (Mysore) ಎಚ್ಡಿ‌ ಕೋಟೆಯ ಅಲ್ಲಾಳು ಗ್ರಾಮದಲ್ಲಿ‌ ಐದು ಎಕರೆ ಜಾಗದಲ್ಲಿ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ.

    ವಿಷ್ಣು ದಾದಾ ಅಗಲಿದ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣವಾಗಿದೆ. 2020 ರ ಸೆ‌.15 ರಂದು ಸ್ಮಾರಕಕ್ಕೆ ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಮಾರಕಕ್ಕೆ ಭೂಮಿ‌ ಪೂಜೆ ನೆರವೇರಿಸಿದ್ದರು. ಸ್ಮಾರಕ ನಿರ್ಮಾಣಕ್ಕೆ ಸರ್ಕಾರದಿಂದ ಆಗಲೇ 11 ಕೋಟಿ ರೂಪಾಯಿ ಮಂಜೂರು ಮಾಡಲಾಗಿತ್ತು. ಸುಮಾರು 13 ವರ್ಷಗಳ ಬಳಿಕ ಸ್ಮಾರಕ ಉದ್ಘಾಟನೆ ಆಗುತ್ತಿರುವುದು ಅಭಿಮಾನಿಗಳಲ್ಲಿ ಹರ್ಷ ತಂದಿದೆ. 2009ರ ಡಿ.30ರಂದು ಮೈಸೂರಿನಲ್ಲಿ ದಿಢೀರ್ ಆಗಿ ಮೃತಪಟ್ಟಿದ್ದರು. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಅವರ ಅಂತ್ಯಸಂಸ್ಕಾರ ನಡೆದರೂ ನಾನಾ ಕಾರಣಗಳಿಂದಾಗಿ ಅಲ್ಲಿ ಸ್ಮಾರಕ ನಿರ್ಮಿಸುವ ಕೆಲಸ ಕೈಗೂಡಲಿಲ್ಲ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

    ದಿಲ್ಲಿಯ ರಾಜಪಥದಲ್ಲಿ ಇತ್ತೀಚೆಗೆ ಅನಾವರಣಗೊಂಡ ನೇತಾಜಿ ಪ್ರತಿಮೆಯ ರೂವಾರಿ, ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೆತ್ತನೆಯಲ್ಲಿ ಆರು ಅಡಿ ಎತ್ತರದ ವಿಷ್ಣು ದಾದಾ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧವಾಗಿದೆ. ಬೆಂಗಳೂರಿನ ಎಂ.9 ಕಂಪೆನಿಯ ನಿಶ್ಚಲ್ ಸ್ಮಾರಕದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಕೃಷ್ಣ ಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಪ್ರತಿಮೆ ಸುತ್ತಲೂ ವೃತ್ತಾಕಾರದ ಫೋಟೋ ಗ್ಯಾಲರಿ, ಗ್ಯಾಲರಿಯ ಇಬ್ಬದಿಯಲ್ಲಿಯೂ ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಡಿಜಿಟಲ್ ಪೋಸ್ಟರ್ ಪ್ರದರ್ಶನ ಇರಲಿದೆ.

    ಸ್ಮಾರಕ ಸ್ಥಳದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರ ಮಾದರಿಯಲ್ಲಿ ಹವಾನಿಯಂತ್ರಿತ ಥಿಯೇಟರ್, ಪುರುಷ- ಮತ್ತು ಮಹಿಳಾ ಕಲಾವಿದರ ಡ್ರೆಸ್ಸಿಂಗ್ ಕೊಠಡಿ, ಸುಸಜ್ಜಿತ ಶೌಚಾಲಯ, ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಸ್ಮಾರಕದ ಮುಂಭಾಗ ಸುಂದರವಾದ ಕಾರಂಜಿ ನಿರ್ಮಾಣವಾಗಿದೆ. ಸ್ಮಾರಕದ ಹೊರ ಆವರಣದಲ್ಲಿ ಸಸ್ಯೋದ್ಯಾನ ನಿರ್ಮಿಸಿ ವಿವಿಧ ಪ್ರಭೇದದ ಹೂವಿನ ಗಿಡಗಳನ್ನು ವೃತ್ತಾಕಾರದಲ್ಲಿ ನೆಟ್ಟು ಬೆಳೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮೈಸೂರಿನ ಮತ್ತೊಂದು ಪ್ರವಾಸಿತಾಣವಾಗಿ ಗುರುತಿಸಿಕೊಳ್ಳುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k