Tag: Member of Parliament

  • ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಕೊರೊನಾ ವೇಳೆ ಪಾರ್ಟಿ ಮಾಡಿ ಪಿಎಂ ಸ್ಥಾನ ಕಳೆದುಕೊಂಡಿದ್ದ ಬೋರಿಸ್ ಜಾನ್ಸನ್ ಬ್ರಿಟನ್ ಸಂಸತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ

    ಲಂಡನ್: ಬ್ರಿಟನ್‌ನ (Britain) ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ (Boris Johnson) ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

    2020ರಲ್ಲಿ ಕೊರೊನಾ (Corona) ಸಮಯದಲ್ಲಿ ಲಾಕ್‌ಡೌನ್ (Lockdown) ನಿಯಮಗಳನ್ನು ಉಲ್ಲಂಘಿಸಿ ಔತಣಕೂಟ ಮಾಡಿದ್ದಕ್ಕೆ ಬೋರಿಸ್ ಜಾನ್ಸನ್ ಈ ಹಿಂದೆ ಬ್ರಿಟನ್‌ನ ಪ್ರಧಾನಿ (Biritain PM) ಹುದ್ದೆಯನ್ನು ಕಳೆದುಕೊಂಡಿದ್ದರು.

    ಪಾರ್ಟಿ ಗೇಟ್ (Partygate) ಹಗರಣಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್ ಮಾಜಿ ಪ್ರಧಾನಿ ಅವರಿಗೆ ಪತ್ರವೊಂದನ್ನು ಬರೆದಿದೆ. ಅಂದು ಔತಣಕೂಟದಲ್ಲಿ ಕೊರೊನಾಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಿರುವುದಾಗಿ ಜಾನ್ಸನ್ ಹೇಳಿದ್ದರು. ಈ ಕುರಿತು ಹೌಸ್ ಆಫ್ ಕಾಮನ್ಸ್ ಸಮಿತಿ ಪತ್ರ ಬರೆದು ಸ್ಪಷ್ಟೀಕರಣ ಕೇಳಿರುವ ಹಿನ್ನೆಲೆಯಲ್ಲಿ ಬೋರಿಸ್ ಜಾನ್ಸನ್ ಸಂಸತ್ ಸದಸ್ಯತ್ವವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇದನ್ನೂ ಓದಿ: ಟರ್ಕಿ ಹಡಗು ಹೈಜಾಕ್- ಕಾರ್ಯಾಚರಣೆಗಿಳಿದ ಇಟಲಿ ಸೇನಾ ಪಡೆ

    ಈ ಬಗ್ಗೆ ತಿಳಿಸಿರುವ ಬೋರಿಸ್, ಹೌಸ್ ಆಫ್ ಕಾಮನ್ಸ್ ಕಳುಹಿಸಿರುವ ಪತ್ರದಿಂದ ತಮಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಬಹುಪಾಲು ಕನ್ಸರ್ವೇಟಿವ್ ಸಂಸದರನ್ನು ಹೊಂದಿರುವ ಸಂಸದ ನೇತೃತ್ವದ ಸಮಿತಿ ಸೋಮವಾರ ತನ್ನ ವಿಚಾರಣೆಯನ್ನು ಮುಕ್ತಾಯಗೊಳಿಸಲಿದೆ. ತನ್ನ ವರದಿಯನ್ನು ಶೀಘ್ರವೇ ಪ್ರಕಟಿಸುವುದಾಗಿ ಹೇಳಲಾಗಿದೆ. ಇದನ್ನೂ ಓದಿ: ರೋಚಕ ಘಟನೆ- ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ 4 ಮಕ್ಕಳು

  • ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.

    ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.

    ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.

    ಇದನ್ನು ಓದಿ: ಮೈಸೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಸು ಮಾಡಿದವರಿಗೆ ಸನ್ಮಾನ – ಕ್ಲೀನ್ ಸಿಟಿ ಹೆಸರುಳಿಸಲು ಅಭಿಯಾನ