Tag: Melbourne

  • ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಗುಡ್‌ಬೈ? – ಹಿಂಟ್‌ ಕೊಟ್ಟ ರವಿ ಶಾಸ್ತ್ರಿ

    – ಆಸ್ಟ್ರೇಲಿಯಾ ಮಾಧ್ಯಮಗಳಿಂದ ರೋಹಿತ್‌ – ಕೊಹ್ಲಿಗೆ ಅವಮಾನ

    ಮೆಲ್ಬೋರ್ನ್‌: ಸದ್ಯ ನಡೆಯುತ್ತಿರುವ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. ಈ ನಡುವೆ ಸರಣಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ವದಂತಿ ಎದ್ದಿದೆ.

    ಬಿಜಿಟಿ ಸರಣಿಯಲ್ಲಿ ನಿರಂತರ ವೈಫಲ್ಯ ಕಂಡಿರುವ ರೋಹಿತ್‌ ಶರ್ಮಾ, ಟೆಸ್ಟ್‌ ನಾಯಕತ್ವ ತ್ಯಜಿಸಬೇಕು ಎಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಭಾರತದ ತಂಡದ ಮಾಜಿ ಮುಖ್ಯ ಕೋಚ್‌ ರವಿ ಶಾಸ್ತ್ರಿ, ಬಿಜಿಟಿ ಟೆಸ್ಟ್‌ ಸರಣಿ ಬಳಿಕ ರೋಹಿತ್‌ ಶರ್ಮಾ ನಿವೃತ್ತಿಯಾಗುವ ಬಗ್ಗೆ ದೃಢ ನಿರ್ಧಾರ ತಾಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ರೋಹಿತ್‌ ಶರ್ಮಾ ತಮ್ಮ ಟೆಸ್ಟ್‌ ನಾಯಕತ್ವ ತ್ಯಜಿಸುವ ಕುರಿತು ಯೋಚಿಸಬೇಕಾದ ಸಮಯ ಬಂದಿದೆ. ಬಿಜಿಟಿ ಬಳಿಕ ಈ ಕುರಿತು ಅವರು ಸೂಕ್ತ ತೀರ್ಮಾನ ಮಾಡಲಿದ್ದಾರೆ ಎಂಬ ಭರವಸೆ ಇದೆ. ಟೆಸ್ಟ್‌ ಪಂದ್ಯಾವಳಿಯಲ್ಲಿ ತಮ್ಮ ಪ್ರದರ್ಶನದ ಕುರಿತು ರೋಹಿತ್‌ ಗಂಭೀರವಾಗಿ ಚಿಂತಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಪಾಕ್‌ ವಿರುದ್ಧ ರೋಚಕ ಜಯ – WTC ಫೈನಲ್‌ಗೆ ದ.ಆಫ್ರಿಕಾ, ಭಾರತಕ್ಕೆ ಗೆಲುವೊಂದೇ ದಾರಿ

    ರೋಹಿತ್ ಶರ್ಮಾ ಅವರ ಅಲ್ಟ್ರಾ-ಡಿಫೆನ್ಸಿವ್ ವಿಧಾನ ಮತ್ತೆ ಮತ್ತೆ ಕೈಕೊಡುತ್ತಿದೆ. ಸತತ ಬ್ಯಾಟಿಂಗ್‌ ವೈಫಲ್ಯ ಅವರ ನಾಯಕತ್ವದ ಮೇಲೂ ಪರಿಣಾಮ ಬೀರುತ್ತಿದೆ. ಇದು ಟೆಸ್ಟ್‌ ಪಂದ್ಯಾವಳಿಯಿಂದ ರೋಹಿತ್‌ ನಿವೃತ್ತಿ ಹೊಂದುವ ಸಮಯ. ಆದರೆ ಈ ಕುರಿತು ಅವರೇ ನಿರ್ಧಾರ ಕೈಗೊಳ್ಳಬೇಕು ಎಂದು ರವಿಶಾಸ್ತ್ರಿ ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಆಸ್ಟ್ರೇಲಿಯಾ ಮಾಧ್ಯಮಗಳಿಂದ ರೋ-ಕೊಗೆ ಅವಮಾನ:
    ಆಸ್ಟ್ರೇಲಿಯಾದ ಸ್ಥಳೀಯ ಮಾಧ್ಯಮಗಳು ಭಾರತ ತಂಡದ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನ ಟಾರ್ಗೆಟ್‌ ಮಾಡಿದಂತೆ ಕಾಣುತ್ತಿದೆ. 19ರ ಹರೆಯದ ಆಟಗಾರ ಸ್ಯಾಮ್‌ ಕಾನ್‌ಸ್ಟಾಸ್‌ ಫೋಟೋ ಜೊತೆ ʻವಿರಾಟ್‌ ಐ ಆಮ್‌ ಯುವರ್ ಡ್ಯಾಡ್‌ʼ (ನಾನು ನಿಮ್ಮ ಅಪ್ಪ) ಎಂಬ ಶೀರ್ಷಿಕೆ ನೀಡಿದ್ದು, ತೀರಾ ಕೆಳಮಟ್ಟದ ವರ್ತನೆಯನ್ನು ತೋರಿವೆ. ಈ ಬೆನ್ನಲ್ಲೇ ನಾಯಕ ರೋಹಿತ್‌ ಶರ್ಮಾ ಅವರ ಭಾವಚಿತ್ರಕ್ಕೆ ʻಕ್ರೈ ಬೇಬಿʼ ಎಂದು ಬರೆದು ಅಪಮಾನ ಮಾಡಿವೆ. ಇದರಿಂದ ಆಸ್ಟ್ರೇಲಿಯಾ ಮಾಧ್ಯಮಗಳ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳು ಮುಗಿಬಿದ್ದಿದ್ದಾರೆ.

    ಏನಿದು ಘಟನೆ?
    ಮೆಲ್ಬೋರ್ನ್‌ 4ನೇ ಟೆಸ್ಟ್‌ನ ಮೊದಲ ದಿನ ಅಬ್ಬರದ ಆಟವಾಡುತ್ತಿದ್ದ ಆಸ್ಟ್ರೇಲಿಯಾದ 19 ವರ್ಷದ ಯುವ ಬ್ಯಾಟರ್‌ ಸ್ಯಾಮ್‌ ಕಾನ್‌ಸ್ಟಾಸ್‌ ಅವರಿಗೆ ವಿರಾಟ್‌ ಕೊಹ್ಲಿ ಭುಜಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿತ್ತು. 10ನೇ ಓವರ್‌ ವೇಳೆ ಕ್ರೀಸ್‌ ಬಳಿ ಕಾನ್‌ಸ್ಟಾಸ್‌ ನಡೆದುಕೊಂಡು ಹೋಗುತ್ತಿದ್ದಾಗ ಕೊಹ್ಲಿ ಭುಜ ತಾಗಿಸಿದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಕೊಹ್ಲಿ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಪಂದ್ಯದ ಸಂಭಾವನೆಯ ಶೇಕಡಾ 20ರಷ್ಟು ದಂಡ ವಿಧಿಸಿತ್ತು.

  • ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ವಿರೂಪ – ಗೋಡೆ ಮೇಲೆ ಭಾರತ ವಿರೋಧಿ ಬರಹ

    ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ವಿರೂಪ – ಗೋಡೆ ಮೇಲೆ ಭಾರತ ವಿರೋಧಿ ಬರಹ

    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ಹಿಂದೂ ದೇವಾಲಯವೊಂದನ್ನು (Hindu Temple) ಖಲಿಸ್ತಾನ್ (Khalistan) ಬೆಂಬಲಿಗರು ವಿರೂಪಗೊಳಿಸಿ ಗೋಡೆಗಳ ಮೇಲೆ ಭಾರತ ವಿರೋಧಿ ಬರಹಗಳನ್ನು ಗೀಚಿರುವ ಘಟನೆ ವರದಿಯಾಗಿದೆ.

    ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ (Melbourne) ಮಿಲ್ ಪಾರ್ಕ್‌ನ ಸ್ವಾಮಿ ನಾರಾಯಣ ದೇವಾಲಯದ ಗೋಡೆಗಳ ಮೇಲೆ ಹಿಂದೂಸ್ತಾನ್ ಮುರ್ದಾಬಾದ್ ಎಂದು ಬರೆಯಲಾಗಿದೆ. ಈ ದಾಳಿಯನ್ನು ದೇವಾಲಯದ ಆಡಳಿತ ಮಂಡಳಿ ಖಂಡಿಸಿದೆ.

    ಈ ವಿಧ್ವಂಸಕ ಕೃತ್ಯಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ ಹಾಗೂ ಇದನ್ನು ಖಂಡಿಸುತ್ತೇವೆ. ನಾವು ಶಾಂತಿ ಹಾಗೂ ಸೌಹಾರ್ದತೆಗೆ ಪ್ರಾರ್ಥನೆ ಮಾಡುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮೆಟ್ರೋ ಸುರಂಗ ಕಾಮಗಾರಿ – ಬೈಕಿನಲ್ಲಿ ತೆರಳುತ್ತಿದ್ದಾಗ ದಿಢೀರ್ ಕುಸಿದ ರಸ್ತೆ

    ವರದಿಗಳ ಪ್ರಕಾರ ಖಲಿಸ್ತಾನ್ ಗುಂಪು ಭಯೋತ್ಪಾದಕ ಜರ್ನೈಲ್ ಸಿಂಗ್ ಭಿಂದ್ರಾವಾಲೆಗೆ ಬೆಂಬಲ ವ್ಯಕ್ತಪಡಿಸಿದೆ. ಆತ ಪ್ರಸ್ತಾವಿತ ಸಿಖ್ ಬಹುಸಂಖ್ಯಾತ ಖಲಿಸ್ತಾನ್ ರಾಜ್ಯವನ್ನು ರಚಿಸಲು ದೊಡ್ಡಮಟ್ಟದಲ್ಲಿ ಪ್ರಯತ್ನ ಪಟ್ಟಿದ್ದ. ಆತ ಆಪರೇಷನ್ ಬ್ಲೂಸ್ಟಾರ್ ಸಮಯದಲ್ಲಿ ಸೇನೆಯಿಂದ ಕೊಲ್ಲಲ್ಪಟ್ಟಿದ್ದ.

    ದೇವಾಲಯ ವಿರೂಪಗೊಳಿಸಿರುವ ಘಟನೆ ಬಗ್ಗೆ ಮೆಲ್ಬೋರ್ನ್‌ನ ಹಿಂದೂ ಸಮುದಾಯ ಪೊಲೀಸರಿಗೆ ದೂರು ನೀಡಿದೆ. ಸಂಸದರಿಗೂ ಈ ಬಗ್ಗೆ ತಿಳಿಸಲಾಗಿದ್ದು, ಸಾಂಸ್ಕೃತಿಕ ಸಚಿವರು ಘಟನಾ ಸ್ಥಳಕ್ಕಾಗಮಿಸಿದ್ದಾರೆ. ಇದನ್ನೂ ಓದಿ: ಗನ್ ಲೈಸನ್ಸ್ ಪಡೆದ ಬಿಜೆಪಿ ಮಾಜಿ ನಾಯಕಿ ನೂಪರ್ ಶರ್ಮಾ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    ದ್ವಿಶತಕ ಸಿಡಿಸಿ ಅಬ್ಬರದ ಸಂಭ್ರಮದಲ್ಲಿ ವಾರ್ನರ್ ಎಡವಟ್ಟು – ಕೈ,ಕೈ ಹಿಡಿದು ಪೆವಿಲಿಯನ್‌ಗೆ ಕರೆತಂದ ಫಿಸಿಯೋ

    ಮೆಲ್ಬರ್ನ್: ಆಸ್ಟ್ರೇಲಿಯಾದ (Australia) ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ದಕ್ಷಿಣ ಆಫ್ರಿಕಾ (South Africa) ವಿರುದ್ಧದ ಎರಡನೇ ಟೆಸ್ಟ್ (Test) ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಆದರೆ ಈ ಸಂಭ್ರಮ ಕೆಲ ಸೆಕೆಂಡುಗಳಲ್ಲಿ ವಾರ್ನರ್ ನೋವಿನಿಂದ ನರಳಾಡುವಂತೆ ಮಾಡಿದೆ.

    ಮೆಲ್ಬರ್ನ್‍ನಲ್ಲಿ (Melbourne) ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಭರ್ಜರಿಯಾಗಿ ಬ್ಯಾಟ್ ಬೀಸಿ 200 ರನ್ (254 ಎಸೆತ, 16 ಬೌಂಡರಿ, 2 ಸಿಕ್ಸ್) ಚಚ್ಚಿದರು. ಈ ಸಂಭ್ರಮಾಚರಣೆಯಲ್ಲಿ ವಾರ್ನರ್ ಎಡವಟ್ಟು ಮಾಡಿಕೊಂಡಿದ್ದಾರೆ. ದ್ವಿಶತಕದ ಖುಷಿಯಲ್ಲಿ ತಮ್ಮ ಎಂದಿನ ಸ್ಟೈಲ್‍ನಲ್ಲಿ ಹಾರಿ ಸಂಭ್ರಮಿಸುತ್ತಿದ್ದಂತೆ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಕಡೆಗೆ ವಾರ್ನರ್‌ರನ್ನು ಫಿಸಿಯೋ ಕೈ,ಕೈ ಹಿಡಿದು ಪೆವಿಲಿಯನ್‍ಗೆ ಕರೆ ತರುವಂತಾಯಿತು. ಇದನ್ನೂ ಓದಿ: ತನ್ನ ವಿಕೆಟ್ ಪಡೆದ ಬಾಂಗ್ಲಾ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

    ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದು, ಸಂಭ್ರಮದ ಜಂಪ್ ಬೆಲೆ ತೆರುವಂತಾಗಿದೆ ಎಂಬ ಮಾತು ನೆಟ್ಟಿಗರಿಂದ ಕೇಳಿ ಬರುತ್ತಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 2ನೇ ದಿನದಾಟದ ಅಂತ್ಯಕ್ಕೆ 91 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 386 ರನ್ ಬಾರಿಸಿ 197 ರನ್‍ಗಳ ಮುನ್ನಡೆ ಪಡೆದುಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

    ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ

    ಮೆಲ್ಬರ್ನ್: ಚೇಸಿಂಗ್ ಮಾಸ್ಟರ್‌ ವಿರಾಟ್‌ ಕೊಹ್ಲಿಯ (Virat Kohli) ದಿಟ್ಟೆದೆಯ ಹೋರಾಟಕ್ಕೆ ಪಾಕಿಸ್ತಾನ (Pakistan) ಮಂಡಿಯೂರಿದೆ. ಹೈವೋಲ್ಟೆಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ (India) 4 ವಿಕೆಟ್‍ಗಳ ರೋಚಕ ಜಯದೊಂದಿಗೆ ಭಾರತೀಯರಿಗೆ ದೀಪಾವಳಿ (Deepavali) ಉಡುಗೊರೆ ನೀಡಿದೆ.

    ಪಾಕಿಸ್ತಾನ ನೀಡಿದ 160 ರನ್‍ಗಳ ಉತ್ತಮ ಮೊತ್ತವನ್ನು ಬೆನ್ನಟ್ಟಿದ ಭಾರತ ತಂಡ ಆರಂಭಿಕ ಆಘಾತದ ನಡುವೆಯೇ ಕೊಹ್ಲಿ, ಪಾಂಡ್ಯರ 113 ರನ್‌ (78 ಎಸೆತ) ಜೊತೆಯಾಟ ಮತ್ತು ಕೊನೆಯ ಎಸೆತದಲ್ಲಿ ಅಶ್ವಿನ್‌ ಸಿಡಿಸಿದ ಬೌಂಡರಿ ನೆರವಿನಿಂದ ಭಾರತ 4 ವಿಕೆಟ್‍ಗಳ ಅಂತರದಿಂದ ಗೆದ್ದು ಬೀಗಿತು. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್‍ನಲ್ಲಿ ಭಾರತ ಶುಭಾರಂಭ ಕಂಡಿದೆ.

    ಕೊನೆಯ 12 ಎಸೆತಗಳಲ್ಲಿ ಭಾರತ ಗೆಲುವಿಗೆ 31 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ ಒಟ್ಟು 16 ರನ್ ಹರಿದು ಬಂತು. ಕೊನೆಯ 6 ಎಸೆತಗಳಲ್ಲಿ ಭಾರತ ಗೆಲುವಿಗೆ 16 ರನ್ ಬೇಕಾಗಿತ್ತು. ಈ ವೇಳೆ ಹಲವು ಹೈಡ್ರಾಮಾಗಳೊಂದಿಗೆ ಬೌಂಡರಿ, ಸಿಕ್ಸ್, ವಿಕೆಟ್‍ಗಳ ಪತನದ ನಡುವೆಯೇ ಕೊನೆಯ ಎಸೆತದಲ್ಲಿ ಅಶ್ವಿನ್‌ ಹೊಡೆದ ಬೌಂಡರಿಯೊಂದಿಗೆ ಭಾರತ 4 ವಿಕೆಟ್‍ಗಳ ಜಯ ಸಾಧಿಸಿ ಸಂಭ್ರಮಿಸಿತು.

    ಭಾರತಕ್ಕೆ ಆರಂಭಿಕ ಅಘಾತ:
    ಪಾಕಿಸ್ತಾನ ನೀಡಿದ 160 ರನ್‍ಗಳ ಪೈಪೋಟಿಯ ಮೊತ್ತವನ್ನು ಚೇಸಿಂಗ್ ಮಾಡಲು ಹೊರಟ ಭಾರತ ಆರಂಭಿಕ ಅಘಾತ ಎದುರಿಸಿತು. ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ತಲಾ 4 ರನ್‍ಗಳಿಗೆ ಸುಸ್ತಾದರು.

    ಆ ಬಳಿಕ ಬಂದ ಸೂರ್ಯಕುಮಾರ್ ಯಾದವ್ ಅಬ್ಬರಿಸಲಿಲ್ಲ. ಕೇವಲ 15 ರನ್ (10 ಎಸೆತ, 2 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಅಕ್ಷರ್ ಪಟೇಲ್ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ 2 ರನ್ ಸಿಡಿಸಿ ನಿರಾಸೆ ಮೂಡಿಸಿದರು. ಈ ವೇಳೆ ಕೇವಲ 31 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು.

    ಪಾಂಡ್ಯ, ಕೊಹ್ಲಿ ಜುಗಲ್ ಬಂದಿ:
    ಆ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಜವಾಬ್ಧಾರಿಯುತ ಆಟವಾಡಿದರು. ಈ ಜೋಡಿ ನಿಧಾನವಾಗಿ ಪಾಕ್ ಬೌಲರ್‌ಗಳಿಗೆ ಚಾರ್ಚ್ ಮಾಡಲಾರಂಭಿಸಿ ಬೆಂಡೆತ್ತಿದರು. ಪಾಂಡ್ಯ 40 ರನ್ (37 ಎಸೆತ, 1 ಬೌಂಡರಿ, 2 ಸಿಕ್ಸ್) ಸಿಡಿಸಿ ಕೊನೆಯ ಓವರ್‌ನಲ್ಲಿ ಔಟ್ ಆದರು. ಇತ್ತ ಕೊಹ್ಲಿ ಗೆಲುವಿಗಾಗಿ ಟೊಂಕ ಕಟ್ಟಿ ನಿಂತು ಅಜೇಯ 82 ರನ್ (53 ಎಸೆತ, 6 ಬೌಂಡರಿ, 4 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

    ಈ ಮೊದಲು ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಬಾಬರ್‌ ಆಜಂ (Babar Azam) ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ರಿಜ್ವಾನ್‌ ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಅರ್ಶ್‌ದೀಪ್‌ ಸಿಂಗ್‌ ಮೊದಲ ಎಸೆತದಲ್ಲಿ ಬಾಬರ್‌ ಆಜಂಗೆ ಪೆವಿಲಿಯನ್‌ ದಾರಿ ತೋರಿದರು. ಇನ್ನೂ ಭರವಸೆಯ ಅಟಗಾರ ಮೊಹಮ್ಮದ್‌ ರಿಜ್ವಾನ್‌ 12 ಎಸತೆಗಳಲ್ಲಿ ಕೇವಲ 4 ರನ್‌ಗಳಿಸಿ ಅರ್ಶ್‌ದೀಪ್‌ಗೆ ವಿಕೆಟ್‌ ಒಪ್ಪಿಸಿದರು.

    ಶಾನ್‌ ಮಸೂದ್‌, ಇಫ್ತಿಖರ್‌ ಅರ್ಧಶತಕಗಳ ಆಟ:
    ಮೂರು ಮತ್ತು 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಾನ್‌ ಮಸೂದ್‌ ಹಾಗೂ ಇಫ್ತಿಖರ್‌ ಫಿಕರ್‌ ಅಹ್ಮದ್‌ ಸಾಂಘಿಕ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭರ್ಜರಿ ಬೌಂಡರಿ ಸಿಕ್ಸರ್‌ಗಳ ಆಟದಿಂದ ಇವರಿಬ್ಬರ ಜೊತೆಯಾಟದಲ್ಲಿ ತಂಡಕ್ಕೆ 50 ಎಸೆತಗಳಲ್ಲಿ 76 ರನ್‌ಗಳು ಸೇರ್ಪಡೆಯಾಯಿತು. ಭರ್ಜರಿ ಸಿಕ್ಸ್‌ ಬಾರಿಸಿದ ಇಫ್ತಿಖರ್‌ 34 ಎಸೆತಗಳಲ್ಲಿ ಆಕರ್ಷಕ 51 ರನ್‌ (4 ಸಿಕ್ಸರ್‌, 2 ಬೌಂಡರಿ) ಗಳಿಸಿ ಮಿಂಚಿದರು. ಈ ವೇಳೆ ಇಫ್ತಿಖರ್‌ ಆಟಕ್ಕೆ ಶಮಿ ಬ್ರೇಕ್‌ ಹಾಕಿದರು. ಆ ನಂತರವೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಮಸೂದ್‌ 42 ಎಸೆತಗಳಲ್ಲಿ 5 ಬೌಂಡರಿಯೊಂದಿಗೆ 52 ರನ್‌ ಸಿಡಿಸಿ ತಂಡಕ್ಕೆ ಆಸರೆಯಾದರು.

    ನಂತರದಲ್ಲಿ ಕ್ರೀಸ್‌ಗಿಳಿಸಿದ ಶಹದಾಬ್‌ ಖಾನ್‌ 5 ರನ್‌, ಹೈದರ್‌ ಅಲಿ 2 ರನ್‌, ಮೊಹಮ್ಮದ್‌ ನವಾಜ್‌ 9 ರನ್‌, ಅಸಿಫ್‌ ಅಲಿ 2 ರನ್‌ ಹಾಗೂ ಶಾಹೀನ್ ಶಾ ಆಫ್ರಿದಿ 16 ರನ್‌ ಗಳಿಸಿದರೆ ಹ್ಯಾರಿಸ್‌ ರಫ್‌ 6 ರನ್‌ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 20 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್‌ ನಷ್ಟಕ್ಕೆ 189 ರನ್‌ ಕಲೆ ಹಾಕಿತು.

    ಪಾಂಡ್ಯ, ಅರ್ಶ್‌ದೀಪ್‌ ಬೌಲಿಂಗ್‌ ಮಿಂಚು: 
    ಪಾಕ್‌ ತಂಡದ ಎದುರು ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಾಂಡ್ಯ 4 ಓವರ್‌ಗಳಲ್ಲಿ 30 ರನ್‌ ನೀಡಿ 3 ವಿಕೆಟ್‌ ಕಬಳಿಸಿದರೇ 32 ರನ್‌ ನೀಡಿದ ಅರ್ಶ್‌ದೀಪ್‌ ಸಿಂಗ್‌ 3 ವಿಕೆಟ್‌ ಪಡೆದು ಮಿಂಚಿದರು.  ಮೊಹಮ್ಮದ್‌ ಶಮಿ ಮತ್ತು ಭುವನೇಶ್ವರ್‌ ಕುಮಾರ್‌ ತಲಾ ಒಂದೊಂದು ವಿಕೆಟ್‌ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಮೆಲ್ಬರ್ನ್‍ನಲ್ಲಿ ಮಳೆ ಬರಲ್ಲ – ಇಂದೇ ಪಾಕ್ ವಿರುದ್ಧ ಭಾರತ ಸಿಡಿಸಲಿದೆ ದೀಪಾವಳಿ ಪಟಾಕಿ

    ಮೆಲ್ಬರ್ನ್‍ನಲ್ಲಿ ಮಳೆ ಬರಲ್ಲ – ಇಂದೇ ಪಾಕ್ ವಿರುದ್ಧ ಭಾರತ ಸಿಡಿಸಲಿದೆ ದೀಪಾವಳಿ ಪಟಾಕಿ

    ಮೆಲ್ಬರ್ನ್: ಒಂದೆಡೆ ಭಾರತದಲ್ಲಿ ದೀಪಾವಳಿಯ (Deepavali) ಸಂಭ್ರಮ. ಮತ್ತೊಂದಡೆ ಕಾಂಗರೂ ನಾಡಲ್ಲಿ ಕ್ರಿಕೆಟ್ ಕಿಚ್ಚು ಜೋರಾಗಿದೆ. ಈ ಕಿಚ್ಚು ಹಚ್ಚಿಸಿರೋದು ಭಾರತ (India)  ಮತ್ತು ಪಾಕಿಸ್ತಾನ (Pakistan) ಮಹಾಕಾಳಗ.

    ಬದ್ಧವೈರಿಗಳ ಮುಖಾಮುಖಿಯೇ ಅಂತಹದ್ದು. ಅದು ಎಲ್ಲೇ ನಡೆಯಲಿ, ಯಾವುದೇ ಕ್ರೀಡಾಂಗಣ ಇರಲಿ, ಯಾವುದೇ ಪಂದ್ಯವಿರಲಿ. ಅದು ನಿಜಕ್ಕೂ ಮಹಾಕಾಳಗವೇ ಸರಿ. ಕಾರಣ ಇಂಡೋ-ಪಾಕ್ ತಂಡಗಳು ಅಖಾಡಕ್ಕಿಳಿಯುತ್ತವೇ ಅಂದ್ರೆ, ಜಿದ್ದು, ರೋಷಾವೇಷ, ಸೇಡಿಗೆ ಸೇಡು, ಏಟಿಗೆ ಎದುರೇಟು ಇದ್ದಿದ್ದೇ. ಅಂತಹದೇ ಕಾಳಗಕ್ಕೆ ಕಾಂಗರೂ ನಾಡಲ್ಲಿ ರಣರಂಗ ಸಿದ್ಧವಾಗಿದೆ. ಇದನ್ನೂ ಓದಿ: ಇಂಡೋ-ಪಾಕ್ ಕದನಕ್ಕೆ ಮೆಲ್ಬರ್ನ್ ಸಜ್ಜು – ಈತನೇ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್

    ಇಂದು ಮೆಲ್ಬರ್ನ್ (Melbourne) ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಪಾಕ್ ವಿರುದ್ಧದ ಸಾಲು, ಸಾಲು ಸೋಲು ಟೀಂ ಇಂಡಿಯಾದ ನಿದ್ದೆ ಕೆಡಿಸಿದೆ. 2021ರ ಟಿ20 ವಿಶ್ವಕಪ್ (T20 World Cup) ಹಾಗೂ 2022ರ ಏಷ್ಯಾಕಪ್ ಸೋಲುಂಡಿದ್ದ ಭಾರತ, ಪಾಕ್ ವಿರುದ್ಧ ಸೇಡುತೀರಿಸಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದೆ. ಚುಟುಕು ಸಮರದಲ್ಲಿ ಪಾಕ್ ಮಣಿಸಿ, ಶುಭಾರಂಭ ಮಾಡಲು ಟೀಂ ಇಂಡಿಯಾ ರಣತಂತ್ರವನ್ನೇ ಹೆಣೆದಿದೆ.

    ಟೀಂ ಇಂಡಿಯಾಗೆ ವೇಗಿ ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿ ಕಾಡ್ತಿರೋದು ಸುಳ್ಳಲ್ಲ. ಇದು ತಂಡಕ್ಕೆ ಮೈನಸ್ ಪಾಯಿಂಟ್ ಆದ್ರೂ, ಎದುರಾಳಿಗಳನ್ನು ಕಟ್ಟಿ ಹಾಕೋ ತಾಕತ್‌ ಭಾರತದ ಬೌಲರ್‌ಗಳಿಗೆ. ಶಮಿ, ಭುವಿ, ಹರ್ಷಲ್ ಪಟೇಲ್, ಹರ್ಷದೀಪ್ ಸಿಂಗ್‍ರಂತ ಬೌಲರ್‌ಗಳು, ಪಾಕ್‌ ಬ್ಯಾಟ್ಸ್‌ಮ್ಯಾನ್‌ಗಳಿಗೆ ಕಾಡಲಿದ್ದಾರೆ. ಚಾಹಲ್, ಅಶ್ವಿನ್ ಸ್ಪಿನ್ ಜಾದು ಮಾಡಲಿದ್ದಾರೆ. ಹೊಡಿಬಡಿ ಆಟಗಾರರ ದಂಡೇ ಭಾರತದ ಟ್ರಂಪ್‍ಕಾರ್ಡ್. ಹಿಟ್‍ಮ್ಯಾನ್ ರೋಹಿತ್, ಕೂಲ್‍ಬ್ಯಾಟ್ಸ್‌ಮ್ಯಾನ್‌ ಕೆ.ಎಲ್ ರಾಹುಲ್, ಸ್ಫೋಟಕ ಬ್ಯಾಟ್ಸ್‌ಮ್ಯಾನ್‌ ಸೂರ್ಯಕುಮಾರ್, ರನ್ ಮಿಷನ್ ಕೊಹ್ಲಿ ಅಬ್ಬರಿಸೋದು ಪಕ್ಕ. ಅಲ್‍ರೌಂಡರ್ ಪಾಂಡ್ಯ, ಡಿಕೆ, ಪಂತ್, ದೀಪಕ್ ಹೂಡಾರಂತ ಬ್ಯಾಟ್ಸ್‌ಮ್ಯಾನ್‌ಗಳು ಪಂದ್ಯದ ಗತಿಯನ್ನೇ ಬದಲಿಸುವ ಚಾಣಕ್ಯತನ ಹೊಂದಿದ್ದಾರೆ. ಇದನ್ನೂ ಓದಿ: ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ

    ಇತ್ತ ಪಾಕ್ ತಂಡದ ಬತ್ತಳಿಕೆಯಲ್ಲೂ ಭರ್ಜರಿ ಅಸ್ತ್ರಗಳೇ ಇವೆ. ನಾಯಕ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್, ಇಫ್ತಿಕರ್ ಅಹಮದ್, ಆಸಿಫ್ ಅಲಿ, ಫಕರ್ ಝಮಾನ್, ಮೊಹಮದ್ ನವಾಜ್‍ರಂತ ಬ್ಯಾಟ್ಸ್‌ಮ್ಯಾನ್‌ಗಳು ರನ್‍ಮಳೆಯನ್ನು ಸುರಿಸುವ ಶಕ್ತಿ ಹೊಂದಿದ್ದಾರೆ. ಶಾಹಿನ್ ಆಫ್ರಿದಿ, ಹ್ಯಾರೀಸ್, ನಾಸೀಂ ಶಾಹ ಬೌಲಿಂಗ್ ದಾಳಿ ಕಬ್ಬಿಣದ ಕಡಲೆಯೇ ಸರಿ. ಹಾಗಾಗಿ, ಉಭಯ ತಂಡಗಳ ನಡುವೆ ಬಿಗ್ ಫೈಟ್ ಎದುರಾಗೋದು ಪಕ್ಕ. ಪಂದ್ಯಕ್ಕೆ (Rain) ಮಳೆ ಕಾಟ ಕೊಡುವ ಸಾಧ್ಯತೆ ಇತ್ತು. ಆದರೆ ಬೆಳಗ್ಗಿನ ವಾತಾವರಣ ನೋಡಿದಾಗ ಮಳೆ ಬಿಡುವು ನೀಡುವಂತಿದೆ.

    ಮಳೆ ಬಿಟ್ಟರೆ ಟೀಂ ಇಂಡಿಯಾ ಇಂದೇ ದೀಪಾವಳಿ ಪಟಾಕಿ, ಸಿಹಿ ಹಂಚಲು ರೆಡಿ ಆಗಿದೆ. ಟಿ-20 ವಿಶ್ವಕಪ್‍ನ ಇತಿಹಾಸದ ಪುಟಗಳನ್ನು ಮೆಲುಕು ಹಾಕಿದ್ರೆ ಪಾಕ್ ವಿರುದ್ಧದ ಹಣಾಹಣಿಯಲ್ಲಿ ಭಾರತದ್ದೇ ಮೇಲುಗೈ. 6 ಬಾರಿ ಇಂಡೋ-ಪಾಕ್ ತಂಡಗಳು ಎದುರಾಗಿದ್ದು, ಭಾರತ 4 ಬಾರಿ ಗೆಲುವು ಸಾಧಿಸಿದ್ರೆ, ಪಾಕ್ ಪಡೆ ಕೇವಲ 1 ಪಂದ್ಯದಲ್ಲಿ ಜಯ ತನ್ನದಾಗಿಸಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಟಿ-20 ವಿಶ್ವಕಪ್‍ನಲ್ಲಿ ಪಾಕ್ ವಿರುದ್ಧ ಸೋಲನ್ನೇ ಕಾಣದ ಭಾರತ 2021ರ ವಿಶ್ವಕಪ್‍ನಲ್ಲಿ ಮೊದಲ ಸೋಲನ್ನು ಕಂಡಿತ್ತು. ಹಾಗಾಗಿ ಮತ್ತೆ ಗೆಲುವಿನ ಟ್ರ್ಯಾಕ್‍ಗೆ ಮರಳಲು ಬ್ಲೂಬಾಯ್ಸ್ ವೀರ ಯೋಧರಂತ ಸಜ್ಜಾಗಿದ್ದಾರೆ.

    ಸೂಪರ್ ಸಂಡೇ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಂಡೋ-ಪಾಕ್ ಕದನಕ್ಕೆ ಮೆಲ್ಬರ್ನ್ ಸಜ್ಜು – ಈತನೇ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್

    ಇಂಡೋ-ಪಾಕ್ ಕದನಕ್ಕೆ ಮೆಲ್ಬರ್ನ್ ಸಜ್ಜು – ಈತನೇ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್

    ಮೆಲ್ಬರ್ನ್: ಆಸೀಸ್ ನೆಲದಲ್ಲಿ ಆರಂಭಗೊಂಡಿರುವ ಚುಟುಕು ಸಮರದಲ್ಲಿ ನಾಳೆ ಭಾರತ (India) ಹಾಗೂ ಪಾಕಿಸ್ತಾನ (Pakistan) ನಡುವೆ ಹೈವೋಲ್ಟೆಜ್ ಪಂದ್ಯ ನಡೆಯಲಿದೆ.

    ಈಗಾಗಲೇ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಾಟಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದು, ಆಸ್ಟ್ರೇಲಿಯಾದ ಮೆಲ್ಬರ್ನ್ (Melbourne) ಸ್ಟೇಡಿಯಂ ಬದ್ಧವೈರಿಗಳ ಕಾದಾಟಕ್ಕೆ ವೇದಿಕೆಯಾಗಲಿದೆ. ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಎದುರುಬದುರಾಗುತ್ತಿದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ – ಐವರು ಪ್ರಾಣಾಪಾಯದಿಂದ ಪಾರು

    ಕೆಲ ತಿಂಗಳ ಹಿಂದೆ ಏಷ್ಯಾಕಪ್‍ನಲ್ಲಿ (Asia Cup) ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಕಾದಾಡಿದ್ದವು. ಬಹುತೇಕ ಅಲ್ಲಿ ಆಡಿರುವ ಆಟಗಾರರೇ ಈ ಬಾರಿ ಟಿ20 ವಿಶ್ವಕಪ್ ತಂಡದಲ್ಲೂ ಇದ್ದಾರೆ. ಹಾಗಾಗಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮರ್ಥ್ಯದ ಅಗ್ನಿ ಪರೀಕ್ಷೆ ಆಸೀಸ್ ನೆಲದಲ್ಲಿ ನಡೆಯಲಿದೆ. ಇದನ್ನೂ ಓದಿ: ಭಾರತ ತಂಡದಲ್ಲಿ 150+ ವೇಗದ ಬೌಲರ್ ಇಲ್ಲ – ಇಂಗ್ಲೆಂಡ್‍ನಲ್ಲಿ ಪ್ರಧಾನಿಯೇ ಇಲ್ಲ: ಜಾಫರ್ ವ್ಯಂಗ್ಯ

    ಈತನೇ ಭಾರತದ ಎಕ್ಸ್ ಫ್ಯಾಕ್ಟರ್:
    ಭಾರತದ ಟಿ20 ವಿಶ್ವಕಪ್ ತಂಡ ಮೇಲ್ನೋಟಕ್ಕೆ ಬಲಿಷ್ಠವಾಗಿ ಗೋಚರಿಸುತ್ತಿದೆ. ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಕಣಕ್ಕಿಳಿಯುವುದು ಬಹುತೇಕ ಖಚಿತ. ಇವರಿಬ್ಬರೂ ಸಿಡಿದರೆ, ಆರಂಭದಲ್ಲೇ ರನ್ ಬಿರುಗಾಳಿ ಬೀಸಲಿದೆ. ಆ ಬಳಿಕ ತಂಡದ ಬ್ಯಾಟಿಂಗ್ ಶಕ್ತಿಯಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಏಷ್ಯಾಕಪ್ ಸೇರಿದಂತೆ ಈ ಹಿಂದಿನ ಕೆಲ ಟೂರ್ನಿಗಳಲ್ಲಿ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ್ದಾರೆ. ಇದೇ ನಿರೀಕ್ಷೆ ವಿಶ್ವಕಪ್‍ನಲ್ಲೂ ಇದೆ. ಇನ್ನೂ ಈ ಬಾರಿಯ ಟಿ20 ವಿಶ್ವಕಪ್‍ನಲ್ಲಿ ಭಾರತ ತಂಡದ ನಿಜವಾದ ಶಕ್ತಿಯಾಗಿ ಗುರುತಿಸಿಕೊಂಡಿರುವುದು ಸೂರ್ಯಕುಮಾರ್ ಯಾದವ್. 360 ಡಿಗ್ರಿ ಬ್ಯಾಟ್ಸ್‌ಮ್ಯಾನ್‌ ಎಂದು ಖ್ಯಾತಿಗಳಿಸಿರುವ ಸೂರ್ಯ ಪ್ರತಿಯೊಂದು ಟೂರ್ನಿಗಳಲ್ಲೂ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಟಿ20 ವಿಶ್ವಕಪ್ ಟೂರ್ನಿಯಿಂದಲೇ ಔಟ್

    ಕೆಲ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ ಹೊಡಿಬಡಿ ಆಟಗಾರರು. ಒಂದೆರಡು ಓವರ್ ಕ್ರಿಸ್‍ನಲ್ಲಿದ್ದರೂ ರನ್ ಪ್ರವಾಹ ಹರಿಸುವ ಸಾಮರ್ಥ್ಯ ಇವರಿಗಿದೆ. ಇವರೊಂದಿಗೆ ಅವಕಾಶ ಸಿಕ್ಕರೆ ಮಿಂಚಲು ರಿಷಭ್ ಪಂತ್, ದೀಪಕ್ ಹೂಡಾ, ಅಕ್ಷರ್ ಪಟೇಲ್ ತುದಿಗಾಲಲ್ಲಿ ನಿಂತಿದ್ದಾರೆ. ಬೌಲಿಂಗ್‍ನಲ್ಲಿ ಬುಮ್ರಾ ಬದಲು ತಂಡ ಸೇರಿಕೊಂಡಿರುವ ಮೊಹಮ್ಮದ್ ಶಮಿ ಮೇಲೆ ನಿರೀಕ್ಷೆ ಹೆಚ್ಚಿದೆ. ಇವರೊಂದಿಗೆ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಮಿಂಚಲು ಸಿದ್ಧರಾಗಿದ್ದಾರೆ. ಸ್ಪಿನ್‌ ಜಾದೂ ಮಾಡಲು ಆರ್ ಅಶ್ವಿನ್, ಯಜುವೇಂದ್ರ ಚಾಹಲ್ ನಡುವೆ ಪೈಪೋಟಿ ಇದೆ.

    ಈ ಎಲ್ಲಾ ಆಟಗಾರರೂ ತಂಡವಾಗಿ ಆಡಬೇಕಾಗಿದೆ. ಈ ಮೂಲಕ 15 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲಬೇಕೆಂಬ ಕನಸಿನಲ್ಲಿರುವ ಭಾರತದ ಅಭಿಮಾನಿಗಳ ಕನಸು ನನಸು ಮಾಡಲು ಹೋರಾಡಬೇಕಾಗಿದೆ. ಇದೀಗ ಮೊದಲ ಪಂದ್ಯಕ್ಕೆ ಸಿದ್ಧವಾಗಿರುವ ಭಾರತ ಹಾಗೂ ಪಾಕ್‌ ತಂಡಗಳಿಗೆ ಮಳೆ ಕಾಟ ಕೊಡುವ ಸಾಧ್ಯತೆಯೂ ಹೆಚ್ಚಿದೆ. ನಾಳೆ ಮಧ್ಯಾಹ್ನ ಭಾರತೀಯ ಕಾಲಮಾನ ಮಧ್ಯಾಹ್ನ 1:30 ಕ್ಕೆ ಪಂದ್ಯ ಆರಂಭವಾಗಲಿದೆ.

    ಭಾರತ ತಂಡ:
    ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ.

    Live Tv
    [brid partner=56869869 player=32851 video=960834 autoplay=true]

  • ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ ಫ್ಯಾನ್- ವಿಡಿಯೋ ಫುಲ್ ವೈರಲ್

    ಟೀಂ ಇಂಡಿಯಾ ಆಟಗಾರರ ಬಿಲ್ ಪಾವತಿಸಿದ ಫ್ಯಾನ್- ವಿಡಿಯೋ ಫುಲ್ ವೈರಲ್

    ಮೆಲ್ಬರ್ನ್: ಆಸ್ಟ್ರೇಲಿಯಾದ ವಿರುದ್ಧದ ಟೆಸ್ಟ್ ಸರಣಿಗೆಂದು ಹೋಗಿರುವ ಭಾರತೀಯ ಆಟಗಾರರ ಊಟದ ಬಿಲ್ ಪಾವತಿಸುವ ಮೂಲಕ ಅಭಿಮಾನಿಯೊಬ್ಬ ತನ್ನ ಅಭಿಮಾನವನ್ನು ಮೆರೆದಿದ್ದಾನೆ.

    ತಮ್ಮ ನೆಚ್ಚಿನ ಆಟಗಾರರ ಹತ್ತಿರ ಒಂದು ಆಟೋಗ್ರಾಫ್ ತೆಗೆದುಕೊಳ್ಳುವುದು ಇತ್ತೀಚೆಗೆ ಕಷ್ಟವಾಗಿದೆ. ಆದ್ರೆ ಅಭಿಮಾನಿ ನವಲ್‌ದೀಪ್‌ ಸಿಂಗ್‌  ಆಟಗಾರರ ಹೋಟೆಲ್ ಬಿಲ್ ಪಾವತಿಸುವುದರ ಜೊತೆಗೆ ಸುಲಭವಾಗಿ ಫೋಟೊವನ್ನು ಕ್ಲಿಕ್ಕಿಸಿಕೊಂಡಿದ್ದಾನೆ. ಜೊತೆಗೆ ಅವರು ಕುಳಿತು ವಿಶ್ರಾಂತಿ ಪಡೆಯುತ್ತಿರುವ ಪುಟ್ಟ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ.

    ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ಮೆಲ್ಬರ್ನ್‍ಗೆ ಹೋಗಿರುವ ಭಾರತೀಯ ಆಟಗಾರರು ಅಲ್ಲಿನ ರೆಸ್ಟೋರೆಂಟ್ ಒಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿಗೆ ಪತ್ನಿ ಜೊತೆ ಅಭಿಮಾನಿ ನವ್‍ದೀಪ್ ಸಿಂಗ್ ಬಂದಿದ್ದಾರೆ.

    ತಮ್ಮ ಮುಂದಿನ ಟೇಬಲ್‍ನಲ್ಲಿ ಕುಳಿತ್ತಿದ್ದ ರೋಹಿತ್ ಶರ್ಮಾ, ನವ್‍ದೀಪ್ ಸೈನಿ, ರಿಷಬ್ ಪಂತ್ ಮತ್ತು ಶುಭ್‍ಮನ್ ಗಿಲ್‍ನನ್ನು ಗುರುತಿಸಿ ಸಂತಸಗೊಂಡಿದ್ದಾರೆ. ಅವರ ಮುಂದಿನ ಟೇಬಲ್‍ನಲ್ಲಿಯೇ ಕ್ರಿಕೆಟ್ ತಾರೆಯರು ಕುಳಿತಿರುವುದನ್ನು ನೋಡಿ ಹೊಟ್ಟೆ ಹಸಿವಿಲ್ಲದಿದ್ದರೂ ಏನಾದರೂ ಆರ್ಡರ್ ಮಾಡಿ ಕುಳಿತುಕೊಂಡು ಕ್ರಿಕೆಟ್ ತಾರೆಯನ್ನು ನೋಡಿ ಕಣ್ತುಂಬಿಕೊಂಡಿದ್ದಾರೆ.

    ಆಟಗಾರರು ಆರ್ಡರ್ ಮಾಡಿದ್ದ ಫುಡ್ ಬಿಲ್‍ನನ್ನು ಕೂಡ ನವಲ್‌ದೀಪ್‌  ಪಾವತಿಸಿದ್ದಾನೆ. ನಂತರ ರೋಹಿತ್ ಶರ್ಮಾ ರೆಸ್ಟೋರೆಂಟ್‍ನವರ ಬಳಿ ಬಿಲ್ ಕೇಳಿದಾಗ ಅಭಿಮಾನಿಯೊಬ್ಬರು ಈಗಾಗಲೇ ಬಿಲ್ ಪಾವತಿಸಿರುವುದಾಗಿ ತಿಳಿಸಿದ್ದಾರೆ.

    ಯಾರು ಎಂದು ತಿಳಿದ ರೋಹಿತ್ ಮತ್ತು ಕ್ರಿಕೆಟಿಗರು ಸಂಕೋಚದಿಂದ ಹಣವನ್ನು ಅಭಿಮಾನಿ ನವಲ್‌ದೀಪ್‌ ಹಿಂತಿರುಗಿಸಲು ಹೋದಾಗ ನವಲ್‌ದೀಪ್‌,  ಬೇಡ ಸರ್ ಇದು ಅಭಿಮಾನಿಯ ಅಭಿಮಾನದ ಪ್ರೀತಿ ನಿರಾಕರಿಸಬೇಡಿ ಎಂದು ಮನವಿ ಮಾಡಿದ್ದಾರೆ.

    ಲಂಚ್ ಕೊಡಿಸಿದ್ದಕ್ಕೆ ಥ್ಯಾಂಕ್ಸ್ ಬಾಬಿ ಎಂದು ಪಂತ್ ಹೇಳಿದ್ದಾರೆ. ಜೊತೆಗೆ ಕ್ರಿಕೆಟಿಗರ ಜೊತೆ ನಿಂತು ನವಲ್‌ದೀಪ್‌ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಪಾವತಿಸಿದ ಬಿಲ್, ಫುಡ್, ಫೋಟೋ ಮತ್ತು ಸಣ್ಣ ವಿಡಿಯೋವನ್ನು ಸೋಷಿಯಲ್ ಮೀಡಿಯಾನಲ್ಲಿ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • ಸ್ಕೂಲ್ ಪಕ್ಕದ ಪಾರ್ಕಿನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ

    ಸ್ಕೂಲ್ ಪಕ್ಕದ ಪಾರ್ಕಿನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ

    -ಸ್ಥಳದಲ್ಲಿ ಸಿರಿಂಜ್, ಡ್ರಗ್ಸ್, ಕಾಂಡೋಮ್ ಪತ್ತೆ

    ಮೆಲ್ಬೋರ್ನ್: ಶಾಲೆಯ ಅನತಿ ದೂರದಲ್ಲಿರುವ ಪಾರ್ಕ್ ನಲ್ಲಿ ಟೆಂಟ್ ಹಾಕಿ ಸೆಕ್ಸ್ ದಂಧೆ ನಡೆಯುತ್ತಿರುವ ಘಟನೆ ಮೆಲ್ಬೋರ್ನ್ ನ ಪಶ್ಚಿಮ ದಾಂಡೆನಾಂಗ್ ನಗರದ ಹೆಮ್ಮಿಂಗ್ ಸ್ಟ್ರೀಟ್ ನಲ್ಲಿ ನಡೆದಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಸ್ಥಳೀಯ ವ್ಯಾಪಾರಿ, ಇತ್ತೀಚೆಗೆ ಈ ಸ್ಥಳದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ದಾಂಡೆನಾಂಗ್ ಸ್ಟ್ರೀಟ್ ನ ಜನರು ಡ್ರಗ್ಸ್ ನಶೆಯಲ್ಲಿ ತೇಲಾಡುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಶಾಲೆಯ ಸಮೀಪದ ಪಾರ್ಕ್, ಮಕ್ಕಳ ಪ್ಲೇ ಗ್ರೌಂಡ್ ಬಳಿ ನಡೆಯುತ್ತಿರುವ ಈ ರೀತಿಯ ಅನೈತಿಕ ಚಟುವಟಿಕೆಗಳನ್ನ ನಿಯಂತ್ರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

    ಕೆಲ ಅಪರಿಚಿತರು ಬಂದು ತಾತ್ಕಾಲಿಕ ಟೆಂಟ್ ಹಾಕಿ ಲೈಂಗಿಕ ಕ್ರಿಯೆ, ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗುತ್ತಾರೆ. ಇನ್ನು ಪಾರ್ಕಿನಲ್ಲಿ ಸ್ಲೀಪಿಂಗ್ ಬ್ಯಾಗ್ಸ್, ಕಾಂಡೋಮ್, ಸಿರಿಂಜ್, ಡ್ರಗ್ಸ್ ಪ್ಯಾಕೇಟ್ ಗಳು ಕಾಣುತ್ತಿವೆ. ಕಳೆದ ನಾಲ್ಕು ತಿಂಗಳಿನಿಂದ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕಿದೆ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ ಹೇಳಿದ್ದಾರೆ.

  • ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಪುಣೆಯ ಅನಾಥಾಶ್ರಮದಿಂದ ಐಸಿಸಿ ಹಾಲ್ ಆಫ್ ಫೇಮ್‍ವರೆಗೆ- ಆಸೀಸ್ ಆಟಗಾರ್ತಿ ಲಿಸಾ ಸ್ಥಳೇಕರ್ ಜರ್ನಿ

    ಮೆಲ್ಬೊರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲ್ ಆಫ್ ಫೇಮ್ ಕ್ರಿಕೆಟಿಗರ ಪಟ್ಟಿಯಲ್ಲಿ ಸ್ಥಾನ ಪಡೆಯುವುದು ಅತ್ಯಂತ ಗೌರವದ ಸಾಧನೆಯಾಗಿದೆ.

    ಕ್ರಿಕೆಟ್‍ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮಂದಿಗೆ ಮಾತ್ರ ಈ ಗೌರವ ಪಡೆಯುವ ಅರ್ಹತೆ ಲಭಿಸುತ್ತದೆ. ಕಳೆದ ವಾರ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್, ಪಾಕ್ ಮಾಜಿ ಆಟಗಾರ ಜಹೀರ್ ಅಬ್ಬಾಸ್, ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಜಾಕ್ ಕಾಲಿಸ್ ಅವರಿಗೆ ಐಸಿಸಿ ಹಾಲ್ ಆಫ್ ಫೇಮ್ ಪ್ರಶಸ್ತಿ ನೀಡಿದೆ. ಲೀಸಾ ಸ್ಥಳೇಕರ್ ಈ ಪ್ರಶಸ್ತಿಯನ್ನು ಪಡೆದ 9ನೇ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

    ಭಾರತದಲ್ಲಿ ಜನಿಸಿದ್ದ ಲಿಸಾ ಸ್ಥಳೇಕರ್ ಅವರನ್ನು ಆಸ್ಟ್ರೇಲಿಯಾದ ಹರೇನ್ ಮತ್ತು ಸ್ಯೂ ಸ್ಥಳೇಕರ್ ಅವರು ಪುಣೆಯ ಒಂದು ಅನಾಥ ಆಶ್ರಮದಲ್ಲಿ ದತ್ತು ಪಡೆದ ಸಂದರ್ಭದಲ್ಲಿ ಆಕೆಗೆ ಕೇವಲ ಮೂರು ವಾರ ವಯಸ್ಸಾಗಿತ್ತು. ಬಳಿಕ ಆಸ್ಟ್ರೇಲಿಯಾಗೆ ಲಿಸಾ ಪೋಷಕರು ಕರೆದುಕೊಂಡು ಹೋಗಿದ್ದರು. ಇತ್ತೀಚೆಗೆ ತಮ್ಮ ತಂದೆಗೆ ಬಗ್ಗೆ ಮಾತನಾಡಿದ್ದ ಸ್ಥಳೇಕರ್, ನನ್ನ ತಂದೆಗೆ ಕ್ರಿಕೆಟ್ ಎಂದರೇ ತುಂಬಾ ಇಷ್ಟ. ಆದ್ದರಿಂದ ನಾನು ಕ್ರಿಕೆಟ್ ಆಡುತ್ತಿದ್ದೆ. 8-9 ವಯಸ್ಸಿನ ವೇಳೆಗೆ ಕ್ರಿಕೆಟನ್ನು ಪೂರ್ತಿಯಾಗಿ ಇಷ್ಟಪಟ್ಟಿದೆ ಎಂದು ತಿಳಿಸಿದ್ದರು.

    1990ರಲ್ಲಿ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ ಮೂಲಕ ಪಾದಾರ್ಪಣೆ ಮಾಡಿ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದ ಸ್ಥಳೇಕರ್, ಆಸೀಸ್ ಪರ ನಾಲ್ಕು ವಿಶ್ವಕಪ್‍ಗಳನ್ನು ಆಡಿದ್ದಾರೆ. ಆಸೀಸ್ ಪರ 8 ಟೆಸ್ಟ್, 125 ಏಕದಿನ, 54 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‍ನಲ್ಲಿ 1 ಸಾವಿರ ರನ್ ಹಾಗೂ 100 ವಿಕೆಟ್ ಪಡೆದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಹೊಂದಿದ್ದಾರೆ. ಕ್ರಿಕೆಟ್ ನಿವೃತ್ತಿ ಹೇಳಿದ ಬಳಿಕ ಕ್ರಿಕೆಟ್ ವಿಶ್ಲೇಷಣೆ, ಕೋಚ್, ಕ್ರಿಕೆಟ್ ಅಸೋಸಿಶಿಯೇಷನ್ ಸದಸ್ಯರಾಗಿ ಕ್ರಿಕೆಟ್ ಸೇವೆಯನ್ನು ಮುಂದುವರಿಸಿದ್ದಾರೆ.

    ಕ್ರಿಕೆಟ್‍ನಲ್ಲಿ ಮಾತ್ರವಲ್ಲದೇ ಮೈದಾನದ ಹೊರಗೂ ಸ್ಥಳೇಕರ್ ಅನೇಕ ಮೈಲಿಗಲ್ಲುಗಳಿಗೆ ಕಾರಣರಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವೈದ್ಯೆಯ ಬರ್ಬರ ಕೊಲೆ!

    ಆಸ್ಟ್ರೇಲಿಯಾದಲ್ಲಿ ಭಾರತೀಯ ಮೂಲದ ವೈದ್ಯೆಯ ಬರ್ಬರ ಕೊಲೆ!

    – ಮೃತದೇಹವನ್ನ ಸೂಟ್‍ಕೇಸಿನಲ್ಲಿ ತುಂಬಿ ವೈದ್ಯೆಯ ಕಾರಿನಲ್ಲಿಯೇ ಬಚ್ಚಿಟ್ರು!

    ಮೆಲ್ಬೋರ್ನ್: ಆಸ್ಟ್ರೇಲಿಯಾದ ಜನನಿಬಿಡ ಪ್ರದೇಶದಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ದಂತ ವೈದ್ಯೆ ಬುಧವಾರ ಬರ್ಬರವಾಗಿ ಕೊಲೆ ಆದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಪ್ರೀತಿ ರೆಡ್ಡಿ (32) ಕೊಲೆಯಾದ ದಂತ ವೈದ್ಯೆ. ಈಸ್ಟರ್ನ್ ಸಿಡ್ನಿ ರಸ್ತೆಯಲ್ಲಿ ವೈದ್ಯೆ ಪಾರ್ಕ್ ಮಾಡಿದ್ದ ಕಾರಿನ ಸೂಟ್‍ಕೇಸಿನಲ್ಲೇ ಮೃತದೇಹವನ್ನು ತುಂಬಿಡಲಾಗಿತ್ತು. ಪ್ರೀತಿ ಮಾಜಿ ಪ್ರಿಯಕರ ಕೂಡ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಈ ಪ್ರಕರಣದ ಬಗ್ಗೆ ಅನುಮಾನಗಳು ಹೆಚ್ಚಾಗುತ್ತಿದೆ ಎಂದು ನ್ಯೂ ಸೌತ್ ವೇಲ್ಸ್‍ನ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಪ್ರೀತಿ ಕೊನೆಯದಾಗಿ ಭಾನುವಾರ ಜಾರ್ಜ್ ರಸ್ತೆಯಲ್ಲಿರುವ ಮ್ಯಾಕ್‍ಡಾನಲ್ಡ್ ನ ಲೈನಿನಲ್ಲಿ ನಿಂತಿದ್ದರು. ಬಳಿಕ ಅಲ್ಲಿಂದ ಏಕಾಏಕಿ ನಿಗೂಢವಾಗಿ ನಾಪತ್ತೆ ಆಗಿದ್ದರು. ಮಂಗಳವಾರ ಪೊಲೀಸರು ಕಿಂಗ್ಸ್ ಫೋರ್ಡ್ ನಲ್ಲಿರುವ ಸ್ಟ್ರಾಚನ್ ಲೇನ್‍ನಲ್ಲಿ ಪ್ರೀತಿಯ ಕಾರನ್ನು ಪತ್ತೆ ಹಚ್ಚಿದ್ದರು. ಬಳಿಕ ಆ ಕಾರನ್ನು ಪರಿಶೀಲಿಸಿದ್ದಾಗ ಸೂಟ್‍ಕೇಸ್‍ನಲ್ಲಿ ಪ್ರೀತಿ ಮೃತದೇಹ ಇರುವುದನ್ನು ಗಮಿನಿಸಿದ್ದಾರೆ.

    ಪ್ರೀತಿಯ ಮೃತದೇಹದ ಮೇಲೆ ಚಾಕುವಿನಿಂದ ಇರಿದ ಗಾಯದ ಗುರುತುಗಳಿದ್ದವು. ಅಲ್ಲದೇ ಪ್ರೀತಿ ಮತ್ತು ಆಕೆಯ ಮಾಜಿ ಪ್ರಿಯಕರ ಸಿಡ್ನಿಯ ಮಾರ್ಕೆಟ್ ರಸ್ತೆಯ ಹೋಟೆಲ್‍ನಲ್ಲಿ ವಾಸಿಸುತ್ತಿದ್ದರು. ಪ್ರೀತಿ ಭಾನುವಾರ ಬೆಳಗ್ಗೆ 11 ಗಂಟೆಗೆ ತನ್ನ ಕುಟುಂಬದವರ ಜೊತೆ ಕೊನೆಯದಾಗಿ ಮಾತನಾಡಿದ್ದರು. ಅಲ್ಲದೇ ವಾರಾಂತ್ಯದಲ್ಲಿ ಆಕೆ ಸೇಂಟ್ ಲಿಯೋನಾಡ್ರ್ಸ್ ನಲ್ಲಿ ನಡೆಯುವ ಡೆಂಟಲ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸುತ್ತಿದ್ದರು.

    ಪ್ರೀತಿ ತನ್ನ ಪೋಷಕರಿಗೆ ತಿಂಡಿ ತಿಂದು ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಆಕೆ ಕರೆ ಮಾಡದೇ ಇರುವ ಕಾರಣ ಆಕೆಯ ಪೋಷಕರು ಪೊಲೀಸರಿಗೆ ಕರೆ ಮಾಡಿದ್ದಾರೆ. ಪ್ರೀತಿ ನಿಗೂಢವಾಗಿ ನಾಪತ್ತೆ ಆದ ದಿನದಿಂದ ನಾವು ನೆಮ್ಮದಿಯಾಗಿ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ. ಆಕೆ ಸುರಕ್ಷಿತವಾಗಿ ಹಿಂದಿರುಗಲಿ ಎಂದು ನಾವೆಲ್ಲರೂ ಪ್ರಾರ್ಥಿನೆ ಮಾಡಲಾಗಿತ್ತು ಎಂದು ಪ್ರೀತಿ ಸಹದ್ಯೋಗಿಗಳು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv