Tag: melania trump

  • ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಕಾಣಿಸಿಕೊಂಡ ಮಸ್ಕ್ – ಟ್ರಂಪ್ ಪತ್ನಿ ಮೆಲಾನಿಯಾ ಮಿಸ್ಸಿಂಗ್

    ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ (Donald Trump) ಅವರ ಎಲೆಕ್ಷನ್ ವಿಕ್ಟರಿ ಫೋಟೋ ಸೆಷನ್‌ನಲ್ಲಿ ಎಲಾನ್ ಮಸ್ಕ್ ಕಾಣಿಸಿಕೊಂಡಿದ್ದು, ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ (Melania Trump) ಫೋಟೋದಲ್ಲಿ ಇಲ್ಲದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (America Presidential Election) ಐತಿಹಾಸಿಕ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಪ್ 47ನೇ ಅಧ್ಯಕ್ಷರಾಗಿ ಆಯ್ಕೆಯಾಗಿ, 2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಈ ಹಿನ್ನೆಲೆ ವಿಜಯದ ಸಂಭ್ರಮಾಚರಣೆಯಲ್ಲಿ ಫೋಟೋ ಸೆಷನ್ ನಡೆಸಿದ್ದು, ಎಲಾನ್ ಮಸ್ಕ್ (Elon Musk) ಕಾಣಿಸಿಕೊಂಡಿದ್ದಾರೆ. ಇನ್ನೂ ಟ್ರಂಪ್ ಪತ್ನಿ ಮೆಲಾನಿಯಾ ಫೋಟೋದಲ್ಲಿ ಕಾಣಿಸಿದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಆಸ್ಪದ ನೀಡಿದೆ.ಇದನ್ನೂ ಓದಿ: ಜೈಶಂಕರ್‌ ಸುದ್ದಿಗೋಷ್ಠಿ ಪ್ರಸಾರ – ಕೆನಡಾದಲ್ಲಿ ಆಸ್ಟ್ರೇಲಿಯಾ ಟುಡೇ ಬ್ಯಾನ್‌

    ವಿಜಯದ ಸಂಭ್ರಮದಲ್ಲಿ ಕುಟುಂಬಸ್ಥರೊಂದಿಗಿದ್ದ ಫೋಟೋವನ್ನು ಟ್ರಂಪ್ ಮೊಮ್ಮಗಳಾದ ಕೈ ಟ್ರಂಪ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸ್ಕ್ವ್ಯಾಡ್‌ ಎಂದು ಬರೆದುಕೊಂಡಿದ್ದಾರೆ. ಎಲಾನ್ ಮಸ್ಕ್ ಕಾಣಿಸಿಕೊಂಡಿರುವುದು ಹಾಗೂ ಮೆಲಾನಿಯಾ ಟ್ರಂಪ್ ಕಾಣಿಸದೇ ಇರುವುದು ಭಾರೀ ಗಮನ ಸೆಳೆದಿದೆ.

    ಪೋಸ್ಟ್ಗೆ ಹಲವರು ಕಮೆಂಟ್ ಮಾಡಿದ್ದು, ಎಲಾನ್ ಮಸ್ಕ್ ಈಗ ಟ್ರಂಪ್ ಕುಟುಂಬದ ಭಾಗವಾಗಿದ್ದಾರೆ. ಮೆಲಾನಿಯಾ ಎಲ್ಲಿ? ಎಂದು ಬರೆದುಕೊಂಡಿದ್ದಾರೆ. ಆದರೆ ತಮ್ಮ ವಿಜಯೋತ್ಸವ ಭಾಷಣದ ವೇಳೆ ಟ್ರಂಪ್ ಒಮ್ಮೆ ಭಾಷಣವನ್ನು ನಿಲ್ಲಿಸಿ ಪತ್ನಿಯನ್ನು ಚುಂಬಿಸಿ ನಂತರ ಮಾತನ್ನು ಮುಂದುವರಿಸಿದ್ದರು.ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದ ಡಿ.ರೂಪಾಗೆ ಹಿನ್ನಡೆ

  • ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ನವದೆಹಲಿ: ಕಳೆದ 5 ವರ್ಷಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಯಾವುದೇ ಅಭಿವೃದ್ಧಿಯನ್ನು ಮಾಡಿಲ್ಲ. ಒಂದೇ ಒಂದು ಶಾಲೆಯನ್ನು ನಿರ್ಮಿಸಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದರು.

    ಉತ್ತರಪ್ರದೇಶದ ರುಧಾಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಾಜಧಾನಿಯಲ್ಲಿ ಶಾಲಾ ಮೂಲಸೌಕರ್ಯ ಮತ್ತು ಶಿಕ್ಷಣವನ್ನು ಸುಧಾರಿಸುವುದಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದೇವೆ. ಅದಕ್ಕಾಗಿ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಕಳೆದ ವಾರ ದೆಹಲಿ ಸರ್ಕಾರವು 240 ಸರ್ಕಾರಿ ಶಾಲೆಗಳಲ್ಲಿ 12,000ಕ್ಕೂ ಹೆಚ್ಚು ಸ್ಮಾರ್ಟ್ ರೂಮ್‍ಗಳನ್ನು ಉದ್ಘಾಟಿಸಿದ್ದೇವೆ ಎಂದು ಹೇಳಿದರು.

    ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಫೆಬ್ರವರಿ 2020ರಲ್ಲಿ ಭಾರತಕ್ಕೆ ಬಂದಾಗ ಸರ್ಕಾರಿ ಶಾಲೆಗಳನ್ನು ನೋಡಬೇಕು ಎಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸಿದ್ದರು. ನಾನು ಕೇಜ್ರಿವಾಲ್ ಅವರ ಸರ್ಕಾರಿ ಶಾಲೆಗಳನ್ನು ನೋಡಲು ಹೋಗುತ್ತೇನೆ ಎಂದಿದ್ದರು. ಅವರು ಪ್ರಪಂಚದಾದ್ಯಂತ ಸುತ್ತಿದ್ದಾರೆ. ಆದರೆ ಅವರು ಎಲ್ಲಿಯೂ ಶಾಲೆಗಳಿಗೆ ಭೇಟಿ ನೀಡಿರಲಿಲ್ಲ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭೂ ಕುಸಿತ – ಆತಂಕದಲ್ಲಿ ಗ್ರಾಮಸ್ಥರು

    ಆದರೆ ಮೋದಿ, ಮೆಲಾನಿಯಾ ಟ್ರಂಪ್ ಬಳಿ ಯೋಗಿ ಆದಿತ್ಯನಾಥ್ ಅವರ ಶಾಲೆ ಹಾಗೂ ಮಧ್ಯಪ್ರದೇಶದ ಶಾಲೆಗಳನ್ನು ನೋಡಿ ಎಂದು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಮೆಲಾನಿಯಾ ಇದಕ್ಕೆ ಒಪ್ಪದೇ ಕೇಜ್ರಿವಾಲ್ ಅವರ ಶಾಲೆಯನ್ನು ಮಾತ್ರ ನೋಡುತ್ತೇನೆ ಎಂದು ಹೇಳಿದ್ದರು ಎಂದರು. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ದೇಗುಲಕ್ಕೆ ಕಾಣಿಕೆ – ಯೋಜನೆಗೆ ಬುಧವಾರ ಸಿಎಂ ಚಾಲನೆ

    ವಿಶ್ವದ ಪ್ರಮುಖ ವ್ಯಕ್ತಿಯ ಪತ್ನಿ ನಮ್ಮ ಶಾಲೆಯನ್ನು ನೋಡಲು ಬಂದಿದ್ದರು. ಸುಮಾರು ಒಂದು ಗಂಟೆಗಳ ಕಾಲ ವಿದ್ಯಾರ್ಥಿಗಳೊಂದಿಗೆ ಕಳೆದರು. ಇದು ನಮಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

  • ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್‍ಗೆ ಕೊರೊನಾ ಪಾಟಿಸಿವ್ ದೃಢ

    ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾ ಟ್ರಂಪ್‍ಗೆ ಕೊರೊನಾ ಪಾಟಿಸಿವ್ ದೃಢ

    ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲೇ ಡೊನಾಲ್ಡ್ ಟ್ರಂಪ್‍ಗೆ ಸಂಕಷ್ಟ ಎದುರಾಗಿದ್ದು, ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಕೊರೊನಾ ವರದಿ ಪಾಸಿಟಿವ್ ಬಂದಿದೆ.

    ಟ್ರಂಪ್ ಸಲಹ ತಂಡದ ಹೋಪ್ ಹಿಕ್ಸ್ ಅವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಇಬ್ಬರಿಗೂ ಕೊರೊನಾ ಸೋಂಕು ಇರುವುದು ದೃಢವಾಗಿದೆ.

    ಈ ವಿಚಾರವನ್ನು ಸ್ವತಃ ಟ್ರಂಪ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ನಾನು ಮತ್ತು ಮೆಲಾನಿಯಾ ಕೋವಿಡ್ ಸೋಂಕಿಗೆ ತುತ್ತಾಗಿದ್ದೇವೆ. ನಾವು ಈಗಾಗಲೇ ಕ್ವಾರಂಟೈನ್ ಆಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇವೆ. ಒಟ್ಟಾಗಿ ನಾವು ಸೋಂಕನ್ನು ಎದುರಿಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.

    ನವೆಂಬರ್ 3ರಂದು ಅಮೆರಿಕ ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಟ್ರಂಪ್ ಮಂಗಳವಾರ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಹೋಪ್ ಹಿಕ್ಸ್ ಅವರೊಂದಿಗೆ ಪ್ರಯಾಣಿಸಿದ್ದರು. ಈ ಕುರಿತು ಮಾಧ್ಯಮ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದ ಟ್ರಂಪ್, ಹೋಪ್ ಹಿಕ್ಸ್ ಶ್ರಮ ಜೀವಿ. ಆಕೆ ಮಾಸ್ ಧರಿಸುತ್ತಿದ್ದರು ಕೊರೊನಾ ಪಾಟಿಸಿವ್ ಬಂದಿದೆ. ನಾವು ಅವರೊಂದಿಗೆ ಹೆಚ್ಚಿನ ಸಮಯ ಕಳೆದ ಕಾರಣ ಪರೀಕ್ಷೆ ಮಾಡಿಸಿದ್ದೇವು ಎಂದು ಹೇಳಿದ್ದಾರೆ.

    ಚುನಾವಣೆ ಹತ್ತಿರವಾದ ಸಂದರ್ಭದಲ್ಲೇ ಕೊರೊನಾ ದೃಢವಾಡ ಹಿನ್ನೆಲೆಯಲ್ಲಿ ಟ್ರಂಪ್ ಅನಿವಾರ್ಯವಾಗಿ ಚುನಾವಣಾ ಪ್ರಚಾರದಿಂದ ದೂರ ಉಳಿಯಬೇಕಿದೆ. ಈ ಹಿಂದೆ ಕೊರೊನಾ ವ್ಯಾಕ್ಸಿನ್ ಕುರಿತು ಮಾತನಾಡಿದ್ದ ಟ್ರಂಪ್, ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುನ್ನವೇ ವ್ಯಾಕ್ಸಿನ್ ಲಭ್ಯವಾಗಲಿದೆ. ಅದಕ್ಕೆ ಬೇಕಾಗಿರುವ ಹಣವನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದರು. ಆದರೆ ಸದ್ಯ ಚುನಾವನೆಯ ವೇಳೆಗೆ ವ್ಯಾಕ್ಸಿನ್ ಲಭಿಸುವುದು ಅನುಮಾನ ಎನ್ನಲಾಗಿದೆ.

    ಈ ಹಿಂದೆ ಮಾರ್ಚ್‍ನಲ್ಲಿ ಟ್ರಂಪ್ ದಂಪತಿಗೆ ಮೊದಲ ಬಾರಿ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ಟ್ರಂಪ್ ದಂಪತಿ ಬ್ರೆಜಿಲ್ ಅಧ್ಯಕ್ಷರ ಜೈರ್ ಬೋಲ್ಸನಾರೊ ಅವರನ್ನು ಭೇಟಿ ಮಾಡಿದ 2 ದಿನಗಳ ಬಳಿಕ ಜೈರ್ ಅವರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ದಂಪತಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಆದರೆ ಆ ವೇಳೆ ಅವರಿಗೆ ನೆಗೆಟಿವ್ ವರದಿ ಬಂದಿತ್ತು. ಆ ಬಳಿಕ ಏಪ್ರಿಲ್‍ನಲ್ಲಿ 2ನೇ ಬಾರಿ ಟ್ರಂಪ್‍ಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.

  • ಟ್ರಂಪ್ ಭೇಟಿಯಾದ ಬಿಎಸ್‍ವೈ

    ಟ್ರಂಪ್ ಭೇಟಿಯಾದ ಬಿಎಸ್‍ವೈ

    ನವದೆಹಲಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದಾರೆ.

    ಭಾರತದ ಪ್ರವಾಸದ ಎಲ್ಲಾ ಕಾರ್ಯಕ್ರಮಗಳನ್ನು ಮುಗಿಸಿ ರಾಷ್ಟ್ರಪತಿ ಭವನದ ಔತಣಕೂಟಕ್ಕೆ ಆಗಮಿಸಿದ ಟ್ರಂಪ್ ದಂಪತಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದಂಪತಿ ಆತ್ಮೀಯವಾಗಿ ಆಮಂತ್ರಿಸಿದ್ದರು. 8 ಗಂಟೆಗೆ ನಿಗದಿಯಾಗಿದ್ದ ಔತಣಕೂಟಕ್ಕೆ 20 ನಿಮಿಷ ಮುಂಚಿತವಾಗಿಯೇ ಅಮೆರಿಕದ ಅಧ್ಯಕ್ಷರು ಆಗಮಿಸಿದ್ದರು. ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದ ಬಗ್ಗೆ ಕೋವಿಂದ್ ಅವರೇ ಮಾಹಿತಿ ನೀಡಿದರು.

    ಈ ಔತಣಕೂಟದಲ್ಲಿ ಟ್ರಂಪ್ ಅವರಿಗೆ ಸಿಎಂ ಯಡಿಯೂರಪ್ಪ ಹಸ್ತಲಾಘವ ಮಾಡಿದರು. ಟ್ರಂಪ್ ಸ್ವಾಗತಕ್ಕಾಗಿ ಇಡೀ ರೈಸಿನಾ ಹಿಲ್ ಸಂಪೂರ್ಣ ವರ್ಣರಂಜಿತವಾಗಿತ್ತು. ಇದಕ್ಕೂ ಮುನ್ನ ಬೆಳಗ್ಗೆ 10 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕವಾಗಿ ಔಪಚಾರಿಕ ಸ್ವಾಗತ ನೀಡಲಾಗಿತ್ತು.

    ಟ್ರಂಪ್ ಅವರಿಗೆ ಸೇನಾ ಪಡೆಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಈ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಜೈಶಂಕರ್ ಹಾಗೂ ಮೂರು ಪಡೆಗಳ ಮುಖ್ಯಸ್ಥರು ಹಾಜರಾಗಿದ್ದರು. ಇವಾಂಕಾ ದಂಪತಿ ಸೇರಿದಂತೆ ಅಮೆರಿಕದ ನಿಯೋಗವೂ ಉಪಸ್ಥಿತಿ ಇತ್ತು. ಬಳಿಕ ರಾಜಘಾಟ್‍ನತ್ತ ಪಯಣಿಸಿದ ಟ್ರಂಪ್, ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಭಾರತೀಯರ ಜೊತೆ ಅಮೆರಿಕನ್ನರು ದೃಢವಾಗಿ ನಿಲ್ಲುತ್ತೆ ಅಂತ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದರು.

  • ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ಹಸ್ತಲಾಘವ, ಅಪ್ಪುಗೆ, ಆತ್ಮೀಯತೆ- ನೀವು ನಿದ್ದೆಯಲ್ಲಿದ್ದಾಗ ಮೋದಿ ಟ್ರಂಪ್ ಭೇಟಿ ವೇಳೆ ನಡೆದಿದ್ದೇನು?

    ವಾಷಿಂಗ್ಟನ್: ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ವೈಟ್ ಹೌಸ್‍ನಲ್ಲಿ ಭೇಟಿ ಮಾಡಿದ್ರು. ಅವರು ವೈಟ್‍ಹೌಸ್‍ನಲ್ಲಿ ಭೇಟಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ರೂ ಇಬ್ಬರ ನಡುವೆ ಇದ್ದ ಆತ್ಮೀಯತೆಯ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗ್ತಿದೆ.

    ಪೋರ್ಚುಗಲ್, ಅಮೆರಿಕ ಹಾಗೂ ನೆದರ್ಲೆಂಡ್ಸ್ ದೇಶಗಳ ಪ್ರವಾಸದ ಭಾಗವಾಗಿ ಮೋದಿ ಟ್ರಂಪ್ ಅವರನ್ನ ವೈಟ್‍ಹೌಸ್‍ನಲ್ಲಿ ಭೇಟಿ ಮಾಡಿದ್ರು. ಟ್ರಂಪ್ ಹಾಗೂ ಅಮೆರಿಕದ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಮೋದಿಯವರನ್ನ ಸ್ವಾಗತಿಸಿ ವೈಟ್‍ಹೌಸ್‍ಗೆ ಬರಮಾಡಿಕೊಂಡ್ರು.

    ಮೋದಿ ಮೆಲಾನಿಯಾ ಟ್ರಂಪ್‍ಗೆ ಕಾಶ್ಮೀರಿ ಶಾಲ್, ಕಾಂಗ್ರಾ ಕಣಿವೆಯ ಟೀ, ಜೇನುತುಪ್ಪ, ಹಾಗೂ ಬೆಳ್ಳಿಯ ಬ್ರೇಸ್‍ಲೆಟ್ ಉಡುಗೊರೆಯಾಗಿ ನೀಡಿದ್ದಾರೆ. ಇನ್ನು ಟ್ರಂಪ್ ಅವರಿಗಾಗಿ ಪಂಜಾಬ್‍ನ ಹೊಶಿಯಾರ್‍ಪುರ್‍ನ ವಿಶೇಷತೆಯಾದ ಸುಂದರವಾದ ಕೆತ್ತನೆಯುಳ್ಳ ಮರದ ಪೆಟ್ಟಿಗೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಇದರೊಂದಿಗೆ ಅಬ್ರಹಂ ಲಿಂಕನ್ ಅವರ ಸ್ಮರಣೆಗಾಗಿ 1965ರಲ್ಲಿ ವಿತರಿಸಲಾಗಿದ್ದ ಪೋಸ್ಟಲ್ ಸ್ಟ್ಯಾಂಪ್ ಕೂಡ ಉಡುಗೊರೆಯಾಗಿ ನೀಡಿದ್ದಾರೆ.

    ನಂತರ ಮೋದಿ ಹಾಗೂ ಟ್ರಂಪ್ ಉನ್ನತ ಮಟ್ಟದ ಮಾತುಕತೆಗಾಗಿ ಕ್ಯಾಬಿನೆಟ್ ರೂಮಿಗೆ ಹೋಗಿ ಚರ್ಚೆ ನಡೆಸಿದ್ರು. ಈ ವೇಳೆ ಟ್ರಂಪ್ ಅಮೆರಿಕದಿಂದ ಭಾರತ ಸೇನಾ ಸಲಕರಣೆಗಳನ್ನ ಕೊಳ್ಳುತ್ತಿರುವುದಕ್ಕೆ ಧನ್ಯವಾದ ತಿಳಿಸಿದ್ರು. ಇತ್ತೀಚೆಗೆ ಟಾಟಾ ಹಾಗೂ ಲಾಕ್‍ಹೀಡ್ ಮಾಟಿರ್ನ್ ನಡುವೆ ಭಾರತದಲ್ಲಿ ಎಫ್-16 ಫೈಟರ್ ಜೆಟ್‍ಗಳ ಉತ್ಪಾದನೆಗೆ ಒಪ್ಪಂದವಾಗಿತ್ತು.

    ನಂತರ ಮೋದಿ ಟ್ರಂಪ್ ಜೋಡಿ ಮಾಧ್ಯಮಗಳನ್ನ ಉದ್ದೇಶಿಸಿ ಮಾತನಾಡಿದ್ರು. ವೈಟ್‍ಹೌಸ್‍ನಲ್ಲಿ ಭಾರತಕ್ಕೆ ನಿಜವಾದ ಸ್ನೇಹಿತನಿದ್ದಾನೆ ಎಂದು ಟ್ರಂಪ್ ಪುನರುಚ್ಛರಿಸಿದ್ರು. ಟ್ರಂಪ್ ಹೇಳಿಕೆಯ ಕೊನೆಯಲ್ಲಿ ಮೋದಿ ಟ್ರಂಪ್ ಅವರನ್ನ ತಬ್ಬಿಕೊಂಡು ಹಸ್ತಲಾಘವ ಮಾಡಿದ್ರು. ಸಾಮಾನ್ಯವಾಗಿ ಟ್ರಂಪ್ ವಿವಿಧ ದೇಶಗಳ ನಾಯಕರೊಂದಿಗೆ ಹಸ್ತಲಾಘವ ಮಾಡುವಾಗ ವಿಚಿತ್ರವಾಗಿ ಮಾಡುತ್ತಾರೆ ಎಂದು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ಮೋದಿ ತಬ್ಬಿಕೊಂಡಿದ್ದು ಒಂದು ಮಾಸ್ಟರ್‍ಸ್ಟ್ರೋಕ್ ಅಂತ ಮಾಧ್ಯಮಗಳು ವರದಿ ಮಾಡಿವೆ.

    ನಂತರ ಮೋದಿ ಮಾತನಾಡಿ ಭಯೋತ್ಪಾದನೆಯ ವಿರುದ್ಧದ ಹೋರಾಟವೇ ಮೊದಲ ಆದ್ಯತೆ ಅಂದ್ರು. ಕೊನೆಗೆ ಟ್ರಂಪ್ ಅವರಿಗೆ ಕುಟುಂಬದೊಂದಿಗೆ ಭಾರತಕ್ಕೆ ಭೇಟಿ ನೀಡಿ ಎಂದು ಆಹ್ವಾನಿಸಿದ್ರು.

    ಇನ್ನು ವೈಟ್‍ಹೌಸ್‍ನಲ್ಲಿ ಮೋದಿಗೆ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಮೂಲಕ ಮೋದಿ ವೈಟ್‍ಹೌಸ್‍ನಲ್ಲಿ ಟ್ರಂಪ್‍ರಿಂದ ಔತಣ ಕೂಟ ಪಡೆದ ಮೊದಲ ವಿದೇಶಿ ಗಣ್ಯರೆನಿಸಿಕೊಂಡ್ರು.

    ಇನ್ನು ಮೋದಿ ವೈಟ್‍ಹೌಸ್‍ನಿಂದ ಹೊರಡುವಾಗ ಮತ್ತೊಮ್ಮೆ ಟ್ರಂಪ್‍ರನ್ನ ತಬ್ಬಿಕೊಂಡ್ರು.