Tag: Mekedatu Padyatra

  • ರಾಜ್ಯ ಸರ್ಕಾರದ ಆದೇಶಕ್ಕೆ ಡಿಕೆಶಿ ಮೌನ

    ರಾಜ್ಯ ಸರ್ಕಾರದ ಆದೇಶಕ್ಕೆ ಡಿಕೆಶಿ ಮೌನ

    ಬೆಂಗಳೂರು: ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಯಲ್ಲಿ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ರಾಜ್ಯ ಸರ್ಕಾರದ ಆದೇಶದ ಕುರಿತಾಗಿ ಮೌನವಾಗಿದ್ದಾರೆ.

    ಪಬ್ಲಿಕ್‌ ಟಿವಿ ವರದಿಗಾರರು ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ  ಹೇರಿರುವ ಕುರಿತಾಗಿ ಕೇಳಿದಾಗ, ಡಿ.ಕೆ ಶಿವಕುಮಾರ್‌ ಅವರು ಆದೇಶದ ಕಾಪಿ ತೋರಿಸಿ ಎಂದು ಹೇಳಿದ್ದಾರೆ. ಆರ್ಡರ್ ಕಾಪಿಯನ್ನು ನೋಡಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇದನ್ನೂ ಓದಿ: ಪಾದಯಾತ್ರೆ ಕುರಿತು ನ್ಯಾಯಾಲಯ ನೀಡುವ ಆದೇಶವನ್ನು ಪಾಲನೆ ಮಾಡುತ್ತೇವೆ: ಸಿದ್ದರಾಮಯ್ಯ

    ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ರಾಜ್ಯ ಸರ್ಕಾರ ಕಾಂಗ್ರೆಸ್ ನಡೆಸುತ್ತಿದ್ದ ಮೇಕೆದಾಟು ಪಾದಯಾತ್ರೆಗೆ ನಿರ್ಬಂಧ ಹೇರಿದೆ. ಪಾದಯಾತ್ರೆಯನ್ನು ತಕ್ಷಣ ನಿಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ. ಒಂದು ವೇಳೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ.  ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆಯನ್ನು ನಿಲ್ಲಿಸಬೇಕು ಎಂದು ರಾಮನಗರ ಎಸ್‌ಪಿ, ಡಿಸಿಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಮೇಕೆದಾಟು ಪಾದಯಾತ್ರೆಗೆ ಅನುಮತಿ ಕೊಟ್ಟಿಲ್ಲದಿದ್ದರೆ ತಡೆಯಲು ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿ ಛೀಮಾರಿ ಹಾಕಿತ್ತು. ಈ ಬೆನ್ನಲ್ಲೇ ಸರ್ಕಾರ ನಿರ್ಧಾರವನ್ನು ತೆಗೆದುಕೊಂಡಿದೆ.

    ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಕಾಂಗ್ರೆಸ್ ಆಯೋಜಿಸಿದೆ. ಈ ಪಾದಯಾತ್ರೆಯಿಂದ ಕೊರೊನಾ ಮತ್ತಷ್ಟು ಹೆಚ್ಚಳವಾಗಲಿದೆ. ಈ ಪಾದಯಾತ್ರೆಯನ್ನು ಕೈಗೊಂಡವರ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಪಿಐಎಲ್ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಆರಂಭದಲ್ಲೇ ಪ್ರಶ್ನಿಸಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿತು. ಈ ಬೆನ್ನಲ್ಲೆ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಇದನ್ನೂ ಓದಿ:  ಕಾಂಗ್ರೆಸ್ ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸಿ- ಸರ್ಕಾರ ಆದೇಶ

  • ಪಾದಯಾತ್ರೆ ಕುರಿತು ನ್ಯಾಯಾಲಯ ನೀಡುವ ಆದೇಶವನ್ನು ಪಾಲನೆ ಮಾಡುತ್ತೇವೆ: ಸಿದ್ದರಾಮಯ್ಯ

    ಪಾದಯಾತ್ರೆ ಕುರಿತು ನ್ಯಾಯಾಲಯ ನೀಡುವ ಆದೇಶವನ್ನು ಪಾಲನೆ ಮಾಡುತ್ತೇವೆ: ಸಿದ್ದರಾಮಯ್ಯ

    ಬೆಂಗಳೂರು: ಪಾದಯಾತ್ರೆ ಮುಂದುವರಿಸಬೇಕೋ ಅಥವಾ ಬೇಡವೋ ಎಂದು ನ್ಯಾಯಾಲಯ ನೀಡುವ ಆದೇಶವನ್ನು ನಾವು ಪಾಲನೆ ಮಾಡುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಗೆ ಸಂಬಂಧಿಸಿದ ಮೊಕದ್ದಮೆಯ ವಿಚಾರಣೆ 14ನೇ ತಾರೀಖು ನಡೆಯಲಿದೆ. ನಾಳೆ ಪಾದಯಾತ್ರೆ ಮಾಡಲು ತೊಂದರೆ ಇಲ್ಲ. ಹೀಗಾಗಿ ನಾಳೆ ಪಾದಯಾತ್ರೆ ಮಾಡುತ್ತೇವೆ. ಒಂದು ವೇಳೆ ನ್ಯಾಯಾಲಯ ಪಾದಯಾತ್ರೆ ನಿಲ್ಲಿಸುವಂತೆ ಆದೇಶಿಸಿದರೆ ಅದನ್ನು ಗೌರವಿಸಿ, ಪಾಲಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನರಿಗೆ ಹಣ ಕೊಟ್ಟು ಕರೆಸಿಕೊಂಡು ನಡೆಸುತ್ತಿರುವ ಈ ಜಾತ್ರೆಯಿಂದ ಮೇಕೆದಾಟು ಸಾಕಾರ ಅಸಾಧ್ಯ: ಎಚ್‍ಡಿಕೆ

    ಪಾದಯಾತ್ರೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆಯಾ ಎಂದು ಕೋರ್ಟ್ ಸರ್ಕಾರವನ್ನು ಪ್ರಶ್ನೆ ಮಾಡಿದೆ, ನ್ಯಾಯಾಲಯದ ಪ್ರಶ್ನೆಗೆ ಸರ್ಕಾರ ಉತ್ತರ ನೀಡುತ್ತದೆ. ಪಾದಯಾತ್ರೆ, ಪ್ರತಿಭಟನೆ ಮಾಡುವಾಗ ಸರ್ಕಾರದ ಅನುಮತಿ ಪಡೆದು ಮಾಡಲ್ಲ, ಸರ್ಕಾರದ ಗಮನಕ್ಕೆ ತಂದು ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ನ್ಯಾಯಾಲಯದ ಆದೇಶ ಏನು ಬರುತ್ತೋ ಕಾದು ನೋಡೋಣ. ಏನೇ ಆದೇಶ ಬಂದರು ಅದನ್ನು ಉಲ್ಲಂಘನೆಯಂತೂ ಖಂಡಿತಾ ಮಾಡಲ್ಲ ಎಂದಿದ್ದಾರೆ. ಇದನ್ನೂ ಓದಿ: ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

  • ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ, ಯಾರು ಬೇಡ ಅಂತಾರೆ: ಈಶ್ವರಪ್ಪ

    ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ, ಯಾರು ಬೇಡ ಅಂತಾರೆ: ಈಶ್ವರಪ್ಪ

    -ಡಿಕೆಶಿಗೆ ಸರ್ಕಾರದ ಬಗ್ಗೆ ಗೌರವವೇ ಇಲ್ಲ

    ಶಿವಮೊಗ್ಗ : ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರನ್ನು ಸೇರಿಸಿಕೊಂಡು ಪಾದಯಾತ್ರೆ ನಡೆಸಬೇಡಿ ಎಂದು ಸರ್ಕಾರ ಕಾಂಗ್ರೆಸ್‌ನವರಿಗೆ ಹೇಳುತ್ತಲೇ ಇದೆ. ಆದರೆ ಅವರು ಪಾದಯಾತ್ರೆ ನಡೆಸುತ್ತಲೇ ಇದ್ದಾರೆ. ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ ನಿಮಗೆ ಯಾರು ಬೇಡ ಅಂತಾರೆ. ಆದರೆ ಸದ್ಯಕ್ಕೆ ಪಾದಯಾತ್ರೆ ನಿಲ್ಲಿಸಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಮನವಿ ಮಾಡಿದ್ದಾರೆ.

    ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಂತಹವರು, ಡಿಕೆಶಿ ಮಂತ್ರಿ ಆಗಿದ್ದವರು. ಸರ್ಕಾರ ನಡೆಸಿದವರೇ ಈ ರೀತಿ ಕೋವಿಡ್ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದರೆ ಹೇಗೆ?. ಮೇಕೆದಾಟು ಯೋಜನೆ ಆದಷ್ಟು ಬೇಗ ಜಾರಿಗೆ ತರಲು ಸರ್ಕಾರ ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡಲಿದೆ ನಿಮ್ಮ ಹೋರಾಟ ನಿಲ್ಲಿಸಿ ಎಂದರು. ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ 35ಕ್ಕೂ ಹೆಚ್ಚು ಕೈ ಮುಖಂಡರ ವಿರುದ್ಧ FIR ದಾಖಲು

    ಪಾದಯಾತ್ರೆ ಆರಂಭದ ದಿನದಲ್ಲಿದ್ದ ಕಾರ್ಯಕರ್ತರು ಈಗ ಕಾಣಿಸುತ್ತಿಲ್ಲ. ಅವರೆಲ್ಲಾ ಈಗಾಗಲೇ ಅವರವರ ಊರಿಗೆ ತೆರಳಿದ್ದಾರೆ. ಊರಿಗೆ ಹೋಗಿ ಅಲ್ಲೆಲ್ಲಾ ಕೋವಿಡ್ ಹರಡುತ್ತಿದ್ದಾರೆ. ನಿಮ್ಮ ರಾಜಕೀಯ ತೆವಲು ತೀರಿಸಿಕೊಳ್ಳಲು ಗ್ರಾಮೀಣ ಭಾಗದ ಅಮಾಯಕ ಜನರು ಕೊರೊನಾ ಅನುಭವಿಸಬೇಕಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು

    ಕೋವಿಡ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಬಗ್ಗೆ ತಜ್ಣರು ಸಲಹೆ ನೀಡುವ ಜೊತೆಗೆ ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ಆದರೆ ಡಿಕೆಶಿ ಅವರು ಇದು ಸುಳ್ಳು ಅಂಕಿ ಅಂಶ ಎನ್ನುತ್ತಿದ್ದಾರೆ. ಮುಂದೆ ಮುಖ್ಯಮಂತ್ರಿ ಆಗಬೇಕು ಎಂಬ ಕನಸು ಕಾಣುತ್ತಿರುವ ವ್ಯಕ್ತಿ ಸರ್ಕಾರದ ನೀಡುವ ಅಂಕಿ ಅಂಶ ಸುಳ್ಳು ಎನ್ನುತ್ತಾರೆ. ಇವರಿಗೆ ಸರ್ಕಾರದ ಬಗ್ಗೆ ಗೌರವವೇ ಇಲ್ಲ. ಹಾಗಾದರೆ ನಿಮ್ಮ ಸರ್ಕಾರ ಇದ್ದಾಗ ನೀಡಿದ ಅಂಕಿ ಅಂಶಗಳು ಸುಳ್ಳಾ? ಸ್ವತಂತ್ರ ಬಂದ ನಂತರ ಕಾಂಗ್ರೆಸ್ ಎಷ್ಟು ವರ್ಷ ಅಧಿಕಾರ ನಡೆಸಿದೆ. ಹಾಗೆಲ್ಲಾ ನೀಡಿದ ಅಂಕಿ ಅಂಶಗಳು ಸುಳ್ಳಾ? ನಾನು ಸರ್ಕಾರವನ್ನು ನಂಬಿರುವವನು ಈಗಾಗಿ ನಿಮ್ಮ ಸರ್ಕಾರ ನೀಡಿದ್ದ ಅಂಕಿ ಅಂಶ ಸುಳ್ಳು ಅಂತಾ ಹೇಳುವುದಿಲ್ಲ. ಸರ್ಕಾರದ ಅಂಕಿ ಅಂಶ ಸುಳ್ಳು ಅಂತಾ ಹೇಳಿರುವ ಡಿಕೆಶಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು. ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

  • ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ 35ಕ್ಕೂ ಹೆಚ್ಚು ಕೈ ಮುಖಂಡರ ವಿರುದ್ಧ FIR ದಾಖಲು

    ಮೇಕೆದಾಟು ಪಾದಯಾತ್ರೆಗೆ ತೆರಳಿದ್ದ 35ಕ್ಕೂ ಹೆಚ್ಚು ಕೈ ಮುಖಂಡರ ವಿರುದ್ಧ FIR ದಾಖಲು

    ಚಾಮರಾಜನಗರ: ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Padayatra) ಪಾಲ್ಗೊಳ್ಳಲು ಚಾಮರಾಜನಗರ ಜಿಲ್ಲೆಯಿಂದ ಹೋಗಿದ್ದ 35ಕ್ಕೂ ಹೆಚ್ಚು ಕೈ ಮುಖಂಡರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ನಿನ್ನೆ ನೂರಾರು ಕಾರ್ಯಕರ್ತರೊಂದಿಗೆ ಬಸ್‍ಗಳಲ್ಲಿ ಕನಕಪುರಕ್ಕೆ ತೆರಳಿದ್ದ ಕೈ ಮುಖಂಡರು ವಿರುದ್ಧ ಚಾಮರಾಜನಗರ ಗ್ರಾಮಾಂತರ ಹಾಗೂ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಡಿಕೆಶಿ, ಸಿದ್ದು ಸೇರಿ 30 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

    ಐಪಿಸಿ ಸೆಕ್ಷನ್ 269, 188, ಪ್ರಕೃತಿ ವಿಕೋಪ ನಿರ್ವಹಣಾ ಅಧಿನಿ 51(B), ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧಿನಿಯಮ 5(1)ದಂತೆ ಜಿಲ್ಲಾ ಪಂಚಾಯತ್ ಸದಸ್ಯ ಕೆರೆಹಳ್ಳಿ ನವೀನ್, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ಸೇರಿದಂತೆ 35 ಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸೋಮವಾರ ಬೆಳಗ್ಗೆ ತಪಾಸಣೆ ವೇಳೆ ಸಾಮಾಜಿಕ ಅಂತರ ಇಲ್ಲದೆ, ಮಾಸ್ಕ್ ಧರಿಸದೆ, ಅಕ್ರಮ ಗುಂಪು ಸೇರಿ ಸಂಚಾರ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎಂಬ ಕೂಗು

  • ಡಿಕೆಶಿ, ಸಿದ್ದು ಸೇರಿ 30 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

    ಡಿಕೆಶಿ, ಸಿದ್ದು ಸೇರಿ 30 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

    ರಾಮನಗರ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ವಿರೋಧ ಪಕ್ಷದ ಉಪನಾಯಕ ಸಿದ್ದರಾಮಯ್ಯ ಸೇರಿ 30 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ಕೋವಿಡ್‌ ಸೋಂಕು ನಿಯಂತ್ರಣದ ಉದ್ದೇಶದಿಂದ ಸರ್ಕಾರ ರಾಜ್ಯದಲ್ಲಿ ಎಲ್ಲ ಪ್ರತಿಭಟನೆ, ಪಾದಯಾತ್ರೆಯನ್ನು ನಿಷೇಧಿಸಿದೆ. ಹೀಗಿದ್ದರೂ ವೀಕೆಂಡ್‌ ಕರ್ಫ್ಯೂ ವೇಳೆ ಮೇಕೆದಾಟು ಪಾದಯಾತ್ರೆ ಕೈಗೊಂಡಿದ್ದಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್‌ಡಿಎಂಎ) ಕಾಯ್ದೆಯ ಅಡಿಯಲ್ಲಿ ಸಾತನೂರು ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ವೀಕೆಂಡ್‌ ಕರ್ಫ್ಯೂ ವೇಳೆ ಪಾದಯಾತ್ರೆ ಕೈಗೊಂಡಿದ್ದಕ್ಕೆ ಜನರಿಂದ ವ್ಯಾಪಕ ಟೀಕೆ ಕೇಳಿ ಬಂದಿತ್ತು. ಸಾಮಾನ್ಯ ಜನರು ರಸ್ತೆಗೆ ಬಂದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪಾದಯಾತ್ರೆ ಮಾಡಿದವರ ಮೇಲೆ ಕ್ರಮ ಯಾಕಿಲ್ಲ ಎಂದು ಜನರು ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದನ್ನೂ ಓದಿ: ಮೇಕೆದಾಟು ನಡಿಗೆ ನೀರಿಗಾಗಿ, ಎರಡೂವರೆ ಕೋಟಿ ಜನರ ಬದುಕಿಗಾಗಿ: ಡಿಕೆಶಿ

  • ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ

    ರಾಮನಗರ: ಕೋವಿಡ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಆರೋಗ್ಯ ಅಧಿಕಾರಿಯ ಮೇಲೆಯೇ ಗರಂ ಆದ ಪ್ರಸಂಗ ನಡೆದಿದೆ.

    ಮೊದಲ ದಿನದ ಪಾದಯಾತ್ರೆಯ ಬಳಿಕ ಕನಕಪುರದ ದೊಡ್ಡಾಲಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಡಿಕೆಶಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಆರೋಗ್ಯ ಅಧಿಕಾರಿಗಳು, ಸರ್‌ ರ‍್ಯಾಂಡಮ್‌ ಟೆಸ್ಟ್‌ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಯಕತ್ವಕ್ಕಾಗಿ ಡಿಕೆಶಿಯಿಂದ ಪಾದಯಾತ್ರೆ ಡ್ರಾಮಾ: ಕಟೀಲ್

    ಇದಕ್ಕೆ ಗರಂ ಆದ ಡಿಕೆಶಿ, ನಾನು ಫಿಟ್‌ ಆಂಡ್‌ ಫೈನ್‌ ಆಗಿದ್ದೇನೆ. ಈಗ ಪಾದಯಾತ್ರೆ ಮಾಡಿದ್ದು ನನ್ನ ಆರೋಗ್ಯ ಚೆನ್ನಾಗಿದೆ. ಸರ್ಕಾರ ಪಾದಯಾತ್ರೆ ನಿಲ್ಲಿಸಲು ಮಾಡಿರುವ ಷಡ್ಯಂತ್ರ ಎಂದು ಹೇಳಿ ಆರೋಗ್ಯ ಅಧಿಕಾರಿಗಳ ಮೇಲೆಯೇ ಸಿಟ್ಟು ಹೊರ ಹಾಕಿದರು.

    ರಾತ್ರಿ ಶಿವಕುಮಾರ್ ಸ್ವಗ್ರಾಮ ದೊಡ್ಡಾಲಹಳ್ಳಿಯಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿ, ನಾನು ಈ ಗಡ್ಡ ಬಿಟ್ಟಿದ್ದು ತಿಹಾರ್ ಜೈಲಿನಲ್ಲಿ. ಈ ಗಡ್ಡಕ್ಕೆ ನೀವೇ ಮುಕ್ತಿ ಕೊಡಬೇಕು.  ನಾನು ಮತ ಕೇಳಲು ಬರುವುದಿಲ್ಲ. ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಮತ್ತೆ ಜೈಲಿಗೆ ಕಳುಹಿಸುವ ಹುನ್ನಾರ ನಡೆಯುತ್ತಿದೆ. ತಾಕತ್ತಿದ್ದರೆ ಪೊಲೀಸರು ಕೇಸ್ ಹಾಕಲಿ. ಸಿಎಂ ಬೊಮ್ಮಾಯಿಯವರೇ ನಮ್ಮನ್ನು ಜೈಲಿಗೆ ಕಳಿಸಿ ನೀವು ಹಾಲು ಕುಡಿಯಿರಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸರ್ಕಾರ ಬದುಕಿದ್ಯಾ, ಸತ್ತಿದ್ಯಾ ಅನ್ನೋದನ್ನ ತೋರಿಸ್ತೀವಿ: ಸಚಿವ ಸುಧಾಕರ್

    ಎರಡನೇ ದಿನದ ಪಾದಯಾತ್ರೆ:
    ಎರಡನೇ ದಿನ ಬೆಳಗ್ಗೆ 8:30ಕ್ಕೆ ದೊಡ್ಡಾಲಹಳ್ಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. ಇಂದು ಒಟ್ಟು 16 ಕಿಲೋ ಮೀಟರ್ ಪಾದಯಾತ್ರೆ ನಡೆಯಲಿದೆ. ಮೊದಲಾರ್ಧ 8 ಕಿ.ಮೀ. ಪಾದಯಾತ್ರೆ ನಡೆಯಲಿದೆ. ಮಧ್ಯಾಹ್ನ ಮಾದಪ್ಪನ ದೊಡ್ಡಿ, ಕರಿಯಣ್ಣ ದೊಡ್ಡಿಯಲ್ಲಿ ಭೋಜನ ವಿರಾಮದ ಬಳಿಕ 8 ಕಿ.ಮೀ. ಪಾದಯಾತ್ರೆ ನಡೆದು ಸಂಜೆ ಕನಕಪುರದಲ್ಲಿ ಮುಕ್ತಯವಾಗಲಿದೆ. ಇಲ್ಲೇ ರಾತ್ರಿ ಸಭೆ ನಡೆಯಲಿದೆ.


    ಭಾಗಿಯಾಗುತ್ತಿಲ್ಲ  ಸಿದ್ದರಾಮಯ್ಯ:
    ಮೊದಲ ದಿನದದ ಪಾದಯಾತ್ರೆ ವೇಳೆ ಸಿದ್ದರಾಮಯ್ಯಗೆ ಕೊಂಚ ಸುಸ್ತು ಕಾಡಿತ್ತು. ಕೊರೊನಾ ಬೂಸ್ಟರ್ ಡೋಸ್ ಪಡೆದಿದ್ದ ಸಿದ್ದರಾಮಯ್ಯಗೆ ಸಹಜವಾಗಿ ಮೈಕೈ ನೋವು, ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಸಂಗಮದಿಂದ ಬೆಂಗಳೂರಿಗೆ ವೈದ್ಯರ ಸಲಹೆ ಮೇರೆಗೆ ವಾಪಸಾಗಿದ್ದರು. ಇಂದು ಪಾದಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಆರಂಭದಲ್ಲಿ ಸಿಕ್ಕಿತ್ತು. ಆದರೆ ವೈದ್ಯರ ಸಲಹೆಯಂತೆ ಮನೆಯಲ್ಲೇ ಸಿದ್ದರಾಮಯ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ.

  • ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ರೈತ ಗೀತೆ ಮೂಲಕ ಮೇಕೆದಾಟು ಪಾದಯಾತ್ರೆಗೆ ಕಾಂಗ್ರೆಸ್‌ ಚಾಲನೆ

    ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಗೆ ರೈತ ಗೀತೆ ಮೂಲಕವಾಗಿ ಚಾಲನೆ ನೀಡಲಾಗಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದೆ. ಕೈ ನಾಯಕರು ಮೊದಲ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮಾಡಲಿದ್ದಾರೆ. ಸಂಗಮದಿಂದ ದೊಡ್ಡ ಆಲಹಳ್ಳಿಯವರೆಗೂ ಈ ಪಾದಯಾತ್ರೆ ನಡೆಯಲಿದೆ. ಇದನ್ನೂ ಓದಿ:  ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ


    ಇಂದಿನಿಂದ ಜನವರಿ 18ರವರೆಗೆ ಪಾದಯಾತ್ರೆ ನಡೆಯಲಿದೆ. ನಮ್ಮ ನೀರು ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಆರಂಭಿಸಿದೆ. ಸಂಜೆಯ ವೇಳೆಗೆ ಕನಕಪುರವನ್ನು ತಲುಪಲಿದ್ದಾರೆ.

    ಮೇಕೆದಾಟು ಪಾದಯಾತ್ರೆ ಸಂಗಮದಲ್ಲಿ ಕೊರೊನಾ ರೂಲ್ಸ್ ದೊಡ್ಡ ಮಟ್ಟದಲ್ಲಿ ಉಲ್ಲಂಘನೆಯಾಗಿದೆ. ಕರ್ಫ್ಯೂ ನಿಯಮ ಮೀರಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಜನ ಸೇರಿದ್ದಾರೆ. ಕೊರೊನಾ ರೂಲ್ಸ್ ಪಾಲನೆ ಮಾಡುತ್ತೇವೆ ಅಂತ ಕಾಂಗ್ರೆಸ್ ಹೇಳಿತ್ತು. ನಿಯಮ ಮೀರಿ ಸಾವಿರಾರು ಜನ ಸಂಗಮದಲ್ಲಿ  ಜಮಾಯಿಸಿದ್ದಾರೆ

    ರಾಜ್ಯ, ಬೆಂಗಳೂರಿನ ಜನ ಹಿತಕ್ಕಾಗಿ ಈ ಪಾದಯಾತ್ರೆ ಮಾಡ್ತಿದ್ದೇವೆ. ನಾವು 2 ತಿಂಗಳ ಹಿಂದೆಯೇ ಪಾದಯಾತ್ರೆ ಘೋಷಣೆ ಮಾಡಿದ್ದೆವು. ಪಾದಯಾತ್ರೆ ಮಾಡಬಾರದು ಅಂತ ಕರ್ಫ್ಯೂ ಹಾಕಿದ್ದಾರೆ. ಕಾನೂನು ಭಂಗ ಮಾಡದೇ ಪಾದಯಾತ್ರೆ ಮಾಡುತ್ತೇವೆ ಎಂದು ಕನಕಪುರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

    ಮೇಕೆದಾಟು ಪಾದಯಾತ್ರೆ ಯೋಜನೆಯ ವಿವರ ಇಲ್ಲಿದೆ: 
    ಜನವರಿ 9 ರಂದು ಬೆಳಿಗ್ಗೆ 8-30ಕ್ಕೆ ಸಂಗಮದಲ್ಲಿ ಪಾದಯಾತ್ರೆ ಉದ್ಘಾಟನೆಯಾಗಿದೆ. ಮಧ್ಯಾಹ್ನ 1ಕ್ಕೆ ಹೆಗ್ಗನೂರು ತಲುಪಲಿದೆ. ಹೆಗ್ಗನೂರಿನಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ದೊಡ್ಡಆಲಹಳ್ಳಿ ತಲುಪಲಿರುವ ನಾಯಕರು, ಅಂದು ದೊಡ್ಡಆಲಹಳ್ಳಿಯಲ್ಲೇ ಸಭೆ ಸೇರಿ ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 10ಕ್ಕೆ ದೊಡ್ಡಆಲಹಳ್ಳಿಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಾದಪ್ಪನದೊಡ್ಡಿ ತಲುಪಲಿದೆ. ಪಾದಯಾತ್ರೆ, ಮಧ್ಯಾಹ್ನ 1ಕ್ಕೆ ಮಾದಪ್ಪನದೊಡ್ಡಿ ,ಕರಿಯಣ್ಣನದೊಡ್ಡಿ ತಲುಪಲಿದೆ. ಇಲ್ಲಿಯೇ  ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕನಕಪುರಟೌನ್ ತಲುಪಲಿರುವ ನಾಯಕರು ಅಂದು ಕನಕಪುರಟೌನಲ್ಲೇ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 11ಕ್ಕೆ ಕನಕಪುರದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ಪಾದಯಾತ್ರೆ ತಲುಪಲಿದೆ. ಮಧ್ಯಾಹ್ನ 1ಕ್ಕೆ ಗಾಣಾಳು ವೀರಭದ್ರಸ್ವಾಮಿ ದೇವಸ್ಥಾನ ತಲುಪಲಿರುವ ಪಾದಯಾತ್ರೆ, ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಚಿಕ್ಕೇನಹಳ್ಳಿ ತಲುಪಲಿರುವ ಪಾದಯಾತ್ರೆ ಬಳಿಕ ಅಂದು ಚಿಕ್ಕೇನಹಳ್ಳಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 12ಕ್ಕೆ ಚಿಕ್ಕೇನಹಳ್ಳಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೃಷ್ಣಾಪುರದೊಡ್ಡಿ ಬಳಿ ಪಾದಯಾತ್ರೆ ತಲುಪಲಿದೆ.  ಕೃಷ್ಣಾಪುರದೊಡ್ಡಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ರಾಮನಗರ ಟೌನ್ ತಲುಪಲಿರುವ ಪಾದಯಾತ್ರೆ, ಅಂದು ರಾಮನಗರ ಟೌನ್‌ನಲ್ಲಿ ಸಭೆ,ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 13ಕ್ಕೆ ರಾಮನಗರ ಟೌನ್ ಬಳಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮಾಯಾಗಾನಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಪಾದಯಾತ್ರೆ ತಲುಪಲಿದೆ. ಮಾಯಾಗಾನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಬಿಡದಿ ತಲುಪಲಿರುವ ಪಾದಯಾತ್ರೆ, ಅಂದು ಬಿಡದಿಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 14ಕ್ಕೆ ಬಿಡದಿಯಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ರಾಜ್‍ಕುಮಾರ್ ಫಾರ್‍ಂ-ಮಂಚನಾಯಕನಹಳ್ಳಿಯನ್ನು ಪಾದಯಾತ್ರೆ ತಲುಪಲಿದೆ. ಮಂಚನಾಯಕನಹಳ್ಳಿಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬಳಿ ತಲುಪಲಿರುವ ಪಾದಯಾತ್ರೆ ಅಂದು ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಯಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 15ಕ್ಕೆ ಕೆಂಗೇರಿ (ಪೂರ್ಣಿಮಾ ಕನ್ವೆಷನ್ ಹಾಲ್) ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ವೆಂಕಟಾದ್ರಿ ಚೌಟ್ರಿ ಬನಶಂಕರಿ ತಲುಪಲಿರುವ ಪಾದಯಾತ್ರೆ ವೆಂಕಟಾದ್ರಿ ಚೌಟ್ರಿ ಯಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆಗೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ತಲುಪಲಿರುವ ಪಾದಯಾತ್ರೆ ಅಂದು ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 16ಕ್ಕೆ ಸಾರಕ್ಕಿ ಸಿಗ್ನಲ್ (ಸಿಂಧೂರ ಕನ್ವೆಷನ್ ಹಾಲ್) ನಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಕೋರಮಂಗಲ (ಮಂಗಳ ಕಲ್ಯಾಣ ಮಂಟಪ) ತಲುಪಲಿರುವ ಪಾದಯಾತ್ರೆ ಅಲ್ಲಿ ಭೋಜನ ನಂತರ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ ವೇಳೆ ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರ ತಲುಪಲಿರುವ ಪಾದಯಾತ್ರೆ ಅಂದು ಸುಬ್ರಮಣ್ಯಸ್ವಾಮಿ ಚೌಲ್ಟ್ರಿ ಲಕ್ಷ್ಮೀಪುರದಲ್ಲಿ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 17ಕ್ಕೆ ಸುಬ್ರಮಣ್ಯ ಚೌಟ್ರಿ ಲಕ್ಷ್ಮೀಪುರದಲ್ಲಿ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಎಎಸ್ ಕಲ್ಯಾಣ ಮಂಟಪ ತಲುಪಲಿರುವ ಪಾದಯಾತ್ರೆ ಸಂಜೆ ಮತ್ತೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಲಿದೆ. ಅಂದು ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪ ಸಭೆ, ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 18ಕ್ಕೆ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1ಕ್ಕೆ ಮೇಕ್ರಿ ಸರ್ಕಲ್ ಹತ್ತಿರದ ಗಾಯತ್ರಿ ವಿಹಾರದಲ್ಲಿ ಭೋಜನ ಬಳಿಕ ವಿಶ್ರಾಂತಿ ಪಡೆಯಲಿದ್ದಾರೆ. ಅರಮನೆ ಆವರಣದ ಗಾಯತ್ರಿ ವಿಹಾರದಲ್ಲೇ ನಾಯಕರು ವಾಸ್ತವ್ಯ ಮಾಡಲಿದ್ದಾರೆ.

    ಜನವರಿ 19ಕ್ಕೆ ರೇಸ್ ಕೋರ್ಸ್ ರಸ್ತೆಯಿಂದ ಬೆಳಿಗ್ಗೆ 8:30ಕ್ಕೆ ಉಪಹಾರದ ನಂತರ ಪಾದಯಾತ್ರೆ ಆರಂಭ ಆಗಲಿದೆ. ಮಧ್ಯಾಹ್ನ 1.30ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜ್ ತಲುಪಲಿರುವ ನಾಯಕರು, ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಸಲಿದ್ದಾರೆ.

  • ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

    ಮೇಕೆದಾಟು ಪಾದಯಾತ್ರೆಗೆ ಟಫ್‍ರೂಲ್ಸ್ ಅನ್ವಯ – ಬಿಜೆಪಿಯಿಂದ ಷಡ್ಯಂತ್ರ ಎಂದ ಕಾಂಗ್ರೆಸ್‌

    ಬೆಂಗಳೂರು: ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ಮೇಲೆ ಕೋವಿಡ್ ಕಾರ್ಮೋಡ ಆವರಿಸುತ್ತಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಏನೇ ನಿರ್ಧಾರ ಮಾಡಿದರೂ ಅದು ಕಾಂಗ್ರೆಸ್ ಪಾದಯಾತ್ರೆಗೂ ಅನ್ವಯಿಸುತ್ತೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

    ಕೋವಿಡ್ ಸ್ಫೋಟದ ಸಂದರ್ಭದಲ್ಲಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಮುಂದೂಡುವುದು ಒಳ್ಳೆಯದು. ವಿಪಕ್ಷವಾಗಿ ಹೋರಾಡಲು ಅವರಿಗೆ ಅವಕಾಶವಿದೆ. ಈಗ ಕೋವಿಡ್ ನಿಯಮ ಪಾಲಿಸಬೇಕೆಂದು ಕೋರುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಜನವರಿ 25ಕ್ಕೆ ಸುಪ್ರೀಂಕೋರ್ಟ್‍ನಲ್ಲಿ ಮೇಕೆದಾಟು ಅರ್ಜಿ ವಿಚಾರಣೆ


    ಸರ್ಕಾರದ ಲಾಕ್‍ಡೌನ್ ಮಾತಿನ ಹಿಂದೆ ರಾಜಕೀಯ ಷಡ್ಯಂತ್ರ್ಯವಿದೆ. ನಮ್ಮ ಹೋರಾಟ ತಡೆಯಲೆಂದೇ ಬಿಜೆಪಿಯವರು ಹೀಗೆ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ದೂಷಿಸಿದ್ದಾರೆ.  ಇದನ್ನೂ ಓದಿ: ರಾಮನಗರ ಶಾಂತಿಯ ಜಿಲ್ಲೆ, ಗೂಂಡಾ ರೀತಿಯ ವರ್ತನೆ ಮಾಡಿದ್ದು ತಪ್ಪು: ಎಚ್‍ಡಿಕೆ ಕಿಡಿ

    ನಮ್ ಮೇಲೆ ಕೇಸ್, ಜೈಲಿಗೆ ಹಾಕಿದರೂ ಚಿಂತೆಯಿಲ್ಲ. ನಾವಂತೂ ಈ ಪಾದಯಾತ್ರೆ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿಯ ಒಬ್ಬರ ಮೇಲೆ ಕೊರೊನಾ ನಿಯಮ ಪ್ರಕರಣ ದಾಖಲಾಗಿಲ್ಲ. ಆದರೆ ನಮ್ಮ ಮೇಲೆ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.