Tag: mekedatu padayatre

  • ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ: ಚೆಲುವರಾಯಸ್ವಾಮಿ

    ರಾಮನಗರ: ನಾವು ಯಾವುದೇ ಕಾರಣಕ್ಕೂ ಮೇಕೆದಾಟು ಪಾದಯಾತ್ರೆ ನಿಲ್ಲಿಸಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.

    ಕೆಂಗಲ್ ಆಂಜನೇಯಸ್ವಾಮಿ ದೇವಾಲಯದ ಬಳಿಯ ಕಲ್ಯಾಣ ಮಂಟಪದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಮಾಡುವ ಬದ್ಧತೆಯನ್ನು ರಾಜ್ಯ ಸರ್ಕಾರ ಕೊಡುತ್ತಿಲ್ಲ. ಕೋರ್ಟ್ ಸೂಚನೆ ಮಾಡಿರುವುದು ಅವರು ಇಲ್ಲಿಯವರೆಗೆ ಮಾಡಿರುವ ವರದಿಯನ್ನು ಕೇಳಿದೆ. ಆದರೆ ಇವರು ರಸ್ತೆಯಲ್ಲಿ ಬರುವ ವಾಹನಗಳನ್ನು ತಡೆಯುತ್ತಿದ್ದಾರೆ. ನಾವು ಕೋರ್ಟ್‍ಗೆ ಈ ಬಗ್ಗೆ ಅಭಿಪ್ರಾಯ ತಿಳಿಸುತ್ತೇವೆ ಅಂತಾ ಹೇಳಿದ್ದೇವೆ. ಆದರು ಇವರು ಪ್ರಜಾಪ್ರಭುತ್ವ ಸರ್ಕಾರದಲ್ಲಿ ಎಲ್ಲರನ್ನು ತಡೆಯುತ್ತಿದ್ದಾರೆ ಎಂದರು. ಇದನ್ನೂ ಓದಿ: ನಿಮ್ದು ದುರ್ಯೋಧನನ ರೀತಿ ಕೆಟ್ಟ ಹಠ: ಸಿದ್ದು, ಡಿಕೆಶಿಗೆ ಅಶೋಕ್ ಗುದ್ದು

    ನಾವು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದೇವೆ. ಎರಡೂವರೆ ವರ್ಷದಲ್ಲಿ ಅರ್ಧದಷ್ಟು ನಿರ್ಮಾಣ ಮಾಡಬಹುದಿತ್ತು. ನಾವು ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಿಸಲ್ಲ. ನಮ್ಮ ನಾಯಕರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ನಾವು 5 ಜನವಾದರೂ ಪಾದಯಾತ್ರೆ ಮಾಡಿ ಮುಗಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಸರ್ಕಾರ ಯಾವುದೇ ಆದೇಶ ನೀಡಲಿ ಪಾದಯಾತ್ರೆ ನಿಲ್ಲಲ್ಲ: ಡಿ.ಕೆ ಸುರೇಶ್

    ಗಣಿಗ ರವಿಕುಮಾರ್, ಇಕ್ಬಾಲ್ ಹುಸೇನ್, ರಮೇಶ್ ಬಂಡಿಸಿದ್ದೇಗೌಡ, ನರೇಂದ್ರ ಸ್ವಾಮಿ, ಸೇರಿದಂತೆ ಇನ್ನೂ ಹಲವಾರು ರೈತ ಮುಖಂಡರು ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

  • ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

    ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

    ಬೆಂಗಳೂರು: ಮೇಕೆದಾಟು ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲಗೊಂಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಯಾವುದೇ ಉತ್ತರ ನೀಡದೇ ಮೌನಕ್ಕೆ ಜಾರಿದ್ದಾರೆ.

    ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ವಿರುದ್ಧ ಹೈಕೋರ್ಟ್ ಕಿಡಿಕಾರಿದೆ. ಯಾರ ಅನುಮತಿ ಪಡೆದು ಪಾದಯಾತ್ರೆ ನಡೆಸುತ್ತಿದ್ದೀರಿ ಎಂದು ಕೋರ್ಟ್ ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಪಾದಯಾತ್ರೆ ತಡೆಯಲು ಯಾರಿಗೆ ಕಾಯುತ್ತಿದ್ದೀರಿ – ಸರ್ಕಾರಕ್ಕೆ ಹೈಕೋರ್ಟ್ ಛೀಮಾರಿ

    ಹೈಕೋರ್ಟ್ ಪ್ರಶ್ನೆ ಕುರಿತು ಪಬ್ಲಿಕ್ ಟಿವಿಯ ವರದಿಗಾರರಿಗೆ, ಡಿ.ಕೆ.ಶಿವಕುಮಾರ್ ಮೌನದಲ್ಲೇ ಪ್ರತಿಕ್ರಿಯಿಸಿದ್ದಾರೆ. ಕೇವಲ ಕೈ ಸನ್ನೆಯನ್ನಷ್ಟೇ ಮಾಡಿದ್ದಾರೆ. ಕೈ ಮುಗಿದು ಮುಖದ ಮೇಲೆ ಕೈಯನ್ನು ಇಟ್ಟಿದ್ದಾರೆ.

    ನಿಮಗೆ ಜ್ವರ ಬಂದಿದೆ, ಅದಕ್ಕೆ ಮೌನ ವಹಿಸಿದ್ದೀರಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂಬ ಪ್ರಶ್ನೆಗೆ, ಏನು ಬೇಕಾದರೂ ಹೇಳಿಕೊಳ್ಳಲಿ ಎಂಬಂತೆ ಕೈ ಸನ್ನೆ ಮೂಲಕವೇ ಪ್ರತಿಕ್ರಿಯಿಸಿ ಮುಂದಕ್ಕೆ ಹೋಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಜೊತೆಗೆ ಮೌನಾಚರಣೆಯನ್ನೂ ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾದಯಾತ್ರೆಗೆ ಹೊರಟಿಲ್ಲ, ಅರೆಸ್ಟ್ ಮಾಡ್ಲಿ ಅಂತ ಕಾಯುತ್ತಿದ್ದಾರೆ: ನಾರಾಯಣ ಗೌಡ

    ಮೇಕೆದಾಟು ಪಾದಯಾತ್ರೆಗೆ ಜ.9ರಂದು ಚಾಲನೆ ಸಿಕ್ಕಿದೆ. ಪಾದಯಾತ್ರೆ ಮೂರು ದಿನ ಪೂರೈಸಿ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಪಾದಯಾತ್ರೆ ವಿಚಾರವಾಗಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

  • ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ: ಆರಗ ಜ್ಞಾನೇಂದ್ರ

    ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ: ಆರಗ ಜ್ಞಾನೇಂದ್ರ

    ಬೆಂಗಳೂರು: ಮೇಕೆದಾಟು ಪಾದಯಾತ್ರೆ ಕೊರೊನಾ ಯಾತ್ರೆ ಆಗುವುದು ಬೇಡ, ದಯವಿಟ್ಟು ನಿಮ್ಮ ರಾಜಕೀಯ ಉದ್ದೇಶದ ನಡಿಗೆ ಕಾರ್ಯಕ್ರಮವನ್ನು ಕೈಬಿಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.

    ಇವರು ಪಾದಯಾತ್ರೆ ಆರಂಭಿಸಿದಾಗ, ನಮಗೆ ಸಾರ್ವಜನಿಕರ ಆರೋಗ್ಯದ ಮೇಲೆ ಬೀರಬಹುದಾದ ಅಡ್ಡಪರಿಣಾಮದ ಬಗ್ಗೆ ಆತಂಕ ಇತ್ತು. ಆ ಕಾರಣದಿಂದ ನಾವು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದೆವು. ಈಗ ನಮ್ಮ ಆತಂಕ ನಿಜವಾಗುತ್ತಿದೆ. ಕೊರೊನಾ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡುತ್ತಿರುವುದಲ್ಲದೇ ವಿತಂಡ ವಾದ ಮಂಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಮುಗಿಯದ ಕೇಸರಿ ಶಲ್ಯ ವಿವಾದ – ಠಾಣೆ ಮೆಟ್ಟಿಲೇರಿದ ವಿದ್ಯಾರ್ಥಿಗಳ ಗಲಾಟೆ

    ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವು ನಾಯಕರಿಗೆ ಸೋಂಕು ತಗುಲಿದ್ದು, ಆಸ್ಪತ್ರೆ ಸೇರಿದ್ದಾರೆ. ಆ ಕಾರಣದಿಂದ ಮತ್ತೊಮ್ಮೆ ಕಾಂಗ್ರೆಸ್ ನಾಯಕರಿಗೆ, ಮನವಿ ಮಾಡುತ್ತೇನೆ. ನಿಮ್ಮ ನಿರ್ಧಾರವನ್ನು ಸಾರ್ವಜನಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ, ಪಾದಯಾತ್ರೆಯನ್ನು ಕೈಬಿಡಿ ಎಂದು ಮನವಿ ಮಾಡಿದ್ದಾರೆ.

    ಕೊರೊನಾ ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ. ಸಮಾಜದ ಎಲ್ಲಾ ಜನರೂ, ಎಲ್ಲಾ ಕ್ಷೇತ್ರದ ಶ್ರಮಿಕ ವರ್ಗದವರೂ ಆತಂಕಗೊಂಡಿದ್ದಾರೆ. ಈಗಾಗಲೇ ನೀವು ಜನತೆಯ ಆಕ್ರೋಶಕ್ಕೆ ಗುರಿಯಾಗಿದ್ದು, ಅವರ ಕ್ಷಮೆ ಕೇಳಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಓಮಿಕ್ರಾನ್‌ ಹರಡುತ್ತೆ, ಬೂಸ್ಟರ್‌ನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ: ICMR ವೈದ್ಯ

  • ನಿಮಗೆ ಗಂಡಸ್ತನ ಇದ್ದರೆ ಯೋಜನೆ ಜಾರಿ ಮಾಡಿ ತೋರಿಸಿ: ಅಶ್ವಥ್ ನಾರಾಯಣ

    ನಿಮಗೆ ಗಂಡಸ್ತನ ಇದ್ದರೆ ಯೋಜನೆ ಜಾರಿ ಮಾಡಿ ತೋರಿಸಿ: ಅಶ್ವಥ್ ನಾರಾಯಣ

    ರಾಮನಗರ: ಮೇಕೆದಾಟು ಯೋಜನೆ ಕಾಂಗ್ರೆಸ್‌ನಿಂದ ಅನುಷ್ಠಾನ ಮಾಡಲು ಸಾಧ್ಯವಿಲ್ಲ. ಬಿಜೆಪಿಯಿಂದ ಮಾತ್ರ ಈ ಯೋಜನೆ ಜಾರಿ ಸಾಧ್ಯ. ನಿಮಗೆ ಗಂಡಸ್ತನ ಇದ್ದರೆ ಯೋಜನೆಯನ್ನು ಜಾರಿ ಮಾಡಿ ತೋರಿಸಿ ಎಂದು ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ.

    ಮೇಕೆದಾಟು ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಾಡಿನ ನೆಲ, ಜಲ ವಿಚಾರವಾಗಿ ಬಿಜೆಪಿ ನಾಡಿನ ಹಿತ ಕಾಪಾಡುವಲ್ಲಿ ಬದ್ದವಾಗಿದೆ. ನಮ್ಮ ಮೊದಲ ಆದ್ಯತೆ ನಮ್ಮ ರಾಜ್ಯ, ನಮ್ಮ ನಾಡು. ಅಧಿಕಾರಕೋಸ್ಕರ ನಾವು ಏನು ಬೇಕಾದರೂ ಮಾಡುವವರು ಅಲ್ಲ ಎಂದರು.  ಇದನ್ನೂ ಓದಿ: ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

    ಮೇಕೆದಾಟು ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿದೆ. ನಾವು ಜಾರಿ ಮಾಡಲು ಮುಂದಾಗಿದ್ದಕ್ಕೆ ಡಿಕೆ ಶಿವಕುಮಾರ್ ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    2008ರಿಂದ ಕಾವೇರಿ ಜಲನಯನ ವ್ಯಾಪ್ತಿಯ 12-13 ಜಿಲ್ಲೆಗಳಲ್ಲಿ ನೀರಾವರಿ ಯೋಜನೆ ಜಾರಿಗೆ ತಂದವರು ಬಿಜೆಪಿಯವರು. ಯಡಿಯೂರಪ್ಪ ಸಿಎಂ ಬೊಮ್ಮಾಯಿ ನೀರಾವರಿ ಮಂತ್ರಿಯಾಗಿದ್ದರು. ದಕ್ಷಿಣ ಭಾರತದಲ್ಲಿ ನೀರಾವರಿ ಯೋಜನೆ ಕುಂಠಿತವಾದಾಗ ಅದನ್ನು ಅಭಿವೃದ್ಧಿಪಡಿಸಿದವರು ಬಿಜೆಪಿಯವರು ಎಂದು ತಿಳಿಸಿದರು. ಇದನ್ನೂ ಓದಿ: ಪಾದಯಾತ್ರೆಯಲ್ಲಿದ್ದ ಎಚ್.ಎಂ.ರೇವಣ್ಣಗೆ ಸೋಂಕು – ಕಾಂಗ್ರೆಸ್‍ನಿಂದ ರಾಜ್ಯಕ್ಕೆ ಕೊರೊನಾ ರಫ್ತು ಎಂದ ಬಿಜೆಪಿ

    ಕಾಂಗ್ರೆಸ್‌ಗೆ ನಾನು ನೇರ ಸವಾಲ್ ಹಾಕುತ್ತಿದ್ದೇನೆ. ನಾವು ಗಂಡಸರು, ಗಂಡಸ್ತನ ಇರುವುದಕ್ಕೆ ಈ ಯೋಜನೆ ಜಾರಿ ಮಾಡಿ ತೋರಿಸುತ್ತೇವೆ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ. ಕಾವೇರಿ ಜಲನಯನ ವ್ಯಾಪ್ತಿಯಲ್ಲಿ ನೀವು ಏನು ಮಾಡಿದ್ದೀರಿ ಎಂಬುದು ತಿಳಿದಿದೆ. ಕಾಂಗ್ರೆಸ್‌ನವರು ಬಿಜೆಪಿಯೊಂದಿಗೆ ಪೈಪೋಟಿ ನೀಡಲು ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹೇಳಿದರು.

  • ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

    ಅಧಿಕಾರಕ್ಕಾಗಿ ಕಾಂಗ್ರೆಸ್‍ನಿಂದ ಮೇಕೆದಾಟು ಪಾದಯಾತ್ರೆ ನಾಟಕ: ಹಾಲಪ್ಪ ಆಚಾರ್

    ರಾಯಚೂರು: ಚುನಾವಣೆ ಬಂದಿದೆ ಎಂದು ಕಾಂಗ್ರೆಸ್ ನವರು ಮೇಕೆದಾಟು ಯೋಜನೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ ಎಂದು ಗಣಿ ಮತ್ತು ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಹಾಲಪ್ಪ ಆಚಾರ್ ವಾಗ್ದಾಳಿ ನಡೆಸಿದರು.

    ರಾಯಚೂರಿನಲ್ಲಿ ಕೋವಿಡ್ ಹಾಗೂ ಪ್ರಕೃತಿ ವಿಕೋಪ ಹಾನಿ ಪರಿಹಾರ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ತಮ್ಮ ಅಧಿಕಾರವಧಿಯಲ್ಲಿ ಎಲ್ಲಾ ಅವಕಾಶ ಇದ್ದರೂ ಆಗ ಏನೂ ಮಾಡಿರಲಿಲ್ಲ, ಆದರೆ ಈಗ ಮೇಕೆದಾಟು ನೆನಪಾಗಿದೆ. ಕಾಂಗ್ರೆಸ್‍ನವರು ಈಗ ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

    ಹಿಂದೆ ಕೂಡಲಸಂಗಮದಲ್ಲಿ ಕಾಂಗ್ರೆಸ್ ನಡೆ ಕೃಷ್ಣೆ ಕಡೆ ಎಂಬ ಯಾತ್ರೆ ನಡೆಸಿದ್ದರು. ಕೃಷ್ಣ ಭಾಗದ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ಕೊಡುವುದಾಗಿ ಹೇಳಿದ್ದರು. ಐದು ವರ್ಷದಲ್ಲಿ ಕೇವಲ 7,500 ಕೋಟಿ ರೂ. ಮಾತ್ರ ನೀಡಿದ್ದರು. ಅವರು ಮಾಡಿದ ಯಡವಟ್ಟಿನಿಂದ ಎಲ್ಲ ಯೋಜನೆಗಳಿಗೆ ಗ್ರಹಣ ಹಿಡಿದಿದೆ ಅಂತ ಆರೋಪಿಸಿದರು. ಉತ್ತರ ಕರ್ನಾಟಕ ಭಾಗದಲ್ಲಿ ಅವರ ನಾಟಕ ಬಯಲಾಗಿದೆ. ಈಗ ಆ ಭಾಗದಲ್ಲಿ ನಾಟಕ ಶುರು ಮಾಡಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಕೊರೊನಾ ಅಂಟಿಸಿ ಪಾದಯಾತ್ರೆ ನಿಲ್ಲಿಸಲು ಯತ್ನಿಸುತ್ತಿದ್ದೀರಾ, ನಿಮ್ಗೆ ಒಳ್ಳೆಯದಾಗಲ್ಲ: ಡಿಕೆಶಿ ಕಣ್ಣೀರು

  • ಪಾದಯಾತ್ರೆಯಿಂದ ಕೊರೊನಾ ಉಲ್ಬಣವಾದರೆ ಅದಕ್ಕೆ ಕಾಂಗ್ರೆಸ್ ಹೊಣೆ: ಎನ್ ಮಹೇಶ್

    ಪಾದಯಾತ್ರೆಯಿಂದ ಕೊರೊನಾ ಉಲ್ಬಣವಾದರೆ ಅದಕ್ಕೆ ಕಾಂಗ್ರೆಸ್ ಹೊಣೆ: ಎನ್ ಮಹೇಶ್

    ಚಾಮರಾಜನಗರ: ಪಾದಯಾತ್ರೆಯಿಂದ ಕೊರೊನಾ ಉಲ್ಬಣವಾದರೆ ಕಾಂಗ್ರೆಸ್ ಪಕ್ಷವೇ ಹೊಣೆ ಎಂದು ಶಾಸಕ ಎನ್ ಮಹೇಶ್ ಹೇಳಿದರು.

    ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಯವರಲ್ಲಿ ಕೈ ಮುಗಿದು ಮನವಿ ಮಾಡುತ್ತೇನೆ. ದಯಮಾಡಿ ಪಾದಯಾತ್ರೆ ನಿಲ್ಲಿಸಿ. ಬೆಂಗಳೂರಿನಲ್ಲಿ ಈಗಾಗಲೇ 12 ಸಾವಿರಕ್ಕೂ ಹೆಚ್ಚು ಪ್ರಕರಣ ವರದಿಯಾಗಿದೆ. ನಿಮ್ಮ ಹಾಗೂ ಜೊತೆ ಬಂದವರ ಆರೋಗ್ಯದಲ್ಲಿ ಏರುಪೇರಾದರೆ ಯಾರೂ ಹೊಣೆ? ಪಾದಯಾತ್ರೆ ನಿಲ್ಲಿಸಿ ರಾಜ್ಯ ಸರ್ಕಾರದ ಜೊತೆಗೆ ಮಾತನಾಡಿ. ಆಡಳಿತ ಪಕ್ಷ, ವಿರೋಧ ಪಕ್ಷ ಎರಡೂ ಕೂಡಿಕೊಂಡು ಹೋರಾಟ ಮಾಡಬೇಕಿದೆ ಎಂದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್

    ಪಾದಯಾತ್ರೆ ವೇಳೆ ಕೆಲವು ಶಾಸಕರು ನೀರಾವರಿಗೂ ನೀರು ಬಳಸಿಕೊಳ್ಳಬಹುದೆಂದು ಹೇಳುತ್ತಿದ್ದಾರೆ. ಆದರೆ ಕುಡಿಯಲು ಮತ್ತು ವಿದ್ಯುತ್ ಉತ್ಪಾದನೆ ಗಷ್ಟೇ ಬಳಸಲು ಅವಕಾಶವಿದೆಯಷ್ಟೇ. ಈ ರೀತಿ ಹೇಳಿಕೆಯಿಂದ ಕಾವೇರಿ ನ್ಯಾಯಾಧೀಕರಣ ಏನು ತೀರ್ಮಾನ ಕೈಗೊಳ್ಳುತ್ತೆ. ಸುಪ್ರೀಂ ಕೋರ್ಟ್‍ನಲ್ಲಿ ಒಂದು ಅರ್ಜಿಯನ್ನು ವಜಾಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ರೀತಿಯ ಹೇಳಿಕೆಯಿಂದ ಸಮಸ್ಯೆಯಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ಕೈ ಬಿಡಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಫಸ್ಟ್ ಟೈಂ ಮನುಷ್ಯನಿಗೆ ಹಂದಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

  • ಜನರ ಶಾಪಕ್ಕೆ ಕಾಂಗ್ರೆಸ್‌ನವ್ರು ಒಳಗಾಗ್ತಾರೆ: ಆರಗ ಜ್ಞಾನೇಂದ್ರ

    ಜನರ ಶಾಪಕ್ಕೆ ಕಾಂಗ್ರೆಸ್‌ನವ್ರು ಒಳಗಾಗ್ತಾರೆ: ಆರಗ ಜ್ಞಾನೇಂದ್ರ

    ಬೆಂಗಳೂರು: ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ ಅವರು ಗಳಿಸಿಕೊಂಡಿದ್ದಕ್ಕಿಂತ ಹೆಚ್ಚು ಕಳೆದುಕೊಂಡಿದ್ದಾರೆ. ಇವರು ಜನರ ಶಾಪಕ್ಕೆ ಕಾಂಗ್ರೆಸ್ ಅವರು ಒಳಗಾಗುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಸಕ್ಸಸ್ ಆಗಿದೆ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಆದರೆ ಇವರ ಪಾದಯಾತ್ರೆ ಸಾಮಾನ್ಯ ಜನರಿಗೆ ಆತಂಕವನ್ನು ತಂದಿದೆ. ಇವರಿಂದಾಗಿ ಕೇಸ್ ಉಲ್ಬಣವಾಗಿ ಲಾಕ್‌ಡೌನ್ ಆದರೆ ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ ಎಂದರು.

    ಕಾಂಗ್ರೆಸ್ ಅವರ ಪಾದಯಾತ್ರೆಗೆ ಜನ ಉಗಿಯುತ್ತಿದ್ದಾರೆ. ಜನರ ಸಹಾನುಭೂತಿ ಅವರಿಗೆ ಸಿಗಲ್ಲ. ನಿನ್ನೆ 43ಕ್ಕೂ ಅಧಿಕ ಜನರ ಮೇಲೆ ಮೇಲೆ ಪುನ: ಎಫ್‌ಐಆರ್ ದಾಖಲಾಗಿದೆ. ಕೇಸ್ ದಾಖಲಾಗಿದೆ, ಕಾನೂನು ಕ್ರಮ ಆಗುತ್ತದೆ. ಕಾನೂನು ಕ್ರಮದಿಂದ ಅವರು ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ಪುತ್ರನಿಗೂ ಕೋವಿಡ್

    ರಾಜಕೀಯ ಪಕ್ಷವಾಗಿ ಈಗ ಪಾದಯಾತ್ರೆ ಮಾಡಬಾರದಿತ್ತು. ಕಾಂಗ್ರೆಸ್‌ಗೆ ಖಂಡಿತಾ ಒಳ್ಳೆಯದಾಗಲ್ಲ, ಜನ ಇವರಿಗೆ ಬುದ್ಧಿ ಕಲಿಸುತ್ತಾರೆ. ರಾಮನಗರದಲ್ಲಿ ಕೋವಿಡ್ ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚಿಸಿದ್ದೇವೆ. ಪಾದಯಾತ್ರೆಯಿಂದ ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ‌ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ

    ರೇಣುಕಾಚಾರ್ಯ, ಸುಭಾಷ್ ಗುತ್ತೇದಾರರಿಂದ ಕೋವಿಡ್ ನಿಯಮ ಉಲ್ಲಂಘನೆ ವಿಚಾರವಾಗಿ ಮಾತನಾಡಿದ ಅವರು, ಅವರಿಬ್ಬರೂ ಮಾಡಿದ್ದು ಖಂಡಿತಾ ತಪ್ಪು. ರೇಣುಕಾಚಾರ್ಯ ಕ್ಷಮೆ ಕೇಳಿದ್ದಾರೆ. ಸುಭಾಷ್ ಗುತ್ತೇದಾರ್ ಅವರಿಗೂ ಹೀಗೆಲ್ಲ ಮಾಡದಂತೆ ಸೂಚಿಸಿದ್ದೇವೆ ಎಂದರು.

    ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಸ್ಪರ್ಧೆ ಇದೆ. ಇಬ್ಬರ ಮಧ್ಯೆ ನಡಿಗೆ ಸ್ಪರ್ಧೆ ನಡಿಯುತ್ತಿದೆ. ನಮ್ಮ ಬೊಮ್ಮಾಯಿ ಸದ್ಯಕ್ಕೆ ಇದರ ಅಂಪೈರ್ ಆಗಿದ್ದಾರೆ. ಜನ, ಅಂಪೈರ್ ಇಬ್ಬರು ಸೇರಿ ಖಂಡಿತಾ ಇದರ ಬಗ್ಗೆ ತೀರ್ಮಾನ ತಗೆದುಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ಡಿಕೆಶಿ ಶಾಲಾ ಮಕ್ಕಳ ಜೊತೆ ಮಾಸ್ಕ್ ಇಲ್ಲದೇ ಬೆರೆತಿದ್ದಾರೆ. ಇದು ಅಮಾನವೀಯ ಘಟನೆಯಾಗಿದೆ. ಡಿಕೆಶಿಗೆ ಟೆಸ್ಟ್ ಮಾಡಲು ಅಧಿಕಾರಿಗಳನ್ನು ಕಳಿಸಿದರೆ ಗದರಿಸಿ ಕಳುಹಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    Araga Jnanendra

    ಲಾಕ್‌ಡೌನ್ ಜಾರಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಜ್ಞರ ಅಭಿಪ್ರಾಯಗಳನ್ನು ಸರ್ಕಾರ ಎದುರು ನೋಡುತ್ತಿದೆ. ಬಹಳ ಟಫ್ ರೂಲ್ಸ್ ತರಲು ತಜ್ಞರ ಅಭಿಪ್ರಾಯವನ್ನೂ ಪರಿಗಣಿಸುತ್ತೇವೆ. ನಾಳೆ ಲಾಕ್‌ಡೌನ್ ಆಗುವ ಪರಿಸ್ಥಿತಿ ಬಂದರೆ ಕಾಂಗ್ರೆಸ್ ಅವರೇ ಅದರ ಹೊಣೆಯನ್ನು ಹೊರಬೇಕು. ಕೇಸ್ ಹೆಚ್ಚಾದರೆ ಕಾಂಗ್ರೆಸ್ಸಿಗರೇ ಕಾರಣ ಎಂದು ತಿಳಿಸಿದರು.

  • ಕೊರೊನಾ ಟೆಸ್ಟ್‌ ಮಾಡಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ಮಾಡ್ತಿದೆ ಬಿಜೆಪಿ: ಡಿಕೆಶಿ

    ಕೊರೊನಾ ಟೆಸ್ಟ್‌ ಮಾಡಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರ ಮಾಡ್ತಿದೆ ಬಿಜೆಪಿ: ಡಿಕೆಶಿ

    ರಾಮನಗರ: ನಮಗೆ ಕೊರೊನಾ ಟೆಸ್ಟ್‌ ಮಾಡಲು ಬಿಜೆಪಿಯವರು ವೈದ್ಯರನ್ನು ಕಳುಹಿಸಿದ್ದರು. ಪರೀಕ್ಷೆಯಲ್ಲಿ ಪಾಸಿಟಿವ್‌ ಅಂತ ತೋರಿಸಿ ಪಾದಯಾತ್ರೆ ಹತ್ತಿಕ್ಕುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

    ದೊಡ್ಡ ಆಲಹಳ್ಳಿಯಲ್ಲಿ ಮಾತನಾಡಿದ ಅವರು, ರಾತ್ರಿ ಕೋವಿಡ್ ಟೆಸ್ಟ್ ಮಾಡಲು ಜಿಲ್ಲಾಡಳಿತ ಅಧಿಕಾರಿಗಳನ್ನು ಕಳಿಸಿದ್ದರು. ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಗೊತ್ತಿಲ್ಲ, ನನ್ನ ಹತ್ತಿರ ಹತ್ತು ಜನರ ವೈದ್ಯರ ತಂಡ ಇದೆ ಅಂತಾ. ನನ್ನನ್ನು ನೋಡಿದ್ರೆ ಕೊರೊನಾ ಲಕ್ಷಣಗಳು ಇದೆ ಅನಿಸುತ್ತಾ? ನಿನ್ನೆ ಸಮರ್ಥವಾಗಿ ನಡೆದಿದ್ದೇನೆ, ಎಲ್ಲೂ ಕೂಡ ಸುಸ್ತಾಗಿಲ್ಲ. ನನಗೆ ಟೆಸ್ಟ್ ಮಾಡಿ ಪಾಸಿಟಿವ್ ಅಂತಾ ಹೇಳಿದರೆ, ಪಾದಯಾತ್ರೆ ಹತ್ತಿಕ್ಕಬಹುದು ಅಂತಾ ತಿಳಿದಿದ್ದಾರೆ. ಯಾವುದೇ ಕಾರಣಕ್ಕೂ ಪಾದಯಾತ್ರೆ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಕೊರೊನಾ ಅಂಟಿಸಲು ಸೋಂಕಿತ ವ್ಯಕ್ತಿಯನ್ನು ಕಳುಹಿಸಿದ್ದಾರೆ: ಡಿ.ಕೆ ಸುರೇಶ್

    ರಾಜ್ಯದಲ್ಲಿ ಕರ್ಫ್ಯೂ ಇರುವುದರಿಂದ ಸಾಮಾನ್ಯ ಜನರು ಕಷ್ಟಪಡುವ ಸ್ಥಿತಿ ಇದೆ. ಈ ಕರ್ಫ್ಯೂವನ್ನು ತೆಗೆಯಬೇಕು. ವಿಮಾನ ನಿಲ್ದಾಣದಲ್ಲಿ ದಂಧೆ ಮಾಡುತ್ತಿದ್ದಾರೆ. ಇಬ್ಬರು ವಿದೇಶದಿಂದ ಬಂದರೆ, ಒಬ್ಬರಿಗೆ ಪಾಸಿಟಿವ್ ತೋರಿಸುತ್ತಿದ್ದಾರೆ. ಕೊರೊನಾ ಹೆಸರಿನಲ್ಲಿ ದುಡ್ಡು ಹೊಡೆದಿದ್ದು ಸಾಕು ಎಂದು ಟೀಕಿಸಿದ್ದಾರೆ.

    ನನ್ನ ಕಾಂಗ್ರೆಸ್‌ನವರು ರೇಪ್ ಮಾಡ್ತಾ ಇದಾರೆ ಅಂತಾ ಆರಗ ಜ್ಞಾನೇಂದ್ರ ಹೇಳಿದ್ದರು. ಈಗ ಕ್ಷಮೆ ಕೇಳಿ ಅಂತಾ ಹೇಳುತ್ತಿದ್ದಾರೆ. ಆತ ಅಜ್ಞಾನ ಆರಗ ಜ್ಞಾನೇಂದ್ರ. ಬಿಜೆಪಿ ಅವರಿಗೆ ನನ್ನ ನೆನಯದೇ ಇದ್ದರೆ ನಿದ್ದೆ ಬರಲ್ಲಾ. ನಾನು ಕೂತರು, ನಿಂತರು ಟ್ರೋಲ್ ಮಾಡುತ್ತಾರೆ. ಅವರು ಟ್ರೋಲ್ ಮಾಡಿಕೊಳ್ಳಲಿ ಬಿಡಿ, ನಾನು ತಲೆಕೆಡಿಸಿಕೊಳ್ಳಲ್ಲ. ಈ ಪಾದಯಾತ್ರೆ 10 ದಿನವೂ ನಡೆಯುತ್ತದೆ ಎಂದಿದ್ದಾರೆ. ಇದನ್ನೂ ಓದಿ: ನನ್ನಷ್ಟು ಯೋಗ್ಯತೆ, ಅರ್ಹತೆ ಬಿಜೆಪಿಯಲ್ಲಿ ಯಾರಿಗಿದೆ: ಯತ್ನಾಳ್ ಪ್ರಶ್ನೆ

    ಸಿಎಂ ಅಕ್ಕ-ಪಕ್ಕ ಕೂತವರಿಗೆ ಪಾಸಿಟಿವ್ ಬಂದಿದೆ. ಸಿಎಂಗೆ ಯಾಕೆ ಟೆಸ್ಟ್ ಮಾಡಿಲ್ಲ. ಅವರಿಗೆ ಲಕ್ಷಣಗಳು ಇಲ್ವಾ? ಇದೇ ಬಿಜೆಪಿ ಅವರು ರಾಜಕೀಯಕ್ಕಾಗಿ ಮಾಡುತ್ತಿರುವ ಡ್ರಾಮ. ನಿನ್ನೆ ಕರ್ಫ್ಯೂ ನೆಪದಲ್ಲಿ, ನಮ್ಮ ಕಾರ್ಯಕರ್ತರ ಬಸ್‌ಗಳನ್ನು ಹಿಡಿದಿದ್ದರು. ಇಂದು ಕರ್ಫ್ಯೂ ಇಲ್ಲ, ಪಾದಯಾತ್ರೆಗೆ ಅಪಾರ ಸಂಖ್ಯೆಯಲ್ಲಿ ಜನ ಬರ್ತಾರೆ ಎಂದು ತಿಳಿಸಿದ್ದಾರೆ.

  • ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಮೊಕದ್ದಮೆ ದಾಖಲು: ಆರಗ ಜ್ಞಾನೇಂದ್ರ ಸಮರ್ಥನೆ

    ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಮೊಕದ್ದಮೆ ದಾಖಲು: ಆರಗ ಜ್ಞಾನೇಂದ್ರ ಸಮರ್ಥನೆ

    ಬೆಂಗಳೂರು: ಕೊರೊನಾ ಸೋಂಕಿನ ನಡುವೆಯೂ ಪಾದಯಾತ್ರೆ ಕೈಗೊಳ್ಳುವುದರ ಮೂಲಕ ಕಾಂಗ್ರೆಸ್ ನಾಯಕರು ಜನರ ಬದುಕಿನ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊರೊನಾ ನಿಯಂತ್ರಣ ಕಾಯಿದೆಯನ್ನು ಉಲ್ಲಂಘಸಿದವರ ವಿರುದ್ಧ, ರಾಮನಗರ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ನಾಯಕರ ಉದ್ದೇಶ ನೀರಿನ ಮೇಲೆ ರಾಜಕೀಯ ಮಾಡುವುದು. ಆದರೆ ನಮ್ಮ ಕಾಳಜಿ ಸಾರ್ವಜನಿಕರ ಆರೋಗ್ಯ ವಿಚಾರವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನಷ್ಟು ಕಠಿಣ ಕ್ರಮ ಅಗತ್ಯ: ಬಸವರಾಜ ಬೊಮ್ಮಾಯಿ

    ಕೊರೊನಾ ಸೋಂಕು ಉಲ್ಬಣಗೊಂಡು ಜನತೆ ಸಂಕಷ್ಟಕ್ಕೆ ಒಳಗಾದರೆ, ಕಾಂಗ್ರೆಸ್ ನಾಯಕರು ಹೊಣೆ ಹೊರಬೇಕಾದೀತು ಎಂದು ಎಚ್ಚರಿಸಿದ ಸಚಿವರು, ಕಾಂಗ್ರೆಸ್ ನಡೆಗೆ ನಾಡಿನ ಜನತೆಯೂ ಅಸಮಾಧಾನಗೊಂಡಿದ್ದಾರೆ. ಕಾಂಗ್ರೆಸ್ ನಾಯಕರ ನಡವಳಿಕೆ ಅತ್ಯಂತ ಹೊಣೆಗೇಡಿತನ ಕಿಡಿಕಾರಿದ್ದಾರೆ.

    ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಜಿಲ್ಲಾಡಳಿತ ನಿಭಾಯಿಸುತ್ತಿದೆ. ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅವರು ನ್ಯಾಯಾಲಯದಲ್ಲಿ ಉತ್ತರಿಸಲಿ ಎಂದಿದ್ದಾರೆ. ಇದನ್ನೂ ಓದಿ: ತಲೆ ಕೆಡಿಸಿಕೊಳ್ಳಬೇಡಾ, ನಾಳೆ ನಾನು ಜಾಯಿನ್ ಆಗ್ತೀನಿ: ಡಿಕೆಶಿ ಜೊತೆ ಸಿದ್ದು ಫೋನ್ ಟಾಕ್

    ಮೇಕೆದಾಟು ಯೋಜನೆ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ ವಹಿಸಿದ್ದರು. ಈಗ ಮುಂದಿನ ಚುನಾವಣೆ ದೃಷ್ಟಿಯಿಂದ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಬದ್ಧ. ಈ ವಿಚಾರದಲ್ಲಿ ಯಾವುದೇ ಸಂಶಯ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.

    ಕೊರೊನಾ ನಿಬಂಧನೆಗಳನ್ನು ಪಾಲಿಸುವುದಿಲ್ಲ. ಬೇಕಾದರೆ ಜೈಲಿಗೆ ಹಾಕಿ ಎಂದು ಸವಾಲು ಎಸೆದಿದ್ದಾರೆ. ಇದು ಕಾಂಗ್ರೆಸ್‌ನವರ ಉದ್ಧಟತನವನ್ನು ತೋರಿಸುತ್ತದೆ. ಕಾಂಗ್ರೆಸ್ ನಾಯಕರ ಬಗ್ಗೆ ಜನಸಾಮಾನ್ಯರು ಜಿಗುಪ್ಸೆಗೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ, ಸಿದ್ದು ಸೇರಿ 30 ಮಂದಿ ವಿರುದ್ಧ ಎಫ್‌ಐಆರ್‌ ದಾಖಲು

  • ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್

    ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ: ಆನಂದ್ ಸಿಂಗ್

    ಬಳ್ಳಾರಿ (ವಿಜಯನಗರ): ಬಿಜೆಪಿ, ಕಾಂಗ್ರೆಸ್, ಹೆಣ್ಣು-ಗಂಡೆಂಬ ಭೇದ ಕೊರೊನಾಗೆ ಇಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ವ್ಯಂಗ್ಯವಾಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಏನಾದರೂ ಹೇಳಿ ಕೇಳಿ ಬರುತ್ತಾ? ಕಾಂಗ್ರೆಸ್ ಪಾದಯಾತ್ರೆ ಇದೆ, ಆ ಮೇಲೆ ಬರುತ್ತೇನೆ ಅಂತ ಏನಾದರೂ ಹೇಳಿ ಬರುತ್ತಾ. ಎಲುಬಿಲ್ಲದ ನಾಲಿಗೆ ಏನೇನೋ ಮಾತನಾಡುತ್ತದೆ. ಕಾಂಗ್ರೆಸ್ ನಾಯಕರು ಪಾದಯಾತ್ರೆ ತಡೆಯಲು ಬಿಜೆಪಿ ಸರ್ಕಾರ ವೀಕೆಂಡ್ ಕಫ್ರ್ಯೂ ಹೇರಿದೆ ಅಂತ ಆರೋಪ ಮಾಡುತ್ತಿದ್ದಾರೆ. ಆದರೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ಈಗಾಗಲೇ ಲಾಕ್‍ಡೌನ್ ಆಗಿದೆ ಎಂದರು. ಇದನ್ನೂ ಓದಿ: ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ: ಬಿಜೆಪಿ ವ್ಯಂಗ್ಯ

    ಕೊರೊನಾ ಪ್ರಕರಣಗಳನ್ನು ನೋಡಿಕೊಂಡು ಸರ್ಕಾರ ಆದೇಶ ಮಾಡಿದೆ. ವಿನಾ: ಕಾರಣ ನಮ್ಮ ಮೇಲೆ ಆರೋಪ ಮಾಡೋದು ಸರಿಯಲ್ಲ. ಸುತ್ತಮುತ್ತಲೀನ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಹೇಗಿವೆ ಅಂತ ನೋಡಿ. ಕೈ ಪಕ್ಷದವರು ಮೇಕೆದಾಟು ಪಾದಯಾತ್ರೆಗೆ ಮೊದಲೇ ನಾವು ದಿನಾಂಕ ನಿಗದಿ ಮಾಡಿದ್ದು, ಆ ನಂತರ ಬಿಜೆಪಿ ಪಕ್ಷ ವೀಕೆಂಡ್ ಕಫ್ರ್ಯೂ ಹಾಕಿದೆ ಅಂತ ಆರೋಪ ಮಾಡುತ್ತಾರೆ. ನಾವು ನಿಯಮ ಪಾಲನೆ ಮಾಡುತ್ತಿದ್ದೇವೆ ಅನ್ನುತ್ತಿದ್ದಾರೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಆಯಾ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಸರ್ಕಾರ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ: ಸಿದ್ದರಾಮಯ್ಯ ಕಿಡಿ

    ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಕ್ರಮ ಗ್ಯಾರಂಟಿ ಕೈ ಗೊಳ್ಳುತ್ತೇವೆ. ಕಾಂಗ್ರೆಸ್‍ನಲ್ಲಿ (ಸಿಎಲ್ಪಿ) ನಾಯಕರಿದ್ದು, ಹಿರಿಯರೂ ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು.