ಬೆಂಗಳೂರು: ಸಾಲುಸಾಲು ರಜೆ ಹಿನ್ನೆಲೆ ಊರಿನತ್ತ ಮುಖ ಮಾಡಿದ್ದ ಜನ ಹಬ್ಬ ಮುಗಿಸಿಕೊಂಡು ಬೆಂಗಳೂರಿಗೆ (Bengaluru) ವಾಪಸ್ ಆಗಿದ್ದಾರೆ. ಈ ಹಿನ್ನೆಲೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ (Mejestic Metro Station) ಪ್ರಯಾಣಿಕರ ದಟ್ಟಣೆ (Congestion) ಉಂಟಾಗಿದೆ.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾಗಿದ್ದು, ಮೆಟ್ರೋಗಾಗಿ ಜನ ಕ್ಯೂ ನಿಂತಿದ್ದಾರೆ. ಮೆಟ್ರೋ ನಿಲ್ದಾಣ ಒಳ ಭಾಗದಲ್ಲೂ ಜನದಟ್ಟಣೆ ಉಂಟಾಗಿದೆ. ಇನ್ನು ಮೆಜೆಸ್ಟಿಕ್ ಮೆಟ್ರೋ ಪ್ರಯಾಣಿಕರಿಂದ ತುಂಬಿಕೊಂಡಿದೆ. ಮೆಟ್ರೋ ಒಳಭಾಗದಲ್ಲೂ ಪ್ರಯಾಣಿಕರ ದಟ್ಟಣೆ ಉಂಟಾಗಿದೆ. ಇದನ್ನೂ ಓದಿ: ನಮ್ದೇನಿದ್ದರೂ 2028ಕ್ಕೆ ಸಿಎಂ ಕ್ಲೈಮ್, ಯತೀಂದ್ರ ಹೇಳಿಕೆ ಅದು ವೈಯಕ್ತಿಕ: ಸತೀಶ್ ಜಾರಕಿಹೊಳಿ
ಬೆಂಗಳೂರು: ಮರಾಠಿಗರ ಕನ್ನಡ ವಿರೋಧಿ ನೀತಿ, ಕನ್ನಡಿಗರ ಮೇಲೆ ಎಂಇಎಸ್ (MES) ಪುಂಡರ ದಬ್ಬಾಳಿಕೆ ಖಂಡಿಸಿ ಶನಿವಾರ ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಲಾಗಿದೆ. ಆದರೆ ಬಂದ್ ಇದ್ದರೂ ಎಂದಿನಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ನಗರದ ಮೆಜೆಸ್ಟಿಕ್‌ನ (Mejestic)ಬಿಎಂಟಿಸಿ ಬಸ್ ನಿಲ್ದಾಣ ಯಥಾಸ್ಥಿತಿಯಲ್ಲಿದೆ. ಆದರೆ ಪ್ರಯಾಣಿಕರ ಸಂಖ್ಯೆ ಸ್ಪಲ್ಪ ಕಡಿಮೆಯಾಗಿದೆ.
ಇನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ (Satellite Bus Station) ಬೆಳ್ಳಂಬೆಳಗ್ಗೆ ಬಂದ್ ಬಿಸಿ ತಟ್ಟಿದೆ. ತಮ್ಮ ತಮ್ಮ ಊರುಗಳಿಗೆ ವೀಕೆಂಡ್‌ಗಳಲ್ಲೇ ಹೆಚ್ಚಾಗಿ ಹೋಗುವ ಜನ ಇಂದು ಬಂದ್ ಕಾರಣಕ್ಕೆ ಸ್ಯಾಟಲೈಟ್ ಬಸ್ ನಿಲ್ದಾಣದ ಕಡೆ ಮುಖ ಮಾಡಿಲ್ಲ. ಸ್ಯಾಟಲೈಟ್ ಕೆಎಸ್‌ಆರ್‌ಟಿಸಿ (KSRTC) ನಿಲ್ದಾಣ ಇಂದು ಪ್ರಯಾಣಿಕರ ಕೊರತೆ ಎದುರಿಸುತ್ತಿದೆ. ಇದನ್ನೂ ಓದಿ: ಬಲವಂತವಾಗಿ ಬಂದ್ ಮಾಡಿದ್ರೆ ಶಿಸ್ತು ಕ್ರಮ – ಬೆಳಗ್ಗೆಯಿಂದಲೇ ಬೆಂಗಳೂರಿನಲ್ಲಿ ಪೊಲೀಸರ ಕಟ್ಟೆಚ್ಚರ
ರಾಮನಗರ, ಮೈಸೂರು, ಮದ್ದೂರು, ಮಂಡ್ಯ, ಚಾಮರಾಜನಗರ, ಕೊಳ್ಳೇಗಾಲ, ಟಿ.ನರಸೀಪುರ, ನಂಜನಗೂಡು, ಮಳವಳ್ಳಿ, ಕೊಡಗು, ಹಾಸನ ಭಾಗಕ್ಕೆ ಹೋಗುವವರು ಬಹಳಷ್ಟು ಜನ ಬಂದ್ ಅಂತ ಇಂದು ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಇದರ ಪರಿಣಾಮ ಬಸ್‌ಗಳು ಖಾಲಿ ಖಾಲಿ ಸಂಚಾರ ಮಾಡುತ್ತಿವೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಖ್ಯೆ, ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಬಸ್‌ಗಳಿದ್ದರೂ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಇದನ್ನೂ ಓದಿ: ಬೇಸಿಗೆ ರಜೆ ಹಿನ್ನಲೆ ಕಲಬುರಗಿ – ದೌಂಡ್ ನಡುವೆ 180 ವಿಶೇಷ ರೈಲು ಸಂಚಾರ
ಬೆಂಗಳೂರು: 40 ವರ್ಷಗಳ ಇತಿಹಾಸ ಇರುವ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ (Mejestic Bus Station) ಹೊಸ ರೂಪ ಸಿಗಲಿದೆ. ಮೂರ್ನಾಲ್ಕು ಅಂತಸ್ತಿನ ಬಿಲ್ಡಿಂಗ್ ಇಲ್ಲಿ ತಲೆ ಎತ್ತಲಿದ್ದು, ಇಲ್ಲಿಂದಲೇ ಬಸ್‌ಗಳ ಕಾರ್ಯಾಚರಣೆ ಆಗಲಿವೆ.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಶೀಘ್ರದಲ್ಲಿಯೇ ಹೊಸ ಸ್ಪರ್ಶ ಸಿಗಲಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಮೂರ್ನಾಲ್ಕು ಅಂತಸ್ತಿನ ಬಿಲ್ಡಿಂಗ್ ನಿರ್ಮಾಣ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಈಗಾಗಲೇ ಅಧಿಕಾರಿಗಳ ಜೊತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಚರ್ಚಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನಕ್ಷೆ ತಯಾರಿಸುವ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಇದನ್ನೂ ಓದಿ: ಚಾಂಪಿಯನ್ಸ್ ಪಟ್ಟಕ್ಕಾಗಿ ದುಬೈನಲ್ಲಿ ಗುದ್ದಾಟ – ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಲು ಟೀಂ ಇಂಡಿಯಾ ಸನ್ನದ್ಧ
ಮುಂದಿನ ಐದಾರು ತಿಂಗಳಲ್ಲಿ ಬಸ್ ನಿಲ್ದಾಣದ ಬಿಲ್ಡಿಂಗ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಟೆಂಡರ್, ಇತರೆ ಪ್ರಕ್ರಿಯೆಗಳು ಪ್ರಾರಂಭವಾಗಲಿವೆ ಎನ್ನಲಾಗುತ್ತಿದೆ. ಮೆಜೆಸ್ಟಿಕ್‌ನ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನಿತ್ಯ 10 ಸಾವಿರಕ್ಕೂ ಹೆಚ್ಚು ಬಸ್‌ಗಳು ಸಂಚಾರ ಮಾಡುತ್ತಿವೆ. ಮೂರು ಅಂತಸ್ತಿನ ಬಿಲ್ಡಿಂಗ್ ನಿರ್ಮಿಸಿ ಬಸ್‌ಗಳನ್ನ ಆಪರೇಟ್ ಮಾಡೋದು, ಬಿಲ್ಡಿಂಗ್‌ನ ಕೆಲವು ಮಳಿಗೆಗಳನ್ನ ಬಾಡಿಗೆಗೆ ನೀಡಿ, ನಿಗಮದ ಬೊಕ್ಕಸ ತುಂಬಿಸುವ ಬಗ್ಗೆಯೂ ಚಿಂತಿಸಲಾಗುತ್ತಿದೆ. ಇದನ್ನೂ ಓದಿ: ರಾಷ್ಟ್ರಪತಿ ಆಡಳಿತ ಜಾರಿ ಬಳಿಕ ಮಣಿಪುರದಲ್ಲಿ ಘರ್ಷಣೆ – ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ
ಮೆಟ್ರೋ, ರೈಲು ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಬಸ್ ನಿಲ್ದಾಣವನ್ನು ವಿನ್ಯಾಸ ಮಾಡುವ ಚಿಂತನೆ ಮಾಡಲಾಗುತ್ತಿದೆ. ಹೈಟೆಕ್ ಸ್ಪರ್ಶ ನೀಡುವುದರ ಜೊತೆಗೆ ಎಐ ಕ್ಯಾಮೆರಾಗಳು, ಪ್ಲಾಟ್‌ಫಾರಂಗಳಲ್ಲಿ ಎಲ್‌ಇಡಿ ಅಳವಡಿಸಿ ಹೊಸ ರೂಪ ನೀಡಲಿದ್ದಾರೆ. ಇದನ್ನೂ ಓದಿ: IND vs NZ | ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ರೋಹಿತ್ ಶರ್ಮಾ ನಿವೃತ್ತಿ…?
ಬೆಂಗಳೂರು: ನಾಲ್ಕು ನಿಗಮಗಳ ಪ್ರಯಾಣ ದರ ಏರಿಕೆ (Bus Ticket Price Hike) ಖಂಡಿಸಿ, ಬೆಂಗಳೂರಿನ (Bengaluru) ಮೆಜೆಸ್ಟಿಕ್ (Mejestic) ಬಸ್ ನಿಲ್ದಾಣದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಪ್ರಯಾಣಿಕರಿಗೆ ಗುಲಾಬಿ ಹೂ ನೀಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಬಡವರಿಗೆ ಬಿಜೆಪಿ ಫ್ರೀ ಕೊಟ್ಟಿರಲಿಲ್ಲ. ಕಾಂಗ್ರೆಸ್ ಫ್ರೀ ಕೊಟ್ಟು ದರ ಏರಿಕೆ ಮಾಡಿದೆ. ಹಾಲಿನಲ್ಲಿ ಕಲ್ಲು ಹಾಕಿದ ದುರುಳರು ಇವರು. ಮದ್ಯದ ದರವೂ ಏರಿಕೆ ಮಾಡಿದ್ದೀರಿ. ವಿದ್ಯುತ್, ನೋಂದಣಿ ದರವೂ ಏರಿಕೆ ಮಾಡಿದ್ದೀರಿ. ಈ ಸರ್ಕಾರ ಎಲ್ಲದಕ್ಕೂ ಟ್ಯಾಕ್ಸ್ ಹಾಕಿದೆ. ಬಸ್ ದರ ಏರಿಕೆ ಮೂಲಕ ಬಡ ಜನರಿಗೆ ಸಿಎಂ ಒಳ್ಳೆದು ಮಾಡಿದ್ದಾರೆ. ನಾವು ಪ್ರಯಾಣಿಕರಿಗೆ ಗುಲಾಬಿ ಕೊಡುತ್ತೇವೆ. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಗುಲಾಬಿ ಕೊಡುತ್ತೇವೆ. ಕಂದಾಯ, ಮನೆ ಬಾಡಿಗೆ ಎಲ್ಲವೂ ದರ ಏರಿಕೆಯಾಗಿದೆ. ನಾನು ಸಾರಿಗೆ ಸಚಿವ ಇದ್ದಾಗ 1 ಸಾವಿರ ಕೋಟಿ ಲಾಭ ಇತ್ತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು
ಇನ್ನು ಇದೇ ವೇಳೆ ಪ್ರಯಾಣಿಕರಿಗೆ ಹೂ ಕೊಡಲು ಹೋದಾಗ ಅಶೋಕ್ ಅವರನ್ನು ಪೊಲೀಸರು ತಡೆದಿದ್ದಾರೆ. ಈ ಸಂದರ್ಭ ಅಶೋಕ್ ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಪೊಲೀಸ್ ದೌರ್ಜನ್ಯ ಬೇಡ. ರೈಟಿಂಗ್‌ನಲ್ಲಿ ಪ್ರತಿಭಟನೆ ಮಾಡಬಾರದು ಎಂದು ಕೊಡಿ. ಸರ್ಕಾರ ಇದೇ ಇರೋದಿಲ್ಲ. ನಾಟಕ ಆಡುತ್ತಿದ್ದೀರಾ ನೀವು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ಅಶೋಕ್ ಜೊತೆ ಬಿಜೆಪಿ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ
ದಾವಣಗೆರೆ: ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ಬಂದ್ದದ್ದು, ನಾಯಿ ಮಾಂಸ (Dog Meat) ಅಲ್ಲ, ಮೇಕೆಯ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ (G Parmeshwar) ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ (Davanagere) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ನಾಯಿ ಮಾಂಸ ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ಲ್ಯಾಬ್‌ನಲ್ಲಿ ಅದು ಮೇಕೆ ಮಾಂಸ ಎಂದು ವರದಿ ಬಂದಿದೆ. ಅನಾವಶ್ಯಕವಾಗಿ ದುರುದ್ದೇಶದಿಂದ ದೂರು ನೀಡಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ಮೇಕೆ ಮಾಂಸ?
ರಾಜಸ್ಥಾನದಿಂದ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಮಾಂಸ ಮಾರಾಟ ಮಾಡುವುದು ವೃತ್ತಿ. ಅದು ನಾಯಿ ಮಾಂಸ ಅಲ್ಲ ಮೇಕೆ ಮಾಂಸ ಎಂಬುದು ವರದಿಯಲ್ಲಿ ದೃಢವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸಚಿವರಿಗೆ ಡಿಕೆಶಿ ಮನವಿ
ರಾಜ್ಯದ ಸಂಪತ್ತು ಹಾಳಾಗುತ್ತಿದೆ, ಸಂಪತ್ತು ಲೂಟಿ ಆಗುತ್ತಿದೆ ಅಂತ ಬಿಜೆಪಿಯವರು ಪಾದಯಾತ್ರೆ ಮಾಡುತ್ತಿರುವುದಾಗಿ ಬಿಜೆಪಿಯವರು ಹೇಳಿದ್ದಾರೆ. ಅವರ ಪಾದಯಾತ್ರೆ ಅನವಶ್ಯಕವಾಗಿದೆ. ಸಿಎಂ ಮೇಲೆ ಅನಾವಶ್ಯಕ ಆರೋಪ ಮಾಡಿ ಪಾದಯಾತ್ರೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆ ಆಗಿಲ್ಲ. ಕಾನೂನು ಉಲ್ಲಂಘನೆ ಆಗಿಲ್ಲದಿದ್ದರೂ ಆಗಿದೆ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆ ಮಾಡಿದ್ರೆ ಬಿಎಸ್‌ವೈ ಇದ್ದಾನೋ, ಬಿವೈವಿ ಇದ್ದಾನೋ ಎಂದು ಗೊತ್ತಾಗುತ್ತೆ: ಯತ್ನಾಳ್
ನಾವು ರಾಜ್ಯದ ಜನತೆಗೆ ಸತ್ಯ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ಮುಖ್ಯಮಂತ್ರಿಗಳು ಒಂದು ಆಯೋಗ ನೇಮಕ ಮಾಡಿದ್ದಾರೆ. ಮುಖ್ಯಮಂತ್ರಿ ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಕಾನೂನು ಬಾಹಿರ ಕೆಲಸ ಆಗಿಲ್ಲ. ವಾಲ್ಮೀಕಿ ಹಗರಣವನ್ನು ನಾವು ಜಸ್ಟಿಫೈ ಮಾಡುತ್ತಿಲ್ಲ. ವಾಲ್ಮೀಕಿ ಹಗರಣದ ಬಗ್ಗೆ ಎಸ್‌ಐಟಿ, ಸಿಬಿಐ ತನಿಖೆಯಾಗುತ್ತಿದೆ. ಅದರ ವರದಿ ಬರಲಿ. ಒಂದು ವೇಳೆ ವಾಲ್ಮೀಕಿ ಹಗರಣದಲ್ಲಿ ಮಂತ್ರಿಗಳ ಅಕೌಂಟ್ ಹಣ ಹೋಗಿದೆ ಎಂದು ಸಾಬೀತಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ಇದನ್ನೂ ಓದಿ: 2010 ರಲ್ಲೇ ಸಿಎಂ ಆಗಬೇಕಿತ್ತು, ಆಗ ಅವಕಾಶ ಕೈ ತಪ್ಪಿತ್ತು: ವಿಜಯ್ ಶಂಕರ್
ಬೆಂಗಳೂರು: ರಾಜಸ್ಥಾನದಿಂದ (Rajasthan) ಬೆಂಗಳೂರಿಗೆ (Bengaluru) ನಾಯಿ ಮಾಂಸ (Dog Meat) ಸಾಗಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪುನೀತ್ ಕೆರೆಹಳ್ಳಿ (Puneeth Kerehalli) ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಶನಿವಾರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಯಿತು.
ಹಿಂದೂ ಸಂಘಟನೆಗಳ ಒಕ್ಕೂಟದ (Federation of Hindu Organizations) ಮೋಹನ್ ಗೌಡ ಪೊಲೀಸ್ ಆಯುಕ್ತರಿಗೆ ದೂರು ನೀಡಿದರು. ಶುಕ್ರವಾರ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ (Mejestic Railway Station) ಟನ್‌ಗಟ್ಟಲೆ ಅಕ್ರಮವಾಗಿ ಮಾಂಸ ಬಂದಿದೆ. ಅವರ ಬಳಿ ಲೈಸೆನ್ಸ್ ಇಲ್ಲ ಎಂದು ಫುಡ್ ಕಮಿಷನರ್ ಹೇಳಿದ್ದಾರೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪುನೀತ್ ಕೆರೆಹಳ್ಳಿ ಮೇಲೆ 3 ಎಫ್‌ಐಆರ್ ದಾಖಲು ಮಾಡಿದ್ದಾರೆ. ಸಾಮಾಜಿಕ ಕರ್ತವ್ಯ ಮೆರೆದವರ ಮೇಲೆ ದೂರು ದಾಖಲಾಗಿದೆ. ಹಿಂದೂಗಳ ವಾಕ್ ಸ್ವಾತಂತ್ರ್ಯವನ್ನು ಸರ್ಕಾರ ಹರಣ ಮಾಡುತ್ತಿದೆ. ದೂರುದಾರರಿಂದ ರಕ್ಷಣೆ ಇಲ್ಲದಂತಾಗಿದೆ. ಈ ಕುರಿತು ಸೂಕ್ತ ತನಿಖೆ ಮಾಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕಮರಿಗೆ ಉರುಳಿದ ಕಾರು – ಐವರು ಮಕ್ಕಳು ಸೇರಿ ಒಂದೇ ಕುಟುಂಬದ 8 ಮಂದಿ ದುರ್ಮರಣ!
ಪ್ರಕರಣ ಏನು?
ರಾಜಸ್ಥಾನದಿಂದ ಬೆಂಗಳೂರಿಗೆ ಮೇಕೆ, ಕುರಿ ಮಾಂಸದ ಹೆಸರಿನಲ್ಲಿ ಅಕ್ರಮವಾಗಿ ನಾಯಿ ಮಾಂಸ ತರಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಶುಕ್ರವಾರ ರೈಲಿನಲ್ಲಿ ಬಂದ 90 ಬಾಕ್ಸ್ ಮಾಂಸವನ್ನು ತಡೆಯಲಾಗಿತ್ತು. ಇದರ ಉಸ್ತುವಾರಿ ಪುನೀತ್ ಕೆರೆಹಳ್ಳಿ ವಹಿಸಿಕೊಂಡಿದ್ದರು. ಬಳಿಕ ಪುನೀತ್ ಕೆರೆಹಳ್ಳಿ ಹಾಗೂ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ನಡುವೆ ವಾಗ್ವಾದ ಕೂಡ ನಡೆದಿತ್ತು. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಶನಿವಾರ ಪೊಲೀಸರ ವಶದಲ್ಲಿದ್ದ ಪುನೀತ್ ತೀವ್ರ ಅಸ್ವಸ್ಥಗೊಂಡು ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪುನೀತ್ ಕೆರೆಹಳ್ಳಿ ವಿರುದ್ಧ ಬಿಎನ್‌ಎಸ್‌ನ 132 ಆಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ) 351 (2) ಶಾಂತಿಭಂಗ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನಾಯಿ ಸ್ವಲ್ಪ ಟಚ್ ಆದ್ರೂ ಮಸೀದಿಯೊಳಕ್ಕೆ ಹೋಗಲ್ಲ, ಅಂತಹದ್ದರಲ್ಲಿ ಮಾಂಸ ತರೋಕಾಗುತ್ತಾ? – ಅಬ್ದುಲ್ ರಜಾಕ್
– ಟೆಸ್ಟಿಂಗ್‌ಗೆ ಹೈದರಾಬಾದ್ ಪ್ರಯೋಗಾಲಯಕ್ಕೆ ಮಾಂಸ ಮಾದರಿ ರವಾನೆ
– ಯಾವ ಪ್ರಾಣಿಯ ಮಾಂಸ ಅಂತ ಪತ್ತೆ ಹಚ್ಚುವುದು ಹೇಗೆ?
ಬೆಂಗಳೂರು: ನಗರದಲ್ಲಿ ನಾಯಿ ಮಾಂಸ (Dog Meat) ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿದಕೂಡಲೇ ಪೊಲೀಸರು ಹಾಗೂ ಆಹಾರ ಸುರಕ್ಷತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಾಕ್ಸ್‌ನಲ್ಲಿ ತರಿಸಲಾಗಿದ್ದ ಮಾಂಸವನ್ನ ಜಪ್ತಿ ಮಾಡಿದ್ದು, ಅಂಗಾಂಗ ಮಾದರಿಗಳನ್ನ ಹೈದರಾಬಾದ್ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ.
ಆಹಾರ ಸುರಕ್ಷತೆ ಅಧಿಕಾರಿಗಳು ಹೇಳಿದ್ದೇನು?
ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ ಮಾತನಾಡಿ, ನಾವು ಒಟ್ಟು ನಾಲ್ಕು ಬಾಕ್ಸ್ ಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್ ಆಗಿ ಪಡೆದಿದ್ದೇವೆ. ಇದನ್ನು ವಿಸಿಕ್ಸ್ ಎನ್ನುವ ಲ್ಯಾಬ್‌ಗೆ ರವಾನಿಸಿ ಪರೀಕ್ಷಿಸಲಾಗುತ್ತೆ. ಇದರ ವರದಿ ಬರೋದಕ್ಕೆ 14 ದಿನಗಳ ಕಾಲಾವಕಾಶ ಬೇಕು. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ. ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್ ನಲ್ಲಿ ಗೊತ್ತಾಗುತ್ತೆ. ಒಂದು ವೇಳೆ ಇದು ದೂರುದಾರರ ದೂರಿನಂತೆ ನಾಯಿ ಮಾಂಸ ಆಗಿದ್ದರೇ ಮಾಲೀಕನ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಹೇಳಿದ್ದಾರೆ.
ಬಳಿಕ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರು, ಸದ್ಯಕ್ಕೆ ಬೆಂಗಳೂರಿನಲ್ಲಿ ಮಾಂಸ ಯಾವ ಪ್ರಾಣಿದು ಅಂತ ಪತ್ತೆ ಮಾಡೋಕೆ ಲ್ಯಾಬ್ ಇಲ್ಲ. ಆದಕಾರಣ ಕುರಿ ಮಾಂಸನಾ, ಬೇರೆ ಮಾಂಸನಾ? ಪತ್ತೆ ಮಾಡಲು ಹೈದರಾಬಾದ್‌ಗೆ ಮಾಂಸದ ಮಾದರಿ ಸಂಗ್ರಹವನ್ನ ರವಾನೆ ಮಾಡಲಾಗುತ್ತದೆ. ಕನಿಷ್ಠ 8 ರಿಂದ 10 ದಿನದ ಬಳಿಕ ಮಾಂಸ. ಯಾವ ಪ್ರಾಣಿಯದ್ದು ಅಂತ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಯಾವ ಪ್ರಾಣಿಯದ್ದು ಮಾಂಸ ಅಂತ ಹೇಗೆ ಗೊತ್ತಾಗಲಿದೆ?
* ಮಾಂಸದ ಪೀಸ್‌ಗಳಿಗೆ ಕೆಮಿಕಲ್ ಹಾಕಿದಾಗ ಕಲರ್ ಬರುತ್ತದೆ.
* ಕುರಿ ಮಾಂಸ, ಮೇಕೆ ಮಾಂಸ ಮತ್ತು ನಾಯಿ ಮಾಂಸ ಆದರೆ ಬೇರೆ ಬೇರೆ ಕಲರ್ ಬರಲಿದೆ.
* ಕಲರ್ ಮುಖಾಂತರ ಯಾವ ಪ್ರಾಣಿಯ ಮಾಂಸ ಅಂತ ತಜ್ಞರು ಪತ್ತೆಮಾಡುತ್ತಾರೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡ ಆರೋಪಿದ್ದರು. ಶುಕ್ರವಾರ ರಾತ್ರಿ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿ ಭಾರೀ ಹೈಡ್ರಾಮ ಸೃಷ್ಟಿಸಿದ್ದರು. ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಆಹಾರ ಸುರಕ್ಷತಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಪೊಲೀಸರು ಪುನೀತ್‌ರ ಕೆರೆಹಳ್ಳಿಯನ್ನ ವಶಕ್ಕೆ ಪಡೆದರು.
ಬೆಂಗಳೂರು: ನಗರದಲ್ಲಿ ನಾಯಿ ಮಾಂಸ (Dog Meat) ದಂಧೆ ಆರೋಪ ಕೇಳಿ ಬಂದಿದೆ. ರಾಜಸ್ಥಾನದಿಂದ (Rajasthan) ಬೆಂಗಳೂರು (Bengaluru) ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಂದ 90 ಬಾಕ್ಸ್‌ಗಳಲ್ಲಿ ನಾಯಿ ಮಾಂಸ ಸಾಗಾಟ ಮಾಡಲಾಗ್ತಿದೆ ಅಂತ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ತಂಡ ಆರೋಪಿಸಿದೆ. ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಮುಖಂಡರೊಂದಿಗೆ ಮಾತಿನ ಚಕಮಕಿ ನಡೆಸಿ, ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ.
ಇದೇ ವೇಳೆ ಸ್ಥಳಕ್ಕಾಗಮಿಸಿದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜೊತೆಗೂ ವಾಕ್ಸಮರ ನಡೆಸಿದ್ದಾರೆ. ಆರೋಪ ಅಲ್ಲಗಳೆದಿರುವ ಅಬ್ದುಲ್ ರಜಾಕ್, 2 ದಿನಕ್ಕೆ ಒಮ್ಮೆ ಜೈಪುರದಿಂದ ಬೆಂಗಳೂರಿಗೆ ಕುರಿ ಮಾಂಸ ಬರುತ್ತೆ. ಇವತ್ತು 2,000 ಕೆಜಿ ಮಾಂಸ ಬಂದಿದೆ. 12 ವರ್ಷದಿಂದ ಈ ವ್ಯವಹಾರ ನಡೀತಿದೆ. ರಾಜಸ್ಥಾನ ಕುರಿಗಳಿಗೆ ಬಾಲ ಇದೇ ರೀತಿ ಇರುತ್ತೆ, ಅದನ್ನ ನಾಯಿ ಅಂತಿದ್ದಾರೆ. ಯಾವುದೇ ಆಹಾರ ಇಲಾಖೆ ಬಂದು ಚೆಕ್ ಮಾಡಲಿ. ಪುನೀತ್ ಕೆರೆಹಳ್ಳಿ ವಿರುದ್ಧ ದೂರು ಕೊಡ್ತೇನೆ ಅಂದಿದ್ದಾರೆ. ಅಬ್ದುಲ್ ರಜಾಕ್ ಸಂಬಂಧಿ ಮಾಂಸ ಸಾಗಾಟದ ಲೈಸೆನ್ಸ್ ಪಡೆದಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶ: ಚಪ್ಪಲಿ ಹೊಲಿಯುವ ಚಮ್ಮಾರನ ಅಂಗಡಿಗೆ ರಾಗಾ ದಿಢೀರ್ ಭೇಟಿ
ಮೀನು ಅಂತಾ ಬೋರ್ಡ್ ಹಾಕಿಕೊಂಡು ಮಾಂಸ ಸಾಗಾಟ ಮಾಡ್ತಿದ್ದಾರೆ. ಮೀನು ತಂದಿದ್ದರೇ ಮೀನು ಅಂತಾ ಬೋರ್ಡ್ ಇರಬೇಕಿತ್ತು. ಮಾಂಸ ತಂದು ಅದಕ್ಕೆ ಮೀನು ಅಂತಾ ಯಾಕೇ ಬೋರ್ಡ್ ಹಾಕಿದ್ದಾರೆ. ನಾಯಿ ಮಾಂಸವೇ ಇರಬೇಕು ಅನ್ನೋ ಅನುಮಾನ, ಬಿಬಿಎಂಪಿ ಅಧಿಕಾರಿಗಳು ಬರಬೇಕು. ಇಲ್ಲೇ ಮಾಂಸ ಸೀಜ್ ಮಾಡಬೇಕು. ಯಾವ ಮಾಂಸ ಅಂತಾ ಗೊತ್ತಾಗಬೇಕು. ಕನಿಷ್ಠ 4 ದಿನದ ಹಿಂದೆ ಕಟ್ ಮಾಡಿರೋ ಮಾಂಸವಿದು. ಇದನ್ನ ಐಸ್ ಬಾಕ್ಸ್‌ನಲ್ಲಿ ತಂದಿರೋದಕ್ಕೆ ಅನುಮತಿ ಇದೆಯಾ? ಇದರ ಬಗ್ಗೆ ಅನುಮಾನ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೆಟ್ರೊಪಾಲಿಟನ್ ಸಿಟಿಗಳ ಪೈಕಿ ಬೆಂಗಳೂರಿನಲ್ಲಿ ಹೆಚ್ಚು ವಾಹನಗಳಿವೆ: ಪರಮೇಶ್ವರ್
ಇದು ಕುರಿ ಮಾಂಸ ಅನ್ನೋದರ ಬಗ್ಗೆ ಅನುಮಾನ ಇದೆ, ಮರಿ ಮಾಂಸವನ್ನ 550 ರೂಪಾಯಿಗೆ ಹೇಗೆ ಕೊಡಲು ಸಾಧ್ಯ? ಅಬ್ದುಲ್ ರಜಾಕ್ ಇದು ನಂದು ಅಂತಾ ಬಂದಿದ್ದಾರೆ. ಅದ್ರೇ ಬಿಲ್ ಬಂದಿರೋದು ಬೇರೆಯವರ ಹೆಸರಿನಲ್ಲಿ. ಕೇವಲ 550 ರೂಪಾಯಿಗೆ ಮಾಂಸ ಗ್ರಾಹಕರಿಗೆ ನೀಡ್ತಾರೆ ಅಂದ್ರೆ ಇವರಿಗೆ ಎಷ್ಟಕ್ಕೆ ಸಿಗುತ್ತೆ? ಎಂದೆಲ್ಲಾ ಪುನೀತ್ ಕೆರೆಹಳ್ಳಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಮ ಅಲ್ಲೇ ಇರ್ತಾನೆ, ರಾಮನಗರವೂ ಅಲ್ಲೇ ಇರುತ್ತೆ – ಪರಮೇಶ್ವರ್ ತಿರುಗೇಟು
ಬೆಂಗಳೂರು: ಮಂಗಳವಾರ ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ (Lok Sabha Election 2024) ನಡೆಯುವ ಹಿನ್ನೆಲೆ ಉತ್ತರ ಕರ್ನಾಟಕ ಭಾಗಗಳಿಗೆ ಕೆಎಸ್‌ಆರ್‌ಟಿಸಿ (KSRTC) ಹೆಚ್ಚುವರಿ ಬಸ್‌ಗಳ ಜೊತೆಗೆ ಬಿಎಂಟಿಸಿ (BMTC) ಬಸ್‌ಗಳನ್ನು ನಿಯೋಜಿಸಿದ್ದು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದೆ.
ಮತದಾನ (Vote) ಮಾಡುವ ಸಲುವಾಗಿ ಸೋಮವಾರ ಬೆಳಗ್ಗೆಯಿಂದಲೇ ಪ್ರಯಾಣಿಕರು ತಮ್ಮ ಊರುಗಳತ್ತ ತೆರಳುತ್ತಿದ್ದು, ಭಾನುವಾರವೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಸಾಕಷ್ಟು ಜನ ತೆರಳಿದ್ದಾರೆ. ಈ ಹಿನ್ನೆಲೆ ಮತದಾರರ ಅನುಕೂಲಕ್ಕಾಗಿ ನಗರದ ಕೆಂಪೇಗೌಡ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಲಾಗಿದೆ. ಇದನ್ನೂ ಓದಿ: ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಮಹಜರು – ಸಂತ್ರಸ್ತೆಯ ಆರೋಪ ಏನು?
ಮೆಜೆಸ್ಟಿಕ್ (Mejestic) ಸುತ್ತಮುತ್ತ ಇಂದು ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆ ಇದ್ದು, ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಇಂದು ಸಂಜೆಯ ವೇಳೆಗೆ ಮೆಜೆಸ್ಟಿಕ್ ಸುತ್ತಮುತ್ತ ಸಂಚಾರಕ್ಕೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಇಂದು ಸಹ ಬಹಳಷ್ಟು ಜನ ಮತದಾನಕ್ಕೆ ಹೋಗುವ ಸಾಧ್ಯತೆ ಇರುವುದರಿಂದ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್ ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಬಂಟ್ವಾಳದಲ್ಲಿ ಪೋಷಕರ ಕಣ್ಣೆದುರೇ ಮಕ್ಕಳು ನೀರುಪಾಲು
ಮತದಾನಕ್ಕೆ ಒಳಪಡುವ ಜಿಲ್ಲೆಗಳಿಗೆ ರೈಲ್ವೆ ಇಲಾಖೆಯಿಂದ ವಿಶೇಷ ರೈಲು ಕಲ್ಪಿಸಲಾಗಿದೆ. ವಿಜಯಪುರ, ಹೊಸಪೇಟೆ, ಹುಬ್ಬಳ್ಳಿ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಿಗೆ ವಿಶೇಷ ರೈಲು (Train) ಸಂಚರಿಸಲಿದ್ದು, ನೈರುತ್ಯ ರೈಲ್ವೆಯಿಂದ ಒಟ್ಟು 5 ವಿಶೇಷ ರೈಲುಗಳು ಓಡಾಟ ನಡೆಸಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲು ಸಂಚಾರ ಕಲ್ಪಿಸಲಾಗಿದೆ. ಇದನ್ನೂ ಓದಿ: ಮುಂದಿನ 5 ದಿನ ರಾಜ್ಯದ ಹಲವೆಡೆ ಮಳೆ ಸಾಧ್ಯತೆ
ಬೆಂಗಳೂರು: ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಯುವತಿಗೆ ಲೈಂಗಿಕ ಕಿರುಕುಳ (Sexual Harassment) ನೀಡಿದ ಪ್ರಕರಣ ಮಾಸುವ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ದಿನದಿಂದ ದಿನಕ್ಕೆ ಲೈಂಗಿಕ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದೆ. ಅದೇ ರೀತಿ ಹಗಲೊತ್ತಲ್ಲಿ, ಜನಜಂಗುಳಿಯಲ್ಲೇ ಕಾಮುಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ತುಂಬಿ ತುಳುಕುತ್ತಿದ್ದ ಮೆಟ್ರೋದಲ್ಲಿ (Namma Metro) ಯುವತಿಗೆ (Young Woman) ಲೈಂಗಿಕ ಕಿರುಕುಳ ನೀಡಿದ್ದು, ಕಿಡಿಗೇಡಿಯ ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಯುವತಿಗೆ ನ್ಯಾಯ ಒದಗಿಸಿ ಕಿಡಿಗೇಡಿಗೆ ತಕ್ಕ ಶಾಸ್ತಿ ಮಾಡುವಂತೆ ಆಗ್ರಹಿಸಲಾಗಿದೆ. ಇದನ್ನೂ ಓದಿ: ಧೂಳು ಹಿಡಿದ ಲಾರಿಯಲ್ಲಿ ಬೆಲೆ ಬಾಳುವ ಔಷಧಿಗಳ ಸಂಗ್ರಹ
ಆಗಿದ್ದೇನು?
ಸೋಮವಾರ ಬೆಳಗ್ಗೆ ಸುಮಾರು 8:30ರ ಸುಮಾರಿನಲ್ಲಿ ಸದಾ ಜನಜಂಗುಳಿ ಇರುವ ಮೆಜೆಸ್ಟಿಕ್ ಮೆಟ್ರೋದಲ್ಲಿ ಘಟನೆ ನಡೆದಿದೆ. ಯುವತಿ ಪ್ರತಿ ದಿನ ಕಾಲೇಜಿಗೆ ಬಸ್‌ನಲ್ಲೇ ತೆರಳುತ್ತಿದ್ದಳು. ಆದರೆ ಸೋಮವಾರ ಬೆಳಗ್ಗೆ 8:30ರ ಸುಮಾರಿಗೆ ಮೆಟ್ರೊದಲ್ಲಿ ಪ್ರಯಾಣಿಸಲು ಮೆಜೆಸ್ಟಿಕ್‌ಗೆ ಬಂದಿದ್ದಳು. ಮೆಟ್ರೊ ಏರುವಾಗ ದಟ್ಟಣೆಯಿತ್ತು. ಮೆಟ್ರೋ ಹತ್ತಿದ ನಂತರ ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯನ್ನು ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಆಕೆಗೆ ಏನಾಗುತ್ತಿದೆ ಎಂಬ ಅರಿವು ಇರಲಿಲ್ಲ. ಅರಿವಾದಾಗ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಸಹಪ್ರಯಾಣಿಕರು ನೆರವಿಗೆ ಬಂದಿರಲಿಲ್ಲ. ಆಕೆ ಅತ್ತು ಕಿರುಚಿದರೂ ಯಾರೂ ಆಕೆಯ ಸಹಾಯಕ್ಕೆ ಬರಲೇ ಇಲ್ಲ. ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ವಿಚಾರ ಬಹಿರಂಗ ಪಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಲ್ಲಿದ್ದಲು ಕಳ್ಳತನ ಕೇಸ್ – ಇದ್ದ ಮೂವರಲ್ಲಿ ಕಳ್ಳ ಯಾರು? ವೈಟಿಪಿಎಸ್ ಅಧಿಕಾರಿಗಳು ಹೇಳೋದು ಏನು?
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬಿಎಂಆರ್‌ಸಿಎಲ್ ಅಧಿಕಾರಿ ಯಶವಂತ್ ಚೌಹಾಣ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವ ಟೈಂ, ಯಾವ ಟ್ರೈನ್ ಅಂತಾ ಗೊತ್ತಾಗಬೇಕಿದೆ. ಈಗಾಗಲೇ ಸಿಸಿಟಿವಿಯಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ. ಇದುವರೆಗೂ ಈ ಕೇಸ್ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಆದರೂ ನಾವು ಕ್ರಮ ವಹಿಸಿ ಪರಿಶೀಲನೆ ಮಾಡುತ್ತಿದ್ದೇವೆ. ಇದರ ಬಗ್ಗೆ ವಿಚಾರಿಸಿ ಹೇಳುತ್ತೇವೆ. ಶೀಘ್ರದಲ್ಲೇ ಪತ್ತೆ ಮಾಡುತ್ತೇವೆ ಎಂದರು. ಇದನ್ನೂ ಓದಿ: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕಸರತ್ತು – ಅಧ್ಯಕ್ಷರ ಮೊದಲ ಪಟ್ಟಿ ಫೈನಲ್: ಸಭೆಯಲ್ಲಿ ಏನಾಯ್ತು?