Tag: Meitei community

  • ಮಣಿಪುರದಲ್ಲಿ ಕೋಮು ಸಂಘರ್ಷ: ಅನಧಿಕೃತ ಶಸ್ತ್ರಾಸ್ತ್ರಗಳನ್ನು ಕೂಡಲೇ ಒಪ್ಪಿಸಿ – ದಂಗೆಕೋರರಿಗೆ ಅಮಿತ್‌ ಶಾ ವಾರ್ನಿಂಗ್‌

    ಮಣಿಪುರದಲ್ಲಿ ಕೋಮು ಸಂಘರ್ಷ: ಅನಧಿಕೃತ ಶಸ್ತ್ರಾಸ್ತ್ರಗಳನ್ನು ಕೂಡಲೇ ಒಪ್ಪಿಸಿ – ದಂಗೆಕೋರರಿಗೆ ಅಮಿತ್‌ ಶಾ ವಾರ್ನಿಂಗ್‌

    – ನಿವೃತ್ತ ನ್ಯಾಯಾಧೀಶರ ನೇತೃತ್ವದದಲ್ಲಿ ತನಿಖೆ – ಕೇಂದ್ರ ಗೃಹ ಸಚಿವ ಭರವಸೆ

    ನವದೆಹಲಿ: ಈಶಾನ್ಯ ರಾಜ್ಯ ಮಣಿಪುರದಲ್ಲಿ (Manipur Violence) ನಡೆದ ಹಿಂಸಾಚಾರದ ಘಟನೆಗಳ ತನಿಖೆಯನ್ನು ಸಿಬಿಐ (CBI) ವಿಶೇಷ ತಂಡ ನಡೆಸಲಿದ್ದು, ಇದರ ಮೇಲ್ವಿಚಾರಣೆಗೆ ಕೇಂದ್ರ ಸರ್ಕಾರವು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದರು.

    ಇಂಫಾಲ್ ಪ್ರವಾಸದಲ್ಲಿರುವ ಅಮಿತ್ ಶಾ ಸರ್ವಪಕ್ಷಗಳ ಸಭೆ ಸೇರಿದಂತೆ ಹಿರಿಯ ಅಧಿಕಾರಿಗಳ ಸಭೆಗಳನ್ನು ನಡೆಸಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಹಿಂಸಾತ್ಮಕ ಘಟನೆಗಳ ತನಿಖೆಗಾಗಿ ಮಣಿಪುರದಲ್ಲಿ ಹಲವಾರು ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. 6 ಹಿಂಸಾಚಾರದ ಘಟನೆಗಳಲ್ಲಿ ಉನ್ನತ ಮಟ್ಟದ ಸಿಬಿಐ ತನಿಖೆ ನಡೆಯಲಿದೆ. ಈ ತನಿಖೆ ನ್ಯಾಯಯುತವಾಗಿರಲಿದೆ ಎಂದು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಶಾ ಹೇಳಿದರು. ಇದನ್ನೂ ಓದಿ: ಉತ್ತರಾಖಂಡದಲ್ಲಿ ಭೂಕುಸಿತ – ಸಂಕಷ್ಟಕ್ಕೆ ಸಿಲುಕಿದ 300 ಮಂದಿ ಪ್ರಯಾಣಿಕರು

    ಸಂಘರ್ಷದಿಂದ ಸಂತ್ರಸ್ತರಾದವರಿಗೆ ಪರಿಹಾರ ಮತ್ತು ಪುನರ್ವಸತಿಯನ್ನು ಸಿದ್ಧಪಡಿಸಲಾಗಿದೆ. ಹಿಂಸಾಚಾರದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಎರಡೂ ತಲಾ 5 ಲಕ್ಷ ರೂ. ನೀಡುತ್ತೇವೆ. ಮಣಿಪುರದ ರಾಜ್ಯಪಾಲರು ನಾಗರಿಕ ಸಮಾಜದ ಸದಸ್ಯರನ್ನೊಳಗೊಂಡ ಶಾಂತಿ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಅವರು ತಿಳಿಸಿದರು.

    ರಾಜ್ಯದಲ್ಲಿ ಹಿಂಸಾಚಾರದ ಸಂತ್ರಸ್ತರಿಗೆ ನೆರವು ನೀಡಲು ಕೇಂದ್ರ ಸರ್ಕಾರವು 20 ವೈದ್ಯರು ಸೇರಿದಂತೆ 8 ವೈದ್ಯಕೀಯ ತಜ್ಞರ ತಂಡಗಳನ್ನು ಮಣಿಪುರಕ್ಕೆ ಒದಗಿಸಿದೆ. ಈಗಾಗಲೇ 5 ತಂಡಗಳು ಇಲ್ಲಿಗೆ ತಲುಪಿವೆ ಮತ್ತು 3 ಇತರ ತಂಡಗಳು ದಾರಿಯಲ್ಲಿವೆ ಎಂದು ಅವರು ವಿವರಿಸಿದರು. ಇದೇ ವೇಳೆ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ಜನರಿಗೆ ಧೈರ್ಯ ತುಂಬಿದ ಶಾ, ಖೊಂಗ್‌ಸಾಂಗ್ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ಪ್ಲಾಟ್‌ಫಾರ್ಮ್ ನಿರ್ಮಿಸಲು ಯುದ್ಧೋಪಾದಿಯಲ್ಲಿ ಕೆಲಸ ನಡೆಯುತ್ತಿದೆ. ಒಂದು ವಾರದ ಅವಧಿಯಲ್ಲಿ ಅದು ಕಾರ್ಯರೂಪಕ್ಕೆ ಬರಬಹುದು ಎಂದರು. ಇದನ್ನೂ ಓದಿ: ಸಮುದ್ರದಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ ಬಿಜೆಪಿ ಶಾಸಕ

    ಇದೇ ವೇಳೆ ದಂಗೆಕೋರರಿಗೆ ಕೇಂದ್ರ ಗೃಹ ಸಚಿವರು ಎಚ್ಚರಿಕೆಯನ್ನೂ ನೀಡಿದ್ದಾರೆ. ಕೂಡಲೇ ಅನಧಿಕೃತ ಶಸ್ತ್ರಾಸ್ತ್ರಗಳನ್ನು ಒಪ್ಪಿಸಬೇಕು ಎಂದು ಸೂಚಿಸಿದ್ದಾರೆ. ಸಮಾಜದಲ್ಲಿ ಶಾಂತಿ ಕಾಪಾಡಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.

    ಹಿಂಸಾಚಾರ ಪೀಡಿತ ಮಣಿಪುರಕ್ಕೆ ಗೃಹ ಸಚಿವ ಅಮಿತ್ ಶಾ ನಾಲ್ಕು ದಿನಗಳಿಂದ ಪ್ರವಾಸದಲ್ಲಿದ್ದು, ಸಮುದಾಯಗಳ ನಡುವೆ ಶಾಂತಿ ಮಾತುಕತೆ, ಭದ್ರತಾ ಪಡೆಗಳು ಮತ್ತು ನಾಗರಿಕ ಅಧಿಕಾರಿಗಳೊಂದಿಗೆ ಸಭೆಗಳ ಅಧ್ಯಕ್ಷತೆ ವಹಿಸಿದ್ದಾರೆ. ಮೈಟಿ ಮತ್ತು ಕುಕಿ ಸಮುದಾಯಗಳ CSO ಗಳನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: LPG Cylinder Price:‌ ವಾಣಿಜ್ಯ ಬಳಕೆಯ LPG ಸಿಲಿಂಡರ್‌ ಬೆಲೆ ಭಾರೀ ಇಳಿಕೆ

  • ಹಿಂಸಾಚಾರ ಸಾವಿನ ಸಂಖ್ಯೆ 54ಕ್ಕೆ ಏರಿಕೆ – ಸಹಜ ಸ್ಥಿತಿಯತ್ತ ಮಣಿಪುರ

    ಹಿಂಸಾಚಾರ ಸಾವಿನ ಸಂಖ್ಯೆ 54ಕ್ಕೆ ಏರಿಕೆ – ಸಹಜ ಸ್ಥಿತಿಯತ್ತ ಮಣಿಪುರ

    ಇಂಪಾಲ: ಮಣಿಪುರದಲ್ಲಿ (Manipur) ಹಿಂಸಾಚಾರದ ಪರಿಣಾಮ ಸಾವಿನ ಸಂಖ್ಯೆ 54ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಶನಿವಾರ ಅಂಗಡಿಗಳು ಹಾಗೂ ಮಾರುಕಟ್ಟೆಗಳು ತೆರೆಯಲ್ಪಟ್ಟಿದ್ದು ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನಗಳ ಸಂಚಾರ ಪ್ರಾರಂಭಗೊಂಡಿದೆ. ಆದರೂ ಹೆಚ್ಚಿನ ಸೇನಾ ಪಡೆಗಳು, ಪೊಲೀಸ್ ಪಡೆಗಳು ಭದ್ರತೆಯ ದೃಷ್ಠಿಯಿಂದ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

    54 ಮೃತರಲ್ಲಿ 16 ಶವಗಳನ್ನು ಚುರಾಚಂದ್‍ಪುರ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. 15 ಮೃತದೇಹಗಳನ್ನು ಇಂಪಾಲ (Imphal) ಪೂರ್ವ ಜಿಲ್ಲೆಯ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Jawaharlal Nehru Institute of Medical Sciences) ಇರಿಸಲಾಗಿದೆ. ಇಂಪಾಲ ಪಶ್ಚಿಮ ಜಿಲ್ಲೆಯ ಲ್ಯಾಂಫೆಲ್‍ನಲ್ಲಿರುವ ರೀಜನಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿ 23 ಮಂದಿ ಶವ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಚುರಾಚಂದ್‍ಪುರ, ಮೋರೆ, ಕಾಕ್ಚಿಂಗ್ ಮತ್ತು ಕಾಂಗ್‍ಪೊಕ್ಪಿ ಜಿಲ್ಲೆಗಳನ್ನು ಸೇನೆಯು ನಿಯಂತ್ರಣಕ್ಕೆ ತಂದಿದ್ದರಿಂದ ಒಟ್ಟು 13,000 ಜನರನ್ನು ರಕ್ಷಿಸಲಾಗಿದೆ. ಅವರನ್ನು ಸುರಕ್ಷಿತ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಗುಂಡೇಟು ತಗುಲಿದ ಅನೇಕ ಜನರು ರಿಮ್ಸ್ ಮತ್ತು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

    ಹಿಂಸಾಚಾರದ ನಡುವೆ, ಶುಕ್ರವಾರ ರಾತ್ರಿ ಚುರಾಚಂದ್‍ಪುರ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್‌ನಲ್ಲಿ ಐವರು ಉಗ್ರರು ಹತರಾಗಿದ್ದಾರೆ. ಇಬ್ಬರು ಇಂಡಿಯಾ ರಿಸರ್ವ್ ಬೆಟಾಲಿಯನ್ ಜವಾನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂಪಾಲ ಕಣಿವೆಯಲ್ಲಿ ವಾಸಿಸುವ ಮೇಟಿ (Meitei community) ಮತ್ತು ಬೆಟ್ಟದ ಜಿಲ್ಲೆಗಳ ನಿವಾಸಿಗಳಾದ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರ ನಡುವೆ ಬುಧವಾರದಿಂದ ಘರ್ಷಣೆ ನಡೆಯುತ್ತಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಯ ಹಾಗೂ ಅಸ್ಸಾಂ ರೈಫಲ್ಸ್‍ನ ಸುಮಾರು 10,000 ಸೈನಿಕರನ್ನು ನಿಯೋಜಿಸಲಾಗಿದೆ. 1,000 ಕೇಂದ್ರೀಯ ಅರೆಸೈನಿಕ ಸಿಬ್ಬಂದಿ ನಿಯೋಜಿಸಲಾಗಿದೆ. ಗಲಭೆಯನ್ನು ನಿಯಂತ್ರಿಸಲು ರೈಲುಗಳನ್ನು ರದ್ದುಗೊಳಿಸಲಾಗಿದೆ ರೈಲ್ವೆ (Railway) ಇಲಾಖೆ ತಿಳಿಸಿದೆ.

    ಮೇಟಿ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು ನಾಲ್ಕು ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ (High Court) ಕಳೆದ ತಿಂಗಳು ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಟೊಬರ್ಂಗ್‍ನಲ್ಲಿ ನಡೆದ ಮೆರವಣಿಗೆಯಲ್ಲಿ ಶಸ್ತ್ರಸಜ್ಜಿತ ಜನಸಮೂಹವು ಮೇಟಿ ಸಮುದಾಯದ ಜನರ ಮೇಲೆ ದಾಳಿ ಮಾಡಿದೆ. ಇದು ಕಣಿವೆ ಜಿಲ್ಲೆಗಳಲ್ಲಿ ಹಿಂಸಾಚಾರಕ್ಕೆ ಕಾರಣವಾಯಿತು. ಇದು ರಾಜ್ಯದಾದ್ಯಂತ ವ್ಯಾಪಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಣಿಪುರದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಖರ್ಗೆ ಹತ್ಯೆಗೆ ಬಿಜೆಪಿ ಅಭ್ಯರ್ಥಿಯಿಂದ ಸಂಚು: ಕಾಂಗ್ರೆಸ್‌ ಆಡಿಯೋ ಬಾಂಬ್‌