Tag: Meghnaraj

  • ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ವಿಚಾರವನ್ನು ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಯನ್ ಜನಿಸಿದ ನಂತರ ನಾನು ಅಭಿನಯಿಸುತ್ತಿರುವ ಮೊದಲನೇ ಸಿನಿಮಾ ಇದಾಗಿದ್ದು, ಸಿನಿಮಾ ಮಾಡುವುದು ನನಗೆ ಖುಷಿ ನೀಡುತ್ತದೆ. ಇದು ಎಲ್ಲೋ ಒಂದು ಕಡೆ ನನ್ನ ತನವನ್ನು ನಾನು ಎಂಜಾಯ್ ಮಾಡುವಂತಹ ಕ್ಷೇತ್ರವಾಗಿದೆ. ಕ್ಯಾಮೆರಾ ಮುಂದೆ ನಿಂತುಕೊಳ್ಳುವುದು ನನಗೆ ಹೊಸದೇನಲ್ಲ.ಬಾಲ್ಯದಿಂದಲೂ ನನಗೆ ಸಿನಿಮಾ ಎಂದರೆ ಖುಷಿ ಇದೆ. ಆದರೀಗ ಮತ್ತೆ ಸಿನಿಮಾ ಮಡುವುದು ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಇದೇ ವೇಳೆ, ನನ್ನ ತಂದೆ ನನ್ನ ಪ್ರತಿಯೊಂದು ಕನಸ್ಸು ಹಾಗೂ ಹೆಜ್ಜೆಗೆ ಯಾವ ರೀತಿ ಬೆಂಬಲವಾಗಿ ನಿಂತಿದ್ದಾರೋ, ಅದೇ ರೀತಿ ಇಂದು ಚಿರು ಅವರ ತಂದೆ ವಿಜಯ್ ಕುಮಾರ್ ಕೂಡ ನನಗೆ ಬಹಳಷ್ಟು ಬೆನ್ನುಲುಬಾಗಿ ನಿಂತಿದ್ದಾರೆ. ನನ್ನ ಜೀವನದಲ್ಲಿ ಅಹಿತಕರ ಘಟನೆ ನಡೆದ ಬಳಿಕ ಸಿನಿಮಾ ಮಾಡುತ್ತೀಯಾ ಎಂದು ನನ್ನ ತಂದೆ ಕೇಳಿದ್ದರು. ಅದೇ ರೀತಿ ಚಿರು ಅವರ ತಂದೆ ಕೂಡ ನೀನು ಸುಮ್ಮನೆ ಕುಳಿತುಕೊಳ್ಳಬಾರದು. ನೀನು ಸಿನಿಮಾ ಮಾಡಬೇಕು. ಏಕೆಂದರೆ ಅದು ನಿನ್ನ ಪ್ಯಾಷೆನ್ ಎಂದು ಹೇಳಿ ಒಂದು ಪಾಸಿಟಿವ್ ಎನರ್ಜಿ ತುಂಬುತ್ತಿದ್ದರು. ಅವರ ಆಶೀರ್ವಾದ ನನ್ನ ಮೇಲಿದೆ ಎಂದು ನಂಬುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಚಿರಂಜೀವಿ ಸರ್ಜಾ ಸವಿ ನೆನಪು

    ಚಿರು ಸ್ನೇಹಜೀವಿ ಎಂಬುವುದು ಎಲ್ಲರಿಗೂ ಗೊತ್ತಿದೆ. ಸುಖದಲ್ಲಿ ಎಲ್ಲರೂ ಇರುತ್ತಾರೆ. ಆದರೆ ದುಃಖದಲ್ಲಿ ನಿಮ್ಮ ಜೊತೆ ಯಾರು ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ತಿರುಗಿ ನೋಡಿದಾಗ, ನಮಗೆ ನಿಜವಾದ ಸ್ನೇಹಿತರ್ಯಾರು? ನಿಜವಾಗಿಯೂ ನಮ್ಮ ಬಗ್ಗೆ ಕಾಳಜಿ ಇರುವುದು ಯಾರಿಗೆ ಎಂಬ ವಿಚಾರ ನಮಗೆ ಬಹಳ ಚೆನ್ನಾಗಿ ತಿಳಿಯುತ್ತದೆ. ಆ ಒಂದು ಗುಂಪಿನಲ್ಲಿ ನಾನು ನೋಡಿದಾಗ ನನ್ನ ಫ್ರೆಂಡ್ಸ್ ನನ್ನ ಕುಟುಂಬದವರಂತೆ ಇದ್ದಾರೆ. ಇದನ್ನೂ ಓದಿ: ಚಿರು ನನ್ನ ಜೀವನ, ನನ್ನ ಬೆಳಕು: ಮೇಘನಾ ರಾಜ್

    ಚಿರು ಹುಟ್ಟು ಹಬ್ಬದಂದು ಈ ಸಿನಿಮಾವನ್ನು ಲಾಂಚ್ ಮಾಡುತ್ತಿರುವುದು, ಚಿರು ಹಾಗೂ ಪನ್ನಾಗಭರಣ, ನನ್ನ ಸ್ನೇಹವನ್ನು ಗುರುತಿಸುತ್ತದೆ. ನನಗೆ ಸಿನಿಮಾ ಮಾಡಬೇಕೆಂಬ ಯೋಚನೆ ಬರುವ ಮುಂಚೆಯೇ ನನ್ನ ಪರವಾಗಿ ಪನ್ನಾಗಭರಣ ಮಾಡಿದ್ದಾರೆ. ಇದು ನಮ್ಮ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಬಹುದು  ಎಂದಿದ್ದಾರೆ. ಇದನ್ನೂ ಓದಿ: ಮಹಾರಾಣಿ ಧಿರಿಸಿನಲ್ಲಿ ಮೇಘನಾ ಫುಲ್ ಮಿಂಚಿಂಗ್

    ಒಟ್ಟಾರೆ ಚಿರು ಹುಟ್ಟುಹಬ್ಬದಂದು ಪಿಬಿ ಸ್ಟುಡಿಯೋಸ್‍ನಲ್ಲಿ ನನ್ನ ಸಿನಿಮಾ ಬರುತ್ತಿರುವುದು ಬಹಳ ಹೆಮ್ಮೆ ಹಾಗೂ ಖುಷಿ ಆಗುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

  • ಹಲವು ದಿನಗಳ ಬಳಿಕ ಮೇಘನಾ ಔಟಿಂಗ್ – ಫೋಟೋ ವೈರಲ್

    ಹಲವು ದಿನಗಳ ಬಳಿಕ ಮೇಘನಾ ಔಟಿಂಗ್ – ಫೋಟೋ ವೈರಲ್

    ಬೆಂಗಳೂರು: ಹಲವು ದಿನಗಳ ಬಳಿಕ ನಟಿ ಮೇಘನಾ ರಾಜ್ ತನ್ನ ಸ್ನೇಹಿತರೊಂದಿಗೆ ಕಾಲ ಕಳೆದಿದ್ದಾರೆ. ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆ ಸ್ಟೋರಿಯಾಗಿ ಒಂದೆರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಬಹುಶಃ ಜ್ಯೂನಿಯರ್ ಚಿರು ಜನಿಸಿದ ನಂತರ ಇದು ಮೇಘನಾ ರಾಜ್‍ರ ಮೊದಲ ಔಟಿಂಗ್ ಇರಬಹುದು.

    ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ 2020ರ ಜೂನ್ 7 ರಂದು ಕೊನೆಯುಸಿರೆಳೆದರು. ಬಳಿಕ ಗಂಡು ಮಗುವಿಗೆ ಜನನ ನೀಡಿದ ಮೇಘನಾ, ಆಗಾಗ ಪತಿ ಜೊತೆಗಿರುವ ಹಳೆಯ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುವುದರ ಮೂಲಕ ಚಿರುವನ್ನು ನೆನಪಿಸಿಕೊಳ್ಳುತ್ತಿದ್ದರು.

    ಇದೀಗ ಮೇಘನಾ ಹಲವು ದಿನಗಳ ಬಳಿಕ ಕಳೆದ ವಾರಾಂತ್ಯದಲ್ಲಿ ಬೆಂಗಳೂರಿನ ಕೆಫೆಯೊಂದರಲ್ಲಿ ಸ್ನೇಹಿತರೊಂದಿಗೆ ಎಂಜಾಯ್ ಮಾಡುತ್ತಾ ಅದ್ಭುತ ಕ್ಷಣಗಳನ್ನು ಕಳೆದಿದ್ದಾರೆ. ಕೆಫೆಯಲ್ಲಿ ಮೇಘನಾ ಜೊತೆ ನಟ ಹಾಗೂ ನಿರ್ದೇಶಕ ಪನ್ನಗಭರಣ ಹಾಗೂ ಅವರ ಪತ್ನಿ ನಿಕಿತಾ ಭರಣ, ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಚಂದ್ರನ್ ಸೇರಿದಂತೆ ಕೆಲವು ಸ್ನೇಹಿತರು ಮತ್ತು ಕುಟುಂಬಸ್ಥರು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ

    ಈ ಮುನ್ನ ಜನವರಿ 31 ಜೂನಿಯರ್ ಚಿರುಗೆ ಮೊದಲ ಬಾರಿಗೆ ಪೋಲಿಯೋ ಲಸಿಕೆ ಹಾಕಿಸಿರುವ ಕೈ ಉಗುರಿನ ಮೇಲೆ ಇಂಕ್ ಆಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಜೊತೆಗೆ ಪೋಲಿಯೋ ವಿರುದ್ಧ ಹೋರಾಡಲು ಮಕ್ಕಳಿಗೆ ಲಸಿಕೆ ಹಾಕಿಸಿ ಎಂದು ಕರೆ ನೀಡಿದರು.

     

    View this post on Instagram

     

    A post shared by Meghana Raj Sarja (@megsraj)

    ‘ಬೇಬಿ ಸಿ’ ಮೊದಲ ಬಾರಿಗೆ ತನ್ನ ಕೈ ಬೆರಳಿನ ಉಗುರಿಗೆ ಶಾಯಿ ಹಾಕಿಕೊಂಡಿದ್ದಾನೆ. ಕೇವಲ ಕೆಲವು ಡ್ರಾಪ್ಸ್ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮಕ್ಕಳನ್ನು ರಕ್ಷಿಸಿ ಹಾಗೂ ದೇಶವನ್ನು ಪೋಲಿಯೋ ಮುಕ್ತಗೊಳಿಸಿ. ಆರೋಗ್ಯಕರವಾಗಿರಿ, ಚೆನ್ನಾಗಿರಿ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದರು.

  • ಭಾವನಾತ್ಮಕ ಸಾಲುಗಳೊಂದಿಗೆ ತಂದೆಯ ಜನ್ಮದಿನಕ್ಕೆ ಶುಭಕೋರಿದ ಮೇಘನಾ

    ಭಾವನಾತ್ಮಕ ಸಾಲುಗಳೊಂದಿಗೆ ತಂದೆಯ ಜನ್ಮದಿನಕ್ಕೆ ಶುಭಕೋರಿದ ಮೇಘನಾ

    ಬೆಂಗಳೂರು: ನಟಿ ಮೇಘನಾ ರಾಜ್ ಅವರು ತಂದೆಯ ಹುಟ್ಟುಹಬ್ಬಕ್ಕೆ ಭಾವನಾತ್ಮಕವಾದ ಸಾಲುಗಳನ್ನು ಬರೆದುಕೊಂಡು ಶುಭಕೋರಿದ್ದಾರೆ.

    ತಂದೆಯ ಬರ್ತ್ ಡೇ ಹಿನ್ನೆಲೆಯಲ್ಲಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಕುಟ್ಟಿಮಾ, ಪ್ರೀತಿಯ ಅಪ್ಪಾ… ನಾನು ಅವಲಂಬಿಸುವ ಏಕೈಕ ಭುಜ ನಿಮ್ಮದು. ನಿಮ್ಮ ಜನ್ಮದಿನದಂದು ನಾನು ಈ ವಿಷಯವನ್ನು ಇಡೀ ಜಗತ್ತಿಗೆ ಹೇಳಲು ಇಷ್ಟಪಡುತ್ತೇನೆ. ನಾನು ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ಲವ್ ಯೂ ಅಪ್ಪಾ ಎಂದು ಬರೆದುಕೊಂಡು ತಂದೆಯ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

    ಸುಂದರ್ ರಾಜ್ ಅವರು 69ನೇ ವರ್ಷದ ಹುಟ್ಟುಹಬ್ಬವನ್ನು ನಿನ್ನೆ ಆಚರಿಸಿಕೊಂಡಿದ್ದಾರೆ. ಹೀಗಾಗಿ ಮೇಘನಾ ಕೆಲ ಸಾಲುಗಳನ್ನು ಬರೆದುಕೊಂಡಿದ್ದು, ಅಭಿಮಾನಿಗಳು ಕೂಡ ಸುಂದರ್ ರಾಜ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಸುಂದರ್ ರಾಜ್ ಅವರ ಕುಂಟುಂಬದಲ್ಲಿ ಇವರ ಪತ್ನಿ, ಮಗಳು ಎಲ್ಲರೂ ಕಲಾವಿದರಾಗಿದ್ದಾರೆ. ಸುಂದರ್ ರಾಜ್ ಅವರು ತಮ್ಮದೇ ಆಗಿರುವ ಉತ್ತಮವಾದ ನಟನಾ ಶೈಲಿಯ ಮೂಲಕವಾಗಿ ಕಲಾದೇವಿಯ ಸೇವೆ ಮಾಡುತ್ತಾ ಕನ್ನಡ ಸಿನಿಪ್ರಿಯರನ್ನು ರಂಜಿಸುತ್ತಾ ಬಂದಿದ್ದಾರೆ. ಕಾಮಿಡಿ ಪಾತ್ರಗಳ ಮೂಲಕವಾಗಿ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿದ್ದಾರೆ.

    ಚಿರುಸರ್ಜಾನನ್ನು ಕಳೆದುಕೊಂಡು ದುಃಖದಲ್ಲಿದ್ದ ಈ ಕುಟುಂಬ ಮೊಮ್ಮಗನ ಆಗಮನದಿಂದ ಸಂತೋಷವಾಗಿದ್ದಾರೆ. ಚಿರುಸರ್ಜಾನನ್ನು ಕಳೆದುಕೊಂಡ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಸುಃಖ-ದುಃಖದಲ್ಲಿ ಸುಂದರ್ ರಾಜ್ ಭಾಗಿಯಾಗುತ್ತಿದ್ದಾರೆ.