ಬೆಂಗಳೂರು: ಜೂನಿಯರ್ ಚಿರು ಆರು ತಿಂಗಳ ಸಂಭ್ರಮದಲ್ಲಿದ್ದು, ಸರ್ಜಾ ಕುಟುಂಬ ಸುಂದರ ಫೋಟೋಶೂಟ್ ಮಾಡಿಸಿದೆ. ಸದ್ಯ ಆರರ ಸಂಭ್ರಮದಲ್ಲಿ ಪುಟ್ಟ ಚಿರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮೇಘನಾ ರಾಜ್ ಸರ್ಜಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಮಗ ಆರು ತಿಂಗಳನವನಾದ. ನಾನು ಮತ್ತು ತಂದೆ ಇಬ್ಬರು ಆತನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದು ಆರರ ಸಂಭ್ರಮ ಆಯೋಜಿಸಿದ ಎಲ್ಲರಿಗೂ ಮೇಘನಾ ರಾಜ್ ಧನ್ಯವಾದ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮ್ಮನ ಮಗ ಅಂತ ಬರೆದುಕೊಂಡು ಮುದ್ದಾದ ಫೋಟೋವನ್ನ ಮೇಘನಾ ಹಂಚಿಕೊಂಡಿದ್ದರು.
ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಅಂತ ಕರೆಯುತ್ತಾಳೆ ಎಂದು ತಂದೆ ಸುಂದರ್ ರಾಜ್ ಹೇಳಿದ್ದರು. ಅಕ್ಟೋಬರ್ 22ರಂದು ಜೂನಿಯರ್ ಹುಟ್ಟಿದ ಕೂಡಲೇ ಮೇಘನಾ ಅವರ ಆಸೆಯಂತೆ ಮಗುವನ್ನ ಚಿರಂಜೀವಿ ಫೋಟೋ ಮುಂದೆ ಹಿಡಿದು ತೋರಿಸಲಾಗಿತ್ತು.
ಬೆಂಗಳೂರು: ಜೂನಿಯರ್ ಚಿರು ಜನನದಿಂದಾಗಿ ಕೇವಲ ಕುಟುಂಬಸ್ಥರು ಮಾತ್ರವಲ್ಲ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ಹಲವು ವಿವಿಧ ರೀತಿಯ ಸಹಾಯ ಮಾಡಿದ್ದರೆ. ಇನ್ನೂ ಹಲವರು ಗಿಫ್ಟ್ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಜೂ.ಚಿರುಗಾಗಿ ಮೇಘನಾ ಅವರಿಗೆ ವಿಭಿನ್ನ ಗಿಫ್ಟ್ ಸಿಕ್ಕಿದೆ.
ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಸುಂದರವಾದ ಉಡುಗೊರೆ ನೀಡಿದ್ದು, ಮೇಘನಾ ರಾಜ್ ಅವರಿಗೆ ಹಸ್ತಾಂತರಿಸಿದ್ದಾರೆ. ಗಿಫ್ಟ್ ನೋಡಿದ ಮೇಘನಾ ರಾಜ್, ಫಿದಾ ಆಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಸಾಲುಗಳನ್ನು ಸಹ ಬರೆದಿರುವ ಅವರು, ಫ್ರೇಮ್‍ನಲ್ಲಿ ಸಂತೋಷವನ್ನು ಹಿಡಿದಿಡಲು ಬಯಸುವುದಾದರೆ ಈ ಸುಂದರ ಉಡುಗೊರೆ ನೀಡಿದ್ದಕ್ಕೆ ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಗೆ ಧನ್ಯವಾದಗಳು. ಪುಟ್ಟ ಪಾದಗಳು ಹಾಗೂ ಕೈಗಳನ್ನು ಮಾಡುವ ಮೂಲಕ ನಿಮ್ಮ ಕೆಲಸದಿಂದ ಚಿರಂಜೀವಿಯವರನ್ನು ಅಮರವಾಗಿಸಿದ್ದೀರಿ. ಜೂನಿಯರ್ ಸಿ ಖಂಡಿತವಾಗಿಯೂ ಇದನ್ನು ಕಾಪಾಡಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ಪುಟ್ಟ ಮಗುವಿನ ಕೈ ಮತ್ತು ಪಾದದ ಅಳತೆಯನ್ನು ತೆಗೆದು ಅದೇ ರೀತಿಯಾಗಿ ಅನಿಲಾ ಅವರು ತಯಾರಿಸಿಕೊಡುತ್ತಾರೆ. ಅನಿಲಾ ಅವರು ಈಗಾಗಲೇ ಹಲವರಿಗೆ ಈ ರೀತಿಯ ಫ್ರೇಮ್‍ಗಳನ್ನು ಮಾಡಿಕೊಟ್ಟಿದ್ದು ಹಲವರಿಗೆ ಉಡುಗೊರೆಗಳನ್ನು ಸಹ ನೀಡಿದ್ದಾರೆ. ಅದೇ ರೀತಿ ಇದೀಗ ಮೇಘನಾ ರಾಜ್ ಸರ್ಜಾ ಅವರ ಮಗ ಚೂನಿಯರ್ ಚಿರು ಕೈ ಹಾಗೂ ಪಾದಗಳ ಇಂಪ್ರೆಶನ್ ನಿಂದ ಮಾಡಿದ ಫ್ರೇಮ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಹ ಕಮೆಂಟ್‍ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರವನ್ನು ಮಾಡಲಾಗಿದ್ದು, ಉತ್ತರ ಕರ್ನಾಟಕ ಶೈಲಿಯ ಅನುಗುಣವಾಗಿ ಎಲ್ಲ ಕಾರ್ಯಗಳನ್ನು ಭರ್ಜರಿಯಾಗಿ ಮಾಡಲಾಗಿದೆ. ಮೇಘನಾ ರಾಜ್ ಅವರ ಸೀಮಂತ ಕಾರ್ಯದಿಂದ ಮಗುವಿನ ತೊಟ್ಟಿಲು ಶಾಸ್ತ್ರದ ವರೆಗೆ ಎಲ್ಲ ಕಾರ್ಯಗಳನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡಲಾಗಿತ್ತು. ವನಿತಾ ಗುತ್ತಲ್ ಅವರು ಜೂನಿಯರ್ ಚಿರುಗಾಗಿ ಕಲಘಟಗಿ ತೊಟ್ಟಿಲನ್ನು ನೀಡಿದ್ದರು.
ಈ ಬಗ್ಗೆ ಮಾತನಾಡಿದ್ದ ವನಿತಾ ಗುತ್ತಲ್, ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದ್ದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದ್ದರು.
ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಶಕ್ತಿ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಲಾಗಿದೆ ಎಂದು ವನಿತಾ ಗುತ್ತಲ್ ಅವರು ಹೇಳಿದ್ದರು.
ಹೀಗೆ ಅನೇಕರು ಜೂನಿಯರ್ ಚಿರುಗೆ ಗಿಫ್ಟ್ ನೀಡಿ ಹಾರೈಸಿದ್ದಾರೆ. ಇದೀಗ ಅನಿಲಾ ಅವರು ಅದ್ಭುತ ಫ್ರೇಮ್ ವರ್ಕ್‍ನ್ನು ಗಿಫ್ಟ್ ನೀಡಿದ್ದಾರೆ. ಇದರಲ್ಲಿ ಜೂನಿಯರ್ ಚಿರುನ ಸುಂದರ ಕೈ ಹಾಗೂ ಪಾದಗಳು ಮೂಡಿ ಬಂದಿವೆ. ಯಶ್ ಹಾಗೂ ರಾಧಿಕಾ ದಂಪತಿ ಪುತ್ರಿ ಐರಾಗೂ ಸಹ ಮೇಕಪ್ ಆರ್ಟಿಸ್ಟ್ ಒಬ್ಬರು ಇದೇ ರೀತಿಯ ಉಡುಗೊರೆ ನೀಡಿದ್ದರು.
ಬೆಂಗಳೂರು: ಧ್ರುವ ಸರ್ಜಾ ಪತ್ನಿ ಪ್ರೇರಣಾ ಹುಟ್ಟುಹಬ್ಬದ ಸಂಭ್ರದಲ್ಲಿದ್ದು, ಧ್ರುವ ಸರ್ಜಾ ಪತ್ನಿಗೆ ಸರ್ಪ್ರೈಸ್ ನೀಡುವ ಮೂಲಕ ಹುಟ್ಟುಹಬ್ಬ ಆಚರಿಸಿದ್ದಾರೆ. ಅದೇ ರೀತಿ ಚಿರು ಪತ್ನಿ ಮೇಘನಾ ರಾಜ್ ಸರ್ಜಾ ಭಾವನಾತ್ಮಕವಾಗಿ ಪೋಸ್ಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.
ಈ ಕುರಿತು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಮಡಿರುವ ಮೇಘನಾ, ಹ್ಯಾಪಿ ಬರ್ತ್‍ಡೇ ಸಿಲ್ ಅದ್ಭುತವಾಗಿ ಬದುಕಿ. ನೀನೊಂದು ಸುಂದರ ಆತ್ಮ ಎಂದು ಬರೆಯುವ ಮೂಲಕ ಶುಭ ಕೋರಿದ್ದಾರೆ. ಇದಕ್ಕೆ ಪ್ರೇರಣಾ ಅವರು ಪ್ರತಿಕ್ರಿಯಿಸಿದ್ದು, ಥ್ಯಾಂಕ್ಯೂ ಸೋ ಮಚ್ ಸಿಲ್‍ಮಾ ಎಂದಿದ್ದಾರೆ.
ಧ್ರುವ ಸರ್ಜಾ ಪತ್ನಿ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿದ್ದು, ಬೀಚ್‍ನ ಹೋಟೆಲ್‍ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸುಂದರವಾದ ಲೈಟಿಂಗ್ಸ್, ಸಿಡಿ ಮದ್ದು ಸೇರಿದಂತೆ ಸಮುದ್ರ ತೀರದಲ್ಲಿ ಫುಲ್ ಎಂಜಾಯ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ಕುರಿತು ಒಂದೂವರೆ ನಿಮಿಷದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಧ್ರುವ ಸರ್ಜಾ ಪತ್ನಿಗೆ ಶುಭಾಶಯ ತಿಳಿಸಿದ್ದಾರೆ. ಹ್ಯಾಪಿ ಬರ್ತ್‍ಡೇ ಮೈ ಫ್ರಂಡ್, ಮೈ ವೈಫ್ ಆ್ಯಂಡ್ ಮೈ ಲವ್ ಎಂದು ಬರೆದುಕೊಂಡಿದ್ದಾರೆ.
ಸದ್ಯ ಮೇಘನಾ ರಾಜ್ ಸರ್ಜಾ ಮತ್ತು ಅವರ ಮಗನಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದಕ್ಕೂ ಮೊದಲು ಮೇಘಾನ ಅವರ ತಾಯಿ ಪ್ರಮಿಳಾ ಜೋಷಾಯ್ ಮತ್ತು ತಂದೆ ಸುಂದರ್ ರಾಜ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಎಲ್ಲರೂ ಐಸೋಲೇಟ್ ಆಗಿದ್ದು, ಚಿಕಿತ್ಸೆ ಪಡೆಯುತ್ತುದ್ದಾರೆ. ಹೀಗಾಗಿ ಧ್ರುವ ಸರ್ಜಾ ಪತ್ನಿ ಪ್ರೇರಣಾ ಅವರ ಹುಟ್ಟುಹಬ್ಬವನ್ನು ಸಿಂಪಲ್ ಆಗಿ ಹೋಟೆಲ್‍ನಲ್ಲಿ ಆಚರಿಸಿದ್ದಾರೆ.