Tag: Meghna Raj

  • ಬೆಂಗಳೂರಿಗರೇ ವೋಟು ಮಾಡಿ: ಬೇಸರ ಹೊರಹಾಕಿದ ನಟಿ ಮೇಘನಾ

    ಬೆಂಗಳೂರಿಗರೇ ವೋಟು ಮಾಡಿ: ಬೇಸರ ಹೊರಹಾಕಿದ ನಟಿ ಮೇಘನಾ

    ಬೆಂಗಳೂರಿನ (Bangalore) ಜೆಪಿ ನಗರದ ಮತದಾನ (Voting) ಕೇಂದ್ರಕ್ಕೆ ನಾನು ಮತ್ತು ನನ್ನ ತಂದೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರೂ ಇರಲಿಲ್ಲ. ನಿಜಕ್ಕೂ ನನಗೆ ಶಾಕ್ ಆಯಿತು. ಮತದಾನ ಮಾಡುವಂತೆ ಏನೆಲ್ಲ ಮನವಿ ಮಾಡಿಕೊಂಡಿದ್ದಾರೆ. ಚುನಾವಣೆ ಆಯೋಗ ಸಾಕಷ್ಟು ಶ್ರಮ ಪಟ್ಟಿದೆ. ಆದರೆ, ಯುವಜನರಿಂದ ಮತದಾನಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿರುವುದು ನನಗಂತೂ ತುಂಬಾ ಬೇಸರವಾಗಿದೆ ಎಂದು ನಟಿ ಮೇಘನಾ ರಾಜ್ ಸರ್ಜಾ (Meghna Raj) ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಯುವಜನರ ನೀರಸ ಪ್ರತಿಕ್ರಿಯೆ ಬೇಸರ ತಂದಿದೆ. ಅಲ್ಲದೇ, ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಮಾಡ್ತಾರೆ. ಬೆಂಗಳೂರಿಗೆ ಸಮಸ್ಯೆಯಾದಾಗ ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಆಗುತ್ತೆ. ಆದರೆ, ರಿಯಾಲಿಟಿಯಲ್ಲಿ ಮತದಾನ ಮಾಡೋಕೆ ಮಾತ್ರ ಹಿಂದೇಟು ಯಾಕೆ?’ ಎಂದು ಅವರು ಪ್ರಶ್ನೆ ಮಾಡಿದರು. ಇದನ್ನೂ ಓದಿ:ನಾನ್ ವೆಜ್ ತಿನ್ನಲ್ಲ ಅಂತಾ ಹೇಳಿ ತಗ್ಲಾಕೊಂಡ ರಶ್ಮಿಕಾ ಮಂದಣ್ಣಗೆ ನೆಟ್ಟಿಗರಿಂದ ತರಾಟೆ

    ಹುರುಪಿನಿಂದಲೇ ನಾನು ಮತ್ತು ನನ್ನ ಕುಟುಂಬ ಮತದಾನ ಮಾಡುವುದಕ್ಕೆ ಬಂದೆವು. ಬೂತ್ ಗೆ ಬಂದಾಗ ನಮ್ಮ ಕುಟುಂಬ ಬಿಟ್ಟು ಬೇರೆ ಯಾರು ಇರಲಿಲ್ಲ. ಮತದಾನ ನಡೆಯುತ್ತಿದೆಯಾ ಅಥವಾ ಇಲ್ಲವಾ ಎಂದು ನಮಗೆ ಗೊಂದಲವಾಗುವಂತೆ ಜನರು ಇದ್ದರು. ಹೀಗೆ ಆಗಬಾರದು. ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು ಎಂದು ಮೇಘನಾ ಹಾಗೂ ತಂದೆ ಸುಂದರ್ ರಾಜ್ ಬೇಸರ ವ್ಯಕ್ತಪಡಿಸಿದರು.

  • ಅಣ್ಣ ಚಿರಂಜೀವಿ ಸರ್ಜಾ ಕೊನೆಯ ಚಿತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್

    ಅಣ್ಣ ಚಿರಂಜೀವಿ ಸರ್ಜಾ ಕೊನೆಯ ಚಿತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್

    ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಚಿತ್ರದ “ರಾಜ ಮಾರ್ತಾಂಡ” ಟ್ರೇಲರ್ ಗೆ ಮೊನ್ನೆಯಷ್ಟೇ  ಧ್ರುವ ಸರ್ಜಾ ಧ್ವನಿ ನೀಡಿದ್ದರು. ಈ ಟ್ರೇಲರ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಈ ಸಿನಿಮಾ ಪೂರ್ತಿಯಾಗಿ ಡಬ್ಬಿಂಗ್ ಮಾಡಿಕೊಡುವುದಾಗಿ ಧ್ರುವ ಸರ್ಜಾ ತಿಳಿಸಿದ್ದಾರಂತೆ. ಚಿತ್ರದ ಕುರಿತು ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಉಪಸ್ಥಿತರಿದ್ದರು. ಮೇಘನಾರಾಜ್ ಹಾಗೂ ಸುಂದರರಾಜ್ ಪತ್ರಿಕಾಗೋಷ್ಠಿಗೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

    ಚಿರು ಸರ್ ನಮ್ಮ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದ್ದರು. ಡಬ್ಬಿಂಗ್ ಮಾಡುವುದು ಮಾತ್ರ ಬಾಕಿಯಿತ್ತು. ಆನಂತರ ನಡೆಯ ಬಾರದ ನಟನೆ ನಡೆದದ್ದು ಎಲ್ಲರಿಗೂ ಗೊತ್ತೇ ಇದೆ. ನಾನು ಚಿರು ಅವರ ಪಾರ್ಥಿವ ಶರೀರ ನೋಡಲು ಹೋದಾಗ, ಧ್ರುವ ಸರ್ಜಾ ಕೇಳಿದ ಮೊದಲ ಮಾತು, ಅಣ್ಣ ಡಬ್ಬಿಂಗ್ ಮುಗಿಸಿದ್ದಾರಾ? ನಾನು ಇಲ್ಲ ಅಂದೆ. ನಾನು ಮಾಡಿಕೊಡುತ್ತೀನಿ ಅಂದರು. ಹಾಗೆ ಟ್ರೇಲರ್ ಗೆ ಧ್ರುವ ಧ್ವನಿ ನೀಡಿದ್ದಾರೆ. ಸದ್ಯದಲ್ಲೇ ಡಬ್ಬಿಂಗ್ ಪೂರ್ಣಗೊಳಿಸಲಿದ್ದಾರೆ. ದರ್ಶನ್ ಸರ್ ಸಹ ವಾಯ್ಸ್ ಓವರ್ ಕೊಡುವುದಾಗಿ ಹೇಳಿದ್ದಾರೆ. ಮೇಘನಾರಾಜ್ ಹಾಗೂ ಸುಂದರರಾಜ್ ಅವರಂತೂ ನಮ್ಮ ಬೆಂಬಲಕ್ಕೆ ಸದಾ ಇದ್ದಾರೆ. ರಾಯನ್ ರಾಜ್ ಸರ್ಜಾ ಸಹ ನಮ್ಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಧನ್ಯವಾದ. ಜೂನ್ ನಲ್ಲಿ ಚಿತ್ರ ತೆರೆಗೆ ಬರಲಿದೆ. ದಿನಾಂಕ ನಿಗದಿಯಾಗಿದೆ. ಆದರೆ ಕೊರೋನ ನಾಲ್ಕನೇ ಅಲೆಯ ಪರಿಸ್ಥಿತಿ ನೋಡಿಕೊಂಡು ದಿನಾಂಕ ಘೋಷಣೆ ಮಾಡುತ್ತೇವೆ ಎಂದರು ನಿರ್ದೇಶಕ ರಾಮ್ ನಾರಾಯಣ್. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

    ಅದೇನೊ ಗೊತ್ತಿಲ್ಲ. ಅವರು ನಟಿಸುವ ಬೇರೆ ಚಿತ್ರಗಳ ಸಂಭಾಷಣೆನ್ನು ಅಲ್ಲೇ ಹೇಳಿ, ಹತ್ತು ನಿಮಿಷಕ್ಕೆ ಮರೆತು ಹೋಗತ್ತಿದ್ದರು. ಆದರೆ ಈ ಚಿತ್ರದ ಸಂಭಾಷಣೆ ಮಾತ್ರ ಯಾವಾಗಲೂ ಹೇಳುತ್ತಿದ್ದರು. ಕೊನೆಗೆ ಚಿರು ಬಂದರೆ ನಾವೆಲ್ಲಾ ಆ ಡೈಲಾಗ್ ಹೇಳುತ್ತಿದ್ದೆವು. ಅಷ್ಟು ಈ ಚಿತ್ರವನ್ನು ಹಚ್ಚಿಕೊಂಡಿದ್ದರು. ಅವರಿಲ್ಲದ ಈ ಸಮಯದಲ್ಲಿ ಚಿತ್ರತಂಡಕ್ಕೆ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ನಮ್ಮ ಎರಡು ಕುಟುಂಬಗಳ ಸಹಕಾರ ಸದಾ ನಿಮಗೆ ಇರುತ್ತದೆ ಎಂದರು ಮೇಘನಾರಾಜ್. ಇದನ್ನೂ ಓದಿ: ಪ್ರಧಾನಿ ಭೇಟಿ ಮಾಡಿ ಸಂಭ್ರಮಿಸಿದ ಗ್ರ್ಯಾಮಿ ಅವಾರ್ಡ್ ವಿಜೇತ ರಿಕಿ ಕೇಜ್

    ನಟ ಸುಂದರರಾಜ್, ನಾಯಕಿ ದೀಪ್ತಿ ಸಾಥಿ, ಮತ್ತೊಬ್ಬ ನಾಯಕಿ ಟಗರು ಖ್ಯಾತಿಯ ಋಶಿಕಾ ರಾಜ್ (ತ್ರಿವೇಣಿ ಈಗ ಋಶಿಕಾ ರಾಜ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ‌), ಚಿರು ಮಿತ್ರರಾದ ಮನೀಷ್, ಸಚಿನ್ ಮುಂತಾದವರು “ರಾಜ ಮಾರ್ತಾಂಡ” ಚಿತ್ರದ ಬಗ್ಗೆ ಮಾತನಾಡಿದರು. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು  ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ನಿರ್ಮಿಸಿದ್ದಾರೆ. ಇದನ್ನೂ ಓದಿ: ಜಾನ್ವಿ ಕಪೂರ್ ಡ್ಯಾನ್ಸ್‌ಗೆ ಫ್ಯಾನ್ಸ್ ಫಿದಾ: ಶ್ರೀದೇವಿಗೆ ಹೋಲಿಸಿದ ಅಭಿಮಾನಿಗಳು

    ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ, ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚತ್ರಕ್ಕಿದೆ. ಚಿರಂಜೀವಿ ಸರ್ಜಾ ಅವರಿಗೆ ನಾಯಕಿಯರಾಗಿ ದೀಪ್ತಿ‌ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಬೇಕೆಂದು ಕೊಂಡಿದ್ದೇವೆ. ಚಿರು ಅವರ ೧೦೧ ಅಡಿ ಎತ್ತರದ ಕಟೌಟ್ ನಿಲ್ಲಿಸಲಿದ್ದೇವೆ ಹಾಗೂ ರಾಯನ್ ರಾಜ್ ಸರ್ಜಾ ಅವರ ೫೧  ಎತ್ತರದ ಕಟೌಟ್ ಸಹ ನಿಲಿಸಲಿದ್ದೀವಿ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಶಿವಕುಮಾರ್.

  • ಚಿರು ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್

    ಚಿರು ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್

    ಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆಗೆ ಸಿದ್ಧವಾಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ. ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡವು ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮ್ ನಾರಾಯಣ್, ವಿಶೇಷ ಸುದ್ದಿಯೊಂದನ್ನು ನೀಡಿದ್ದಾರೆ. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಲಿದ್ದಾರಂತೆ. ಸಿನಿಮಾ ರೆಡಿಯಾಗಿ ಒಂದು ವರ್ಷವೇ ಆಗಿದೆ. ರಾಯನ್ ರಾಜ್ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ಹಾಗಾಗಿ ರಾಯನ್ ಯಾವ ರೀತಿಯಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಕುತೂಹಲದ ವಿಷಯ. ಇದನ್ನೂ ಓದಿ : ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

    ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ರಾಜ್ ಅವರ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿ ಫೋಟೋ ಬಂದಾಗಲೂ ಚಿರು ಅಭಿಮಾನಿಗಳು ಮತ್ತು ಮೇಘನಾ ರಾಜ್ ಅಭಿಮಾನಿಗಳು ಪ್ರೀತಿಯಿಂದ ಅವುಗಳನ್ನು ಬರಮಾಡಿಕೊಳ್ಳುತ್ತಾರೆ. ಈ ಬಾರಿ ಬಿಗ್ ಸ್ಕ್ರೀನ್ ನಲ್ಲೇ ರಾಯನ್ ರಾಜ್ ಅವರನ್ನು ಅಭಿಮಾನಿಗಳು ನೋಡಬಹುದಾಗಿದೆ. ಇದನ್ನೂ ಓದಿ: RGV ನಿರ್ದೇಶನದ ಲೆಸ್ಬಿಯನ್ ಸಿನಿಮಾ ಬಿಡುಗಡೆ ಮುಂದೂಡಿಕೆ

    ಮೊನ್ನೆಯಷ್ಟೇ ತೆರೆ ಕಂಡಿರುವ ಪುನೀತ್ ರಾಜ್ ಕುಮಾರ್ ಅವರ ಜೇಮ್ಸ್ ಸಿನಿಮಾದಲ್ಲಿ ಅಪ್ಪು ನಿಧನದ ನಂತರ ಅವರ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಕಾಣಿಸಿಕೊಂಡಿದ್ದರು. ಮೂವರು ಸಹೋದರರು ಒಂದೇ ಸಿನಿಮಾದಲ್ಲಿ ನಟಿಸಬೇಕಿತ್ತು ಎನ್ನುವ ಅಪ್ಪು ಅಭಿಮಾನಿಗಳ ಆಸೆಯನ್ನು ನಿರ್ದೇಶಕ ಚೇತನ್ ಕುಮಾರ್ ಪೂರೈಸಿದ್ದರು. ಇದಗ ರಾಯನ್ ರಾಜ್ ಕೂಡ ತಮ್ಮ ತಂದೆಯ ಕೊನೆಯ ಚಿತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಪ್ಪನ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

  • ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

    ಮೇಘನಾ ಮನೆಯಲ್ಲಿ ಕ್ರಿಸ್‍ಮಸ್‍ಗೆ ಭರ್ಜರಿ ತಯಾರಿ – ಕಲರ್ ಫುಲ್ ಲೈಟಿಂಗ್ಸ್ ನೋಡಿ ರಾಯನ್ ಖುಷ್

    ಬೆಂಗಳೂರು: ಕ್ರಿಸ್‍ಮಸ್ ಹಬ್ಬಕ್ಕೆ ಈ ಬಾರಿ ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮನೆಯಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು ಸಿಂಗಾರಗೊಂಡಿರುವ ಮನೆಯಲ್ಲಿ ಮೇಘನಾ ಪ್ರೀತಿಯ ಮಗನೊಂದಿಗೆ ಫೋಟೋವೊಂದನ್ನು ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    meghana raj

    ಮೇಘನಾ ರಾಜ್ ಅವರ ತಂದೆ ಸುಂದರ್ ರಾಜ್ ಹಿಂದೂ ಆಗಿದ್ದು, ಅವರ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗಾಗಿ ಮೇಘನಾ ಮನೆಯಲ್ಲಿ ಯಾವುದೇ ಹಿಂದೂ ಹಾಗೂ ಕ್ರಿಶ್ಚಿಯನ್ ಹಬ್ಬಗಳು ಬಂದಾಗ ಎರಡು ಹಬ್ಬವನ್ನು ಸಮನಾಗಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದನ್ನೂ ಓದಿ: ಮಗನ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಕರೀನಾ ವಿಶ್

    ಸದ್ಯ ಕ್ರಿಸ್‍ಮಸ್ ಹಬ್ಬಕ್ಕೆ ಇನ್ನೇನು ನಾಲ್ಕು ದಿನಗಳಷ್ಟೇ ಬಾಕಿ ಇದ್ದು, ಈ ಬಾರಿ ಹಬ್ಬಕ್ಕೆ ಮೇಘನಾ ರಾಜ್ ಮನೆಯನ್ನು ಸಖತ್ ಕಲರ್ ಫುಲ್ ಆಗಿ ಸಿಂಗರಿಸಲಾಗಿದೆ. ಇನ್ನೂ ಈ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ಲೈಟ್ ಹಾಗೂ ಸ್ಟಾರ್ಸ್‍ಗಳಿಂದ ಅಲಂಕಾರಗೊಳಿಸಲಾಗಿರುವ ಮನೆಯ ಮಧ್ಯ ಭಾಗದಲ್ಲಿ ಮೇಘನಾ ರಾಯನ್‍ನ್ನು ಎತ್ತಿಕೊಂಡಿದ್ದಾರೆ. ಫೋಟೋದಲ್ಲಿ ರಾಯನ್ ಮಂಕಿ ಕ್ಯಾಪ್ ಧರಿಸಿ ಕಲರ್ ಫುಲ್ ಆಗಿರುವ ಲೈಟಿಂಗ್ಸ್‍ನನ್ನೇ ಅಚ್ಚರಿಯಿಂದ ನೋಡುತ್ತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ಜೊತೆಗೆ ಲವ್, ಲೈಫ್ ಮತ್ತು ಅದ್ಭುತವಾದ ಕ್ರಿಸ್‍ಮಸ್ ತಿಂಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಈ ಮುನ್ನ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಹಿಂದೂ ಹಾಗೂ ಕ್ರಿಶ್ಚಿಯನ್ ಎರಡು ಸಂಪ್ರದಾಯದಂತೆ ಮದುವೆಯಾಗಿದ್ದರು. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ ಈ ದಂಪತಿಯ ಪ್ರೀತಿಯ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಅಲ್ಲದೇ ರಾಯನ್ ಎಂಬ ಹೆಸರು ಎಲ್ಲ ಧರ್ಮಕ್ಕೂ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ರೀತಿಯಲ್ಲಿ ಉಚ್ಛಾರಣೆ ಇರಬಹುದು, ಆದರೆ ಅರ್ಥ ಒಂದೇ. ರಾಯನ್ ಸರ್ಜಾ ಎಂದರೆ ಯುವರಾಜ ಎಂಬ ಅರ್ಥವಿದೆ ಎಂದು ಮೇಘನಾ ಸ್ಪಷ್ಟಪಡಿಸಿದ್ದರು. ಇದನ್ನೂ ಓದಿ: ನಿನ್ನ ಕಂಡ ಕ್ಷಣದಿಂದ ಯಾಕೋ ನಾನು ನನ್ನಲಿಲ್ಲ ಅಂತೀರೋ ರಮ್ಯಾ

  • ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

    ಮೊದಲ ಪದಗಳನ್ನು ಕಲಿಯುತ್ತಿರುವ ರಾಯನ್ – ಫುಲ್ ಖುಷ್ ಆದ ಮೇಘನಾ

    ಬೆಂಗಳೂರು: ಚಂದನವನದ ನಟಿ ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾ ಮೊದಲ ಪದವನ್ನು ಕಲಿಯುತ್ತಿದ್ದಾನೆ. ಅದನ್ನು ಮೇಘನಾ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡು ಫುಲ್ ಖುಷ್ ಆಗಿದ್ದಾರೆ.

    raayan raj sarja

    ರಾಯನ್‍ನ ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮೇಘನಾ ಯಾವಾಗಲೂ ತುಂಬಾ ಉತ್ಸುಕರಾಗಿರುತ್ತಾರೆ. ಅದೇ ರೀತಿ ಇಂದು ರಾಯನ್ ಮೊದಲ ಪದ ಕಲಿತಿದ್ದಾನೆ. ಆ ವೀಡಿಯೋವನ್ನು ಮೇಘನಾ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದು, ರಾಯನ್ ತನ್ನ ಮೊದಲ ಪದಗಳನ್ನು ಕಲಿಯುತ್ತಿದ್ದಾನೆ. ನಮ್ಮ ಲಯನ್ ಕಿಂಗ್ ನ ಈ ವೀಡಿಯೋದಲ್ಲಿ ನಿಮಗೆ ಇಷ್ಟವಾದ ಭಾಗ ಯಾವುದು? ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಸುದ್ದಿಗೋಷ್ಠಿಯಲ್ಲಿ ಕ್ಷಮೆ ಕೇಳಿದ ಅಲ್ಲು ಅರ್ಜುನ್

     

    View this post on Instagram

     

    A post shared by Meghana Raj Sarja (@megsraj)

    ಈ ವೀಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಗಳು ವಾವ್, ನಮ್ಮ ಲಯನ್ ಕಿಂಗ್, ನಮ್ಮ ಸಿಂಬ ಎಂದು ಬರೆದು ಕಮೆಂಟ್ ಮಾಡುತ್ತಿದ್ದಾರೆ. ಈ ವೀಡಿಯೋದಲ್ಲಿ ಮೇಘನಾ ರಾಯನ್ ಗೆ, ಲಯನ್ ಹೇಗೆ ಕೂಗುತ್ತೆ ತೋರಿಸು ಎಂದಾಗ, ರಾಯನ್ ಸಿಂಹದ ಘರ್ಜನೆಯನ್ನು ಅನುಕರಿಸಿದ್ದಾನೆ. ಈ ವೀಡಿಯೋ ಸಖತ್ ಕ್ಯೂಟ್ ಆಗಿ ಬಂದಿದ್ದು, ರಾಯನ್ ರಿಯಾಕ್ಷನ್ ಮಾತ್ರ ನೋಡುಗರನ್ನು ಆಕರ್ಷಿಸುತ್ತೆ.

    ಮೇಘನಾ, ರಾಯನ್ ಫೋಟೋ ಮತ್ತು ವೀಡಿಯೋಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿತ್ತಿರುತ್ತಾರೆ. ಅದು ಅಲ್ಲದೇ ಇತ್ತೀಚೆಗೆ ಅವರು ರಾಯನ್ ನ ಗೆಳೆಯರ ಜೊತೆಗೆ ಕುಳಿತು ಆಟವಾಡುತ್ತಿರುವ ವಿಶೇಷವಾದ ಫೋಟೋವನ್ನು ಶೇರ್ ಮಾಡಿದ್ದರು. ಈ ಫೋಟೋದಲ್ಲಿ ರಾಯನ್ ಮುದ್ದಾಗಿ ಕಾಣುತ್ತಿದ್ದನು. ಇದನ್ನೂ ಓದಿ: ಕನ್ನಡದಲ್ಲಿ ನನಗೆ ಡಬ್ಬಿಂಗ್ ಮಾಡಲು ಆಗಲಿಲ್ಲ: ರಶ್ಮಿಕಾ ಮಂದಣ್ಣ

    ಮೇಘನಾ ರಾಯನ್ ಬಂದ ಮೇಲೆ ಅವನಿಗಾಗಿಯೇ ತಮ್ಮ ಸಮಯವನ್ನು ಇಟ್ಟಿರುವ ಅವರು, ಯಾವಾಗಲೂ ಅವನ ಲಾಲನೆ-ಪಾಲನೆಯಲ್ಲಿ ಫುಲ್ ಬ್ಯುಸಿಯಾಗಿರುತ್ತಾರೆ.

  • ಮಗನನ್ನು ಮೊಟ್ಟೆ ಬಾಸ್ ಎಂದ ಮೇಘನಾ

    ಮಗನನ್ನು ಮೊಟ್ಟೆ ಬಾಸ್ ಎಂದ ಮೇಘನಾ

    ಬೆಂಗಳೂರು: ಚಂದನವನದ ನಟಿ ಮೇಘನಾ ರಾಜ್ ತಮ್ಮ ಮುದ್ದು ಮಗ ರಾಯನ್ ರಾಜ್ ಸರ್ಜಾ ಕೇಶಮುಂಡನ ಮಾಡಿಸಿದ್ದು, ಮಗನನ್ನು ಮೊಟ್ಟೆ ಬಾಸ್ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಮೇಘನಾ ಇನ್‍ಸ್ಟಾಗ್ರಾಮ್ ನಲ್ಲಿ ರಾಯನ್ ಕೇಶಮುಂಡನ ಮಾಡಿದ ಫೋಟೋವನ್ನು ಶೇರ್ ಮಾಡಿ, ನಮ್ಮ ಮನೆಯ ಮೊಟ್ಟೆ ಬಾಸ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದರ ಜೊತೆಗೆ ರಾಯನ್ ರಿಯಾಕ್ಷನ್ ನನ್ನು ಬರೆದು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಗಾಂಧಿಯಂತೆ ಚರಕ ತಿರುಗಿಸಿದ ಬಾಲಿವುಡ್ ಸುಲ್ತಾನ್

     

    View this post on Instagram

     

    A post shared by Meghana Raj Sarja (@megsraj)

    ಈ ಫೋಟೋದ ಮತ್ತೊಂದು ವಿಶೇಷವೆಂದರೆ ಮೇಘನಾ ತನ್ನ ಮಗನ ಜೊತೆ ಪತಿ ಚಿರಂಜೀವಿ ಸರ್ಜಾ ಅವರ ಫೋಟೋ ಮುಂದೆ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಚಿರು ಅಗಲಿದ ನಂತರ ಮಗನ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಮೇಘನಾ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಿದ್ದಾರೆ.

    ಬೆಳೆದು ದೊಡ್ಡವನಾದ ಮೇಲೆ ನನ್ನನ್ನು ಅಮ್ಮ ಎಷ್ಟು ಚೆನ್ನಾಗಿ ನೋಡಿಕೊಂಡಿದ್ದರು ಎಂದು ರಾಯನ್ ಹೆಮ್ಮೆ ಪಡುವ ರೀತಿ ಬೆಳೆಸಬೇಕು ಎಂಬುದು ಮೇಘನಾ ಅವರ ಆಸೆಯಾಗಿದೆ. ಅದರಂತೆ ಅವರು ರಾಯನ್ ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಲು ಬಹಳ ಉತ್ಸುಕರಾಗಿರುತ್ತಾರೆ. ರಾಯನ್ ಗೆ ಅಭಿಮಾನಿ ಬಳಗವೂ ಹೆಚ್ಚಿದ್ದು, ಅವನ ಅಪ್ಡೇಟ್ ಮತ್ತು ಫೋಟೋಗಳಿಗಾಗಿ ಕಾಯುತ್ತಿರುತ್ತಾರೆ.

  • #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ

    #MeToo ಪ್ರಕರಣ – ಧರ್ಮೋ ರಕ್ಷತಿ ರಕ್ಷಿತಃ ಎಂದ ಧ್ರುವ, ಜಂಟಲ್ ಮ್ಯಾನ್ ಅಂದ ಮೇಘನಾ

    ಬೆಂಗಳೂರು: ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್‍ಗೆ ಹಿನ್ನೆಡೆ ಆಗಿದ್ದು, ಈ ಬಗ್ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

    2018ರಲ್ಲಿ ನಟಿ ಶೃತಿಹರಿಹರನ್ ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸದ್ಯ ಈ ಪ್ರಕರಣ ಕುರಿತಂತೆ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆ ಪೊಲೀಸರು ಸೋಮವಾರ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇದರಿಂದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅರ್ಜುನ್ ಸರ್ಜಾಗೆ ಮೂರು ವರ್ಷಗಳ ಬಳಿಕ ಕ್ಲೀನ್ ಚಿಟ್ ಸಿಕ್ಕಿದಂತಾಗಿದೆ. ದನ್ನೂ ಓದಿ: #MeToo ಪ್ರಕರಣ – ನಟಿ ಶೃತಿ ಹರಿಹರನ್‌ಗೆ ನೋಟಿಸ್

    ಇದೇ ಖುಷಿಯಲ್ಲಿ ನಟ ಧ್ರುವ ಸರ್ಜಾ ಅವರು ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೊಳ್ಳೆ ಬ್ಯಾಟ್‍ನಿಂದ ಸೊಳ್ಳೆಗಳನ್ನು ಸಾಯಿಸುತ್ತಿರುವ ಹಾಸ್ಯಕರವಾದ ವೀಡಿಯೋವೊಂದನ್ನು ಶೇರ್ ಮಾಡಿಕೊಂಡು ಸೊಳ್ಳೆ, ಕ್ರಿಮಿ, ಕೀಟ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ಧರ್ಮೋ ರಕ್ಷತಿ ರಕ್ಷಿತಃ ಎಂದು ಸಹ ಬರೆದುಕೊಂಡಿದ್ದಾರೆ.

    ಮತ್ತೊಂದಡೆ ಅರ್ಜುನ್ ಸರ್ಜಾ ಅವರನ್ನು ಯಾವಾಗಲೂ ಜಂಟಲ್ ಮ್ಯಾನ್ ಎಂದು ಕರೆಯುವ ನಟಿ ಮೇಘನಾ ರಾಜ್ ಕೂಡ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಜಂಟಲ್ ಮ್ಯಾನ್ ಇಸ್ ಆಲ್‍ವೆಸ್ ಜಂಟಲ್ ಮ್ಯಾನ್ ಎಂದು ಬರೆದುಕೊಂಡಿದ್ದಾರೆ. ದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ

     

    ನವೆಂಬರ್ 2015ರಲ್ಲಿ ಹೆಬ್ಬಾಳ ಹಾಗೂ ದೇವನಹಳ್ಳಿಯಲ್ಲಿ ವಿಸ್ಮಯ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶೃತಿ ಹರಿಹರನ್ ಆರೋಪಿಸಿದ್ದರು. ಈ ಘಟನೆ ನಡೆದ ಎರಡು ವರ್ಷಗಳ ನಂತರ ಶೃತಿ ಹರಿಹರನ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.

  • ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್

    ಕಾಡಿನ ಥೀಮ್ ನಡುವೆ ರಾಯನ್ ಬರ್ತ್‍ಡೇ ಸೆಲೆಬ್ರೆಶನ್ – ಫೋಟೋ, ವೀಡಿಯೋ ವೈರಲ್

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಸುಪುತ್ರ ರಾಯನ್ ರಾಜ್ ಸರ್ಜಾ ಹುಟ್ಟುಹಬ್ಬ ಶನಿವಾರ ಅದ್ದೂರಿಯಾಗಿ ನಡೆಯಿತು.

    ರಾಯನ್‍ಗೆ ಇದೀಗ ಒಂದು ವರ್ಷ ತುಂಬಿದ್ದು, ರಾಯನ್ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಮನೆಯಲ್ಲಿ ಸೆಲೆಬ್ರೆಟ್ ಮಾಡಲಾಗಿತ್ತು. ಇನ್ನೂ ಬರ್ತ್‍ಡೇ ಪಾರ್ಟಿಯಲ್ಲಿ ಸ್ಯಾಂಡಲ್‍ವುಡ್‍ನ ಹಲವಾರು ಸೆಲೆಬ್ರೆಟಿಗಳು ಭಾಗಿಯಾಗಿ ರಾಯನ್‍ಗೆ ಉಡುಗೊರೆಗಳನ್ನು ನೀಡಿ ವಿಶ್ ಮಾಡಿದರು. ಇದನ್ನೂ ಓದಿ: ನಾಳೆ ರಾಯನ್ ಸರ್ಜಾ ಹುಟ್ಟುಹಬ್ಬ – ಮಗನ ಬರ್ತ್‍ಡೇಗೆ ಮೇಘನಾ ಭರ್ಜರಿ ತಯಾರಿ

    raayan

    ಬರ್ತ್‍ಡೇ ದಿನ ರಾಯನ್ ರೆಡ್ ಆ್ಯಂಡ್ ಬ್ಲೂ ಕಲರ್ ಡ್ರೆಸ್ ತೊಟ್ಟು ಬಹಳ ಮುದ್ದು, ಮುದ್ದಾಗಿ ಕಾಣಿಸಿಕೊಂಡಿದ್ದನು. ಸಾಮಾನ್ಯವಾಗಿ ಪುಟ್ಟು ಮಕ್ಕಳಿಗೆ ಪ್ರಾಣಿ, ಪಕ್ಷಿ, ಗೊಂಬೆಗಳು ಎಂದರೆ ಬಹಳ ಪ್ರೀತಿ. ಹೀಗಾಗಿ ರಾಯನ್‍ಗೆ ಇಷ್ಟವಾಗುವಂತೆ ಮನೆಯ ಪೂರ್ತಿ ಕಾಡಿನ ಥೀಮ್‍ನಲ್ಲಿ ಅಲಂಕರಿಸಲಾಗಿತ್ತು. ಇದನ್ನೂ ಓದಿ: ನಮ್ಮ ಜಗತ್ತು.. ನಮ್ಮ ವಿಶ್ವ.. ಐ ಲವ್ ಯೂ ಕಂದ

    raayan birthday

    ಬರ್ತ್‍ಡೇ ಸೆಲೆಬ್ರೆಶನ್‍ನ ಒಂದಷ್ಟು ಫೋಟೋ ಹಾಗೂ ವೀಡಿಯೋವನ್ನು ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ವೀಡಿಯೋದಲ್ಲಿ ಜಿಂಕೆ, ಜಿರಾಫೆ, ಆನೆ, ಕೋತಿ, ಸಿಂಹ, ಗಿಳಿ ಮುಂತಾದ ಪ್ರಾಣಿ ಪಕ್ಷಿಗಳ ಪ್ರತಿಕೃತಿ ಬಹಳ ಆಕರ್ಷಿತವಾಗಿದ್ದವು. ಜೊತೆಗೆ ರಾಯನ್ ಹುಟ್ಟುಹಬ್ಬಕ್ಕೆ ಹಿರಿಯ ನಟ ದ್ವಾರಕೀಶ್, ನಟಿ ಶ್ರುತಿ, ನಟಿ ಸುಧಾರಾಣಿ ಹಾಗೂ ಅವರ ಪುತ್ರಿ, ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಚಂದ್ರನ್, ಪನ್ನಗ ಭರಣ ಸೇರಿದಂತೆ ಹಲವರು ಪಾಲ್ಗೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.

  • ನಾಳೆ ರಾಯನ್ ಸರ್ಜಾ ಹುಟ್ಟುಹಬ್ಬ – ಮಗನ ಬರ್ತ್‍ಡೇಗೆ ಮೇಘನಾ ಭರ್ಜರಿ ತಯಾರಿ

    ನಾಳೆ ರಾಯನ್ ಸರ್ಜಾ ಹುಟ್ಟುಹಬ್ಬ – ಮಗನ ಬರ್ತ್‍ಡೇಗೆ ಮೇಘನಾ ಭರ್ಜರಿ ತಯಾರಿ

    ಬೆಂಗಳೂರು: ಸ್ಯಾಂಡಲ್‍ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರ ರಾಯನ್ ರಾಜ್ ಸರ್ಜಾಗೆ ನಾಳೆ ಮೊದಲನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆ ಭರ್ಜರಿಯಾಗಿ ತಯಾರಿ ನಡೆಸಲಾಗುತ್ತಿದೆ.

    meghana raj

    ಸದ್ಯ ಈ ಕುರಿತಂತೆ ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ರಾಯನ್ ಆಟ ಆಡುತ್ತಿರುವ ವೀಡಿಯೋಗೆ ಪಾರ್ಟಿ ಸಾಂಗ್ ಸೆಟ್ ಮಾಡಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ರಾಯನ್ ಬಾಯಲ್ಲಿ ಬೆರಳು ಹಾಕಿಕೊಂಡು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದಾನೆ. ಜೊತೆಗೆ ಶೀರ್ಷಿಕೆಯಲ್ಲಿ ಹುಟ್ಟುಹಬ್ಬಕ್ಕೆ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮೇಘನಾ ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಮತ್ತೆ ಸಿನಿಮಾ ಮಾಡುತ್ತಿರುವುದು ದೊಡ್ಡ ಸವಾಲಾಗಿದೆ: ಮೇಘನಾ ರಾಜ್

    ಮತ್ತೊಂದೆಡೆ ಚಿರು ಆಪ್ತ ಗೆಳೆಯ ಪನ್ನಾಗಭರಣ ಪುತ್ರ ವೇದ್ ಭರಣ ರಾಯನ್‍ಗಾಗಿ ವಿಶೇಷವಾದ ಕೇಕ್ ಅನ್ನು ತಯಾರಿಸುತ್ತಿದ್ದು, ಈ ವೀಡಿಯೋವನ್ನು ಸಹ ಮೇಘನಾ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವೇದ್ ಭರಣ ಸೌಟ್ ಹಿಡಿದು ಕೇಕ್ ತಯಾರಿಸುತ್ತಿರುವುದನ್ನು ಕಾಣಬಹುದಾಗಿದ್ದು, ನಾನು ರಾಯನ್ ಸರ್ಜಾಗಾಗಿ ಕೇಕ್ ಅನ್ನು ತಯಾರಿಸುತ್ತಿದೇನೆ ಎಂದು ಹೇಳಿದ್ದಾನೆ.

    ved bharana

    ಕಳೆದ ವರ್ಷ ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಎಲ್ಲರನ್ನು ಅಗಲಿದ್ದರು. ಈ ವೇಳೆ ಕತ್ತಲೆ ತುಂಬಿದ್ದ ಮೇಘನಾ ರಾಜ್ ಬದುಕಿನಲ್ಲಿ ಬೆಳಕಂತೆ ರಾಯನ್ ರಾಜ್ ಸರ್ಜಾ 2020ರ ಅಕ್ಟೋಬರ್ 22ರಂದು ಜನಿಸಿದ. ಸದ್ಯ ರಾಯನ್ ಮೂಲಕ ಚಿರುವನ್ನು ಕಾಣುತ್ತಿರುವ ಮೇಘನಾ, ನಾಳೆ ಮಗನ ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ.  ಇದನ್ನೂ ಓದಿ: ಚಿರು ಹುಟ್ಟುಹಬ್ಬದ ನೆನಪಿನಲ್ಲಿ ಮೇಘನಾ ಹೊಸ ಸಿನಿಮಾ ಘೋಷಣೆ

    ಇತ್ತೀಚೆಗಷ್ಟೇ ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದು ಮತ್ತೆ ಬಣ್ಣಹಚ್ಚುವುದಾಗಿ ಮೇಘನಾ ಘೋಷಿಸಿದ್ದು, ಬೇರೆ ಯಾವ ದಿನವೂ ಉತ್ತಮವಾಗಿರಲಿಲ್ಲ, ಬೇರೆ ಯಾವುದೇ ತಂಡವು ಇಷ್ಟು ಉತ್ತಮವಾಗಿರಲಾರದು, ಇದು ನಿಮ್ಮ ಜನ್ಮದಿನ, ಇದು ನಮ್ಮ ಕನಸು ಆಗಿದೆ. ಇದು ನಿಮಗಾಗಿ ಚಿರು, ಪನ್ನ ಇಲ್ಲದಿದ್ದರೆ ನಾನು ಈ ಬಗ್ಗೆ ಯೋಚಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಅಧಿಕೃತವಾಗಿ ಹೇಳುತ್ತಿದ್ದೇನೆ ಕ್ಯಾಮರಾ, ರೋಲಿಂಗ್, ಆ್ಯಕ್ಷನ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

  • ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಗೊಂಬೆಗಳ ಮಧ್ಯೆ ಪುಟ್ಟ ಗೊಂಬೆಯಂತೆ ಕುಳಿತ ರಾಯನ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ಸರ್ಜಾ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ ಮನೆಮಾಡಿದ್ದು, ಗೊಂಬೆಗಳ ಮಧ್ಯೆ ರಾಯನ್ ರಾಜ್ ಸರ್ಜಾ ಫೋಟೋಗೆ ಪೋಸ್ ನೀಡಿದ್ದಾನೆ.

    ನಾಡಿನಾದ್ಯಂತ ದಸರಾ ಹಬ್ಬವನ್ನು ಜನರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಸಾಮಾನ್ಯವಾಗಿ ದಸರಾ ವೇಳೆ ಮನೆಯಲ್ಲಿ ವಿವಿಧ ಗೊಂಬೆಗಳನ್ನು ಕೂರಿಸುವ ಪದ್ಧತಿ ಇದೆ. ಇದೀಗ ಮೇಘನಾ ಸರ್ಜಾ ಅವರು ದಸರಾ ಹಬ್ಬದ ಹಿನ್ನೆಲೆ ವಿವಿಧ ರೀತಿಯ ಗೊಂಬೆಗಳನ್ನು ಕೂರಿಸಿ ಹಬ್ಬವನ್ನು ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಈ ಗೊಂಬೆಗಳ ಮಧ್ಯೆ ಪುಟ್ಟಗೊಂಬೆಯಂತೆ ಕುಳಿತುಕೊಂಡು ರಾಯನ್ ರಾಜ್ ಸರ್ಜಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಇದನ್ನೂ ಓದಿ: 16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

    meghana raj

    ಸದ್ಯ ಈ ಮುದ್ದಾದ ಫೋಟೋವನ್ನು ಮೇಘನಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ರಾಯನ್ ನೆತ್ತಿ ಮೇಲೆ ಪುಟ್ಟ ಜುಟ್ಟನ್ನು ಕಟ್ಟಿಕೊಂಡಿದ್ದು ಸಕತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾನೆ. ಫೋಟೋ ಜೊತೆಗೆ ಶೀರ್ಷಿಕೆಯಲ್ಲಿ, ದಸರಾ ಯಾವಾಗಲೂ ನನ್ನ ಕುಟುಂಬಕ್ಕೆ ವಿಶೇಷ ಹಬ್ಬವಾಗಿದೆ ಮತ್ತು ನನ್ನ ಪುಟ್ಟ ಕಂದ ತನ್ನ ಮೊದಲ ವಿಜಯದಶಮಿಯನ್ನು ತನ್ನ ಕೊಲ್ಲು ಪಾಟಿ(ನನ್ನ ತಂದೆಯ ಅಜ್ಜಿ)ಯ ಮನೆಯಲ್ಲಿ ಆಚರಿಸುತ್ತಿದ್ದಾನೆ. ನೀವು ಹಿಂದೆ ನೋಡುತ್ತಿರುವ ಬೊಂಬೆಗಳೆಲ್ಲಾ 45 ವರ್ಷಗಳಿಗಿಂತ ಹಳೆಯದು. ಮುಂದಿನ ವರ್ಷ ಯಾವಾಗಲೂ ಹಬ್ಬವನ್ನು ಸಂತೋಷದಿಂದ ಆಚರಿಸಲು ಪ್ರತಿ ವರ್ಷ ಎಚ್ಚರಿಕೆಯಿಂದ ಇವುಗಳನ್ನು ಸಂಗ್ರಹಿಸಲಾಗಿದೆ. ಕಳೆದ ವರ್ಷ ನವರಾತ್ರಿಯ ಸಮಯದಲ್ಲಿ ರಾಯನ್ ಕೂಡ ಜನಿಸಿದನು. ಹಾಗಾಗಿ ಈ ಹಬ್ಬ ಮತ್ತಷ್ಟು ವಿಶೇಷವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 20 ನಿಮಿಷದಲ್ಲಿ ವಿಶ್ವವಿಖ್ಯಾತ ಮೈಸೂರಿನ ಜಂಬೂಸವಾರಿ ಮುಕ್ತಾಯ

     

    View this post on Instagram

     

    A post shared by Meghana Raj Sarja (@megsraj)

    ಚಿರಂಜೀವಿ ಸರ್ಜಾ, ಮೇಘನಾ ರಾಜ್, ರಾಯನ್ ರಾಜ್ ಸರ್ಜಾ ಕಡೆಯಿಂದ ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಎಂದು ವಿಶ್ ಮಾಡಿದ್ದಾರೆ.