ಸೈಬರ್ ಕ್ರೈಂ ಕಥಾ ಹಂದರ ಆಧಾರಿತ ‘ದಿ ಡಾರ್ಕ್ ವೆಬ್’ (The Dark Web) ಟೀಸರ್ (Teaser)ಕುತೂಹಲ ಹೆಚ್ಚಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿ ಯುವ ಪ್ರತಿಭೆ ಚೇತನ್ ಕಾಣಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮೇಘನಾ ಮಿಂಚಿದ್ದಾರೆ. ಚಿತ್ರದಲ್ಲಿ ಬಹುತೇಕ ಪತ್ರಕರ್ತರೇ ಅಭಿನಯ ಮಾಡಿರೋದು ಈ ಸಿನಿಮಾದ ವಿಶೇಷ.
ಮಂಜು ಬನವಾಸೆ ಅವರು ನಿರ್ಮಾಣದ ಜೊತೆಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕಿರಣ್ ಸ್ವಾಮಿ ಅವರ ಚೊಚ್ಚಲ ನಿರ್ದೇಶನವಿದೆ. ಚಂದ್ರಮೌಳಿ ಕ್ಯಾಮೆರಾ ವರ್ಕ್ ಮಾಡಿದ್ದು ವಿಶಾಕ್ ನಾಗಲಾಪುರ ಸಂಗೀತ ನೀಡಿದ್ದಾರೆ. ಟೀಸರ್ ರಿಲೀಸ್ ಮಾಡುವ ಕಾರಣಕ್ಕೆ ಮಾಧ್ಯಮದ ಮುಂದೆ ಹಾಜರಾಗಿದ್ದ ಸಿನಿಮಾ ತಂಡ ಚಿತ್ರದ ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡರು.
ನಟ, ನಿರ್ಮಾಪಕ ಮಂಜು ಬನವಾಸೆ ಮಾತನಾಡಿ, ‘ನಾವೆಲ್ಲ ಪತ್ರಕರ್ತರು, ಸಿನಿಮಾ ಕನಸು ಕಾಲೇಜು ದಿನಗಳಿಂದನೇ ಇತ್ತು. ಎಲ್ಲರೂ ಹೊಸಬರೆ ಆಗಿದ್ದರಿಂದ ತುಂಬಾ ಕಷ್ಟವಾಗಿತ್ತು. ನಾವು ಪ್ರತಿದಿನ ನೋಡುವ ಕಥೆಗಳೆ ಈ ಸಿನಿಮಾದಲ್ಲೂ ಇದೆ. ಹಣ ಜಾಸ್ತಿ ಆಗಿದೆ ಅಂತ ಸಿನಿಮಾ ಮಾಡಿಲ್ಲ, ಸಿನಿಮಾ ಹುಚ್ಚು ಹಾಗೂ ಪ್ರೀತಿಗಾಗಿ ಈ ಸಿನಿಮಾ ಮಾಡಿದ್ದು. ನಾವು ಪ್ರತಿದಿನ ನೋಡ್ತಿದ್ದ ಕ್ರೈಮ್ ಗಳ ಬಗ್ಗೆಯೇ ಸಿನಿಮಾ ಮಾಡಿದ್ದೇವೆ’ ಎಂದರು.
ನಿರ್ದೇಶಕ ಕಿರಣ್ ಮಾತನಾಡಿ, ‘ಶೂಟಿಂಗ್ ಅನುಭವ ಬಿಚ್ಚಿಟ್ಟರು. ಸಕಲೇಶಪುರ, ಚಿಕ್ಕಮಗಳೂರು ಸೇರಿದಂತೆ ಅನೇಕ ಕಡೆ ಶೂಟ್ ಮಾಡಿರುವುದಾಗಿ ಹೇಳಿದರು. ಇನ್ನೂ ನಾಯಕ ಚೇತನ್ ಕಾಫಿ ಡೇ ಓನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಟೀಸರ್ ಮೂಲಕ ಕುತೂಹಲ ನಿರೀಕ್ಷೆ ಹೆಚ್ಚಿರುವ ಡಾರ್ಕ್ ವೆಬ್ ಸದ್ಯದಲ್ಲೇ ಅಭಿಮಾನಿಗಳ ಮುಂದೆ ಬರಲಿದೆ.
ಈ ಹಿಂದೆ ಭೂಗತ ಪಾತಕಿ, ಸುಪಾರಿ ಕಿಲ್ಲರ್ ಗುಂಡಿಗೆ ತಲೆಯೊಡ್ಡಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆ ಅವರ ಮೇಲೆ ಸಿನಿಮಾ ಮಾಡಲು ಮೂವರು ರೆಡಿಯಾಗಿದ್ದರು. ಮೂರು ಟೈಟಲ್ ಗಳು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಆದವು. ಅದು ಈವರೆಗೂ ಸುದ್ದಿಯಿಲ್ಲ. ಐಎಎಸ್ ಅಧಿಕಾರಿ ಡಿ.ಕೆ ರವಿ ನಿಧನರಾದಾಗಲೂ ಅವರ ಬಗ್ಗೆ ಸಿನಿಮಾ ಮಾಡಲು ಹಲವರು ಮುಂದಾದರು. ವಾಣಿಜ್ಯ ಮಂಡಳಿಯು ಡಿ.ಕೆ. ರವಿ ಹೆಸರಿನಲ್ಲಿ ಶೀರ್ಷಿಕೆ ಕೊಡದೇ ಇದ್ದರೂ ಬೇರೆ ಬೇರೆ ಹೆಸರಿನಲ್ಲಿ ಟೈಟಲ್ ರೆಜಿಸ್ಟರ್ ಆಯಿತು. ಆ ಸಿನಿಮಾಗಳು ಈವರೆಗೂ ಸೆಟ್ಟೇರಿಲ್ಲ. ಐ.ಪಿ.ಎಸ್ ಅಧಿಕಾರಿ ಅಣ್ಣಾಮಲೈ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಾಗ ಅವರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತೇನೆ ಎಂದು ಬಂದರು. ಅದು ಕೂಡ ಈವರೆಗೂ ಆಗಲಿಲ್ಲ. ಹೀಗೆ ಇಂತಹ ಘಟನೆಗಳು ನಡೆದಾಗೆಲ್ಲ ಸಿನಿಮಾ ಮಾಡುವ ಇಂಗಿತವನ್ನು ಕೆಲವರು ವ್ಯಕ್ತ ಪಡಿಸುತ್ತಾರೆ, ಕಾವು ಆರಿದ ನಂತರ ಸುಮ್ಮನಾಗುತ್ತಾರೆ. ಇದೀಗ 45ನೇ ವಯಸ್ಸಿಗೆ 25ರ ಹರೆಯದ ಹುಡುಗಿಯನ್ನು ಮದುವೆಯಾಗಿ ನೆನ್ನೆಯಷ್ಟೇ ನೇಣಿಗೆ ಕೊರಳೊಡ್ಡಿರುವ ಶಂಕರಣ್ಣನ ಬಗ್ಗೆ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿದೆ.
ಲಾಕ್ ಡೌನ್, ಕೊರೋನಾ, ಕೋವಿಡ್ ಎನ್ನುವ ಆತಂಕದ ನಡುವೆ 2021ರಲ್ಲಿ 45ರ ಇಳಿವಯಸ್ಸಿನ ಶಂಕರಣ್ಣ ಸಂತೆಮಾವತ್ತೂರು ಗ್ರಾಮದ ನಿವಾಸಿಯಾಗಿದ್ದ ಮೇಘನಾ ಅವರನ್ನು ಮದುವೆಯಾಗಿದ್ದರು. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಈಗ ಅದನ್ನೇ ಸಿನಿಮಾ ಮಾಡುವ ಆಲೋಚನೆ ಇದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ರಶ್ಮಿಕಾ ವೀಡಿಯೋ ನೋಡಿ ಸುಸ್ತಾದ ಅಭಿಮಾನಿಗಳು – ಕೊಡಗಿನ ಬೆಡಗಿಯ ಜಿಮ್ ಕಸರತ್ತು
ಶಂಕರಣ್ಣ ಮತ್ತು ಮೇಘನಾ ಅವರದ್ದು ಒಂದು ರೀತಿಯಲ್ಲಿ ಇಂಟ್ರಸ್ಟಿಂಗ್ ಸ್ಟೋರಿ ನಿಜ. ಮೇಘನಾ ಅವರಿಗೆ ಆಗಲೇ ಮದುವೆ ಆಗಿತ್ತು. ಎರಡು ವರ್ಷದಿಂದ ಗಂಡ ನಾಪತ್ತೆಯಾಗಿದ್ದ. ಮದುವೆಯಾಗಿಯೂ ಒಂಟಿ ಬದುಕು ನಡೆಸುವುದು ತುಂಬಾ ಕಷ್ಟ. ಹಾಗಾಗಿ ಇನ್ನೂ ಮದುವೆಯಾಗದೇ ಉಳಿದಿದ್ದ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಂಕರಣ್ಣನನ್ನು ಭೇಟಿಯಾಗುವ ಮೇಘನಾ, ತನ್ನನ್ನು ಮದುವೆ ಆಗುವಂತೆ ಕೇಳುತ್ತಾಳೆ. ನೊಂದಿರುವ ಹುಡುಗಿಗೆ ಬಾಳು ಕೊಡಲು ಶಂಕರಣ್ಣ ಒಪ್ಪುತ್ತಾನೆ. ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರೂ ಸತಿಪತಿಗಳಾಗುತ್ತಾರೆ. ಆ ಮದುವೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಕೆಲವರು ಅವರನ್ನು ಆಡಿಕೊಂಡರೆ, ಇನ್ನೂ ಕೆಲವರು ಶಂಕರಣ್ಣನಿಗೆ ಶಹಭಾಷ್ ಹೇಳಿದ್ದರು. ಇದನ್ನೂ ಓದಿ: ರಣಬೀರ್ ಕಪೂರ್‌ಗೆ ಪತ್ನಿ ಆಗ್ತಾರಾ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ?
ಈ ದಾಂಪತ್ಯಕ್ಕೆ ಕೇವಲ ಐದೇ ಐದು ತಿಂಗಳು ಆಯುಷ್ಯ ಅಂತ ಯಾರೂ ಅಂದುಕೊಂಡಿರಲಿಲ್ಲ. ನೆನ್ನೆ ಶಂಕರಣ್ಣ ಬಾರದ ಲೋಕಕ್ಕೆ ಹೋಗಿ ಬಿಟ್ಟಿದ್ದಾರೆ. ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕರಣ್ಣನ ಸಾವು ಇದೀಗ ನಾನಾ ರೂಪ ಪಡೆದುಕೊಂಡಿದೆ. ಹೆಂಡತಿ ಮೇಘನಾ ಒಂದು ರೀತಿಯಲ್ಲಿ ಹೇಳಿದರೆ, ಶಂಕರಣ್ಣನ ತಾಯಿ ಮತ್ತೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಹಾಗಾಗಿ ಶಂಕರಣ್ಣನ ಸಾವು ನಿಗೂಢ.
ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಮೇಲೆ ವಿದ್ಯಾರ್ಥಿನಿಯರು ರ‍್ಯಾಗಿಂಗ್ ನಡೆಸುತ್ತಿರುವ ವಿಡಿಯೋ ಈಗ ಬಿಡುಗಡೆಯಾಗಿದೆ.
ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದಸಾಗರ ಕಾಲೇಜಿನ 2ನೇ ಸೆಮಿಸ್ಟರ್ ಸಿವಿಲ್ ವಿದ್ಯಾರ್ಥಿನಿ ಮೇಘನಾ ಬುಧವಾರ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಪೋಷಕರು ರ‍್ಯಾಗಿಂಗ್ ನಡೆದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ ಎಂಬಂತೆ ಎರಡು ವಿಡಿಯೋಗಳು ಈಗ ಲಭ್ಯವಾಗಿದೆ.
ಈ ದೃಶ್ಯಗಳಲ್ಲಿ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೃಶ್ಯಗಳಲ್ಲಿ ಕೆಲ ವಿದ್ಯಾರ್ಥಿಗಳು ಮೇಘನಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸಹಪಾಠಿ ಮೇಘನಾ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿದ್ದ ದೃಶ್ಯವು ಸೆರೆಯಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನಲ್ಲಿ ನಡೆದ ಎಲೆಕ್ಷನ್ ವಿಚಾರವಾಗಿ ತರಗತಿಯ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿದ್ದರು. ಈ ಕುರಿತು ಕಾಲೇಜಿನ ಎಚ್‍ಒಡಿ ಗೆ ದೂರು ನೀಡಲಾಗಿತ್ತು. ಆದರೆ ಮೇಘನಾ ಸಿಇಟಿ ಮೂಲಕ ಪ್ರವೇಶ ಪಡೆದ ಕಾರಣ ಆಕೆಯ ದೂರನ್ನು ಪರಿಗಣಿಸಲಿಲ್ಲ ಎನ್ನುವ ಮಾತು ಈಗ ಕೇಳಿ ಬಂದಿದೆ. ಇದನ್ನೂ ಓದಿ : ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು
ಪ್ರಸ್ತುತ ವಿಡಿಯೋ ಲಭ್ಯವಾಗಿರುವುದರಿಂದ ಮೇಘನಾ ಸಾವಿಗೆ ಪ್ರೇರಣೆ ನೀಡುವ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆಗಳಿದೆ.