Tag: meghastar chiranjeevi

  • ರಾಮ್‌ಚರಣ್‌ಗೆ ಕ್ಷಮೆ ಕೇಳಿದ `ಗೇಮ್ ಚೇಂಜರ್’ ಪ್ರೊಡ್ಯೂಸರ್

    ರಾಮ್‌ಚರಣ್‌ಗೆ ಕ್ಷಮೆ ಕೇಳಿದ `ಗೇಮ್ ಚೇಂಜರ್’ ಪ್ರೊಡ್ಯೂಸರ್

    `ಗೇಮ್ ಚೇಂಜರ್’ (Game Changer) ಚಿತ್ರದ ಸೋಲಿನ ವಿಚಾರವಾಗಿ ನಿರ್ಮಾಪಕರಾದ ದಿಲ್‌ರಾಜು ಹಾಗೂ ಸಿರೀಶ್ (Shirish) ಮಾತು ಸದ್ದು ಮಾಡುತ್ತಿದೆ. ಈ ವಿಚಾರ ರಾಮ್‌ಚರಣ್ (Ram Charan) ಅಭಿಮಾನಿಗಳನ್ನ ಕೆರಳಿ ಕೆಂಡವಾಗುವಂತೆ ಮಾಡಿದ್ದು, ನಿರ್ಮಾಪಕರಾದ ದಿಲ್‌ರಾಜು ಹಾಗೂ ಸಿರೀಶ್ ಮೇಲೆ ಕಿಡಿಕಾರುತ್ತಿದ್ದಾರೆ. ಅಲ್ಲದೇ ಕ್ಷಮೆ ಕೇಳುವಂತೆ ಬಹಿರಂಗ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ನಿರ್ಮಾಪಕ ಸಿರೀಶ್ ರಾಮ್‌ಚರಣ್‌ಗೆ ಕ್ಷಮೆ ಕೇಳಿದ್ದಾರೆ.

    ಬೇರೆಬೇರೆ ಖಾಸಗಿ ಯೂಟ್ಯೂಬ್ ವಾಹಿನಿಯ ಸಂದರ್ಶನದಲ್ಲಿ ದಿಲ್‌ರಾಜು ಹಾಗೂ ಸಿರೀಶ್, ತಮ್ಮ ನಿರ್ಮಾಣದಲ್ಲಿ ಮೂಡಿಬಂದಿದ್ದ ಬಿಗ್ ಬಜೆಟ್ ಚಿತ್ರ `ಗೇಮ್ ಚೇಂಜರ್’ ಹೀನಾಯ ಸೋಲಿನ ಕುರಿತು ಮಾತನಾಡಿದ್ದರು. ಸಿನಿಮಾ ಸೋತ ಬಳಿಕ ಚಿತ್ರದ ಹೀರೋ (ರಾಮ್‌ಚರಣ್) ಹಾಗೂ ಚಿತ್ರದ ನಿರ್ದೇಶಕ (ಶಂಕರ್) ಕೃತಜ್ಞತೆಗಾದ್ರೂ ಬಂದು ಏನಾಯ್ತು ಅಂತ ವಿಚಾರಿಸಿರಲಿಲ್ಲ ಎಂದಿದ್ದರು. ಇದನ್ನೂ ಓದಿ: ಓಂಪ್ರಕಾಶ್ ರಾವ್ ನಿರ್ದೇಶನದ 50ನೇ ಚಿತ್ರಕ್ಕೆ ಹಂಸಲೇಖ ಸಂಗೀತ

    ನಿರ್ಮಾಪಕ ನುಡಿದಿದ್ದ ಈ ಮಾತು ಟಾಲಿವುಡ್ ತುಂಬೆಲ್ಲಾ ಭಾರಿ ಸದ್ದು ಮಾಡಿತ್ತು. ಮೆಗಾಸ್ಟಾರ್ ಕುಟುಂಬದ ಕುಡಿ ರಾಮ್‌ಚರಣ್ ಮಂದಿನ ಕರಿಯರ್‌ಗೆ ಇದು ದೊಡ್ಡ ಹೊಡೆತ ಎಂದು ಚರ್ಚೆಯಗುತ್ತಿತ್ತು. ನಿರ್ಮಾಪಕರ ನೇರನುಡಿಯ ಅಬ್ಬರದ ಅಲೆ ಮೆಗಾಸ್ಟಾರ್ ಮನೆಯನ್ನೂ ತಲುಪಿತ್ತು. ಬಳಿಕ ರಾಮ್‌ಚರಣ್ ಅಭಿಮಾನಿಗಳು ಸಿರೀಶ್ ಹಾಗೂ ದಿಲ್‌ರಾಜುಗೆ ವಾರ್ನಿಂಗ್ ಕೊಟ್ಟ ಹಿನ್ನೆಲೆ ಇದೀಗ ನಿರ್ಮಾಪಕ ಸಿರೀಶ್ ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ

    ನಿರ್ಮಾಪಕ ಸಿರೀಶ್ ಕ್ಷಮೆ ಕೋರಿ ಆಡಿದ ಮಾತುಗಳೇನು?
    ಮೆಗಾ ಅಭಿಮಾನಿಗಳಿಗೆ ನಮಸ್ಕಾರ, ನಮ್ಮ ಸಂಸ್ಥೆಯ ಜೊತೆ ರಾಮ್‌ಚರಣ್ ಹಾಗೂ ಮೆಗಾಸ್ಟಾರ್ ಕುಟುಂಬದ ಉತ್ತಮ ಸಂಬಂಧ ಹೊಂದಿದೆ. ನಾನೂ ಕೂಡ ರಾಮ್‌ಚರಣ್ ಅಭಿಮಾನಿ. ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶ ಆಗಿರಲಿಲ್ಲ. ನನ್ನ ಮಾತಿನಿಂದ ಅಭಿಮಾನಿಗಳಿಗೆ ಬೇಸರವಾಗಿದ್ರೆ ಕ್ಷಮೆ ಕೇಳುತ್ತೇನೆ. ರಾಮ್‌ಚರಣ್ ಹಾಗೂ ಚಿರಂಜೀವಿಯವರಿಗೂ ಕ್ಷಮೆ ಕೇಳುತ್ತೇನೆ. ದಯಮಾಡಿ ನಮ್ಮ ಸಂಬಂಧ ಹಾಳು ಮಾಡಬೇಡಿ ಎಂದಿದ್ದಾರೆ. ಇದನ್ನೂ ಓದಿ: `ಡಿಜಾಂಗೋ ಕೃಷ್ಣಮೂರ್ತಿ’ ಆದ ಗೋಲ್ಡನ್ ಸ್ಟಾರ್

    ಮುಂದೆ ರಾಮ್‌ಚರಣ್ ಜೊತೆ ಬಹಳ ಪ್ರಾಜೆಕ್ಟ್ ಇದೆ. ಒಳ್ಳೆಯ ಸಂಬಂಧವೂ ಇದೆ, ದಯಮಾಡಿ ನನ್ನ ಮಾತನ್ನ ಅಪಾರ್ಥ ಮಾಡಿಕೊಳ್ಳಬೇಡಿ. ಅಭಿಮಾನಿಗಳು ಕೇಳಿದ್ದಾರೆ ಅಂತ ಕ್ಷಮೆ ಕೇಳುತ್ತಿಲ್ಲ. ಮನಸ್ಸಿನಿಂದಲೇ ಕೇಳುತ್ತೇನೆ. ಖಾಸಗಿ ಯೂಟ್ಯೂಬ್ ವಾಹಿನಿಯಲ್ಲಿ ನಾನು ಮಾತನಾಡಿರೋದು ತಪ್ಪಾಗಿದೆ. ನಾನು, ಆ ಕುಟುಂಬ ಸದಸ್ಯರ ಸಿನಿಮಾ ಮಾಡುತ್ತಾ ಬೆಳೆದುಬಂದಿದ್ದೇನೆ. ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದೀರಿ. ನಾನು ಉದ್ದೇಶಪೂರ್ವಕವಾಗಿ ಮಾತನಾಡಿದ್ದಲ್ಲ. ಮಾತಿನ ಭರದಲ್ಲಿ ಆ ವಿಚಾರ ಪ್ರಸ್ತಾಪವಾಗಿದೆ ಅಷ್ಟೇ. ದಯಮಾಡಿ ನನ್ನ ಮಾತನ್ನ ಅಪಾರ್ಥ ಮಾಡಿಕೊಳ್ಳದೆ ಕ್ಷಮಿಸಿ. ಮುಂದೆ ನಮ್ಮಿಬ್ಬರ ಹಲವು ಪ್ರಾಜೆಕ್ಟ್ಗಳು ಬರಬೇಕಿದೆ ಎಂದು ಕ್ಷಮೆಯಾಚಿಸಿದ್ದಾರೆ.

  • ಮೆಗಾ ಸ್ಟಾರ್ ಸೈರಾ ಚಿತ್ರದಲ್ಲಿ ಸುದೀಪ್ ರಾಜ!

    ಮೆಗಾ ಸ್ಟಾರ್ ಸೈರಾ ಚಿತ್ರದಲ್ಲಿ ಸುದೀಪ್ ರಾಜ!

    ಕಿಚ್ಚ ಸುದೀಪ್ ಅವರು ತೆಲುಗಿನ ಸೈರಾ ಚಿತ್ರದಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿಯೊಂದು ತಿಂಗಳ ಹಿಂದೆಯೇ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ತಿಳಿದು ಸಂತಸಗೊಂಡಿದ್ದ ಅಭಿಮಾನಿಗಳಲ್ಲಿ ಸುದೀಪ್ ನಟಿಸಲಿರೋ ಪಾತ್ರ ಯಾವುದೆಂಬ ಕುತೂಹಲ ಮಾತ್ರ ಹಾಗೆಯೇ ಉಳಿದು ಹೋಗಿತ್ತು. ಆದರೀಗ ಸೈರಾ ಚಿತ್ರದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದ ತೆಲುಗಿನ ರಾಜನಾಗಿ ಕಿಚ್ಚ ನಟಿಸಲಿದ್ದಾರೆಂಬ ಸುದ್ದಿ ಸ್ಪಷ್ಟವಾಗುವ ಮೂಲಕ ಎಲ್ಲವೂ ಜಾಹೀರಾಗಿದೆ!

    ಸದ್ಯ ತೆಲುಗು ಮಾತ್ರವಲ್ಲದೇ ಇಡೀ ದಕ್ಷಿಣ ಭಾರತೀಯ ಚಿತ್ರರಂಗವೇ ಬೆರಗಾಗಿ ನೋಡುವಂತೆ ಮಾಡಿರುವ ಚಿತ್ರ ಸೈರಾ. ಸ್ವಾತಂತ್ರ್ಯ ಹೋರಾಟದ ವೀರೋದ್ಧಾತ ಕಥೆ ಹೊಂದಿರೋ ಈ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ಸ್ಟಾರ್ ನಟರು ಪಾತ್ರ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಕಿಚ್ಚ ಸುದೀಪ್ ಅವುಕು ಎಂಬೊಂದು ಪ್ರಾಂತ್ಯದ ರಾಜನಾಗಿ ನಟಿಸಲಿದ್ದಾರಂತೆ.

    ಮೆಗಾ ಸ್ಟಾರ್ ಚಿರಂಜೀವಿ ನಾಯಕನಾಗಿರೋ ಈ ಚಿತ್ರ ಸ್ವಾತಂತ್ರ್ಯ ಹೋರಾಟಗಾರ ಉಯ್ಯಾಲುವಾಡ ನರಸಿಂಹ ರೆಡ್ಡಿಯ ಕಥೆಯಾಧಾರಿತ ಚಿತ್ರ. ಮೆಗಾ ಸ್ಟಾರ್ ರೆಡ್ಡಿಯ ಪಾತ್ರದಲ್ಲಿ ಕಾಣಿಸಿಕೊಂಡರೆ, ಸುದೀಪ್ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಸೆಣಸಾಡುವ ಅವುಕು ಪ್ರಾಂತ್ಯದ ರಾಜನಾಗಿ ಕಾಣಿಸಿಕೊಳ್ಳಲಿದ್ದಾರೆ.

    ಇತಿಹಾಸದಲ್ಲಿಯೂ ಕೂಡಾ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಈ ಅವುಕು ರಾಜನ ಕ್ರಾಂತಿಯ ಬಗ್ಗೆ ಉಲ್ಲೇಖಗಳಿವೆ. ಈ ಮೂಲಕ ಸುದೀಪ್ ಐತಿಹಾಸಿಕ ಚಿತ್ರದಲ್ಲಿನ ಖದರು ತುಂಬಿರೋ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಬಹು ಕಾಲದಿಂದಲೂ ಕೂಡಾ ತೆಲುಗಿನ ಕಿಚ್ಚನ ಅಭಿಮಾನಿಗಳು ಅವರ ನಟನೆಗಾಗಿ ಕಾದು ಕೂತಿದ್ದರು. ಅವರೆಲ್ಲ ಸುದೀಪ್ ಸೈರಾ ಚಿತ್ರದಲ್ಲಿ ನಟಿಸುವ ಸುದ್ದಿ ಕೇಳಿ ಸಂತಸಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv