Tag: Meghani

  • Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!

    – ಒಂದೇ ವಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾದ ಮಕ್ಕಳು

    ಅಹಮದಾಬಾದ್: ಒಂದು ವಾರದ ಹಿಂದೆ ಲಂಡನ್‌ನಲ್ಲಿ (London) ಮೃತಪಟ್ಟಿದ್ದ ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಪತಿ ಹಿಂತಿರುಗುವಾಗ ಅಹಮದಾಬಾದ್ ವಿಮಾನ ದುರಂತದಲ್ಲಿ (Ahmedabad Plane Crash) ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ 8 ಮತ್ತು 4 ವರ್ಷದ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.

    ಭಾರತ ಮೂಲದ ಲಂಡನ್ ಪ್ರಜೆ ಅರ್ಜುನ್ ಮನುಭಾಯಿ ಪಟೋಲಿಯಾ (Arjun Manubhai Patolia) ಅಹಮದಾಬಾದ್ ವಿಮಾನ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಅರ್ಜುನ್ ಅವರ ಪತ್ನಿ ಭಾರತಿಬೆನ್ ಒಂದು ವಾರಗಳ ಹಿಂದೆ ಲಂಡನ್‌ನಲ್ಲಿ ಮೃತಪಟ್ಟಿದ್ದರು. ಭಾರತಿಬೆನ್ ಸಾವನ್ನಪ್ಪುವ ಮೊದಲು ತನ್ನ ಚಿತಾಭಸ್ಮವನ್ನು ತವರು ನೆಲೆದ ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಡಬೇಕು ಎಂದು ಕೊನೆ ಆಸೆಯನ್ನು ತಿಳಿಸಿದ್ದರು. ಇದನ್ನೂ ಓದಿ: ವಿಮಾನ ದುರಂತ | ನಾನು ನನ್ನ ಪ್ರೀತಿ ಕಳೆದುಕೊಂಡೆ – ಆಸ್ಪತ್ರೆ ಮುಂದೆ ಯುವಕನ ಕಣ್ಣೀರು

    ಪತ್ನಿಯ ಕೊನೆ ಆಸೆಯಂತೆ ವಾಡಿಯಾದ ಸಂಬಂಧಿಕರೊಂದಿಗೆ ಸೇರಿ ಅರ್ಜುನ್, ಭಾರತಿಬೆನ್ ಅವರ ಚಿತಾಭಸ್ಮವನ್ನು ಅಮ್ರೇಲಿಯಲ್ಲಿನ ಪೌಲ್ ನದಿಯಲ್ಲಿ ಬಿಟ್ಟು, ವಿಧಿವಿಧಾನಗಳನ್ನು ಮುಗಿಸಿದ್ದರು. ಬಳಿಕ ಲಂಡನ್‌ನಲ್ಲಿರುವ ಇಬ್ಬರು ಮಕ್ಕಳ ಬಳಿಗೆ ತೆರಳುತ್ತಿದ್ದ ವೇಳೆ ವಿಮಾನ ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡ ಇಬ್ಬರು ಹೆಣ್ಣುಮಕ್ಕಳು ದುಃಖಿಸಿದ್ದಾರೆ. ಇದನ್ನೂ ಓದಿ: Ahmedabad Plane Crash- ಆಕಾಶದಲ್ಲಿ ಹಾರಾಡುವ ಕನಸು ಕಂಡಿದ್ದ ಗಗನಸಖಿಯ ದುರಂತ ಅಂತ್ಯ

    ಏನಿದು ಪ್ರಕರಣ?
    ಜೂನ್ 12ರಂದು ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ ಎಐ171 ವಿಮಾನ ಮೆಘಾನಿಯ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಈ ಅಪಘಾತದ ಪರಿಣಾಮ ವಿಮಾನದಲ್ಲಿದ್ದ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ಪ್ರಯಾಣಿಸುತ್ತಿದ್ದರು. 241 ಮಂದಿ ಪ್ರಯಾಣಿಕರು ಮೃತಪಟ್ಟಿದ್ದು, ಅದೃಷ್ಟವಶಾತ್ ಓರ್ವ ಪ್ರಯಾಣಿಕ ಬದುಕುಳಿದಿದ್ದಾರೆ.

  • ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

    ವಿಮಾನ ದುರಂತ – ಟೀ ಅಂಗಡಿ ಬಳಿ ನಿಂತಿದ್ದ 14 ವರ್ಷದ ಬಾಲಕ ಸಾವು

    – ತಾಯಿಗೆ ತಿಂಡಿ ಕೊಡಲು ಹೋಗಿದ್ದ ಬಾಲಕ ಬೆಂಕಿಯ ತೀವ್ರತೆಗೆ ದುರ್ಮರಣ

    ಅಹಮದಾಬಾದ್: ಏರ್ ಇಂಡಿಯಾ ವಿಮಾನ ದುರಂತದ (Air India Flight Crash) ವೇಳೆ ಅಲ್ಲೇ ಪಕ್ಕದ ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ಬೆಂಕಿಯ ತೀವ್ರತೆಗೆ ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ.

    ಆಕಾಶ್ (14) ಮೃತ ಬಾಲಕ. ಬಿಜೆ ಹಾಸ್ಟೆಲ್‌ನ ಮುಂಭಾಗ ಆಕಾಶ್ ಕುಟುಂಬವು ಟೀ ಅಂಗಡಿ ಇಟ್ಟುಕೊಂಡಿದ್ದರು. ಆಕಾಶ್ ತಾಯಿಗೆ ತಿಂಡಿ ಕೊಡಲು ಅಂಗಡಿ ಬಳಿ ಹೋಗಿದ್ದ. ವಿಮಾನ ದುರಂತದ ವೇಳೆ ಆಕಾಶ್ (Akash) ಟೀ ಅಂಗಡಿಯ ಮುಂದೆ ನಿಂತಿದ್ದ. ಇದ್ದಕ್ಕಿದ್ದಂತೆ ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಆಕಾಶ್ ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Plane crash | ಲಂಡನ್ ತಲುಪಿ ಫೋನ್ ಮಾಡ್ತೀನಿ ಅಂದವ್ಳು ಬಾರದ ಲೋಕಕ್ಕೆ ಹೋದ್ಳು..!

    ಆಕಾಶ್‌ನನ್ನು ಕಳೆದುಕೊಂಡ ಸಹೋದರ ಕಲ್ಪೇಶ್ ಆಕ್ರಂದನ ಮುಗಿಲು ಮುಟ್ಟಿತು. ನನ್ನ ದೊಡ್ಡಣ್ಣ ನನಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ನಾನು ಆಟೋ ಓಡಿಸುತ್ತಿದ್ದೆ. ಬೆಂಕಿ ತೀವತ್ರೆಗೆ ಗಾಯಗೊಂಡಿದ್ದ ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದರು. ನನ್ನ ತಮ್ಮ ಅಲ್ಲೇ ಸಿಲುಕಿದ್ದ. ನನ್ನ ತಮ್ಮನನ್ನು ಒಮ್ಮೆ ನೋಡಲು ಬಿಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಇದನ್ನೂ ಓದಿ: ಇಡೀ ವಿಮಾನ ಸುಟ್ಟು ಭಸ್ಮವಾದರೂ ಒಂದಿಷ್ಟೂ ಹಾನಿಯಾಗದ ಸ್ಥಿತಿಯಲ್ಲಿ ಸಿಕ್ತು ಭಗವದ್ಗೀತೆ ಪುಸ್ತಕ

    ನನ್ನ ತಮ್ಮ ಆಕಾಶ್ ಕೂಡ ಅಲ್ಲೇ ಇದ್ದ. ಆದರೆ ಅವನನ್ನು ಯಾರೂ ರಕ್ಷಣೆ ಮಾಡೋರಿಲ್ಲದೆ ಸಾವನ್ನಪ್ಪಿದ್ದಾನೆ. ನನ್ನ ತಮ್ಮ ಇಲ್ಲದೆ ನಾನು ಹೇಗೆ ಬದುಕಲಿ. ಒಮ್ಮೆ ನನ್ನ ಸಹೋದರನ ಮುಖ ನೋಡಲು ಬಿಡಿ. ದೇವರು ನನ್ನ ತಮ್ಮನ ಕಿತ್ಕೊಂಡ. ನನ್ನ ತಮ್ಮನನ್ನು ನಿನ್ನೆಯಿಂದ ನೋಡಿಲ್ಲ. ದಯಮಾಡಿ ನನ್ನ ಚಿಕ್ಕ ತಮ್ಮನನ್ನು ನೋಡಲು ಬಿಡಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಇದನ್ನೂ ಓದಿ: Plane Crash | ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಮಗ ದುರಂತ ಸಾವು

    ನನ್ನ ತಾಯಿಗೆ ಇನ್ನೂ ವಿಷಯ ತಿಳಿದಿಲ್ಲ. ಆಕೆಗೆ ಕೂಡ ಚಿಕಿತ್ಸೆ ಕೊಡಿಸಲಾಗ್ತಿದೆ. ಮಗ ಹೇಗಿದ್ದಾನೆ ಎಂದು ಕೇಳ್ತಿದ್ದಾರೆ. ಆಕಾಶ್‌ಗೆ ಏನೂ ಆಗಿಲ್ಲ, ಚೆನ್ನಾಗಿದ್ದಾನೆ ಎಂದು ಅವರನ್ನು ಸಮಾಧಾನಪಡಿಸಿದ್ದೇವೆ ಎಂದು ದುಃಖಿಸಿದರು.

  • ಬಿಜೆ ಮೆಡಿಕಲ್ ಆಸ್ಪತ್ರೆಗೆ ಬಡಿದ ಏರ್ ಇಂಡಿಯಾ ವಿಮಾನ – 7 ವಿದ್ಯಾರ್ಥಿಗಳ ಸಾವು ಶಂಕೆ

    ಬಿಜೆ ಮೆಡಿಕಲ್ ಆಸ್ಪತ್ರೆಗೆ ಬಡಿದ ಏರ್ ಇಂಡಿಯಾ ವಿಮಾನ – 7 ವಿದ್ಯಾರ್ಥಿಗಳ ಸಾವು ಶಂಕೆ

    – ತಿಂತಿದ್ದ ಊಟದ ತಟ್ಟೆಯನ್ನು ಅರ್ಧಕ್ಕೆ ಬಿಟ್ಟು ಓಡಿದ ವಿದ್ಯಾರ್ಥಿಗಳು

    ಅಹಮದಾಬಾದ್: ಏರ್ ಇಂಡಿಯಾ ವಿಮಾನವು (Air India Flight) ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಮೇಘಾನಿ ಪ್ರದೇಶದ(Meghani area) ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ನ ಮೇಲೆ ಬಡಿದಿದೆ. ಈ ಪರಿಣಾಮ 7 ಎಂಬಿಬಿಎಸ್ ವಿದ್ಯಾರ್ಥಿಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

    ಈ ದುರಂತದ ವೇಳೆ ಮೆಸ್‌ನಲ್ಲಿದ್ದ ವಿದ್ಯಾರ್ಥಿಗಳು ಮಧ್ಯಾಹ್ನ ತಿನ್ನುತ್ತಿದ್ದ ಊಟವನ್ನು ಅರ್ಧಕ್ಕೆ ಬಿಟ್ಟು ದಿಕ್ಕಾಪಾಲಾಗಿ ಓಡಿರುವ ಅಪಘಾತದ ಭೀಕರತೆಯ ದೃಶ್ಯವನ್ನು ಚಿತ್ರವೊಂದು ವಿವರಿಸುತ್ತದೆ. ಈ ಚಿತ್ರದಲ್ಲಿ ಟೇಬಲ್ ಮೇಲೆ ಬಡಿಸಿಟ್ಟಿದ್ದ ಊಟದ ತಟ್ಟೆ, ಲೋಟ ಎಲ್ಲವೂ ಹಾಗೆ ಇವೆ. ಇದನ್ನೂ ಓದಿ: ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

    ಮಧ್ಯಾಹ್ನ ಊಟದ ಸಮಯದಲ್ಲಿ ಮೆಡಿಕಲ್ ಕಾಲೇಜ್ ಕ್ಯಾಂಟೀನ್ ಕಟ್ಟಡಕ್ಕೆ ವಿಮಾನ ಬಡಿದಿದೆ. ಈ ಪರಿಣಾಮ ಮೆಡಿಕಲ್ ಕಾಲೇಜಿನ ಅಡುಗೆ ಮನೆಗೆ ಬೆಂಕಿ ಹೊತ್ತಿಕೊಂಡು ಗೋಡೆಗಳು ಛಿದ್ರ ಛಿದ್ರಗೊಂಡಿದೆ. ಈ ದುರಂತದ ವೇಳೆ ಮೆಸ್‌ನಲ್ಲಿ ಎಷ್ಟು ಮಂದಿ ಇದ್ದರು ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?