Tag: Meghanaraj

  • ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

    ಅಪ್ಪನ ಡಾನ್ಸ್ ನೋಡೊದ್ರಲ್ಲಿ ಬ್ಯುಸಿಯಾದ ಜ್ಯೂನಿಯರ್ ಚಿರು

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಮಗ ಅಪ್ಪನ ಡಾನ್ಸ್ ನೋಡುತ್ತಾ ಕುಳಿತಿರುವ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

    ಈ ಕೀಬೋರ್ಡ್ ಎಂದರೆ ಅವನಿಗೆ ತುಂಬ ಕುತೂಹಲ. ಖುಷಿಯಿಂದ ಅದನ್ನು ಒತ್ತುತ್ತಿದ್ದ. ಅವನು ಎಂಥ ಬುದ್ಧಿವಂತ ಎಂದರೆ ಸರಿಯಾದ ಬಟನ್ ಪ್ರೆಸ್ ಮಾಡಿದ. ಆಗ ಅಪ್ಪನ ಸಿನಿಮಾದ ಫೇವರೇಟ್ ಸಾಂಗ್ ಬಂತು. ಮತ್ತೆ ಬೇಕು ಎಂದ. ನಾನು ಖುಷಿಯಿಂದ ಪದೇಪದೇ ಪ್ಲೇ ಮಾಡಿದೆ. ಹ್ಯಾಪಿ ಫಾದರ್ಸ್ ಡೇ ಎಂದು ಮೇಘನಾ ರಾಜ್ ಬರೆದುಕೊಂಡು ಮಗನ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನಗೆ ವರಗಳನ್ನು ಕೊಡುವ ದೇವರಾಗಿ ಇದ್ರಿ: ಮಾಲಾಶ್ರೀ

    ಚಿರು ಲ್ಯಾಪ್‍ಟಾಪ್‍ನಲ್ಲಿ ಸಿನಿಮಾ ಹಾಡುಗಳನ್ನು ಎಂಜಾಯ್ ಮಾಡುತ್ತಿದ್ದಾನೆ. ಅದರಲ್ಲೂ ಅಪ್ಪ ಚಿರಂಜೀವಿ ಸರ್ಜಾ ನಟನೆಯ ಹಾಡುಗಳೆಂದರೆ ಅವನಿಗೆ ಸಖತ್ ಇಷ್ಟ. ಪದೇಪದೇ ಅದೇ ಹಾಡುಗಳನ್ನು ರಿಪೀಟ್ ಮೋಡ್‍ನಲ್ಲಿ ನೋಡುತ್ತಿದ್ದಾನೆ. ಈ ವೀಡಿಯೋವನ್ನು ಮೇಘನಾ ರಾಜ್ ಈಗ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ನಟಿ ಮೇಘನಾ ರಾಜ್ ಅವರು ಸದ್ಯ ತಮ್ಮ ಮಗನ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿದ್ದರೂ ಸೋಶಿಯಲ್ ಮೀಡಿಯಾ ಮೂಲಕ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಇನ್ನು, ಅವರ ಪುತ್ರ ಜ್ಯೂ. ಚಿರು ಕೂಡ ಸ್ಟಾರ್ ಆಗಿದ್ದಾನೆ. ಆತನ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಅಪ್ಪಂದಿರ ದಿನಾಚರಣೆ ಸಲುವಾಗಿ ಚಿರಂಜೀವಿ ಸರ್ಜಾ ಪುತ್ರನ ಹೊಸ ವೀಡಿಯೋ ಪೋಸ್ಟ್ ಮಾಡಿದ್ದಾರೆ.

    ಚಿರು ಹೃದಯಾಘಾತದಿಂದ ನಿಧನರಾಗಿ ಒಂದು ವರ್ಷ ಕಳೆದಿದೆ. ಮಗನ ಆರೈಕೆ ಮಾಡುತ್ತಾ ಮೇಘನಾ ಸಮಯ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಮುದ್ದಾದ ವೀಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮೇಘನಾ ರಾಜ್ ಅಭಿಮಾನಿಗಳ ಬಳಗದಲ್ಲಿ ಜ್ಯೂನಿಯರ್ ಚಿರುನ ಈ ವೀಡಿಯೋ ವೈರಲ್ ಆಗುತ್ತಿದೆ.

  • ಮಗು ತುಂಬಾ ಮುದ್ದಾಗಿದೆ, ಆದ್ರೆ ನಿರಾಸೆಗೊಳಿಸಿದ್ದಕ್ಕೆ ಕ್ಷಮೆಯಿರಲಿ: ಮೇಘನಾ

    ಮಗು ತುಂಬಾ ಮುದ್ದಾಗಿದೆ, ಆದ್ರೆ ನಿರಾಸೆಗೊಳಿಸಿದ್ದಕ್ಕೆ ಕ್ಷಮೆಯಿರಲಿ: ಮೇಘನಾ

    ಬೆಂಗಳೂರು: ಕೊರೊನಾ ವೈರಸ್ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ನಟಿ ಮೇಘನಾ ರಾಜ್ ಹಾಗೂ ಪುತ್ರ ಮನೆಯಲ್ಲಿಯೇ ಐಸೋಲೇಟ್ ಆಗಿದ್ದಾರೆ. ಈ ಮಧ್ಯೆ ಚಿರು ಪುತ್ರನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹೀಗಾಗಿ ಸ್ವತಃ ನಟಿಯೇ ಸ್ಪಷ್ಟನೆ ನೀಡಿದ್ದಾರೆ.

    ಹೌದು. ತಮ್ಮ ಇನ್ಸ್ ಸ್ಟಾ ಸ್ಟೋರಿಯಲ್ಲಿ ವೈರಲ್ ಆಗಿರುವ ಪುಟ್ಟ ಮಗುವೊಂದರ ಫೋಟೋವನ್ನು ಹಾಕಿಕೊಂಡಿದ್ದಾರೆ. ಅಲ್ಲದೆ ಫೋಟೋದಲ್ಲಿರುವ ಪುಟ್ಟ ಕಂದಮ್ಮ ತುಂಬಾನೇ ಮುದ್ದಾಗಿದೆ. ಆದರೆ ಈ ಫೋಟೋದಲ್ಲಿರುವವನು ಜ್ಯೂನಿಯರ್ ಚಿರು ಅಲ್ಲ ಎಂದು ಬರೆದುಕೊಂಡು ಹಾರ್ಟ್ ಎಮೋಜಿ ಹಾಕಿದ್ದಾರೆ.

    ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಇದೇ ಬೇಸರದಲ್ಲಿದ್ದ ಕುಟುಂಬಕ್ಕೆ ಇದೀಗ ಪುಟ್ಟ ಮಗುವಿನ ಆಗಮನದಿಂದ ಸಂತಸ ತಂದಿದೆ. ಮೇಘನಾ ಅವರು ಗಂಡು ಮಗುವಿನ ಜನ್ಮ ನೀಡಿದ ಬಳಿಕ ತಾಯಿ-ಮಗನ ಅನೇಕ ಫೋಟೋಗಳು ವೈರಲಾಗ ತೊಡಗಿದವು. ಅಂತೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋಗೆ ಸ್ವತಃ ತಾವೇ ಸ್ಪಷ್ಟನೆ ಕೊಡುವ ಮೂಲಕ ಫುಲ್ ಸ್ಟಾಪ್ ಹಾಕಿದ್ದಾರೆ.

    ಮೇಘನಾ ಅವರು ಅಕ್ಟೋಬರ್ 22 ರಂದು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿನೆ ಜನ್ಮ ನೀಡಿದ್ದಾರೆ. ಈಗಾಗಲೇ ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ಚಿರುಗೆ ಗಂಡು ಮಗುವಾಗುತ್ತಿದ್ದಂತೆಯೇ ಸಂತಸ ಮುಗಿಲುಮುಟ್ಟಿತ್ತು. ಅಲ್ಲದೆ ಅದಾಗಲೇ ಜ್ಯೂನಿಯರ್ ಚಿರು ಅಂತಾನೇ ಹೆಸರಿಟ್ಟಿದ್ದಾರೆ.

    ಆ ಬಳಿಕದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವಾರು ಯೂಟ್ಯೂಬ್ ಚಾನೆಲ್ ಗಳಲ್ಲಿ ಮೇಘನಾ ಮಗು ಅಂತ ಬೇರೆ ಮಕ್ಕಳ ಫೋಟೋಗಳು ವೈರಲ್ ಆಗತೊಡಗಿದವು. ದಿನಕ್ಕೊಂದು ಫೋಟೋಗಳು ವೈರಲ್ ಆಗುತ್ತಿರುವುದನ್ನು ಗಮನಿಸುತ್ತಿದ್ದ ಮೇಘನಾ ಅವರು ಇದಕ್ಕೆ ಅಂತ್ಯ ಹಾಡಬೇಕು ಎಂದು ಕೊನೆಗೂ ಸ್ಪಷ್ಟನೆ ನೀಡಿ ಅಭಿಮಾನಿಗಳಲ್ಲಿ ಕ್ಷಮೆ ಕೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

    ಮೇಘನಾ ಹಾಗೂ ಅವರ ಕುಟುಂಬಸ್ಥರು ಜ್ಯೂನಿಯರ್ ಚಿರುವಿನ ನಾಮಕರಣವನ್ನು ಅದ್ಧೂರಿಯಾಗಿ ಮಾಡಬೇಕು ಎಂದು ಯೋಜನೆ ಹಾಕಿದ್ದರು. ಈ ನಡುವೆ ಸುಂದರ್ ರಾಜ್ ದಂಪತಿ, ಮೇಘನಾ ಹಾಗೂ ಪುತ್ರನಿಗೆ ಕೊರೊನಾ ವೈರಸ್ ಕಾಣಿಸಿಕೊಂಡ ಹಿನ್ನೆಲೆಯ್ಲಲಿ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಆದರೆ ಶೀಘ್ರವೇ ನಾಮಕರಣ ಕಾರ್ಯಕ್ರಮವನ್ನು ಅನೌನ್ಸ್ ಮಾಡಲಿದ್ದು, ಅಭಿಮಾನಿಗಳು ಆ ದಿನಕ್ಕೋಸ್ಕರ ಕಾಯುತ್ತಿದ್ದಾರೆ.

  • ನವರಾತ್ರಿ ಹಬ್ಬಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನ – ಸುಂದರ್ ರಾಜ್

    ನವರಾತ್ರಿ ಹಬ್ಬಕ್ಕೆ ನಮ್ಮ ಮನೆಗೆ ಹೊಸ ಅತಿಥಿಯ ಆಗಮನ – ಸುಂದರ್ ರಾಜ್

    ಬೆಂಗಳೂರು: ಮೇಘನಾರಾಜ್ ಗಂಡು ಮಗುವಿಗೆ ಜನ್ಮ ನೀಡಿದ್ದು ಮೇಘನಾ ತಂದೆ ಸುಂದರ್ ರಾಜ್ ಪಬ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡಿದ್ದಾರೆ.

    ತಾತನಾಗಿ ಬಡ್ತಿ ಸಿಕ್ಕಿರುವುದು ತುಂಬಾ ಸಂತೋಷವನ್ನು ತಂದಿದೆ. ಮೇಘನಾ ಇಂದು ಬೆಳಗ್ಗೆ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮೇಘನಾಗೆ ನಾರ್ಮಲ್ ಡೆಲಿವರಿಯಾಗಿದೆ. ನವರಾತ್ರಿ ಹಬ್ಬದ ದಿನ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಗು ನೋಡಲು ಚಿರುವಿನಂತೆ ಇದೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

    ನನಗೆ ನನ್ನ ಪತ್ನಿಗೆ ಅಜ್ಜಿ ತಾತನಾಗಿರುವ ಖುಷಿ ಒಂದೆಡೆಯಾದರೆ ಅರ್ಜುನ್ ಸರ್ಜಾ ಮತ್ತು ಅವರ ತಾಯಿಗೆ ಮರಿ ಮೊಮ್ಮಗನನ್ನು ನೋಡಿದ ಸಂತೋಷ. ಎರಡು ಕುಟುಂಬಕ್ಕೆ ಆಗಿರುವ ಖುಷಿಗಿಂತ ಮಿಗಿಲಾದದ್ದು ಕರ್ನಾಟಕ ಜನತೆ, ಪ್ರತಿಯೊಬ್ಬ ಹೆಣ್ಣು ಮಗಳು ಸಂಭ್ರಮಿಸುವ ದಿನವಾಗಿದೆ. ಎಲ್ಲಾ ತಂದೆ ತಾಯಿಯರ ಆಶಿರ್ವಾದ ನಮಗೆ ಬೇಕು ಎಂದು ಹೇಳಿದರು.

    ಚಿರುಸರ್ಜಾ ಅಂತಿಮ ಯಾತ್ರೆಯಿಂದ ಇಲ್ಲಿಯವರೆಗೂ ಕನ್ನಡ ಜನತೆ ನಮ್ಮೊಂದಿಗೆ ತುಂಬಾ ಪ್ರೀತಿ ವಿಶ್ವಾಸದಿಂದ ಕಷ್ಟಕಾಲದಲ್ಲಿಯು ನಮ್ಮೊಂದಿಗೆ ನಿಂತುಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಈ ಸಮಯದಲ್ಲಿ ಚಿರು ಇಲ್ಲದಿರುವುದು ತುಂಬಾ ಬೇಸರದ ಸಂಗತಿ. ಆದರೆ ಜೀವನ ಮುಂದೆ ಸಾಗಬೇಕು. ನಮ್ಮ ಜನರ ಪ್ರೀತಿ ವಿಶ್ವಾಸದಿಂದ ಮಾತ್ರ ಅದು ಸಾಧ್ಯವಾಗಿದೆ ಮತ್ತು ಮುಂದೆಯೂ ಸಾಧ್ಯವಾಗುತ್ತದೆ ಎಂದು ಹೇಳಿದರು.

    ಚಿರು ಕಳೆದುಕೊಂಡಾಗಿನಿಂದ ಯಾರೊಂದಿಗೂ ಮಾತನಾಡಿಲ್ಲ. ಇದೇ ಮೊದಲ ಬಾರಿಗೆ ಪಬ್ಲಿಕ್ ಟಿವಿಯೊಂದಿಗೆ ಮೊಮ್ಮಗ ಹುಟ್ಟಿರುವ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಸುಂದರ್ ರಾಜ್ ಸಂತೋಷ ವ್ಯಕ್ತ ಪಡಿಸಿದರು.

  • ಚಿರಂಜೀವಿ ಸರ್ಜಾ- ಮೇಘನರಾಜ್ ಮದುವೆ ಮುಹೂರ್ತ ಫಿಕ್ಸ್

    ಚಿರಂಜೀವಿ ಸರ್ಜಾ- ಮೇಘನರಾಜ್ ಮದುವೆ ಮುಹೂರ್ತ ಫಿಕ್ಸ್

    ಬೆಂಗಳೂರು: ಸಿನಿಮಾದಲ್ಲಿ ಯಶಸ್ವಿ ಜೋಡಿಯಾಗಿದ್ದ ಅನೇಕ ನಟ, ನಟಿಯರು ನಿಜ ಜೀವನದಲ್ಲಿಯೂ ಜೊತೆಯಾಗಿದ್ದಾರೆ. ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

    ಚಂದನವನದ ಚೆಂದದ ಪ್ರೇಮ ಜೋಡಿಯಲ್ಲೊಂದು ಮೇಘನಾ ರಾಜ್ ಮತ್ತು ಚಿರು ಸರ್ಜಾ ಜೊತೆಯಾಗಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ 22 ರಂದು ಗುರುಹಿರಿಯರ ಸಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಮೇ 2 ರಂದು ಮದುವೆ ದಿನಾಂಕ ನಿಗದಿಯಾಗಿದ್ದು, ಅಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮೇಘನಾ ರಾಜ್ ಮಾಲಿವುಡ್‍ನ ನಟ, ನಟಿಯರಿಗೆ ಆಮಂತ್ರಿಸಿದ್ದು, ಕನ್ನಡ ಚಿತ್ರರಂಗದ ಗಣ್ಯಾತಿ-ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಮೇ 2ಕ್ಕೆ ಬೆಳಗ್ಗೆ 10.30ರ ಶುಭಗಳಿಗೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿ ಮದುವೆಯನ್ನು ಎರಡು ಕುಟುಂಬದವರು ಏರ್ಪಡಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಅನೇಕ ಗಣ್ಯ ಮಹೋದಯರು ಚಿರು ವೆಡ್ಸ್ ಮೇಘನಾ ಮದುವೆಗೆ ಸಾಕ್ಷಿಯಾಗಲಿದ್ದಾರೆ.