Tag: meghana sarja

  • ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಅಭಿಮಾನಿಗಳಿಗೆ ಹಲೋ ಹೇಳಿದ ಜ್ಯೂನಿಯರ್‌ ಚಿರು

    ಬೆಂಗಳೂರು: ಜ್ಯೂನಿಯರ್‌ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನಾಚರಣೆಯಂದು ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

    ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಿದ್ದಾನೆ.

    ಈ ಸಂಬಂಧ ನಟಿ ಮೇಘನಾ ಅವರು ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್ಲೋಡ್‌ ಮಾಡಿ ಜ್ಯೂನಿಯರ್‌ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. 2017ರ ಅಕ್ಟೋಬರ್‌ 22 ರಂದು ಚಿರು ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜೊತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ. ಜ್ಯೂನಿಯರ್‌ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್‌ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್‌ ಹಾಕಿದ್ದರು. ಇಂದು ರಾತ್ರಿ 12 ಗಂಟೆಗೆ ನಮ್ಮ ಪ್ರೀತಿಯ ಸಂಕೇತವಾಗಿರುವ ನನ್ನ ಮಗನನ್ನು ಪರಿಚಯಿಸಲು ಚಿರು ಮತ್ತು ನಾನು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದರು.

    2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ಪ್ರೀತಿಸಿ ಮದುವೆಯಾಗಿದ್ದರು. 2020 ಅಕ್ಟೋಬರ್‌ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.

     

     

    View this post on Instagram

     

    A post shared by Meghana Raj Sarja (@megsraj)

  • ಆಸ್ಪತ್ರೆಗೆ ದಾಖಲಾದ ಮೇಘನಾ ಸರ್ಜಾಗಾಗಿ ವಿಶೇಷ ವಾರ್ಡ್

    ಆಸ್ಪತ್ರೆಗೆ ದಾಖಲಾದ ಮೇಘನಾ ಸರ್ಜಾಗಾಗಿ ವಿಶೇಷ ವಾರ್ಡ್

    ಬೆಂಗಳೂರು: ನಟಿ ಮೇಘನಾ ಸರ್ಜಾ ಇಂದು ಬೆಳಗ್ಗೆ ಬೆಂಗಳೂರಿನ ಕೆ.ಆರ್.ರಸ್ತೆಯ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಮೇಘನಾರಿಗಾಗಿ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಮೇಘನಾ ಅವರಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ವಾರ್ಡ್ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ನಾಳೆ ಮೇಘನಾ ಸರ್ಜಾರಿಗೆ ಡೆಲಿಬರಿ ಆಗುವ ಸಾಧ್ಯತೆಗಳಿವೆ. ಹಾಗಾಗಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಮೇಘನಾ ಅವರು ದಾಖಲಾಗುವ ವಾರ್ಡಿನಲ್ಲಿ ಫೋಟೋಗಳನ್ನ ಹಾಕಿಸಿದ್ದಾರೆ. ಮದುವೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ತೆಗೆಸಿಕೊಂಡಿರುವ ಒಂದು ಫೋಟೋ ಸಹ ಇದೆ.

    ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ಹಿನ್ನೆಲೆ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ಸರ್ಜಾ, ಖಂಡಿತವಾಗಿ ಚಿರು ಮತ್ತೆ ಮಗುವಿನ ರೂಪದಲ್ಲಿ ಜನ್ಮ ತಾಳುತ್ತಾರೆ. ಆದರೆ ತಾನು ಯಾವಾಗ ಭೂಮಿಗೆ ಬರಬೇಕು ಎಂದು ಚಿರು ಅವರೇ ಇಚ್ಛಿಸಬೇಕು. ನಾನೇನೂ ಹೇಳಕ್ಕಾಗಲ್ಲ ಎಂದರು. ಚಿರು ಜನ್ಮದಿನದಂದ್ಲೇ ಭೂಮಿಗೆ ಬರಬೇಕು ಎಂಬುದು ಅಭಿಮಾನಿಗಳ ಆಶಯವಾಗಿದೆ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಆದರೂ ಆಗಬಹುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.

    ಅವಳಿ ಮಕ್ಕಳಾಗುತ್ತವೆ ಎಂಬ ಸುದ್ದಿ ಇದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮೇಘನಾ, ನೋಡೋಣ.. ಆದರೂ ಆಗಬಹುದು ಎಂದು ನಕ್ಕರು. ಚಿರು ಕನಸಿನಂತೆ ಸೀಮಂತ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮೇಘನಾ, ಚಿರು ಅವರ ಕನಸಿನಂತೆ ಧ್ರುವ ಹಾಗೂ ನಮ್ಮ ತಂದೆ-ತಾಯಿ ಒಟ್ಟಾರೆ ನಮ್ಮ ಕುಟುಂಬ ಅದನ್ನು ನನಸು ಮಾಡಿದೆ. ನನಗೆ ತುಂಬಾ ಖುಷಿಯಾಗಿದೆ. ಈ ಬಗ್ಗೆ ಚಿರುಗಂತೂ ಸಿಕ್ಕಾಪಟ್ಟೆನೆ ಖುಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

  • ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಮರುಕ ವ್ಯಕ್ತಪಡಿಸಿದ ಉಮಾಶ್ರೀ

    ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಮರುಕ ವ್ಯಕ್ತಪಡಿಸಿದ ಉಮಾಶ್ರೀ

    – ನಮ್ಮಂತವರೆಲ್ಲ ಹೋದರೂ ನಡೆಯುತ್ತೆ

    ಬೆಂಗಳೂರು: ಪತಿ ಚಿರಂಜೀವಿ ಸರ್ಜಾರನ್ನು ಕಳೆದುಕೊಂಡು ತೀವ್ರ ದುಃಖದಲ್ಲಿರುವ ನಟಿ ಮೇಘನಾ ರಾಜ್ ಸ್ಥಿತಿ ನೆನಪಿಸಿಕೊಂಡು ಹಿರಿಯ ನಟಿ ಉಮಾ ಶ್ರೀ ಮರುಕ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮಾಶ್ರೀ, ಚಿರು- ಮೇಘನಾ ಇಬ್ಬರೂ ಪ್ರೀತಿ ಮಾಡಿ ಮದುವೆಯಾದರು. ಇಂದು ಆ ಹುಡುಗಿಗೆ ಜೀವನಾ ಇಷ್ಟೆನಾ, ಮುಗಿದೇ ಹೋಯ್ತಾ ನನ್ನ ಜೀವನ ಅನ್ನೋವಂತದ್ದು ದುಃಖಕರವಾದ ಸಂಗತಿ. ನಿಜವಾಗಲೂ ಬಹಳ ದುಃಖವಾಗುತ್ತಿದೆ ಎಂದು ಕಣ್ಣೀರು ಹಾಕಿದರು.

    ನಟ ಚಿರಂಜೀವಿ ಸರ್ಜಾ ಅವರು ಇನ್ನಿಲ್ಲ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ನನಗೆ ಬಹಳ ಶಾಕ್ ಆಗಿತ್ತು. ಸಣ್ಣ ವಯಸ್ಸಿನಲ್ಲಿ ಮರಣ ಹೊಂದಿರುವುದು ನನ್ನನ್ನು ಬಹಳ ಗಾಬರಿಗೆ ಒಳಪಡಿಸಿದೆ. ದೇವರು ಯಾಕೆ ಇಂತಹ ಒಳ್ಳೆಯ ಟ್ಯಾಲೆಂಟ್ ಇರೋವವರನ್ನು ಕರೆದುಕೊಳ್ಳುತ್ತಾನೆಂದು ಬೇಸರವಾಗತ್ತಿದೆ ಎಂದು ಹೇಳಿದರು.

    ನನ್ನ ಮಗು ಮೇಘಾನಾಗೆ ಇದು ದೊಡ್ಡ ಶಾಕ್, ಅವಳು ಹೇಗೆ ತಡೆದುಕೊಳ್ಳುತ್ತಾಳೆ ಪಾಪ. ಪ್ರೀತಿಸಿ ಮದುವೆಯಾದವರು ಚಿರು ಇಲ್ಲದೆ ಅವರು ಹೇಗೆ ಬದುಕೋದು. ಪ್ರೀತಿ ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಚೆನ್ನಾಗಿ ಬದುಕಿ ಬಾಳಬೇಕಾದವರನ್ನು ಭಗವಂತ ಬೇಗನೇ ಕರೆಸಿಕೊಳ್ಳುತ್ತಾನೆ. ನಮ್ಮಂತವರೆಲ್ಲ ಹೋದರೂ ನಡೆಯುತ್ತೆ. ಆದರೆ ಇವರೆಲ್ಲ ಉಳಿಯಬೇಕು. ಇವರೆಲ್ಲ ನಮ್ಮ ಮಕ್ಕಳಿಗೆ ಸಮಾನರಾದವರು ಎಂದು ಕಣ್ಣೀರು ಹಾಕಿದ ಅವರು, ದೇವರು ಈ ರೀತಿಯ ಅನ್ಯಾಯ ಮಾಡಬಾರದು ಹಿಡಿಶಾಪ ಹಾಕಿದರು.

    ಸರ್ಜಾ ಅವರ ಕುಟುಂಬದಲ್ಲಿ ಒಳ್ಳೋಳ್ಳೆಯ ಟ್ಯಾಲೆಂಟ್ ಗಳಿವೆ. ಧೃವ, ಚಿರು ಮತ್ತು ಅರ್ಜುನ್ ಉತ್ತಮ ಕಲಾವಿದರಾಗಿದ್ದಾರೆ. ಅಲ್ಲದೆ ಕನ್ನಡ ಚಿತ್ರಂಗಕ್ಕೆ ಒಳ್ಳೆಯ ಕೊಡುಗೆಗಳನ್ನು ನೀಡಿದ್ದಾರೆ. ಅವರು ಫಿಟ್ನೆಸ್ ಗೋಸ್ಕರ ಡಯೆಟ್, ವ್ಯಾಯಾಮಗಳನ್ನು ಮಾಡುತ್ತಾರೆ. ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಎಲ್ಲವನ್ನೂ ಬಿಟ್ಟು ಹೋದರು. ತುಂಬಾನೆ ಬೇಸರವಾಗುತ್ತದೆ ಎಂದು ತಿಳಿಸಿದರು.

    ಸದ್ಯ ಬಾಗಲಕೋಟೆ ಜಿಲ್ಲೆಯ ನನ್ನ ಕ್ಷೇತ್ರದಲ್ಲಿದ್ದು, ನನಗೆ ಏನೂ ಮಾಡಲಾಗಿದೆ ಪರಿಸ್ಥಿತಿಯಲ್ಲಿ ನಾನು ಸಿಕ್ಕಿಹಾಕಿಕೊಂಡಿದ್ದೇನೆ ಎಂದು ಉಮಾಶ್ರೀ ದುಃಖಿತರಾದರು.