ಇನ್ಸ್‌ಸ್ಟಾಗ್ರಾಂನಲ್ಲಿ ಆ್ಯಕ್ಟೀವ್ ಆಗಿರುವ ಮೇಘನಾ ರಾಜ್ ಇದೀಗ ಸುಂದರ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಮನೆಯಲ್ಲಿ ದಸರಾ ಬೊಂಬೆಯಿಟ್ಟು ಅದರ ಮುಂದೆ ಬೊಂಬೆಯಂತೆ ಮೇಘನಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಪೋಸ್ಟ್‌ನಲ್ಲಿ ಕೆಂಪು ಸಲ್ವಾರ್ ಧರಿಸಿ, ಕೈತುಂಬಾ ಬಳೆ ಹಾಕಿಕೊಂಡು ಸೊಗಸಾಗಿ ಕಾಣುತ್ತಿದ್ದಾರೆ. ಫೋಟೋ ಕರ್ಟಸಿಯನ್ನ ನಟಿ ಶ್ವೇತಾ ಚೆಂಗಪ್ಪಗೆ ಕೊಟ್ಟಿದ್ದಾರೆ ಮೇಘನಾ. ಹೀಗಾಗಿ ಮೇಘನಾರ ಈ ಸುಂದರ ಫೋಟೋಗಳ ಹಿಂದಿನ ಛಾಯಾಗ್ರಾಹಕಿ ಶ್ವೇತಾ ಚೆಂಗಪ್ಪ ಅನ್ನೋದು ರಿವೀಲ್ ಆಗಿದೆ.ಇದನ್ನೂ ಓದಿ: ಕ್ರೂ ಪಾರ್ಟ್-2 ನಲ್ಲಿ ಕರೀನಾ ನಟಿಸೋದು ಪಕ್ಕಾ
ದಸರಾ ಹಬ್ಬಕ್ಕಾಗಿ ಮೇಘನಾ ಸುಂದರವಾಗಿ ರೆಡಿಯಾಗಿದ್ದು, ಎಷ್ಟೋ ದಿನಗಳಾದ್ಮೇಲೆ ನಗುತ್ತಿರುವ ಮೇಘನಾ ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ.
ಉದಯ ಟಿವಿಯಲ್ಲಿ ದಸರಾ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 27 ಶನಿವಾರ ಸಂಜೆ 6 ಗಂಟೆಗೆ ಧ್ರುವ ಸರ್ಜಾ (Dhruva Sarja) ಜೊತೆ ವಿಶೇಷ ಕಾರ್ಯಕ್ರಮ ʻಧ್ರುವ ದಸರಾʼ (Dhruva Dasara) ಪ್ರಸಾರವಾಗಲಿದೆ. ಭರ್ಜರಿ ಸೆಟ್‌ನಲ್ಲಿ ಚಿತ್ರರಂಗದ ಪ್ರಮುಖ ತಾರೆಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಚಿತ್ರೀಕರಣಗೊಂಡಿರುವ ʻಧ್ರುವ ದಸರಾʼ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾ ಪಯಣ ಮತ್ತು ಬಾಲ್ಯದಿಂದ ಇಲ್ಲಿಯವರೆಗಿನ ಜೀವನದ ಝಲಕ್ ಕೂಡ ಹೌದು.
ಧ್ರುವ ದಸಾರದ ಒಂದು ವಿಶೇಷ ಅಂದ್ರೆ, ಧ್ರುವ ಅವರಿಗೆ ಗೊತ್ತಿರದೇ ಹಲವು ವಿಶೇಷ ವ್ಯಕ್ತಿಗಳು ಆಗಮಿಸಿ ಅವರಿಗೆ ಅಚ್ಚರಿ ಮೂಡಿಸಿದರು. ಆಗ ಧ್ರುವ ಸರ್ಜಾ ಇವರ ಜೊತೆ ಕಳೆದ ಬಹಳ ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಹಳಷ್ಟು ಕುತೂಹಲಕರ ಘಟನೆಗಳು, ಭಾವನಾತ್ಮಕ ವಿಷಯಗಳು ಇಲ್ಲಿವೆ. ಕಿಕ್ಕಿರಿದು ನೆರೆದಿದ್ದ ಅಭಿಮಾನಿಗಳ ಜೈಕಾರದ ನಡುವೆ ತಮ್ಮ ʻಕೆಡಿʼ ಚಿತ್ರದ (KD Film) ಹಾಡಿನೊಂದಿಗೆ ಧ್ರುವ ಎಂಟ್ರಿ ಕೊಟ್ಟಿದ್ದು ವಿಶೇಷ. ತಾನು ಸುಪರ್ ಸ್ಟಾರ್ ಎನ್ನಿಸಿಕೊಳ್ಳಲು ಇಷ್ಟಪಡುವುದಿಲ್ಲ. ತಾನೊಬ್ಬ ನಟ ಮಾತ್ರ ಎಂದು ವಿನಯದಿಂದ ಹೇಳಿದ ಧ್ರುವ ಸರ್ಜಾ ಅಭಿಮಾನಿಗಳಿಗಾಗಿ ಇನ್ನು ಮುಂದೆ ಪ್ರತಿವರ್ಷ ಕನಿಷ್ಟ ಎರಡು ಚಿತ್ರಗಳಲ್ಲಿ ನಟಿಸುವುದಾಗಿ ಘೋಷಿಸಿದರು. ಇದನ್ನೂ ಓದಿ: ರಾಮಾಯಣ ಆಧರಿತ ʻರಾಮಲೀಲಾʼದಲ್ಲಿ ಮಂಡೋದರಿ ಪಾತ್ರಕ್ಕೆ ಪೂನಂ ಪಾಂಡೆ ಆಯ್ಕೆ
ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ (Meghana Raj) ಆಕಸ್ಮಿಕವಾಗಿ ವೇದಿಕೆಗೆ ಆಗಮಿಸಿ ಧ್ರುವ ಅವರಿಗೆ ಅಚ್ಚರಿ ಮೂಡಿಸಿದರು. ಅತ್ತಿಗೆಯನ್ನು ತಾಯಿಯಂತೆ ಕಾಣುವ ಧ್ರುವ ಅಣ್ಣನನ್ನು ನೆನೆದು ಭಾವುಕರಾದರು. ಮನೆಗೆ ಬಂದಾಗ ತಮ್ಮ ಮಗ ರಾಯನ್ ಜೊತೆ ಧ್ರುವ ಮಗುವಾಗಿ ಇರುವ ರೀತಿಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು ಮೇಘನಾ ರಾಜ್. ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಬಗೆಗೆ ಹೇಳಬೇಕಾದ್ರೆ ಹಿಂದಿನಿಂದ ವೇದಿಕೆಗೆ ಅವರೇ ಸ್ವತಃ ಬಂದಿದ್ದು ಇವರಿಗೆ ಆಶ್ಚರ್ಯ ಉಂಟುಮಾಡಿತು. ಪ್ರೇರಣಾ, ಟಿವಿ ಕಾರ್ಯಕ್ರಮವೊಂದರಲ್ಲಿ ಮೊಟ್ಟಮೊದಲ ಬಾರಿ ಕಾಣಿಸಿಕೊಂಡಿದ್ದು ʻಧ್ರುವ ದಸರಾʼ ವಿಶೇಷಗಳಲ್ಲೊಂದು. ಇದೇ ಸಂದರ್ಭದಲ್ಲಿ ತಮ್ಮ ಹಾಗೂ ಧ್ರುವ ನಡುವಿನ ಪ್ರೇಮಲೋಕದ ದಿನಗಳನ್ನು ಮೆಲುಕು ಹಾಕಿದರು. ಅವರು ಧ್ರುವರಿಗೆ ಪ್ರೇಮ ಪ್ರಸ್ತಾಪ ಮಾಡಿದ್ದನ್ನು ಮರುಸೃಷ್ಟಿಸಲಾಯಿತು. ಕೇಕ್ ಕತ್ತರಿಸುವ ಮೂಲಕ ಮುಂಗಡವಾಗಿ ಧ್ರುವ ಸರ್ಜಾ ಹುಟ್ಟುಹಬ್ಬ ಆಚರಿಸಲಾಯಿತು. ಮಕ್ಕಳಾದ ರುದ್ರಾಕ್ಷಿ ಹಾಗೂ ಹಯವದನ ಕೂಡ ಉಪಸ್ಥಿತರಿದ್ದುದು ವಿಶೇಷವಾಗಿತ್ತು.
ಕಲಾವಿದ, ಚಿಕ್ಕಪ್ಪ ಅರ್ಜುನ್ ಸರ್ಜಾ ಅವರು ವಿಡಿಯೋ ಮುಖಾಂತರ ಶುಭ ಕೋರಿದರು. ಧ್ರುವ ಅವರ ನಿಷ್ಠೆ, ಕಠಿಣ ಪರಿಶ್ರಮ, ನಟನಾ ಚಾತುರ್ಯದ ಬಗ್ಗೆ ವಿವರಿಸಿದರು. ಧ್ರುವ ಸರ್ಜಾ ಅವರಿಗೆ ನಟನೆ ಕಲಿಸಿದ ಗೌರಿ ದತ್ತು ಹಾಗೂ ಮಹಾಂತೇಶ್, ನಟನೆಯಲ್ಲಿ ಅವರಿಗಿರುವ ಶ್ರದ್ಧೆ ವಿವರಿಸಿ ನಾಟಕ ಶಾಲೆಗೆ ದೊಡ್ಡ ಪ್ರಮಾಣದ ದೇಣಿಗೆ ನೀಡಿದ್ದನ್ನು ಸ್ಮರಿಸಿದರು. ಎಂದೋ ನಟಿಸಿದ ನಾಟಕದ ಸಂಭಾಷಣೆ ಯಥಾವತ್ ಒಪ್ಪಿಸಿ ಚಪ್ಪಾಳೆ ಗಿಟ್ಟಿಸಿದರು ಧ್ರುವ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್
ಗಾಯಕ, ನಟ ಚಂದನ್ ಶೆಟ್ಟಿ ಕಷ್ಟದ ಸಮಯದಲ್ಲಿ ಧ್ರುವ ಸಹಾಯ ಮಾಡಿದ್ದನ್ನು ನೆನೆದರು. ತಾನು ಬರೆದ ಒಂದು ಹಾಡನ್ನು 8 ವರ್ಷ ಕಾಪಾಡಿಕೊಂಡು ʻಪೊಗರುʼ ಚಿತ್ರದಲ್ಲಿ ಬಳಸಿಕೊಂಡಿದ್ದನ್ನು ಸ್ಮರಿಸಿದರು. ಚಂದನ್ ಶೆಟ್ಟಿ ಜೊತೆ ನಟಿಸಿದ ಆಲ್ಬಂ ಹಾಡೊಂದಕ್ಕೆ ಸಿಕ್ಕ 501 ರುಪಾಯಿ ಮೊದಲ ಸಂಭಾವನೆ ಎಂದು ಅಚ್ಚರಿಸಿಪಡಿಸಿದರು ಧ್ರುವ ಸರ್ಜಾ. ಗೆಳೆಯ, ನಟ ರಾಕೇಶ್ ಅಡಿಗ ಮಾತನಾಡುತ್ತಾ ಧ್ರುವ ಸರ್ಜಾರ ಬಾಲ್ಯದ ತುಂಟಾಟದ ಘಟನೆಗಳನ್ನು ಹಂಚಿಕೊಂಡರು. ಧ್ರುವ ದೈವಭಕ್ತರೂ ಆಗಿದ್ದು ಆಧ್ಯಾತ್ಮ ಆಸಕ್ತರೂ ಹೌದು ಎಂಬ ವಿಷಯ ಬಹಿರಂಗಪಡಿಸಿದರು. ಇದಕ್ಕೆ ತಕ್ಕಂತೆ, ಗರುಡ ಪುರಾಣದ ಕೆಲವು ವಿಷಯಗಳ ಬಗ್ಗೆ ಧ್ರುವ ಸರ್ಜಾ ನಿರರ್ಗಳವಾಗಿ ಮಾತನಾಡಿ ಅಚ್ಚರಿ ಮೂಡಿಸಿದರು. ಇದನ್ನೂ ಓದಿ: ಬಿಗ್‌ಬಾಸ್ ಮನೆಗೆ ಈ ಬಾರಿ ಯಾರು ಹೋಗ್ತಾರೆ? ಹರಿದಾಡುತ್ತಿದೆ ಹಲವು ಹೆಸರುಗಳು
ಧ್ರುವ ಒಬ್ಬ ʻಮೌನದಾನಿʼ ಎಂಬುದನ್ನು ಅವರಿಂದ ಉಪಕೃತರಾದ ಹಲವರು ಬಹಿರಂಗ ಪಡಿಸಿದರು. ಆಟೋ ಖರೀದಿಗೆ, ಆಪರೇಷನ್‌ಗೆ, ಕಾಲೇಜು ಅಡ್ಮಿಷನ್ಗೆ ಹೀಗೆ ಅನೇಕ ಸಂದರ್ಭಗಳಲ್ಲಿ ಧ್ರುವ ಸಹಾಯ ಮಾಡಿದ್ದನ್ನು ಸ್ಮರಿಸಿದರು. ಮೂರು ವರ್ಷದ ದೃಷ್ಟಿಹೀನ ಬಾಲಕನಿಗೆ ಚಿಕಿತ್ಸೆಗೆ ನೆರವಾಗಿ ದೃಷ್ಟಿ ಮರಳಿದ್ದು ಗಮನ ಸೆಳೆಯಿತು. ತಾವು ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವರೋ ಅಂಥ ಗುಣಮಟ್ಟದ ಆಸ್ಪತ್ರೆಗೇ ಸಹಾಯ ಕೇಳಿ ಬಂದವರನ್ನು ಕಳಿಸುವುದು ವಿಶೇಷ. ಕಲಾವಿದರಾದ ಬುಲೆಟ್ ರಕ್ಷಕ್, ಐಶ್ವರ್ಯ ಸಿಂಧೋಗಿ, ಯಶಸ್ವಿನಿ, ರಮೋಲಾ, ಆಸಿಯಾ ಬೇಗಂ, ಧನುಷ್ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದರು. ಚಿಲ್ಲರ್ ಮಂಜು, ಮನೋಹರ್ ಕಾಮಿಡಿ ಎಲ್ಲರನ್ನು ನಗೆಗಡಲಿಗೆ ಕರೆದುಕೊಂಡು ಹೋಯಿತು. ನಿರ್ದೇಶಕ ಚೇತನ್ ಕುಮಾರ, ನೃತ್ಯ ಸಂಯೋಜಕ ಮುರಳಿ ಮಾಸ್ಟರ್, ಛಾಯಾಗ್ರಾಹಕ ಡೇವಿಡ್ ಮತ್ತಿತರರು ಧ್ರುವ ಜೊತೆ ತಮ್ಮ ಸಿನಿ ಪಯಣ ಅನುಭವ ಹಂಚಿಕೊಂಡರು.
ಉದಯ ಟಿವಿಯ ಸಿಂಧು ಭೈರವಿ, ಶಾಂತಿನಿವಾಸ, ಶೀಘ್ರದಲ್ಲಿ ಪ್ರಸಾರವಾಗಲಿರುವ ರಥಸಪ್ತಮಿ ಧಾರಾವಾಹಿ ಕಲಾವಿದರ ನೃತ್ಯ ವರ್ಣರಂಜಿತವಾಗಿತ್ತು. ಉದಯ ಟಿವಿಯ ಕಾದಂಬರಿ ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣ ಮಾಡಿದ ಶ್ವೇತಾ ಚಂಗಪ್ಪ ಮತ್ತೆ ಹಲವು ವರ್ಷಗಳ ನಂತರ ಉದಯ ಟಿವಿಯ “ಧ್ರುವ ದಸರಾ” ಕಾರ್ಯಕ್ರಮ ನಿರೂಪಕರಾಗಿ ಬಂದ್ದದ್ದು ವಿಶೇಷ. ʻಧ್ರುವ ದಸರಾʼ ಇದೇ ಸೆಪ್ಟೆಂಬರ್ 27, ಶನಿವಾರ ಸಂಜೆ 6 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಇದನ್ನೂ ಓದಿ: ನಿತಿನ್ ಶಿವಾಂಶ್ ಜೊತೆ ಪ್ರೀತಿ ಗುಟ್ಟು ರಟ್ಟು ಮಾಡಿದ ಖ್ಯಾತ ಗಾಯಕಿ ಸುಹಾನಾ ಸಯ್ಯದ್
ಇದೀಗ ಪತಿ ಚಿರಂಜೀವಿ (Chiranjeevi Sarja) ಜೊತೆ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡು ‘ಪ್ರತಿ ಜನ್ಮದಲ್ಲೂʼ ಎಂದು ನಟಿ ಕ್ಯಾಪ್ಷನ್ ನೀಡಿದ್ದಾರೆ. ‘ಪ್ರತಿ ಜನ್ಮಕ್ಕೂ ಚಿರುನೇ ಬೇಕು’ ಎಂಬರ್ಥದಲ್ಲಿ ಮೇಘನಾ ಬರೆದುಕೊಂಡಿದ್ದಾರೆ. ಈ ಮೂಲಕ 2ನೇ ಮದುವೆ ಬಗ್ಗೆ ಮಾತನಾಡುವವರಿಗೆ ನಟಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ:ಮತ್ತೆ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾದ ದೀಪಿಕಾ ಪಡುಕೋಣೆ
ಮೇಘನಾ ರಾಜ್ ಅವರ ಹೊಸ ಮನೆಯಲ್ಲಿ ತಾಯಿ ಪ್ರಮೀಳಾ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ರಕ್ಷಿತಾ ಪ್ರೇಮ್, ಅಮೂಲ್ಯ, ಪ್ರಿಯಾಂಕಾ ಉಪೇಂದ್ರ, ಶ್ರುತಿ, ಮಾಳವಿಕಾ, ಸುಧಾರಾಣಿ, ಮಾಲಾಶ್ರೀ, ‘ಕಾಟೇರ’ ನಟಿ ಆರಾಧನಾ, ವಿನಯಾ ಪ್ರಸಾದ್, ಉಮಾಶ್ರೀ, ಜಯಮಾಲಾ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
ತಾಯಿಯ ಆಪ್ತರಾದ ನಟಿಯರಿಗೆ ಮೇಘನಾ ರಾಜ್ ಬರ್ತ್‌ಡೇಗೆ ಆಹ್ವಾನ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಮನೆಯಲ್ಲಿ ಸರಳವಾಗಿ ಬರ್ತ್‌ಡೇ ಪಾರ್ಟಿ ಆಚರಿಸಿದ್ದಾರೆ. ಇದೀಗ ಸ್ಯಾಂಡಲ್‌ವುಡ್ ನಟಿಯರ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ.
ಪ್ರಮೀಳಾ ಜೋಷಾಯ್ ಅವರು ಕಳೆದ 30 ವರ್ಷಗಳಿಂದ ಸಿನಿಮಾದಲ್ಲಿ ನಟಿಸುತ್ತಾ ಸಕ್ರಿಯರಾಗಿದ್ದಾರೆ. ಇನ್ನೂ ಮೇಘನಾ ರಾಜ್ ಅವರು ‘ತತ್ಸಮ ತದ್ಬವ’ ಎಂಬ ಸಿನಿಮಾ 2023ರಲ್ಲಿ ರಿಲೀಸ್ ಆಗಿತ್ತು. ಇದೀಗ ಅವರು ಕನ್ನಡ ಮತ್ತು ಮಲಯಾಳಂ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghana Raj) ಅವರು ಮದುವೆಯ ವಾರ್ಷಿಕೋತ್ಸವಕ್ಕೆ ಪತಿ ಚಿರುಗೆ ಪ್ರೀತಿಯ ಸಂದೇಶ ಬರೆದಿದ್ದಾರೆ. 7 ವರ್ಷಗಳ ದಾಂಪತ್ಯ ಬದುಕಿಗೆ ಚಿರಂಜೀವಿ ಜೊತೆಗಿನ ಹಳೆಯ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.
ನಟ ಧ್ರುವ ಸರ್ಜಾ (Dhruva Sarja) ಅವರು ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಬೆನ್ನಲ್ಲೇ ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಪ್ರತಿಕ್ರಿಯೆ ನೀಡಿದ್ದಾರೆ. ಧ್ರುವ ಸರ್ಜಾ ಸೇಫ್ ಆಗಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಟಾಪ್‌ಲೆಸ್ ಅವತಾರದಲ್ಲಿ ಸೋನಾಲಿ- ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ನಟಿ
ಧ್ರುವ ಸರ್ಜಾ, ಎಪಿ ಅರ್ಜುನ್, ನಾಯಕಿ ವೈಭವಿ ಸೇರಿದಂತೆ ‘ಮಾರ್ಟಿನ್’ (Martin Film) ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸದ್ಯ ಚಿತ್ರತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ. ಈ ಘಟನೆ ಸಂಭವಿಸಿದ ಬೆನ್ನಲ್ಲೇ ಧ್ರುವ ಕುರಿತು ಅಭಿಮಾನಿಗಳಿಗೆ ಅಪ್‌ಡೇಟ್ ನೀಡಿದ್ದಾರೆ. ಈಗಷ್ಟೇ ಧ್ರುವ ಬಳಿ ಮಾತನಾಡಿದೆ. ಅವರು ಸೇಫ್ ಆಗಿದ್ದಾರೆ. ಮೇಲಿರುವ ದೈವಿಕ ಶಕ್ತಿಗಳಿಗೆ ಧನ್ಯವಾದಗಳು ಎಂದು ಮೇಘನಾ ರಾಜ್ ತಿಳಿಸಿದ್ದಾರೆ. ನಟಿಯ ಮಾತು ಕೇಳಿ ಫ್ಯಾನ್ಸ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂತಿಮ ಚಿತ್ರೀಕರಣದಲ್ಲಿದ್ದ ‘ಮಾರ್ಟಿನ್’ ಚಿತ್ರತಂಡವು ಸೋಮವಾರ (ಫೆ.19) ಸಂಜೆ ಸಾಂಗ್ ಶೂಟಿಂಗ್‌ಗಾಗಿ ದೆಹಲಿ ವಿಮಾನ ನಿಲ್ದಾಣದಿಂದ ಶ್ರೀನಗರ ವಿಮಾನ ನಿಲ್ದಾಣಕ್ಕೆಗೆ ಇಂಡಿಗೋ ವಿಮಾನದಲ್ಲಿ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನವನ್ನು ಲ್ಯಾಂಡಿಂಗ್ ಮಾಡಲು ಸಾಧ್ಯವಾಗದೇ ಪೈಲಟ್ ಪರದಾಡಿದ್ದಾರೆ. ಇದನ್ನೂ ಓದಿ:ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ & ಮಾರ್ಟಿನ್ ಟೀಂ ಪಾರು!
ಸೀಟ್‌ಗಳು ನಡುಗಿದೆ, ಪ್ರಯಾಣಿಕರು ಗಾಬರಿ ಆಗಿದ್ದಾರೆ. ಕೊನೆಗೆ ಪೈಲಟ್‌ನ ಸಮಯ ಪ್ರಜ್ಞೆಯಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಘಟನೆಯ ಬಳಿಕ ಮಾರ್ಟಿನ್ ಚಿತ್ರತಂಡವು ವಿಮಾನ ಇಳಿಯುವ ಸಂದರ್ಭದಲ್ಲಿಯೇ ವೀಡಿಯೋ ಮಾಡಿಕೊಂಡು ವಿಮಾನದಲ್ಲಿ ಎದುರಾಗಿದ್ದ ಕೆಟ್ಟ ಸಂದರ್ಭವನ್ನು ವಿವರಿಸಿ ಮರು ಜನ್ಮ ಸಿಕ್ಕಿದೆ ಎಂದಿದೆ. ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ ಎಂದು ಧ್ರುವ ಸರ್ಜಾ ಹೇಳಿದ್ದು, ಇದಕ್ಕೆ ಮಾರ್ಟಿನ್ ತಂಡವೂ ದನಿಗೂಡಿಸಿದೆ.
ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಈ ಬಗ್ಗೆ ನಟ ಧ್ರುವ ಸರ್ಜಾ ಸಹ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದದ ಫಲ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್ ಮಾಡಿದ್ದಾರೆ.
ಚಿರು ಸರ್ಜಾ ಮತ್ತು ಮೇಘನಾ ರಾಜ್ ದಂಪತಿ ಪುತ್ರ ರಾಯನ್ ರಾಜ್ ಸರ್ಜಾ ಸಮಸ್ತ ಜನತೆಗೆ ಕಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ತಾಯಿ ಮತ್ತು ಅಜ್ಜ ಅಜ್ಜಿಯೊಂದಿಗೆ ಕೋರಮಂಗಲ ಸಂತ ಫ್ರಾಯರಿ ಚರ್ಚ್ ಆಗಮಿಸಿದ್ದ ರಾಯನ್, ತಾಯಿಯ ಜೊತೆ ಜೊತೆಗೆ ಎಲ್ಲರಿಗೂ ಮೇರಿ ಕ್ರಿಸ್ಮಸ್ ಎಂದು ಶುಭಾಶಯ ತಿಳಿಸಿದರು.
ಚರ್ಚ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ನಟಿ ಮೇಘನಾ ರಾಜ್, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಹೊಸ ವರ್ಷಕ್ಕೆ ಮತ್ತೆ ಕಾಲಿಡ್ತಿದ್ದೀವಿ. ಈ ಕ್ರಿಸ್ ಮಸ್ ಎಲ್ಲರಿಗೂ ಮಿರಾಕಲ್ ತರಲಿ. ಎಲ್ಲರೂ ಸೇಫ್ ಆಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ. ನಾನೆಲ್ಲಿದ್ದರೂ ನನ್ನ ಮಗ ಇರಲೇಬೇಕು. ನಾವಿಬ್ರು ಒಂಥರ ಬೆಸ್ಟ್ ಫ್ರೆಂಡ್ಸ್ ಇದ್ದಂಗೆ’ ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ರಾಯನ್ ರಾಜ್ ಸರ್ಜಾ ಮೇರಿ ಕ್ರಿಸ್ ಮಸ್ ಎಂದರು. ಅದನ್ನು ಕಂಡ ಮೇಘನಾ, ಇವನು ಸಿಂಗಲ್ ಟೇಕ್ ಆರ್ಟಿಸ್ಟ್ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕ್ರಿಸ್ ಮಸ್ ಹಬ್ಬ ಕ್ರಿಶ್ಚಿಯನ್ನರು ಮಾತ್ರ ಆಚರಿಸೋದಲ್ಲ. ಡಿಸಂಬರ್ ಬರ್ತಿದ್ದಂತೆ ಎಲ್ಲರಲ್ಲೂ ಕ್ರಿಸ್ ಮಸ್ ಸಡಗರ ಶುರುವಾಗುತ್ತೆ. ಕ್ರಿಸ್ ಮಸ್ ಹಬ್ಬ ಎಂದರೆ ಖುಷಿ ಹಂಚೋದು. ಒಳ್ಳೆಯದನ್ನ ಬಯಸೋದು. ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯ ಎಂದರು ಮೇಘನಾ ರಾಜ್.
ಮೇಘನಾ ತಂದೆ, ನಟ ಸುಂದರ್ ರಾಜ್ ಕೂಡ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಎಂದು ಕರೆಯುತ್ತೇವೆ. ಈ ಭೂಮಿ ಎಲ್ಲರಿಗೂ ಸೇರಿದ್ದು. ಇಲ್ಲಾಗುವ ಪ್ರತಿಕ್ರಿಯೆ ಮತ್ತು ಭಾವನೆ ಏಕಮುಖವಾಗಿರಬೇಕು. ಜನಗಳನ್ನ ಪ್ರೀತಿಸೋದೆ ಪ್ರಮುಖ ಉದ್ದೇಶ. ಪ್ರೀತಿಸೋರ ಜೊತೆಗೆ ಪ್ರೀತಿ ಹಂಚಿಕೊಳ್ಳಬೇಕು. ನಾನು ಮದುವೆ ಆಗಿರೋದು ಪ್ರಮೀಳಾ ಜೋಷಾಯಿ, ಆಕೆ ಕ್ಯಾಥೋಲಿಕ್ ಕ್ರಿಶ್ಚಿಯನ್. ಆಕೆ ಕೂಡ ಗಣೇಶ ಹಬ್ಬ, ಕೃಷ್ಣ ಜಯಂತಿ, ದೀಪಾವಳಿ ಹಬ್ಬಕ್ಕೆ ದೇವಾಲಯಕ್ಕೆ ಬರ್ತಾರೆ. ನಾನು 35 ವರ್ಷದಿಂದ ಕ್ರಿಸ್ ಮಸ್ ಹಬ್ಬಕ್ಕೆ ಚರ್ಚ್ ಗೆ ಬರ್ತೀನಿ. ಇಲ್ಲಿ ಬಂದಾಗ ಇಡೀ ಕುಟುಂಬವನ್ನು ನೋಡ್ತೀವಿ ಎಂದರು.
ಇಂದು ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರ ಹುಟ್ಟು ಹಬ್ಬ (Birthday). ಈ ದಿನದಂದು ಚಿರು ಪತ್ನಿ ಮೇಘನಾ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದಾರೆ. ‘ಕೆಲವನ್ನಷ್ಟೇ ಆಚರಿಸಲು ಆಯ್ಕೆ ಮಾಡಿಕೊಳ್ಳುತ್ತೇವೆ. ನಿಮ್ಮನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಹ್ಯಾಪಿ ಬರ್ತಡೇ ಹಸ್ಬೆಂಡ್’ ಎಂದು ಅವರು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ.
ಮೊನ್ನೆಯಷ್ಟೇ ಧ್ರುವ ಹುಟ್ಟು ಹಬ್ಬ
ನಟ ಧ್ರುವ ಸರ್ಜಾ (Dhruva Sarja) ಸಮಯ ಸಿಕ್ಕಾಗೆಲ್ಲ ಸಹೋದರ ಚಿರಂಜೀವಿ ಸರ್ಜಾ (Chiranjeevi Sarja) ಅವರ ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ರಾಯನ್ (Rayan) ಕೂಡ ಚಿಕ್ಕಪ್ಪನ ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ಚಿಕ್ಕಪ್ಪನ ಹುಟ್ಟು ಹಬಕ್ಕೆ ವಿಶೇಷ ವಿಡಿಯೋವೊಂದನ್ನು ತಾಯಿ ಮೇಘನಾ ಮೂಲಕ ಶೇರ್ ಮಾಡಿದ್ದ ಪುಟಾಣಿ. ಈ ವಿಡಿಯೋದಲ್ಲಿ ರಾಯನ್ ಗೆ ಧ್ರುವ ಸರ್ಜಾ ಡಾನ್ಸ್ ಕಲಿಸುತ್ತಿದ್ದಾರೆ. ಅಲ್ಲದೇ ಎತ್ತಿ ಮಗುವನ್ನು ಧ್ರುವ ಮುದ್ದಾಡುತ್ತಾರೆ. ಈ ವಿಡಿಯೋವನ್ನು ಮೇಘನಾ ರಾಜ್ (Meghana Raj) ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು.
ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ಸಹೋದರನ ಮಗ ರಾಯನ್ ಗೆ ಮೊನ್ನೆಯಷ್ಟೇ ಹೇಳಿಕೊಟ್ಟಿದ್ದರು ಧ್ರುವ ಸರ್ಜಾ. ಥೇಟ್ ಮಗುವಿನಂತೆಯೇ ಅವರು ಕುಣಿದಿದ್ದರು. ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದರು. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸಿದ್ದರು. ಈ ವಿಡಿಯೋವನ್ನು ಧ್ರುವ ಅವರ ಹುಟ್ಟು ಹಬ್ಬಕ್ಕಾಗಿ ಹಂಚಿಕೊಂಡಿದ್ದರು ಮೇಘನಾ. ಈ ಮೂಲಕ ಚಿಕ್ಕಪ್ಪನಿಗೆ ಶುಭಾಶಯ ಹೇಳಿದ್ದ ರಾಯನ್.
ಇತ್ತೀಚೆಗಷ್ಟೇ ಅಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ಬಿಡುಗಡೆ ಆಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಯಿತು. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಕೊಂಡಿದ್ದರು.
ನಟ ಧ್ರುವ ಸರ್ಜಾ (Dhruva Sarja) ಸಮಯ ಸಿಕ್ಕಾಗೆಲ್ಲ ಸಹೋದರ ಚಿರಂಜೀವಿ ಸರ್ಜಾ (Chiranjeevi Sarja) ಅವರ ಪುತ್ರ ರಾಯನ್ ಜೊತೆ ಕಾಲ ಕಳೆಯುತ್ತಾರೆ. ರಾಯನ್ (Rayan) ಕೂಡ ಚಿಕ್ಕಪ್ಪನ ಕಂಡರೆ ಎಲ್ಲಿಲ್ಲದ ಪ್ರೀತಿ. ಈ ಬಾರಿ ಚಿಕ್ಕಪ್ಪನ ಹುಟ್ಟು ಹಬಕ್ಕೆ ವಿಶೇಷ ವಿಡಿಯೋವೊಂದನ್ನು ತಾಯಿ ಮೇಘನಾ ಮೂಲಕ ಶೇರ್ ಮಾಡಿದ್ದಾನೆ ಪುಟಾಣಿ. ಈ ವಿಡಿಯೋದಲ್ಲಿ ರಾಯನ್ ಗೆ ಧ್ರುವ ಸರ್ಜಾ ಡಾನ್ಸ್ ಕಲಿಸುತ್ತಿದ್ದಾರೆ. ಅಲ್ಲದೇ ಎತ್ತಿ ಮಗುವನ್ನು ಧ್ರುವ ಮುದ್ದಾಡುತ್ತಾರೆ. ಈ ವಿಡಿಯೋವನ್ನು ಮೇಘನಾ ರಾಜ್ (Meghana Raj) ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮ್ಮದೇ ಸಿನಿಮಾದ ಹಾಡಿನ ಹುಕ್ ಸ್ಟೇಪ್ ಅನ್ನು ರಾಯನ್ ಗೆ ಹೇಳಿಕೊಟ್ಟಿದ್ದಾರೆ ಧ್ರುವ ಸರ್ಜಾ. ಥೇಟ್ ಮಗುವಿನಂತೆಯೇ ಅವರು ಕುಣಿಸಿದ್ದಾರೆ. ಈ ವಿಡಿಯೋದಲ್ಲಿ ರಾಯನ್ ತಾತ, ನಟ ಸುಂದರ್ ರಾಜ್ ಕೂಡ ಇದ್ದಾರೆ. ಮೊಮ್ಮಗ ಡಾನ್ಸ್ ಕಂಡು ಅವರೂ ಸಂಭ್ರಮಿಸಿದ್ದಾರೆ. ಈ ವಿಡಿಯೋವನ್ನು ಧ್ರುವ ಅವರ ಹುಟ್ಟು ಹಬ್ಬಕ್ಕಾಗಿ ಹಂಚಿಕೊಂಡಿದ್ದಾರೆ ಮೇಘನಾ. ಈ ಮೂಲಕ ಚಿಕ್ಕಪ್ಪನಿಗೆ ಶುಭಾಶಯ ಹೇಳಿದ್ದಾನೆ ರಾಯನ್.
ಅಗಲಿದ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ರಾಜಮಾರ್ತಾಂಡ ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಇದು ಚಿರು ಅವರ ಕೊನೆಯ ಸಿನಿಮಾವಾಗಿದ್ದರಿಂದ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಗಿದೆ. ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡವು ವಿಶೇಷ ಪೂಜೆಯನ್ನೂ ಸಲ್ಲಿಸಿದೆ. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ರಾಮ್ ನಾರಾಯಣ್, ವಿಶೇಷ ಸುದ್ದಿಯೊಂದನ್ನು ನೀಡಿದ್ದರು. ಚಿರು ಅವರ ಕೊನೆಯ ಸಿನಿಮಾದಲ್ಲಿ ಚಿರು ಪುತ್ರ ರಾಯನ್ ರಾಜ್ ಕೂಡ ಕಾಣಿಸಿಕೊಂಡಿದ್ದಾರೆ. ಸಿನಿಮಾ ರೆಡಿಯಾಗಿ ಒಂದು ವರ್ಷವೇ ಆಗಿದೆ. ರಾಯನ್ ರಾಜ್ ಹುಟ್ಟುವ ಮೊದಲೇ ಈ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದವು. ಹಾಗಾಗಿ ರಾಯನ್ ಯಾವ ರೀತಿಯಲ್ಲಿ ಎಂಟ್ರಿ ಕೊಡಲಿದ್ದಾರೆ ಎನ್ನುವುದು ಕುತೂಹಲ ಸಂಗತಿಯಾಗಿತ್ತು. ಅದಕ್ಕೀಗ ಸಿನಿಮಾದಲ್ಲಿ ಉತ್ತರ ಸಿಕ್ಕಿದೆ.
ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ರಾಜ್ ಅವರ ಅನೇಕ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರತಿ ಫೋಟೋ ಬಂದಾಗಲೂ ಚಿರು ಅಭಿಮಾನಿಗಳು ಮತ್ತು ಮೇಘನಾ ರಾಜ್ ಅಭಿಮಾನಿಗಳು ಪ್ರೀತಿಯಿಂದ ಅವುಗಳನ್ನು ಬರಮಾಡಿಕೊಳ್ಳುತ್ತಾರೆ. ಈ ಬಾರಿ ಬಿಗ್ ಸ್ಕ್ರೀನ್ ನಲ್ಲೇ ರಾಯನ್ ರಾಜ್ ಅವರನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.
ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ (Meghanaraj) ಅವರು ಗಣೇಶ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಶ್ರೀನಗರ ಕಿಟ್ಟಿಗೆ (Srinagar Kitty) ನಾಯಕಿಯಾಗುವ ಮೂಲಕ ಮೇಘನಾ ಬಿಗ್ ಅಪ್‌ಡೇಟ್ ನೀಡಿದ್ದಾರೆ.
‘ತತ್ಸಮ ತದ್ಭವ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿ, ಉತ್ತಮ ಪ್ರಶಂಸೆ ಪಡೆಯಿತು. ಈ ಬೆನ್ನಲ್ಲೇ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ವಿನಯ್ ಪ್ರಿತಮ್, ಗುರು ಹೆಗ್ಡೆ ನಿರ್ದೇಶನದ ‘ಅಮರ್ಥ’ (Amartha) ಎಂಬ ವಿಭಿನ್ನ ಸಿನಿಮಾದಲ್ಲಿ ಲೀಡಿಂಗ್ ಲೇಡಿಯಾಗಿ ನಟಿಸಲಿದ್ದಾರೆ.
ಮೊದಲ ಬಾರಿಗೆ ಶ್ರೀನಗರ ಕಿಟ್ಟಿಯೊಂದಿಗೆ ಹೀರೋಯಿನ್ ಆಗಿ ಮೇಘನಾ ರಾಜ್ ತೆರೆ ಹಂಚಿಕೊಳ್ತಿದ್ದಾರೆ. ಟೈಟಲ್ ಕೂಡ ಭಿನ್ನವಾಗಿದ್ದು, ಸಿನಿಮಾ ವಿಭಿನ್ನವಾಗಿರಲಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ:ದೊಡ್ಮನೆ ಹೀರೋಗೆ ಮೇಘಾ ಶೆಟ್ಟಿ ಹೀರೋಯಿನ್
ಗಣೇಶ್ ಹಬ್ಬದಂದು ಹೊಸ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಶ್ರೀನಗರ ಕಿಟ್ಟಿ, ಶರ್ಟ್-ಪಂಚೆ-ಶಲ್ಯ ಧರಿಸಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಜೊತೆ ಮೇಘನಾ ಸೀರೆಯುಟ್ಟು ಕಂಗೊಳಿಸಿದ್ದಾರೆ. ಸದ್ಯ ಈ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ. ಸದ್ಯದಲ್ಲೇ ಸಿನಿಮಾದ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.