Tag: Meghalaya

  • ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ

    ಮೀನು, ಮಟನ್‍ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ: ಬಿಜೆಪಿ ಸಚಿವ ಶುಲ್ಲೈ

    ಶಿಲ್ಲಾಂಗ್: ಮೀನು, ಚಿಕನ್, ಮಟನ್‍ಗಳಿಗಿಂತ ಜಾಸ್ತಿ ಗೋಮಾಂಸವನ್ನು ತಿನ್ನಿ ಎಂದು ರಾಜ್ಯದ ಜನರಿಗೆ ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲ್ಲೈ ಸಿಕ್ಕಾಪಟೆ ಟೀಕೆಗೆ ಗುರಿಯಾಗಿದ್ದಾರೆ.

    ಕಳೆದವಾರವಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಶುಲ್ಲೈ, ಇದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಅವರಿಗೆ ಬೇಕಾದ್ದನ್ನು ತಿನ್ನಲ್ಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ನಾನಂತೂ ಜನರಿಗೆ ಚಿಕನ್, ಮಟನ್, ಮೀನಿಗಿಂತಲೂ ಜಾಸ್ತಿ ಗೋಮಾಂಸ ತಿನ್ನಿ ಎಂದೇ ಪ್ರೋತ್ಸಾಹಿಸುತ್ತೇನೆ. ಬಿಜೆಪಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸುತ್ತದೆಂಬ ಗ್ರಹಿಕೆ ತುಂಬ ಜನರಿಗೆ ಇದೆ. ಗೋಮಾಂಸ ತಿನ್ನಲು ಹೆಚ್ಚೆಚ್ಚು ಪ್ರೋತ್ಸಾಹ ನೀಡುವ ಮೂಲಕ ಅನಿಸಿಕೆಯನ್ನು ಹೋಗಲಾಡಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೇಂದ್ರದ 10 ಕೊರೊನಾ ಹಾಟ್ ಸ್ಪಾಟ್- ರಾಜ್ಯಗಳ ಲಿಸ್ಟ್ ನಲ್ಲಿ ಕರ್ನಾಟಕ

    ನೆರೆ ರಾಜ್ಯ ಅಸ್ಸಾಂನಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಪಟ್ಟಂತೆ ಹೊಸ ಕಾನೂನು ಜಾರಿಗೊಳಿಸಲಾಗಿದೆ. ಆದರೆ ಈ ಕಾಯ್ದೆಯಿಂದ ಮೇಘಾಲಯಕ್ಕೆ ಜಾನುವಾರುಗಳ ಸಾಗಣೆ ಮಾಡುವುದರ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಳಿ ಮಾತನಾಡುತ್ತೇನೆ ಎಂದು ಮೇಘಾಲಯ ಸಚಿವ ಶುಲ್ಲೈ ತಿಳಿಸಿದ್ದಾರೆ. ಇದನ್ನೂ ಓದಿ: ಭಾನುವಾರದ ಬಾಡೂಟಕ್ಕೆ ಮಾಡಿ ನೋಡಿ ಪೋರ್ಕ್ ಬಿರಿಯಾನಿ

    ಮೇಘಾಲಯದ ಬಿಜೆಪಿ ಸಚಿವ ಸ್ಯಾನ್ಬೋರ್ ಶುಲ್ಲೈ ಇಂಥದ್ದೊಂದು ಕರೆ ಕೊಟ್ಟು ಬಹುದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್‍ಗಳು ಗೋಹತ್ಯೆ, ಗೋಮಾಂಸ ಸೇವನೆಯನ್ನು ಕಟುವಾಗಿ ವಿರೋಧಿಸುತ್ತವೆ. ಹೀಗಿರುವಾಗ ಬಿಜೆಪಿಯದ್ದೇ ಸಚಿವರೊಬ್ಬರು ಇಂಥ ಹೇಳಿಕೆ ನೀಡಿರುವುದು ಎಷ್ಟು ಸರಿ ಎಂದು ಜನರೂ ಪ್ರಶ್ನಿಸುತ್ತಿದ್ದಾರೆ.

  • ಬಲವಂತದ ಲಸಿಕೆ ನೀಡುವ ನಿರ್ಧಾರ ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ: ಮೇಘಾಲಯ ಹೈಕೋರ್ಟ್

    ಬಲವಂತದ ಲಸಿಕೆ ನೀಡುವ ನಿರ್ಧಾರ ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ: ಮೇಘಾಲಯ ಹೈಕೋರ್ಟ್

    ಶಿಲ್ಲಾಂಗ್: ಬಲವಂತವಾಗಿ ಲಸಿಕೆ ನೀಡುವುದು ಅಥವಾ ಲಸಿಕೆ ಕಡ್ಡಾಯ ಮಾಡುವುದು ಮನುಷ್ಯನ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ ಎಂದು ಮೇಘಾಲಯದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

    ಮೇಘಾಲಯದ ನಗರಗಳಲ್ಲಿ ವ್ಯಾಪಾರ ವಹಿವಾಟು ಮಾಡುವ ಜನರಿಗೆ ಅಲ್ಲಿನ ಸ್ಥಳೀಯ ಆಡಳಿತ ಪ್ರತ್ಯೇಕ ಆದೇಶ ಹೊರಡಿಸಿ ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು, ಸಣ್ಣ ವ್ಯಾಪಾರಿಗಳು, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ಕೋವಿಡ್ ಲಸಿಕೆ ಹಾಕಿಸಿಕೊಂಡರೆ ಮಾತ್ರ ತಮ್ಮ ವ್ಯಾಪಾರ ವಹಿವಾಟು ನಡೆಸಬಹುದು ಎಂದು ಆದೇಶ ಹೊರಡಿಸಿತ್ತು.

    ಈ ಆದೇಶದ ವಿರುದ್ಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ಈ ರೀತಿ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಿದರೆ ಅದು ಮನುಷ್ಯನ ಮೂಲಭೂತ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಇದನ್ನೂ ಓದಿ: ವಿದೇಶಕ್ಕೆ ತೆರಳುವ ಫಲಾನುಭವಿಗಳ ಕೋವಿಶೀಲ್ಡ್ ಲಸಿಕೆ ಪಡೆಯುವ ಅಂತರ ಕಡಿತ

    ದೇಶದಲ್ಲಿರುವ ಕೊರೊನಾ ಸೋಂಕನ್ನು ತಡೆಗಟ್ಟಲು ಲಸಿಕೆ ಪಡೆಯುವುದು ಅನಿವಾರ್ಯ. ಆದರೆ ಕೆಲವು ಮೂಲಭೂತ ತತ್ವಗಳನ್ನು ಗಮನಿಸಿದಾಗ ಲಸಿಕೆ ಪಡೆಯುವುದನ್ನು ಕಡ್ಡಾಯ ಮಾಡಲು ಆಗುವುದಿಲ್ಲ ಹಾಗೇನಾದರು ಮಾಡಿದರು ಮನುಷ್ಯನ ಜೀವನದ ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬಿಸ್ವನಾಥ್ ಸೊಮಡ್ಡರ್ ಮತ್ತು ನ್ಯಾಯಮೂರ್ತಿ ಎಚ್.ಎಸ್.ತಂಗ್ಖೀವ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

    ಆರೋಗ್ಯದ ಹಕ್ಕಿನ ಬಗ್ಗೆ ಗಮನಿಸಿದಾಗ ಲಸಿಕೆ ನೀಡುವುದು ಆರೋಗ್ಯ ರಕ್ಷಣೆಯ ಮೂಲಭೂತ ಹಕ್ಕಾಗಿದೆ. ಆದರೆ ಬಲವಂತವಾಗಿ ಲಸಿಕೆ ನೀಡುವುದು ಅಥವಾ ಕೆಲವು ನಿಯಮಗಳನ್ನು ತಂದು ಕಡ್ಡಾಯಗೊಳಿಸಿ ಲಸಿಕೆ ಪಡೆಯುವಂತೆ ಒತ್ತಡ ಹಾಕುವುದು ಮನುಷ್ಯನ ಮೂಲಭೂತ ಉದ್ದೇಶಕ್ಕೆ ದಕ್ಕೆ ತರುತ್ತದೆ ಮತ್ತು ಜೀವನೋಪಾಯದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಇದು ವ್ಯಕ್ತಿಯ ಹಕ್ಕು, ಆಯ್ಕೆ ಮತ್ತು ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರಿದಂತೆ ಆಗುತ್ತದೆ. ಒಬ್ಬ ತಾನು ಲಸಿಕೆ ಹಾಕದೆ ಇರಲು ನಿರ್ಧಾರ ಮಾಡಿದರೆ ಅದು ಆತನ ನಿರ್ಧಾರ. ಆದರೆ ಇದರಿಂದ ಇತರರ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಹೆಚ್ಚಿದೆ ಎಂದು ಈ ವೇಳೆ ಪೀಠ ಕಳವಳ ವ್ಯಕ್ತಪಡಿಸಿದೆ.

  • ಮದ್ಯಪ್ರಿಯರಿಗೆ ಗುಡ್‍ನ್ಯೂಸ್ – ಇಂದಿನಿಂದ ಬಾರ್‌ಗಳು ಓಪನ್

    ಮದ್ಯಪ್ರಿಯರಿಗೆ ಗುಡ್‍ನ್ಯೂಸ್ – ಇಂದಿನಿಂದ ಬಾರ್‌ಗಳು ಓಪನ್

    – ಐದು ದಿನಗಳ ಕಾಲ ಎಣ್ಣೆ ಮಾರಾಟಕ್ಕೆ ಅವಕಾಶ

    ದಿಸ್ಪುರ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಈ ನಡುವೆ ಮದ್ಯ ಪ್ರಿಯರು ಅಂಗಡಿ ಓವನ್ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರು. ಇದೀಗ ಲಾಕ್‍ಡೌನ್ ನಡುವೆಯೇ ಅಸ್ಸಾಂ ಮತ್ತು ಮೇಘಾಲಯದ ಮದ್ಯದಂಗಡಿಗಳು ಇಂದಿನಿಂದ ಮತ್ತೆ ತೆರೆಯಲು ನಿರ್ಧರಿಸಿವೆ ಎಂದು ಉಭಯ ರಾಜ್ಯಗಳ ಅಬಕಾರಿ ಇಲಾಖೆಗಳು ತಿಳಿಸಿವೆ.

    ಅಸ್ಸಾಂನಲ್ಲಿ, ಮದ್ಯದಂಗಡಿಗಳು, ಸಗಟು ಗೋದಾಮುಗಳು ಮತ್ತು ಸಾರಾಯಿ ಮಳಿಗೆಗಳು ಸೇರಿದಂತೆ ಲಿಕ್ಕರ್ ಶಾಪ್ ಇಂದಿನಿಂದ ಪ್ರತಿದಿನ 7 ಗಂಟೆಗಳ ಕಾಲ ತೆರೆಯಲ್ಪಡುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೇ ಇಂದಿನಿಂದ ಏಪ್ರಿಲ್ 17 ವರೆಗೆ ಅಂದರೆ ಶುಕ್ರವಾರದವರೆಗೆ ಮದ್ಯದಂಗಡಿ ತೆರೆದಿರುತ್ತವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಶಾಪ್ ಓಪನ್ ಆಗಿರುತ್ತವೆ. ಇದನ್ನೂ ಓದಿ: ಏಪ್ರಿಲ್ 14ರ ಬಳಿಕ ಸಿಗುತ್ತಾ ಮದ್ಯ? – 2 ದಿನದಲ್ಲಿ ಸ್ಪಷ್ಟ ನಿರ್ಧಾರ

    ಮೇಘಾಲಯದಲ್ಲಿ ಮದ್ಯದಂಗಡಿಗಳು ಮತ್ತು ಗೋದಾಮುಗಳು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ತೆರೆದಿರುತ್ತವೆ. ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಕೈ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಘಾಲಯದಲ್ಲೂ ಏಪ್ರಿಲ್ 17ವರೆಗೆ ಮಾತ್ರ ಮದ್ಯದಂಗಡಿ ತೆರೆದಿರುತ್ತವೆ.

    ಅನುಮತಿ ನೀಡಲಾಗಿರುವ ದಿನಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಮದ್ಯದಂಗಡಿಗಳು ತೆರೆದಿರುತ್ತವೆ. ಅಂಗಡಿಯಲ್ಲಿ ಕನಿಷ್ಟ ಸಿಬ್ಬಂದಿ ಕೆಲಸ ಮಾಡಬಹುದು. ಅಲ್ಲದೇ ಬಾಟಲ್ ಕೊಡುವಾಗ ಮತ್ತು ಹಣ ಪಡೆಯುವಾಗ ಗ್ರಾಹಕರು ಮತ್ತು ಸಿಬ್ಬಂದಿ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು. ಅಲ್ಲದೇ ಶಾಪ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೊರಗೆ ಹೋಗದಂತೆ ನೋಡಿಕೊಳ್ಳಬೇಕು. ಅವರಿಗೆ ತಿಂಡಿ, ಊಟದ ವ್ಯವಸ್ಥೆಯನ್ನು ಮಾಲೀಕರೇ ಮಾಡಬೇಕು ಎಂದು ಅಸ್ಸಾಂ ಅಬಕಾರಿ ಇಲಾಖೆ ತಿಳಿಸಿದೆ.

    ಮೇಘಾಲಯ ಅಬಕಾರಿ ಆಯುಕ್ತ ಪ್ರವೀಣ್ ಬಕ್ಷಿ ಅವರು, ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ. ಜೊತೆಗೆ ಪ್ರತಿ ಮನೆಗೆ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬಂದು ಮದ್ಯ ಖರೀದಿ ಮಾಡಬೇಕು. ಅಲ್ಲದೇ ಒಂದು ಪ್ರದೇಶ ಅಥವಾ ಒಂದು ಗ್ರಾಮದಿಂದ ಮತ್ತೊಂದು ಗ್ರಾಮಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಗ್ರಾಹಕರು ಮತ್ತು ಶಾಪ್‍ನಲ್ಲಿ ಕೆಲಸ ಮಾಡುವವರಿಗೆ ಸ್ಯಾನಿಟೈಸರ್ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

    ಕೋವಿಡ್ 19 ವೈರಸ್‍ನಿಂದ ಸರ್ಕಾರ ಮದ್ಯದಂಗಡಿಗಳನ್ನು ಮುಚ್ಚಿತ್ತು. ಆದರೆ ಜನರು ಮತ್ತೆ ಮದ್ಯದಂಗಡಿ ತೆರೆಯುವಂತೆ ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರು. ಬಿಜೆಪಿ ಸೇರಿದಂತೆ ಮೇಘಾಲಯ ಮೈತ್ರಿ ಪಾಲುದಾರರು ಮದ್ಯದಂಗಡಿಗಳನ್ನು ಮುಚ್ಚುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ಇದುವರೆಗೂ ಯಾವುದೇ ಕೊರೊನಾ ಪ್ರಕರಣ ಮೇಘಾಲಯದಲ್ಲಿ ವರದಿಯಾಗಿಲ್ಲ.

  • ಗಣಿ ದುರಂತ: ಬರೋಬ್ಬರಿ 1 ತಿಂಗ್ಳ ಬಳಿಕ ಕಾರ್ಮಿಕನ ಮೃತ ದೇಹ ಪತ್ತೆ – ವಿಡಿಯೋ

    ಗಣಿ ದುರಂತ: ಬರೋಬ್ಬರಿ 1 ತಿಂಗ್ಳ ಬಳಿಕ ಕಾರ್ಮಿಕನ ಮೃತ ದೇಹ ಪತ್ತೆ – ವಿಡಿಯೋ

    ಶಿಲ್ಲಾಂಗ್: ಇಲ್ಲಿನ ಅಕ್ರಮ ಗಣಿಗಾರಿಕೆಯಲ್ಲಿ ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಘಟನೆ ನಡೆದ 1 ತಿಂಗಳ ಬಳಿಕ ಭಾರತೀಯ ನೌಕಾದಳದ ಚಾಲಕರು ಒಬ್ಬ ಕಾರ್ಮಿಕನ ಮೃತ ದೇಹವನ್ನು ಪತ್ತೆ ಮಾಡಿದ್ದಾರೆ.

    ಕಾರ್ಮಿಕರ ಪತ್ತೆಗಾಗಿ ನೀರಿನಲ್ಲಿ ವಸ್ತುಗಳನ್ನು ಗುರುತಿಸಲು ಬಳಸುವ ವಿಶೇಷ ವಿನ್ಯಾಸದ ಯುಡಬ್ಲ್ಯುಆರ್‍ಒವಿ ಯಂತ್ರದ ಸಹಾಯದ ಪಡೆಯಲಾಗಿದೆ. ಈ ವೇಳೆ ಸುಮಾರು 210 ಮೀಟರ್ ಆಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಕಾರ್ಮಿಕನ ಮೃತದೇಹವನ್ನು ಹೊರ ತೆಗೆಯಲಾಗಿದೆ ಎಂದು ಎನ್‍ಡಿಆರ್ ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

    ಏನಿದು ದುರಂತ?
    ಮೇಘಾಲಯದ ಜೈಂತಿಯಾ ಹಿಲ್ಸ್ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದಾಗ ಡಿ.13 ರಂದು ದುರಂತ ಸಂಭವಿಸಿತ್ತು. ಘಟನೆಯಲ್ಲಿ 15 ಕಾರ್ಮಿಕರು ಗಣಿಯಲ್ಲಿ ಸಿಲುಕಿದ್ದರು. ಇವರ ರಕ್ಷಣೆಗಾಗಿ ಭಾರತೀಯ ವಾಯುಪಡೆ ಹಾಗೂ ಎನ್‍ಡಿಆರ್‍ಎಫ್ ಸಿಬ್ಬಂದಿ ಒಟ್ಟಿಗೆ ಕಾರ್ಯಾಚರಣೆ ನಡೆಸುತ್ತಿದೆ.

    ಗಣಿಗಾರಿಕೆ 20 ಮಂದಿ ಕಾರ್ಮಿಕರನ್ನ ಬಳಕೆ ಮಾಡಿಕೊಳ್ಳಲಾಗಿತ್ತು. ಆದರೆ ಗಣಿಗಾರಿಕೆ ನಡೆಯುತ್ತಿದ್ದ ಸಮೀಪದಲ್ಲಿ ನದಿ ಇದ್ದ ಕಾರಣ, ನದಿಯ ನೀರು ಗಣಿಯ ಒಳಗೆ ನುಗ್ಗಿತ್ತು. ಈ ವೇಳೆ 5 ಮಂದಿ ಗಣಿಯಿಂದ ಹೊರ ಬರಲು ಸಾಧ್ಯವಾದರೆ, 15 ಮಂದಿ ಒಳಗೆ ಸಿಲುಕಿದ್ದರು. ಸದ್ಯ ಕಾರ್ಮಿಕನ ಮೃತದೇಹ 200 ಮೀಟರ್ ಅಳದಲ್ಲಿ ಪತ್ತೆಯಾಗಿದೆ. ಉಳಿದ 14 ಮಂದಿಯ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಧರ್ಮದ ಹೆಸರಿನಲ್ಲಿ ವಿಭಜನೆಯಾದ ಭಾರತ ಹಿಂದೂ ರಾಷ್ಟ್ರವಾಗಬೇಕಿತ್ತು : ಹೈಕೋರ್ಟ್ ಜಡ್ಜ್

    ಶಿಲ್ಲಾಂಗ್: ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಪಾಕಿಸ್ತಾನ ತನ್ನನ್ನು ಮುಸ್ಲಿಂ ರಾಷ್ಟ್ರ ಎಂದು ಕರೆದುಕೊಂಡಿದೆ. ಆದರೆ ಭಾರತ ಮಾತ್ರ ಜ್ಯಾತ್ಯಾತೀತ ರಾಷ್ಟ್ರ ಎಂದು ಕರೆದುಕೊಳ್ಳುತ್ತಿದೆ. ಆದರೆ ಭಾರತವನ್ನ ಹಿಂದೂ ರಾಷ್ಟ್ರ ಎಂದು ಕರೆಯಬೇಕೆಂದು ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಸೇನ್ ಅಭಿಪ್ರಾಯ ಪಟ್ಟಿದ್ದಾರೆ.

    ರಾಣಾ ಎಂಬುವವರಿಗೆ ರಾಜ್ಯ ಸರ್ಕಾರ ನಿವಾಸ ಪ್ರಮಾಣ ಪತ್ರ ನಿರಾಕರಿಸಿದ ಪ್ರಕರಣದ ತೀರ್ಪು ನೀಡಿದ ಸಂದರ್ಭದಲ್ಲಿ ನ್ಯಾ. ಸೇನ್ ಅವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಜಗತ್ತಿನ ಅಥವಾ ಭಾರತದಲ್ಲಿ ಪ್ರಳಯ ಸಂಭವಿಸಿದ ಹೊರತು ಯಾರು ಭಾರತವನ್ನು ಮತ್ತೊಂದು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಡಿ. ಇಂದಿಗೂ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಲ್ಲಿ ಉಳಿದಿರುವ ಹಿಂದೂ, ಸಿಖ್, ಜೈನ್, ಬೌದ್ದ, ಕ್ರೈಸ್ತ, ಪಾರ್ಸಿ ಸೇರಿದಂತೆ ವಿವಿಧ ಧರ್ಮದ ಜನರಿಗೆ ಅಲ್ಲಿ ಚಿತ್ರ ಹಿಂಸೆ ನೀಡಲಾಗುತ್ತಿದೆ. ಅಲ್ಲದೇ ವಿಭಜನೆಯ ವೇಳೆ ಪಾಕಿಸ್ತಾನ ತೊರೆದು ಬಂದ ಹಿಂದೂಗಳಿಗೆ ಇಲ್ಲಿ ವಿದೇಶಿಯರಂತೆ ನೋಡಲಾಗುತ್ತಿದೆ. ಇದು ನನ್ನ ಪ್ರಕಾರ ನೈಸರ್ಗಿಕ ನ್ಯಾಯಾಂಗ ತತ್ವಕ್ಕೆ ವಿರುದ್ಧವಾಗಿದೆ ಎಂದಿದ್ದಾರೆ.

    ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದಿಂದ ಬಂದ ಹಿಂದೂಗಳು,  ಸಿಖ್, ಬೌದ್ಧರು, ಪಾರ್ಸಿಗಳು ಯಾವುದೇ ದಾಖಲೆ ನೀಡದೇ ಇದ್ದರೂ ಅವರಿಗೆ ಭಾರತದ ಪೌರತ್ವ ನೀಡಬೇಕು ಎಂದು ನ್ಯಾ.ಸೇನ್ ಅವರು ಪ್ರಧಾನಿ ಮೋದಿಗೆ ಆದೇಶ ರೂಪದ ಮನವಿಯನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ಇದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ಆರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

    ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು. ಭಾರತದ ಕಾನೂನು ಮತ್ತು ಸಂವಿಧಾನವನ್ನ ಗೌರವಿಸದ ಯಾರೇ ಆಗಲಿ ಅವರನ್ನು ಭಾರತದ ನಾಗರಿಕ ಎಂದು ಗುರುತಿಸಬಾರದು ಎಂದು ತಮ್ಮ 37 ಪುಟಗಳ ಆದೇಶಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿಶುವಿನ ಕಾಲು ಮುರಿದು, ಕೊಲೆ ಮಾಡಿದ್ದ ಆರೋಪಿ ಬಂಧನ

    ಶಿಶುವಿನ ಕಾಲು ಮುರಿದು, ಕೊಲೆ ಮಾಡಿದ್ದ ಆರೋಪಿ ಬಂಧನ

    ಶಿಲ್ಲಾಂಗ್: ವಿಚ್ಛೇದಿತ ಪತ್ನಿಯ ಮೂರು ವಾರದ ಶಿಶುವನ್ನು ಕೊಲೆ ಮಾಡುವಂತೆ ಪತ್ನಿಯೇ ವ್ಯಕ್ತಿಯೊಬ್ಬನಿಗೆ ಸೂಪಾರಿ ನೀಡಿದ್ದ. ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿಯನ್ನು ಸದ್ಯ ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.

    ಶಿಲ್ಲಾಂಗ್ ನಿವಾಸಿಯಾದ ಮಹಿಳೆಯ ಮನೆಗೆ ಮುಸುಕುಧಾರಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ನುಗ್ಗಿದ್ದಾನೆ. ನಂತರ ಮಹಿಳೆ ಇರುವ ಕೊಣೆಗೆ ಬಂದು ಮಗುವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ಅವರ ಮೇಲೆ ಹಲ್ಲೆ ನಡೆಸಿ, ಶಿಶುವಿನ ಕಾಲಿಗೆ ಹೊಡೆದು ಕಾಲು ಮುರಿದು, ಬಕೆಟ್ ನಲ್ಲಿ ಎಸೆದು ಪರಾರಿಯಾಗಿದ್ದನು.

    ಹೆರಿಗೆಯಿಂದಾಗಿ ಮಗಳು ನಿಶಕ್ತಳಾಗಿದ್ದಳು. ಹೀಗಾಗಿ ಮಗುವನ್ನು ರಕ್ಷಿಸಿಕೊಳ್ಳಲು ಆಕೆಗೆ ಸಾಧ್ಯವಾಗಲಿಲ್ಲ. ತಡರಾತ್ರಿ ಘಟನೆ ನಡೆದಿದ್ದು, ಆಕೆ ಚೀರಿದ ಶಬ್ಧ ಕೇಳಿ ಮೇಲೆ ಬಂದು ನೋಡಿದೆ. ಈ ವೇಳೆ ಅವಳು ರಕ್ತಸ್ರಾವದಿಂದ ಕೆಳಗೆ ಬಿದ್ದಿದ್ದಳು” ಎಂದು ಮಹಿಳೆಯ ತಾಯಿ ತಿಳಿಸಿದ್ದಾರೆ.

    ಮಗುವನ್ನು ಕೊಲೆ ಮಾಡಿದ್ದ ಆರೋಪಿಯ ವಿರುದ್ಧ ಈ ಹಿಂದೆಯೂ ಪೊಲೀಸ್ ಠಾಣೆಯಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಕಳೆದ ವರ್ಷವಷ್ಟೇ ಮಗು ಅಪಹರಣಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಕೆಲವು ದಿನಗಳ ಹಿಂದಷ್ಟೇ ಬೇಲ್ ಪಡೆದು ಆರೋಪಿ ಹೊರಬಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಕಡಿಮೆ ಸ್ಥಾನ ಸಿಕ್ಕಿದ್ರೂ ಮೇಘಾಲಯದಲ್ಲೂ ಅರಳಲಿದೆ ಕಮಲ ಸರ್ಕಾರ!

    ಕಡಿಮೆ ಸ್ಥಾನ ಸಿಕ್ಕಿದ್ರೂ ಮೇಘಾಲಯದಲ್ಲೂ ಅರಳಲಿದೆ ಕಮಲ ಸರ್ಕಾರ!

    ಶಿಲ್ಲಾಂಗ್: ಗೋವಾದಲ್ಲಿ ಕಡಿಮೆ ಸ್ಥಾನ ಸಿಕ್ಕಿದ್ದರೂ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈಗ ಅದೇ ತಂತ್ರವನ್ನು ಬಳಸಿ ಮಿತ್ರ ಪಕ್ಷಗಳನ್ನು ಸೆಳೆದು ಮೇಘಾಲಯದಲ್ಲೂ ಅಧಿಕಾರದ ಗದ್ದುಗೆ ಏರಲು ಮುಂದಾಗಿದೆ.

    ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ನಡೆಸುತ್ತೇವೆ. ಬಹುಮತ ಸಾಬೀತು ಪಡಿಸಲು ಅನುಮತಿ ನೀಡಿ ಎಂದು ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‍ಪಿಪಿ) ಅಧ್ಯಕ್ಷ ಕೊನ್ರಾಡ್ ಸಂಗ್ಮಾ ರಾಜ್ಯಪಾಲರಲ್ಲಿ ಅನುಮತಿ ಕೇಳಿದ್ದಾರೆ.

    ಮೇಘಾಲಯದ ಒಟ್ಟು 59 ಸ್ಥಾನಗಳಲ್ಲಿ ಕಾಂಗ್ರೆಸ್ 21, ಎನ್‍ಪಿಪಿ 17, ಬಿಜೆಪಿ 2 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಇತರ ಪಕ್ಷಗಳ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಸರಳ ಬಹುಮತಕ್ಕೆ 30 ಸ್ಥಾನಗಳ ಅಗತ್ಯವಿದ್ದು, ಯುನೈಟೆಡ್ ಡೆಮಾಕ್ರೆಟಿಕ್  ಪಾರ್ಟಿಯ 6 ಮಂದಿ ಮತ್ತು ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿಯ 2 ಮಂದಿ ಸರ್ಕಾರಕ್ಕೆ ಬೆಂಬಲ ನೀಡಲಿದ್ದಾರೆ. ಮಾರ್ಚ್ 6ರ ಬೆಳಗ್ಗೆ 10 ಗಂಟೆಗೆ ಕೊನ್ರಾಡ್ ಸಂಗ್ಮಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

    ಫಲಿತಾಂಶ ಪ್ರಕಟವಾದ ಬಳಿಕ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಏರಲಿದ್ದು ನಾವು ಬೆಂಬಲ ನೀಡುತ್ತೇವೆ ಎಂದು ತಿಳಿಸಿದ್ದರು.

    ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಕೇಂದ್ರದ ಅನುದಾನದ ಪಾಲು ಹೆಚ್ಚು. ಹೀಗಾಗಿ ಮೇಘಾಲಯದಲ್ಲಿ ಕಾಂಗ್ರೆಸ್ಸಿಗೆ ಉಳಿದ ಪಕ್ಷಗಳು ಬೆಂಬಲ ನೀಡುವುದು ಕಷ್ಟ ಎನ್ನುವ ವಿಶ್ಲೇಷಣೆ ಶನಿವಾರವೇ ಪ್ರಕಟವಾಗಿತ್ತು. ಮಣಿಪುರ ಹಾಗೂ ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದಾಗ, ಅಲ್ಲಿನ ಸಣ್ಣಪುಟ್ಟ ಪಕ್ಷಗಳು ಹಾಗೂ ಸ್ವತಂತ್ರ ಅಭ್ಯರ್ಥಿಗಳ ನೆರವಿನಿಂದ ಸರ್ಕಾರ ರಚಿಸುವುಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.

    ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಮೈತ್ರಿ ಸರ್ಕಾರ ರಚನೆ ಕುರಿತು ಮೇಘಾಲಯದ ಇತರ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಮೇಘಾಲಯಕ್ಕೆ ತೆರಳುವಂತೆ ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಮೇಘಾಲಯದಲ್ಲಿ ಅತಿ ಹೆಚ್ಚು ಸ್ಥಾನ ಸಿಕ್ಕಿದ ಕೂಡಲೇ ಕಾಂಗ್ರೆಸ್ ಹಿರಿಯ ನಾಯಕರಾದ ಅಹ್ಮದ್ ಪಟೇಲ್ ಹಾಗೂ ಕಮಲ್ ನಾಥ್ ಅವರೂ ಮೇಘಾಲಯಕ್ಕೆ ಆಗಮಿಸಿದ್ದರು. ಅತಂತ್ರ ಸ್ಥಿತಿಯಲ್ಲೂ ತನ್ನ ತಂತ್ರಗಾರಿಕೆ ಬಳಸಿ ಮಿತ್ರ ಪಕ್ಷಗಳನ್ನು ತನ್ನತ್ತ ಸೆಳೆಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿಯಾಗಿದೆ.

     

  • ಸಾಮಾನ್ಯ ಗೆಲುವಲ್ಲ, ಕಾರ್ಯಕರ್ತರಿಂದ ಶೂನ್ಯದಿಂದ ಶಿಖರದವರೆಗೆ ಬೆಳೆದಿದ್ದೇವೆ: ಮೋದಿ

    ಸಾಮಾನ್ಯ ಗೆಲುವಲ್ಲ, ಕಾರ್ಯಕರ್ತರಿಂದ ಶೂನ್ಯದಿಂದ ಶಿಖರದವರೆಗೆ ಬೆಳೆದಿದ್ದೇವೆ: ಮೋದಿ

    ನವದೆಹಲಿ: ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ಸಂತಸವನ್ನು ಹಂಚಿಕೊಡಿದ್ದಾರೆ.

    ಬಿಜೆಪಿಯ ಈ ಭರ್ಜರಿ ಗೆಲುವಿಗೆ ಸಾಥ್ ನೀಡಿದ ಮೇಘಾಲಯಾ, ನಾಗಲ್ಯಾಂಡ್ ಮತ್ತು ತ್ರಿಪುರಾ ರಾಜ್ಯಗಳ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಜನರಿಗೆ ನೀಡರುವ ಭರವಸೆಗಳನ್ನ ನಮ್ಮ ಸರ್ಕಾರ ಈಡೇರಿಸಲು ಬದ್ಧವಾಗಿದೆ ಎಂದು ಹೇಳಿದ್ದಾರೆ.

    2018ರ ತ್ರಿಪುರಾ ಚುನಾವಣೆಯು ದೇಶದ ಇತಿಹಾಸದಲ್ಲೇ ಮರೆಯಲಾಗದ ದಿನವಾಗಿದೆ. ತ್ರಿಪುರದ ನನ್ನ ಸಹೋದರ, ಸಹೋದರಿಯರೇ ನೀವು ಮಾಡಿದ ಸಾಧನೆ ಅಸಾಮಾನ್ಯವಾಗಿದೆ. ನೀವು ನೀಡಿರುವ ಬೆಂಬಲಕ್ಕೆ ಧನ್ಯವಾದ ಹೇಳಲು ನನ್ನ ಬಳಿ ಪದಗಳೇ ಸಿಗುತ್ತಿಲ್ಲ. ತ್ರಿಪುರಾವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

    ತ್ರಿಪುರ ಚುನಾವಣೆಯ ಗೆಲುವು ಯಾವ ಸಾಮಾನ್ಯ ಚುನಾವಣೆಯ ಗೆಲುವಲ್ಲ. ಈ ಪಯಣವು ಶೂನ್ಯದಿಂದ ಶಿಖರದ ವರೆಗೆ ಬೆಳೆದಿರುವ ಗೆಲುವಾಗಿದೆ. ಇದರಿಂದ ನಮ್ಮ ಸರ್ಕಾರದ ಅಭಿವೃದ್ಧಿ ಮತ್ತು ಬಲವನ್ನ ಹೆಚ್ಚಿಸಿದೆ. ಇಷ್ಟು ವರ್ಷಗಳ ಕಾಲ ಬಿಜೆಪಿಗೆ ದುಡಿದ ಪ್ರತಿ ಕಾರ್ಯಕರ್ತನಿಗೆ ನಾನು ತಲೆ ಬಾಗಿ ನಮಿಸುತ್ತೇನೆ ಎಂದು ಹೇಳುವ ಮೂಲಕ ವಂದನೆ ಸಲ್ಲಿಸಿದರು.

    ಅನಾಗರಿಕ ಮತ್ತು ಬೆದರಿಕೆಯ ವಿರುದ್ಧ ಪ್ರಜಾಪ್ರಭುತ್ವತ್ವದ ಗೆಲುವು ಇದಾಗಿದೆ. ಇಂದು ಶಾಂತಿ ಮತ್ತು ಅಹಿಂಸೆ ಎಂಬ ಭಯದಿಂದ ಮುಕ್ತಿ ಸಾಧಿಸಿದೆ. ತ್ರಿಪುರದ ರಾಜ್ಯಕ್ಕೆ ಅರ್ಹವಾದ ಉತ್ತಮ ಸರ್ಕಾರವನ್ನ ನೀಡುತ್ತೀವೆ ಎಂದು ಹೇಳಿದರು.

    ಭಾರತದ ಜನ ಎನ್‍ಡಿಎ ಸರ್ಕಾರದ ಧನಾತ್ಮಕ ಮತ್ತು ಅಭಿವೃದ್ಧಿ ಆಧಾರಿತ ಕಾರ್ಯಸೂಚಿಯಲ್ಲಿ ನಂಬಿಕೆ ಇಟ್ಟಿದ್ದಾರೆ. ಜನರು ಋಣಾತ್ಮಕ, ವಿಘಟಿತ ರಾಜಕೀಯಕ್ಕೆ ಬೆಲೆ, ಸಮಯ ನೀಡುವುದಿಲ್ಲ ಎನ್ನುವುದು ಈ ಫಲಿತಾಂಶದಿಂದ ತಿಳಿಯುತ್ತದೆ ಎಂದು ಬರೆದುಕೊಂಡಿದ್ದಾರೆ.

  • 7 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ

    7 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ತಂದೆಯಿಂದಲೇ ಅತ್ಯಾಚಾರ

    ಶಿಲ್ಲಾಂಗ್: ಅವಳಿ-ಜವಳಿ ಹೆಣ್ಣು ಮಕ್ಕಳ ಮೇಲೆ ಮಲ ತಂದೆಯೇ ಅತ್ಯಾಚಾರ ಮಾಡಿರುವ ಘಟನೆ ಪೂರ್ವ ಗರೊ ಹಿಲ್ಸ್ ಜಿಲ್ಲೆಯ ಚೇರಾನ್ ಸೊಂಗಿಟಲ್ ಗ್ರಾಮದಲ್ಲಿ ನಡೆದಿದೆ.

    7 ವರ್ಷದ ಅವಳಿ ಮಕ್ಕಳ ಮೇಲೆ ಮಲ ತಂದೆಯೇ ಕೆಲವು ತಿಂಗಳಿನಿಂದ ಅತ್ಯಾಚಾರವೆಸಗಿರುವುದಾಗಿ ಪೊಲೀಸರು ಹೇಳಿದ್ದಾರೆ. ಸಂತ್ರಸ್ತ ಹೆಣ್ಣುಮಕ್ಕಳ ಕುಟುಂಬದವರಿಂದ ಈ ಬಗ್ಗೆ ದೂರು ದಾಖಲಾಗಿದೆ. ಅವಳಿ ಹೆಣ್ಣು ಮಕ್ಕಳನನ್ನ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ರಿಂಗ್‍ರಂಗ್ ಜಿಲ್ಲೆಯ ಪೊಲೀಸ್ ಅಧಿಕಾರಿ ಟಿಜಿ ಮೋಮಿನ್ ಹೇಳಿದ್ದಾರೆ.

    ಆರೋಪಿ ತಂದೆ ಸದ್ಯ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.