Tag: Meghalaya

  • ಅಸ್ಸಾಂ, ಮೇಘಾಲಯದಲ್ಲಿ ಪ್ರವಾಹ- 31 ಮಂದಿ ಸಾವು

    ಅಸ್ಸಾಂ, ಮೇಘಾಲಯದಲ್ಲಿ ಪ್ರವಾಹ- 31 ಮಂದಿ ಸಾವು

    ಡಿಸ್ಪುರ್: ಅಸ್ಸಾಂ ಮತ್ತು ಮೇಘಾಲಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಹದಗಟ್ಟಿದ್ದು, 31 ಜನರು ಮೃತಪಟ್ಟಿದ್ದಾರೆ.

    ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ 2 ರಾಜ್ಯಗಳಲ್ಲೂ ಅನೇಕ ಕಡೆ ಭೂಕುಸಿತ ಸಂಭವಿಸಿದೆ. ಅಷ್ಟೇ ಅಲ್ಲದೇ ಪ್ರಮುಖ ನದಿಗಳಲ್ಲಿ ನೀರಿನ ಮಟ್ಟ ಏರಿಕೆ ಆಗಿದೆ.

    ಅಸ್ಸಾಂನ 28 ಜಿಲ್ಲೆಗಳಲ್ಲಿ ಕನಿಷ್ಠ 19 ಲಕ್ಷ ಜನರು ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿದ್ದಾರೆ. ಅಷ್ಟೇ ಅಲ್ಲದೇ ಹೊಸದಾಗಿ ರೂಪುಗೊಂಡ ಬಜಾಲಿ ಜಿಲ್ಲೆ ಹೆಚ್ಚು ಹಾನಿಗೊಳಗಾಗಿದೆ. ಬ್ರಹ್ಮಪುತ್ರ ಮತ್ತು ಗೌರಂಗಾ ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಮಟ್ಟಕ್ಕೂ ಮೀರಿ ಹರಿಯುತ್ತಿದೆ.

    ಕಳೆದ 3 ದಿನಗಳಿಂದ ಕೇವಲ ಅಸ್ಸಾಂ ರಾಜ್ಯದಲ್ಲೇ 17 ಜನರು ಮೃತಪಟ್ಟಿದ್ದು, 19 ಲಕ್ಷಕ್ಕೂ ಅಧಿಕ ಜನರು ಪ್ರವಾಹದಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ

    ಮಳೆಯಿಂದಾಗಿ ಜಲಾವೃತಗೊಂಡಿರುವುದರಿಂದ ರಾಜಧಾನಿ ಗುವಾಹಟಿಯ ಬಹುತೇಕ ಭಾಗಗಳು ಸ್ಥಗಿತಗೊಂಡಿವೆ. ಗುವಾಹಟಿ ನಗರದಲ್ಲಿ ಹಲವೆಡೆ ಭೂಕುಸಿತಗಳು ವರದಿಯಾಗಿದ್ದು, ನೂನ್ಮತಿ ಪ್ರದೇಶದ ಅಜಂತನಗರದಲ್ಲಿ ಮೂವರು ಗಾಯಗೊಂಡಿದ್ದಾರೆ.   ಇದನ್ನೂ ಓದಿ: ಉಗ್ರರಿಂದ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಹತ್ಯೆ

    Live Tv

  • ಭಾರೀ ಮಳೆಯಿಂದ ಭೂಕುಸಿತ – ಎರಡೂವರೆ ವರ್ಷದ ಮಗು ಸೇರಿ ನಾಲ್ವರು ಸಾವು

    ಭಾರೀ ಮಳೆಯಿಂದ ಭೂಕುಸಿತ – ಎರಡೂವರೆ ವರ್ಷದ ಮಗು ಸೇರಿ ನಾಲ್ವರು ಸಾವು

    ಗುವಾಹಟಿ: ಮೇಘಾಲಯದ ಗಾರೋ ಬೆಟ್ಟದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಒಂದೇ ಕುಟುಂಬದ ಮೂವರು ಹಾಗೂ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

    ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯಾದ್ಯಂತ ಅನೇಕ ಅನಾಹುತಗಳನ್ನು ಮಾಡುತ್ತಿದೆ. ಇದರ ಬೆನ್ನಲ್ಲೇ ಪಶ್ಚಿಮ ಗರೋ ಬೆಟ್ಟದ ಗ್ಯಾಂಬೆಗ್ರೆ ಬ್ಲಾಕ್ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರಿರುವ ಕುಟುಂಬದಲ್ಲಿ ಮೂವರು ಸದಸ್ಯರು ಮೃತಪಟ್ಟಿದ್ದಾರೆ. ಉಳಿದ ಇಬ್ಬರು ಸದಸ್ಯರಾದ ತಂದೆ ಮತ್ತು ಮಗ ಬದುಕುಳಿದಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿ ಇರುವ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

    ಮತ್ತೊಂದು ಘಟನೆಯು ಸೌತ್ ವೆಸ್ಟ್ ಗಾರೋ ಬೆಟ್ಟದ ಬೆಟಾಸಿಂಗ್ ಪ್ರದೇಶದಲ್ಲಿ ನಡೆದಿದ್ದು, ಎರಡೂವರೆ ವರ್ಷದ ಬಾಲಕ ಮೃತಪಟ್ಟಿದ್ದಾನೆ. ಗರೋ ಬೆಟ್ಟದಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದ ಪರಿಣಾಮ ಈ ಘಟನೆ ನಡೆದಿದೆ. ಇದನ್ನೂ ಓದಿ: ರಾಜ್ಯಸಭೆ ಫೈಟ್‍ನಲ್ಲಿ ಟ್ವಿಸ್ಟ್ – ಕಾಂಗ್ರೆಸ್, ಜೆಡಿಎಸ್ ಮಧ್ಯೆ ‘ಆತ್ಮಸಾಕ್ಷಿ’ ಫೈಟ್

    ಅಸ್ಸಾಂನಲ್ಲಿ ಜೂನ್ 12ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಎಚ್ಚರಿಕೆ ನೀಡಿದ್ದು, ಕಳೆದ ತಿಂಗಳು, ಪ್ರವಾಹ ಮತ್ತು ಭೂಕುಸಿತದಿಂದ ಅನೇಕ ಹಾನಿಗಳಾಗಿದ್ದವು. ಅಷ್ಟೇ ಅಲ್ಲದೇ 3 ಈಶಾನ್ಯ ರಾಜ್ಯಗಳಲ್ಲಿ 25 ಜನರು ಜೀವಂತ ಸಮಾಧಿ ಆಗಿದ್ದರು. ಇದನ್ನೂ ಓದಿ: ತಪ್ಪದ ಇಡಿ ಸಂಕಷ್ಟ – ಸತೇಂದ್ರ ಜೈನ್‍ಗೆ ಜೂನ್ 13ವರೆಗೂ ಕಸ್ಟಡಿ ವಿಸ್ತರಣೆ

  • ವಿಧಾನಸಭೆಯ ಮೇಲೆ ಹೊಸದಾಗಿ ನಿರ್ಮಿಸಿದ್ದ 70 ಟನ್ ತೂಕದ ಉಕ್ಕಿನ ಗುಮ್ಮಟ ಕುಸಿತ

    ವಿಧಾನಸಭೆಯ ಮೇಲೆ ಹೊಸದಾಗಿ ನಿರ್ಮಿಸಿದ್ದ 70 ಟನ್ ತೂಕದ ಉಕ್ಕಿನ ಗುಮ್ಮಟ ಕುಸಿತ

    ಶಿಲ್ಲಾಂಗ್: ಹೊಸದಾಗಿ ನಿರ್ಮಿಸಲಾಗಿದ್ದ ಮೇಘಾಲಯ ವಿಧಾನಸಭೆಯ ಕಟ್ಟಡದ ಒಂದು ಭಾಗ ಭಾನುವಾರ ಕುಸಿದಿದೆ. ಸದ್ಯ ಯಾವುದೇ ಪ್ರಾಣಾಪಾಯಗಳಾಗಿಲ್ಲ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

    ಸುಮಾರು 177.7 ಕೋಟಿ ರೂ. ವೆಚ್ಚದಲ್ಲಿ ಕಟ್ಟಲಾದ ಸುಮಾರು 70 ಟನ್ ತೂಕದ ಗುಮ್ಮಟ ಮಧ್ಯರಾತ್ರಿ ಸುಮಾರು 12:20 ರ ವೇಳೆಗೆ ಕುಸಿದಿದೆ.

    ಮೇಘಾಲಯದ ವಿಧಾನಸಭೆಯ ನೂತನ ಕಟ್ಟಡವನ್ನು ಉತ್ತರ ಪ್ರದೇಶ ಮೂಲದ ಕಂಪನಿ ನಿರ್ಮಿಸಿದ್ದು, ಕುಸಿತ ವಿನ್ಯಾಸದ ದೋಷದಿಂದ ಸಂಭವಿಸಿರಬಹುದು ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅಮೆರಿಕದ ಒತ್ತಡಕ್ಕೆ ಭಾರತ ಮಣಿಯುವುದಿಲ್ಲ- ಇಂಧನ ಬೆಲೆ ಕಡಿತಕ್ಕೆ ಇಮ್ರಾನ್ ಖಾನ್ ಪ್ರಶಂಸೆ

    ಮುಂಜಾನೆ ಸ್ಥಳಕ್ಕೆ ಧಾವಿಸಿದ ಎಂಜಿನಿಯರ್‌ಗಳು ಹೊಸ ಗುಮ್ಮಟವನ್ನು ನಿರ್ಮಿಸಲು ಕನಿಷ್ಟ 8 ತಿಂಗಳು ಬೇಕು ಎಂದು ತಿಳಿಸಿದ್ದಾರೆ. ಇದೀಗ ಕುಸಿತವಾಗಿರುವ ಅವಶೇಷಗಳನ್ನು ತೆರವುಗೊಳಿಸಲು ಇನ್ನೂ 2 ವಾರ ಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕತೆಯಿಂದ ಮಾತ್ರ ಯುದ್ಧ ನಿಲ್ಲಿಸಲು ಸಾಧ್ಯ: ಝೆಲೆನ್ಸ್ಕಿ

    ಹೊಸ ಕಟ್ಟಡದ ಕಾಮಗಾರಿಯನ್ನು 2019ರ ಜೂನ್‌ನಲ್ಲಿ ಪ್ರಾರಂಭಿಸಲಾಗಿತ್ತು. ಇದೇ ವರ್ಷ ಆಗಸ್ಟ್ ತಿಂಗಳ ಒಳಗಾಗಿ ಕಾಮಗಾರಿ ಕೆಲಸ ಪೂರ್ಣಗೊಳ್ಳಬೇಕಿತ್ತು.

  • ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಅಸ್ಸಾಂನಲ್ಲಿ ಭೀಕರ ಪ್ರವಾಹ – 14ಕ್ಕೇರಿದ ಸಾವಿನ ಸಂಖ್ಯೆ

    ಗುವಾಹಟಿ: ಭೀಕರ ಪ್ರವಾಹ ಮತ್ತು ಭೂ ಕುಸಿತದಿಂದಾಗಿ ಇದುವರೆಗೆ ಅಸ್ಸಾಂನಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದು, ಲಕ್ಷಾಂತರ ಜನರ ಬದುಕು ಅಸ್ತವ್ಯಸ್ತಗೊಂಡಿದೆ.

    ಭಾರೀ ಮಳೆಯಿಂದಾಗಿ ಅಸ್ಸಾಂನಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಾಜ್ಯದ 29 ಜಿಲ್ಲೆಗಳು ಮಳೆಗಾಹುತಿಯಾಗಿವೆ. ಭೀಕರ ಪ್ರವಾಹದಿಂದಾಗಿ ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, 7 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಇದುವರೆಗೆ 14 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಬಿಗಡಾಯಿಸಿತೇ ಬಿಡದಿ ನಿತ್ಯಾನಂದನ ಆರೋಗ್ಯ..?

    ಈ ಕುರಿತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರವು ಅಸ್ಸಾಂ ಮತ್ತು ಮೇಘಾಲಯದಲ್ಲಿ ಮೇ 21 ರವರೆಗೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ನೈರುತ್ಯ ಮಾರುತದಿಂದಾಗಿ ಬಂಗಾಳಕೊಲ್ಲಿಯಿಂದ ಒತ್ತಡ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಈಶಾನ್ಯ ಭಾಗದಲ್ಲಿ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ.

  • ಮೇಘಾಲಯದಲ್ಲಿ ಚಂಡಮಾರುತ – 1,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಮೇಘಾಲಯದಲ್ಲಿ ಚಂಡಮಾರುತ – 1,000ಕ್ಕೂ ಹೆಚ್ಚು ಮನೆಗಳಿಗೆ ಹಾನಿ

    ಶಿಲ್ಲಾಂಗ್: ಮೇಘಾಲಯದ ರಿ-ಭೋಯ್ ಜಿಲ್ಲೆಯಲ್ಲಿ ಗುರುವಾರ ಚಂಡಮಾರುತವು ಭಾರೀ ಹಾನಿಯನ್ನುಂಟು ಮಾಡಿದೆ. ಚಂಡಮಾರುತದ ಪರಿಣಾಮ ಸುಮಾರು 1000ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದೆ.

    ಜಿಲ್ಲೆಯ 47 ಗ್ರಾಮಗಳು ಚಂಡಮಾರುತದಿಂದ ಹಾನಿಗೊಳಗಾಗಿದೆ. ಅನೇಕ ಮನೆಗಳಿಗೆ ಹಾನಿ ಉಂಟಾಗಿದೆ. ಜೊತೆಗೆ ಬಿಡಿಒ ಕಚೇರಿ, ಶಾಲೆ, ಲೋಕೋಪಯೋಗಿ ಇಲಾಖೆ ಕಚೇರಿ, ಪಶುವೈದ್ಯಕೀಯ ಕಚೇರಿಗಳು ಸೇರಿದಂತೆ ಸರ್ಕಾರಿ ಆಸ್ತಿ, ಪಾಸ್ತಿಗಳು ಚಂಡಮಾರುತದಿಂದ ನಾಶಗೊಂಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಎಸಿ ಸ್ಫೋಟ – ಓರ್ವ ಸಾವು, ಐವರಿಗೆ ಗಾಯ

    ಅದೃಷ್ಟವಶಾತ್ ಚಂಡಮಾರುತದಿಂದ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ. ಇದೀಗ ಹಾನಿಗೊಳಗಾದ ಗ್ರಾಮಗಳಲ್ಲಿ ಜನರ ತೆರವು ಕಾರ್ಯ ಮತ್ತು ಜನರನ್ನು ಬೇರೆಡೆ ವರ್ಗಾಯಿಸುವ ಕಾರ್ಯಗಳನ್ನು ನಡೆಸಲಾಗುತ್ತಿಗುತ್ತಿದೆ. ಇನ್ನೂ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಆಯಾ ಬಿಡಿಒಗಳೊಂದಿಗೆ ತುರ್ತು ಸಭೆ ನಡೆಸಲಗುತ್ತಿದೆ. ಪರಿಸ್ಥಿತಿಯ ನಿಭಾಯಿಸ ಅವಲೋಕನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ರಷ್ಯಾದಿಂದ ಬಂತು ಎಸ್ 400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ

  • 50 ವರ್ಷಗಳ ಗಡಿ ವಿವಾದ ಅಂತ್ಯ- ಅಸ್ಸಾಂ, ಮೇಘಾಲಯ ಮಹತ್ವದ ಒಪ್ಪಂದಕ್ಕೆ ಸಹಿ

    50 ವರ್ಷಗಳ ಗಡಿ ವಿವಾದ ಅಂತ್ಯ- ಅಸ್ಸಾಂ, ಮೇಘಾಲಯ ಮಹತ್ವದ ಒಪ್ಪಂದಕ್ಕೆ ಸಹಿ

    ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ಸರ್ಕಾರಗಳು ತಮ್ಮ 50 ವರ್ಷಗಳ ಗಡಿ ವಿವಾದಕ್ಕೆ ಅಂತ್ಯವಾಡಲು ಮಂಗಳವಾರ ರಾಷ್ಟ್ರೀಯ ರಾಜಧಾನಿಯಲ್ಲಿ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು.

    ಗೃಹ ಸಚಿವಾಲಯದ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಮೇಘಾಲಯದ ಸಿಎಂ ಸಹವರ್ತಿ ಕಾನ್ರಾಡ್ ಕೆ ಸಂಗ್ಮಾ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ವೇಳೆ ಎರಡೂ ರಾಜ್ಯಗಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ಪ್ರಸ್ತಾವಿತ ಒಪ್ಪಂದದ ಶಿಫಾರಸುಗಳ ಪ್ರಕಾರ, 36.79 ಚದರ ಕಿ.ಮೀ. ಭೂಪ್ರದೇಶದ ಪೈಕಿ ಅಸ್ಸಾಂ 18.51 ಚದರ ಕಿ.ಮೀ. ಭೂಪ್ರದೇಶ ಪಡೆಯಲಿದೆ. ಉಳಿದ 18.28 ಚದರ ಕಿ.ಮೀ. ಭೂಪ್ರದೇಶವನ್ನು ಮೇಘಾಲಯಕ್ಕೆ ನೀಡಿದೆ.

    1972ರಲ್ಲಿ ಅಸ್ಸಾಂನಿಂದ ಮೇಘಾಲಯ ಬೇರ್ಪಟ್ಟ ನಂತರ ಈ ಗಡಿ ವಿವಾದ ಹುಟ್ಟುಕೊಂಡಿತು. ಹೊಸ ರಾಜ್ಯಗಳ ರಚನೆ ಸಂದರ್ಭದಲ್ಲಿನ ಪ್ರಾಥಮಿಕ ಒಪ್ಪಂದದ ವೇಳೆಯಲ್ಲಾದ ಗಡಿ ಗುರುತಿನ ವ್ಯತ್ಯಾಸದ ನಂತರ ವಿವಾದ ಉಲ್ಬಣಗೊಳ್ಳಲು ಕಾರಣವಾಗಿತ್ತು.  ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

  • ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ

    ರೈತರ ಬೇಡಿಕೆ ಈಡೇರಿಸದಿದ್ದರೆ ಆಗುತ್ತೆ ಹಿಂಸಾಚಾರ: ಮೇಘಾಲಯ ರಾಜ್ಯಪಾಲ ಎಚ್ಚರಿಕೆ

    ಜೋಧಪುರ: ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಿಂಸಾಚಾರದ ಮೂಲಕ ತಮಗೆ ಬೇಕಾದ್ದನ್ನು ಪಡೆಯಲು ಪ್ರಯತ್ನಿಸುತ್ತಾರೆ ಎಂದು ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಎಚ್ಚರಿಕೆ ನೀಡಿದ್ದಾರೆ.

    ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರೊಂದಿಗೆ ಜಗಳವಾಡಬೇಡಿ, ಅವರು ಅಪಾಯಕಾರಿ ಜನರು. ಇದು ದೆಹಲಿಗೆ ನನ್ನ ಸಲಹೆಯಾಗಿದೆ. ರೈತರು ತಮಗೆ ಬೇಕಾದ್ದನ್ನು ತೆಗೆದುಕೊಳ್ಳುತ್ತಾರೆ. ಅದು ಮಾತುಕತೆಯ ಮೂಲಕ ಸಾಧ್ಯವಾಗದಿದ್ದರೆ, ಅದನ್ನು ಹೋರಾಟದ ಮೂಲಕ ತೆಗೆದುಕೊಳ್ಳುತ್ತಾರೆ. ಅದೂ ಸಾಧ್ಯವಾಗದಿದ್ದರೇ ಹಿಂಸಾಚಾರದ ಮೂಲಕ ಪಡೆಕೊಳ್ಳಬಹುದು ಎಂದು ಹೇಳಿದ್ದಾರೆ.

    ರೈತರಿಗೆ ಮೂಗುದಾರ ಹಾಕಲಾಗುವುದಿಲ್ಲ. ಅವರ ಬೇಡಿಕೆಗಳು ಹೇಗೆ ಈಡೇರಿಸಿಕೊಳ್ಳಬೇಕು ಎಂಬುದು ಅವರಿಗೆ ತಿಳಿದಿದೆ. ರೈತರ ವಿರೋಧ ಕಟ್ಟಿಕೊಳ್ಳಬೇಡಿ. ಸಿಖ್ಖರು ಮತ್ತು ಜಾಟ್‌ಗಳು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯವರು ಹಗಲುಗನಸು ಕಾಣುವುದನ್ನು ಬಿಡಬೇಕು: ಮೋದಿಗೆ ಮಮತಾ ಬ್ಯಾನರ್ಜಿ ಟಾಂಗ್

    ರೈತರ ಬಗ್ಗೆ ಮಾತಾನಾಡಿರುವುದರಿಂದ ದೆಹಲಿಯಿಂದ ಯಾವಾಗ ಬೇಕಾದರೂ ಕರೆ ಬರುವ ಅವಕಾಶವಿದೆ. ರೈತರ ಸಮಸ್ಯೆಯನ್ನು ಎತ್ತುವುದಕ್ಕೆ ನನ್ನ ಹುದ್ದೆಯನ್ನು ಕಳೆದುಕೊಳ್ಳುವ ಭಯವಿಲ್ಲ. ಕೇಂದ್ರದೊಂದಿಗೆ ನನಗೆ ಯಾವುದೇ ದ್ವೇಷವಿಲ್ಲ. ಆದರೆ ರೈತರಿಗಾಗಿ ನನ್ನ ಹುದ್ದೆಯನ್ನು ಬಿಡುತ್ತೇನೆ ಎಂದು ರೈತರ ಆಂದೋಲನದ ನಿರ್ವಹಣೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಸೆಲೆಬ್ರಿಟಿ ಆದ್ರೂ ಕಡಲೆಕಾಯಿ ಮಾರುವುದನ್ನು ಬಿಡುವುದಿಲ್ಲ – ಕಚ್ಚಾ ಬಾದಾಮ್ ಸಿಂಗರ್

  • ಶಿಲ್ಲಾಂಗ್‍ನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ

    ಶಿಲ್ಲಾಂಗ್‍ನ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟ

    ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್ ನಗರದ ಜನನಿಬಿಡ ಪೊಲೀಸ್ ಬಜಾರ್ ಪ್ರದೇಶದಲ್ಲಿ ಭಾನುವಾರ ಸಂಜೆ ಸ್ಫೋಟ ಸಂಭವಿಸಿದೆ.

    ಸ್ಫೋಟದಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಫೋಟ ಸಂಭವಿಸಿದ ಪ್ರದೇಶದಲ್ಲಿದ್ದ ಫೋನ್ ಅಂಗಡಿ ಹಾಗೂ ವೈನ್ ಅಂಗಡಿಯ ಮುಂಭಾಗಕ್ಕೆ ಹಾನಿಯಾಗಿದೆ. ಭಾನುವಾರ ಸಂಜೆ ಸುಮಾರು 6:15ರ ವೇಳೆ ಸಂಭವಿಸಿದ ಸ್ಫೋಟದ ಪ್ರದೇಶವನ್ನು ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದು, ಮಾರುಕಟ್ಟೆ ಪ್ರದೇಶವನ್ನು ಬ್ಯಾರಿಕೇಡ್‍ಗಳಿಂದ ಮುಚ್ಚಲಾಗಿದೆ. ಇದನ್ನೂ ಓದಿ: ಮಣಿಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಟಿಕೆಟ್‌ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ

    ಸುಧಾರಿತ ಸ್ಫೋಟಕ ಸಾಧನದಿಂದ(ಐಇಡಿ) ಸ್ಫೋಟ ಸಂಭವಿಸಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಂಬ್ ಸ್ಕ್ವಾಡ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇದು ಯಾವ ರೀತಿಯ ಸ್ಫೋಟಕ ಎಂದು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಬ್ಬರು ಯುಎನ್ ತಜ್ಞರ ಹತ್ಯೆ – 51 ಮಂದಿಗೆ ಮರಣದಂಡನೆ

    ಇಂದು ಸಂಜೆ ಶಿಲ್ಲಾಂಗ್‍ನ ಪೊಲೀಸ್ ಬಜಾರ್‍ನಲ್ಲಿ ನಡೆದ ಸ್ಫೋಟವನ್ನು ಬಲವಾಗಿ ಖಂಡಿಸುತ್ತೇನೆ. ಶಾಂತಿ ಕದಡುವ ಹಾಗೂ ಹಾನಿ ಮಾಡುವ ಪ್ರಯತ್ನ ಹೇಡಿತನ. ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸುತ್ತೇವೆ. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುತ್ತೇವೆ ಎಂದು ಸ್ಫೋಟದ ಬಗ್ಗೆ ಮೇಘಾಲಯ ಮುಖ್ಯಮಂತ್ರಿ ಕನ್ರಾಡ್ ಸಂಗ್ಮಾ ತಿಳಿಸಿದರು.

  • ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌- ಒಂದು ಸೀಟ್‌ ಗೆಲ್ಲದ ಟಿಎಂಸಿ ಈಗ ವಿಪಕ್ಷ

    ಮೇಘಾಲಯದಲ್ಲಿ ಕಾಂಗ್ರೆಸ್‌ಗೆ ಬಿಗ್‌ ಶಾಕ್‌- ಒಂದು ಸೀಟ್‌ ಗೆಲ್ಲದ ಟಿಎಂಸಿ ಈಗ ವಿಪಕ್ಷ

    ಶಿಲ್ಲಾಂಗ್‌: ಮೇಘಾಲಯ ಮಾಜಿ ಮುಖ್ಯಮಂತ್ರಿ ಮುಕುಲ್‌ ಸಂಗ್ಮಾ ನೇತೃತ್ವದಲ್ಲಿ 17 ಮಂದಿ ಕಾಂಗ್ರೆಸ್‌ ಶಾಸಕರ ಪೈಕಿ 12 ಮಂದಿ ಶಾಸಕರು ರಾತ್ರೋರಾತ್ರಿ ತೃಣಮೂಲ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ. ಈ ಸಂಬಂಧ ಸ್ಪೀಕರ್‌ ಮೆಟ್ಬಾ ಲಿಂಗ್ಡೋಹ್‌ ಅವರಿಗೆ ಮೇಘಾಲಯ ಶಾಸಕರು ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಒಂದು ಸ್ಥಾನವನ್ನೂ ಗೆದ್ದಿರದ ತೃಣಮೂಲ ಕಾಂಗ್ರೆಸ್‌ ಈಗ ವಿಪಕ್ಷವಾಗಿ ಹೊರಹೊಮ್ಮಿದೆ.

    ಮೇಘಾಲಯದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವನ್ನು ಪ್ರಮುಖ ವಿರೋಧ ಪಕ್ಷವಾಗಿ ಮಾಡುವ ಆಶಯವನ್ನು ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದರು. ಸಂಯುಕ್ತ ವಿರೋಧ ಪಕ್ಷದ ಯೋಜನೆಗಳ ಬಗ್ಗೆಯೂ ಮಾತನಾಡಿದ್ದರು. ಇದನ್ನೂ ಓದಿ: ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಮಮತಾ ಬ್ಯಾನರ್ಜಿ ಅವರು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುತ್ತಾರೆಂಬ ಮಾತುಗಳಿದ್ದವು. ಆದರೆ ಅವರು ಸೋನಿಯಾರನ್ನು ಭೇಟಿಯಾಗಲಿಲ್ಲ.

    ಈ ವಿಚಾರವಾಗಿ ತೃಣಮೂಲ ಕಾಂಗ್ರೆಸ್‌ ಪ್ರಮುಖರು ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿ ಅವರು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವ ಯಾವುದೇ ಇಂಗಿತ ವ್ಯಕ್ತಪಡಿಸಿರಲಿಲ್ಲ. ಸದ್ಯ ಬ್ಯಾನರ್ಜಿ ಅವರು ಪಂಜಾಬ್‌ ಚುನಾವಣೆ ಕಡೆಗೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ತಿಳಿಸಿದ್ದರು. ಇದೇ ವಿಚಾರವಾಗಿ ಬ್ಯಾನರ್ಜಿ ಮಾತನಾಡಿದ್ದು, ನಾವು ಪ್ರತಿ ಬಾರಿ ಸೋನಿಯಾರನ್ನು ಏಕೆ ಭೇಟಿಯಾಗಬೇಕು? ಇದು ಸಾಂವಿಧಾನಿಕವಾಗಿ ಕಡ್ಡಾಯವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಮುಂಬರುವ ಚುನಾವಣೆ ಹಿತದೃಷ್ಟಿಯಿಂದ ತ್ರಿಪುರ ಮತ್ತು ಗೋವಾ ರಾಜ್ಯಗಳಲ್ಲೂ ತನ್ನ ಪಕ್ಷವನ್ನು ವಿಸ್ತರಿಸಿಕೊಳ್ಳಲು ತೃಣಮೂಲ ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ.

  • ಸಮ್ಮರ್ ಆಫ್ 69 ಸಾಂಗ್ ಹಾಡಿದ ಮೇಘಾಲಯ ಸಿಎಂ – ವೀಡಿಯೋ ವೈರಲ್

    ಸಮ್ಮರ್ ಆಫ್ 69 ಸಾಂಗ್ ಹಾಡಿದ ಮೇಘಾಲಯ ಸಿಎಂ – ವೀಡಿಯೋ ವೈರಲ್

    ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು, ಬಿಯಾನ್ ಆಡಮ್ಸ್ ಅವರ ಜನಪ್ರಿಯ ಸಾಂಗ್‍ವೊಂದನ್ನು ಹಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    CM Conrad Sangma

    ಇಟಾನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವೀಡಿಯೋವನ್ನು ಸೆರೆಹಿಡಿಯಲಾಗಿದ್ದು, ಕಾನ್ರಾಡ್ ಸಂಗ್ಮಾ ಅವರು ವೇದಿಕೆ ಮೇಲೆ ಸಮ್ಮರ್ ಆಫ್ 69 ಹಾಡನ್ನು ಸಖತ್ ಎಂಜಾಯ್ ಮಾಡುತ್ತಾ ಹಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    ಸದ್ಯ ಸಿಎಂ ಹಾಡಿರುವ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವೀಡಿಯೋವನ್ನು ಇಲ್ಲಿಯವರೆಗೂ 12,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಕಾಮೆಂಟ್‍ಗಳ ಸುರಿ ಮಳೆಯೇ ಹರಿದುಬರುತ್ತಿದೆ. ಅಲ್ಲದೇ ಸಿಎಂ ಈ ಹಾಡನ್ನು ಹಾಡಿರುಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

    ಸಮ್ಮರ್ ಆಫ್ 69 ಗೀತೆ 1984ರಲ್ಲಿ ರೆಕ್ಲೆಸ್ ಆಲ್ಬಂನಲ್ಲಿ ಬಿಡುಗಡೆಯಾಗಿತ್ತು. ಬ್ರಿಯಾನ್ ಆಡಮ್ಸ್ ಅವರು ಅಭಿನಯಿಸಿದ್ದು, ಈ ಹಾಡು ಅಂದಿನ ಯುವಕರಿಗೆ ಫೇವರೇಟ್ ಹಾಗೂ ಬಹಳ ಫೇಮಸ್ ಆಗಿತ್ತು.  ಇದನ್ನೂ ಓದಿ:  ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ