Tag: Meghalaya

  • ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ

    ರಾಜ್ಯಪಾಲರನ್ನು ಭೇಟಿಯಾದ ಕಾನ್ರಾಡ್ ಸಂಗ್ಮಾ – ಮೇಘಾಲಯದಲ್ಲಿ ಸರ್ಕಾರ ರಚನೆಗೆ ಮನವಿ

    ಶಿಲ್ಲಾಂಗ್: ಮೇಘಾಲಯ (Meghalaya) ವಿಧಾನಸಭೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ನ್ಯಾಷನಲ್ ಪೀಪಲ್ಸ್ ಪಾರ್ಟಿ ಪಕ್ಷದ ಮುಖ್ಯಸ್ಥ ಕಾನ್ರಾಡ್ ಸಂಗ್ಮಾ (Conrad Sangma) ರಾಜ್ಯಪಾಲ ಫಾಗು ಚೌಹಾಣ್ (Phagu Chauhan) ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಅನುಮತಿ ಕೋರಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅವರು ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

    ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಅವರು, ಬಿಜೆಪಿಯ ಇಬ್ಬರು ಶಾಸಕರು, ಬಗ್ಮಾರಾದ ಸ್ವತಂತ್ರ ಶಾಸಕರು ಸೇರಿದಂತೆ ಹಲವಾರು ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆ ನಾವು ಸರ್ಕಾರ ರಚನೆಗೆ ತಯಾರಿ ಆರಂಭಿಸಿದ್ದೇವೆ, ಕಾದು ನೋಡಿ ಎಂದು ಅವರು ಹೇಳಿದ್ದಾರೆ.

    11 ಸ್ಥಾನಗಳ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿರುವ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿಯ (UDP) ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಮಾತನಾಡಲು ನಿರಾಕರಿಸಿದ ಸಂಗ್ಮಾ, ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅವರೊಂದಿಗೆ ಚರ್ಚಿಸುತ್ತೇವೆ. ನಾನು ಈಗ ಎಲ್ಲಾ ವಿವರಗಳನ್ನು ನೀಡಲು ಬಯಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೋನಿಯಾ ಗಾಂಧಿ ಮತ್ತೆ ಆಸ್ಪತ್ರೆಗೆ ದಾಖಲು

    ಪ್ರಮಾಣ ವಚನ ಸಮಾರಂಭದ ದಿನಾಂಕವನ್ನು ನಿರ್ಧರಿಸಿಲ್ಲ ಮತ್ತು ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸುವ ಬಗ್ಗೆ ಅವರಿಂದ ದೃಢೀಕರಣವನ್ನು ಪಡೆದ ನಂತರವೇ ತಿಳಿಸುವುದಾಗಿ ಸಂಗ್ಮಾ ಹೇಳಿದರು. ಇದನ್ನೂ ಓದಿ: ಲಂಚ ಪ್ರಕರಣದ ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ರಣದೀಪ್ ಸುರ್ಜೇವಾಲ

  • ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ – ಮೇಘಾಲಯ ಅತಂತ್ರ

    ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ – ಮೇಘಾಲಯ ಅತಂತ್ರ

    ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳಿಗೆ ಪೂರಕವಾಗಿಯೇ ಈಶಾನ್ಯ ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ತ್ರಿಪುರ, ನಾಗಲ್ಯಾಂಡ್‍ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.

    ಮೇಘಾಲಯದಲ್ಲಿ ಮಾತ್ರ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‍ಪಿಪಿ ಹೆಚ್ಚು ಸ್ಥಾನ ಗಳಿಸಿದರೂ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಾನ್ರಾಡ್ ಅವರು ಬೆಂಬಲ ಪಡೆಯಲು ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ  ಟ್ವೀಟ್‌ ಮಾಡಿ ಈ ವಿಚಾರ ತಿಳಿಸಿದ್ದಾರೆ.

    ತ್ರಿಪುರಾದಲ್ಲಿ ಮಾತ್ರ ಬಿಜೆಪಿಗೆ ಅಂದುಕೊಂಡಷ್ಟು ಸುಲಭವಾಗಿ ಗೆಲುವು ದಕ್ಕಲಿಲ್ಲ. ಮಾಣಿಕ್ಯ ರಾಜವಂಶದ ಪ್ರದ್ಯೋತ್ ಬಿಕ್ರಮ್ ವರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷ ಕೆಸರಿ ಪಡೆಗೆ ಭಾರೀ ಸ್ಪರ್ಧೆ ನೀಡಿತ್ತು. ಐಪಿಎಫ್‍ಟಿ ಜೊತೆಗೆ ಸ್ಪರ್ಧೆ ಮಾಡಿದ್ದ ಬಿಜೆಪಿ ಅಂತಿಮವಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಯಿತು.

    ಇದೇ ವೇಳೆ, ತಿಪ್ರಾ ಮೊಥಾ ಬೆಂಬಲ ನೀಡಿದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಬಿಟ್ಟು ಉಳಿದೆಲ್ಲಾ ಬೇಡಿಕೆಗಳಿಗೆ ಸ್ಪಂದಿಸೋದಾಗಿ ಬಿಜೆಪಿ ಬಿಗ್ ಆಫರ್ ನೀಡಿದೆ. ಕಾಂಗ್ರೆಸ್ ಹೆಚ್ಚು ಕಡಿಮೆ ವಾಷ್‍ಔಟ್ ಆಗಿದೆ. ಎರಡು ರಾಜ್ಯಗಳಲ್ಲಿ ಗೆದ್ದ ಬಿಜೆಪಿ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಪ್ರಧಾನಿ ಮೋದಿ ಮಾತನಾಡಿ, ಈಶಾನ್ಯ ರಾಜ್ಯಗಳ ಜನತೆಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    60 ವರ್ಷಗಳ ಇತಿಹಾಸವುಳ್ಳ ನಾಗಲ್ಯಾಂಡ್‍ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಗೆದ್ದುಬೀಗಿದ್ದಾರೆ. ಎನ್‍ಡಿಪಿಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಹೆಕಾನಿ ಜಖಾಲು ಮತ್ತು ಸಲ್ಹತುನೋ ಕ್ರುಸೆ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.

    ತ್ರಿಪುರಾ 60 ಸ್ಥಾನ
    ಬಿಜೆಪಿ + 33
    ಎಡರಂಗ + 14
    ಟಿಎಂಪಿ – 13

    ನಾಗಾಲ್ಯಾಂಡ್ – 60 ಸ್ಥಾನ
    ಬಿಜೆಪಿ+ಎನ್‍ಡಿಪಿಪಿ – 37
    ಎನ್‍ಪಿಎಫ್ – 02
    ಕಾಂಗ್ರೆಸ್ – 00
    ಇತರರು – 21

    ಮೇಘಾಲಯ 59 ಸ್ಥಾನ
    ಎನ್‍ಪಿಪಿ -25
    ಕಾಂಗ್ರೆಸ್ – 05
    ಬಿಜೆಪಿ – 04
    ಇತರರು – 25

  • ತ್ರಿಪುರಾದಲ್ಲಿ ಬಿಜೆಪಿ, ನಾಗಾಲ್ಯಾಂಡ್‌ ಎನ್‌ಡಿಪಿಪಿ, ಮೇಘಾಲಯದಲ್ಲಿ ಎನ್‌ಪಿಪಿ ಮುನ್ನಡೆ

    ತ್ರಿಪುರಾದಲ್ಲಿ ಬಿಜೆಪಿ, ನಾಗಾಲ್ಯಾಂಡ್‌ ಎನ್‌ಡಿಪಿಪಿ, ಮೇಘಾಲಯದಲ್ಲಿ ಎನ್‌ಪಿಪಿ ಮುನ್ನಡೆ

    ನವದೆಹಲಿ: ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್‌ (Nagaland), ತ್ರಿಪುರ (Tripura), ಮೇಘಾಲಯ (Meghalaya) ವಿಧಾನಸಭೆಗಳಿಗೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ. ಮೇಘಾಲಯದಲ್ಲಿ ಎನ್‌ಪಿಪಿ, ನಾಗಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಹಾಗೂ ತ್ರಿಪುರಾದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

    ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷ ಎನ್‌ಡಿಪಿಪಿ ಮುನ್ನಡೆ ಸಾಧಿಸಿದೆ. ಇನ್ನೆರಡು ರಾಜ್ಯಗಳಲ್ಲಿ ಈವರೆಗೂ ಯಾವುದೇ ಪಕ್ಷ ಇನ್ನೂ ಬಹುಮತದ ಗಡಿ ದಾಟಿಲ್ಲ. ಇದನ್ನೂ ಓದಿ: ಉದ್ಯೋಗದಲ್ಲಿ ಬಡ್ತಿ ಪಡೆಯಲು ಬಾಸ್ ಜೊತೆ ಮಲಗಲು ಪತ್ನಿಯನ್ನು ಒತ್ತಾಯಿಸಿದ!

    ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಪ್ರಬಲ ಪ್ರತಿಸ್ಪರ್ಧಿ ಎಡಪಕ್ಷ-ಕಾಂಗ್ರೆಸ್ ಮೈತ್ರಿಗಿಂತ ಮುನ್ನಡೆ ಸಾಧಿಸಿದೆ. ಬಿಜೆಪಿ ಪ್ರಸ್ತುತ 28 ಸ್ಥಾನಗಳಲ್ಲಿ ಮುಂದಿದ್ದು, ಬಹುಮತಕ್ಕೆ 3 ಸ್ಥಾನಗಳಷ್ಟೇ ಬೇಕಿದೆ. ಅಲ್ಲದೇ ತಿಪ್ರಾ ಮೋಥಾ ಪಕ್ಷ 13 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ ಹಾಗೂ ಎಡಪಕ್ಷ ಮೈತ್ರಿಕೂಟ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

    ಮೇಘಾಲಯದಲ್ಲಿ ಈವರೆಗೂ ಯಾವುದೇ ಪಕ್ಷ ಬಹುಮತ ಸಾಧಿಸಿಲ್ಲ. ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್‌ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಬಹುಮತಕ್ಕೆ 31 ಸ್ಥಾನ ಬೇಕಾಗಿದೆ. ಇದನ್ನೂ ಓದಿ: ಜೆಎನ್‍ಯುನಲ್ಲಿ ಹೊಸ ರೂಲ್ಸ್ – ಹಿಂಸಾಚಾರ ನಡೆಸಿದ್ರೆ ವಿದ್ಯಾರ್ಥಿಗಳ ಪ್ರವೇಶ ರದ್ದು

    ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷ ಎನ್‌ಡಿಪಿಪಿ (ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ) 60 ಸದಸ್ಯ ಬಲದ ವಿಧಾನಸಭೆಯಲ್ಲಿ 42 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

    ತ್ರಿಪುರಾದ 60 ವಿಧಾನಸಭಾ ಕ್ಷೇತ್ರಗಳಿಗೆ ಫೆ.16ರಂದು ಚುನಾವಣೆ ನಡೆದಿತ್ತು. ನಾಗಾಲ್ಯಾಂಡ್‌ (60) ಮತ್ತು ಮೇಘಾಲಯದ 59 ಕ್ಷೇತ್ರಗಳಿಗೆ ಫೆ.27ರಂದು ನಡೆದ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ನಡೆಯುತ್ತಿದ್ದು, ಮತದಾರರ ಒಲವು ಯಾವ ಪಕ್ಷದ ಕಡೆಗೆ ಎಂಬ ಬಗ್ಗೆ ಮಧ್ಯಾಹ್ನದ ವೇಳೆ ಸ್ಪಷ್ಟ ಚಿತ್ರಣ ಸಿಗಲಿದೆ.

  • Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ – ಮೇಘಾಲಯದಲ್ಲಿ 3ನೇ ಸ್ಥಾನ

    Exit Polls: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿಗೆ ಅಧಿಕಾರ – ಮೇಘಾಲಯದಲ್ಲಿ 3ನೇ ಸ್ಥಾನ

    ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೇಘಾಲಯದಲ್ಲಿ ಮೂರನೇ ಸ್ಥಾನ ಗಳಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

    ನಾಗಾಲ್ಯಾಂಡ್, ಮೇಘಾಲಯಗಳಲ್ಲಿ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಷ್ಟ್ರೀಯ ವಾಹಿನಿಗಳು ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸಿವೆ. ಸಮೀಕ್ಷೆಗಳ ಪೈಕಿ ಎರಡು ಸಮೀಕ್ಷೆಗಳು ಬಿಜೆಪಿಗೆ ಪೂರ್ಣ ಬಹುಮತ ಬರಲಿದೆ ಎಂದು ತಿಳಿಸಿದರೆ ಒಂದು ಸಮೀಕ್ಷೆ ಮಾತ್ರ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದಿದೆ.

    ಮೂರು ರಾಜ್ಯಗಳಲ್ಲಿ ಒಟ್ಟು 60 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 31 ಸ್ಥಾನ ಗಳಿಸಬೇಕಾಗುತ್ತದೆ. ಮಾರ್ಚ್ 2 ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ

    ನಾಗಾಲ್ಯಾಂಡ್
    ಒಟ್ಟು ಸ್ಥಾನ : 60
    ಮ್ಯಾಜಿಕ್‌ ಸಂಖ್ಯೆ:31
    ಬಿಜೆಪಿ+ 42, ಎನ್‌ಪಿಎಫ್‌ 6, ಕಾಂಗ್ರೆಸ್‌ 1

    ತ್ರಿಪುರ
    ಒಟ್ಟು ಸ್ಥಾನ 60
    ಮ್ಯಾಜಿಕ್‌ ಸಂಖ್ಯೆ :31
    ಬಿಜೆಪಿ +32, ಎಡ ಪಕ್ಷ 15, ಟಿಐಪಿಆರ್‌ಎ 12

    ಮೇಘಾಲಯ
    ಒಟ್ಟು ಸ್ಥಾನ 60
    ಮ್ಯಾಜಿಕ್‌ ಸಂಖ್ಯೆ 31
    ಎನ್‌ಪಿಪಿ 20, ಟಿಎಂಸಿ 11, ಬಿಜೆಪಿ 6

  • 7ನೇ ವೇತನ ಆಯೋಗ ಜಾರಿ, ನೌಕರರಿಗೆ ಸಕಾಲಕ್ಕೆ ಸಂಬಳ: ಜೆಪಿ ನಡ್ಡಾ ಭರವಸೆ

    7ನೇ ವೇತನ ಆಯೋಗ ಜಾರಿ, ನೌಕರರಿಗೆ ಸಕಾಲಕ್ಕೆ ಸಂಬಳ: ಜೆಪಿ ನಡ್ಡಾ ಭರವಸೆ

    ಶಿಲ್ಲಾಂಗ್: ಬಿಜೆಪಿ (BJP) ಸರ್ಕಾರ ಅಧಿಕಾರಕ್ಕೆ ಬಂದಲ್ಲಿ 7ನೇ ವೇತನ ಆಯೋಗವನ್ನು ಜಾರಿ ಮಾಡಲಾಗುವುದು, ಸಕಾಲದಲ್ಲಿ ಸರ್ಕಾರಿ ನೌಕರರ ವೇತನ ನೀಡಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಭರವಸೆ ನೀಡಿದ್ದಾರೆ. ಮೇಘಾಲಯ ವಿಧಾನಸಭಾ ಚುನಾವಣೆ (Meghalaya Assembly Election) ಹಿನ್ನೆಲೆ ಅವರು ಬುಧಾವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದರು.

    ಪ್ರಣಾಳಿಕೆಯಲ್ಲಿ ಹಲವು ಭರವಸೆಗಳನ್ನು ನೀಡಿದ್ದು ಮುಖ್ಯವಾಗಿ ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕವಾಗಿ 2,000 ರೂ.ಗಳಷ್ಟು ಹೆಚ್ಚಿಸಲಾಗುವುದು, ನವಜಾತ ಹೆಣ್ಣು ಮಗುವಿಗೆ 50,000 ರೂ.ಗಳ ಬಾಂಡ್ ನೀಡುವ ಹಾಗೂ ಶಿಶುವಿಹಾರದಿಂದ ಸ್ನಾತಕೋತ್ತರ ಪದವಿವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಭರವಸೆ ನೀಡಿದೆ. ಇದನ್ನೂ ಓದಿ: ಮತ್ತೆ ಬಿಜೆಪಿ V/S ಕಾಂಗ್ರೆಸ್ ಕಮಿಷನ್ ಕದನ- ಕಾಂಗ್ರೆಸ್‍ನಿಂದ ಹೊಸ ಪೊಲಿಟಿಕಲ್ ಚಾರ್ಜ್‍ಶೀಟ್

    ವಿಧವೆಯರ, ಒಂಟಿ ಮಹಿಳೆಯರ ಸಬಲೀಕರಣಕ್ಕಾಗಿ ವಾರ್ಷಿಕ 24,000 ಆರ್ಥಿಕ ಸಹಾಯದ ಬೆಂಬಲ, ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ವಾರ್ಷಿಕ 2 ಉಚಿತ ಎಲ್‌ಪಿಜಿ ಸಿಲಿಂಡರ್ ನೀಡುವುದಾಗಿ ಬಿಜೆಪಿ ಹೇಳಿದೆ. ಈಶಾನ್ಯ ರಾಜ್ಯಗಳಾದ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಮೊದಲ ಬಾರಿಗೆ ಬಿಜೆಪಿ ಮೇಘಾಲಯದಲ್ಲಿ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಇದನ್ನೂ ಓದಿ: ಬಿಜೆಪಿಗೆ ಮತ್ತೆ ಅಧಿಕಾರ – ಬಿ.ಎಸ್ ಯಡಿಯೂರಪ್ಪ ವಿಶ್ವಾಸ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೂರು ರಾಜ್ಯಗಳ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ

    ಮೂರು ರಾಜ್ಯಗಳ ವಿಧಾನಸಭೆಗೆ ಚುನಾವಣಾ ದಿನಾಂಕ ಪ್ರಕಟ

    ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರ, (Tripura) ನಾಗಲ್ಯಾಂಡ್‌ (Nagaland), ಮೇಘಾಲಯ (Meghalaya) ರಾಜ್ಯಗಳ ವಿಧಾನಸಭಾ ಚುನಾವಣೆಯ (Election) ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ.

    ಫೆಬ್ರವರಿ 16 ರಂದು ತ್ರಿಪುರ ಹಾಗೂ ಫೆಬ್ರವರಿ 27 ರಂದು ನಾಗಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಮಾರ್ಚ್ 2 ರಂದು ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ. ಇದನ್ನೂ ಓದಿ: Nepal Plane Crash – ಮೃತರ ಸಂಖ್ಯೆ 71ಕ್ಕೆ ಏರಿಕೆ

    ನಾಗಾಲ್ಯಾಂಡ್, ಮೇಘಾಲಯ ಮತ್ತು ತ್ರಿಪುರಾ ವಿಧಾನಸಭೆಗಳ ಐದು ವರ್ಷಗಳ ಅವಧಿಯು ಕ್ರಮವಾಗಿ ಮಾರ್ಚ್ 12, ಮಾರ್ಚ್ 15 ಮತ್ತು ಮಾರ್ಚ್ 22 ರಂದು ಕೊನೆಗೊಳ್ಳಲಿದೆ. ಆ ಅವಧಿಗೆ ಮೊದಲು, ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ. ಇದನ್ನೂ ಓದಿ: BRSನಿಂದ ಮೊದಲ ಸಾರ್ವಜನಿಕ ಸಭೆ – ಕೆಂಪು ಕೋಟೆ ಮೇಲೆ ಗುಲಾಬಿ ಬಾವುಟ ಹಾರಲಿದೆ : ಕೆಸಿಆರ್ ವಿಶ್ವಾಸ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಅಸ್ಸಾಂ, ಮೇಘಾಲಯ ಗಡಿಯಲ್ಲಿ ಮರ ಕಳ್ಳಸಾಗಣೆ – ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿ 6 ಸಾವು

    ಶಿಲ್ಲಾಂಗ್/ದಿಸ್ಪುರ್: ಅಸ್ಸಾಂ-ಮೇಘಾಲಯ ಗಡಿಯಲ್ಲಿ ಮಂಗಳವಾರ ಮುಂಜಾನೆ ಮರವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರಕ್ ಅನ್ನು ಪೊಲೀಸರು ತಡೆದಿದ್ದಾರೆ. ಘಟನೆಯ ಬಳಿಕ ಗಡಿ ಪ್ರದೇಶದಲ್ಲಿ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.

    ಘರ್ಷಣೆಯ ಬಳಿಕ ಮೇಘಾಲಯ ಸರ್ಕಾರ 7 ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಿದೆ.

    ವರದಿಗಳ ಪ್ರಕಾರ, ಮೇಘಾಲಯದ ಗಡಿಯಾದ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಮೊಯಿಕ್ರಾಂಗ್‌ನಲ್ಲಿ ಅಸ್ಸಾಂ ಅರಣ್ಯ ಇಲಾಖೆಯ ತಂಡ ಮುಂಜಾನೆ 3 ಗಂಟೆ ವೇಳೆಗೆ ಟ್ರಕ್ ಒಂದನ್ನು ತಡೆದಿದೆ. ಟ್ರಕ್‌ನಲ್ಲಿದ್ದವರು ಈ ವೇಳೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಅವರನ್ನು ತಡೆ ಹಿಡಿಯಲು ಅರಣ್ಯ ಸಿಬ್ಬಂದಿ ಗುಂಡು ಹಾರಿಸಿ ಟ್ರಕ್‌ನ ಟೈರ್ ಪಂಕ್ಚರ್ ಮಾಡಿದ್ದಾರೆ.

    ಬಳಿಕ ಅರಣ್ಯ ಸಿಬ್ಬಂದಿ ಟ್ರಕ್‌ನಲ್ಲಿದ್ದ ಮೂವರನ್ನು ಬಂಧಿಸಿ, ಜಿರಿಕಿಂಡಿಂಗ್‌ಗೆ ಕರೆತಂದಿದ್ದಾರೆ. ಘಟನೆಯ ಬಗ್ಗೆ ಅರಣ್ಯ ಸಿಬ್ಬಂದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಹೆಚ್ಚಿನ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ. ಇದನ್ನೂ ಓದಿ: ಶಾರೀಕ್‌ ಬಳಿಯಿದ್ದ ಕುಕ್ಕರ್‌ ಬಾಂಬ್‌ಗೆ ಬಸ್ಸನ್ನೇ ಸ್ಫೋಟಿಸುವ ಸಾಮರ್ಥ್ಯ ಇತ್ತು

    ಇದೆಲ್ಲದರ ಬಳಿಕ ಮುಂಜಾನೆ ಸುಮಾರು 5 ಗಂಟೆಯ ವೇಳೆಗೆ ಮೇಘಾಲಯದಿಂದ ಅಪಾರ ಸಂಖ್ಯೆಯ ಜನರು ಕಠಾರಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರ ತಂಡ ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಈ ಘರ್ಷಣೆಯಲ್ಲಿ ಅರಣ್ಯ ಸಿಬ್ಬಂದಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

    ಮೃತ ಅರಣ್ಯ ಸಿಬ್ಬಂದಿಯನ್ನು ಬಿದ್ಯಾ ಸಿಂಗ್ ಲೆಹ್ತ್ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಅರಣ್ಯ ಸಿಬ್ಬಂದಿ ಅಭಿಮನ್ಯು ಗಾಯಗೊಂಡಿದ್ದಾರೆ. ಪರಿಸ್ಥಿತಿ ಸದ್ಯ ನಿಯಂತ್ರಣಕ್ಕೆ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 71 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಮೋದಿ

    Live Tv
    [brid partner=56869869 player=32851 video=960834 autoplay=true]

  • ವೇಶ್ಯಾವಾಟಿಕೆ ಆರೋಪ – ಮೇಘಾಲಯದ ಬಿಜೆಪಿ ನಾಯಕ ಉತ್ತರಪ್ರದೇಶದಲ್ಲಿ ಬಂಧನ

    ವೇಶ್ಯಾವಾಟಿಕೆ ಆರೋಪ – ಮೇಘಾಲಯದ ಬಿಜೆಪಿ ನಾಯಕ ಉತ್ತರಪ್ರದೇಶದಲ್ಲಿ ಬಂಧನ

    ಲಕ್ನೋ: ಫಾರ್ಮ್‌ಹೌಸ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೇಘಾಲಯದ ಉಪಾಧ್ಯಕ್ಷ ಬೆರ್ನಾಡ್ ಎನ್ ಮರಕ್ ಅವರನ್ನು ಉತ್ತರಪ್ರದೇಶದಲ್ಲಿ ಬಂಧಿಸಲಾಗಿದೆ.

    ಶನಿವಾರ ಪೊಲೀಸರು ನಡೆಸಿದ ದಾಳಿಯಲ್ಲಿ ಮರಕ್ ಅವರ ಫಾರ್ಮ್‌ಹೌಸ್‌ನಿಂದ 6 ಅಪ್ರಾಪ್ತರನ್ನು ರಕ್ಷಿಸಿ, 73 ಜನರನ್ನು ಬಂಧಿಸಲಾಗಿತ್ತು. ಘಟನೆಯ ಬೆನ್ನಲ್ಲೇ ಮರಕ್ ಪರಾರಿಯಾಗಿದ್ದರು. ಅವರನ್ನು ತನಿಖೆಗೆ ಸಹಕರಿಸುವಂತೆ ಕೇಳಿಕೊಳ್ಳಲಾಯಿತಾದರೂ ತನಿಖಾಧಿಕಾರಿಗಳಿಂದ ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಇದನ್ನೂ ಓದಿ: ಪ್ರತಿಭಟನೆ ವೇಳೆ ಕಾಂಗ್ರೆಸ್‌ ಮುಖಂಡನ ಕೂದಲು ಹಿಡಿದು ಜೀಪಿನೊಳಗೆ ದಬ್ಬಿದ ಪೊಲೀಸರು

    ಸೋಮವಾರ ತುರಾ ನ್ಯಾಯಾಲಯ ಮರಕ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇಂದು ಮೇಘಾಲಯ ಪೊಲೀಸರು ಅವರಿಗೆ ಲುಕ್‌ಔಟ್ ನೋಟಿಸ್ ನೀಡಿದ್ದು, ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಉತ್ತರಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಇದನ್ನೂ ಓದಿ: ಶಿಕ್ಷಕರ ನೇಮಕಾತಿ ಹಗರಣ – ಚಟರ್ಜಿ ಆಪ್ತೆಯ ಮನೆಯಲ್ಲಿ ಸ್ಫೋಟಕ ಮಾಹಿತಿಯಿರುವ ಡೈರಿ ಪತ್ತೆ

    ಪೊಲೀಸರು ಫಾರ್ಮ್‌ಹೌಸ್‌ನಿಂದ 47 ಯುವಕರು ಹಾಗೂ 26 ಮಹಿಳೆಯರನ್ನು ಬಂಧಿಸಿದ್ದರು. 6 ಅಪ್ರಾಪ್ತರನ್ನು ಕೊಳಕಾದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು. 30 ಸಣ್ಣ ಕೊಠಡಿಗಳಿದ್ದ ಫಾರ್ಮ್‌ಹೌಸ್‌ ಅನ್ನು ಅಕ್ರಮವಾಗಿ ವೇಶ್ಯಾವಾಟಿಕೆಗೆ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೇಶ್ಯಾವಾಟಿಕೆ ಆರೋಪ – ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸ್ ದಾಳಿ

    ವೇಶ್ಯಾವಾಟಿಕೆ ಆರೋಪ – ಮೇಘಾಲಯ ಬಿಜೆಪಿ ನಾಯಕನ ರೆಸಾರ್ಟ್ ಮೇಲೆ ಪೊಲೀಸ್ ದಾಳಿ

    ಶಿಲ್ಲಾಂಗ್: ಮೇಘಾಲಯದ ಬಿಜೆಪಿ ಉಪಾಧ್ಯಕ್ಷ ಬೆರ್ನಾರ್ಡ್ ಎನ್ ಮರಕ್ ಅವರ ತುರಾದಲ್ಲಿರುವ ರೆಸಾರ್ಟ್‌ಗೆ ಶನಿವಾರ ಪೊಲೀಸರು ದಾಳಿ ನಡೆಸಿದ್ದು, ಅಲ್ಲಿಂದ 6 ಮಕ್ಕಳನ್ನು ರಕ್ಷಿಸಲಾಗಿದೆ ಹಾಗೂ 73 ಜನರನ್ನು ಬಂಧಿಸಲಾಗಿದೆ.

    ಮೇಘಾಲಯದ ಪೊಲೀಸರು ಕೆಲವು ಸುಳಿವಿನ ಆಧಾರದ ಮೇಲೆ ಮರಕ್ ಮಲೀಕತ್ವದ ಬಗಾನ್ ಎಂಬ ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದಾರೆ. ಫಾರ್ಮ್‌ಹೌಸ್ ಅನ್ನು ಅಕ್ರಮ ವೇಶ್ಯಾವಾಟಿಕೆಗೆ ಬಳಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಘಟನೆಯಿಂದ ಇದೀಗ ಬಿಜೆಪಿಗೆ ಒಂದು ದೊಡ್ಡ ಕಳಂಕ ತಂದಿದೆ.

    ನಾವು 4 ಹುಡುಗರು ಹಾಗೂ ಇಬ್ಬರು ಹುಡುಗಿಯರು ಸೇರಿದಂತೆ ಒಟ್ಟು 6 ಅಪ್ರಾಪ್ತರನ್ನು ಸ್ಥಳದಿಂದ ರಕ್ಷಿಸಿದ್ದೇವೆ. ಈ ರೆಸಾರ್ಟ್ ಅನ್ನು ವೇಶ್ಯಾವಾಟಿಕೆಯ ಉದ್ದೇಶಕ್ಕೆ ಬಳಸಲಾಗುತ್ತಿದ್ದು, ಅಪ್ರಾಪ್ತರನ್ನು ಕೊಳಕಾದ ಕೊಠಡಿಯಲ್ಲಿ ಕೂಡಿ ಹಾಕಲಾಗಿತ್ತು ಎಂದು ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಸಂಚಾರ ದಟ್ಟಣೆ ತಡೆಗೆ ಟ್ರಾಫಿಕ್ ಡೈವರ್ಟ್- ವರ್ಕೌಟ್ ಆಗ್ತಿಲ್ಲ ಅಂತಿದ್ದಾರೆ ಸವಾರರು!

    ಎಲ್ಲಾ ಅಪ್ರಾಪ್ತರನ್ನು ಸುರಕ್ಷಿತವಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ(ಡಿಸಿಪಿಒ) ಕೈಗೆ ಒಪ್ಪಿಸಿದ್ದೇವೆ. ದಾಳಿಯಲ್ಲಿ 27 ವಾಹನಗಳು, 8 ದ್ವಿಚಕ್ರ ವಾಹನಗಳು, ಸುಮಾರು 400 ಮದ್ಯದ ಬಾಟಲಿಗಳು, 500ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

    ವಶಪಡಿಸಿಕೊಂಡಿರುವ ವಸ್ತುಗಳಿಂದಲೇ ಇಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ. ಫಾರ್ಮ್‌ಹೌಸ್‌ನಲ್ಲಿ 30 ಸಣ್ಣ ಕೊಠಡಿಗಳು ಇವೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ 73 ಜನರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಝೀರೋ ಟ್ರಾಫಿಕ್‍ನಲ್ಲಿ ರಸ್ತೆ ದಾಟಿದ ಹುಲಿರಾಯನ ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

    ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ 253 ಜನರನ್ನ ರಕ್ಷಿಸಿದ IAF – ಮುಂದುವರಿದ ಶೋಧ ಕಾರ್ಯ

    ಡಿಸ್ಪುರ್: ಪ್ರವಾಹ ಪೀಡಿತ ಅಸ್ಸಾಂ, ಮೇಘಾಲಯದ ಜನರನ್ನು ರಕ್ಷಿಸಲು ಭಾರತೀಯ ವಾಯುಪಡೆ(IAF) ಮುಂದಾಗಿದೆ. ಇಲ್ಲಿವರೆಗೂ ಐಎಎಫ್ 253ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು, ಶೋಧ ಕಾರ್ಯವನ್ನು ಮುಂದುವರಿಸಿದೆ.

    ಅಸ್ಸಾಂ ಮತ್ತು ಮೇಘಾಲಯದ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಜೂನ್ 21 ರಿಂದ ಅಸ್ಸಾಂ ಮತ್ತು ಮೇಘಾಲಯದಲ್ಲಿ ಪ್ರವಾಹದಿಂದ ಜನರನ್ನು ಮತ್ತು ಜಾನುವಾರುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದೆ. ಅಂದಿನಿಂದ, ಇಲ್ಲಿವರೆಗೂ ಐಎಎಫ್ ಸುಮಾರು 74 ಕಾರ್ಯಾಪಡೆಗಳನ್ನು ಕಳುಹಿಸಿದ್ದು, 253 ಜನರನ್ನು ರಕ್ಷಿಸಿದೆ. ಇದನ್ನೂ ಓದಿ: ಅಂಜನಾದ್ರಿ ಪ್ರದೇಶದ ಅಭಿವೃದ್ಧಿಗೆ ಹೆಲಿಪ್ಯಾಡ್ ನಿರ್ಮಿಸಲು ಚಿಂತನೆ: ಭೂಸ್ವಾಧೀನಕ್ಕೆ ಸಿಎಂ ಅಸ್ತು

    ಕಳೆದ 4 ದಿನಗಳಿಂದ ಅಸ್ಸಾಂ ಮತ್ತು ಮೇಘಾಲಯದ ಪ್ರವಾಹ ಪೀಡಿತ ಜನರಿಗೆ ಪರಿಹಾರವನ್ನು ಒದಗಿಸುವ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಿದೆ. 200 ಟನ್‍ಗಳಿಗಿಂತ ಹೆಚ್ಚು ಆಹಾರ ಮತ್ತು ಚಿಕಿತ್ಸೆಯ ಸಾಮಾಗ್ರಿಗಳನ್ನು ಈ ಪಡೆ ಹೊಂದಿದೆ. ವಿವಿಧ ಹೆಲಿಕಾಪ್ಟರ್ ಮತ್ತು ಸಾರಿಗೆ ವಿಮಾನಗಳನ್ನು ಬಳಸಿಕೊಂಡು 253 ಜನರನ್ನು ರಕ್ಷಿಸಲಾಗಿದೆ ಎಂದು ಟ್ವೀಟ್‌ ಮಾಡುವ ಮೂಲಕ ಐಎಎಫ್ ತಿಳಿಸಿದೆ.

    ಹೇಗಿದೆ ಪ್ರವಾಹದ ಸ್ಥಿತಿ?
    ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಜನರ ಪ್ರಾಣಕ್ಕೆ ಕುತ್ತು ತಂದಿದ್ದು, ಸಾವಿನ ಸಂಖ್ಯೆ 118ಕ್ಕೆ ಏರಿದೆ. ಕ್ಯಾಚಾರ್ ಜಿಲ್ಲೆಯ ಸಿಲ್ಚಾರ್ ಪಟ್ಟಣ ಸತತ ಆರನೇ ದಿನವೂ ಮುಳುಗಿದೆ. ಅಸ್ಸಾಂನ ಪ್ರವಾಹದಿಂದಾಗಿ 28 ಜಿಲ್ಲೆಗಳಲ್ಲಿ 33.03 ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ದೊಡ್ಡ ವಿನಾಶಕ್ಕೆ ಸಾಕ್ಷಿಯಾಗಿದೆ. ಭಾರತೀಯ ಸೇನೆಯ ಸ್ಪಿಯರ್ ಕಾರ್ಪ್ಸ್ ನ ಪಡೆ ಸಿಲ್ಚಾರ್ ಪಟ್ಟಣದಲ್ಲಿ ತಮ್ಮ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದೆ.

    Live Tv