Tag: Meghalaya

  • ರಾಜಾ ರಘುವಂಶಿ ಕೊಲೆ ಪ್ರಕರಣ – ಹಂತಕಿ ಸೇರಿ ಐವರನ್ನು ಮೇಘಾಲಯಕ್ಕೆ ಕರೆತಂದ ಪೊಲೀಸರು

    ರಾಜಾ ರಘುವಂಶಿ ಕೊಲೆ ಪ್ರಕರಣ – ಹಂತಕಿ ಸೇರಿ ಐವರನ್ನು ಮೇಘಾಲಯಕ್ಕೆ ಕರೆತಂದ ಪೊಲೀಸರು

    – ಇಂದು ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರು

    ಶಿಲ್ಲಾಂಗ್: ಮೇಘಾಲಯದಲ್ಲಿ (Meghalaya) ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕಿ ಪತ್ನಿ ಸೋನಂ (Sonam) ಹಾಗೂ ಐವರನ್ನು ಬಂಧಿಸಿದ ಪೊಲೀಸರು ಮಂಗಳವಾರ ತಡರಾತ್ರಿ ಆರೋಪಿಗಳನ್ನು ಮೇಘಾಲಯಕ್ಕೆ ಕರೆತಂದಿದ್ದಾರೆ.

    ಮಂಗಳವಾರ ರಾತ್ರಿಯೇ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ. ಇಂದು ಮೇಘಾಲಯ ಪೊಲೀಸರು ಸೋನಮ್ ಮತ್ತು ರಾಜ್ ಕುಶ್ವಾಹ ಜೊತೆಗೆ ಇತರ ಆರೋಪಿಗಳಾದ ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿಯನ್ನು ಪೊಲೀಸರು ಶಿಲ್ಲಾಂಗ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್

    ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಸೋನಂ ಅನ್ನು ಅಪರಾಧ ಸ್ಥಳಕ್ಕೆ ಕರೆದೊಯ್ಯಲಿದ್ದಾರೆ. ಅಲ್ಲಿ ಅಪರಾಧ ದೃಶ್ಯವನ್ನು ಮರುಸೃಷ್ಟಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜಾ ರಘುವಂಶಿ ಕೊಲೆ ನಡೆಯುವಾಗ ಸೋನಂ ಸ್ಥಳದಲ್ಲಿ ಇದ್ದಳು, ಹತ್ಯೆಯನ್ನು ಕಣ್ಣಾರೆ ಕಂಡಿದ್ದಾಳೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ – ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ

    ಕೊಲೆ ಬಳಿಕ ವಾರಣಾಸಿಯ ಡಾಬಾವೊಂದರ ಬಳಿ ಸೋನಮ್‌ನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ನಂತರ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಮೇಘಾಲಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಬೆಳಗ್ಗೆ ಮೇಘಾಲಯ ಪೊಲೀಸರು ಆಕೆಯನ್ನು ಬಿಹಾರದ ಪಾಟ್ನಾದ ಫುಲ್ವರಿ ಷರೀಫ್ ಠಾಣೆಗೆ ಕರೆತಂದಿದ್ದು, ತಡರಾತ್ರಿ ಮೇಘಾಲಯಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಹನಿಮೂನ್ ಮರ್ಡರ್ | ಪತಿ ಹತ್ಯೆಗೆ 20 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಹಂತಕಿ

    ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲಿ ಹನಿಮೂನ್‌ಗೆ ಕರೆದೊಯ್ದು ಪತಿಯನ್ನು ಹತ್ಯೆಗೈದ ಆರೋಪಿ ಪತ್ನಿ ಸೋನಂ ರಘುವಂಶಿಯ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಸೋನಮ್ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಲು 4 ಲಕ್ಷ ರೂ.ಗೆ ನೀಡಿದ್ದ ಸುಪಾರಿಯನ್ನು 20 ಲಕ್ಷ ರೂ.ಗೆ ಏರಿಸಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ವಿವಾಹವಾದ ಕೆಲವೇ ದಿನಗಳಲ್ಲಿ ಹಂತಕಿ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿಕೊಂಡು ಕೊಲೆಗೆ ಪ್ಲ್ಯಾನ್ ಮಾಡಿದ್ದಳು. ಜೊತೆಗೆ ಒನ್-ವೇ ಟಿಕೆಟ್ ಮಾತ್ರ ಬುಕ್ ಮಾಡಲಾಗಿತ್ತು. ಯೋಜನೆಯಂತೆ ಸೊಹ್ರಾಕ್ಕೆ ತೆರಳಿದ ಬಳಿಕ ಪತಿ ರಾಜ ರಘುವಂಶಿ ಹತ್ಯೆಗೆ ಸೋನಮ್ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಜೊತೆಗೆ ಕೊಲೆ ಬಳಿಕ 4 ಲಕ್ಷ ರೂ. ಕೊಡುವುದಾಗಿ ಸುಪಾರಿ ನೀಡಿದ್ದಳು. ಇದನ್ನೂ ಓದಿ: ನಂದಿಬೆಟ್ಟಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ

    ಮೇ 23ರಂದು ಸೋನಮ್ ಮತ್ತು ರಾಜಾ ರಘುವಂಶಿ ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಹಂತಕರು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನರಿತ ಸೋನಮ್ ನಿರ್ಜನ ಪ್ರದೇಶ ಕಾಣಿಸಿದಂತೆ ಆಯಾಸವಾದಂತೆ ನಟಿಸಿದ್ದಳು. ಆಗ ಹಂತಕರನ್ನು ಕೊಲೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಹಂತಕರು ತಾವು ಆಯಾಸಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಸೋನಮ್ ಸುಪಾರಿ ಹಣವನ್ನು 4 ಲಕ್ಷ ರೂ.ದಿಂದ 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು. ಜೊತೆಗೆ ಕೊಲೆಯಾದ ಬಳಿಕ ತನ್ನ ಪತಿ ಹಣವನ್ನು ಕಂದಕಕ್ಕೆ ಎಸೆಯಲು ಹಂತಕರಿಗೆ ಸಹಾಯ ಮಾಡಿದ್ದಳು ಎಂದು ವರದಿಯಾಗಿದೆ. ಇದನ್ನೂ ಓದಿ: Bengaluru | ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಭೀಕರ ಹತ್ಯೆ

  • ಇಂದು ಮಧ್ಯರಾತ್ರಿ ಮೇಘಾಲಯಕ್ಕೆ ಹಂತಕಿ ಸೋನಮ್

    ಇಂದು ಮಧ್ಯರಾತ್ರಿ ಮೇಘಾಲಯಕ್ಕೆ ಹಂತಕಿ ಸೋನಮ್

    ಶಿಲ್ಲಾಂಗ್: ಹನಿಮೂನ್‌ನಲ್ಲಿ ಪತಿಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಧ್ಯರಾತ್ರಿ ಹಂತಕಿ ಸೋನಮ್‌ನ್ನು ಪೊಲೀಸರು ಮೇಘಾಲಯಕ್ಕೆ (Meghalaya) ಕರೆತರಲಿದ್ದಾರೆ.

    ಸದ್ಯ ಈಗ ಸೋನಮ್ ಕೋಲ್ಕತ್ತಾದಲ್ಲಿ (Kolkatta) ಇದ್ದು ವಿಮಾನದ ಮೂಲಕ ಮೇಘಾಲಯ ಪೊಲೀಸರು ಶಿಲ್ಲಾಂಗ್‌ಗೆ (Shillong) ಕರೆತರುತ್ತಿದ್ದಾರೆ.ಇದನ್ನೂ ಓದಿ: ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು

    ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣ ಸದ್ಯ ದೇಶಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲಿ ಹನಿಮೂನ್‌ಗೆ ಕರೆದೊಯ್ದು ಪತಿಯನ್ನು ಹತ್ಯೆಗೈದ ಆರೋಪಿ ಪತ್ನಿ ಸೋನಂ ರಘುವಂಶಿಯ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ.

    ಕೊಲೆ ಬಳಿಕ ವಾರಣಾಸಿಯ ಡಾಬಾವೊಂದರ ಬಳಿ ಸೋನಮ್‌ನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ನಂತರ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಮೇಘಾಲಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಬೆಳಿಗ್ಗೆ ಮೇಘಾಲಯ ಪೊಲೀಸರು ಆಕೆಯನ್ನು ಬಿಹಾರದ ಪಾಟ್ನಾದ ಫುಲ್ವರಿ ಷರೀಫ್ ಠಾಣೆಗೆ ಕರೆತಂದಿದ್ದು, ಮಂಗಳವಾರ ಮಧ್ಯರಾತ್ರಿ ಮೇಘಾಲಯ ತಲುಪಲಿದ್ದಾರೆ.

    ಇನ್ನುಳಿದ ನಾಲ್ವರು ಆರೋಪಿಗಳಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್, ರಾಜ್ ಸಿಂಗ್ ಕುಶ್ವಾಹ ಹಾಗೂ ಆನಂದ್‌ನನ್ನು ಹೆಚ್ಚಿನ ತನಿಖೆಗಾಗಿ ಶಿಲ್ಲಾಂಗ್‌ಗೆ ಕರೆದೊಯ್ದಿದ್ದಾರೆ.ಇದನ್ನೂ ಓದಿ: `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

    ಏನಿದು ಪ್ರಕರಣ?
    ಇಂದೋರ್ (Indore) ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

    ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

  • ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು

    ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು, ನನ್ನ ಅಣ್ಣನನ್ನು ಯಾಕೆ ಕೊಂದ್ಲು?- ಹತ್ಯೆಯಾದ ರಘುವಂಶಿ ಸಹೋದರಿ ಕಣ್ಣೀರು

    ನವದೆಹಲಿ: ನನ್ನ ಅಣ್ಣ ಬೇಡ ಎನಿಸಿದ್ದರೆ ಲವ್ವರ್‌ ಜೊತೆಯೇ ಓಡಿ ಹೋಗಬಹುದಿತ್ತು. ಕೊಲೆ ಯಾಕೆ ಮಾಡಿದಳು ಎಂದು ಪತ್ನಿಯಿಂದ ಹತ್ಯೆಯಾದ ರಾಜಾ ರಘುವಂಶಿ ಸಹೋದರಿ ಶ್ರಾಸ್ತಿ ಅಳಲು ತೋಡಿಕೊಂಡಿದ್ದಾರೆ.

    ಸೋನಮ್‌ ಎಂಬಾಕೆ ತನ್ನ ಪತಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೊಲೆಯಾದ ಉದ್ಯಮಿ ರಾಜಾ ರಘುವಂಶಿ ನೆನೆದು ಸಹೋದರಿ ಕಣ್ಣೀರಿಟ್ಟಿದ್ದಾರೆ. ಕೊಲೆಗಾರ್ತಿ ಅತ್ತಿಗೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

    ನನ್ನ ಸಹೋದರ, ಸೋನಮ್ ಜೊತೆ ಏಳು ಜನ್ಮಗಳ ಕಾಲ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ. ಆದರೆ, ಅವಳು ಅವನ ಜೊತೆ ಏಳು ದಿನಗಳು ಕೂಡ ಇರಲು ಸಾಧ್ಯವಾಗಲಿಲ್ಲ. ಅವನು ನಿಮಗೆ ಏನು ಮಾಡಿದ್ದ? ಯಾಕೆ ಕೊಂದಿರಿ ಎಂದು ರಾಜಾ ಸಹೋದರಿ ಪ್ರಶ್ನಿಸಿದ್ದಾಳೆ.

    ನೀನು ಬೇರೆಯವರನ್ನು ಇಷ್ಟಪಟ್ಟಿದ್ದರೆ ಓಡಿಹೋಗಬಹುದಿತ್ತು. ನೀನು ಅವನನ್ನು ಏಕೆ ಕೊಂದೆ? ನೀನು ಇನ್ನೊಬ್ಬರ ಸಹೋದರನನ್ನು, ಮತ್ತೊಬ್ಬರ ಮಗನನ್ನು ಏಕೆ ಕೊಂದೆ ಎಂದು ಅಳುತ್ತಾ ಕೇಳಿದ್ದಾರೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ಹೋದರು. ಮೂರು ದಿನಗಳ ನಂತರ ಇಬ್ಬರೂ ನಾಪತ್ತೆಯಾಗಿದ್ದರು. ಜೂನ್ 2 ರಂದು ರಾಜಾ ಶವ ಪತ್ತೆಯಾಗಿತ್ತು. ಮಚ್ಚಿನಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಕೊಲೆ ಆರೋಪದ ಮೇಲೆ 24 ವರ್ಷದ ಸೋನಮ್, ಆಕೆಯ ಪ್ರಿಯಕರ ರಾಜ್ ಮತ್ತು ಅವರ ಇಬ್ಬರು ಸಹಾಯಕರಾದ ಆಕಾಶ್ ರಜಪೂತ್ ಹಾಗೂ ವಿಶಾಲ್ ಸಿಂಗ್ ಚೌಹಾಣ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

  • `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

    `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!

    – ಪ್ರಿಯತಮೆಯ ‘ವಿಧವಾ ಪ್ಲ್ಯಾನ್’ಗೆ ಒಪ್ಪಿಗೆ ನೀಡಿದ್ದ ಪ್ರಿಯಕರ ರಾಜ್

    ಶಿಲ್ಲಾಂಗ್‌: ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ (Sonam Raghuvanshi) ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ʻಬಾ ನಲ್ಲ ಮಧುಚಂದ್ರಕೆʼ ಅಂತ ಕರೆದೊಯ್ದು ಗಂಡನಿಗೆ ಚಟ್ಟಿದ ಸೋನಂ ಪ್ರಿಯಕರನಿಗಾಗಿ ವಿಧವೆ ಆಗೋದಕ್ಕೂ ರೆಡಿ ಇದ್ದಳಂತೆ ಅನ್ನೋದು ಪೊಲೀಸರ (Meghalaya Police) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ವಿಧವೆಯಾಗಿ ನಿನ್ನನ್ನೇ ಮದ್ವೆಯಾಗ್ತೀನಿ
    ಹೌದು. ಅಸಲಿಗೆ ರಾಜ ರಘುಂವಶಿಯನ್ನ (Raja Raghuvanshi) ಕೊಂದು ಇಡೀ ಪ್ರಕರಣವನ್ನ ದರೋಡೆಯಂತೆ ಬಿಂಬಿಸುವುದು ಪ್ಲ್ಯಾನ್‌ ಆಗಿತ್ತು. ಸೋಮಂ ಕೂಡ ಈ ಬಗ್ಗೆ ಪ್ರಿಯಕರ ರಾಜ್‌ ಕುಶ್ವಾಹಗೆ (Raj Kushwaha) ತಿಳಿಸಿದ್ದಳು. ರಾಜನನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆಯಾದ್ಮೇಲೆ ನನ್ನ ತಂದೆ ನನ್ನನ್ನ ನಿನಗೇ ಕೊಟ್ಟು ಮದುವೆ ಮಾಡ್ತಾರೆ ಅಂತಲೂ ಹೇಳಿದ್ದಳಂತೆ ವಂಚಕಿ. ಇದಕ್ಕೆ ರಾಜ್‌ ಸಹ ಒಪ್ಪಿಕೊಂಡಿದ್ದನಂತೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸೋನಂ ಮಾಸ್ಟರ್‌ ಪ್ಲ್ಯಾನ್‌ ಏನಿತ್ತು?
    ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್‌, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್‌ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    ರಾಜ್‌ ತಾಯಿ ಹೇಳೋದೇನು?
    ಸೋನಂ ಪ್ರಿಯಕರ ರಾಜ್‌ ಕುಶ್ವಾಹನ ತಾಯಿ ಮಾತನಾಡಿ, ನನ್ನ ಮಗ ನಿರಪರಾಧಿ, ಮುಗ್ಧ ಅಂತ ಕಣ್ಣೀರಿಟ್ಟಿದ್ದಾರೆ. ಅವನಿಗಿನ್ನೂ 20 ವರ್ಷ, ನನ್ನ ಮಗ ಆ ರೀತಿ ಮಾಡುವುದಿಲ್ಲ. ಒಂದೇ ಕಾರ್ಖಾನೆಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ದರಿಂದ ಮಾತನಾಡುತ್ತಿದ್ದರು ಅಷ್ಟೇ. ನಮ್ಮ ಮಗ ಮುಗ್ಧ ಅನ್ನೋದನ್ನ ಸಾಬೀತುಪಡಿಸುಂತೆ ಸರ್ಕಾರಕ್ಕೆ ಮನವಿ ಮಾಡ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಸಂಭವಿಸಿದಾಗ ನಮ್ಮನ್ನ ರಕ್ಷಿಸಿಕೊಳ್ಳೋದು ಹೇಗೆ? – ಈ ಸಣ್ಣ ತಂತ್ರವೂ ಅಮೂಲ್ಯವಾದ ಜೀವ ಉಳಿಸುತ್ತೆ

    ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
    ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

    ಪತ್ನಿಗೆ ಚಟ್ಟಕಟ್ಟಿದ್ದೇಕೆ?
    ಸೋನಮ್‌ಗೆ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

    ಫೋನ್‌ಕಾಲ್‌ನಲ್ಲೇ ಪಿನ್-ಟು-ಪಿನ್ ಅಪ್ಡೇಟ್
    ರಾಜಾ ರಘುವಂಶಿಯನ್ನ ಕೊಲೆ ಮಾಡಲು ರಾಜ್ ಖುದ್ದು ಶಿಲ್ಲಾಂಗ್‌ಗೆ ಹೋಗಿರಲಿಲ್ಲ. ಆರೋಪಿಗಳು, ಸೋನಮ್ ಮತ್ತು ರಾಜ್ ಪರಸ್ಪರ ಫೋನ್‌ನಲ್ಲೇ ಸಂಪರ್ಕದಲ್ಲಿದ್ದರು. ಸೋನಮ್ ಬಳಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್ ಪಡೆದುಕೊಂಡು ನೇಮಿಸಿದ್ದ ಕಾಂಟ್ರ‍್ಯಾಕ್ಟ್ ಕಿಲ್ಲರ್‌ಗಳಿಗೆ ಫೋನ್ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಡ್ತಿದ್ದ. ಸೋನಮ್ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ.

  • Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    – ಡಾಬಾ ಮಾಲೀಕನ ಮುಂದೆಯೂ ಸೋನಂ ಸುಳ್ಳಿನ ನಾಟಕ
    – ತಂದೆ ಫ್ಯಾಕ್ಟರಿಯಲ್ಲೇ ಸೋನಮ್‌-ರಾಜ್‌ ಸರಸ

    ಶಿಲ್ಲಾಂಗ್‌: ಮೇಘಾಲಯದಲ್ಲಿ (Meghalaya) ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಬಗೆದಷ್ಟೂ ರೋಚಕ ಸಂಗತಿಗಳನ್ನು ಬಯಲಾಗುತ್ತಿವೆ. ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿ ವಿಚಾರಣೆ ಶುರು ಮಾಡಿದ ಬಳಿಕ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ. ಬಾಯ್‌ಫ್ರೆಂಡ್‌ (Boyfriend) ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಸೋನಮ್‌ ಕೊಲೆಗೆ ಹೇಗೆಲ್ಲಾ ಪ್ಲ್ಯಾನ್‌ ಮಾಡಿದ್ದಳು ಅನ್ನೋದು ಗೊತ್ತಾಗಿದೆ… ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

    ತಪ್ಪೊಪ್ಪಿಕೊಂಡ ಸೋನಮ್‌

    ಇಂದೋರ್‌ನ (Indore) ರಾಜ ರಘುವಂಶಿ ಕೊಲೆ ಪ್ರಕರಣದಲ್ಲಿ (Honeymoon Murder Case) ಆರೋಪಿ ಪತ್ನಿ ಸೋನಂ ರಘುವಂಶಿಯನ್ನ ಉತ್ತರ ಪ್ರದೇಶದ ಘಾಜಿಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಕೊಲೆಯಲ್ಲಿ ಭಾಗಿಯಾಗಿಯಾಗಿದ್ದ ಮೂವರು ಕಾಂಟ್ರ್ಯಾಕ್ಟ್‌ ಕಿಲ್ಲರ್‌ ಹಾಗೂ ಆಕೆಯ ಬಾಯ್‌ಫ್ರೆಂಡ್‌ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ರಾಜ್‌ ಕುಶ್ವಾಹ್‌ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೋನಮ್‌ ಕೊಲೆ ಮಾಡಲೆಂದೇ ಹನಿಮೂನ್‌ಗೆ ಪ್ಲ್ಯಾನ್‌ ಮಾಡಿದ್ದಳು ಎಂದು ಹೇಳಲಾಗಿದೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

    ಫೋನ್‌ಕಾಲ್‌ನಲ್ಲೇ ಪಿನ್‌-ಟು-ಪಿನ್‌ ಅಪ್ಡೇಟ್‌

    ರಾಜಾ ರಘುವಂಶಿಯನ್ನ ಕೊಲೆ ಮಾಡಲು ರಾಜ್‌ ಖುದ್ದು ಶಿಲ್ಲಾಂಗ್‌ಗೆ ಹೋಗಿರಲಿಲ್ಲ. ಆರೋಪಿಗಳು, ಸೋನಮ್‌ ಮತ್ತು ರಾಜ್‌ ಪರಸ್ಪರ ಫೋನ್‌ನಲ್ಲೇ ಸಂಪರ್ಕದಲ್ಲಿದ್ದರು. ಸೋನಮ್‌ ಬಳಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್‌ ಪಡೆದುಕೊಂಡು ನೇಮಿಸಿದ್ದ ಕಾಂಟ್ರ್ಯಾಕ್ಟ್‌ ಕಿಲ್ಲರ್‌ಗಳಿಗೆ ಫೋನ್‌ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಡ್ತಿದ್ದ. ಸೋನಮ್‌ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಎಸ್ಕೇಪ್‌

    ನಂತರ ಚಿರಾಪುಂಜಿಯಿಂದ ಸೋನಮ್, ಆಕಾಶ್, ವಿಶಾಲ್ ಮತ್ತು ಆನಂದ್ ಶಿಲ್ಲಾಂಗ್‌ಗೆ ಬಂದಿದ್ದಾರೆ, ಅಲ್ಲಿಂದ ನೇರವಾಗಿ ಗುವಾಹಟಿಗೆ ಹೋಗಿದ್ದಾರೆ. ಎಲ್ಲರೂ ಒಂದು ದಿನ ಗುವಾಹಟಿಯಲ್ಲೇ ಕಳೆದು, ಕೊಲೆಗೆ ಬಳಸಿದ್ದ ಆಯುಧಗಳನ್ನು ಬಚ್ಚಿಟ್ಟಿದ್ದಾರೆ. ಮರುದಿನ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಎಸ್ಕೇಪ್‌ ಆಗಿದ್ದಾರೆ. ಬಹಳ ಹುಡುಕಾಡಿದ ಬಳಿಕ ರಘುವಂಶಿಯ ದೇಹ ಪತ್ತೆಯಾಗಿತ್ತು, ಮುಖದ ಗುರುತಿ ಸಿಗದಂತೆ ವಿಕೃತವಾಗಿ ಕೊಲೆ ಮಾಡಿದ್ದ ಕಾರಣ ಕೈ ಮೇಲಿನ ಟ್ಯಾಟೂ ನೋಡಿ ಪತ್ತೆ ಮಾಡಲಾಯಿತು. 2-3 ದಿನ ಕಳೆದ್ರೂ ಪತ್ನಿ ಸೋನಮ್‌ಳ ಮೃತದೇಹ ಪತ್ತೆಯಾಗದ ಕಾರಣ ಪೊಲೀಸರಿಗೆ ಕೊಲೆ ಸಂಶಯ ಹುಟ್ಟಿಕೊಂಡಿತ್ತು. ಪ್ರಾಥಮಿಕ ತನಿಖೆ ವೇಳೆಯೇ ಸೋನಮ್‌ ಇನ್ನೂ ಜೀವಂತವಾಗಿದ್ದಾಳೆ ಎಂಬುದು ಪೊಲೀಸರಿಗೆ ಖಚಿತವಾಯಿತು. ಜೊತೆಗೆ ರಾಜನ ಕೊಲೆಯ ಹಿಂದೆ ಇವಳದ್ದೇ ಪ್ರಮುಖ ಪಾತ್ರ ಇರಬಹುದು ಎಂಬ ಅನುಮಾನವೂ ಇತ್ತು. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

    ಕಾಲ್‌ ಡೀಟೆಲ್ಸ್‌ ರಹಸ್ಯ

    ಬಳಿಕ ಪೊಲೀಸರು ಸೋನಮ್‌ಳ ಫೋನ್‌ಕಾಲ್‌ ಡೀಟೆಲ್ಸ್‌ ಪರಿಶೀಲಿಸಿದ ಬಳಿಕ ಆಕೆ ರಾಜ್‌ ಕುಶ್ವಾಹ ಜೊತೆಗೆ ನಿರಂತರ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಯಿತು. ಇವರಿಬ್ಬರ ನಡುವೆ ಅಕ್ರಮ ಸಂಬಂಧ ಇರುವುದೂ ತಿಳಿದುಬಂದಿತ್ತು. ಇಲ್ಲಿಂದ ತನಿಖೆ ಮತ್ತಷ್ಟು ಚುರುಕುಗೊಂಡಿತು. ಶಿಲ್ಲಾಂಗ್‌ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ನೆರೆಯ ರಾಜ್ಯಗಳಲ್ಲೂ ತಪಾಸಣೆ ಶುರು ಮಾಡಿದ್ರು. ಲಲಿತಪುರದಲ್ಲಿ ನಡೆದ ಮೊದಲ ಕಾರ್ಯಾಚರಣೆಯಲ್ಲೇ ಆರೋಪಿ ಆಕಾಶ್ ರಜಪೂತ್‌ನನ್ನ ಬಂಧಿಸಿದರು. ನಂತರ ರಾಜ್ ಕುಶ್ವಾಹ ಮತ್ತು ವಿಶಾಲ್‌ನನ್ನ ಇಂದೋರ್‌ನಲ್ಲಿ, ಸೋನಮ್‌ನನ್ನ ಘಾಜಿಪುರದಲ್ಲಿ, 5ನೇ ಆರೋಪಿ ಆನಂದ್‌ ಸಾನರ್‌ನಲ್ಲಿ ಬಂಧಿಸಿದ್ರು. ಸದ್ಯ ಸ್ಥಳೀಯ ಪೊಲೀಸರ ಕಾನೂನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಆರೋಪಿಗಳನ್ನು ಶಿಲ್ಲಾಂಗ್‌ಗೆ ಕರೆತರಲಾಗುತ್ತದೆ, ಬಳಿಕ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಸುಳ್ಳಿನ ನಾಟಕವಾಡಿದ್ದ ಸೋನಂ

    ಇಂದು (ಜೂ.9) ತಡರಾತ್ರಿ 1:42ರ ವೇಳೆ ಘಾಜಿಪುರ ಜಿಲ್ಲೆಯ ನಂದಗಂಜ್‌ನ ಡಾಬಾದಲ್ಲಿ ಮಹಿಳೆಯೊಬ್ಬರು ಭಯಭೀತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಬಂದಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆಕೆ ತನ್ನನ್ನ ಸೋನಮ್‌ ಎಂದು ಗುರುತಿಸಿಕೊಂಡಳು. ತನ್ನ ಪತಿಯೊಂದಿಗೆ ಮೇಘಾಲಯಕ್ಕೆ ಹೋಗಿರುವುದಾಗಿ ಹೇಳಿಕೊಂಡಿದ್ದಳು, ಡಾಬಾ ಮಾಲೀಕನ ಮುಂದೆಯೂ ಸುಳ್ಳಿನ ನಾಟಕವಾಡಿದ್ದಳು. ಅಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ತನ್ನ ಪತಿಯನ್ನು ಕೊಂದರು. ಬಳಿಕ ನನ್ನನ್ನ ಕಿಡ್ನ್ಯಾಪ್‌ ಮಾಡಿ ಇಲ್ಲಿ ಬಿಟ್ಟುಹೋದ್ರು ಎಂದು ಕಥೆ ಕಟ್ಟಿದ್ದಳು.

    ಪ್ರೀ ಪ್ಲ್ಯಾನ್ಡ್‌ ಮರ್ಡರ್‌

    ಕಿಡ್ನ್ಯಾಪ್‌ ಮಾಡಿದ್ಮೇಲೆ ನನ್ನ ಚಿನ್ನಾಭರಣ ದೋಚಿದ್ರು, ಪ್ರಜ್ಞೆ ಬಂದುತ್ತಿದ್ದಂತೆ ಘಾಗಿಪುರದ ಡಾಬಾ ಬಳಿ ಕತ್ತಲೆ ಕೋಣೆಯಲ್ಲಿ ಬಿಟ್ಟು ಹೋದ್ರು ಅಂತೆಲ್ಲ ಕಥೆ ಕಟ್ಟಿದ್ದಳು. ಆದ್ರೆ ಪೊಲೀಸರು ಇದ್ಯಾವುದನ್ನೂ ನಂಬಲಿಲ್ಲ. ಕೊಲೆಗಾರರು ಪತ್ತೆಯಾದ ಕೆಲವೇ ಸಮಯದಲ್ಲಿ ಸೋನಮ್‌ ಕೂಡ ಕಾಣಿಸಿಕೊಂಡಿದ್ದರಿಂದ ಅನುಮಾನ ಹೆಚ್ಚಾಗಿಯೇ ಇತ್ತು. ಆಕೆಯನ್ನು ಬಂಧಿಸಿದ ಬಳಿಕ ಇದು ಪೂರ್ವಯೋಜನೆಯಾಗಿತ್ತು ಎಂಬುದನ್ನು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸಿಮ್ ಬಹಿರಂಗಪಡಿಸಿದ್ದಾರೆ.

    ಸೋನಮ್‌ ತಂದೆ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ಬಾಯ್‌ಫ್ರೆಂಡ್‌

    ಸೋಮನ್‌ ತಂದೆ ದೇವಿಸಿಂಗ್‌ ಇಂದೋರ್‌ನಲ್ಲಿ ಸಣ್ಣ ಪ್ಲೈವುಡ್‌ ಕಾರ್ಖಾನೆಯೊಂದನ್ನ ಹೊಂದಿದ್ದಾರೆ. ರಾಜ್‌ ಕುಶ್ವಾಹ ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿದ್ದ. ಸೋನಮ್‌ಗಿಂತ 5 ವರ್ಷ ಚಿಕ್ಕವನಿದ್ದ. ಸೋನಮ್‌ ಆಗಾಗ್ಗೆ ಕಾರ್ಖಾನೆಗೆ ಬರುತ್ತಿದ್ದಳು, ಈ ವೇಳೆ ಇಬ್ಬರಿಗೂ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಇವರಿಬ್ಬರು ಸರಸವಾಡೋದನ್ನ ಕೆಲವೊಮ್ಮೆ ಇತರ ಕಾರ್ಮಿಕರು ನೋಡಿದ್ದರು. ಆದ್ರೆ ಮದುವೆ ಜೀವನ ಹಾಳು ಮಾಡೋದು ಬೇಡ ಅಂತ ಸುಮ್ಮನಾಗಿದ್ದರಂತೆ. ಇದೀಗ ರಾಜ್‌ ಅರೆಸ್ಟ್‌ ಆದ ನಂತರ ಈ ಎಲ್ಲ ಮಾಹಿತಿಗಳು ಬಹಿರಂಗಗೊಂಡಿದೆ.

    ಸ್ಫೋಟಕ ತಿರುವು ನೀಡಿದ ಟೂರಿಸ್ಟ್ ಗೈಡ್‌ ಹೇಳಿಕೆ

    ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು.

    ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.

  • ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯ‌ದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್‌ ಬಗ್ಗೆ ಬಿಚ್ಚಿಟ್ಟ ಅತ್ತೆ

    – ಹನಿಮೂನ್‌ಗೆ ಹೋಗಿದ್ದ ಉದ್ಯಮಿ ತನ್ನ ಪತ್ನಿಯಿಂದಲೇ ಕೊಲೆ ಕೇಸ್‌

    ಶಿಲ್ಲಾಂಗ್‌: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ ಹೊರಡುವಾಗ ನನ್ನ ಮಗ 10 ಲಕ್ಷ ಮೌಲ್ಯದ ಆಭರಣ ಧರಿಸುವಂತೆ ಸೊಸೆ ಒತ್ತಾಯಿಸಿದ್ದಳು. ಅದರಂತೆ ಅವನು ಆಭರಣ ಧರಿಸಿದ್ದ ಎಂದು ಹತ್ಯೆಗೀಡಾದ ಉದ್ಯಮಿ ರಾಜಾ ರಘುವಂಶಿ ತಾಯಿ ಉಮಾ ಕಣ್ಣೀರಿಟ್ಟಿದ್ದಾರೆ.

    ಸೋನಮ್‌ ಎಂಬಾಕೆಯನ್ನು ರಾಜಾ ರಘುವಂಶಿ ಮದುವೆಯಾಗಿದ್ದರು. ವಿವಾಹವಾದ ಒಂದು ವಾರದ ಬೆನ್ನಲ್ಲೇ ನವಜೋಡಿ ಹನಿಮೂನ್‌ಗೆಂದು (Honeymoon Murder) ಶಿಲ್ಲಾಂಗ್‌ ಪ್ರವಾಸ ಕೈಗೊಂಡಿದ್ದರು. ಆದರೆ, ಸೋನಮ್‌ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ ಪೊಲೀಸರ ಅತಿಥಿಯಾಗಿದ್ದಾಳೆ. ಇದನ್ನೂ ಓದಿ: ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

    ಈ ಕುರಿತು ರಘುವಂಶಿ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಸೊಸೆ ಸೋನಮ್ ರಘುವಂಶಿ ಮೇಘಾಲಯಕ್ಕೆ ಹನಿಮೂನ್ ಪ್ರವಾಸಕ್ಕಾಗಿ ಪ್ರಯಾಣ ಮತ್ತು ವಾಸ್ತವ್ಯ ಸೇರಿದಂತೆ ಎಲ್ಲಾ ಬುಕಿಂಗ್‌ಗಳನ್ನು ಮಾಡಿದ್ದಳು. ಆದರೆ, ರಿಟರ್ನ್ ಟಿಕೆಟ್ ಬುಕ್ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

    ಸೋನಂ ಪ್ರವಾಸಕ್ಕೆ ಟಿಕೆಟ್ ಬುಕ್ ಮಾಡಿದ್ದಳು. ನನ್ನ ಮಗನಿಗೆ ಶಿಲ್ಲಾಂಗ್ ಪ್ರದೇಶದ ಬಗ್ಗೆ ತಿಳಿದಿರದ ಕಾರಣ ಅವಳು ಶಿಲ್ಲಾಂಗ್‌ಗೆ ಪ್ರವಾಸಕ್ಕೆ ಪ್ಲಾನ್‌ ಮಾಡಿದ್ದಳು. ರಾಜಾ 10 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಧರಿಸಿದ್ದ. ಅದಕ್ಕೆ ಕಾರಣ ಸೋನಮ್.‌ ಚಿನ್ನಾಭರಣ ಧರಿಸುವಂತೆ ಅವನಿಗೆ ಒತ್ತಾಯಿಸಿದ್ದಳು. ಅದರಲ್ಲಿ ವಜ್ರದ ಉಂಗುರ, ಸರ ಮತ್ತು ಬಳೆ ಇದ್ದವು ಎಂದು ರಾಜಾ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ಪ್ರವಾಸಕ್ಕೆ ಯಾಕೆ ಇಷ್ಟೊಂದು ಚಿನ್ನಾಭರಣ ಹಾಕ್ಕೊಂಡು ಹೋಗುತ್ತಿದ್ದೀಯ ಎಂದು ನನ್ನ ಪುತ್ರನ ಬಳಿ ಕೇಳಿದ್ದೆ. ಆಭರಣ ಧರಿಸಬೇಕು ಅಂತ ಸೋನಮ್‌ ಬಯಸಿದ್ದಾಳೆ. ಅದಕ್ಕೆ ಹಾಕ್ಕೊಂಡಿದ್ದೇನೆ ಎಂದು ಪ್ರವಾಸಕ್ಕೆ ಹೊರಡುವ ಮುನ್ನ ರಾಜಾ ನನಗೆ ಹೇಳಿದ್ದ ಎಂದು ತಿಳಿಸಿದ್ದಾರೆ.

    ಸೋನಮ್ ನನ್ನ ಜೊತೆ ಚೆನ್ನಾಗಿಯೇ ಇದ್ದಳು. ಒಂದುವೇಳೆ ಆಕೆ ಕೊಲೆಯಲ್ಲಿ ಭಾಗಿಯಾಗಿದ್ದರೆ, ಅವಳನ್ನು ಗಲ್ಲಿಗೇರಿಸಬೇಕು. ಸೋನಮ್ ಪತ್ತೆಯಾಗಿದ್ದಾಳೆಂದು ಪೊಲೀಸರು ಬೆಳಗ್ಗೆಯೂ ಹೇಳಿರಲಿಲ್ಲ. ಸಿಬಿಐ ತನಿಖೆ ನಡೆಯಬೇಕು ಎಂದು ರಾಜಾ ತಾಯಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

  • ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

    ಹನಿಮೂನ್‌ ಮರ್ಡರ್‌ | ನನ್ನ ಮಗಳು 100% ಮುಗ್ಧೆ – CBI ತನಿಖೆಗಾಗಿ ಅಮಿತ್ ಶಾಗೆ ಮನವಿ ಮಾಡ್ತೇನೆ: ಸೋನಮ್‌ ತಂದೆ

    – ಇದೆಲ್ಲವೂ ಮೇಘಾಲಯ ಪೊಲೀಸರ ಕಟ್ಟು ಕಥೆ
    – ಇಡೀ ಠಾಣೆ ಪೊಲೀಸರನ್ನೇ ಜೈಲಿಗೆ ಕಳಿಸ್ತೀನಿ; ಶಪಥ

    ಶಿಲ್ಲಾಂಗ್:‌ ನನ್ನ ಮಗಳು ಏಕೆ ಗಂಡನನ್ನ ಕೊಲ್ಲುವ ಕೆಲಸ ಮಾಡ್ತಾಳೆ. ಅವಳು 100% ಮುಗ್ಧೆ, ಈ ಪ್ರಕರಣವನ್ನ ಸಿಬಿಐ ತನಿಖೆಗೆ (CBI Investigation) ವಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರಿಗೆ ಮನವಿ ಮಾಡುತ್ತೇನೆ ಎಂದು ಕೊಲೆ ಆರೋಪಿ ಸೋನಮ್‌ ತಂದೆ ದೇವಿ ಸಿಂಗ್ ಹೇಳಿದ್ದಾರೆ.

    ಹನಿಮೂನ್‌ (Honeymoon Murder Case) ವೇಳೆ ಸುಪಾರಿ ಕೊಟ್ಟು ಗಂಡನನ್ನೇ ಕೊಲೆ ಮಾಡಿದ ಆರೋಪದ ಮೇಲೆ ಬಂಧಿತಳಾಗಿರುವ ಸೋನಮ್‌ ರಘುವಂಶಿಯ (Sonam Raghuvanshi) ತಂದೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮೇಘಾಲಯ ಪೊಲೀಸರು ಆರಂಭದಿಂದಲೂ ಸುಳ್ಳು ಹೇಳುತ್ತಲೇ ಬರ್ತಿದ್ದಾರೆ. ನನ್ನ ಮಗಳಿಗೆ ರಾಜ್‌ ಕುಶ್ವಾಹನೊಂದಿಗೆ ಸಂಬಂಧವಿತ್ತು ಎಂದು ಹೇಳ್ತಿದ್ದಾರೆ. ಆ ರಾಜ್‌ ಎಂಬ ಹುಡುಗನನ್ನು ನಾನು ನೋಡಿದ್ದೇನೆ, ನನ್ನೊಟ್ಟಿಗೆ ಕೆಲಸ ಮಾಡ್ತಿದ್ದ. ಆದ್ರೆ ಅವನೇ ಇವನು ಅಂತ ಹೇಳೋಕಾಗಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    ನನ್ನ ಮಗಳು ನಿರಪರಾಧಿ
    ಮುಂದುವರಿದು… ನನ್ನ ಮಗಳು ಈ ರೀತಿ ಎಲ್ಲ ಮಾಡೋಕೆ ಸಾಧ್ಯವೇ ಇಲ್ಲ, ಆದರೂ ಅವಳನ್ನ ಬಂಧಿಸಿದ್ದಾರೆ. ನೈಜ ಘಟನೆಯಿಂದ ಬೇರೆಡೆಗೆ ಗಮನ ಸೆಳೆಯಲು ಮೇಘಾಲಯ ಪೊಲೀಸರು ಕಥೆ ಕಟ್ಟಿದ್ದಾರೆ. ಆದ್ರೆ ವಾಸ್ತವಾಂಶ ಇದಕ್ಕೆ ಭಿನ್ನವಾಗಿದೆ. ಸಿಬಿಐ ತನಿಖೆ ನಡೆಸಿದ್ರೆ ಸತ್ಯ ಹೊರಬರುತ್ತೆ, ಇಡೀ ಠಾಣೆಯ ಪೊಲೀಸರೆಲ್ಲರೂ (Meghalaya Police) ಜೈಲಿಗೆ ಹೋಗ್ತಾರೆ. ಹಾಗಾಗಿ ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ನಾನು ಅಮಿತ್‌ ಶಾ ಅವರಿಗೆ ಮನವಿ ಮಾಡ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

    ನಾನು ಜೀವಂತವಾಗಿರುವವರೆಗೂ ಈ ಪ್ರಕರಣವನ್ನ ಇಲ್ಲಿಗೇ ಬಿಡಲ್ಲ, ಇಡೀ ಪೊಲೀಸ್‌ ಠಾಣೆ ಅಧಿಕಾರಿಗಳನ್ನ ಜೈಲಿಗಟ್ಟುವವರೆಗೂ ವಿಶ್ರಾಂತಿ ತೆಗೆದುಕೊಳ್ಳಲ್ಲ. ನನ್ನ ಮಗಳು 100% ಮುಗ್ಧೆ ಅವಳ ಮೇಲೆ ನಂಬಿಕೆ ಇದೆ. ಅವಳು ಆ ರೀತಿ ಮಾಡಲ್ಲ. ಇದು ಪೊಲೀಸರ ಕಟ್ಟು ಕಥೆ, ತನಿಖೆ ನಿಜವಾಗಿದ್ದರೆ, ಮುಂಚಿತವಾಗಿಯೇ ಮಾಧ್ಯಮಗಳಿಗೆ ಮಾಹಿತಿ ಹೇಗೆ ಸೋರಿಕೆಯಾಗ್ತಿತ್ತು ಅಂತಲೂ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
    ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

    ಪತ್ನಿಗೆ ಚಟ್ಟಕಟ್ಟಿದ್ದೇಕೆ?
    ಸೋನಮ್‌ಗೆ ಘಾಜಿಪುರದ ನಂದಗಂಜ್‌ನಲ್ಲಿ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು. ಇದನ್ನೂ ಓದಿ: ಮೈತೇಯಿ ಸಮುದಾಯದ ನಾಯಕ ಬಂಧನ – ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಯುವಕರ ಬೆದರಿಕೆ 

  • Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!

    – ʻಬಾ ನಲ್ಲೆ ಮಧುಚಂದ್ರಕೆʼ ಸಿನಿಮಾ ಸ್ಟೈಲ್‌ನಲ್ಲಿ ಪತ್ನಿಯಿಂದ ಕೊಲೆ
    – ತನಿಖೆಯ ದಿಕ್ಕನ್ನೇ ಬದಲಿಸಿದ ಟೂರಿಸ್ಟ್‌ ಗೈಡ್‌ ಹೇಳಿಕೆ
    – ಪತಿಯ ಹತ್ಯೆಗೆ ಪತ್ನಿಯಿಂದಲೇ ಸುಪಾರಿ

    ಶಿಲ್ಲಾಂಗ್‌: ಕಳೆದ ಮೇ 23ರಂದು ಹನಿಮೂನ್ ಸಲುವಾಗಿ ಮೇಘಾಲಯದ (Meghalaya) ಚಿರಾಪುಂಜಿಗೆ ಪ್ರಯಾಣ ಬೆಳೆಸಿದ್ದ ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ (Raja Raghuvanshi Murder) ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಆತನ ಪತ್ನಿಯೇ ಸುಪಾರಿ ಕೊಟ್ಟು ಬಾಡಿಗೆ ಕೊಲೆಗಾರರ ಸಹಾಯದಿಂದ ಪತಿಯನ್ನ ಕೊಲೆ ಮಾಡಿದ್ದಾಳೆ ಎಂಬುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

    ಕಳೆದ ವಾರ ರಾಜಾ ರಘುವಂಶಿ ಅವರ ಮೃತದೇಹ ಮೇಘಾಲಯದಲ್ಲಿ ಕಂದಕದಲ್ಲಿ ಪತ್ತೆಯಾಗಿತ್ತು. ಟ್ಯಾಟೂ ಗುರುತಿನಿಂದ ರಘುವಂಶಿ ಗುರುತನ್ನು ಪತ್ತೆ ಮಾಡಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಪತಿಯ ಕೊಲೆಗೆ ಸಂಬಂಧಿಸಿ ಪತ್ನಿ ಸೋನಮ್‌ಳನ್ನ (Sonam Raghuvanshi) ಉತ್ತರ ಪ್ರದೇಶದ ಘಾಜಿಪುರದಲ್ಲಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಪತ್ನಿಯೇ ಸುಪಾರಿ ಕೊಟ್ಟು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಸೋನಮ್‌ ಸಂಪರ್ಕವನ್ನು ಪೊಲೀಸರು ಪರಿಶೀಲಿಸಲು ಮುಂದಾಗಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಮೇಘಾಲಯ ಪೊಲೀಸ್ ಮಹಾನಿರ್ದೇಶಕಿ ಇದಶಿಶಾ ನೊಂಗ್ರಾಂಗ್, ಸೋನಮ್ ತನ್ನ ಪತಿಯ ಕೊಲೆಯ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಮತ್ತು ಕೊಲೆಗೆ ಬಾಡಿಗೆ ಹಂತಕರನ್ನು ನೇಮಿಸಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್ ಮತ್ತು ಮಧ್ಯಪ್ರದೇಶ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
    ಇಂದೋರ್ (Indore) ಮೂಲದ ರಾಜಾ ರಘುವಂಶಿ ಮತ್ತು ಸೋನಮ್‌ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

    ಪತ್ನಿಗೆ ಚಟ್ಟಕಟ್ಟಿದ್ದೇಕೆ?
    ಸೋನಮ್‌ಗೆ ಘಾಜಿಪುರದ ನಂದಗಂಜ್‌ನಲ್ಲಿರುವ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು.

    ಟೂರಿಸ್ಟ್‌ ಗೈಟ್‌ ಸ್ಫೋಟಕ ಹೇಳಿಕೆಯಿಂದ ಸಿಕ್ಕ ಸುಳಿವು
    ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು.

    ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.

    ಆದರೆ ಸೋನಮ್ ತಂದೆ ತನ್ನ ಮಗಳು ರಾಜಾ ರಘುವಂಶಿ ಕೊಲೆ ಮಾಡಿದ್ದಾಳೆ ಎಂಬ ಆರೋಪವನ್ನು ತಿರಸ್ಕರಿಸಿದ್ದಾರೆ. ಮೇಘಾಲಯ ಪೊಲೀಸರು ಕಥೆ ಕಟ್ಟುತ್ತಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸದ್ಯ ಈ ಕೊಲೆಯ ಮೂಲವನ್ನು ಪೊಲೀಸರು ಬೇಧಿಸಿದ್ದು ರಾಜಾ ರಘುವಂಶಿ ಕುಟುಂಬಸ್ಥರು ನ್ಯಾಯದ ನಿರೀಕ್ಷೆಯಲ್ಲಿದ್ದಾರೆ.

    ತನಿಖೆಗೆ ಎಸ್‌ಐಟಿ ರಚನೆ
    ಇನ್ನೂ ಈ ಪ್ರಕರಣದ ತನಿಖೆ ನಡೆಸಲು ಮೇಘಾಲಯ ಪೊಲೀಸರು ವಿಶೇಷ ತನಿಖಾ ತಂಡವನ್ನ ರಚಿಸಿದ್ದು, ಈವರೆಗೆ ಮೂವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗೆ ಹುಡುಕಾಟ ನಡೆಸಲಾಗುತ್ತಿದ್ದು, ಸೋನಮ್‌ ಬಗೆಗಿನ ಸ್ಫೋಟಕ ರಹಸ್ಯಗಳನ್ನೂ ಬಯಲಿಗೆಳೆಯುತ್ತಿದ್ದಾರೆ.

  • ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

    ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

    – ಪತಿಯ ಕೊಲೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧನ

    ಶಿಲ್ಲಾಂಗ್: ಹನಿಮೂನ್‌ಗೆಂದು ಮೇಘಾಲಯಕ್ಕೆ (Meghalaya) ತೆರಳಿದ್ದ ಇಂದೋರ್ ದಂಪತಿ (Indore Couple) ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಉತ್ತರ ಪ್ರದೇಶದ (Uttar Pradesh) ಗಾಜಿಪುರದಲ್ಲಿ ಪತ್ನಿಯನ್ನು ಬಂಧಿಸಲಾಗಿದೆ.

    ರಾಜಾ ರಘುವಂಶಿ (30) ಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ಮೇ 23ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು. ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್‌ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿತ್ತು. ಇದನ್ನೂ ಓದಿ: ಹಾಸನ| ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದು 6.30 ಲಕ್ಷ ಹಣ ಎಗರಿಸಿದ ಕಳ್ಳ

    ಗೈಡ್ ಹೇಳಿದ್ದೇನು?
    ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಲ್ತುಳಿತದಲ್ಲಿ ಗಾಯಗೊಂಡವರಿಗೆ ಡಿಸಿ ನೋಟಿಸ್ – ತನಿಖೆಗೆ ಹಾಜರಾಗುವಂತೆ 45 ಮಂದಿಗೆ ಸೂಚನೆ

    ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬಂಡೀಪುರದಲ್ಲಿ ಸಿದ್ಧವಾಯ್ತು ಟೈಗರ್ ರಿಸರ್ಚ್ ಮಾನಿಟರಿಂಗ್ ಸೆಲ್

  • ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್‌ – ಮೂವರು ಪುರುಷರೊಟ್ಟಿಗೆ ದಂಪತಿ ನೋಡಿದ್ದೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಗೈಡ್‌

    – ಟ್ಯಾಟೂನಿಂದ ಮೃತ ಪತಿಯ ಗುರುತು ಪತ್ತೆ
    – ಪತ್ನಿ ದೇಹಕ್ಕಾಗಿ ಮುಂದುವರಿದ ಶೋಧ

    ಶಿಲ್ಲಾಂಗ್: ಕಳೆದ ಮೇ 23ರಂದು ಹನಿಮೂನ್‌ ಸಲುವಾಗಿ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ನಾಪತ್ತೆ ಪ್ರಕರಣ ಪೊಲೀಸರಿಗೆ (Meghalaya Police) ದೊಡ್ಡ ತಲೆನೋವು ತಂದಿದೆ. ದಂಪತಿ ಪೈಕಿ ಪತಿಯ ಮೃತದೇಹ ಮಾತ್ರ ಪತ್ತೆಯಾಗಿದ್ದು, ಪತ್ನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ನಡುವೆ ಸ್ಥಳೀಯ ಗೈಡ್‌ (Tourist Guide) ದಂಪತಿ ಕುರಿತು ಸ್ಫೋಟಕ ಹೇಳಿಕೆಯೊಂದನ್ನ ನೀಡಿದ್ದಾರೆ. ಇದು ಪೊಲೀಸರನ್ನು ಮತ್ತಷ್ಟು ಸವಾಲಿನ ಕೆಲಸಕ್ಕೆ ದೂಡಿದೆ.

    ಇಂದೋರ್ (Indore) ಮೂಲದ ನವ ದಂಪತಿ ರಾಜಾ ರಘುವಂಶಿ (30) ಮತ್ತು ಸೋನಮ್ ರಘುವಂಶಿ (27) ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ಬಂದಿದ್ದರು. ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳು ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್‌ ಕೇಸ್‌ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಮೃತದೇಹವೊಂದು ಸಿಕ್ಕಿದ್ದು, ಆಗ ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು. ಆದ್ರೆ ಪತ್ನಿಯ ದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗಲೇ ಸ್ಥಳೀಯ ಗೈಡ್‌ವೊಬ್ಬರ ಹೇಳಿಕೆ ಪ್ರಕರಣಕ್ಕೆ ರೋಚಕ ತಿರುವು ನೀಡಿದೆ. ಇದನ್ನೂ ಓದಿ: ಎಲ್ರೂ ಬಂದು ಹೇಗಾಯ್ತು ಹುಷಾರಾಗಿ ಅಂತಾರೆ, ಪರಿಹಾರ ಮಾತ್ರ ಇಲ್ಲ: ಆರ್‌ಸಿಬಿ ಫ್ಯಾನ್ಸ್ ನೋವಿನ ಮಾತು

    ಗೈಡ್‌ ಬಿಚ್ಚಿಟ್ಟಿದ ರಹಸ್ಯ ಸಂಗತಿ ಏನು?
    ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು ಎಂದು ಹೇಳಿದ್ದಾರೆ. ಇದು ಪೊಲೀಸರ ತನಿಖೆಯನ್ನು ಮತ್ತಷ್ಟು ಸವಾಲಾಗಿಸಿದೆ. ಇದನ್ನೂ ಓದಿ: ರಷ್ಯಾದ ಏರ್‌ಬೇಸ್‌ ಉಡೀಸ್‌ ಮಾಡೋಕೆ ಉಕ್ರೇನ್ ಬಳಸಿದ FPV ಡ್ರೋನ್‌ ವಿಶೇಷವೇನು ಗೊತ್ತಾ?

    ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್‌ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ತೀವ್ರ ಪ್ರತಿಭಟನೆ – 5 ದಿನಗಳವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತ

    ಸೋನಮ್‌ ಕುಟುಂಬಸ್ಥರು ಹೇಳೋದೇನು?
    ಇನ್ನೂ ನಾಪತ್ತೆಯಾದ ಮಹಿಳೆ ಸೋನಮ್‌ ಸಹೋದರ ಗೋವಿಂದ್ ಮಾತನಾಡಿ, ಮೇಘಾಲಯ ಸರ್ಕಾರ ಈಗಾಗಲೇ ಈ ಪ್ರಕರಣವನ್ನು ಸಾಯಿಸಿದೆ ಎಂದು ಕಿಡಿ ಕಾರಿದರು. ಸೋನಮ್ ಜೀವಂತವಾಗಿದ್ದಾರೆಂದು ನಮಗೆ ಅನ್ನಿಸುತ್ತಿದೆ. ಆದ್ರೆ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕುತ್ತಿದೆ. ಪೊಲೀಸರು ಮಂದಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಕೂಡಲೇ ಈ ತನಿಖೆಯನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಬೆಂಕಿ ಬಿದ್ದರೂ ತಿಳಿಯದೇ ಟ್ರ್ಯಾಕ್ಟರ್‌ ಚಾಲನೆ- ನಾಲ್ವರು ಅಪಾಯದಿಂದ ಪಾರು

    ಇದಕ್ಕೆ ಪ್ರತಿಕ್ರಿಯಿಸಿರುವ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ, ಕಾಣೆಯಾದ ಮಹಿಳೆಯನ್ನು ಪತ್ತೆಹಚ್ಚಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದೇವೆ. ತರಬೇತಿ ಪಡೆದ ಶ್ವಾನಗಳು ಹಾಗೂ ವಿಶೇಷ ಉಪಕರಣಗಳೊಂದಿಗೆ ನಮ್ಮ ತಂಡಗಳು ದಣಿವರಿಯದೇ ಕೆಲಸ ಮಾಡುತ್ತಿವೆ. ಆದ್ರೆ ಇಲ್ಲಿನ ದಟ್ಟವಾದ ಭೂಪ್ರದೇಶ, ನಿರಂತರ ಮಳೆ ಮತ್ತು ಕಳಪೆ ಗೋಚರತೆಯು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.