Tag: meghalaya high court

  • 16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್

    16ನೇ ವಯಸ್ಸಿನವ್ರಿಗೆ ಲೈಂಗಿಕ ವಿಚಾರದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿದೆ: ಮೇಘಾಲಯ ಹೈಕೋರ್ಟ್

    ಶಿಲ್ಲಾಂಗ್: 16 ವರ್ಷ ವಯಸ್ಸಿನವರು ಲೈಂಗಿಕ ವಿಚಾರದ ಬಗ್ಗೆ ತಮ್ಮದೇ ಆದ ಪ್ರಜ್ಞಾಪೂರ್ವಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮೇಘಾಲಯ ಹೈಕೋರ್ಟ್ (Meghalaya High Court) ಹೇಳಿದೆ.

    ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ ಕಾಯ್ದೆ (POCSO) ಅಡಿಯಲ್ಲಿ ದಾಖಲಾಗಿದ್ದ ಎಫ್‍ಐಆರ್ (FIR) ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಯೆಂಗ್ಡೋ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ಮತ್ತು ಆಪಾದಿತ ಸಂತ್ರಸ್ತೆ ಪ್ರೀತಿಸುತ್ತಿದ್ದರಿಂದ ಇದು ಲೈಂಗಿಕ ದೌರ್ಜನ್ಯದ ಕೃತ್ಯವಲ್ಲ. ಸಂಪೂರ್ಣವಾಗಿ ಸಮ್ಮತಿಯಿಂದ ನಡೆದ ಕ್ರಿಯೆ ಎಂದು ಮನವಿಯಲ್ಲಿ ಹೇಳಲಾಗಿದೆ ಎಂದು ನ್ಯಾಯಾಲಯ ಉಲ್ಲೇಖಿಸಿದೆ. ಇದನ್ನೂ ಓದಿ: 1,500 ಮಹಿಳೆಯರಿಂದ ಸೇನಾ ವಾಹನಗಳಿಗೆ ಮುತ್ತಿಗೆ – 12 ದಾಳಿಕೋರರ ಬಿಡುಗಡೆ

    ನ್ಯಾಯಾಲಯವು ಹದಿಹರೆಯದವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಪರಿಶೀಲಿಸುತ್ತದೆ. ಅಂತಹ ವ್ಯಕ್ತಿಯು ತನ್ನ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಲು ಸಮರ್ಥನಾಗಿದ್ದಾರೆಯೇ ಎಂಬುದನ್ನು ಪರಿಗಣಿಸಲಾಗುತ್ತದೆ ಎಂದು ಕೋರ್ಟ್ ಹೇಳಿದೆ.

    ನ್ಯಾಯಾಲಯದಲ್ಲಿ ಅಪ್ರಾಪ್ತ ಬಾಲಕಿಯು ತನ್ನ ಹೇಳಿಕೆ ಮತ್ತು ಸಾಕ್ಷ್ಯದಲ್ಲಿ ತಾನು ಅರ್ಜಿದಾರರ ಗೆಳತಿ ಎಂದು ಬಹಿರಂಗಪಡಿಸಿದ್ದಾಳೆ. ಅಲ್ಲದೇ ಯಾವುದೇ ಬಲವಂತವಿಲ್ಲದೆ ಇಬ್ಬರ ಒಪ್ಪಿಗೆಯಿಂದಲೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ದೃಢಪಡಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಯಿತು. ಬಳಿಕ ಪೋಕ್ಸೋ ಸಂಬಂಧಿಸಿದ ಎಫ್‍ಐಆರ್‌ನ್ನು ಕೋರ್ಟ್ ರದ್ದುಗೊಳಿಸಿದೆ. ಇದನ್ನೂ ಓದಿ: ಕಿಡ್ನಾಪ್ ಮಾಡ್ತಿದ್ದಾನೆಂದು ಊಬರ್ ಚಾಲಕನಿಗೆ ಗುಂಡಿಕ್ಕಿ ಕೊಂದ ಮಹಿಳೆ

  • ಅಪ್ರಾಪ್ತ ಹುಡುಗಿಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ – ಹೈಕೋರ್ಟ್

    ಅಪ್ರಾಪ್ತ ಹುಡುಗಿಯ ಕೈ ಹಿಡಿದು ಸುಂದರವಾಗಿವೆ ಅನ್ನೋದು ಲೈಂಗಿಕ ಅಪರಾಧವಲ್ಲ – ಹೈಕೋರ್ಟ್

    ನವದೆಹಲಿ: ಅಪ್ರಾಪ್ತ ಹುಡುಗಿಯ ಕೈ ಹಿಡಿದುಕೊಂಡು ಸುಂದರವಾಗಿವೆ ಎಂದು ಹೇಳಿದರೆ, ಅದು ಯಾವುದೇ ಲೈಂಗಿಕ ಉದ್ದೇಶದಿಂದ ಕೂಡಿಲ್ಲದೇ ಇದ್ದರೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆಯನ್ವಯ ಅದು ಲೈಂಗಿಕ ದೌರ್ಜನ್ಯವಾಗುವುದಿಲ್ಲ ಎಂದು ಮೇಘಾಲಯ ಹೈಕೋರ್ಟ್ ಹೇಳಿದೆ.

    crime

    ಕಳೆದ ಮೇ 26ರಂದು ಘಟನೆಗೆ ಸಂಬಂಧಿಸಿದ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಬ್ಲ್ಯೂ. ದಿಯೆಂಗ್ಡೋಹ್, ಅಂತಹ ಪ್ರಕರಣಗಳಲ್ಲಿ ಆರೋಪಿ ಲೈಂಗಿಕ ಉದ್ದೇಶ ಹೊಂದಿಲ್ಲದೆ ಇದ್ದರೆ ಲೈಂಗಿಕ ದೌರ್ಜನ್ಯ ಎಂದು ಹೇಳಲಾಗುವುದಿಲ್ಲ ಎಂದು ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಗಂಗಾ ನದಿಯಲ್ಲಿ ಮೀನಿನ ವೈವಿಧ್ಯತೆ ಶೇ.36 ರಷ್ಟು ಹೆಚ್ಚಳ

    ಏನಿದು ಘಟನೆ?: ಒಂಬತ್ತು ವರ್ಷದ ಸಂತ್ರಸ್ತ ಬಾಲಕಿಯ ಬಳಿ 55 ವರ್ಷದ ಅಂಗಡಿ ಮಾಲೀಕನೊಬ್ಬ ನೀರು ತರಲು ಕೇಳಿದ್ದಾನೆ. ಹುಡುಗಿ ನೀರು ತಂದುಕೊಟ್ಟಾಗ ಆರೋಪಿಯು ಆಕೆಯ ಕೈ ಹಿಡಿದುಕೊಂಡು ನೇವರಿಸಿದ್ದಾನೆ. ನಂತರ ಆಕೆಯ ಕೈಗಳು ಸುಂದರವಾಗಿವೆ ಎಂದು ಹೇಳಿದ್ದಾನೆ. ಇದರಿಂದ ಸಂತ್ರಸ್ತೆ ತಕ್ಷಣವೇ ಸ್ಥಳದಿಂದ ತೆರಳಿದ್ದು ತನ್ನ ತಾಯಿಗೆ ಘಟನೆ ಬಗ್ಗೆ ತಿಳಿಸಿದ್ದಾಳೆ. ನಂತರ ತಾಯಿಯೊಂದಿಗೆ ತೆರಳಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ರಜೆ ಬೇಕೆಂದ್ರೆ ಲಾಡ್ಜ್‌ಗೆ ಬನ್ನಿ – ಮಹಿಳಾ ನೌಕರರಿಗೆ ಎಸ್‌ಪಿ ಕಚೇರಿ ಅಧಿಕಾರಿಯಿಂದ ಕಿರುಕುಳ

    crime

    ಆರೋಪಿ ವಿರುದ್ಧ IPC ಸೆಕ್ಷನ್ 354 (ಮಹಿಳೆಯರ ಮೇಲಿನ ದೌರ್ಜನ್ಯ), 354 A (ಲೈಂಗಿಕ ಕಿರುಕುಳ), ಪೋಕ್ಸೋ ಕಾಯ್ದೆ ಸೆಕ್ಷನ್- 7 (ಲೈಂಗಿಕ ದೌರ್ಜನ್ಯ) ಮತ್ತು ಸೆಕ್ಷನ್ 9 (ಉಲ್ಭಣಗೊಂಡ ಲೈಂಗಿಕ ದೌರ್ಜನ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನೂ ಓದಿ; 7 ಬಾರಿ ಗುಂಡೇಟು ತಿಂದಿದ್ದ ಅಧಿಕಾರಿ UPSCಯಲ್ಲಿ ಪಾಸ್

    ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ ದಿಯೆಂಗ್ಡೋಹ್, ಘಟನೆ ಹಗಲು ಹೊತ್ತಿನಲ್ಲೇ ನಡೆದಿದೆ. ಅರ್ಜಿದಾರರು ಸಹ ಬಾಲಕಿಯ ಕೈಗಳನ್ನು ಕೆಲ ಸೆಕೆಂಡುಗಳ ಕಾಲ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಆ ಭಾಗವು ಲೈಂಗಿಕ ಉದ್ದೇಶದಿಂದ ಕೂಡಿದೆ ಎಂದು ಹೇಳಲಾಗುವುದಿಲ್ಲ. ಇದರಲ್ಲಿ ಲೈಂಗಿಕವಲ್ಲದ ಉದ್ದೇಶವನ್ನೂ ಊಹಿಸಬಹುದು ಎಂದು ಹೇಳಿದೆ. ಆದ್ದರಿಂದ ಆರೋಪಿ ವಿರುದ್ಧ ಪೋಕ್ಸೊ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ ಎಂದು ತೀರ್ಪು ನೀಡಿದ್ದಾರೆ.

    CRIME

    ಆರೋಪಿಗಳ ಪರವಾಗಿ ಹಿರಿಯ ವಕೀಲರಾದ ಎಸ್.ಸಿ.ಚಕ್ರವರ್ತಿ, ಎ.ಬರುವಾ ವಾದ ಮಂಡಿಸಿದರೆ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ಭಟ್ಟಾಚಾರ್ಯ ಮತ್ತು ಸರ್ಕಾರಿ ವಕೀಲ ಆರ್.ಕಾಲ್ನಿ ಪ್ರತಿವಾದಿಯಾಗಿದ್ದರು.

  • ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲಾಗುವುದಿಲ್ಲ: ಮೇಘಾಲಯ ಹೈಕೋರ್ಟ್

    ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲಾಗುವುದಿಲ್ಲ: ಮೇಘಾಲಯ ಹೈಕೋರ್ಟ್

    ಶಿಲ್ಲಾಂಗ್: ಬಟ್ಟೆ ತೆಗೆದರೆ ಮಾತ್ರ ಅತ್ಯಾಚಾರ ಎನ್ನಲು ಸಾಧ್ಯವಿಲ್ಲ. ಒಳ ಉಡುಗಳಿದ್ದಾಗಲೂ ಎಸಗುವ ಲೈಂಗಿಕ ದೌರ್ಜನ್ಯ ಅತ್ಯಾಚಾರಕ್ಕೆ ಸಮ ಎಂದು ಮೇಘಾಲಯ ಹೈಕೋರ್ಟ್‌ ಹೇಳಿದೆ.

    ಲೈಂಗಿಕ ದೌರ್ಜನ್ಯ ಪ್ರಕರಣವೊಂದರ ವಿಚಾರಣೆ ನಡೆಸಿ ನ್ಯಾಯಾಲಯ, ಅಪರಾಧಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಬಿ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ‘ಜೇಮ್ಸ್’ ಸಿನಿಮಾ ಫಸ್ಟ್ ಹಾಫ್ ಹೇಗಿದೆ? – ಕಣ್ಣಿಗೆ ಹಬ್ಬ, ಮನಸ್ಸಿಗೆ ಬೇಸರ

    10 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸಂಜಿಬ್ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಡಬ್ಲ್ಯೂ.ಡಿಯೆಂಗ್ಡೊ ಅವರ ವಿಭಾಗೀಯ ಪೀಠವು, ಅಪರಾಧಿಗೆ ಶಿಕ್ಷೆ ವಿಧಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.

    ಈ ಘಟನೆಯು 2006ರ ಸೆಪ್ಟೆಂಬರ್ 23ರಂದು ನಡೆದಿದೆ. ಒಂದು ವಾರದ ನಂತರ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಬಾಲಕಿಯ ಖಾಸಗಿ ಭಾಗಗಳಲ್ಲಿ ನೋವು ಕಾಣಿಸಿಕೊಂಡಿತ್ತು. ತಾನು ಆಕೆಯ ಒಳ ಉಡುಪುಗಳನ್ನು ತೆಗೆದಿಲ್ಲ ಎಂದು ಆರೋಪಿ ಹೇಳಿದರೂ, ಲೈಂಗಿಕ ದೌರ್ಜನ್ಯಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ‘ಜೇಮ್ಸ್’ ಸಿನಿಮಾ: ಅಭಿಮಾನಿಗಳ ಫಸ್ಟ್ ರಿಯ್ಯಾಕ್ಷನ್

    jail

    2018ರ ಅಕ್ಟೋಬರ್‌ 31ರಂದು ವಿಚಾರಣಾ ನ್ಯಾಯಾಲಯ, ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25,000 ದಂಡ ವಿಧಿಸಿತ್ತು. ವಿಚಾರಣಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಪರಾಧಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಆದರೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ.

    ಆ ಸಮಯದಲ್ಲಿ ತನಗೆ ಯಾವುದೇ ನೋವು ಕಾಣಿಸಲಿಲ್ಲ ಎಂದು ಸಂತ್ರಸ್ತೆ ಹೇಳಲು ಕಾರಣಗಳು ಏನೇ ಇರಲಿ, ವೈದ್ಯಕೀಯ ಪರೀಕ್ಷೆಗೆ ಒಳಗಾದಾಗ ಅವಳು ನೋವಿನ ಬಗ್ಗೆ ದೂರು ನೀಡಿದ್ದಳು. ವೈದ್ಯಕೀಯ ವರದಿಯು ಅದನ್ನೇ ದೃಢಪಡಿಸಿತು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ರವಿವರ್ಮಾ ಸ್ಟಂಟ್‌ಗೆ ಪವರ್ ಸ್ಟಾರ್ ಫಿದಾ: ಫೋನ್ ಮಾಡಿ ಪುನೀತ್ ಹೇಳಿದ್ದೇನು?