Tag: Megha

  • ಕಿರಣ್ ರಾಜ್ ‘ಮೇಘ’ ಚಿತ್ರಕ್ಕೆ ಚರಣ್ ನಿರ್ದೇಶನ

    ಕಿರಣ್ ರಾಜ್ ‘ಮೇಘ’ ಚಿತ್ರಕ್ಕೆ ಚರಣ್ ನಿರ್ದೇಶನ

    ನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್ (Kiran Raj) ನಾಯಕನಾಗಿ ನಟಿಸಿರುವ, ಚರಣ್ ನಿರ್ದೇಶನದ “ಮೇಘ” (Megha) ಚಿತ್ರದ ಟೀಸರ್ (Teaser) ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗೀತರಚನೆಕಾರ ವಿ.ನಾಗೇಂದ್ರ ಪ್ರಸಾದ್ ಮೇಘ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮೇಘ ಚಿತ್ರದ ಕುರಿತು ಮಾತನಾಡಿದರು.

    ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ವಿ.ನಾಗೇಂದ್ರಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು ಮೇಘ ನನ್ನ ಮೊದಲ ನಿರ್ದೇಶನದ ಚಿತ್ರ. ಮೇಘಗಳು ಆಕಾಶದಲ್ಲಿ ಯಾವಾಗಲೂ ಒಟ್ಟಾಗೆ ಚಲಿಸುತ್ತದೆ. ಆದರೆ ಮಳೆಯನ್ನು ಎಲ್ಲೋ ಸುರಿಸುತ್ತದೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ದಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ ಮೇಘ ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ – ನಾಯಕಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು, ಬಾಕಿ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ. ಯತೀಶ್ ಹೆಚ್ ಆರ್ ಅವರು ನಿರ್ಮಾಣ ಮಾಡಿದ್ದಾರೆ.  ಚಿತ್ರ ಬಿಡುಗಡೆಯ ಹಂತದಲ್ಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

    ನನಗೆ ಸಿನಿಮಾ ರಂಗ ಹೊಸತು. ನಿರ್ಮಾಪಕರಾದ ಎಂ.ಜಿ.ರಾಮಮೂರ್ತಿ ಹಾಗೂ ತ್ರಿವಿಕ್ರಮ ಸಾಫಲ್ಯ ಅವರ ಮಾರ್ಗದರ್ಶನದಲ್ಲಿ ಕೃಷಿ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕ ಯತೀಶ್ ಹೆಚ್ ಆರ್ ಹೇಳಿದರು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಮೇಘ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್  ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ ಎಂದರು ನಾಯಕ ಕಿರಣ್ ರಾಜ್.

    ಈ ಚಿತ್ರದ ವಿಶೇಷವೆಂದರೆ ನನ್ನ ಹಾಗೂ ನಾಯಕ ಇಬ್ಬರ ಹೆಸರು ಮೇಘ ಎಂದು. ಉತ್ತಮ ಕಥೆಯ ಈ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಾಯಕಿ ಕಾಜಲ್ ಕುಂದರ್.  ಚಿತ್ರದ ಛಾಯಾಗ್ರಾಹಕ ಮತ್ತು ಸಂಕಲನಕಾರ ಗೌತಮ್ ನಾಯಕ್, ನಟಿ ಶ್ರೀವಿದ್ಯ ಹಾಗೂ ತ್ರಿವಿಕ್ರಮ ಸಾಫಲ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

  • ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್

    ಪ್ರಶ್ನೆ ಮಾಡುವುದನ್ನು ನಿಲ್ಲಿಸಲ್ಲ : ಮತ್ತೆ ಗುಡುಗಿದ ನಟ ಚೇತನ್

    ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣಕ್ಕೆ ಜೈಲುವಾಸ ಅನುಭವಿಸಿ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್, ತಮ್ಮ  ನಿಲುವಿನ ಕುರಿತು ಮತ್ತೆ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ತಪ್ಪು ಕಂಡಲ್ಲಿ ಮಾತನಾಡುತ್ತೇನೆ. ಮತ್ತಷ್ಟು ಜನರಿಗೆ ತಲುಪಲು ಆ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ. ಯಾವುದೇ ಕಾರಣಕ್ಕೂ ಟ್ವಿಟ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಚೇತನ್ ಅಹಿಂಸಾ ಬಿಡುಗಡೆ – ಖುಷ್ ಆದ ಅಭಿಮಾನಿಗಳು

    ಸೋಮವಾರ ಸಂಜೆ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ನಟ ಚೇತನ್ ಅವರನ್ನು ಅಭಿಮಾನಿಗಳು ಮತ್ತು ಅವರ ತತ್ವವನ್ನು ಮೆಚ್ಚಿಕೊಂಡವರು ಜೈಲು ಮುಂದೆಯೇ ಸ್ವಾಗತಿಸಿದರು. ನೆಚ್ಚಿನ ನಟನ ಪರ ಘೋಷಣೆ ಕೂಗಿದರು. ಪತ್ನಿ ಮೇಘಾ ಕೂಡ ಪತಿಯ ಬಿಡುಗಡೆಗೆ ಹರ್ಷ ವ್ಯಕ್ತ ಪಡಿಸಿದರು. ಇದನ್ನೂ ಓದಿ : ಶಿವರಾತ್ರಿ ವಿಶೇಷ: ತೆರೆಗೆ ಶಿವನಾಗಿ ದರ್ಶನ ಕೊಟ್ಟ ನಟ ಶಿವರು

    ಚೇತನ್ ಬಿಡುಗಡೆಗಾಗಿ ವಕೀಲರಾದ ಬಾಲನ್, ಹರಿರಾಮ್ ಎ, ಕಾಶಿನಾಥ್ ಜೆ.ಡಿ, ರಮೇಶ್, ಪ್ರಸನ್ನ, ಸುನೀಲ್ ಕುಮಾರ್ ಗುನ್ನಾಪುರ ಮತ್ತು ಅವರ ತಂಡ ಸತತವಾಗಿ ಪ್ರಯತ್ನಿಸಿತ್ತು. ಹಾಗಾಗಿ ಚೇತನ್ ಬಿಡುಗಡೆ ಸಂದರ್ಭದಲ್ಲಿ ವಕೀಲರ ತಂಡವೂ ಅಲ್ಲಿತ್ತು.

  • ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ

    ನಟ ಚೇತನ್ ಬಂಧನ ಹಿಂದಿನ ರೋಚಕ ಸ್ಟೋರಿ : ಜೈಲಿನಲ್ಲಿ ಚೇತನ್ 4ನೇ ದಿನ

    ಟ ಚೇತನ್ ನ್ಯಾಯಾಧೀಶರ ಕುರಿತಾಗಿ ಮಾನಹಾನಿ ಮಾಡುವಂತಹ ಟ್ವಿಟ್ ಹಾಕಿದರು ಎನ್ನುವ ಕಾರಣಕ್ಕಾಗಿ ಶೇಷಾದ್ರಿಪುರಂ ಪೊಲೀಸ್ ಅಧಿಕಾರಿಗಳು ಬಂಧಿಸಿದ್ದರು. ನಂತರ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವಿಧಿಸಿ ಕೋರ್ಟ್ ಆದೇಶಿಸಿತ್ತು. ನಾಲ್ಕು ದಿನಗಳಿಂದ ಚೇತನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಜಾಮೀನಿಗಾಗಿ ಚೇತನ್ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಕೂಡ ಸಲ್ಲಿಸಿದೆ. ಈ ಸಂದರ್ಭದಲ್ಲಿ ಬಂಧನ ದಿನದಿಂದ ಈವರೆಗೂ ಏನೆಲ್ಲ ಬೆಳವಣಿಗೆ ಆಯಿತು ಎನ್ನುವ ಕುರಿತು ಚೇತನ್ ಪತ್ನಿ ಮೇಘಾ ಸುದೀರ್ಘವಾಗಿ ಫೇಸ್ ಬುಕ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ಅನೌನ್ಸ್

    ನಟ ಚೇತನ್ ಅವರ ಬಂಧನಕ್ಕೆ ಸಂಬಂಧಿಸಿದಂತೆ ನಾವು ಒಂದು ಪೊಲೀಸ್ ಠಾಣೆಯಿಂದ ಮತ್ತೊಂದು ಪೊಲೀಸ್ ಠಾಣೆಗೆ ಸತತ 8 ಗಂಟೆಗಳ ಕಾಲ ಅಲೆದಾಡಿದ ನಂತರವಷ್ಟೇ ನಮಗೆ ಚೇತನ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದುಬರುತ್ತದೆ ಮತ್ತು FIR ಪ್ರತಿ ನಮ್ಮ ಕೈಗೆ ಸಿಕ್ಕಿರುತ್ತದೆ‌. ನಮಗೆ ಯಾವುದೇ ಮಾಹಿತಿ ನೀಡದೆ ಚೇತನ್ ಅವರನ್ನು ಮನೆಯಿಂದ ಏಕಾಏಕಿ ಕರೆದುಕೊಂಡು ಹೋಗಿದ್ದಾರೆ. ನಾನು ಪೊಲೀಸ್ ಠಾಣೆಗೆ ಹೋಗುವವರೆಗೂ ಚೇತನ್ ಬಂಧನವಾಗಿದ್ದಾರೆ ಎಂಬ ಮಾಹಿತಿಯನ್ನೇ ಪೊಲೀಸರು ನನಗೆ ನೀಡಿಲ್ಲ. ಅಕಸ್ಮಾತ್ ನಾನು ಪೊಲೀಸ್ ಠಾಣೆಗೆ ಹೋಗದೇ ಇದಿದ್ದರೆ ಬಂಧನ ವಿಷಯ ನನಗೆ ತಿಳಿಯುತ್ತಿರಲಿಲ್ಲ ಮತ್ತು ತಿಳಿಸುವ ಉದ್ದೇಶವು ಪೊಲೀಸರಿಗೆ ಇಲ್ಲ ಅನ್ನುವುದು ಇದರಿಂದ ಸ್ಪಷ್ಟವಾಗಿ ಕಾಣುತ್ತದೆ. ಇದನ್ನೂ ಓದಿ : ರಾಮ್ ಗೋಪಾಲ್ ವರ್ಮಾ ಭೇಟಿ ಮಾಡಿ ಕುತೂಹಲ ಮೂಡಿಸಿದ ಉಪ್ಪಿ

    ಚೇತನ್ ಇರುವಿಕೆಯ ಬಹಿರಂಗಪಡಿಸಲು ನಾನು ಅರ್ಜಿ ಸಲ್ಲಿಸಿದ ನಂತರವಷ್ಟೇ ಅವರನ್ನು ಸೂಮೋಟೊ ದೂರಿನ ಮೇರೆಗೆ ಅವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ತಿಳಿದುಬರುತ್ತದೆ. ಆದರೆ ಚೇತನ್ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಮಾತ್ರ ಬಹಿರಂಗಪಡಿಸಲಿಲ್ಲ. ಅಂತಿಮವಾಗಿ, ರಾತ್ರಿ 10 ಗಂಟೆಗೆ ನಮಗೆ ಎಫ್‌ಐಆರ್ ಪ್ರತಿ ಸಿಗುತ್ತದೆ. ನ್ಯಾಯಮೂರ್ತಿಯ ಬಗ್ಗೆ ಮಾಡಿದ ಟ್ವೀಟ್‌ಗಾಗಿ ಚೇತನ್ ವಿರುದ್ಧ ಸೆಕ್ಷನ್ 504 ಮತ್ತು 505(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ : ಉಕ್ರೇನ್ ನಲ್ಲಿ ಸಿಲುಕಿಕೊಂಡ ನಟಿ ಶ್ವೇತಾ ಚೆಂಗಪ್ಪ ಗೆಳತಿ

    ಅತ್ಯಾಚಾರದಿಂದ ಸುಸ್ತಾಗಿ ಮಲಗಿಬಿಟ್ಟೆ ಎಂದು ಹೇಳುವುದು ಭಾರತೀಯ ನಾರಿಯ ಲಕ್ಷಣವಲ್ಲ. ನಮ್ಮ ನಾಡಿನ ಮಹಿಳೆಯರು ಅವರ ಮೇಲೆ ಆಕ್ರಮಣವಾದಾಗ ನಡೆದುಕೊಳ್ಳುವ ರೀತಿಯೂ ಇದಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅತ್ಯಾಚಾರ ಪ್ರಕರಣದ ಆರೋಪಿಗೆ  2020 ಜೂನ್ 22ರಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.  ನಂತರ ಸರ್ಕಾರದಿಂದ ಮನವಿ ಸ್ವೀಕರಿಸಿದ ಬಳಿಕ ಈ ಆದೇಶ ಪತ್ರದಲ್ಲಿದ್ದ ಈ ಹೇಳಿಕೆಯನ್ನು ತೆಗೆಯಲಾಗಿತ್ತು. ಈ ಒಂದು ಅಸೂಕ್ಷ್ಮ ಹೇಳಿಕೆಗೆ ಚೇತನ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು. ಇದನ್ನೂ ಓದಿ : ಧ್ರುವ ಸರ್ಜಾ ಅಂಡರ್ ವರ್ಲ್ಡ್ ಡಾನ್

    ಫೆಬ್ರವರಿ 22ರಂದು ಚೇತನ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಾವು ಇಂದು ಜಾಮೀನಿನ ನಿರೀಕ್ಷಣೆಯಲಿದ್ದೆವು, ಆದರೆ ಜಾಮೀನಿಗೆ ಸಂಬಂಧಿಸಿದ ಆದೇಶವನ್ನು ಫೆಬ್ರವರಿ 25 ರವರಗೆ ಕಾಯ್ದಿರಿಸಿದೆ. ಹಾಗಾಗಿ ಚೇತನ್ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಿಮ್ಮ ಬೆಂಬಲಕ್ಕಾಗಿ ನಾನು ನಿಮ್ಮೆಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ನ್ಯಾಯಾಲಯವು ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಜಾಸತ್ತಾತ್ಮಕ ಹಕ್ಕನ್ನು ಎತ್ತಿಹಿಡಿಯುತ್ತದೆ ಮತ್ತು ವಿಳಂಬವಿಲ್ಲದೆ ನಮಗೆ ನ್ಯಾಯವನ್ನು ನೀಡುತ್ತದೆ ಎಂದು ಆಶಿಸೋಣ

    ಎಂದು ಮೇಘಾ ಸ್ವತಃ ಚೇತನ್ ಅವರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಪತ್ರಬರೆದು ಅಭಿಮಾನಿಗಳಿಗೆ ಅಪ್ ಡೇಟ್ ನೀಡಿದ್ದಾರೆ.

  • ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ಜೈಲಿನಲ್ಲಿ ಚೇತನ್ ಕೂಲ್ ಆಗಿದ್ದಾರೆ : ಪತ್ನಿ ಮೇಘಾ

    ನ್ಯಾಯಮೂರ್ತಿಗಳ ಮೇಲೆ ಆಕ್ಷೇಪಾರ್ಹ ಟ್ವೀಟ್ ಮಾಡಿ ಮಂಗಳವಾರ ಜೈಲುಪಾಲಾಗಿರುವ ನಟ ಚೇತನ್, ಜೈಲಿನಲ್ಲಿ ಕೂಲ್ ಆಗಿದ್ದಾರೆ. ಅವರಿಗೆ ಯಾವುದೇ ಭಯವಿಲ್ಲ ಎಂದಿದ್ದಾರೆ ಚೇತನ್ ಪತ್ನಿ ಮೇಘಾ. ಪತಿಯನ್ನು ಜೈಲಿನಲ್ಲಿ ಭೇಟಿಯಾಗಿ ಬಂದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಅವರು, “ಚೇತನ್ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅವರೂ ಭಯ ಪಡುತ್ತಿಲ್ಲ. ನಾವೆಲ್ಲರೂ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ಚೇತನ್ ಅವರಿಗೆ ಜಾಮೀನು ಸಿಗುವ ವಿಶ್ವಾಸವಿದೆ’ ಎಂದರು. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ನೆನ್ನೆ ಏಕಾಏಕಿ ಶೇಷಾದ್ರಿಪುರಂ ಪೊಲೀಸ್ ಠಾಣೆ ಅಧಿಕಾರಿಗಳು ಚೇತನ್ ಅವರನ್ನು ವಿಚಾರಣೆಗೆ ಎಂದು ಕರೆದೊಯ್ದಿದ್ದರು. ತಮ್ಮ ಗಮನಕ್ಕೆ ಬಾರದಂತೆ ಚೇತನ್ ಅವರನ್ನು ಪೊಲೀಸ್ ನವರು ಕರೆದುಕೊಂಡು ಹೋಗಿದ್ದಕ್ಕೆ ಮೇಘಾ, ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ದೂರಿದ್ದರು. ಚೇತನ್ ಅಭಿಮಾನಿಗಳು ಪೊಲೀಸ್ ಠಾಣೆಯ ಮುಂದೆ ಜಮಾಯಿಸುತ್ತಿದ್ದಂತೆಯೇ  ಚೇತನ್ ತಮ್ಮ ವಶದಲ್ಲಿರುವ ಬಗ್ಗೆ ಶೇಷಾದ್ರಿಪುರಂ ಪೊಲೀಸ್ ಖಚಿತ ಪಡಿಸಿದರು. ಆನಂತರ ಅವರನ್ನು 8ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಕೋರ್ಟ್ ಚೇತನ್ ಗೆ 14 ದಿನ ನ್ಯಾಯಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಇದನ್ನೂ ಓದಿ : ಬಾಲಿವುಡ್ ನಟಿ ಹುಮಾ ಖುರೇಶಿಗೆ ಬೆಂಗಳೂರಿನ ಕೋರಮಂಗಲದ ನಂಟು

    ಪೊಲೀಸರು ಬೆಂಗಳೂರಿನ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರಕ್ಕೆ ಚೇತನ್ ಅವರನ್ನು ಕರೆತಂದಾಗ, ಅವರ ಕೈಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬರೆದ Annihilation of cast’ ಪುಸ್ತಕವಿತ್ತು. ಅದನ್ನು ತಗೆದುಕೊಂಡೇ ಅವರು ಜೈಲಿನೊಳಗೆ ಹೋದರು.

  • ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್-ಮೇಘಾ ಸಿಂಪಲ್ ವಿವಾಹ

    ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಚೇತನ್-ಮೇಘಾ ಸಿಂಪಲ್ ವಿವಾಹ

    ಬೆಂಗಳೂರು: ಆ ದಿನಗಳು ಚಿತ್ರದ ಖ್ಯಾತಿಯ ನಟ ಚೇತನ್ ಅವರು ತಮ್ಮ ಗೆಳತಿ ಮೇಘಾರನ್ನು ಇಂದು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಮದುವೆಯಾಗಿದ್ದಾರೆ.

    ಸದಾ ಸಾಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಚೇತನ್ ಅವರು ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ ಇಂದು ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿರುವ ಚೇತನ್-ಮೇಘಾ ನಾಳೆ ಆಶ್ರಮದಲ್ಲಿ ಮದುವೆ ಕಾರ್ಯ ಮಾಡಿಕೊಳ್ಳಲಿದ್ದಾರೆ.

    ಇಂದು ಬೆಂಗಳೂರಿನ ಗಾಂಧಿನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಆಫೀಸ್‍ನಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗುವ ಮೂಲಕ ಚೇತನ್ ಮತ್ತು ಮೇಘಾ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಚೇತನ್ ಅವರೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಶೇಷ ವಿವಾಹ ಕಾಯ್ದೆಯಡಿ ಇಂದು ಗಾಂಧಿನಗರದ ಉಪ-ರಿಜಿಸ್ಟ್ರಾರ್ ಕಚೇರಿಯಲ್ಲಿ ಮೇಘಾ ಮತ್ತು ನನ್ನ ವಿವಾಹ ಎಂದು ಬರೆದುಕೊಂಡಿದ್ದಾರೆ.

    ಈ ಹಿಂದೆ ಚೇತನ್ ಹಾಗೂ ಮೇಘಾ ಒಟ್ಟಿಗೆ ಸೇರಿ ತಂದೆ-ತಾಯಿ ಇಲ್ಲದೆ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಸಹಾಯ ಮಾಡಿದ್ದರು. ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ನೀಡಿ ಮಕ್ಕಳು ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಈ ಬಗ್ಗೆ ಚೇತನ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದು, ಜೋಡಿಯ ಈ ಸೇವೆಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಚೇತನ್ ಹಾಗೂ ಮೇಘಾ ಇತ್ತೀಚೆಗೆ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದರು. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು.

  • ಭಾವಿ ಪತ್ನಿ ಜೊತೆ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿದ ನಟ ಚೇತನ್

    ಭಾವಿ ಪತ್ನಿ ಜೊತೆ ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆ ನೀಡಿದ ನಟ ಚೇತನ್

    ಬೆಂಗಳೂರು: ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಸಿನಿಮಾರಂಗದಲ್ಲಿ ಮಾತ್ರವಲ್ಲದೇ ಸಾಮಾಜಿಕ ಕೆಲಸಗಳ ಮೂಲಕ ಗುರುತಿಸಿಕೊಂಡವರು. ಅವರ ನಿಸ್ವಾರ್ಥ ಸೇವೆಗೆ ಈಗ ಅವರ ಭಾವಿ ಪತ್ನಿ ಮೇಘಾ ಕೂಡ ಸಾಥ್ ನೀಡಿದ್ದಾರೆ.

    ಚೇತನ್ ಹಾಗೂ ಮೇಘಾ ಒಟ್ಟಿಗೆ ಸೇರಿ ತಂದೆ-ತಾಯಿ ಇಲ್ಲದೆ ಅನಾಥಾಶ್ರಮದಲ್ಲಿ ಇರುವ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಅನಾಥಾಶ್ರಮದ ಮಕ್ಕಳಿಗೆ ಹಾಸಿಗೆಗಳನ್ನು ನೀಡಿ ಮಕ್ಕಳು ಸರಿಯಾಗಿ ಮಲಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಹೀಗೆ ಮಕ್ಕಳಿಗೆ ಸಹಾಯ ಮಾಡುವ ಮೂಲಕ ಈ ಜೋಡಿ ಖುಷಿಪಟ್ಟಿದ್ದಾರೆ. ಈ ಬಗ್ಗೆ ಚೇತನ್ ತಮ್ಮ ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದು, ಜೋಡಿಯ ಈ ಸೇವೆಗೆ ಅಭಿಮಾನಿಗಳು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅನಾಥ ಮಕ್ಕಳ ಜೊತೆ ನಟ ಚೇತನ್ ಪ್ರೀವೆಡ್ಡಿಂಗ್ ಫೋಟೋಶೂಟ್

    https://www.facebook.com/chetanahimsa/posts/4114619898563628

    ಪೋಸ್ಟ್ ನಲ್ಲಿ ಏನಿದೆ?
    ಮೇಘ, ವಿನಯ್, ಮತ್ತು ನಾನು ಕೆಲಸ ಮಾಡುತ್ತಿದ್ದೇವೆ. ಆಶ್ರಮ ಮಕ್ಕಳಿಗೆ ಹಾಸಿಗೆ ನೀಡಲು ನಾವು ತಯಾರಾಗುತ್ತಿದ್ದೇವೆ ಎಂದು ಬರೆದು, ಅನಾಥಾಶ್ರಮಕ್ಕೆ ಹಾಸಿಗೆ ಹೊತ್ತ ಹೋಗುತ್ತಿವ ಫೋಟೋ ಹಾಗೂ ಹಾಸಿಗೆಗಳನ್ನು ಜೋಡಿಸಿಟ್ಟಿರುವ ಫೋಟೋಗಳನ್ನು ಫೇಸ್‍ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕೆಲಸಕ್ಕೆ ಸಹಕಾರ ನೀಡಿದ ಪುನೀತ್ ಎಂಬವರಿಗೆ ಚೇತನ್ ಧನ್ಯವಾದ ತಿಳಿಸಿದ್ದಾರೆ.

    ಚೇತನ್ ಹಾಗೂ ಮೇಘ ಮದುವೆಗೆ ಕೆಲವೇ ದಿನಗಳು ಬಾಕಿ ಇದೆ. ಫೆಬ್ರವರಿ 2 ರಂದು ಚೇತನ್ ಮತ್ತು ಮೇಘ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಅನಾಥಾಶ್ರಮದಲ್ಲಿ ಅವರ ವಿವಾಹ ಮಹೋತ್ಸವ ನಡೆಯಲಿದೆ.

    ಮದುವೆ ಸಂಭ್ರಮದಲ್ಲಿರುವ ಚೇತನ್ ಹಾಗೂ ಮೇಘಾ ಇತ್ತೇಚೆಗೆ ಸ್ಪೆಷಲ್ ಪ್ರೀವೆಡ್ಡಿಂಗ್ ಶೂಟ್ ಮಾಡಿಸಿದ್ದರು. ಅನಾಥ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿಕೊಂಡಿರುವ ನವಜೋಡಿಗಳ ಫೋಟೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು. ಮಕ್ಕಳ ಜೊತೆ ಬಣ್ಣದ ಓಕುಳಿಯ ಚಿತ್ತಾರ ಬಿಡಿಸಿ, ಬುಗುರಿ ಆಟವಾಡಿ, ಪೇಟಿಂಗ್ ಮಾಡಿ ನವಜೋಡಿ ಫೋಟೋ ಶೂಟ್ ಮಾಡಿಸಿದ್ದರು. ಪುಟಾಣಿ ಮಕ್ಕಳ ನಗುವಿನೊಂದಿಗೆ ಹೊಸ ಜೀವನದ ಆರಂಭದ ಸಂಭ್ರಮದಲ್ಲಿದ್ದಾರೆ ಚೇತನ್ ಮೇಘಾ. ಈ ಸ್ಪೆಷಲ್ ಫೋಟೋ ಶೂಟ್ ಎಲ್ಲರ ಗಮನ ಸೆಳೆದಿತ್ತು.

  • ‘ಆ ದಿನಗಳು’ ಖ್ಯಾತಿಯ ನಟನ ಮದ್ವೆ-ಗಮನ ಸೆಳೀತಿದೆ ಆಮಂತ್ರಣ ಪತ್ರಿಕೆ

    ‘ಆ ದಿನಗಳು’ ಖ್ಯಾತಿಯ ನಟನ ಮದ್ವೆ-ಗಮನ ಸೆಳೀತಿದೆ ಆಮಂತ್ರಣ ಪತ್ರಿಕೆ

    ಬೆಂಗಳೂರು: ‘ಆ ದಿನಗಳು’ ಸಿನಿಮಾ ಖ್ಯಾತಿಯ ನಟ ಚೇತನ್ ಸದಾ ಹೊಸತನಕ್ಕೆ ತುಡಿಯುತ್ತಾರೆ. ಇದೀಗ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ವಿಶೇಷವಾಗಿ ಮಾಡಿಸುವ ಮೂಲಕ ಗಮನ ಸೆಳೆದಿದ್ದಾರೆ.

    ನಟ ಚೇತನ್ ಮತ್ತು ಮೇಘಾ ಮದುವೆ ಮುಂದಿನ ತಿಂಗಳು ಅಂದರೆ ಫೆಬ್ರವರಿ 2 ಭಾನುವಾರ ಸಂಜೆ ನಡೆಯಲಿದೆ. ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಇವರ ಮದುವೆ ಆಮಂತ್ರಣ ಪತ್ರಿಕೆ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಆಶ್ರಮದ ಮಕ್ಕಳು, ವೃದ್ಧರ ಸಮ್ಮುಖದಲ್ಲಿ ಪ್ರೇಯಸಿಯ ಜೊತೆ ಚೇತನ್ ಮದ್ವೆ

    ಚೇತನ್ ಮದುವೆ ಆಮಂತ್ರಣ ಪತ್ರಿಕೆ ಪರಿಸರ ಸ್ನೇಹಿ ಆಮಂತ್ರಣ ಪತ್ರಿಕೆಯಾಗಿದೆ. ಈ ಲಗ್ನ ಪತ್ರಿಕೆಯೊಳಗೆ ಬೀಜವನ್ನು ಹುದುಗಿಸಿ ಇಡಲಾಗಿದೆ. ಪತ್ರಿಕೆಯನ್ನು ಓದಿ ಎಸೆದರೂ ಅದು ಅಲ್ಲೇ ಚಿಗುರೊಡೆಯುತ್ತೆ. ಅಷ್ಟೇ ಅಲ್ಲದೇ ಈ ಪತ್ರಿಕೆಯ ಮೇಲೆ ಸುಂದರ ಕಸೂತಿ ಕಲೆಯಿದೆ.

    ಇವರ ಮದುವೆ ಯಾವುದೇ ಆಡಂಬರವಿಲ್ಲದೆ ಸರಳವಾಗಿ ನಡೆಯಲಿದೆ. ಜೊತೆಗೆ ಮದುವೆಯಲ್ಲಿ ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ.

  • ಆಶ್ರಮದ ಮಕ್ಕಳು, ವೃದ್ಧರ ಸಮ್ಮುಖದಲ್ಲಿ ಪ್ರೇಯಸಿಯ ಜೊತೆ ಚೇತನ್ ಮದ್ವೆ

    ಆಶ್ರಮದ ಮಕ್ಕಳು, ವೃದ್ಧರ ಸಮ್ಮುಖದಲ್ಲಿ ಪ್ರೇಯಸಿಯ ಜೊತೆ ಚೇತನ್ ಮದ್ವೆ

    ಬೆಂಗಳೂರು: ನಟ ಚೇತನ್ ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸುತ್ತಿರುವ ವಿಚಾರ ಬಹುತೇಕರಿಗೆ ತಿಳಿದಿತ್ತು. ಇದೀಗ ತಮ್ಮ ಪ್ರಿಯತಮೆಯ ಜೊತೆ ಮುಂದಿನ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    ಚೇತನ ಫೆಬ್ರವರಿ ತಿಂಗಳಲ್ಲಿ ಹಸೆಮಣೆ ಏರುತ್ತಿದ್ದಾರೆ. ಫೆಬ್ರವರಿ 2 ಭಾನುವಾರ ಸಂಜೆ ತಮ್ಮ ಗೆಳತಿ ಮೇಘಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಚೇತನ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ. ಎರಡು ವರ್ಷಗಳಿಂದ ಅಸ್ಸಾಂ ಮೂಲದ ಯುವತಿ ಮೇಘಾರನ್ನು ಚೇತನ್ ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿಕೊಂಡಿದ್ದಾರೆ. ಆಗ ಎರಡು ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ.

    ನಟ ಚೇತನ್ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಪ್ರೇಯಸಿ ಮೇಘಾ ಕೂಡ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಜೋಡಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆಯೇ ವಲ್ಲಭ್ ನಿಕೇತನ ವಿನೋಬಾ ಭಾವೆ ಆಶ್ರಮದ ಮಕ್ಕಳು ಮತ್ತು ವೃದ್ಧರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಅಷ್ಟೇ ಅಲ್ಲದೇ ಆಡಂಬರವಿಲ್ಲದ ಈ ವಿವಾಹದಲ್ಲಿ, ವಚನ ಗಾಯನ, ಸೂಫಿ ಗಾಯನ, ಕೊರಗ ನೃತ್ಯ, ಲಂಬಾಣಿ ನೃತ್ಯ, ಸಿದ್ಧಿ ನೃತ್ಯ ಮತ್ತು ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿದೆ. ಈಗಾಗಲೇ ನಟ ಚೇತನ್ ಮದುವೆ ತಯಾರಿಯಲ್ಲಿದ್ದು, ಪುನೀತ್ ರಾಜ್‍ಕುಮಾರ್ ಅವರನ್ನು ತಮ್ಮ ಮದುವೆಗೆ ಆಹ್ವಾನಿಸಿದ್ದಾರೆ.

    ನಟ ಚೇತನ್ ‘ಆ ದಿನಗಳು’, ‘ಬಿರುಗಾಳಿ’, ‘ಮೈನಾ’, ‘ಅತಿರಥ’ ಮತ್ತು ‘ದಶಮುಖ’ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

  • ಬಡ ವಿದ್ಯಾರ್ಥಿನಿಯ ಕನಸಿಗೆ ರೆಕ್ಕೆ ಮೂಡಿಸಿದರು ಬಿಗ್ ಬಾಸ್ ಪ್ರಥಮ್!

    ಬಡ ವಿದ್ಯಾರ್ಥಿನಿಯ ಕನಸಿಗೆ ರೆಕ್ಕೆ ಮೂಡಿಸಿದರು ಬಿಗ್ ಬಾಸ್ ಪ್ರಥಮ್!

    – ಇದು ಎಂಥವರೂ ಮೆಚ್ಚಿಕೊಳ್ಳುವ ಒಂದೊಳ್ಳೆ ಕೆಲಸ!

    ಬೆಂಗಳೂರು: ಕಳೆದ ಸೀಸನ್ನಿನ ಬಿಗ್ ಬಾಸ್ ಶೋ ವಿನ್ನರ್ ಆಗಿದ್ದವರು ಪ್ರಥಮ್. ಹಾಗೆ ಗೆದ್ದುಕೊಂಡ ಐವತ್ತು ಲಕ್ಷ ರೂಪಾಯಿಗಳನ್ನು ಸಮಾಜಮುಖಿಯಾದ ಕೆಲಸ ಕಾರ್ಯಗಳಿಗೆ ಬಳಸೋದಾಗಿ ಪ್ರಥಮ್ ಹೇಳಿಕೊಂಡಿದ್ದರು. ಆ ನಂತರದಲ್ಲಿ ಹಂತ ಹಂತವಾಗಿ ತಮ್ಮ ಮಾತಿಗೆ ಬದ್ಧವಾಗಿ ಮನ್ನಡೆಯುತ್ತಾ ಬಂದಿದ್ದ ಪ್ರಥಮ್ ಅವರೀಗ ನಿಜಕ್ಕೂ ಸಾರ್ಥಕವೆಂಬಂಥಾ ಕೆಲಸವೊಂದನ್ನು ಮಾಡಿದ್ದಾರೆ. ಬಡತನದ ಬೇಗೆಯಿಂದಾಗಿ ವಿದ್ಯಾಭ್ಯಾಸವನ್ನು ದ್ವಿತೀಯ ಪಿಯುಸಿಗೇ ಮೊಟಕುಗೊಳಿಸಿಕೊಳ್ಳುವ ಸ್ಥಿತಿಯಲ್ಲಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳಿಗೆ ಪ್ರಥಮ್ ಆರ್ಥಿಕ ಸಹಾಯ ಮಾಡಿದ್ದಾರೆ. ಆಕೆಯ ಓದಿನ ಬಾಬತ್ತನ್ನು ತಾವೇ ಭರಿಸುವ ವಾಗ್ದಾನ ನೀಡುವ ಮೂಲಕ ಎಲ್ಲರೂ ಮೆಚ್ಚುವಂಥಾ ಕೆಲಸ ಮಾಡಿದ್ದಾರೆ.

    ಹೀಗೆ ಪ್ರಥಮ್ ಅವರ ಮಾನವೀಯ ಸಹಾಯದಿಂದಲೇ ಮುರುಟಿ ಹೋಗುವಂತಿದ್ದ ಕನಸು ಮತ್ತೆ ಚಿಗುರಿದ ಸಂಭ್ರಮದಲ್ಲಿರುವಾಕೆ ಪ್ರತಿಭಾವಂತ ವಿದ್ಯಾರ್ಥಿನಿ ಮೇಘ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಹಲಗಾಪುರ ಗ್ರಾಮದ ಚಾಮರಾಜು ಮತ್ತು ರತ್ನಮ್ಮ ದಂಪತಿಯ ಪುತ್ರಿ ಮೇಘಾ, ದ್ವಿತೀಯ ಪಿಯುಸಿಯಲ್ಲಿ 91.5 ಪರ್ಸೆಂಟೇಜು ಅಂಕ ಗಳಿಸಿಕೊಂಡಿದ್ದಳು. ಇಲ್ಲಿನ ಬಂಡಳ್ಳಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡಿ 549 ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿದ್ದರೂ ಹೆತ್ತವರ ಆರ್ಥಿಕ ಸಂಕಷ್ಟವೇ ಮೇಘಾಳ ಓದಿಗೆ ಕಂಟಕವಾಗಿತ್ತು. ಇನ್ನೇನು ಪಿಯುಸಿಗೇ ತನ್ನ ವ್ಯಾಸಂಗ ಮೊಟಕುಗೊಳ್ಳುವ ಭಯ ಈ ವಿದ್ಯಾರ್ಥಿನಿಯನ್ನು ಆವರಿಸಿಕೊಂಡಿತ್ತು.

    ಈ ವಿಚಾರವನ್ನು ಅದು ಹೇಗೋ ತಿಳಿದುಕೊಂಡ ಪ್ರಥಮ್ ಕಳೆದ ಭಾನುವಾರ ಮೇಘಾಳ ಮನೆಗೆ ತೆರಳಿದ್ದಾರೆ. ಹೆತ್ತವರಿಗೆ ಧೈರ್ಯ ತುಂಬಿ, ಮಗಳನ್ನು ಓದಿಸುವಂತೆ ಪ್ರೇರೇಪಿಸಿ ಆರಂಭಿಕವಾಗಿ ಹತ್ತು ಸಾವಿರದಷ್ಟು ಹಣ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮೇಘಾಳನ್ನು ಪೋಷಕರು ಯಾವ ಕಾಲೇಜಿಗೆ ಸೇರಿಸಿದರೂ ವಿದ್ಯಾಭ್ಯಾಸಕ್ಕೆ ನೆರವಾಗೋದಾಗಿಯೂ ಪ್ರಥಮ್ ವಾಗ್ದಾನ ನೀಡಿದ್ದಾರೆ. `ಮೇಘಾ ಕುಗ್ರಾಮದ ಹುಡುಗಿ. ಮನೆಯಲ್ಲಿ ಅಂಥಾ ಬಡತನವಿದ್ದರೂ ಇಷ್ಟೊಂದು ಅಂಕ ಗಳಿಸಿದ್ದೊಂದು ಸಾಧನೆ. ಈ ಹುಡುಗಿ ಬಡತನದ ಕಾರಣದಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿಕೊಳ್ಳೋ ಸ್ಥಿತಿ ತಲುಪಿರೋದನ್ನು ಕೇಳಿ ಬೇಸರವಾಯ್ತು. ಆದ್ದರಿಂದಲೇ ಸಹಾಯ ಮಾಡಿದ್ದೇನೆ. ಮುಂದೆಯೂ ಮೇಘಾ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತೇನೆ. ನಾನು ಬಿಗ್ ಬಾಸ್ ಶೋನಲ್ಲಿ ಗೆದ್ದ ಹಣ ಇಂಥಾ ಒಳ್ಳೆ ಕೆಲಸ ಕಾರ್ಯಗಳಿಗೇ ವಿನಿಯೋಗವಾಗಬೇಕೆಂಬುದು ತಮ್ಮ ಮಹದಾಸೆ ಅಂತ ಪ್ರಥಮ್ ಹೇಳಿಕೊಂಡಿದ್ದಾರೆ.

     

    ಈ ಹುಡುಗಿ ಮೇಘಾಳ ಹೆತ್ತವರ ಬಡತನ, ಮನೆ ಕಡೆಯ ಪರಿಸ್ಥಿತಿ ಮತ್ತು ಅದೆಲ್ಲದರಾಚೆಗೂ ಓದಿ ಆಕೆ ಪಡೆದುಕೊಂಡ ಅಂಕಗಳ ವಿವರ ಕೇಳಿದರೆ ಪ್ರಥಮ್ ಸಹಾಯ ಮಾಡಿದ್ದು ಎಂಥಾ ಸಾರ್ಥಕ ಕೆಲಸ ಎಂಬುದು ಯಾರಿಗಾದರೂ ಅರ್ಥವಾಗುತ್ತೆ. ಮೇಘಾಳ ತಂದೆ ಚಾಮರಾಜ ಮಡಿವಾಳ ಸಮುದಾಯದವರು. ಈ ಕುಲಕಸುಬನ್ನು ಮಾಡುತ್ತಾ, ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿರೋ ಅವರಿಗೆ ಮಡದಿ ರತ್ನಮ್ಮ ಕೂಡಾ ಸಹಾಯಕ್ಕೆ ನಿಂತಿದ್ದಾರೆ. ಈ ದಂಪತಿಗೆ ತಮ್ಮ ಮಗಳು ಮೇಘಾಳನ್ನ ಚೆಂದಗೆ ಓದಿಸಬೇಕೆಂಬ ಬಯಕೆ. ಅದಕ್ಕೆ ಸರಿಯಾಗಿಯೇ ಮೇಘಾ ಕೂಡಾ ಆರಂಭದಿಂದಲೂ ಬುದ್ಧಿವಂತೆ. ಚುರುಕು ಸ್ವಭಾವದ ಮೇಘಾ, ಓದಿನಲ್ಲಿ ಯಾವತ್ತೂ ಹಿಂದೆ ಬಿದ್ದವಳಲ್ಲ.

    ಹೈಸ್ಕೂಲು ದಾಟುತ್ತಿದ್ದಂತೆಯೇ ತಾನೂ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಓದು ಮುಂದುವರೆಸಿದ್ದ ಮೇಘಾ ಹೈಸ್ಕೂಲು ದಾಟಿ, ಪಿಯುಸಿ ಪೂರೈಸಿದ್ದೇ ಒಂದು ಸಾಹಸ. ಆದರೆ ಹೇಗೋ ಹರಸಾಹಸ ಪಟ್ಟು ಮಗಳನ್ನು ಪಿಯುಸಿವರೆಗೂ ಓದಿಸಿದ್ದ ಚಾಮರಾಜ ಮತ್ತು ರತ್ನಮ್ಮ ದಂಪತಿಗೆ ಮಗಳ ಕಡೆಯಿಂದ ಸಿಹಿಯೇ ಸಿಕ್ಕಿತ್ತು. ಯಾಕೆಂದರೆ ಆಕೆ 549 ಅಂಕ ಗಳಿಸೋ ಮೂಲಕ ಇಡೀ ತಾಲೂಕಿನ ಗಮನ ಸೆಳೆದಿದ್ದಳು. ಆದರೆ ಮಗಳು ಇಷ್ಟು ಚೆಂದಗೆ ಓದುತ್ತಿದ್ದರೂ ಮುಂದೆ ಆಕೆಯನ್ನು ಓದಿಸಲಾಗದ ದುಃಸ್ಥಿತಿಗೆ ಪೋಷಕರು ತಲುಪಿಕೊಂಡಿದ್ದರು. ಇನ್ನೇನು ಮೇಘಾ ಪಾಲಿಗಿನ್ನು ಓದು ಮರೀಚಿಕೆ ಎಂಬಂಥಾ ನಿರ್ಧಾರವೂ ರೂಪುಗೊಂಡಾಗಿತ್ತು.

    ಅಷ್ಟರಲ್ಲಿಯೇ ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿ ಅದು ಪ್ರಥಮ್ ಅವರನ್ನೂ ತಲುಪಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪ್ರಥಮ್ ಮನೆಗೇ ತೆರಳಿ ಮೇಘಾಳನ್ನು ಮತ್ತೆ ವ್ಯಾಸಂಗದಲ್ಲಿ ಮುಂದುವರೆಯುವಂತೆ ಮಾಡಿದ್ದಾರೆ. ಈ ಮೂಲಕ ಕೂಲಿ ನಾಲಿಯಲ್ಲಿ ಕಳೆದು ಹೋಗುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳ ಬದುಕು ಬೆಳಗಿದ್ದಾರೆ. ಇದು ನಿಜಕ್ಕೂ ಎಲ್ಲರೂ ಮೆಚ್ಚಿಕೊಳ್ಳುವಂಥಾ, ಎಲ್ಲರಿಗೂ ಮಾದರಿಯಾದ ಕೆಲಸ.