Tag: megastar family

  • ಟ್ರೋಲ್‌ಗೆ ಡೋಂಟ್ ಕೇರ್- ಬ್ಲೌಸ್ ಧರಿಸದೇ ಸೀರೆಯುಟ್ಟ ನಿಹಾರಿಕಾ

    ಟ್ರೋಲ್‌ಗೆ ಡೋಂಟ್ ಕೇರ್- ಬ್ಲೌಸ್ ಧರಿಸದೇ ಸೀರೆಯುಟ್ಟ ನಿಹಾರಿಕಾ

    ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಡಿವೋರ್ಸ್ ನಂತರ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. 2ನೇ ಮದುವೆ ಬಗ್ಗೆ ಅಥವಾ ಬಟ್ಟೆಗಳ ವಿಚಾರವಾಗಿ ಹೆಚ್ಚೆಚ್ಚು ಟ್ರೋಲ್ ಆಗ್ತಿದ್ದಾರೆ. ಮತ್ತೆ ಬ್ಲೌಸ್ ಧರಿಸದೇ ಸೀರೆಯುಟ್ಟು ನಿಹಾರಿಕಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಸಖತ್ ಟ್ರೋಲ್ (Troll) ಆಗ್ತಿದೆ.

    ಬ್ಲೌಸ್ ಧರಿಸದೇ ಕೆಂಪು ಬಾರ್ಡರ್ ಇರುವ ಹಸಿರು ಸೀರೆಯುಟ್ಟು ನಟಿ ಮಸ್ತ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಈ ಹಿಂದೆ ಕೂಡ ನೀಲಿ ಬಣ್ಣದ ಸೀರೆಯಲ್ಲಿ ಬ್ಲೌಸ್ ಧರಿಸದೇ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದರು. ಇದೀಗ ನಟಿಯ ನಯಾ ಲುಕ್ ಟ್ರೋಲ್ ಆಗ್ತಿರೋದ್ದಲ್ಲದೇ ನೆಗೆಟಿವ್ ಕಾಮೆಂಟ್ ಕೂಡ ಹರಿದು ಬರುತ್ತಿದೆ. ಇದನ್ನೂ ಓದಿ:ಮಗನ ಆ ಮಾತು ಮದ್ಯಪಾನ ಬಿಡಲು ಪ್ರೇರಣೆ ನೀಡಿತ್ತು- ಬಾಬಿ ಡಿಯೋಲ್ ಭಾವುಕ

    ನಿಹಾರಿಕಾ ಡಿವೋರ್ಸ್ (Divorce) ಬಳಿಕ ನಟನೆ, ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ವೆಬ್ ಸಿರೀಸ್, ಸಿನಿಮಾ ಅಂತ ನಟಿ ಹೊಸ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

    ಅಲ್ಲು ಅರ್ಜುನ್ ನಟನೆಯ ಪುಷ್ಪ 2ನಲ್ಲಿ ನಿಹಾರಿಕಾ ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಸ್ಪಷ್ಟನೆ ನೀಡಿಲ್ಲ, ಎಲ್ಲದ್ದಕ್ಕೂ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ನಟಿ ಲಾವಣ್ಯ ಜೊತೆ ಹಸೆಮಣೆ ಏರಲು ರೆಡಿಯಾದ ವರುಣ್‌ ತೇಜ್‌

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಸ್ಟಾರ್ ನಟ-ನಟಿಯರು ಹಸೆಮಣೆ ಏರುತ್ತಿದ್ದಾರೆ. ಈ ಬೆನ್ನಲ್ಲೇ ತೆಲುಗು ನಟ ವರುಣ್ ತೇಜ್ (Varun Tej) ಮದುವೆಯ (Wedding) ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ಸ್ಟಾರ್ ನಟಿಯ ಕೈ ಹಿಡಿಯಲಿದ್ದಾರೆ ಎನ್ನಲಾಗುತ್ತಿದೆ.

    ಮೆಗಾಸ್ಟಾರ್ ಫ್ಯಾಮಿಲಿಯ ಪ್ರತಿಭಾನ್ವಿತ ನಟ ವರುಣ್ ತೇಜ್‌ಗೆ ಸೌತ್‌ನಲ್ಲಿ ಬೇಡಿಕೆಯಿದೆ. `ಮುಕುಂದ’ (Mukunda) ಚಿತ್ರದ ಮೂಲಕ ನಾಯಕ ನಟನಾಗಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ವರುಣ್, ಸಾಕಷ್ಟು ಸಿನಿಮಾಗಳ ಮೂಲಕ ಛಾಪು ಮೂಡಿಸಿದ್ದಾರೆ. ನಟ ನಾಗಬಾಬು, ಮೆಗಾಸ್ಟಾರ್ ಚಿರಂಜೀವಿ, ಪವನ್ ಕಲ್ಯಾಣ್ ಅವರಂತಹ ಸ್ಟಾರ್ ನಟರಿದ್ದರೂ ಕೂಡ ತಮ್ಮ ಪರಿಶ್ರಮದಿಂದ ತೆಲುಗು ರಂಗದಲ್ಲಿ ವರುಣ್ ಗಟ್ಟಿನೆಲೆ ಗಿಟ್ಟಿಸಿಕೊಂಡಿದ್ದಾರೆ.‌ ಇದನ್ನೂ ಓದಿ: ಅಪಘಾತವಾಗಿ ಎರಡು ವರ್ಷ: ನಟಿ ರಿಷಿಕಾ ಸಿಂಗ್ ಬದುಕುಳಿದಿದ್ದೇ ಪವಾಡ

    ವರುಣ್ ತೇಜ್ ಅವರ ಸಹೋದರಿ ನಿಹಾರಿಕಾ (Niharika) ಮದುವೆ ಲಾಕ್‌ಡೌನ್ ವೇಳೆಯಲ್ಲಿ ನಡೆದಿತ್ತು. ಚಿತ್ರರಂಗದಲ್ಲಿ ಒಬ್ಬೊಬ್ಬರೇ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ ವರುಣ್ ತೇಜ್ ಮದುವೆ ಸುದ್ದಿ ಈಗ ಹಾಟ್ ಟಾಪಿಕ್ ಆಗಿದೆ.

    ಇನ್ನೂ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ (Lavanya Tripati) ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. ಈ ವರ್ಷ ಈ ಜೋಡಿ ಮದುವೆಯ ಕುರಿತು ಗುಡ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದಾರಾ ರಾಮ್‌ಚರಣ್ ದಂಪತಿ?

    ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದಾರಾ ರಾಮ್‌ಚರಣ್ ದಂಪತಿ?

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಪುತ್ರ ರಾಮ್‌ಚರಣ್ (Ramcharan) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಚೊಚ್ಚಲ ಮಗುವನ್ನ ಬರಮಾಡಿಕೊಳ್ಳುವ ಖುಷಿಯಲ್ಲಿದ್ದಾರೆ ರಾಮ್ ಚರಣ್ ದಂಪತಿ. ಈ ಬೆನ್ನಲ್ಲೇ ಈ ಜೋಡಿ ಬಾಡಿಗೆ ತಾಯಿಯ(Surrogacy) ಮೂಲಕ ಮಗುವನ್ನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಸದ್ದು ಮಾಡ್ತಿದೆ.

    ಇತ್ತೀಚೆಗಷ್ಟೇ ರಾಮ್ ಚರಣ್ ದಂಪತಿ ತಾವೂ ಪೋಷಕರಾಗುತ್ತಿರುವ ಬಗ್ಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಮದುವೆಯಾಗಿ 10 ವರ್ಷಗಳ ನಂತರ ಚರಣ್- ಉಪಾಸನಾ(Upasana) ತಂದೆ ತಾಯಿ ಆಗುತ್ತಿರುವ ವಿಚಾರ ಮೆಗಾ ಫ್ಯಾಮಿಲಿಯಲ್ಲಿ ಖುಷಿ ಕೊಟ್ಟಿದೆ. ಆದರೆ ಇದೆಲ್ಲದರ ನಡುವೆ ಚರಣ್- ಉಪಾಸನಾ ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಾರಾ ಎಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಮ್ಮದೇ ಕೆಲ ಊಹಾಪೋಹದ ಲೆಕ್ಕಾಚಾರವನ್ನು ಮುಂದಿಡುತ್ತಿದ್ದಾರೆ. ನಟಿ ನಯನತಾರಾ(Nayanatara)  ಹಾದಿಯಲ್ಲೇ ಈ ಜೋಡಿ ಕೂಡ ಸಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ‘ಕೋಟಿಗೊಬ್ಬ’ ಕ್ಯಾಲೆಂಡರ್ ರಿಲೀಸ್: 20 ಕಲಾವಿದರ ಕುಂಚದಲ್ಲಿ ಮೂಡಿಬಂದ ವಿಷ್ಣುವರ್ಧನ್

    ಇನ್ನು ಮೆಗಾ ಫ್ಯಾಮಿಲಿಗೆ ಹೊಸ ಅತಿಥಿಯ ಆಗಮನದ ಬಗ್ಗೆ ಇಷ್ಟೆಲ್ಲಾ ಚರ್ಚೆ ಆಗುತ್ತಿರುವಾಗ ಉಪಾಸನಾ ತವರು ಮನೆಗೆ ಹೋಗಿದ್ದಾರೆ. ಇನ್ನೂ ಇತ್ತೀಚೆಗೆ ಉಪಾಸನಾ ಅವರು ಮಾಡಿರುವ ಇನ್ಸ್ಟಾಗ್ರಾಂ ಪೋಸ್ಟ್ ಸದ್ದು ಮಾಡಿದೆ. ತನ್ನ ತಾಯಿ, ಅಜ್ಜಿ ಸೇರಿದಂತೆ ಕುಟುಂಬದ ಮಹಿಳಾ ಸದಸ್ಯರ ಆಶೀರ್ವಾದ ಪಡೆದಿದ್ದಾರೆ. ಮಾತೃತ್ವ ಅನುಭವಿಸಲು ಮುಂದಾಗಿರುವುದಾಗಿ ಹೇಳಿದ್ದಾರೆ. ತನ್ನ ಅತ್ತೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಬಾಡಿಗೆ ತಾಯಿಯ ಮೂಲಕ ಅವರು ಮಗು ಪಡೆಯುತ್ತಾರೆ ಎನ್ನುವುದೆಲ್ಲಾ ಸುಳ್ಳು, ಉಪಾಸನಾ ಅವರ ಈ ಪೋಸ್ಟ್‌ನಲ್ಲಿ ಅದು ಅರ್ಥವಾಗುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಸರೋಗೆಸಿ ಸುದ್ದಿಯಾಗಲು ಕಾರಣ ಇತ್ತೀಚೆಗೆ ರಾಮ್‌ಚರಣ್‌ ದಂಪತಿ ಸಾಕಷ್ಟು ಕಡೆಗೆ ವೆಕೇಷನ್‌ಗೆ ತೆರಳಿದ್ದರು. ಈ ಪರಿಣಾಮ, ಉಪಾಸನಾ ನಿಜಕ್ಕೂ ಪ್ರೆಗ್ನೆಂಟ್ ಆಗಿದ್ದಾರಾ ಎಂಬ ಅನುಮಾನ ಶುರುವಾಗಿತ್ತು. ಪ್ರೆಗ್ನೆಂಟ್‌ ಆದವರು ಹೀಗೆ ಹೊರಗಡೆ ಸುತ್ತಾಡುತ್ತಾರಾ ಎಂಬ ವಿಷ್ಯ ಭಾರಿ ಚರ್ಚೆಗೆ ಗ್ರಾಸವಾಗಿತ್ತು.  ಅಷ್ಟಕ್ಕೂ ಈ ಸುದ್ದಿ ನಿಜಾನಾ ಕೇವಲ ಗಾಸಿಪ್‌ಗಷ್ಟೇ ಸೀಮಿತನಾ ಎಂಬುದನ್ನ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]